ತುಮಕೂರು ಸಿದ್ದರಬೆಟ್ಟದ ರೋಟರಿ ಕ್ಲಬ್ ವತಿಯಿಂದ ಆರ್.ಟಿ.ಎನ್. ೨೦೨೩-೨೪ ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಿದ್ದೇಶ್.ಯು. ಪ್ರತಿಷ್ಠಾಪನಾ ಸಮಾರಂಭವನ್ನು ಖಣಟಿ. ರೋಟರಿ ಇಂಟರ್‌ನ್ಯಾಶನಲ್ ಡಿಸ್ಟ್ರಿಕ್ಟ್ ೩೧೯೨ ಗಾಗಿ ಡಿಸ್ಟ್ರಿಕ್ಟ್ ಗವರ್ನರ್ ನಾಮಿನಿ (ಆಉಓ) ಎಲಿಜೆಬೆತ್ ಚೆರಿಯನ್ ಪರಮೇಶ್, ಇವರು ಸ್ಥಾಪನಾ ಅಧಿಕಾರಿ ಮತ್ತು ಮುಖ್ಯ ಅತಿಥಿಯಾಗಿ ಸೇವೆ ಸಲ್ಲಿಸಿದರು. ಶ್ರೀ. ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟದ ರಂಭಾಪುರಿ ಬಾಳೆಹೊನ್ನೂರು ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಖಣಟಿ. ಎಲಿಜೆಬೆತ್ ರೋಟರಿ ಕ್ಲಬ್ ಆಫ್ ಸಿದ್ದರಬೆಟ್ಟ ಅವರ ಶ್ಲಾಘನೀಯ ಸೇವಾ ಯೋಜನೆಗಳಿಗಾಗಿ ಶ್ಲಾಘಿಸಿದರು ಮತ್ತು ಕ್ಲಬ್‌ನ ಭವಿಷ್ಯದ ಸಮುದಾಯ ಸೇವಾ ಉಪಕ್ರಮಗಳಿಗೆ ತಮ್ಮ ಹೋಮ್ ಕ್ಲಬ್ ಮತ್ತು ಡಿಸ್ಟ್ರಿಕ್ಟ್ ೩೧೯೨ ರ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ಅವರು ಸಂಸ್ಥೆಯಲ್ಲಿ ಹೆಚ್ಚಿನ ಮಹಿಳಾ ರೋಟರಿಯನ್ನರನ್ನು ಹೊಂದುವುದರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು, ಅವರ ಅನನ್ಯ ಸಾಮರ್ಥ್ಯವನ್ನು ಎತ್ತಿ ತೋರಿಸಿದರು. ಸಮಾಜದ ಅಗತ್ಯಗಳನ್ನು ಅರ್ಥಮಾಡಿಕೊಳ್ಳಿ, ಅವಶ್ಯಕತೆಗಳನ್ನು ನಿರ್ಣಯಿಸಿ ಮತ್ತು ಅವರ ಪೋಷಣೆ ಮತ್ತು ಸಹಾನುಭೂತಿಯ ವಿಧಾನದೊಂದಿಗೆ ಪೂರ್ಣ…
Author: News Desk Benkiyabale
ತುಮಕೂರು ಆರ್ಥಿಕ ವ್ಯವಸ್ಥೆ ಸುಧಾರಣೆಯಾಗಬೇಕಾದರೆ ಮೊದಲು ಸಾಮಾಜಿಕ ವ್ಯವಸ್ಥೆ ಬದಲಾಗಬೇಕು ಎಂಬ ಬಲವಾದ ಸಿದ್ಧಾಂತವನ್ನು ನಂಬಿ, ಭಾರತದ ಏಳ್ಗೆಗಾಗಿ ದುಡಿದವರು ಬಾಬೂಜಿ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಚ್. ಲಕ್ಷಿö್ಮÃನಾರಾಯಣ ಸ್ವಾಮಿ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಾಬು ಜಗಜೀವನ ರಾಮ್ ಅಧ್ಯಯನ ಪೀಠವು ಗುರುವಾರ ಆಯೋಜಿಸಿದ್ದ ಡಾ. ಬಾಬು ಜಗಜೀವನ ರಾಮ್ ಅವರ ೩೭ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ‘ಸಮಗ್ರ ಭಾರತದ ಅಭಿವೃದ್ಧಿಗೆ ಡಾ. ಬಾಬು ಜಗಜೀವನ ರಾಮ್ ಅವರ ಕೊಡುಗೆಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು. ದೀನದುರ್ಬಲರ ಸಾಮಾಜಿಕ ನ್ಯಾಯಕ್ಕಾಗಿ ಬಾಬೂಜಿ ಕೈಗೊಂಡ ಹಲವಾರು ನಿರ್ಧಾರಗಳು ಅವರ ತತ್ತ÷್ವ ಆದರ್ಶದ ಹಾದಿಯನ್ನು ನೆನಪಿಸುತ್ತದೆ. ಕಾಯಕ ಶ್ರಮಜೀವಿಗಳಿಗೆ ಪಿಂಚಣಿ ಹಾಗೂ ಬಡ್ತಿ ಸಮಸ್ಯೆಗಳನ್ನು ಬಗೆಹರಿಸಿದ ಪರಿ ಗಮನಾರ್ಹ. ಕಾರ್ಮಿಕ ಕಾಯ್ದೆಗಳ ಹರಿಕಾರನಾಗಿ ತೆಗೆದುಕೊಂಡ ನಿಲುವುಗಳು ಬಾಬೂಜಿಯವರ ನಿಷ್ಠಾವಂತ ಬದುಕನ್ನು ತೋರಿಸಿಕೊಡುತ್ತದೆ ಎಂದು ತಿಳಿಸಿದರು. ವೈಜ್ಞಾನಿಕ ಹಾಗೂ ಅಧ್ಯಾತ್ಮದ ಚಿಂತನೆಗಳನ್ನು ಬಾಬೂಜಿ ಮೈಗೂಡಿಸಿ ಕೊಂಡವರು. ಭಾರತ…
ಕೊರಟಗೆರೆ/ತೋವಿನಕೆರೆ ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ, ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ ನಾವು ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದೆ. ಹಾಗಾಗಿ ಈ ಸಮಾಜದಿಂದ ಪಡೆದ ಒಂದಷ್ಟನ್ನಾದರೂ ನಾವು ಮತ್ತೆ ಸಮಾಜಕ್ಕ ವಾಪಸ್ ಮಾಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣವನ್ನು ತೀರಿಸಲು ಸಾಧ್ಯವಾಗುತ್ತದೆ ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ೩೦ವರ್ಷಗಳ ನಂತರ ವ್ಯಾಸಂಗ ಮಾಡಿದ ಸಂದರ್ಭದಲ್ಲಿ ತಮಗೆ ಪಾಠ ಕಲಿಸಿಕೊಟ್ಟ ಜೀವನ ಮೌಲ್ಯ ಕಲಿಸಿಕೊಟ್ಟ ಗುರುಗಳನ್ನು ಸ್ಮರಿಸಿ ಗುರುವಂದನೆ ಸಲ್ಲಿಸಿದ ಹಳೆ…
ಗುಬ್ಬಿ ವನ ಮಹೋತ್ಸವ ಅಂಗವಾಗಿ ಗುಬ್ಬಿ ತಾಲ್ಲೂಕಿನಲ್ಲಿ ಕೋಟಿ ವೃಕ್ಷ ಆಂದೋಲನಕ್ಕೆ ಅರಣ್ಯ ಇಲಾಖೆ ನಮ್ಮ ಗಿಡ ನಮ್ಮ ಹೆಮ್ಮೆ, ನಮ್ಮ ಹಸಿರು ನಮ್ಮ ಗುಬ್ಬಿ ಘೋಷಣೆಯಡಿ ಪ್ರತಿಜ್ಞಾ ವಿಧಿ ಬೋಧಿಸಿ ಸಸಿ ನೆಡಲಾಯಿತು. ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕರ‍್ಯಾಲಯದ ಆವರಣದಲ್ಲಿ ಸಾಂಕೇತಿಕವಾಗಿ ಸಸಿ ನೆಟ್ಟು ಕರ‍್ಯಕ್ರಮಕ್ಕೆ ಚಾಲನೆ ನೀಡಿ ರ‍್ಕಾರಿ ಶಾಲೆಗಳ ಆವರಣ, ಉದ್ಯಾನವನ, ಖಾಲಿ ಇರುವ ರ‍್ಕಾರಿ ಜಾಗದಲ್ಲಿ ಸಸಿ ನೆಡುವ ಸಪ್ತಾಹ ಆಂದೋಲನ ನಡೆಸಿ ಈ ಜೊತೆಗೆ ಆಸಕ್ತ ಪರಿಸರ ಪ್ರೇಮಿಗಳಿಗೆ ಸಸಿ ವಿತರಿಸುವ ಕೆಲಸ ನಡೆಸಲಾಯಿತು. ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಉತ್ತಮ ಪರಿಸರ ನಾಗರಿಕರ ಆರೋಗ್ಯ ಕಾಪಾಡುತ್ತದೆ. ಸ್ಥಳೀಯ ಪಟ್ಟಣ ಪಂಚಾಯಿತಿ ಸಸಿ ನೆಡುವ ಜೊತೆಗೆ ನರ‍್ವಹಣೆ ಮಾಡುವ ಕೆಲಸ ಮಾಡಲಿದೆ. ಅರಣ್ಯ ಇಲಾಖೆ ಕರ‍್ಯಕ್ಕೆ ಲಯನ್ಸ್, ರೋಟರಿ ಹಾಗೂ ಸ್ಕೌಟ್ ಅಂಡ್ ಗೈಡ್ಸ್ ಇನ್ನೂ ಅನೇಕ ಸಂಘಗಳು ಕೈ ಜೋಡಿಸಲಿದೆ ಎಂದರು. ಪಪಂ ಸದಸ್ಯ ಹಾಗೂ ನಿಕಟ ಪರ‍್ವ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ…
ಗುಬ್ಬಿ : ತುಳಿತಕ್ಕೆ ಒಳಗಾದ ದಲಿತರಿಗೆ ಶಕ್ತಿ ನೀಡುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಲು ದಲಿತರ ಮತಗಳ ಒಗ್ಗಟ್ಟು ಕಾರಣ. ಈ ಸರ್ಕಾರದ ಒಲವು ಜೊತೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ದೀನ ದಲಿತರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು. ಪಟ್ಟಣದ ಎಸ್.ಎಂ.ಪ್ಯಾಲೇಸ್ ನಲ್ಲಿ ಗುಬ್ಬಿ ಮಾದಿಗ ಮಹಾಸಭಾ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮುಂದುವರೆದ ಜನಾಂಗ ಮೊದಲಿಂದಲೂ ದಲಿತರನ್ನು ತುಳಿದು ಬದುಕುವ ಕೆಲಸ ಮಾಡಿದೆ. ಇದರಿಂದ ಮುಕ್ತಿ ಕಾಣಲು ದಲಿತರು ಶೈಕ್ಷಣಿಕ ಪ್ರಗತಿ ಹೊಂದಬೇಕು ಎಂದು ಕರೆ ನೀಡಿದರು. ದಲಿತರ ಏಳಿಗೆಗೆ ಸಿದ್ದರಾಮಯ್ಯ ಅವರ ಕಾಳಜಿ ಅಧಿಕಾರಕ್ಕೆ ಬಂದ ತಕ್ಷಣ ಕಂಡಿದೆ. ಯಾವುದೇ ಅನುದಾನದ ಗುತ್ತಿಗೆಯಲ್ಲಿ ಮೀಸಲಾತಿ ಇದ್ದ ೫೦ ಲಕ್ಷ ರೂಗಳನ್ನು ಒಂದು ಕೋಟಿಗೆ ಹೆಚ್ಚಿಸಿ ಗುತ್ತಿಗೆ ಮೂಲಕ ದಲಿತರಿಗೆ ಆರ್ಥಿಕ ಸದೃಢತೆ ನೀಡಿದ್ದಾರೆ. ಇಂತಹ ಅವಕಾಶ ಬಳಸಿ ನಿರುದ್ಯೋಗ ಯುವಕರು ಕೆಲಸ ಮಾಡಬೇಕು. ಅದನ್ನು ಬಿಟ್ಟು ಬೇರೆ ಜಂಜಾಟ…
ತುಮಕೂರು ರಾಮಕೃಷ್ಣ ನಗರದ ಶ್ರೀ ಶಿರಡಿಸಾಯಿನಾಥ ದೇಗುಲ ಸೇರಿದಂತೆ ನಗರದ ವಿವಿಧಡೆ ಇರುವ ಸಾಯಿಬಾಬಾ ದೇಗುಲಗಳಲ್ಲಿ ಗುರುಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ರಾಮಕೃಷ್ಣ ನಗರದ ಸಾಯಿನಾಥ ಮಂದಿರದಲ್ಲಿ ಬೆಳಿಗ್ಗೆ ೬ ಗಂಟೆಗೆ ಕಾಕಡ ಆರತಿ, ೭ ಗಂಟೆಗೆ ಅಭಿಷೇಕ ಮತ್ತು ಅಲಂಕಾರ, ೮ ಗಂಟೆಗೆ ರುದ್ರಾಭಿಷೇಕ, ೧೦ ಗಂಟೆಗೆ ೧೦೮ ಗುರುಗಳ ಅವಾಹನೆ ಪೂಜಾ, ಮಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ ನೆರವೇರಿತು. ಮಧ್ಯಾಹ್ನ ಭಕ್ತಾದಿಗಳಿಗಾಗಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಾಮಕೃಷ್ಣನಗರದ ಸಾಯಿನಾಥ ಮಂದಿರದಲ್ಲಿ ೧೦೮ ಗುರುಗಳ ಅವಾಹನೆ ಪೂಜೆ ನೆರವೇರಿಸಿದ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವೇದಗಳನ್ನು ವಿಭಜನೆ ಮಾಡಿ ೪ ವೇದ ಮತ್ತು ೧೮ ಪುರಾಣಗಳನ್ನು ಜನರಿಗೆ ಪರಿಚಯಿಸಿದ ಕೀರ್ತಿ ವೇದ ವ್ಯಾಸರಾಜರಿಗೆ ಸಲ್ಲುತ್ತದೆ. ಶಂಕರಾಚಾರ್ಯ, ಸ್ವಾಮಿ ವಿವೇಕಾನಂದರು, ಶಿರಡಿ ಬಾಬಾರವರು ಮಹಾನ್ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದವರು ಎಂದರು. ಗುರುತ್ವಾಕರ್ಷಣೆಯನ್ನು ಕಂಡು ಹಿಡಿದ ನ್ಯೂಟನ್‌ನಗೆ ಭೂಮಿ ತಾಯಿಯೇ ಗುರುವಾಗಿ ಪರಿಣಿಮಿಸಿದಳು. ಗುರುವಿನ ಕೃಪೆ ಭಕ್ತ ಮತ್ತು…
ತುಮಕೂರು ಸರಕಾರಿ ಕನ್ನಡ ಶಾಲೆಗಳು ಉಳಿಯಬೇಕಾದರೆ, ಶಿಕ್ಷಕರು, ಎಸ್.ಡಿ.ಎಂ.ಸಿ ಹಾಗೂ ಮಕ್ಕಳ ಪೋಷಕರು ಪರಸ್ವರ ಒಗ್ಗೂಡಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದಾಗ ಮಾತ್ರ ಸಾಧ್ಯ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ. ನಗರದ ಶಿರಾಗೇಟ್‌ನ ಉತ್ತರಬಡಾವಣೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕೆ.ಎನ್.ಆರ್. ಮತ್ತು ಆರ್.ಆರ್.ಅಭಿಮಾನಿ ಬಳಗ, ಹಳೆ ವಿದ್ಯಾರ್ಥಿಗಳ ಸಂಘ,ಎಸ್.ಡಿ.ಎA.ಸಿ ಆಡಳಿತ ಮಂಡಳಿ ಹಾಗೂ ಪೋಷಕರು ಆಯೋಜಿಸಿದ್ದ ಉಚಿತ ಲೇಖನ ಸಾಮಗ್ರಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದAತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ನಗರಪಾಲಿಕೆಯ ಎರಡನೇ ವಾರ್ಡಿನ ಸದಸ್ಯ ಎಸ್.ಮಂಜುನಾಥ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳು ಇಂದು ಅದೋಗತಿಗೆ ತಲುಪಿವೆ.ಆದರೂ ನಮ್ಮ ಉತ್ತರ ಬಡಾವಣೆಯ ಶಾಲೆ ದಿನದಿಂದ ದಿನಕ್ಕೆ ಅಭಿವೃದ್ದಿ ಪಥದಲ್ಲಿ ಸಾಗಿದೆ. ಇದಕ್ಕೆ ಶಾಲೆಯ ಪದವಿಧರ ಮುಖ್ಯಶಿಕ್ಷಕರಾದ ಡಿ.ಎಸ್.ಶಿವಸ್ವಾಮಿ ಮತ್ತು ಎಸ್.ಡಿ.ಎಂ.ಸಿ ಮಂಡಳಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘ ಕಾರಣ.ಶಾಲೆಯ ಶಿಕ್ಷಕರ ಜೊತೆಯಲ್ಲಿ ಎಲ್ಲರೂ ಒಗ್ಗೂಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ…
ತುಮಕೂರು ನಗರದಲ್ಲಿರುವ ಅಕ್ಕಿ ಗಿರಣಿದಾರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್.ಎಲ್.ರಮೇಶ್ ಬಾಬುರವರು ಪ್ರಸ್ತುತ ದಿನಗಳಲ್ಲಿ ವಿದ್ಯುತ್ ದರಗಳ ಹೆಚ್ಚಳದಿಂದ ಈಗಾಗಲೇ ಅಕ್ಕಿ ಗಿರಣಿದಾರರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಈ ಹೆಚ್ಚಳದಿಂದ ಗಿರಣಿಗಳನ್ನು ನಡೆಸುವುದು ಕಷ್ಟಕರವಾಗಿದ್ದು, ಅಕ್ಕಿ ಗಿರಣಿಧಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಆದಷ್ಟು ಶೀಘ್ರವಾಗಿ ವಿದ್ಯುತ್ ದರಗಳ ಹೆಚ್ಚಳವನ್ನು ಹಿಂಪಡೆಯಬೇಕೆAದು ಒತ್ತಾಯಿಸಿದರು. ಜೊತೆಗೆ ನೂತನ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ನಿರ್ಧಾರದಂತೆ ಎ.ಪಿ.ಎಂ.ಸಿ. ಕಾಯ್ದೆಯನ್ನು ಪುನಃ ಹಿಂದಿನ ರೀತಿಯಂತೆ ತಿದ್ದುಪಡಿ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರದಿಂದ ಅಕ್ಕಿಗಿರಣಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಇದರಿಂದ ಅಕ್ಕಿ ಗಿರಣಿ ಉದ್ಯಮಗಳು ತೀವ್ರತರವಾದ ತೊಂದರೆಗೆ ಸಿಲುಕುತ್ತದೆಂದರು. ಅಕ್ಕಿಗಿರಣಿದಾರರು ಕೃಷಿ ಮಾರುಕಟ್ಟೆಯ ಯಾವುದೇ ಸೌಕರ್ಯದ ಬಳಕೆ ಮಾಡುತ್ತಿಲ್ಲವಾದ್ದರಿಂದ ಅಕ್ಕಿಗಿರಣಿದಾರರನ್ನು ಸದರಿ ಕಾಯ್ದೆಯ ವ್ಯಾಪ್ತಿಯಿಂದ ಹೊರತುಪಡಿಸಬೇಕೆಂದು ಒತ್ತಾಯ ಮಾಡುತ್ತಿದ್ದೇವೆಂದರು. ಮುAದುವರೆದು ನಿಯಮಾನುಸಾರ ರೈತರು ಬೆಳೆದ ಭತ್ತವನ್ನು ರಾಜ್ಯದ ಯಾವುದೆ ಮಾರುಕಟ್ಟೆಗೆ ಕೊಂಡೊಯ್ಯಲು…
ತುಮಕೂರು ಕಂದಾಯ ನೌಕರರು, ಅಧಿಕಾರಿಗಳು ರೈತರ ಸಮೀಪ ಹೋಗಿ, ಕಚೇರಿಗೆ ಬರುವ ರೈತರನ್ನು ಗೌರವದಿಂದ ಕಂಡು ಅವರ ಕೆಲಸ ಮಾಡಿಕೊಡಿ. ರೈತರ ಸೇವೆ ಮಾಡುವ ಇಂತಹುದೊAದು ಅವಕಾಶವನ್ನು ಸರ್ಕಾರ ಕಲ್ಪಿಸಿದೆ ಎಂಬ ಭಾವನೆಯಿಂದ ಸೇವೆ ಮಾಡಿ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ. ಹೇಳಿದರು. ಜಿಲ್ಲಾ ಕಂದಾಯ ಇಲಾಖಾ ನೌಕರರ ಸಂಘ ಹಾಗೂ ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಶನಿವಾರ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕಂದಾಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಇತರೆ ಇಲಾಖೆಗಳಿಗೆ ಕಂದಾಯ ಇಲಾಖೆ ಮಾತೃ ಇಲಾಖೆ. ಸರ್ಕಾರದ ಬಹುತೇಕ ಯೋಜನೆಗಳ ಅನುಷ್ಠಾನ ಕಂದಾಯ ಇಲಾಖೆ ಮೂಲಕವೇ ಆಗಬೇಕಾಗಿದೆ. ಇಂತಹ ಮಹತ್ವದ ಇಲಾಖೆಯಲ್ಲಿ ಸಾರ್ವಜನಿಕರೊಂದಿಗೆ ಬೆರೆತು ಕೆಲಸ ಮಾಡಿ ಎಂದು ಹೇಳಿದರು. ಭೂಮಿ ಮತ್ತು ಭೂಮಿ ಆಡಳಿತ ನಿರ್ವಹಿಸುವ ಕಂದಾಯ ಇಲಾಖೆಯಲ್ಲಿ ಸಮಸ್ಯೆಗಳೂ ಜಾಸ್ತಿ ಇವೆ, ಇವುಗಳನ್ನು ನಿಭಾಯಿಸಿ ನಿರ್ವಹಿಸುವುದು ಅಧಿಕಾರಿಗಳು, ನೌಕರರಿಗೆ ಸವಾಲಿನ ಕೆಲಸ. ಕಾರ್ಯ ಒತ್ತಡ ಸಹಜವಾಗಿರುತ್ತದೆ. ತಪ್ಪುಗಳಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು…
ತುಮಕೂರು ಮಳೆ ಕೊರತೆ ಹಿನ್ನಲೆಯಲ್ಲಿ, ಕುಡಿಯುವ ನೀರಿನ ಅಭಾವ ಇರುವ ಹಳ್ಳಿಗಳಿಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿ, ತಕ್ಷಣವೇ ಟಾಸ್ಕ್ಪೋರ್ಸ್ ಸಭೆ ನಡೆಸಿ, ಶಾಸಕರೊಂದಿಗೆ ಚರ್ಚಿಸಿ, ಕುಡಿಯುವ ನೀರು ಪೂರೈಕೆ ಸಂಬAಧ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಡಾ: ಜಿ. ಪರಮೇಶ್ವರ್ ಅವರು ಎಲ್ಲಾ ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅವರಿಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ೨೦೨೨-೨೩ನೇ ಸಾಲಿನ ೪ನೇ ತ್ರೆöÊಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಕೊಳವೆ ಬಾವಿ ಕೊರೆಸುವಿಕೆ, ಟ್ಯಾಂಕರ್ ಮೂಲಕ ನೀರು ಪೂರೈಸುವಿಕೆ ಮುಂತಾದ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸೂಚಿಸಿದರು. ನಮ್ಮ ಸರ್ಕಾರ ಅಭಿವೃದ್ಧಿಯ ನಿಟ್ಟಿನಲ್ಲಿ ದೂರದೃಷ್ಟಿಯನ್ನು ಇಟ್ಟುಕೊಂಡಿದ್ದು, ಈ ಹಿನ್ನಲೆಯಲ್ಲಿ ನಿರ್ಲಕ್ಷತೆಗೆ ಅವಕಾಶವಿರುವುದಿಲ್ಲ. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸರ್ಕಾರಿ ಕಾರ್ಯಕ್ರಮ ಅನುಷ್ಟಾನ ಮಾಡಬೇಕು. ಸಬೂಬು ಹೇಳುವ ಅಧಿಕಾರಿಗಳ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ಕಚೇರಿಗಳಲ್ಲಿ ಅಧಿಕಾರಿಗಳು ಇರುವಿಕೆ…











