Author: News Desk Benkiyabale

ತುಮಕೂರು   ಮುಸ್ಲಿಂ ಬಾಂಧವರ ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿAದ ಆಚರಿಸಲಾಯಿತು. ಜಿಲ್ಲೆಯ ಕುಣಿಗಲ್, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಮಧುಗಿರಿ, ಸಿರಾ, ಪಾವಗಡ ಹಾಗೂ ತುಮಕೂರು ತಾಲ್ಲೂಕಿನಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ, ಹೊಸ ಉಡುಪುಗಳನ್ನು ಧರಿಸಿ ಆಯಾ ತಾಲ್ಲೂಕು ಕೇಂದ್ರಗಳ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಗರದ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ ೯.೩೦ಕ್ಕೆ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಮಕ್ಕಾ ಮಸೀದಿ, ಈದ್ಗಾ ಮೊಹಲ್ಲಾ ಪಕ್ಕದಲ್ಲಿರುವ ಕೌಸರ್ ಮಸೀದಿ ಸೇರಿದಂತೆ ನಗರದ ವಿವಿಧ ಮಸೀದಿಗಳಲ್ಲೂ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನಕ್ಕೆ ಡಿವೈಎಸ್ಪಿ ಶ್ರೀನಿವಾಸ್, ಇನ್ಸ್ಪೆಕ್ಟರ್‌ಗಳಾದ ನವೀನ್, ಕುಮಾರ್, ಡಾ. ನವೀನ್‌ಕುಮಾರ್ ಅವರು ಭೇಟಿ ನೀಡಿ ಮುಸ್ಲಿಂ ಸಮುದಾಯದ ಮುಖಂಡರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು. ಮುಖಂಡರಾದ ಇಕ್ಬಾಲ್…

Read More

ತುಮಕೂರು ನಗರದ ಶ್ರೀ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ಮಂಗಳವಾರ ಗೋ ಆಧಾರಿತ ಕೃಷಿ ಹಾಗೂ ಸಾವಯವ ಕೃಷಿಯಿಂದ ರೈತರ ಅಭಿವೃದ್ಧಿ ಮತ್ತು ಪಂಚ ಮಹಾಭೂತಗಳ ಅರಿವು ಕಾರ್ಯಕ್ರಮ ನಡೆಯಿತು. ಗೋ ಆಧಾರಿತ ಕೃಷಿ ಕುರಿತು ಜಿಲ್ಲೆಯ ರೈತರೊಂದಿಗೆ ಮಹಾ ರಾಷ್ಟçದ ಕೊಲ್ಲಾಪುರ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಸಂವಾದ ನಡೆಸಿ ಮಾತನಾಡಿ ತಂತ್ರಜ್ಞಾನದ ಹೆಸರಿನಲ್ಲಿ ನಮ್ಮ ಮೂಲ ಕೃಷಿ ಪದ್ದತಿ ಕಡಿಮೆಯಾಗಿ ಇಂದು ನಾವು ತಿನ್ನುವ ಆಹಾರಗಳು ವಿಷಪೂರಿತ ವಾಗಿದೆ ಎಂದು ನುಡಿದರು. ನಮ್ಮ ದೇಶೀಯ ಸಂಸ್ಕೃತಿ ಪರಂಪರೆಗೆ ಹೆಚ್ಚಿನಒತ್ತು ನೀಡಬೇಕು, ಅನಾಧಿ ಕಾಲದಿಂದಲೂ ನಮ್ಮ ಪೂರ್ವಿಕರು ಗೋ ಆಧಾರಿತ ಕೃಷಿ ಪದ್ದತಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು, ಎಲ್ಲರಿಗೂ ಅನ್ನ ನೀಡುವ ರೈತ ಸಂಕಷ್ಟದಲ್ಲಿರುವ ಪರಿಸ್ಥಿತಿ ಬಂದಿದೆಎAದು ನುಡಿದರು. ರೈತರು ಕೃಷಿಗೆ ಒತ್ತು ನೀಡಬೇಕು, ಇಂದು ಕೃಷಿ ಮಾಡುವವರು ಕಡಿಮೆಯಾ ಗುತ್ತಿದ್ದಾರೆ, ಕೃಷಿ ಇಲ್ಲದೇ ಬದುಕುಇಲ್ಲ, ಕೃಷಿ ಯಲ್ಲಿರಾಸಾಯನಿಕ ಬಳಸದೇ ನಮ್ಮ ಸಾವಯವ ಕೃಷಿ ಮಾಡಬೇಕುರಾಸಾಯನಿಕ ಕೃಷಿಯಿಂದ ವಿಷಪೂರಿತ…

Read More

ತುಮಕೂರು ಅಜಾದಿ ಕಾ ಅಮೃತ ಮಹೋತ್ಸವದ ಕೊಡುಗೆಗಳಲ್ಲಿ ವಂದೇ ಭಾರತ್ ರೈಲು ಒಂದು. ಈ ರೈಲು ತುಮಕೂರು ಮೂಲಕ ಹಾದು ಹೋಗುತ್ತಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ ಹಾಗೂ ವಂದೇಭಾರತ್ ರೈಲನ್ನು ಸ್ವಾಗತಿಸಲು ನಗರದ ಜನರು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಹಿಂದಿನ ಕಾಲದಲ್ಲಿ ರೈಲುಗಳು ನಿಗಧಿತ ಸಮಯದಲ್ಲಿ ಬರುತ್ತಿರಲಿಲ್ಲ, ಆದರೇ ಇಂದು ರೈಲುಗಳು ಯಾವ ನಿಲ್ದಾಣಕ್ಕೆ ಎಸ್ಟು ಗಂಟೆಗೆ ತಲುಪುತ್ತವೆ ಎಂಬುವುದನ್ನು ಆ್ಯಪ್ ಮೂಲಕ ನೋಡಬಹುದಾಗಿದೆ ಎಂದರಲ್ಲದೇ ವಿಮಾನ ಪ್ರಯಾಣಕ್ಕಿಂತ ರೈಲು ಪ್ರಯಾಣ ಸುರಕ್ಷತೆ ಮತ್ತು ಸುಖಕರವಾಗಿರುತ್ತದೆ ಎಂದು ಹೇಳಿದರು. ಈ ಹಿಂದೆ ರೈಲಿನಲ್ಲಿ ಪ್ರಯಾಣ ಮಾಡಿ ನಿಲ್ದಾಣದಲ್ಲಿ ಸುಸಜ್ಜಿತವಾದ ಮೂಲಭುತ ಸೌಕರ್ಯಗಳು ಇರಲಿಲ್ಲ ಆದರೇ ಈ ಯಾವುದೇ ಸಮಸ್ಯೆಗಳು ರೈಲ್ವೇ ನಿಲ್ದಾಣಗಳಲ್ಲಿ ಇಲ್ಲ ಎಂದರು. ವಿಶ್ವಗುರು ಭಾರತ ಆಗುವ ಕನಸ್ಸನ್ನು ಮೋದಿಜಿ ಕಂಡಿದ್ದಾರೆ. ಅಮೆರಿಕಾದಲ್ಲಿ ದೇಶದ ಪ್ರಧಾನಿಗೆ ಸಿಕ್ಕ ಗೌರವವನ್ನು ಸ್ಮರಿಸಿದರು. ಜನಪ್ರತಿನಿಧಿಗಳ ಕರೆಗೆ ಒಗೂಟ್ಟು ಜನಪರ…

Read More

ತುಮಕೂರು ಗ್ರಾಮೀಣ ಸಹಭಾಗಿತ್ವ ಸಮೀಕ್ಷೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಿಕೊಂಡರೆ ಹೆಚ್ಚು ಪ್ರಯೋಜನಕಾರಿ ಎಂದು ನಾಯಕತ್ವ ತರಬೇತುದಾರ ಸಿ. ಸಿ. ಪಾವಟೆ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಸಮಾಜ ಕಾರ್ಯ ವಿಭಾಗವು ಬುಧವಾರ ಆಯೋಜಿಸಿದ್ದ ಗ್ರಾಮೀಣ ಸಮುದಾಯದ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಹಾಗೂ ಇತರೆ ಕ್ಷೇತ್ರಗಳಲ್ಲಿ ಅಭಿವೃದ್ಧಿಗಾಗಿ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಜನರ ಜ್ಞಾನ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಿ, ಅವಶ್ಯಕ ಮಾಹಿತಿಯನ್ನು ಕ್ರೋಢೀಕರಿಸುವ ಈ ವಿಧಾನ ಮಾರುಕಟ್ಟೆ ಕ್ಷೇತ್ರಕ್ಕೆ ಉಪಯೋಗವಾಗಿದೆ. ಇಲ್ಲಿ ಮಾಧ್ಯಮವು ಸಮಾಜ ಮತ್ತು ಉತ್ಪನ್ನಕಾರರ ನಡುವೆ ಸೇತುವೆಯಾಗಿ ಬಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು. ಈ ಸಮೀಕ್ಷೆಯನ್ನು ಶೈಕ್ಷಣಿಕ ಮಟ್ಟದಲ್ಲೇ ಅಳವಡಿಸಿಕೊಂಡು, ಇದರ ಪ್ರಯೋಜನ ಪಡೆದರೆ ಪದವಿಯ ನಂತರ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಉಪಯುಕ್ತವಾಗಲಿದೆ ಎಂದರು. ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿಬಂತಿ ಪದ್ಮನಾಭ ಕೆ. ವಿ. ಮಾತನಾಡಿ, ಸಮಾಜಕಾರ್ಯ, ಸಮೂಹ ಮಾಧ್ಯಮ ಮತ್ತಿತರ ಮಾನವಿಕ ವಿಷಯಗಳು ಪರಸ್ಪರ ಸಂಬAಧವುಳ್ಳ ಕ್ಷೇತ್ರಗಳಾಗಿದ್ದು ಸಮಾಜದ ಅಭಿವೃದ್ಧಿಗೆ ಸಹಭಾಗಿತ್ವದಿಂದ ಕೆಲಸ…

Read More

ತುಮಕೂರು ನಗರದ ವಾರ್ಡ್ ನಂಬರ್ ೩೪ ರ ಎಳ್ಳರಬಂಡೆ ಮತ್ತು ಸತ್ಯಮಂಗಲ ಕೊಳಚೆ ಪ್ರದೇಶಗಳು ಸೇರಿದಂತೆ ಶಿರಾ ನಗರದ ರಬ್‌ನಗರ, ಕೋಟೆ ಸ್ಲಂ, ಶಿವಾಜಿ ನಗರ ಭಾಗ-೨ ಸ್ಲಂಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾಯಿದೆ ೧೯೭೩ರ ಕಲಂ-೩ ರಡಿಯಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಈಗಾಗಲೇ ಕಲಂ-೩ ಪ್ರಾಥಮಿಕದಲ್ಲಿ ಘೋಷಣೆಯಾಗಿರುವ ಕೊಳಚೆ ಪ್ರದೇಶಗಳಾದ ಎಸ್,ಎನ್ ಪಾಳ್ಯ, ಮತ್ತು ಅರಳೀಮರದ ಪಾಳ್ಯ ಕಾಲೋನಿಯನ್ನು ಕಲಂ-೩ ಅಂತಿಮದಲ್ಲಿ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು. ಕೋಡಿಹಳ್ಳದಲ್ಲಿರುವ ೩೦ ಕುಟುಂಬಗಳನ್ನು ಮತ್ತು ಇಸ್ಮಾಯಿಲ್ ನಗರದ ಹಂದಿಜೋಗಿ ೩೫ ಕುಟುಂಬಗಳನ್ನು ಪುನರ್‌ವಸತಿಗೊಳಿಸಲಾಗುವುದು. ಹಾಗೂ ದಿಬ್ಬೂರು ದೇವರಾಜ್ ಅರಸು ಬಡಾವಣೆ, ಘೋಷಿತ ಕೊಳಚೆ ಪ್ರದೇಶಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನಗರಪಾಲಿಕೆಯಿಂದ ಕಲ್ಪಿಸಿಕೊಡಲು ಆಯುಕ್ತರು ವಿಶೇಷ ಗಮನ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಸ್ಲಂ ನಿವಾಸಿಗಳ ನಿರಂತರ ಹೋರಾಟದಿಂದ ೧೭ ಎಕರೆ ಭೂಮಿಯನ್ನು ನಿವೇಶನ ರಹಿತರಿಗೆ ನೀಡಬೇಕೆಂದು ಹಿಂದಿನ ಜಿಲ್ಲಾಧಿಕಾರಿಗಳು ತುಮಕೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದ್ದು ವಿಶೇಷ ಪ್ರವರ್ಗದಲ್ಲಿರುವ ೪೦೦ ಒಂಟಿ ಮಹಿಳೆಯರಿಗೆ ನಿವೇಶನ…

Read More

ಪಾವಗಡ ಪಟ್ಟಣದ ಅಗಸರಕುಂಟೆ ಕೆರೆಯನ್ನು ವೀಕ್ಷಿಸಲು ಹೋಗಿ ಕಾಲು ಜಾರಿ ಬಿದ್ದು ೧೪ ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. ಪಟ್ಟಣದ ವಾಸಿ ರಮೇಶ್ ಮತ್ತು ಅಪರ್ಣಾ ದಂಪತಿಯ ಮಗ ಉಜ್ವಲ (೧೪) ಮೃತಪಟ್ಟ ದುದೈವಿಯಾಗಿದ್ದಾನೆ. ಆಟ ಆಡಲು ಹೋಗಿದ್ದಾರೆ ಎಂದು ತಿಳಿದ ಪೋಷಕರು ಮಕ್ಕಳು ಮನೆಗೆ ಬಾರದ ಕಾರಣ ಅಗಸರಕುಂಟೆ ಬಳಿ ಮಗಳು ಅಳುತ್ತಿದ್ದದ್ದು ಕಂಡು ಬಂದ ಹಿನ್ನಲೆ ಕೇಳಿದಾಗ ಉಜ್ವಲ್ ನೀರಿನಲ್ಲಿ ಬಿದ್ದಿರುವ ವಿಷಯ ತಿಳಿದುಬಂದಿದೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಾಯದಿಂದ ಉಜ್ವಲ್ ಮೃತದೇಹ ಹೊರತೆಗೆದಿದ್ದಾರೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಇಂತಹ ಪ್ರಕರಣಗಳು ಸಂಭವಿಸಿದರು ಸಹ ಪುರಸಭೆ ಅಧಿಕಾರಿಗಳು ಗಾಡ ನಿದ್ರೆಗೆ ಜಾರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Read More

ಹರೀಶ್ ಬಾಬು ಬಿ. ಹೆಚ್  ಕೊರಟಗೆರೆ ಸಾರ್ವಜನಿಕ ದೂರಿನ ಮೇರೆಗೆ ಕಷ್ಟಕರ ಜೀವನ ಸಾಗಿಸುತ್ತಿದ್ದ ವೃದ್ಧೆಯ ಮನೆಗೆ ಭೇಟಿನೀಡಿ ತ್ವರಿತವಾಗಿ ಮೂಲಭೂತ ಸೌಕರ್ಯ ಹಾಗೂ ಮನೆ ಮಂಜೂರು ಮಾಡಲು ಸಂಬAದಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ ತಹಶಿಲ್ದಾರ್. ಪಟ್ಟಣದ ೫ನೇ ವಾರ್ಡ್ ನ ನಿವಾಸಿಯಾದ ಯರಕ್ಕ ಎಂಬ ೮೦ವರ್ಷದ ವೃದ್ದೆ ಅಳಿವಿನಂಚಿನಲ್ಲಿರುವ ಮನೆಯಲ್ಲಿಯೇ ವಾಸ ಮಾಡಿಕೊಂಡು ಕಷ್ಟಕರವಾದ ಜೀವನ ಮಾಡುತ್ತಿದೆ ಎಂಬ ಮಾಹಿತಿ ತಿಳಿದ ತಕ್ಷಣ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ವೃದ್ದೆಗೆ ಮನೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚಿಸಿ ನಿರಾಶ್ರಿತರ ಅಜ್ಜಿಗೆ ಆಶ್ರಯ ನೀಡುವ ಭರವಸೆ ನೀಡಿದರು. ಸುಮಾರು ೮೦ವರ್ಷ ವಯಸ್ಸದ ವೃದ್ಧೆ ಯರಕ್ಕ ದುಸ್ಥಿತಿಯಲ್ಲಿದ್ದ ಮನೆಗೆ ಖುದ್ದು ತಹಶಿಲ್ದಾರ್ ಮುನಿಶಾಮಿರೆಡ್ಡಿ ಭೇಟಿನೀಡಿ ಅಜ್ಜಿಯ ಕಷ್ಟಗಳನ್ನು ಆಲಿಸಿ ಅವರಿಗೆ ವಿದ್ಯುತ್, ಕುಡಿಯುವನೀರು, ಸೇರಿದಂತೆ ಮನೆ ಮಂಜೂರು ಮಾಡಿಕೊಡಲು ಪ.ಪಂ ಅಧಿಕಾರಿಗೆ ಸೂಚಿಸಿ ನಂತರ ಪಡಿತರ ಚೀಟಿ ಕಳೆದು ಹೋಗಿದೆ ಎಂದು ಕಂಗಾಲಾಗಿದ್ದ ವೃದ್ಧೆಗೆ ದಿನಸಿ ಸಾಮಾಗ್ರಿಗಳನ್ನು ಒದಗಿಸಿ…

Read More

ತುಮಕೂರು ಬಕ್ರೀದ್ ಹಬ್ಬ ದಾನ ಧರ್ಮದ ಹಬ್ಬವಾಗಿದ್ದು, ಹಿಂದೂ -ಮುಸ್ಲಿಂ ಸಮಾಜದವರು ಒಟ್ಟಾಗಿ ಸೇರಿ ಶಾಂತ ರೀತಿಯಿಂದ ಹಬ್ಬ ಆಚರಿಸಬೇಕು. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತುಮಕೂರು ಡಿವೈಎಸ್ಪಿ ಶ್ರೀನಿವಾಸ್ ತಿಳಿಸಿದರು. ನಗರದ ತಮ್ಮ ಕಛೇರಿಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಿರುತ್ತದೆ. ಈ ಹಿಂದಿನಿAದಲೂ ನಗರದಲ್ಲಿ ಶಾಂತಿ, ಸೌಹಾರ್ದತೆಯಿಂದ ಹಬ್ಬಗಳು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲೂ ಕೂಡಾ ಇದೇ ಸಂಸ್ಕöÈತಿ ಮುಂದುವರೆಸಿಕೊAಡು ಹೋಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ನಿಸಾರ್ ಅಹಮದ್ (ಆರಿಫ್), ಬಕ್ರೀದ್ ಶಾಂತಿ, ತ್ಯಾಗ, ಸೌಹಾರ್ಧತೆ ಹಾಗೂ ಸಮಾನತೆಯನ್ನು ಸಾರುವ ಹಬ್ಬವಾಗಿದ್ದು, ಈ ಸಂದರ್ಭದಲ್ಲಿ ಶಾಂತಿಗೆ ಭಂಗ ತರುವಂಥಾ ಕೃತ್ಯಗಳು ನೈತಿಕ ಪೊಲೀಸ್‌ಗಿರಿಯಿಂದ ನಡೆಯಬಹುದು. ಈ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ಗಮನ ಹರಿಸಬೇಕೆಂದು ಮನವಿ…

Read More

ತುಮಕೂರು ಮಾಧ್ಯಮ ಬಯಸುವುದು ಉತ್ತಮ ಭಾಷೆಯನ್ನು. ಮಾಧ್ಯಮಕ್ಕೆ ಭಾಷೆಯೇ ಜೀವಾಳವಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಪದ್ಮರಾಜ ದಂಡಾವತಿ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಹಿರಿಯ ಪತ್ರಕರ್ತ ಡಾ. ಪದ್ಮರಾಜ ದಂಡಾವತಿಯವರ ಪುಸ್ತಕ ‘ಮಾಧ್ಯಮ ಭಾಷಾ ದೀಪಿಕೆ’ ಕುರಿತು ಸಂವಾದ ಹಾಗೂ ‘ಮಾಧ್ಯಮ ಮತ್ತು ಭಾಷೆ’ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಓದುಗರನ್ನು, ಕೇಳುಗರನ್ನು ಹಿಡಿದಿಡುವ ಶಕ್ತಿ ಭಾಷೆಗಿದೆ. ಭಾಷಾ ಬಳಕೆ ಶುದ್ಧವಾಗಿರಬೇಕು. ಸ್ನಾತಕ ಪದವಿ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಭಾಷೆಯನ್ನು ಕಲಿಸುವಂತಹ ಮಟ್ಟಕ್ಕೆ ತಲುಪಿದ್ದೇವೆ. ಪದವಿ ಹಂತಕ್ಕೆ ಬರುವವರು ಪ್ರಾಥಮಿಕ ಶಿಕ್ಷಣದಲ್ಲೆ ಭಾಷಾ ಬಳಕೆ ಕಲಿತು ಬಂದರೆ ಒಳ್ಳೆಯದು ಎಂದರು. ಶಿಕ್ಷಣ ಮುಗಿಸಿ ಹೊರಬರುತ್ತಿರುವ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಕುಂದುತ್ತಿದೆ. ಕೇವಲ ಪಠ್ಯಕ್ಕೆ ಸೀಮಿತವಾದರೆ ಸಾಲದು, ಸಾಹಿತ್ಯವನ್ನು ಓದಬೇಕು. ಬರೆವಣಿಗೆಯ ಶೈಲಿ ಮುಖ್ಯವಾಗುತ್ತದೆ. ಸಂದರ್ಭ ಸೂಚಿತ ಪದ…

Read More

ತುಮಕೂರು ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿ ಸ್ವಾಭಿಮಾನಿಗಳಾಗಿ ಸಮಾಜದ ಬೆಳಕಾಗಿ ಬೆಳೆಯಬೇಕಾಗಿದೆ ಎಂದು ಮಾಜಿ ಸಚಿವ ಹಾಗೂ ಶಿರಾ ಕ್ಷೇತ್ರದ ಶಾಸಕ ಟಿಬಿ ಜಯಚಂದ್ರ ತಿಳಿಸಿದ್ದಾರೆ. ಪಟ್ಟಣದ ಅಮಾನಿಕೆರೆ ರಸ್ತೆಯ ಕನ್ನಡ ಭವನದಲ್ಲಿ ಕುಂಚಶ್ರೀ ಮಹಿಳಾ ಬಳಗದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ ಗ್ರಾಮಾಂತರ ಪ್ರದೇಶದ ಹೆಣ್ಣು ಮಕ್ಕಳವಿದ್ಯಾಭ್ಯಾಸಕ್ಕಾಗಿ ಕುಂಚಿಟಿಗ ಸಮಾಜದ ಸಂಘ ಸಂಸ್ಥೆಗಳು ಮುಂದೆ ಬರಬೇಕಾಗಿದೆ ಮತ್ತು ಎಲ್ಲಾ ರೀತಿಯ ಪ್ರೋತ್ಸಾಹ ನೀಡಬೇಕಾಗಿದೆ ಈ ಹಿಂದೆ ಹೆಣ್ಣು ಮಕ್ಕಳು ಕೇವಲ ಮನೆಗೆ ಸೀಮಿತರಾಗಿದ್ದರು ಆದರೆ ಇಂದು ಮನೆಯಿಂದ ಹೊರಬಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಹೊರಟಿರುವುದು ಸಂತಸದ ವಿಷಯ ಎಂದರು. ಪೋಲಿಸ್ ಇಲಾಖೆಯ ನಿವೃತ್ತ ಇನ್ಸ್ಪೆಕ್ಟರ್ ಜನರಲ್ ಎಚ್ ಎಸ್ ರೇವಣ್ಣ ಮಾತನಾಡಿ ನಮ್ಮ ಜನಾಂಗದಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಅವರನ್ನು ಪ್ರೋತ್ಸಾಹಿಸಬೇಕಾಗಿದೆ ಅದೇ ರೀತಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವವರನ್ನು ಪ್ರೋತ್ಸಾಹಿಸಬೇಕು ಪೋಷಕರು ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ ಮಾಡದೆ ಸಂಸ್ಕಾರವAತರನ್ನಾಗಿ ಮಾಡಬೇಕು ಎಂದು…

Read More