Author: News Desk Benkiyabale

ಕೊರಟಗೆರೆ: ಧಾರ್ಮಿಕ ಆಚರಣೆ ಮತ್ತು ಸಂಪ್ರದಾಯಗಳು ಧರ್ಮದ ಜೀವಂತಿಕೆಗೆ ಸಾಯಾಗಿದ್ದು, ಇವುಗಳನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯ ಶ್ರೀ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು. ತಾಲೂಕಿನ ಕೋಳಾಲ ಹೋಬಳಿಯ ಹೊಸಕೋಟೆ ಗ್ರಾಮದಲ್ಲಿರುವ ಏಳು ಮಂದಮ್ಮ ದೇವಾಲಯದಲ್ಲಿ ಅಮಾವಾಸ್ಯೆ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ದೇಶವು ಇಡೀ ವಿಶ್ವದಲ್ಲಿಯೇ ವಿಶಿಷ್ಟ ಸಂಸತಿ, ಪರಂಪರೆ ಮತ್ತು ಧಾರ್ಮಿಕ ಆಚರಣೆಗಳನ್ನು ಉಳಿಸಿಕೊಂಡಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಆಚರಣೆ ಹಿಂದೆಯೂ ಆಧ್ಯಾತ್ಮಿಕತೆ, ನಂಬಿಕೆ, ಸಂಸತಿ ಹಾಗೂ ಧರ್ಮದ ವಿಶೇಷತೆ ಅಡಗಿವೆ ಎಂದು ಹೇಳಿದರು. ಪ್ರತಿಯೊಂದು ಗ್ರಾಮದಲ್ಲಿಯೂ ತನ್ನದೇ ಆದ ವಿಶಿಷ್ಟ ದೈವಿಕ ಆಚರಣೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಜನರಲ್ಲಿ ಭಕ್ತಿ, ನಂಬಿಕೆ ಹಾಗೂ ಸಾಮಾಜಿಕ ಒಗ್ಗಟ್ಟನ್ನು ಬೆಳೆಸುವುದರ ಜತೆಗೆ ಸಂಸತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಇದೇ ನಮ್ಮ ದೇಶದ ವಿಶೇಷ ಶಕ್ತಿ ಎಂದು ಸ್ವಾಮೀಜಿ…

Read More

ತುರುವೇಕೆರೆ: ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದೆ ಮುಂದಿನ ಪೀಳಿಗೆಗೆ ಹಿಂದಿನ ಸಂಸ್ಕಾರಗಳು, ಪರಂಪರೆ ಹಾಗೂ ಇತಿಹಾಸದ ಬಗ್ಗೆ ಅರಿವು ಮೂಡಿಸುವಂತಹ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದು ಸಾಹಿತಿ ತುರುವೇಕೆರೆ ಪ್ರಸಾದ್ ಹೇಳಿದರು. ಪಟ್ಟಣದ ಗ್ಲೋಬಲ್ ಎಂಬಸ್ಸಿ ಶಾಲಾ ಆವರಣದಲ್ಲಿ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಛದ್ಮವೇಷಣ ಸ್ಪರ್ಧೆ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಒಂದು ಮಗು ಒಬ್ಬ ವ್ಯಕ್ತಿಯ ವೇಷಭೂಷಣ ತೊಟ್ಟ ಸಂಧರ್ಭದಲ್ಲಿ ಆ ವ್ಯಕ್ತಿಯ ಬಗ್ಗೆ ಅಂತಹ ಮಕ್ಕಳಿಗೆ ಪ್ರೇರಣೆಯಾಗುವಂತಿರಬೇಕು. ಹೊಸ ಹೊಸ ಪಾತ್ರಗಳನ್ನು ಹುಡುಕಿ ಮಕ್ಕಳನ್ನು ತಯಾರಿ ಮಾಡುವ ಸಂಧರ್ಭದಲ್ಲಿ ನಮ್ಮಲ್ಲೊಬ್ಬ ಆದರ್ಶ ಪುರುಷನಿರಬೇಕು. ಗಾಂಧಿ, ಬುದ್ದ, ನೆಹರು, ವಿವೇಕಾನಂದ, ಝಾನ್ಸಿ ಯಂತ ಮಹಾನ್ ಹೋರಾಟಗಾರರ ವೇಷ ತೊಡಿಸಿದ ತಾಯಂದಿರು ಅವರ ಬಗ್ಗೆ ಅರಿವು ಮೂಡಿಸುವ ಮೂಲಕ ಮಕ್ಕಳಿಗೆ ಸ್ಪೂರ್ತಿ ತುಂಬಬೇಕು. ಅಲ್ಲದೆ ಗಾಂಧಿ ಬುದ್ದ ಹೊರತುಪಡಿಸಿ ಎಲೆಮರೆ ಕಾಯಿಯಂತೆ ಹೋರಾಡಿದ ಅದೆಷ್ಟೋ ಸಾಧಕರಿದ್ದು ಅಂತಹವರನ್ನು ಸಹಾ ಗುರ್ತಿಸುವಂತಹ ಕೆಲಸವಾಗಬೇಕೆಂದರು. ಗ್ಲೋಬಲ್ ಎಂಬಸ್ಸಿ ಶಾಲೆಯ ಮುಖ್ಯಸ್ಥರಾದ ಗಂಗಾಧರ…

Read More

ಕೊರಟಗೆರೆ: ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣ ಮಕ್ಕಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಕಲ್ಪಿಸುತ್ತದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು, ಉದ್ಯಮಿಗಳು ಹಾಗೂ ಸಮಾಜ ಸೇವಕರು ಕೈಜೋಡಿಸಬೇಕು ಎಂದು ಸಮಾಜ ಸೇವಕ ಸದಾನಂದ ಹೇಳಿದರು. ಕೊರಟಗೆರೆ ಪಟ್ಟಣದ ಗಿರಿನಗರ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸರ್ಕಾರಿ ಶಾಲೆಯಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಸುಮಾರು ೩೫ ಸಾವಿರ ವೆಚ್ಚದಲ್ಲಿ ಟ್ರಾ÷್ಯಕ್‌ಸೂಟ್ ಸಮವಸ್ತç ವಿತರಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳು ಹಲವು ಕಾರಣಗಳಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ವಿಷಾದನೀಯ. ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಕ್ರೀಡಾ ಚಟುವಟಿಕೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಶಾಲೆಯ ಅಭಿವೃದ್ಧಿಗಾಗಿ ?೧ ಲಕ್ಷ ದೇಣಿಗೆ ನೀಡುವುದಾಗಿ ಸದಾನಂದ ಘೋಷಿಸಿದರು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವೆಟರ್‌ಗಳನ್ನು ಸಹ ವಿತರಿಸುವುದಾಗಿ ಭರವಸೆ ನೀಡಿದರು. ಕ್ರೀಡಾಂಗಣ ಅಭಿವೃದ್ಧಿಗೆ ಒತ್ತಾಯ: ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ನಯಾಜ್ ಅಹಮದ್ ಮಾತನಾಡಿ, ಪಿಎಂಶ್ರೀ ಶಾಲೆಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡಬೇಕು. ಕೂಲಿ ಕಾರ್ಮಿಕರು…

Read More

ತುಮಕೂರು: ತಿರಂಗಾ ಯಾತ್ರಾ ಸಮಿತಿ, ತುಮಕೂರು ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಬೃಹತ್ ತಿರಂಗಾ ಯಾತ್ರೆಯನ್ನು ಅತ್ಯಂತ ಶ್ರದ್ಧೆ, ಸಂಭ್ರಮ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಅವರ ವಿಶೇಷ ಕಾಳಜಿ ಹಾಗೂ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದ ಈ ಬೃಹತ್ ತಿರಂಗಾ ಯಾತ್ರೆಯಲ್ಲಿ ಸಹಸ್ರಾರು ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ ಹಾಗೂ ಸ್ಕೌಟ್ ವಿದ್ಯಾರ್ಥಿಗಳು ಸೇರಿದಂತೆ ನೂರಾರು ದೇಶಭಕ್ತ ನಾಗರಿಕರು ಉತ್ಸಾಹದಿಂದ ಭಾಗವಹಿಸಿದರು. ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ಜಮಾವಣೆಗೊಂಡು, ಸುಮಾರು ೧೦೦ ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜ ಹಾಗೂ ಸಹಸ್ರಾರು ತ್ರಿವರ್ಣ ಧ್ವಜಗಳನ್ನು ಹಿಡಿದು ಯಾತ್ರೆಗೆ ಸಜ್ಜಾದರು. ಭಾರತ ಮಾತೆಯ ಅಲಂಕೃತ ಭಾವಚಿತ್ರವು ಯಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು. ಯಾತ್ರೆ ಆರಂಭಕ್ಕೂ ಮುನ್ನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಹಾಗೂ ಶ್ರೀ ಕಾರದ ವೀರ ಬಸವ ಮಹಾಸ್ವಾಮೀಜಿಯವರು ಭಾರತ ಮಾತೆಗೆ ಪುಷ್ಪಾರ್ಚನೆ…

Read More

ತುಮಕೂರು: ಜಿಲ್ಲಾಡಳಿತದ ವತಿಯಿಂದ ಆಗಸ್ಟ್ ೧೫ರ ಶನಿವಾರ ಬೆಳಗ್ಗೆ ೯ ಗಂಟೆಗೆ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ‘ಸ್ವಾತಂತ್ರö್ಯ ದಿನಾಚರಣೆ-೨೦೨೬’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಉಪ ಮುಖ್ಯಮಂತ್ರಿ, ಕಂದಾಯ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆ ಸಚಿವರಾದ ಡಾ: ಜಿ. ಪರಮೇಶ್ವರ ಅವರು ಅಂದು ಬೆಳಗ್ಗೆ ೯ ಗಂಟೆಗೆ ರಾಷ್ಟç ಧ್ವಜಾರೋಹಣ ಮಾಡಿ, ಗೌರವರಕ್ಷೆ ಸ್ವೀಕರಿಸುವರು. ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ಹಾಗೂ ಸಂಸದ ವಿ. ಸೋಮಣ್ಣ ಅವರು ಘನ ಉಪಸ್ಥಿತರಿರುವರು. ತುಮಕೂರು ನಗರ ವಿಧಾನಸಭಾ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅಧ್ಯಕ್ಷತೆವಹಿಸುವರು. ನಂತರ ದೇಶಭಕ್ತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು ಸೇರಿದಂತೆ ಗಣ್ಯರು, ಸರ್ಕಾರಿ ಅಧಿಕಾರಿ/ನೌಕರರು, ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸ್ವಾತಂತ್ರೋತ್ಸವದ ಆಂಗವಾಗಿ ಅಂದು ಸಂಜೆ ೪.೩೦ ಗಂಟೆಗೆ ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

Read More

ತುಮಕೂರು: ಸರ್ಕಾರದ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯುವ ಮಿಷನ್ ಯೋಜನೆಯು ಯುವಜನರಲ್ಲಿ ಶಿಸ್ತು, ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಹಾಗೂ ಸಂಘಟನಾ ಕೌಶಲ್ಯಗಳನ್ನು ಬೆಳೆಸುವ ಉದ್ದೇಶ ಹೊಂದಿದ್ದು, ಈ ಯೋಜನೆಯಡಿ ನೋಂದಾಯಿಸಿಕೊAಡಿರುವ ಶಿರಾ ತಾಲೂಕು ಬೇವಿನಹಳ್ಳಿ ಗ್ರಾಮದ ಚಿದಾನಂದ ಹಾಗೂ ಗುಬ್ಬಿ ತಾಲೂಕು ಇರಕಸಂದ್ರ ಗ್ರಾಮದ ಸಂತೋಷ್ ಅವರಿಗೆ ನೋಂದಣಿ ದೃಢೀಕರಣ ಪತ್ರವನ್ನು ಉಪ ಮುಖ್ಯಮಂತ್ರಿ ಹಾಗೂ ಕಂದಾಯ, ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಸಚಿವ ಡಾ: ಜಿ. ಪರಮೇಶ್ವರ ಅವರು ಬುಧವಾರ ಸಾಂಕೇತಿಕವಾಗಿ ವಿತರಿಸಿದರು. ಃಎಙSನಲ್ಲಿ ನೋಂದಾಯಿಸಿಕೊAಡಿರುವ ಯುವಕರನ್ನು ಅಭಿನಂದಿಸಿ ಮಾತನಾಡಿದ ಅವರು, ಯುವಕರಲ್ಲಿ ನಾಯಕತ್ವ ಗುಣ, ಸಂಘಟನಾ ಸಾಮರ್ಥ್ಯ ಹಾಗೂ ಸಾಮಾಜಿಕ ಕಳಕಳಿಯನ್ನು ಬೆಳೆಸುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಅವರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಮಿಷನ್‌ನ ಪ್ರಮುಖ ಉದ್ದೇಶವಾಗಿದ್ದು. ಈ ಹಿನ್ನೆಲೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊAಡು ಯೋಜನೆಯ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ…

Read More

ಹುಳಿಯಾರು: ಅಧಿಕ ಇಳುವರಿ ನೀಡುವ ‘ಐಸಿಎಚ್-೫’ ತಳಿಯ ಹರಳು ಬೆಳೆಯುವುದರಿಂದ ಈ ಬರಗಾಲದಲ್ಲೂ ಕೈ ತುಂಬ ದುಡ್ಡು ನೋಡಬಹುದು ಎಂದು ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತç ತಜ್ಞರಾದ ಡಾ.ತಸ್ಮಿಯಾ ಕೌಸಿರ್ ರೈತರಿಗೆ ಸಲಹೆ ನೀಡಿದರು. ಹುಳಿಯಾರಿನ ಎಪಿಎಂಸಿ ಆವರಣದಲ್ಲಿರುವ ಕಲ್ಪಮಿತ್ರ ರೈತ ಉತ್ಪಾದಕ ಕಂಪನಿಯ ಕಛೇರಿಯಲ್ಲಿ ಗುರುವಾರ ಕೊನೆಹಳ್ಳಿ ವಿಜ್ಞಾನ ಕೇಂದ್ರದಿAದ ಆಯೋಜಿಸಲಾಗಿದ್ದ ಉಚಿತ ಹರಳು ಬೀಜ ವಿತರಣೆ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಐಸಿಎಚ್ ೫ ಹರಳು ಒಣ ಬೇಸಾಯಕ್ಕೆ ಸೂಕ್ತವಾದ ತಳಿಯಾಗಿದ್ದು ಕಡಿಮೆ ಮಳೆ ಮತ್ತು ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ಬೆಳೆಯಾಗಿದ್ದು ಒಂದು ಎಕರೆ ಬಿತ್ತನೆಗೆ ೨ ಕೆಜಿ ಬೀಜ ಬೇಕಿದ್ದು ಎಕರೆಗೆ ೫ ರಿಂದ ೬ ಕ್ವಿಂಟಲ್ ಇಳುವರಿ ಪಡೆಯಬಹುದು ಎಂದು ತಿಳಿಸಿದರಲ್ಲದೆ ಈ ತಳಿ ಯಾವುದೇ ಪ್ರಾಣಿ ಪಕ್ಷಿಗಳ ಕಾಟವಿಲ್ಲದೆ ಬೆಳೆಯಬಹುದಾಗಿದೆ ಎಂದು ಮಾಹಿತಿ ನೀಡಿದರು. ಬಿತ್ತನೆಗೂ ಮುನ್ನ ಹರಳು ಬೀಜಗಳನ್ನು ರಾತ್ರಿ ೫ ರಿಂದ ೬ ಗಂಟೆಗಳ ಕಾಲ…

Read More

ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಸಮಾಜಕಲ್ಯಾಣ ಇಲಾಖೆ, ತುಮಕೂರು ಹಾಗೂ ಮೊರಾರ್ಜಿ ದೇಸಾಯಿ ವಸತಿಶಾಲೆ, ಚಿಕ್ಕನಹಳ್ಳಿ, ಶಿರಾ ತಾಲ್ಲೂಕು ವತಿಯಿಂದ ಚಿಗುರು ಬಾಲ ಪ್ರತಿಭೆಗಳಿಗೆ ಪ್ರೋತ್ಸಾಹ ಕಾರ್ಯಕ್ರಮವನ್ನು ಚಿಕ್ಕನಹಳ್ಳಿ, ಶಿರಾ ತಾಲ್ಲೂಕು ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಆಯೋಜಿಸಲಾಗಿತ್ತು. ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಮತಿ ಸೋನಿಯಾ ವರ್ಣೇಕರ.ಯು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ, ಮಕ್ಕಳು ಇಂದಿನ ಆಧುನಿಕ ಜಗತ್ತಿನಲ್ಲಿನ ಸ್ಪರ್ಧೆಗಳನ್ನು ಎದುರಿಸಲು ಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ಬೆಳಿಸಿಕೊಂಡಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ಪಡೆಯಬಹುದು. ಇದರಿಂದಾಗಿ ಸಮಾಜವನ್ನು ಪರಿಣಾಮಾತ್ಮಕವಾಗಿ ಎದುರಿಸಿ ಸಮಾಜಮುಖಿಗಳಾಗಿ ಬೆಳೆಯಬಹುದು ಎಂದು ತಿಳಿಸಿದರು. ತುಮಕೂರು ಜಿಲ್ಲಾ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಈಶ್ವರ.ಕೆ.ಮಿರ್ಜಿ ಅವರು ಮಾತನಾಡುತ್ತಾ, ಇಲಾಖೆ ೮ ರಿಂದ ೧೪ ವರ್ಷ ವಯಸ್ಸಿನ ಮಕ್ಕಳಲ್ಲಿನ ಕಲಾ ಪ್ರತಿಭೆಯನ್ನು ಗುರುತಿಸಿ ಅವರಿಗೆ ವೇದಿಕೆ ಒದಗಿಸಲು ಅವಕಾಶ ಕಲ್ಪಿಸಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಕ್ಕಳು ಈ ವೇದಿಕೆಯ ಲಾಭವನ್ನು ಪಡೆಯುವಂತಾಗಲಿ ಅಲ್ಲದೇ, ಇಂತಹುಗಳು…

Read More

ತುಮಕೂರು: ಮೇಕೆದಾಟು ಯೋಜನೆ ಅನುಷ್ಠಾನವಾಗಬೇಕು, ಕನ್ನಡ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಉದ್ದಿಮೆ, ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು, ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡಬೇಕು ಮೊದಲಾದ ಒತ್ತಾಯಗಳೊಂದಿಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ನೀಡಿ, ಕನ್ನಡ ನಾಡು, ನುಡಿ, ಗಡಿ ನೀರಾವರಿ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಾ ಕುಮಾರ್ ಮಾತನಾಡಿ, ವಸಂತನರಸಾಪುರ, ಹೆಚ್‌ಎಎಲ್‌ಗೆ ಕನ್ನಡಿಗ ರೈತರು ಜಮೀನು ಕೊಟ್ಟಿದ್ದಾರೆ. ಆದರೆ ಇಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಟ್ಟಿಲ್ಲ, ಪರಭಾಷಿಗರೇ ತುಂಬಿಕೊAಡಿದ್ದಾರೆ. ಕನ್ನಡಿಗರಿಗೆ ಆದ್ಯತೆ ನೀಡಬೇಕೆಂಬ ಸರ್ಕಾರದ ಆದೇಶವಿದ್ದರೂ ಅದರ ಪಾಲನೆ ಆಗುತ್ತಿಲ್ಲ. ರಾಷ್ಟಿçÃಕೃತ ಬ್ಯಾಂಕುಗಳಲ್ಲೂ ಕನ್ನಡಿಗರ ಕೊರತೆ ಇದೆ ಎಂದರು. ನಾಮಫಲಕಗಳಲ್ಲಿ ಶೇಕಡ ೬೦ರಷ್ಟು ಕನ್ನಡ ಪದಗಳಿರಬೇಕು ಎಂದು ಸರ್ಕಾರವೇ ಆದೇಶ ಮಾಡಿದೆ. ಆದರೆ ಸರ್ಕಾರದ ಆದೇಶವನ್ನು ಸರ್ಕಾರಿ ಅಧಿಕಾರಿಗಳೇ ಉಲ್ಲಂಘನೆ ಮಾಡುತ್ತಿದ್ದಾರೆ.…

Read More

ತುಮಕೂರು: ವಾಲ್ಮೀಕಿ ಸಮಾಜದ ನಾಯಕರು, ಸಮುದಾಯದ ಧ್ವನಿಯಾಗಿ ಗುರುತಿಸಿಕೊಂಡಿರುವ ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ನಾಯಕರು ನಡೆಸಿರುವ ತಂತ್ರಗಳಿಗೆ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರು ಮಣಿಯಬಾರದು, ಬಿ.ನಾಗೇಂದ್ರ ಅವರನ್ನು ಮಂತ್ರಿಯಾಗಿ ಮುಂದುವರೆಸಬೇಕು ಎಂದು ರಾಷ್ಟಿçÃಯ ಬುಡಕಟ್ಟು ಬೇಡರ ಪಡೆಯ ಅಧ್ಯಕ್ಷ ಮಾರಣ್ಣ ಪಾಳೇಗಾರ್ ಒತ್ತಾಯಿಸಿದರು. ಬುಧವಾರ ನಗರದಲ್ಲಿ ಪತ್ರಿಕಾ ಗೋಷ್ಠೀಯಲ್ಲಿ ಮಾತನಾಡಿದ ಅವರು, ಬಿ. ನಾಗೇಂದ್ರ ಅವರೊಂದಿಗೆ ವಾಲ್ಮೀಕಿ ಸಮಾಜ ಸದಾ ಬೆಂಬಲವಾಗಿ ನಿಲ್ಲಲಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸಂಬAಧಿಸಿದ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಬಿ.ನಾಗೇಂದ್ರ ಅವರಿಗೆ ಪ್ರಕರಣದಲ್ಲಿ ಯಾವುದೇ ಸಂಬAಧವಿಲ್ಲ ಎಂಬ ಅಂಶ ತನಿಖಾ ಪ್ರಕ್ರಿಯೆಯಲ್ಲಿ ಉಲ್ಲೇಖವಾಗಿದೆ. ಈ ಹಿನ್ನೆಲೆಯಲ್ಲಿ, ಯಾವುದೇ ಅಂತಿಮ ಅಧಿಕೃತ ನಿರ್ಣಯ ಅಥವಾ ನ್ಯಾಯಾಂಗ ತೀರ್ಪು ಹೊರಬರುವ ಮುನ್ನ ವ್ಯಕ್ತಿಯ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಆರೋಪಗಳು ಅಥವಾ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸೂಕ್ತವಲ್ಲ ಎಂದು ಹೇಳಿದರು. ಈ ಬೆಳವಣಿಗೆಯ ನಡುವೆ ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಬಿಜೆಪಿ…

Read More