ತುಮಕೂರು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅನ್ನ, ಅಕ್ಷರ, ಆಶ್ರಯ, ಆರೋಗ್ಯ ಮತ್ತು ಅಭಿವೃದ್ದಿ ಎಂಬ ಐದು ಅಂಶಗಳನ್ನು ಮುಂದಿಟ್ಟುಕೊಂಡು,ಕಾಂಗ್ರೆಸೇ ಪರಿಹಾರ ಎಂಬ ಘೋಷ ವಾಕ್ಯದೊಂದಿಗೆ ಚುನಾವಣೆ ಎದುರಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ತಿಳಿಸಿದ್ದಾರೆ. ಇಂದು ಖಾಸಗಿ ಹೊಟೇಲ್‍ನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳು, ತಾಲೂಕು ಸಂಯೋಜಕರು ಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಮೇ.10 ರಂದು ನಡೆಯುವ ಚುನಾವಣೆಯಲ್ಲಿ ಮೇಲಿನ ಪಂಚಮಂತ್ರಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಚುನಾವಣೆಯಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಿದ್ದೇವೆ ಎಂದರು. ರಾಜ್ಯದಲ್ಲಿ ಅಡಳಿತದಲ್ಲಿರುವ ಬಿಜೆಪಿಯ ಜನವಿರೋಧಿ ನೀತಿಗಳಿಂದಾಗಿ ದಿನ ನಿತ್ಯದ ವಸ್ತುಗಳ ಬೆಲೆಗಳು ಹೆಚ್ಚಾಗಿ ಜನಸಾಮಾನ್ಯರು ದಿನದೂಡುವುದೇ ಕಷ್ಟವಾಗಿದೆ.ಹಾಗಾಗಿ ಕಾಂಗ್ರೆಸ್ ಪ್ರತಿ ಮನೆಯ ಗೃಹಿಣಿಗೆ ಮಾಸಿಕ 2000 ರೂ ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತದ ಗೃಹಜೋತಿ, ಪ್ರತಿ ಪಡಿತರದಾರರಿನಿಗೆ ತಲಾ 10 ಕೆ.ಜಿ.ಅನ್ನಭಾಗ್ಯ, ನಿರುದ್ಯೋಗಿ ಯುವಕರಿಗಾಗಿ…
Author: News Desk Benkiyabale
ತುಮಕೂರು ಹಸಿರು ಕ್ರಾಂತಿ ಹರಿಕಾರ, ಶ್ರೇಷ್ಟ ರಾಜಕಾರಣಿ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಧೀಮಂತ ವ್ಯಕ್ತಿಯಾಗಿದ್ದರು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಭಿಪ್ರಾಯಪಟ್ಟರು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಂಕೇತಿಕವಾಗಿ ಏರ್ಪಡಿಸಿದ್ದ ಡಾ: ಬಾಬು ಜಗಜೀವನರಾಮ್ ಅವರ 116ನೇ ಜನ್ಮ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಅವರು, ದಲಿತರು, ನಿರ್ಗತಿಕರು, ಕಾರ್ಮಿಕರ ಅಭ್ಯುದಯಕ್ಕಾಗಿ ತಮ್ಮ ಬದುಕಿನುದ್ದಕ್ಕೂ ಶ್ರಮಿಸಿದರು. ಸಮಾಜದಲ್ಲಿ ಶೋಷಿತರಿಗಾಗಿ ಅವರು ಜಾರಿ ಮಾಡಿದ ಕಾನೂನು, ನೀತಿ, ನಿಯಮಗಳನ್ನು ಯಾರೂ ಮರೆಯುವಂತಿಲ್ಲ. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದಲ್ಲಿಯೂ ಕೇಂದ್ರದ ಹಲವಾರು ಖಾತೆಗಳಿಗೆ ಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಬಾಬು ಜಗಜೀವನರಾಮ್ ಅವರಿಗೆ ಸಲ್ಲುತ್ತದೆ. ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ, ಕೈಗಾರಿಕಾ ಕಾಯ್ದೆ ಸೇರಿದಂತೆ ಹಲವಾರು ಕಾಯ್ದೆಗಳು ಜಾರಿಯಾಗಲು ಶ್ರಮಿಸಿದ್ದರು ಎಂದು ತಿಳಿಸಿದರಲ್ಲದೆ, ಇವರ ತತ್ವಾದರ್ಶಗಳ ಬಗ್ಗೆ ಇಂದಿನ ಮಕ್ಕಳಿಗೆ ತಿಳಿಸುವ ಅಗತ್ಯವಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ…
ಮತದಾನ ಕೇವಲ ಪ್ರತಿಯೋರ್ವ ನಾಗರೀಕನ ಹಕ್ಕು ಅಷ್ಟೇ ಅಲ್ಲ, ಪ್ರತಿಯೊಬ್ಬ ವಯಸ್ಕ ಪ್ರಜೆಯ ಕರ್ತವ್ಯವೂ ಕೂಡ. ಮತದಾನ ಭಾರತೀಯರಿಗೆ ನೀಡಿರುವ ಹಕ್ಕಾಗಿದ್ದು, ಭವ್ಯ ಭಾರತ ಹಾಗೂ ಸದೃಢ ಸಮಾಜ ಕಟ್ಟಲು ಪೂರಕ ವ್ಯವಸ್ಥೆಯಾಗಿದೆ. ನಮ್ಮ ದೇಶದಲ್ಲಿ ಸಾಮಾಜಿಕ ಅಂತಸ್ತು, ಜಾತಿಬೇಧ, ಲಿಂಗ ತಾರತಮ್ಯಗಳಾವುದನ್ನು ಲೆಕ್ಕಿಸದೇ ಎಲ್ಲರಿಗೂ ಸರ್ವಸಮಾನವಾಗಿ ನೀಡಿರುವ ಹಕ್ಕಾಗಿರುವುದೇ ಈ ಮತದಾನ. ಮತದಾನವು ಜನತೆಯು ಅಭ್ಯರ್ಥಿಗಳ ಆಯ್ಕೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸೂಚಿಸಲು ಅನುವು ಮಾಡಿಕೊಂಡಿರುವ ಒಂದು ಸುಲಭ ಪ್ರಕ್ರಿಯೆ ಎನ್ನಬಹುದು. ಈ ಹಿಂದಿನ ಕಾಲದಲ್ಲೆಲ್ಲಾ ರಾಜಮಹಾರಾಜರು ತಮ್ಮ ತಮ್ಮ ಪ್ರಾಂತ್ಯಗಳಲ್ಲಿ ಆಳುತ್ತಿದ್ದರು. ಆಗೆಲ್ಲಾ ಜನರು ರಾಜರನ್ನು ಆರಿಸುತ್ತಿರಲಿಲ್ಲ. ರಾಜರೇ ಅವರ ತೋಳ್ಬಲದಿಂದ, ವೀರತ್ವದಿಂದ, ಶೌರತ್ವದಿಂದ ಹೋರಾಡಿ ಗೆದ್ದು ಆಳುತ್ತಿದ್ದರು. ಕೆಲ ರಾಜರನ್ನು ನೋಡಿದ ಕೂಡಲೆ ಅವನು ನಮ್ಮನ್ನು ಆಳಲು ಸೂಕ್ತ ಎಂದು ಎನಿಸಿಬಿಡುತ್ತಿತ್ತಂತೆ. ಆದರೆ ಪ್ರಸ್ತುತ ದಿನಮಾನದಲ್ಲಿ ಒಬ್ಬ ವ್ಯಕ್ತಿಯ ಬಾಹ್ಯರೂಪದಿಂದ, ಮೈಕಟ್ಟಿನಿಂದ ಆತ ನಮ್ಮನ್ನು ಆಳಲು ಮತ್ತು ನಮಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಮರ್ಥನೋ? ಇಲ್ಲವೆ…
ಚಿಕ್ಕನಾಯಕನಹಳ್ಳಿ ಜೆ.ಸಿ.ಮಾದುಸ್ವಾಮಿ ರವರು ತಾಲ್ಲೂಕಿನ ವೀರಶೈವ ಲಿಂಗಾಯಿತರನ್ನು ಗುತ್ತಿಗೆ ತೆಗೆದುಕೊಂಡಿಲ್ಲ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಹಾಗೂ ತಾ ಪಂ ಮಾಜಿ ಅಧ್ಯಕ್ಷ ಶಶಿಧರ್ ಹೇಳಿದರು. ಅವರು ತಾಲ್ಲೂಕಿನ ಶಾವಿಗೆಹಳ್ಳಿ ಸಮುದಾಯ ಭವನದಲ್ಲಿ ವೀರಶೈವ ಲಿಂಗಾಯಿತರ ಜೆಡಿಎಸ್ ಸಮಾವೇಶದಲ್ಲಿ ಪರಮಪೂಜ್ಯ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ, ಅವರು ಮಾತನಾಡಿ, ನಾಲ್ಕು ಬಾರಿ ಗೆದ್ದು ಬಂದು ಸಚಿವರಾದರೂ ಇದುವರೆಗೆ ವೀರಶೈವರಿಗೆ ಏನೂ ಮಾಡಿಲ್ಲ, 20 ವರ್ಷಗಳಿಂದ ಅವರ ಹಿಂಬಾಲಕರಾಗಿ ಲಕ್ಷಾಂತರ ರುಪಾಯಿ ಕಳೆದುಕೊಂಡಿದ್ದೇನೆ, ತಾಲ್ಲೂಕಿನಲ್ಲಿ 40 ರಿಂದ 45 ಸಾವಿರ ವೀರಶೈವ ಲಿಂಗಾಯಿತರಿದ್ದರೂ ಇದುವರೆಗೂ ಒಂದು ಸಮುದಾಯವನ್ನಾಗಲಿ, ವೀರಶೈವ ಬ್ಯಾಂಕ್ ಆಗಲಿ ಮಾಡಿಲ್ಲ, ಕೇವಲ ಅಧಿಕಾರಕ್ಕೋಸ್ಕರ ಲಿಂಗಾಯಿತರನ್ನು ಉಪಯೋಗಿಸಿಕೊಂಡು ಶಾಸಕ, ಸಚಿವರಾಗಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ನೀಡುವ ಅನುದಾನದಿಂದ ಅಭಿವೃದ್ದಿ ಮಾಡಿದ್ದಾರೆ ಹೊರೆತು ಒಂದು ರೂಪಾಯಿ ಸಮಾಜಕ್ಕೆ ನೀಡಿಲ್ಲ, ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ತಮ್ಮ ಅಧಿಕಾರಾವಧಿಯಲ್ಲಿ ಅನೇಕ ದೇವಾಲಯಗಳಿಗೆ ತಮ್ಮ ಸ್ವಂತ ಹಣವನ್ನು ನೀಡಿದ್ದಾರೆ, ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡುವಾಗ…
ಕೊರಟಗೆರೆ ದೊಡ್ಡ ಕಾಯಪ್ಪ ದೇವಾಲಯದ ಅರ್ಚಕರ ನೇಮಕಾತಿಯ ವಿಚಾರದಲ್ಲಿ ಮುಜರಾಯಿ ಇಲಾಖೆ, ಸೇವಾಸಮಿತಿ, ಸ್ಥಳೀಯರು ಮತ್ತು ಪ್ರಸ್ತುತ ಅರ್ಚಕರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿ ಗರ್ಭಗುಡಿ ಮತ್ತು ದೇವಾಲಯಕ್ಕೆ ಜೀಗ ಜಡಿಯಲಾಗಿದೆ. ಪವಿತ್ರ ಪುಣ್ಯಕ್ಷೇತ್ರಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಭಕ್ತಾಧಿಗಳಿಗೆ ದೊಡ್ಡಕಾಯಪ್ಪನ ದರ್ಶನ ಸೀಗದೇ ನಿರಾಸೆಯಿಂದ ಹಿಂದಿರುಗುತ್ತೀರುವ ಘಟನೆ ಸೋಮವಾರ ನಡೆದಿದೆ. ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆ ಗ್ರಾಮದ ಸುಪ್ರಸಿದ್ದ ಪುಣ್ಯಕ್ಷೇತ್ರ ಶ್ರೀದೊಡ್ಡಕಾಯಪ್ಪ ಸ್ವಾಮಿ ದೇವಾಲಯದಲ್ಲಿ ಇತಿಹಾಸದ ಮೊದಲ ಸಲ ದುರ್ಘಟನೆ ನಡೆದಿದೆ. ಏ.2ರ ಭಾನುವಾರ ಮಧ್ಯಾಹ್ನ ದೊಡ್ಡಕಾಯಪ್ಪ ಸ್ವಾಮಿಯ ಪೂಜೆ ಕೈಂಕರ್ಯ ನಡೆಯುತ್ತೀರುವಾಗಲೇ ಸ್ಥಳೀಯರು, ಸೇವಾಸಮಿತಿ ಮತ್ತು ಅರ್ಚಕರ ನಡುವೆ ಜಗಳವಾಗಿ ಅರ್ಚಕ ಶ್ರೀನಿವಾಸಮೂರ್ತಿ ದೇವಾಲಯಕ್ಕೆ ಬೀಗ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಕುರಂಕೋಟೆಯ ದೊಡ್ಡಕಾಯಪ್ಪ ಸ್ವಾಮಿ ದೇವಾಲಯಕ್ಕೆ ಕರ್ನಾಟಕದ ವಿವಿಧ ಕಡೆಗಳಿಂದ ಪ್ರತಿನಿತ್ಯ ಸಾವಿರಾರು ಜನ ಭಕ್ತಾಧಿಗಳು ದರ್ಶನಕ್ಕೆ ಆಗಮಿಸುವ ಮತ್ತು ದೊಡ್ಡಕಾಯಪ್ಪ ಸ್ವಾಮಿಗೆ ಹರಕೆವೊತ್ತ 50ಕ್ಕೂ ಅಧಿಕ ಭಕ್ತರು ದೇವಾಲಯದಲ್ಲೇ ಉಳಿದುಕೊಂಡು ಪ್ರತಿನಿತ್ಯ ಮುಂಜಾನೇ ಸ್ವಾಮಿಗೆ…
ತುಮಕೂರು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳು ಸಭೆ/ಸಮಾರಂಭಗಳನ್ನು ಏರ್ಪಡಿಸುವ ಮುನ್ನ ಕಡ್ಡಾಯವಾಗಿ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಸಭೆ/ಸಮಾರಂಭಗಳಲ್ಲಿ ಕುಡಿಯುವ ನೀರು/ಮಜ್ಜಿಗೆ ನೀಡಲು ಮಾತ್ರ ಅವಕಾಶವಿದೆ. ಆಹಾರ ನೀಡಿದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ಸಂಜೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಯು ಅನುಮತಿ ಪಡೆದು ಬಹಿರಂಗ ಸಭೆ, ಸಮಾರಂಭ ನಡೆಸಲು ಅವಕಾಶವಿದೆ. ನಾಮಪತ್ರಕ್ಕಿಂತ ಪೂರ್ವದಲ್ಲಿ ಕೇವಲ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳು ಚುನಾವಣಾಧಿಕಾರಿಗಳ ಅನುಮತಿ ಪಡೆದು ಪಕ್ಷದ ಪರವಾಗಿ ಪ್ರಚಾರ ಮಾಡಬಹುದಾಗಿದೆ. ಆದರೆ ಒಬ್ಬ ಅಭ್ಯರ್ಥಿ ಪರವಾಗಿ ಕಾರ್ಯಕ್ರಮ ಮಾಡಿದರೆ ಅದರ ಸಂಪೂರ್ಣ ವೆಚ್ಚವನ್ನು ಅಭ್ಯರ್ಥಿಯ ವೆಚ್ಚದ ಖಾತೆಗೆ ದಾಖಲು ಮಾಡಲಾಗುವುದು. ಸಭೆ/ಸಮಾರಂಭ/ರ್ಯಾಲಿಗಳನ್ನು…
ತುಮಕೂರು ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಭಗವಾನ್ ಮಹಾವೀರರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಿಗಂಬರ ಜೈನ ಮತ್ತು ಶ್ವೇತಾಂಬರ ಜೈನ ಸಮುದಾಯದ ಬಾಂಧವರು, ಜಿಲ್ಲಾಡಳಿತ ಅಧಿಕಾರಿಗಳು ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಪದ್ಮಪ್ರಸಾದ್ ಮಾತನಾಡಿ, ಮಹಾವೀರರು ಜೈನ ಧರ್ಮದ 24ನೇ ತೀರ್ಥಂಕರರು. ಅವರು ಬೋಧಿಸಿದಂತಹ ಅಹಿಂಸಾ ಸಿದ್ದಾಂತ ಇಡೀ ಜಗತ್ತಿನಲ್ಲಿ ಹೊಸ ಅಲೆಯನ್ನು ಸೃಷ್ಠಿಸಿತು. ಇದರೊಂದಿಗೆ ಮಹಾವೀರರು ದೇಶಿ ಭಾಷೆಗಳಿಗೆ ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿದ್ದರು ಎಂದರು. ಮಹಾವೀರರು ದಿನವಾಣಿ ಸರ್ವಭಾಷಾಮಯಿ ಎಂದು ಸದಾ ಹೇಳುತ್ತಿದ್ದರು. ಯಾರು ಏನೇ ವಿಚಾರ ಹೇಳಿದರೂ ಅದರಲ್ಲಿನ ಸತ್ಯಾಂಶವನ್ನು ಗ್ರಹಿಸಿಕೊಳ್ಳಬೇಕು. ನೀನು ಬದುಕು, ಬೇರೆಯವರನ್ನು ಬದುಕಲಿಕ್ಕೆ ಬಿಡು ಎನ್ನುವುದು ಮಹಾವೀರರ ಸಿದ್ದಾಂತವಾಗಿದೆ ಎಂದು ಅವರು ಹೇಳಿದರು. ಕೆಟ್ಟದಾರಿಯಲ್ಲಿ ಹೋಗುತ್ತಿರುವವರನ್ನು ಯಾವತ್ತೂ ಸಮರ್ಥಿಸಿಕೊಳ್ಳುವ ಕೆಲಸ ಮಾಡಬಾರದು. ಈ ಕೆಲಸವೂ ತಪ್ಪು…
ತುಮಕೂರು ಜಿಲ್ಲೆಯಲ್ಲಿ ಸುಮಾರು 29700 ವಿಶೇಷಚೇತನ ಮತದಾರರಿದ್ದು, ಇವರೆಲ್ಲರೂ ಮೇ 10ರ ‘ಮತದಾನಹಬ್ಬ’ದ ದಿನ ಮತದಾನ ಮಾಡಲು ಅನುಕೂಲವಾಗುವಂತೆ ಅಂದು ಪ್ರತಿ ಗ್ರಾಮಪಂಚಾಯಿತಿಗೆ ಒಂದರಂತೆ ವಾಹನ ಸೌಲಭ್ಯ ಕಲ್ಪಿಸಲಿದ್ದು, ಈ ಸೌಲಭ್ಯವನ್ನು ಬಳಸಿಕೊಂಡು ವಿಶೇಷಚೇತನರು ತಮ್ಮ ವ್ಯಾಪ್ತಿಯ ಮತಗಟ್ಟೆಗೆ ತೆರಳಿ ತಪ್ಪದೆ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮನವಿ ಮಾಡಿದರು. ವಿಕಲಚೇತನ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವುದಕ್ಕಾಗಿ ಮತಗಟ್ಟೆಗಳಿಗೆ ತಲುಪಲು ಪ್ರತಿ ಗ್ರಾಮ ಪಂಚಾಯಿತಿ 6-8 ಕಿಲೋ ಮೀಟರ್ ವ್ಯಾಪ್ತಿಗೆ ಒಂದು ಆಟೋವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿ ವತಿಯಿಂದ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕರ್ನಾಟಕ ವಿಧಾನ ಸಭಾ ಚುನಾವಣೆ 2023ರ’ ವಿಕಲಚೇತನರ ಹಾಗೂ ತೃತೀಯ ಲಿಂಗಿ ಮತದಾರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲೆ ಮತ್ತು ಸಂಗೀತಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅತ್ಯುತ್ತಮ ಕಲಾವಿದರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಅವರು ತಮ್ಮ ಸಂಗೀತ…
ತುಮಕೂರು ಖಾಸಗಿ ವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಮಧುಗಿರಿ ಕ್ಷೇತ್ರದ ಶಾಸಕರಾದ ಎಂ.ವಿ.ವೀರಭದ್ರಯ್ಯ ಅವರು ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಶಾಸಕರ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಿಸುವಂತೆ ಮಧುಗಿರಿ ಕ್ಷೇತ್ರದ ಮತದಾರರಾದ ವೀರಣ್ಣ ಬಿನ್ ಈರಮರಿಯಣ್ಣ ಸಿದ್ದಾಪುರ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಸೋಮವಾರ ಲೋಕಾಯುಕ್ತ ಕಚೇರಿಗೆ ಮಧುಗಿರಿ ತಾಲೂಕಿನ ಹಲವು ಮತದಾರರೊಂದಿಗೆ ಲೋಕಾಯುಕ್ತ ಕಚೇರಿಗೆ ತೆರಳಿ ಮನವಿ ಸ್ವಯಂ ಪ್ರೇರಿತ ದೂರು ದಾಖಲಿಸುವಂತೆ ಮನವಿ ಸಲ್ಲಿಸಿದ ಅವರು,ಕಾಮಗಾರಿಯೊಂದನ್ನು ಕ್ಷೇತ್ರದಲ್ಲಿ ನಡೆಸಿಕೊಂಡು ಹೋಗಲು ಅನುಕೂಲ ಮಾಡಿಕೊಡಲು ಐದು ಲಕ್ಷ ರೂಗಳ ಕಮಿಷನ್ ಬೇಡಿಕೆ ಇಟ್ಟಿದ್ದು,ಇದರಲ್ಲಿ ಒಂದು ಲಕ್ಷ ರೂಗಳನ್ನು ಸಂಬಂಧಿಸಿದ ವ್ಯಕ್ತಿಯಿಂದ ಪಡೆಯವ ಕುಟುಕು ಕಾರ್ಯಾಚರಣೆಯಲ್ಲಿ ಕ್ಷೇತ್ರದ ಶಾಸಕರು ಸಿಕ್ಕಿಬಿದ್ದಿರುವುದು ಸಾಮಾಜಿಕ ಜಾಲತಾಣ ಹಾಗೂ ಖಾಸಗಿ ವಾಹಿನಿಯಲ್ಲಿ ಹರಿದಾಡುತ್ತಿರುವ ದೃಶ್ಯಗಳೇ ಸಾಕ್ಷಿಯಾಗಿವೆ.ಹಾಗಾಗಿ ಸದರಿ ಶಾಸಕರ ವಿರುದ್ದ ಸ್ವಯಂ ಪ್ರೇರಿತ ದೂರನ್ನು ಲೋಕಾಯುಕ್ತದವರು ದಾಖಲಿಸಿ, ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮಧುಗಿರಿಯ ಇತಿಹಾಸದಲ್ಲಿಯೇ ಇಂತಹ…
ಗುಬ್ಬಿ ತಾಲ್ಲೂಕಿನ ಬೇಣಚಗೆರೆ, ಹಾರನ ಹಳ್ಳಿ,ಸೇರಿದಂತೆ ಇನ್ನಿತರೆ ಭಾಗಗಳಿಗೆ ಸರಿಯಾದ ರೀತಿಯಲ್ಲಿ ರೈತರಿಗೆ ಹಾಗೂ ಗ್ರಾಮಗಳಿಗೆ ನಿರಂತರ ವಿದ್ಯುತ್ ನೀಡುತ್ತಿಲ್ಲ ಎಂದು ಆಗ್ರಹಿಸಿ ನೂರಾರು ರೈತರಿಂದ ನಿಟ್ಟೂರು ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಇದೆ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಪಂಚಾಕ್ಷರಿ, ಸುಮಾರು ಎರಡು ತಿಂಗಳಿನಿಂದಲೂ ಈ ಸಮಸ್ಯೆ ನಿರಂತರವಾಗಿದ್ದು ಇಲ್ಲಿನ ಅಧಿಕಾರಿಗಳು ಮಾತ್ರ ರೈತರಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪ ಮಾಡಿದ ಅವರು ಮನೆಗಳಿಗೆ ನೀಡುವ ನಿರಂತರ ವಿದ್ಯುತ್ತನ್ನುಸಹ ಸರಿಯಾಗಿ ನೀಡುತ್ತಿಲ್ಲ ಇದರಿಂದ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗಿದೆ ಇಲ್ಲಿರುವಂತಹ ಏ ಇಇ ಅನಿಲ್ ಕುಮಾರ್ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದೆ ಇರುವು ದರಿಂದ ನಿರಂತರವಾಗಿ ಇಲ್ಲಿ ಪ್ರತಿಭಟನೆಗಳು ನಡೆಯುತ್ತವೆ ಕೂಡಲೇ ಇವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಆ ಗ್ರಹ ಮಾಡಿದರು. ಗ್ರಾಮಪಂಚಾಯತಿ ಅಧ್ಯಕ್ಷ ನರಸೇಗೌಡ ಮಾತನಾಡಿ ಇಲ್ಲಿರುವ ಅಧಿಕಾರಿ ಯಾವುದೇ ರೀತಿಯಲ್ಲೂ ಜನರಿಗೆ ಸ್ಪಂದನೆ ಮಾಡುವುದಿಲ್ಲ ರೈತರ ಸಮಸ್ಯೆ ಬಗ್ಗೆ ಆತನಿಗೆ ತಿಳಿದೇ ಇಲ್ಲ ಇಂತಹ ಅಧಿಕಾ…










