. ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಗ್ರೀನ್ ಪಾತ್ ಹೋಟೆಲ್ ಮಲ್ಲೇಶ್ವರಂ ಬೆಂಗಳೂರು ಇಲ್ಲಿ ಆಯೋಜಿಸಿದ ಕರುನಾಡ ಕಲೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್. ರವರಿಗೆ ಹೆಮ್ಮೆಯ ಕನ್ನಡತಿ ಪ್ರಶಸ್ತಿಯನ್ನು ಶಿಕ್ಷಣ, ಸಾಮಾಜಿಕ ಕ್ಷೇತ್ರಕ್ಕೆ ಗುರುತಿಸಿ ಪ್ರಶಸ್ತಿ ನೀಡಿ ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಲಾಯಿತು. ಹೆಚ್. ಎಸ್. ಪ್ರತಿಮಾ ಹಾಸನ್. ರವರ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತಿಕ ಎಲ್ಲಾ ಕ್ಷೇತ್ರದ ಸಾಧನೆಯನ್ನು ಗಣನೆಗೆ ತೆಗೆದುಕೊಂಡು ಇವರಿಗೆ 9/03/2023ರಂದು ಗ್ರೀನ್ ಪಾತ್ ಹೋಟೆಲ್ ಬೆಂಗಳೂರು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಮ್ಮೆಯ ಕನ್ನಡತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಜ್ಞಾನ ಜ್ಞಾನಪೀಠದಿಂದ ಇತ್ತೀಚಿಗೆ ಇವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರು ಹಲವಾರು ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಚಲನಚಿತ್ರ ಹಿರಿಯ ನಟಿ. ಮಾಲತಿ ಶ್ರೀ ರವರು ಮತ್ತು…
Author: News Desk Benkiyabale
ಪಾವಗಡ ತಾಲ್ಲೂಕಿನಲ್ಲಿ ಕೂನೆಯ ಹಂತದಲ್ಲಿ ಇನ್ನೇನು ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವಂತಹ ವೇಳೆಯಲ್ಲಿ ಚಿತ್ರದುರ್ಗ ಮಾಜಿ ಸಂಸದ ಜನಾರ್ದನ ಸ್ವಾಮೀಯವರು ಈ ಭಾಗದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದೆನೆ ಎಂಬುದಾಗಿ ಈ ಭಾಗದಲ್ಲಿ ಈಗಾಗಲೇ ಹಲವು ವರ್ಷಗಳ ಕಾಲ ಆಕಾಂಕ್ಷಿ ಅಭ್ಯರ್ಥಿ ಯಾಗಿ ಸೇವೆ ಮಾಡಿಕೊಂಡು ಬರುತ್ತಿರುವ ಆಕಾಂಕ್ಷಿ ಅಭ್ಯರ್ಥಿ ಗಳಿಗೆ ಶಾಕ್ ನೀಡಿದ್ದಾರೆ. ಭಾನುವಾರ ಏಕ ಏಕಿ ಪಾವಗಡಕ್ಕೆ ಬೇಟಿ ನೀಡಿದ ಚಿತ್ರದುರ್ಗ ಮಾಜಿ ಸಂಸದ ಜನರ್ಧನಸ್ವಾಮಿ ಯವರು ಶನಿ ಮಹಾತ್ಮ ದೇವಾಲಯಕ್ಕೆ ಬೇಟಿ ನೀಡಿ ನಂತರ ಬಿಜೆಪಿ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಬಳಿ ಸಭೆ ನಡೆಸಿ ನಂತರ ಮಾದ್ಯಮ ಬಳಿ ಮಾತನಾಡಿದ ಅವರು ಪಾವಗಡ ನನ್ನಗೆ ಹಳೆಯದು ಈ ಭಾಗದ ಸಂಸದ ನಾಗಿದ್ದ ವೇಳೆಯಲ್ಲಿ ಜನಪರ ಕೆಲಸಗಳು ಮಾಡಿದ್ದೆನೆ. ಈ ಭಾಗದ 40ಕೆರೆ ಗಳಿಗೆ ನೀರು ತುಂಬಿಸುವ ಯೋಜನೆಗೆ ಹೆಚ್ಚು ಹೊತ್ತು ನೀಡಿದು ನನ್ನ ಅವಧಿಯಲ್ಲಿ. ತುಂಗಭದ್ರಾ ಯೋಜನೆಗೆ ಚಾಲನೆ ನೀಡಿದ್ದು ನನ್ನ ಅವಧಿಯಲ್ಲಿ. ನಾನು ಸಂಸದ…
ಕೊರಟಗೆರೆ ಸಾದರು ಎಂದರೆ ಸಜ್ಜನರು, ಒಳ್ಳೆಯ ಜನ ಎಂಬ ಉಲ್ಲೇಖಗಳಿವೆ ನಾನು ನಿಮ್ಮ ಸಹೋದರನಾಗಿ ಸಮುದಾಯಕ್ಕೆ ದ್ವನಿಯಾಗಿ ನಿಲ್ಲುತ್ತೇನೆ ಎಂದು ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ ತಿಳಿಸಿದರು. ಪಟ್ಟಣದ ಹಿಂದೂ ಸಾದರ ಸಮುದಾಯ ಭವದಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಾದರ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಮೂಲತಃ ಜೈನಾ ಸಮುದಾಯಕ್ಕೆ ಸೇರಿದವರು ನೀವು ಜೈನರು ಹಿಂಸೆಯನ್ನು ಮಾಡಿದವರಲ್ಲ. ನೀವು ಆ ಸಮುದಾಯದಿಂದ ಬಂದವರು. ಪರಿವರ್ತನೆಯಲ್ಲಿ ನೀವು ಹಿಂದೂ ಧರ್ಮಕ್ಕೆ ಬಂದದಂತಹ ಸಮುದಾಯ ನಿಮ್ಮದು ಎಂದು ಹೇಳಿದರು. ಜೈನರು, ಹಿಂದೂ, ಲಿಂಗಾಯತ ಮೂರು ಕಡೆ ನಿಮ್ಮ ಗುರುತುಗಳಿಗೆ ಶಾಂತಿಯುತ ಜೀವನ ನಡೆಸುವ ಸಮುದಾಯ ನಿಮ್ಮದಾಗಿದೆ. 1916ರಲ್ಲಿ ಮಂಡಿ ಹರಿಯಣ್ಣಯ್ಯ ಅಸೆಂಬ್ಲಿ ಮೈಸೂರಿನ ರಾಜ್ಯದಲ್ಲಿ ಸಚಿವರಾಗುತ್ತಾರೆ. ಪ್ರತಿನಿಧಿ ಸಭೆಗೆ ಸದಸ್ಯರನ್ನು ಮಾಡುತ್ತಾರೆ. ರಾಜಕೀಯದಲ್ಲಿ ಅಷ್ಟೋಂದು ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಲಿದೆ. ಜಾಗೃತಿ ಮೂಡಿಸುವ ಸಲುವಾಗಿ ರಾಜಕೀಯ ಜಾಗೃತಿಯನ್ನು ಮೂಡಿಸಬೇಕು. ನಮಗೆ ಯಾರು ಶಕ್ತಿಯನ್ನು ನೀಡುತ್ತಾರೆ ಯಾರು ನಮ್ಮವರು ಎಂದು ಗುರುತಿಸುತ್ತಾರೆ ಅವರನ್ನು…
ತುಮಕೂರು ವಿಧಾನ ಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆ ಅಧಿಕಾರಿ / ಸಹಾಯಕ ಮತಗಟ್ಟೆ ಅಧಿಕಾರಿಗಳನ್ನಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿ/ಸಿಬ್ಬಂದಿಗಳು ನಕಲಿ ಆಹ್ವಾನ ಪತ್ರಿಕೆಗಳನ್ನು ಸಲ್ಲಿಸಿ ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಸೂಚನೆ ನೀಡಿದರು. ಎನ್.ಐ.ಸಿ. ಕಚೇರಿಯಲ್ಲಿಂದು ಪತ್ರಿಕಾ ಹೇಳಿಕೆ ನೀಡಿದ ಅವರು ಮದುವೆ, ಮತ್ತಿತರ ಸಮಾರಂಭಗಳಿರುವುದರಿಂದ ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಬೇಕೆಂದು ನಕಲಿ ಆಹ್ವಾನ ಪತ್ರಿಕೆಗಳನ್ನು ಸಲ್ಲಿಸುತ್ತಿರುವುದು ಕಂಡು ಬಂದಿದೆ. ಆಹ್ವಾನ ಪತ್ರಿಕೆಯನ್ನು ಮುದ್ರಣ ಮಾಡುವ ಮುದ್ರಕರು ಸೂಕ್ತ ದಾಖಲೆ ಪಡೆಯದೇ ಪತ್ರಿಕೆಗಳನ್ನು ಮುದ್ರಣ ಮಾಡಬಾರದು ಎಂದರಲ್ಲದೆ ಚುನಾವಣಾ ದಿನ ಹಾಗೂ ಹಿಂದಿನ ದಿನದಂದು ಸಮಾರಂಭವಿರುವ ಬಗ್ಗೆ ಸುಳ್ಳು ಆಹ್ವಾನ ಪತ್ರಿಕೆ ನೀಡಿದ ಚುನಾವಣಾ ಕರ್ತವ್ಯ ನಿಯೋಜಿತರನ್ನು ಆರ್.ಪಿ. ಕಾಯ್ದೆ 134ರನ್ವಯ ಅಮಾನತ್ತುಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಪಿಆರ್‍ಓ ಹಾಗೂ ಎಪಿಆರ್‍ಓ ಸೇರಿದಂತೆ ಒಟ್ಟು 8622 ಅಧಿಕಾರಿ/ಸಿಬ್ಬಂದಿಗಳಿಗೆ ಏಪ್ರಿಲ್ 11ರಂದು ತರಬೇತಿಯನ್ನು…
ತುಮಕೂರು ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಪಂಚಾಯತ್ ಮತ್ತು ಬೂತ್ ಮಟ್ಟದ ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಕೆಂಪಣ್ಣ,ಕಳೆದ ಮೂರು ಚುನಾವಣೆಗಳಿಗೆ ಹೊಲಿಕೆ ಮಾಡಿದರೆ ಕಾಂಗ್ರೆಸ್ ಪಕ್ಷ ಕುಸಿಯುತ್ತಿರುವುದು ಸ್ಪಷ್ಟವಾಗಿರುವ ಹಿನ್ನೇಲೆಯಲ್ಲಿ, ಅತಿ ಹೆಚ್ಚು ದಲಿತ, ಹಿಂದುಳಿದ ಮತದಾರರನ್ನು ಹೊಂದಿರುವ ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಈ ಬಾರಿ ಹಿಂದುಳಿದ ವರ್ಗದ ಅಭ್ಯರ್ಥಿಯೊಬ್ಬರನ್ನು ಕಣಕ್ಕೆ ಇಳಿಸುವ ಚಿಂತನೆಯಲ್ಲಿ ಕಾಂಗ್ರೆಸ್ ಪಕ್ಷವಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಮುಖಂಡರ ಸಭೆಯನ್ನು ಆಯೋಜಿಸಿದ್ದು, ಹಿಂದುಳಿದ ವರ್ಗದ ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ನಿವೃತ್ತ ಎಇಇ ಜಿ.ಹೆಚ್.ಷಣ್ಮುಖಪ್ಪ, ಸೂರ್ಯಮುಕುಂದರಾಜ್, ಶ್ರೀನಿವಾಸ್, ಆರ್.ನಾರಾಯಣ್, ಹೆಚ್.ನಿಂಗಪ್ಪ, ನರಸಿಂಹರಾಜು ಅವರುಗಳು ಪ್ರಬಲ ಆಕಾಂಕ್ಷಿಗಳಿದ್ದು, ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಜಿ.ಹೆಚ್.ಷಣ್ಮುಖಪ್ಪ ಅವರು ಅಭ್ಯರ್ಥಿಯಾಗುವ ಎಲ್ಲಾ ನಿರೀಕ್ಷೆಗಳಿದ್ದು, ನಾವೆಲ್ಲರೂ ಅವರ ಗೆಲುವಿಗೆ ಶಕ್ತಿ ಮೀರಿ…
ತುಮಕೂರು: ದಿವ್ಯಾಂಗ ಮೈತ್ರಿ ಸ್ಪೋಟ್ರ್ಸ್ ಅಕಾಡೆಮಿ(ರಿ), ತುಮಕೂರು ಜಿಲ್ಲಾ ದಿವ್ಯಾಂಗ ಸ್ಪೋಟ್ರ್ಸ ಅಕಾಡೆಮಿ(ರಿ) ವತಿಯಿಂದ ವಿಕಲಚೇತರರಾಗಿ ಎರಡು ದಿನಗಳ ವ್ಹೀಲ್‍ಚೇರ್ ಕ್ರಿಕೆಟ್ ಟೂರ್ನಮೆಂಟ್‍ನ್ನು ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ಎರಡು ದಿನಗಳ ಈ ಟೂರ್ನಿಯಲ್ಲಿ ತುಮಕೂರು ಸುತ್ತಮುತ್ತಲಿನ ನಾಲ್ಕು ತಂಡಗಳು ಭಾಗವಹಿಸಿದ್ದು, ನಮ್ಮನಿಧಿ ಟ್ರಸ್ಟ್‍ನ ಸಹಯೋಗದಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.ತುಮಕೂರು, ಬಳ್ಳಾರಿ, ಬೆಂಗಳೂರು ಮತ್ತು ಬೆಳಗಾವಿಯ ಸುಮಾರು 70 ಜನ ದಿವ್ಯಾಂಗ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.ಇವರಲ್ಲಿ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಆಟವಾಡಿರುವ ಕ್ರೀಡಾಪಟುಗಳು ಭಾಗವಹಿಸಿರುವುದು ಹೆಮ್ಮಪಡುವಂತಹದ್ದು.ಇವರಿಗೆ ಶ್ರೀಸಿದ್ದಗಂಗಾ ಮಠದಲ್ಲಿ ವಸತಿ ವ್ಯವಸ್ಥೆ ಮಾಡಿದ್ದು,ಊಟದ ವ್ಯವಸ್ಥೆಯನ್ನು ಸಹ ಸಮಮ್ ಸಮಿತಿವತಿಯಿಂದ ಮಾಡಲಾಗಿದೆ. ನಾಲ್ಕು ತಂಡಗಳು ಭಾಗವಹಿಸುವ ಈ ಟೂನಿಯ ಮೊದಲ ವಿಜೇತರಿಗೆ 20 ಸಾವಿರ ರೂ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ಎರಡನೇ ಬಹುಮಾನವಾಗಿ 10 ಸಾವಿರ ರೂ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.ವಿಕಲಾಂಗದಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ,ಪ್ರೋತ್ಸಾಹಿಸುವ ಸಲುವಾಗಿ ಈ ಟೂರ್ನಿಯನ್ನು ಆಯೋಜಿಸಲಾಗಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಟೂರ್ನಿಯನ್ನು ಆಯೋಜಿಸುವ ಇಚ್ಚೆ ಇದೆ…
ತುಮಕೂರು ನಗರದ ಕಾಂಗ್ರೆಸ್ ಹಿರಿಯ ಧುರೀಣರಾದ ಎಸ್.ಶಫಿ ಅಹಮದ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ವಿರುದ್ಧ ಸಭೆ ತುಂಬೆಲ್ಲಾ ಹಾರಿಹಾಯ್ದರು. ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ನಮ್ಮ ಅಳಿಯ ಡಾ. ರಫೀಕ್ ಅಹಮದ್ ರವರಿಗೆ ಟಿಕೆಟ್ ನೀಡುವ ವಿಶ್ವಸವನ್ನು ನೀಡಿ ನಂತರ ಟಿಕೆಟ್ ಕೈತಪ್ಪುವಂತೆ ಚಾಣಾಕ್ಷತನ ತೋರಿ ಬೇರೆಯವರಿಗೆ ಟಿಕೆಟ್ ನೀಡುವ ಮೂಲಕ ನಮಗೆ ವಿಶ್ವಾಸ ಘಾತಕ ಕೆಲಸವನ್ನ ಮಾಡಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಫಿ ಅಹಮದ್ ರವರು ಡಾ.ಜಿ ಪರಮೇಶ್ವರ್ ರವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಶಫಿ ಅಹಮದ್ ಹಾಗೂ ರಫೀಕ್ ಅಹ್ಮದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ತುಮಕೂರು ಮಹಾನಗರ ಪಾಲಿಕೆಯ ಸದಸ್ಯರೊಂದಿಗೆ ಸಭೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿರುವ ಅವರು ಜಿ ಪರಮೇಶ್ವರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಲಕ್ಕಪ್ಪ ರವರ ಕಾಲದಿಂದಲೂ ಪಕ್ಷಕ್ಕೆ ದುಡಿದಿದ್ದೇವೆ ಸುಮಾರು 50 ವರ್ಷಗಳ ಕಾಲ…
ತುಮಕೂರು ರಾಜ್ಯ ಕಾನೂನು ಮಂತ್ರಿ ಜೆ.ಸಿ.ಮಾಧುಸ್ವಾಮಿ 2011ರ ಜನಗಣತಿ ಆಧಾರದಲ್ಲಿ ಶೇ17 ರಷ್ಟು ಮೀಸಲಾತಿಯನ್ನು ಪರಿಶಿಷ್ಟ ಜಾತಿಯಲ್ಲಿ ಸ್ಪಷ್ಯ ಮತ್ತು ಅಸ್ಪøಷ್ಯ ಜಾತಿಗಳಿಗೆ ಹಂಚಿಕೆ ಮಾಡಿರುವುದು ಸಮಂಜಸವಾಗಿದೆ. ವಿನಾಕಾರಣ ಇದರಲ್ಲಿ ಕೆಲವರು ತಪ್ಪು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಟಿಕೇಟ್ ಆಕಾಂಕ್ಷಿ ಹಾಗೂ ವೈದ್ಯ ಡಾ.ಲಕ್ಷ್ಮಿಕಾಂತ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ದೇಶದಲ್ಲಿ ಮೀಸಲಾತಿ ಎನ್ನುವುದು ಸಾಮಾಜಿಕ ನ್ಯಾಯದ ಭಾಗವಾಗಿದೆ. ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ತುಳಿತಕ್ಕೆ ಒಳಗಾದ ಸಮುದಾಯಗಳನ್ನು ಇತರೆ ಸಮುದಾಯಗಳೊಂದಿಗೆ ಸ್ಪರ್ಧೆ ಮಾಡಲು ಅನುಕೂಲವಾಗುವಂತೆ ಮೀಸಲಾತಿಯನ್ನು ಸರಕಾರ ಕಲ್ಪಿಸಿದೆ.ಆದರೆ ಇದನ್ನು ಸರಿಯಾಗ ಅರ್ಥೈಸದ ಕೆಲ ಸ್ಪಷ್ಟ ಜಾತಿಗಳ ಜನರು ಇದರ ವಿರುದ್ದ ಪ್ರತಿಭಟನೆ ನಡೆಸುತ್ತಿರುವುದು ವಿಷಾದ ಸಂಗತಿ ಎಂದರು. ಪ್ರಸ್ತುತ ರಾಜ್ಯ ಸರಕಾರ ಮಾಡಿರುವ ಮೀಸಲಾತಿ ಹಂಚಿಕೆ ಮಾಡಿರುವುದು ಅತ್ಯಂತ ವೈಜ್ಞಾನಿಕವಾಗಿದೆ.ಇದರಿಂದ ಮೇಲ್ಜಾತಿಯ ಜನರು ಬೇಡ ಜಂಗಮ ಹೆಸರಿನಲ್ಲಿ ಪಡೆಯುತ್ತಿದ್ದ ಎಸ್ಸಿ ಮೀಸಲಾತಿ ಸೌಲಭ್ಯಕ್ಕೆ ಕಡಿವಾಣ ಬೀಳಲಿದೆ. ಇದುವರೆಗೂ ಪರಿಶಿಷ್ಟರಿಗೆ ಶೇ17 ಮೀಸಲಾತಿ ಇದೆ ಎಂದು ಸಾವಿರಾರು ಜನರು ನಕಲಿ…
ತುಮಕೂರು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಬೆಂಬಲಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ಮುಖಂಡ ನರಸೆಗೌಡ ತಿಳಿಸಿದ್ದಾರೆ. ಎರಡು ದಶಕಗಳಿಂದ ಜೆ.ಡಿ.ಎಸ್. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಿರುವ ನನಗೆ ಜೆಡಿಎಸ್ ನ ಟಿಕೇಟ್ ಲಭಿಸದೇ ಇರುವುದರಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆಂದು ಸ್ಪಷ್ಟನೆಯನ್ನು ನರಸೇಗೌಡರವರು ನೀಡಿದ್ದಾರೆ. ನಾನು ಪ್ರೀತಿ, ವಿಶ್ವಾಸ, ಸಾಮಾಜಿಕ ಭದ್ರತೆಯಿಂದ ಚುನಾವಣಾ ಕಣಕ್ಕೆ ಇಳಿಯುತ್ತಿದ್ದು, ನಾನು ಕಳೆದ 2013ನೇ ಸಾಲಿನ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದಿಂದ ಟಿಕೇಟ್ ಬಹುತೇಕ ಖಚಿತವಾಗಿತ್ತು, ಆದರೆ ಆ ಸಮಯದಲ್ಲಿ ಸನ್ಮಾನ್ಯ ದೇವೇಗೌಡರು ತಾವು ಈ ಭಾರಿ ಸ್ಪರ್ಧಿಸುವುದು ಬೇಡ ಕಾಂಗ್ರೆಸ್ ಪಕ್ಷದಿಂದ ಬಂದಿರುವ ಗೋವಿಂದರಾಜು ಅವರನ್ನು ಬೆಂಬಲಿಸಿ ಎಂದು ಹೇಳಿ ನನ್ನನ್ನು ಕಣದಿಂದ ದೂರ ಸರಿಯುವಂತೆ ಸೂಚಿಸಿದ್ದರು, ಅದರಂತೆಯೇ ನಾನು ನನ್ನ ಸ್ಥಾನವನ್ನು ಅವರಿಗೆ ಬಿಟ್ಟುಕೊಟ್ಟಿದ್ದೆ. ಸ್ವತಃ ಗೋವಿಂದರಾಜು ಅವರು ಅಂದಿನಿಂದ ಇಂದಿನವರೆವಿಗೂ ನನ್ನನ್ನು ಕಡೆಗಣಿಸುತ್ತಲೇ ಬರುತ್ತಿದ್ದರೂ, ನಾನು ಎಲ್ಲವನ್ನೂ ಸಹಿಸಿಕೊಂಡು ನಮ್ಮದೇ ಪಕ್ಷದ ಅಭ್ಯರ್ಥಿಯೆಂದು ನೋವನ್ನು ಸಹಿಸಿಕೊಂಡು ನಾನು…
ತುಮಕೂರು ಜಿಲ್ಲೆಯಲ್ಲಿ ಹನಿಟ್ರಾಪ್ ಪ್ರರಂಭವಾಗಿದ್ದು ಜೆಡಿಎಸ್ ಅಭ್ಯರ್ಥಿ ಸಿಲುಕಿಕೊಂಡಿರುವುದು ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗೆ ಕಾಡ್ತಿದೆ ಈ ರಾಸಲೀಲೆ ವಿಡಿಯೋ ಭಯ..? ಮಂಗಳೂರು ಮೂಲದ ಯುವತಿಯಿಂದ ಜೆಡಿಎಸ್ ಅಭ್ಯರ್ಥಿ ಹನಿಟ್ರಾಪ್ ಒಳಗಾಗಿದ್ದಾರೆ. ಚುನಾವಣಾ ಸಂಧರ್ಭದಲ್ಲಿ ಈ ವಿಡೀಯೋ ರಿಲೀಸ್ ಆದರೆ ಮುಂದೆ ಏನುಗತಿ ಎಂಬ ಭಯ ಆತನಲ್ಲಿ ಕಾಡುತ್ತಿದೆ. ಈ ಖಾಸಗಿ ವಿಡಿಯೋ ಮರೆಮಾಚಲು ಜೆಡಿಎಸ್ ಅಭ್ಯರ್ಥಿಗೆ ಬರೋಬ್ಬರಿ 6 ಕೋಟಿ ಗೆ ಡಿಮ್ಯಾಂಡ್..? ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಆಭ್ಯರ್ಥಿಯೂ ಭಯದಲ್ಲೇ ಇದ್ದಾರೆ ಎಂಬ ಮಾಹಿತಿ ಇದೆ. ಎರಡು ಬಾರಿ ಸ್ಪರ್ಧೆ ಮಾಡಿ, ಈ ಬಾರಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗೆ ಶುರುವಾಯ್ತು ನಿಜವಾಗಿಯೂ ಆತಂಕ ಪ್ರರಂಭವಾಗಿದೆ. ಈ ವೀಡಿಯೋ ಏನಾದರು ಬಿಡುಗಡೆ ಯಾದರೆ ಈ ಭಾರಿಯೂ ಸೋಲು ಖಚಿತ ಎಂಬ ಭಯ ಅಭ್ಯರ್ಥಿಯನ್ನು ಕಾಡುತ್ತಿದೆ. ಈ ವಿಡಿಯೋ ಜಿಲ್ಲೆಯ ಕಾಂಗ್ರೆಸ್ ಮುಖಂಡನೊಬ್ಬನನ್ನ ಬಳಿ ಇದೆ ಎಂಬ ಮಾಹಿತಿಯಿದ್ದು, ಆತನನ್ನು ಮುಂದಿಟ್ಟು ಕೊಂಡು ಇನ್ನು ಹಲವರು ಜೆಡಿಎಸ್ ಅಭ್ಯರ್ಥಿಗೆ…











