ತುಮಕೂರು ಅವಜ್ಞಾನಿಕ ಆದೇಶವನ್ನು ಹಿಂಪಡೆಯುವಂತೆ ಮೀಸಲಾತಿ ಸಂರಕ್ಷಣ ಒಕ್ಕೂಟದಿಂದ ಒತ್ತಾಯ ಬುಧವಾರ ಪಾವಗಡ ತಾಲ್ಲೂಕಿನ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿಯು ಅವೈಜ್ಞಾನಿಕ, ನ್ಯಾಯ ಮೂರ್ತಿ ಸದಾಶಿವ ಆಯೋಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಿಂದ ಪ್ರಾರಂಭವಾದ ಪ್ರತಿಭಟನೆ ಸರ್ಕಲ್, ಟೋಲ್ ಗೇಟಲ್ಲಿ ಅಂಬೇಡ್ಕರ್ ಪುತಳಿಗೆ ಮಾಲಾರ್ಪಣೆ ಮಾಡಿ ನಂತರ ತಾಲ್ಲೂಕಿನ ದಂಡಾಧಿಕಾರಿಗಳಾದ ಕೆ ಎನ್ ಸುಜಾತ ರವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್ಸಾರ್ ಪಾಳ್ಯದನ್ಮಂತ್ರಾಯ ರವರು ಎಸಿ ರೂಂ ಅಲ್ಲಿ ಕುಳಿತಿ ಮಾಡಿರುವ ಸದಾಶಿವ ಆಯೋಗ ಅವೈಜ್ಞಾನಿಕ ಈ ಕೂಡಲೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಹಿಂಪಡೆಯಬೇಕು. ಇಷ್ಟು ದಿನ ಇದ್ದ ವೀಸಲಾತಿಯನ್ನೆ ಜಾರಿ ಮಾಡಬೇಕು, ಒಂದು ಪಕ್ಷ ಮಾಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದರು. ರಮೇಶ್ ರಾಥೋಡ್ ಮಾತನಾಡಿ ಈಗ ಮಾಡಿರುವ ವರ್ಗೀಕರಣ ಕಾನೂನು ಪ್ರಕಾರ ಎಲ್ಲಿಯೂ ಇಲ್ಲ, ಡಾ…
Author: News Desk Benkiyabale
ತುಮಕೂರು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಶೇ.100ರಷ್ಟು ಮತದಾನವಾಗಬೇಕು. ಈ ಹಿನ್ನೆಲೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಾಲಿಕೆ ಸಭಾಂಗಣದಲ್ಲಿ ಬುಧವಾರ ಜರುಗಿದ ಸ್ವೀಪ್ ಸಮಿತಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯ ವಾರ್ಡುಗಳಲ್ಲಿ ತಪ್ಪದೆ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಬೇಕು. ಹಿಂದಿನ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿರುವ ವಾರ್ಡುಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಅಧಿಕಾರಿಗಳು ಹಿಂದಿನ ಚುನಾವಣೆಯಲ್ಲಿ ಮತದಾನ ಕಡಿಮೆಯಾಗಲು ಕಾರಣವನ್ನು ಕಂಡುಕೊಳ್ಳಬೇಕು. ಮತದಾನ ಮಾಡುವ ಮತಗಟ್ಟೆಯ ಮಾಹಿತಿ ಕೊರತೆಯಿಂದ ಅಥವಾ ಮತಗಟ್ಟೆ ದೂರವಿದೆ ಎಂದು ಕೆಲವು ಮತದಾರರು ಮತದಾನದಿಂದ ತಪ್ಪಿ ಹೋಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಮನೆಗಳಿಗೆ ಭೇಟಿ ನೀಡಿ ಮತದಾರರ ಚೀಟಿಯನ್ನು ವಿತರಿಸಿ ಮತಗಟ್ಟೆಗಳ ಮಾಹಿತಿಯನ್ನು ಮತದಾರರಿಗೆ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬೆಂಗಳೂರು ಮತ್ತಿತರ…
ತುಮಕೂರು ಇತ್ತೀಚಿಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವೆಟರನ್ ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ 42ನೇ ರಾಷ್ಟ್ರಮಟ್ಟದ ವೆಟರನ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ತುಮಕೂರಿನ ಕ್ರೀಡಾಪಟುಗಳಾದ ತುಂಬಾಡಿ ಗ್ರಾಮದ ಚಿಕ್ಕತಿಮ್ಮಯ್ಯ ಭರ್ಜಿ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ, ಗುಂಡು ಎಸೆತ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ, ಪೆÇೀಲ್ ವಾಲ್ಟ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಹಾಗೂ 4100 ಮೀಟರ್ ರಿಲೆ ಓಟದಲ್ಲಿ ಕಂಚಿನ ಪದಕ ಪಡೆದರು. ಜಗದೀಶ್ 4400 ಮೀಟರ್ ರಿಲೇ ಓಟದಲ್ಲಿ ಚಿನ್ನದ ಪದಕ, 400 ಮೀ ಓಟದಲ್ಲಿ ಕಂಚಿನ ಪದಕ 800 ಮೀ ಓಟದಲ್ಲಿ ಕಂಚಿನ ಪದಕ 5 ಕಿ.ಮೀ ವೇಗದ ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕ, 4100 ಮೀಟರ್ ರಿಲೇ ಓಟದಲ್ಲಿ ಕಂಚಿನ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ರವಿ ಸಿ.ಎಂ 5 ಕಿ.ಮೀ ಓಟದಲ್ಲಿ ಕಂಚಿನ ಪದಕ ಪಡೆದ. ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಮುಂಜಾನೆ ಗೆಳೆಯರ ಬಳಗದ ವತಿಯಿಂದ ಅಂತರಾಷ್ಟ್ರೀಯ ಕ್ರೀಡಾಪಟು ಟಿ.ಕೆ ಆನಂದ್ ನೇತೃತ್ವದಲ್ಲಿ ಮಹಾತ್ಮ…
ತುಮಕೂರು ದೇವರಾಯನ ದುರ್ಗ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿ ಊರ್ಡಿಗೆರೆ ಹೋಬಳಿ ಸರ್ವತ್ತೋಮುಖ ಅಭಿವೃದ್ಧಿ ನನ್ನ ಮುಂದಿನ ಗುರಿಯಾಗಿದೆ. ಊರ್ಡಿಗೆರೆ ಪದವಿ ಕಾಲೇಜು ಹಾಗೂ ದೇವರಾಯನದುರ್ಗಕ್ಕೆ ರೋಪ್ ವೇ ಅಳವಡಿಸಿ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿ ಪಡಿಸುವ ಭರವಸೆಯನ್ನು ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ಭರವಸೆ ನೀಡಿದರು. ಊರ್ಡಿಗೆರೆ, ದೇವರಾಯನದುರ್ಗಕ್ಕೆ ಭೇಟಿ ನೀಡಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು. ಮತದಾರರೊಂದಿಗೆ ಮಾತನಾಡಿದ ಅವರು, ಊರ್ಡಿಗೆರೆಗೆ ಪದವಿ ಕಾಲೇಜಿನ ಅಗತ್ಯವಿದೆ. ಇಲ್ಲಿಗೆ ವಸಂತನರಾಸಪುರ, ದಾಬಸಪೇಟೆ ಕೈಗಾರಿಕಾ ಪ್ರದೇಶ ಎರಡೂ ಹತ್ತಿರದಲ್ಲಿವೆ. ಇವುಗಳ ಪ್ರಯೋಜನ ಪಡೆಯಬೇಕಾದರೆ ಇಲ್ಲಿನ ಮಕ್ಕಳಿಗೆ ಉನ್ನತ ಶಿಕ್ಷಣದ ಅಗತ್ಯವಿದೆ. ಹೆಣ್ಣು ಮಕ್ಕಳಿಗೆ ಮನೆ ಬಾಗಿಲಲ್ಲೇ ಶಿಕ್ಷಣ ಸಿಗುವಂತಾಗಬೇಕಾಗಿದೆ ಎಂದರು. ನಾನು ಶಾಸಕನಾಗಿ ಆಯ್ಕೆಯಾದರೆ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸುತ್ತೇನೆ. ಹಳ್ಳಿ ಮಕ್ಕಳಿಗೆ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ಒದಗಿಸುತ್ತೇನೆ ಎಂದು ಪೆÇೀಷಕರಿಗೆ ಭರವಸೆ ನೀಡಿದರು. ದೇವರಾಯನದುರ್ಗ ಇತಿಹಾಸ ಪ್ರಸಿದ್ಧ ಸ್ಥಳವಾಗಿದೆ. ಬೆಟ್ಟಕ್ಕೆ ರೋಪ್ ವೇ ಅಳವಡಿಸಿ ಪ್ರವಾಸೋದ್ಯಮ…
ತುಮಕೂರು ಇತಿಹಾಸ ಪ್ರಸಿದ್ದ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ನಗರದ ಹೊರವಲಯದಲ್ಲಿರುವ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ರಥೋತ್ಸದಲ್ಲಿ ಸುಡುವ ಬಿಸಿಲನ್ನು ಲೆಕ್ಕಿಸದೇ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೆರಿದ್ದು, ಮಧ್ಯಾಹ್ನ 1.15ಕ್ಕೆ ಗರುಡ ರಥದ ಸುತ್ತ ಪ್ರದಕ್ಷಿಣೆ ಹಾಕಿದ ಬಳಿಕ ರಥೋತ್ಸವಕ್ಕೆ ಚಾಲನೆ ದೊರೆಯಿತು. ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತ ಸಮೂಹ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಲು ರಥಕ್ಕೆ ಹೂವು, ದವನ, ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಹರಕೆ ಸಲ್ಲಿಸಿದರು. ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ರಥೋತ್ಸವದ ಅಂಗವಾಗಿ ನಗರದಿಂದ ಶೆಟ್ಟಿಹಳ್ಳಿಗೆ ಹೋಗುವ ದಾರಿಯುದ್ಧಕ್ಕೂ ಹಾಗೂ ರಿಂಗ್ ರಸ್ತೆಯುದ್ದಕ್ಕೂ ಭಕ್ತಾದಿಗಳು ಪೆಂಡಾಲ್‍ಗಳನ್ನು ಹಾಕಿಕೊಂಡು ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದ್ದು ವಿಶೇಷವಾಗಿತ್ತು. ಹಾಗೆಯೇ ಹೆಚ್.ಎಂ.ಎಸ್. ಕಾಲೇಜು ಮುಂಭಾಗ ಮುಸ್ಲಿಂ ಬಾಂಧವರು ಸಹ ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ, ನೀರು, ಕೋಸಂಬಿ ಹಂಚುತ್ತಿದ್ದ ದೃಶ್ಯ…
ತುಮಕೂರು ನಗರದ ಶ್ರೀ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯ ಮತ್ತು ತುಮಕೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಶಿಕ್ಷಣ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಪಠ್ಯವಸ್ತು ಪುನರ್-ಮನನ ಕಾರ್ಯಾಗಾರವನ್ನು ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಎಂ.ವೆಂಕಟೇಶ್ವರಲು ಉದ್ಘಾಟಿಸಿ ಮಾತನಾಡಿದರು. ಸ್ನಾತಕ ಶಿಕ್ಷಣವು ಪದವಿ ಶಿಕ್ಷಣಕ್ಕಿಂತ ಭಿನ್ನವಾದ ಕೋರ್ಸ್ ಆಗಿದೆ. ಶಿಕ್ಷಣದ ಮಹತ್ವವನ್ನು ಅರಿಯಬೇಕು. ಪರೀಕ್ಷೆಗಳನ್ನು ಭಯಪಡದೇ ಧೈರ್ಯದಿಂದ ಎದುರಿಸಬೇಕು. ಶಿಕ್ಷಣದಲ್ಲಿ ಸಮಸ್ಯೆಗಳು ಬೇರೆ ಕಡೆಯಿಂದ ಹುಟ್ಟುವುದಿಲ್ಲ. ನಮ್ಮಿಂದ ಸಮಸ್ಯೆಗಳು ಹುಟ್ಟುತ್ತವೆ. ಆ ಸಮಸ್ಯೆಗಳಿಗೆ ನಮ್ಮಲ್ಲೇ ಪರಿಹಾರ ಕಂಡುಕೊಳ್ಳಬೇಕು. ಶಿಕ್ಷಣವನ್ನು ಬದುಕಿನ ಅಸ್ತ್ರವಾಗಿ ಬದಲಾಯಿಸಿಕೊಳ್ಳಬೇಕು ಎಂದರು. ಸ್ನಾತಕ ಶಿಕ್ಷಣ ಅಧ್ಯಯನ ಮಂಡಳಿಯ ಅಧ್ಯಕ್ಷರಾದ ಡಾ.ಕೆ.ಎಸ್.ಸಿದ್ದರಾಜುರವರು ಮಾತನಾಡಿದರು. ಶ್ರೀ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಬಿ.ಎಸ್. ಲತಾ ರವರು ಮಾತನಾಡಿ, ವಿದ್ಯಾರ್ಥಿಗಳಿಗೆ ಒಂದೇ ರೀತಿಯ ಉತ್ತಮ ಶಿಕ್ಷಣ ನೀಡಬೇಕು. ನಾವೆಲ್ಲರೂ ಒಟ್ಟಾಗಿ ಶಿಕ್ಷಣದ ಗುನಮಟ್ಟವನ್ನು ಸುಧಾರಿಸಲು ಪ್ರಯತ್ನಿಸೋಣ ಎಂದರು. ಕಾರ್ಯಕ್ರಮದಲ್ಲಿ ಸ್ನಾತಕ ಶಿಕ್ಷಣ ಪರೀಕ್ಷಾ ಮಂಡಳಿ ಅಧ್ಯಕ್ಷರಾದ ಡಾ.ಶಿವಕುಮಾರ ಸ್ವಾಮಿ ಎಸ್ ಹಾಗೂ ಜಿಲ್ಲೆಯ ಹದಿನಾರು ಸ್ನಾತಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರು,…
ತುಮಕೂರು ಬಿಜೆಪಿಯು ಪ್ರಪಂಚದಲ್ಲೇ ಅತಿಹೆಚ್ಚು ಸದಸ್ಯರನ್ನು ಹೊಂದಿದ ರಾಜಕೀಯ ಪಕ್ಷವಾಗಿದ್ದು, ಭಾರತದ ಸರ್ವ ಜನರಲ್ಲಿ ಹಿತಾಶಕ್ತಿ, ರಾಷ್ಟ್ರಭಕ್ತಿ-ರಾಷ್ಟ್ರಪ್ರೇಮ ಮೂಡಿಸಿ, ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೇಳಿದರು. ಇವರು ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬಿಜೆಪಿಯ 43ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 1980 ಏಪ್ರಿಲ್ 06ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಸಂಘದ ಅಂದಿನ ಪ್ರಮುಖರಾದ ಅಟಲ್‍ಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಆಡ್ವಾನಿರವರ ನೇತೃತ್ವದಲ್ಲಿ ಆರಂಭಗೊಂಡು ಇಂದು ದೇಶ, ವಿದೇಶಗಳಲ್ಲಿ ಅತಿಹೆಚ್ಚು ಜನಮನ್ನಣೆ ಪಡೆದ ಪಕ್ಷವಾಗಿದೆ. ಕಾಂಗ್ರೆಸ್ ಹೇರಿದ ತುರ್ತುಪರಿಸ್ಥಿತಿ ವಿರುದ್ಧ ಒಂದಾದ ಪ್ರತಿಪಕ್ಷಗಳು ಜನತಾ ಪಕ್ಷದೊಂದಿಗೆ ಅಂದಿನ ಜನಸಂಘ ವಿಲೀನಗೊಂಡಿತ್ತು. ಜನತಾ ಪಕ್ಷದ ಆಂತರಿಕ ದ್ವಿಸದಸ್ಯತ್ವದ ಪ್ರಶ್ನೆಯಿಂದ ಹೊರಬಂದ ಜನಸಂಘದ ಪ್ರಮುಖರು, ಕಾರ್ಯಕರ್ತರು ಭಾರತೀಯ ಜನತಾ ಪಕ್ಷವು ದೇಶದ ಸಮಗ್ರ ವಿಕಾಸ-ಅಭಿವೃದ್ಧಿ ದೃಷ್ಠಿಯಿಂದ ಆರಂಭಗೊಂಡಿತು ಎಂದರು. ಜನಸಂಘ, ಬಿಜೆಪಿ ಪಕ್ಷದ ಬೆಳವಣಿಗೆ ಮತ್ತು ಸಂಘಟನೆಗೆ ಆಧಾರಸ್ತಂಭವಾಗಿದ್ದ ಹಿರಿಯ ಚೇತನಗಳಿಗೆ ಕೃತಜ್ಞತೆ ಸಲ್ಲಿಸಿದ ಹೆಚ್.ಎಸ್.ರವಿಶಂಕರ್ ಹೆಬ್ಬಾಕ,…
ಗುಬ್ಬಿ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ನನಗೆ ಯಾವುದೇ ರೀತಿಯ ನೋಟೀಸ್ ಆಗಲಿ ಮಾಹಿತಿ ಆಗಲಿ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಜಿಎಸ್ ಪ್ರಸನ್ನ ಕುಮಾರ್ ಮಾಹಿತಿ ನೀಡಿದರು. ಪಟ್ಟಣದ ಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ನಾವು ಸಹ ಇಂದಿನಿಂದ ಕಾಂಗ್ರೆಸ್ ಪಕ್ಷದ ಪರವಾಗಿಪ್ರಚಾರ ಆರಂಭಿಸಿದ್ದೇವೆ ಇದುವರೆಗೂ ಯಾರಿಗೂ ಸಹ ಕಾಂಗ್ರೆಸ್ ಅಭ್ಯರ್ಥಿ ಯನ್ನು ಘೋಷಣೆ ಮಾಡಿಲ್ಲ ಹಾಗಾಗಿ ನಮ್ಮ ಪಕ್ಷದ ಸಂಘಟನೆ ಮಾಡುತ್ತಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಪಕ್ಷದಿಂದ ತೆಗೆದು ಹಾಕಿದ್ದೇವೆ ಎಂಬ ವದಂತಿ ಹರಡಿದೆ ಇದರ ಬಗ್ಗೆ ಯಾವುದೇ ರೀತಿಯ ಮಾಹಿತಿ ಇಲ್ಲ ಪರಮೇಶ್ವರ್ ಅವರು ಬಂದಮೇಲೆ ಸ್ಪಷ್ಟನೆ ಸಿಗಲಿದೆ ಎಂದು ತಿಳಿಸಿದರು. ಇನ್ನೂ ಎರಡು ಲಕ್ಷ ಕಟ್ಟಿ ಅರ್ಜಿಯನ್ನೇ ಹಾಕದಂತಹ ವರಿಗೆ ಮನ್ನಣೆ ನೀಡುತ್ತೀರಾ ಎಂದರೆ ಅದಕ್ಕೆ ಕಾಂಗ್ರೆಸ್ ಪಕ್ಷದ ಬಗ್ಗೆ ಜನರೇ ಬೇಸರ ವ್ಯಕ್ತ ಪಡಿಸುತ್ತಾರೆ ನನ್ನನ್ನು ತೆಗೆದು ಹಾಕಲು ದೊಡ್ಡ ಪಿತೂರಿ ನಡೆಯುತ್ತಿದೆ ನಾನು ಮತ್ತು ಹೊನ್ನಗಿರಿ ಗೌಡರು ಆಕಾಂಕ್ಷಿಗಳಾಗಿದ್ದೇವೆ…
ತುಮಕೂರು ಸರ್ವರಲ್ಲೂ ಸಮಾನತೆಯ ಧ್ಯೇಯ ಇಟ್ಟುಕೊಂಡ ಮೇರು ವ್ಯಕ್ತಿತ್ವ ಡಾ. ಬಾಬು ಜಗಜೀವನ ರಾಮ್ ಅವರದು. ಬಾಬೂಜಿ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂದು ಸಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೊನ್ನಾಂಜಿನಯ್ಯ ಡಿ. ಆರ್. ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಾಬು ಜಗಜೀವನ ರಾಮ್ ಅಧ್ಯಯನ ಪೀಠವು ಬುಧವಾರ ಆಯೋಜಿಸಿದ್ದ ಡಾ. ಬಾಬು ಜಗಜೀವನ ರಾಮ್ ಅವರ 116ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಹಸಿರು ಕ್ರಾಂತಿಯ ಹರಿಕಾರನಾಗಿ ಹಸಿವು ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಪಣತೊಟ್ಟ ಧೀಮಂತ ವ್ಯಕ್ತಿತ್ವ ಬಾಬೂಜಿಯವರದು. ರಾಜಕೀಯ ಜೀವನದಲ್ಲಿ ಯಾವುದೇ ಖಾತೆ ಕೊಟ್ಟರೂ ನಿμÁ್ಠವಂತ ನಾಯಕನಾಗಿ ಕಾರ್ಯಸಾಧನೆ ಮಾಡಿ ತಮ್ಮ ಆದರ್ಶಯುತ ಬದುಕನ್ನು ಇಂದಿನ ಸಮೃದ್ಧ ಭಾರತಕ್ಕಾಗಿ ಮುಡಿಪಾಗಿಟ್ಟವರು ಬಾಬೂಜಿ ಎಂದು ತಿಳಿಸಿದರು. ಭಾರತದ ಭವಿಷ್ಯ ಯುವಪೀಳಿಗೆಯಲ್ಲಿದೆ. ಹೋರಾಟ ಎಂದಿಗೂ ದುರ್ಬಲರ ಪರವಾಗಿರಬೇಕು. ನಮ್ಮ ಬದುಕು ಇನ್ನೊಬ್ಬರ ಬೆಳವಣಿಗೆಗೆ ಮಾದರಿಯಾಗಬೇಕು. ಬಲಿಷ್ಠ ರಾಷ್ಟ್ರ ಕಟ್ಟಲು, ಹೋರಾಡಲು ಹಿಂಜರಿಯಬಾರದು. ನಮ್ಮ ಕಾರ್ಯಗಳೇ…
ತುಮಕೂರು ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಮಾಡಿದ ಅಭಿವೃದ್ಧಿ ಚಟುವಟಿಕೆಗಳ ಆಧಾರದಲ್ಲಿ ಮತದಾರರನ್ನು ಭೇಟಿ, ಸಂಪರ್ಕಗಳ ಮಾಡುವ ಮೂಲಕ ಭರ್ಜರಿ ಗೆಲುವಿಗೆ ಪ್ರಕೋಷ್ಠಗಳ ಪದಾಧಿಕಾರಿಗಳು, ಸದಸ್ಯರು ಕಾರ್ಯೋಮುಖರಾಗುವಂತೆ ಪ್ರಕೋಷ್ಠಗಳ ರಾಜ್ಯ ಸಹಪ್ರಮುಖರಾದ ಭೈರಣ್ಣ.ಜಿ ರವರು ಕರೆ ನೀಡಿದರು. ಇವರು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ದಾವಣಗೆರೆ ವಿಭಾಗದ ತುಮಕೂರು ಮತ್ತು ಮಧುಗಿರಿ ಜಿಲ್ಲೆಗಳ 24 ಪ್ರಕೋಷ್ಠಗಳ ಪ್ರಮುಖರ ಕಾರ್ಯಾಗಾರದಲ್ಲಿ ಮಾತನಾಡುತ್ತಾ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಡಬ್ಬಲ್ ಇಂಜಿನ್ ಸರ್ಕಾರದಿಂದ ಬಹುಮುಖವಾದ ಅಭಿವೃದ್ಧಿ ಕಾರ್ಯ ಮತ್ತು ಯೋಜನೆಗಳ ಮೂಲಕ ಜನರ ಮನ ಮುಟ್ಟುವ ಕಾರ್ಯವಾಗಿದೆ. ಆರೋಗ್ಯ, ಶಿಕ್ಷಣ, ಕೈಗಾರಿಕೆ, ರೈತರು, ಮಹಿಳೆಯರು, ಮಕ್ಕಳ ಶ್ರೇಯೋಭಿವೃದ್ಧಿ ಯೋಜನೆ, ಮೂಲಭೂತ ಸೌಕರ್ಯ, ಪರಿಶಿಷ್ಟ ಜಾತಿ/ವರ್ಗ, ಹಿಂದುಳಿದವರು ಮತ್ತು ಬಡವರ ಕಲ್ಯಾಣಕ್ಕೆ ಒತ್ತು ನೀಡಿರುವುದಲ್ಲದೆ, ಕೋವಿಡ್ ನಂತರದಲ್ಲಿ ದೇಶದ ಜನರಿಗೆ ಉಚಿತ ಕರೋನಾ ಲಸಿಕೆ, ಔಷದೋಪಚಾರ ಮಾಡಿರುವುದಲ್ಲದೆ ಬಡವರಿಗೆ ಅನ್ನ ಭಾಗ್ಯ ಯೋಜನೆಯಡಿ 80 ಕೋಟಿ ಜನರಿಗೆ ಉಚಿತ ಆಹಾರ ಪಡಿತರ, ರೈತರಿಗೆ ಕೃಷಿ ಸಮ್ಮಾನ್ ಯೋಜನೆಯಡಿ…











