ತುಮಕೂರು: ವೈಜ್ಞಾನಿಕ ಅನ್ವೇಷಣೆಗಳು ತಕ್ಷಣ ಯಶಸ್ಸನ್ನು ನೀಡುವುದಿಲ್ಲ. ವೈಫಲ್ಯ ಮತ್ತು ಪ್ರತಿಕೂಲತೆಗಳು ಪ್ರಯಾಣದ ಒಂದು ಭಾಗವಾಗಿರುತ್ತವೆ. ನಿಜವಾದ ಜೈವಿಕಾ ಣುಶಾಸ್ತçಜ್ಞನು ಸಹನಶೀಲತೆ, ಧೈರ್ಯ, ಮತ್ತು ನಿರಂತರ ಪರಿಶ್ರಮದಿಂದ ಯಶಸ್ಸಿನತ್ತ ಮುನ್ನಡೆಯಬೇಕು ಎಂದು ಹಿರಿಯ ವಿಜ್ಞಾನಿ ಡಾ. ಶಿವಾಜಿ ಜಾಧವ್ ತಿಳಿಸಿದರು. ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಸೂಕ್ಷö್ಮ ಜೀವಶಾಸ್ತç ವಿಭಾಗದಲ್ಲಿ ‘೨೧ನೇ ಶತಮಾನದ ಜೈವಿಕಾಣುಶಾಸ್ತç: ಹೊಸ ಆವಿಷ್ಕಾರಗಳು ಮತ್ತು ಅನ್ವಯಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಂಕೆಗಳಿಗಿAತ ಜ್ಞಾನ ಮಹತ್ವದ್ದು. ಅಂಕೆಗಳು ಪ್ರಾರಂಭಿಕ ಅವಕಾಶಗಳನ್ನು ನೀಡಬಹುದು. ಆದರೆ ದೀರ್ಘಕಾಲೀನ ಯಶಸ್ಸನ್ನು ನಿರ್ಧರಿಸುವುದು ಆಳವಾದ ಜ್ಞಾನ ಮತ್ತು ತಜ್ಞತೆ. ಜೈವಿಕಾಣುಶಾಸ್ತçದಲ್ಲಿ ಸೂಕ್ಷö್ಮಜೀವಿಗಳು, ರೋಗ ಗಳು, ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಆಳವಾದ ತಿಳುವಳಿಕೆ ಅನಿವಾರ್ಯ ಎಂದರು. ನಿರಂತರ ಅಧ್ಯಯನ ಮತ್ತು ಕುತೂಹಲ ಅತ್ಯಗತ್ಯ. ಜೈವಿಕಾಣುಶಾಸ್ತçದ ಕ್ಷೇತ್ರ ನಿರಂತರ ಬೆಳವಣಿಗೆಯನ್ನು ಕಾಣುತ್ತಿದೆ. ಹೊಸ ಸಂಶೋ ಧನೆಗಳು ಮತ್ತು ಆವಿಷ್ಕಾರಗಳು ನಮ್ಮ ಜೀವನದ ಅರಿವನ್ನು ವಿಸ್ತರಿಸುತ್ತವೆ. ನಾವು ಹೆಚ್ಚು ತಿಳಿಯಲು, ಅಧ್ಯಯನ ಮಾಡಲು, ಕಾರ್ಯಾ ಗಾರಗಳಲ್ಲಿ ಪಾಲ್ಗೊಳ್ಳಲು,…
Author: News Desk Benkiyabale
ತುಮಕೂರು: ನಗರದ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ೬೪ನೇ ಜನ್ಮ ವರ್ಧಂತಿಯನ್ನು ಭಕ್ತರು ಶನಿವಾರ ಭಕ್ತಿ, ಸಡಗರದಿಂದ ಆಚರಿಸಿದರು. ಈ ಹಿನ್ನೆಲೆಯಲ್ಲಿ ಹಿರೇಮಠದಲ್ಲಿ ಹಬ್ಬದ ಸಂಭ್ರಮ ಏರ್ಪಟ್ಟಿತ್ತು. ಬೆಳಗಿನಿಂದಲೇ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿ ಶ್ರೀಗಳಿಗೆ ಭಕ್ತಿಗೌರವ ಸಮರ್ಪಣೆ ಮಾಡಿ, ಆಶೀರ್ವಾದ ಪಡೆದರು. ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಶಾಸಕ, ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ತುಮಕೂರು ವಿವಿ ಉಪ ಕುಲಪತಿ ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್ ಜಮ್ ಸೇರಿದಂತೆ ವಿವಿಧ ರಾಜಕೀಯ ಮುಖಂಡರು, ಸಂಘಸAಸ್ಥೆಗಳ ಪ್ರಮುಖರು ಆಗಮಿಸಿ ಜನ್ಮವರ್ಧಂತಿ ಪ್ರಯುಕ್ತ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳಿಗೆ ಗೌರವ ಸಮರ್ಪಣೆ ಮಾಡಿದರು. ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಉಪಾಧ್ಯಕ್ಷ ಟಿ.ಬಿ.ಹರೀಶ್, ವೀರಶೈವ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಜೆ.ರುದ್ರಪ್ಪ, ಉಪಾಧ್ಯಕ್ಷ ಹೆಬ್ಬಾಕ ಮಲ್ಲಿಕಾರ್ಜುನ್, ಸ್ನೇಹ ಸಂಗಮ ಬ್ಯಾಂಕ್ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಟಿ.ಸಿ.ಓಹಿಲೇಶ್ವರ್,…
ತುಮಕೂರು: ರಂಜಾನ್ ಹಬ್ಬದ ಪ್ರಯುಕ್ತ ನಗರದ ಸದಾಶಿವ ನಗರದಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಲಾಹಿ ಸಿಕಂದರ್ ಅವರು ತಮ್ಮ ಸಿಕಂದರ್ ಫೌಂಡೇಶನ್ನಿAದ ಶುಕ್ರವಾರ ಸಾವಿರಾರು ಬಡ ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ ಮಾಡಿದರು. ಫುಡ್ ಕಿಟ್ ವಿತರಣೆ ಮಾಡಿ ಮಾತನಾಡಿದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್ ಅವರು, ದೈವನು ಕುರಾನ್ನಲ್ಲಿ ಹೇಳಿರುವಂತೆ ಯಾರಲ್ಲಿ ವಿದ್ಯೆ ಇರುವುದೊ ಅವರು ಇಲ್ಲದವರಿಗೆ ವಿದ್ಯಾ ದಾನ ಮಾಡಬೇಕು, ಸಂಪತ್ರು ಇದ್ದವರು ಅದರಲ್ಲಿ ಸ್ವಲ್ಪ ಭಾಗ ಬಡವರಿಗೆ ದಾನ ಮಾಡಬೇಕು. ಅಧಿಕಾರಲ್ಲಿ ಇರುವವರ ಅಮಾಯಕರಿಗೆ ನ್ಯಾಯ ಒದಗಿಸಬೇಕು. ಇದೇ ರೀತಿ ರಂಜಾನ್ ಹಬ್ಬದಲ್ಲಿ ಬಡವರೂ ಸಂತೋಷದಿAದ ಹಬ್ಬ ಆಚರಣೆ ಮಾಡಬೇಕು ಎಂದು ಸಿಕಂದರ್ ಫೌಂಡೇಶನ್ನಿAದ ಆಹಾರಧಾನ್ಯ ವಿತರಿಸಿ ಸಹಾಯ ಮಾಡಿದ್ದಾರೆ ಎಂದರು. ಪವಿತ್ರ ರಂಜಾನ್ನಲ್ಲಿ ಉಪವಾಸ ಮಾಡಿ, ಹಸಿವಿನ ಅನುಭವ ಪಡೆಯಬೇಕು. ಯಾರು ಹಸಿವಿ ನಿಂದ ಬಳಲುವವರೋ ಅವರಿಗೆ ಅನ್ನ ನೀಡಬೇಕು ಎಂಬುದು ರಂಜಾನ್ ಆಶಯ. ಮುಸಲ್ಮಾನ್ ಎಂದರೆ ಶರಣಾಗುವವನು ಎಂದ ರ್ಥ. ಇಸ್ಲಾಂ…
ತುಮಕೂರು : ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆಯ ಬರೆಯನ್ನು ಹಾಕಿರುವ ರ್ಕಾರಕ್ಕೆ ಬಡವರ ಬಗ್ಗೆ ಯಾವುದೇ ಕಾಳಜಿಯಿಲ್ಲ. ಪಂಚ ಗ್ಯಾರಂಟಿ ಯೋಜನೆಗಳ ಹೊರೆಯನ್ನು ರಾಜ್ಯದ ಜನರು ನೇರವಾಗಿ ಈಗ ಎದುರಿಸುತ್ತಿರುವುದರ ಸಂಕೇತವೇ ಬೆಲೆ ಏರಿಕೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ ಗೌಡರು ಟೀಕಿಸಿದ್ದಾರೆ. ಯುಗಾದಿ ಬೇವು ಬೆಲ್ಲದ ಹಬ್ಬ. ಆದರೆ, ಈ ರ್ಕಾರ ರಾಜ್ಯದ ಜನರಿಗೆ ಕೇವಲ ಬೇವು ಕೊಟ್ಟು ಕಹಿ ತಿಂದು ಹಬ್ಬ ಆಚರಿಸಿ ಎಂದು ಹೇಳಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುಗಾದಿಯ ಮರುದಿನವಾದ ಏಪ್ರಿಲ್ ೧ ರಿಂದ ಹಾಲಿನ ಬೆಲೆ ಏರಿಕೆ ಜಾರಿಗೆ ಬರಲಿದೆ. ಜನರನ್ನು ಹೇಗೆ ಸಿದ್ದರಾಮಯ್ಯ ರ್ಕಾರ ಏಪ್ರಿಲ್ ೧ ರ ಮರ್ಖರ ದಿನವೇ ಮರ್ಖರನ್ನಾಗಿ ಮಾಡುತ್ತಿದೆ ಎನ್ನುವುದಕ್ಕೆ ಇದು ನಿರ್ಶನ. ಈ ರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ರ್ಷ ಆಗಿಲ್ಲ. ಇದರೊಳಗೆ ಪೆಟ್ರೋಲ್ ಮತ್ತು ಡೀಸಲ್ ದರ ಏರಿಸಿದರು, ವಿದ್ಯುತ್ ದರ ಎರಡು ಸಾರಿ ಏರಿಸಿದರು. ಈಗ ಒಂದು…
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ರೈತರ ಪಾಲಿನ ಏಕೈಕ ಜೀವಜಲದ ಮೂಲವಾದ ಹೇಮಾವತಿ ನಾಲೆಯ ಬಹುತೇಕಕಡೆ ಹೂಳುತುಂಬಿ ಮುಂಬರುವ ದಿನದಲ್ಲಿ ನೀರೇಹರಿಯದ ಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕಿನ ರೈತರ ಪಾಲಿಗೆ ಏಕೈಕ ಭರವಸೆಯಾಗಿದ್ದ ಹೇಮಾವತಿ ನಾಲೆಯಿಂದ ಈ ಭಾಗದ ೨೬ಕೆರೆಗಳಿಗೆ ನೀರುಣಿಸುವ ಯೋಜನೆ ಅನೇಕ ಹೋರಾಟದ ತಿರುವುಗಳನ್ನು ಪಡೆದು ಕಳೆದ ಮೂರುವರ್ಷದ ಹಿಂದೆ ಒಂದುಭಾಗದ ನಾಲೆಯಕಾಮಗಾರಿ ಮುಗಿದು ತಾಲ್ಲೂಕಿನ ಸಾಸಲು, ಶೆಟ್ಟಿಕೆರೆ, ಹೆಸರಳ್ಳಿ, ಅಂಕಸAದ್ರದ ಅಣೆ, ತಿಮ್ಲಾಪುರ, ಹುಳಿಯಾರು, ಬೋರನಕಣಿವೆ ಜಲಾಷಯದವರೆಗೂ ನೀರು ಹರಿದು ತಾಲ್ಲೂಕಿನ ಜನತೆಗೆ ಸಂತಸವನ್ನುAಟು ಮಾಡಿತ್ತು. ಪಾತಾಳ ಕಂಡಿದ್ದ ಅಂತರ್ಜಲ ಮೇಲಕ್ಕೆರಿತ್ತು. ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಹೊತ್ತಿದ್ದ ಈ ತಾಲ್ಲೂಕಿನಲ್ಲಿ ಹೇಮಾವತಿ ಯೋಜನೆಯ ಇತರೆ ಭಾಗದ ಕಾಮಗಾರಿ ಮುಗಿದು ನೀರು ಹರಿದರೆ ಮುಕ್ಕಾಲು ತಾಲ್ಲೂಕಿನ ನೀರಿನ ಬವಣೆ ನೀಗಿಲಿದೆ, ಅಂತರ್ಜಲ ಉತ್ತಮಗೊಂಡು ಕೊಳವೆಬಾವಿಯ ನೀರಿನ ಆಶ್ರಯದಲ್ಲಿಯೇ ಬೆಳೆ ಉಳಿಸಿಕೊಳ್ಳಲು ಜೀವನ ಸವೆಸುತ್ತಿದ್ದ ರೈತರಿಗೆ ಮುಂದಿನ ದಿನ ನೆಮ್ಮದಿಯ ದಿನವಾಗಲಿದೆ ಎಂಬ ಅವರ ನಾನಾ ಕನಸಿಗ ಕೊಡಲಿ ಪೆಟ್ಯು ಬಿದ್ದಿದೆ. ತಾಲ್ಲೂಕು ಆಡಳಿತದ…
ತುರುವೇಕೆರೆ: ಜಲ ಜೀವನ್ ಮಿಷನ್ ಆಡಿಯಲ್ಲಿ ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ಮನೆಮನೆ ಗಂಗಾ ಯೋಜನೆ ಕಾಮಗಾರಿಗಳಿಗೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಭೂಮಿ ಪೂಜೆ ನೆರವೇರಿಸಿದರು. ತಾಲೂಕಿನ ಕಸಬಾದ ಮುನಿಯೂರು ಗ್ರಾ.ಪಂ. ವ್ಯಾಪ್ತಿಯ ಮಾದಾಪಟ್ಟಣ ಗ್ರಾಮದಲ್ಲಿ ಗ್ರಾಮಾಭಿವೃದ್ದಿ ಹಾಗೂ ಪಂಚಾಯತ್ರಾಜ್ ವಿಶೇಷ ಯೋಜನೆಯಡಿಯಲ್ಲಿ ಅಂದಾಜು ವೆಚ್ಚ ೩೭ಲಕ್ಷ ಹಾಗೂ ಮಾಯಸಂದ್ರ ಹೋಬಳಿಯ ದೇವನಾಯ್ಕನಹಳ್ಳಿ ಗ್ರಾಮದಲ್ಲಿ ೩೪ ಲಕ್ಷ ವ್ಯಚ್ಚ ದಲ್ಲಿನ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ಮಾಡಿ ಕಾಮಾಗಾರಿಗೆ ಚಾಲನೆ ನೀಡಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ಮನೆಯ ಬಳಿಗೆ ಶುದ್ದ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಗ್ರಾಮೀಣ ಭಾಗದ ಜನರು ಇದರ ಸದೂಪಯೋಗ ಪಡಿಸಿಕೊಳ್ಳಬೇಕು. ಈಗಾಗಲೇ ತಾಲ್ಲೂಕಿನ ೨೩೦ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿಲಾಗಿದೆ. ಉಳಿದ ಕಾಮಗಾರಿ ಅದೋಷ್ಟು ಬೇಗ ಕಾಮಗಾರಿ ಮುಗಿಸಬೇಕೆಂಬುದು ಸರ್ಕಾರದ ಚಿಂತನೆಯಾಗಿದೆ. ಆ ನಿಟ್ಟಿನಲ್ಲಿ ಕಳಪೆಯಾಗದಂತೆ ಜನತೆ ಎಚ್ಚರ ವಹಿಸಬೇಕೆಂದರಲ್ಲದೆ ಗುತ್ತಿಗೆದಾರರು ಸಹ ಗುಣಮಟ್ಟ ಕಾಪಾಡುವಂತೆ ಎಚ್ಚರಿಸಿದರು. ಈ ಸಂದರ್ಬದಲ್ಲಿ ಪುರ ಗ್ರಾ.ಪಂ.…
ತುಮಕೂರು: ವಿಶೇಷ ಚೇತನರು ತಮ್ಮ ದೈಹಿಕ ನ್ಯೂನ್ಯತೆ ಮೆಟ್ಟಿನಿಂತು ತಮ್ಮಲ್ಲಿರುವ ಆತ್ಮಶಕ್ತಿ ಗುರುತಿಸಿಕೊಂಡು ಸಮರ್ಥವಾಗಿ ಬದುಕು ಕಟ್ಟಿಕೊಳ್ಳುವ ಬಗ್ಗೆ ಚಿಂತನೆ ಮಾಡಬೇಕು. ದೇವರು ನ್ಯೂನ್ಯತೆ ಕೊಟ್ಟವರಿಗೆ ಅಗಾಧ ಪ್ರಮಾಣದ ಆತ್ಮಶಕ್ತಿ ಕೊಟ್ಟಿರುತ್ತಾನೆ ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ನ ೧೬ನೇ ವಾರ್ಷಿ ಕೋತ್ಸವದ ಅಂಗವಾಗಿ ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ಚೇತನರಿಗೆ ಫುಡ್ಕಿಟ್ ವಿತರಣೆ ಮಾಡಿದರು. ಇದೇ ವೇಳೆ ವಿಕಲಚೇತನರಿಗೆ ಉದ್ಯೋಗ ಆಧಾರಿತ ತರಬೇತಿ ನೀಡುವ ಪ್ರೇರಣಾ ತರಬೇತಿ ಕೇಂದ್ರವನ್ನು ಸ್ವಾಮೀಜಿ ಉದ್ಘಾಟಿಸಿದರು. ನಂತರ ಮಾತನಾಡಿದ ಸ್ವಾಮೀಜಿ, ಅಂಗವಿಕಲರಿಗಿAಥಾ ಎಲ್ಲಾ ಅಂಗಗಳು ಸರಿಯಾಗಿದ್ದೂ ಮನೋವಿಕಲರಾಗಿ ವರ್ತಿಸುವವರನ್ನು ನಿಯಂತ್ರಿಸುವುದು ಕಷ್ಟ. ವಿಕಲಚೇತನರು ಹತಾಶರಾಗಬಾರದು, ಅಂಗವೈಕಲ್ಯ ಶಾಪವಲ್ಲ, ಅದ ನ್ನು ಸವಾಲಾಗಿ ಸ್ವೀಕಾರ ಮಾಡಿ ಬೆಳೆಯಬೇಕು. ನಿಮ್ಮಲ್ಲಿರುವ ಶಕ್ತಿಸಾಮ ರ್ಥ್ಯಗಳನ್ನು ಬಳಸಿಕೊಂಡು ಸಾಮಾನ್ಯರಲ್ಲಿ ಸ್ವಾವಲಂಬಿಯಾಗಿ ಬಾಳಲು ಪ್ರಯತ್ನಿಸಬೇಕು ಎಂದು ಹೇಳಿದರು. ಯುಗಾದಿ ಹಾಗೂ ರಂಜಾನ್ ಹಬ್ಬಗಳು ಈ ಬಾರಿ ಹಿಂದೆಮುAದೆ ಬಂದಿವೆ. ಎಲ್ಲರೂ…
ತುಮಕೂರು: ಜಿಲ್ಲೆಯಲ್ಲಿ ೨೦೨೪ರ ಜನವರಿಯಿಂದ ಈವರೆಗೆ ೧೪೧ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ೧೭೬ ಸಂತ್ರಸ್ತರಿಗೆ ೧,೧೯,೧೩,೫೦೦ ರೂ.ಗಳ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಅಪರ ಜಿಲ್ಲಾ ಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂ ಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಜಾಗೃತಿ ಉಸ್ತು ವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕಳೆದ ಕ್ಯಾಲೆಂಡರ್ ವರ್ಷದ ಜನವರಿ ಮಾಹೆಯಿಂದ ೨೦೨೫ರ ಮಾರ್ಚ್ ೨೭ರವರೆಗೆ ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬAಧಿಸಿದAತೆ ೧೧೨ ಪ್ರಕರಣಗಳಲ್ಲಿ ೧೪೦ ನೊಂದ ಪರಿಶಿಷ್ಟ ಜಾತಿ ಯ ಸಂತ್ರಸ್ತರಿಗೆ ೯೭,೩೮,೫೦೦ ರೂ. ಹಾಗೂ ೨೯ ಪ್ರಕರಣಗಳಲ್ಲಿ ೩೬ ಪರಿಶಿಷ್ಟ ವರ್ಗದ ಸಂತ್ರಸ್ತರಿಗೆ ೨೧,೭೫,೦೦೦ ರೂ.ಗಳ ಪರಿಹಾರವನ್ನು ಮಂಜೂರು ಮಾಡಲಾಗಿದೆ ಎಂದು ಸಭೆಯಲ್ಲಿ ಹಾಜರಿದ್ದ ದಲಿತ ಮುಖಂಡರ ಗಮನಕ್ಕೆ ತಂದರು. ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಈವರೆಗೂ ೩೦೦ಕ್ಕೂ ಹೆಚ್ಚು ದಲಿತ ದೌರ್ಜನ್ಯ ಪ್ರಕರಣಗಳು ವರದಿಯಾಗಿರುವುದಲ್ಲದೆ, ದಿನೇ ದಿನೇ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದರಿಂದ ದಲಿತರ…
ತುಮಕೂರು:ಮೇಲ್ನೋಟಕ್ಕೆ ಒಂದು ಸಮಾಜವನ್ನು ನೋಡಿದಾಗ ಹೆಣ್ಣು, ಗಂಡಿನ ನಡುವೆ ಎಲ್ಲವೂ ಸರಿಯಿದೆ ಎಂಬ ಭಾವನೆ ಮೂಡುವುದು ಸಹಜ.ಆದರೆ ವಾಸ್ತವದಲ್ಲಿ ಇದು ಬೇರೆಯದ್ದೇ ಆಗಿದೆ.ವಿಶ್ವಸಂಸ್ಥೆಯ ಒಂದು ವರದಿಯ ಪ್ರಕಾರ, ಹೆಣ್ಣು ಮತ್ತು ಗಂಡಿನ ನಡುವಿನ ತಾರತಮ್ಯದ ನೀತಿಯನ್ನು ಹೋಗಲಾಡಿಸಲು ೨೮೫ ವರ್ಷಗಳು ಬೇಕು ಎನ್ನತ್ತದೆ.ಈ ವರದಿಯನ್ನು ನೋಡಿದರೆ ಅಳಬೇಕೋ, ನಗಬೇಕೋ ತಿಳಿಯದಾಗಿದೆ ಎಂದು ತುಮಕೂರು ವಿವಿ ಕುಲಸಚಿವ ನಾಹಿದಾ ಜಮ್ಹ್ ಜಮ್ಹ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ಸಬಲೀಕರಣ ವೇದಿಕೆಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಮನೆಯಿಂದ ಹೊರ ಹೋದ ಹೆಣ್ಣು ಮಗಳು ಸುರಕ್ಷಿತವಾಗಿ ಮನೆಗೆ ಬರುತ್ತಾಳೆ ಎಂಬ ನಂಬಿಕೆ ಇಲ್ಲ.ಕೌಟುಂಬಿಕ ದೌರ್ಜನ್ಯ ಮಿತಿಮೀರಿದೆ.ಸಾಕಷ್ಟು ಅಡೆತಡೆಗಳನ್ನು ದಾಳಿ ಆಕೆ ಸಾಧನೆ ಮಾಡಬೇಕಾಗಿದೆ.ಒಮ್ಮೊಮ್ಮೆ ಇಷ್ಟೆಲ್ಲಾ ವೈರುದ್ಯಗಳ ನಡುವೆ ನಮಗೆ ವಿಶ್ವ ಮಹಿಳಾ ದಿನಾಚರಣೆ ಅಗತ್ಯವೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು. ವಿಶ್ವ ಮಹಿಳಾ ದಿನವೆಂಬುದು ಕೇವಲ ಸಾಧನೆ ಮಾಡಿದ ಮಹಿಳೆಯರಿಗೆ ಸಿಮೀತವಾಗಬಾರದು. ಇಡೀ ಜಗತ್ತಿನ…
ತುಮಕೂರು: ಡಾ.ಶೀ ಶಿವಕುಮಾರಸ್ವಮಿಗಳ ೧೧೮ ನೇ ಜಯಂತಿ ಹಾಗೂ ಗುರವಂದನ ಮಹೋತ್ಸವ ವನ್ನು ಏಪ್ರಿಲ್ ೧ ರಂದು ಬೆಳಿಗ್ಗೆ ೧೧ ಗಂಟೆಗೆ ಸಿದ್ಧಗಂಗಾ ಮಠದಲ್ಲಿ ಹಮ್ಮಿ ಕೊಳ್ಳಲಾಗಿದೆ ಎಂದು ಸಿದ್ಧಗಂಗಾ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ನಂಜುAಡಪ್ಪ ತಿಳಿಸಿದರು. ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಮಾರಂಭದ ಉದ್ಘಾಟನೆಯನ್ನು ಕೇಂದ್ರ ಸರ್ಕಾರದ ರಕ್ಷಣ ಸಚಿವರಾದ ರಾಜನಾಥ್ ಸಿಂಗ್ ಮಾಡಲಿದ್ದು, ಅಧ್ಯಕ್ಷತೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಹಿಸಲಿದ್ದು, ದಿವ್ಯ ನೇತೃತ್ವವನ್ನು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮಿಗಳು ವಹಿಸಲಿದ್ದು, ಮೈಸೂ ರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಸಿದ್ದೇಶ್ವರಸ್ವಾಮಿಗಳು ಉಪಸ್ಥಿತಿ ಇರಲಿದ್ದಾರೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ಭಾಗವಹಿಸುವರು, ವಿಶೇಷ ಆಹ್ವಾನಿತರಾಗಿ ಶಾಸಕರುಗಳಾದ ಜಿ.ಬಿ. ಜ್ಯೋತಿಗಣೇಶ್, ಬಿ.ಸುರೇಶ್ಗೌಡ ಮತ್ತು ಎನ್.ಶ್ರೀನಿವಾಸಯ್ಯ ಭಗವಹಿಸಲಿದ್ದಾರೆ ಎಂದು ತಿಳಿಸಿದರು. ಗುರುವಂದನಾ…