ತುಮಕೂರು ಯಾವುದೇ ರೋಗ ಲಕ್ಷಣಗಳಿಲ್ಲದೆ ದೃಷ್ಠಿ ಕದಿಯುವ ಗ್ಲಾಕೋಮಾ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಡಾ.ಎಂ. ಶ್ರೀದೇವಿ ಚಂದ್ರಿಕಾ ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಧತ್ವ ನಿಯಂತ್ರಣ ವಿಭಾಗ, ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ನಗರದ ಜಿಲ್ಲಾ ಆಸ್ಪತ್ರೆ ಆಡಿಟೋರಿಯಂನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ “ವಿಶ್ವ ಗ್ಲಾಕೋಮಾ ಸಪ್ತಾಹ ದಿನಾಚರಣೆ” ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದ ಅವರು, ಪ್ರಸಕ್ತ ಸಾಲಿನ “ಅದೃಶ್ಯ ಗ್ಲಾಕೋಮಾವನ್ನು ಸೋಲಿಸೋಣ” ಘೋಷವಾಕ್ಯದ ಉದ್ದೇಶಗಳನ್ನು ಕುರಿತು ವಿವರಿಸಿದರಲ್ಲದೆ ತಲೆನೋವು ಹಾಗೂ ಕಣ್ಣಿನಲ್ಲಿ ನೋವು ಇದ್ದರೆ ಕೂಡಲೇ ವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ ವೀಣಾ ಮಾತನಾಡಿದರು. ಹಿರಿಯ ನೇತ್ರತಜ್ಞ ಡಾ. ಕೆ.ಆರ್ ಮಂಜುನಾಥ್ ಕಣ್ಣಿನ ಖಾಯಿಲೆಗಳನ್ನು ತಡೆಗಟ್ಟುವ ವಿಧಾನ, ನೇತ್ರದಾನದ ಪ್ರಕ್ರಿಯೆ ಕುರಿತು ಉಪನ್ಯಾಸ ನೀಡಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಕಚೇರಿಯ ಸಿಬ್ಬಂದಿಗಳಾದ ವಿರೂಪಾಕ್ಷಪ್ಪ, ನಾಗರಾಜು, ಜ್ಯೋತಿ, ಗೀತಾ, ಸ್ಪೂರ್ತಿ,…
Author: News Desk Benkiyabale
ಚಿಕ್ಕನಾಯಕನಹಳ್ಳಿ ಸ್ಥಳೀಯ ರೈತರ ಬೆಳೆದ ಬೆಳೆಗೆ ಸ್ಥಿರ ಬೆಲೆ ಸಿಗುವಂತೆ ಮಾಡುವಲ್ಲಿ ಜೆಡಿಎಸ್ ಪಕ್ಷ ಎಲ್ಲಾ ರೈತರಹಿತ ಕಾಯುತ್ತದೆ ರಾಜ್ಯದ ಮತದಾರರು ಕೂಡ ಜೆಡಿಎಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಅವರು ತಾಲೂಕಿನ ಹಂದನಕೆರೆ ಹೋಬಳಿ ನಿರುವಗಲ್ಲು ದುರ್ಗಮ್ಮನ ಬೆಟ್ಟದ ತಪ್ಪಲಿನಲ್ಲಿ ಭಗೀರಥ ಸಮಾಜದ ಸಮಾವೇಶ ಹಾಗೂ ಯುವ ಜನತಾಳದಳದ ಸಮಾವೇಶವನ್ನು ಉದ್ಘಾಟಿಸಿ ನಟ ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡುತ್ತಾ ರಾಜ್ಯದಲ್ಲಿ ಸ್ಥಳೀಯ ಪ್ರದೇಶಕ್ಕೆ ಅನುಗುಣವಾಗಿ ನಾನಾ ಸಮಸ್ಯೆಗಳು ಜ್ವಲಂತ ಸಮಸ್ಯೆಗಳಾಗಿ ಉಳಿದಿವೆ ಅವುಗಳ ಮೂಲಭೂತ ಸೌಕರ್ಯಗಳನ್ನು ಅನುಷ್ಠಾನಗೊಳಿಸಲು ಶೈಕ್ಷಣಿಕವಾಗಿ ಆರ್ಥಿಕವಾಗಿ ಎಲ್ಲಾ ಸಮುದಾಯಗಳಿಗೆ ನ್ಯಾಯಯುತ ಯೋಜನೆ ತರಬೇಕೆಂದೇ ಎಚ್ ಡಿ ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಯನ್ನು ಅನುಷ್ಠಾನಗೊಳಿಸುವುದು ನನ್ನ ಕರ್ತವ್ಯ ಎಂದು ಏಕಾಂಗಿಯಾಗಿ ರಾಜ್ಯದ ತುಂಬೆಲ್ಲ ಓಡಾಡುತ್ತಿದ್ದಾರೆ. ಮೊನ್ನೆ ನಡೆದ ಎರಡೂವರೆ…
ತುಮಕೂರು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಸಂಬಂಧ ಬಿಜೆಪಿಯು ರಾಜ್ಯಾದ್ಯಂತ ವಿಜಯ ಸಂಕಲ್ಪ ಯಾತ್ರೆಯನ್ನು ನಡೆಸುತ್ತಿದ್ದು, ಚುನಾವಣೆಯಲ್ಲಿ ಜನಾಶೀರ್ವಾದ ಪಡೆಯಲು ಇದೇ ಮಾರ್ಚ್ 18ರ ಶನಿವಾರ ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ಹಾಗೂ ಸಾರ್ವಜನಿಕ ಸಭೆಗಳು ನಡೆಯಲಿದೆ. ಈ ಸಂಬಂಧ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರುಗಳ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆಯು ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಗುಬ್ಬಿಯ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರುಗಳ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆಯು ಮುಂದುವರೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ತಿಳಿಸಿದರು. ಇವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮತನಾಡುತ್ತಾ, ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅಭಿವೃದ್ಧಿಯ ಮಂತ್ರ ಹಾಗೂ ಕೇಂದ್ರ ಮತ್ತು ರಾಜ್ಯ ಡಬ್ಬಲ್ ಇಂಜಿನ್ ಸರ್ಕಾರಗಳ ಸಾಧನೆ-ಯೋಜನೆ-ಕಾರ್ಯಕ್ರಮಗಳನ್ನು ವಿಜಯ ಸಂಕಲ್ಪ ಯಾತ್ರೆಯಲ್ಲಿ ತಿಳಿಸಲಾಗುವುದು ಎಂದರು. ತಿಪಟೂರು, ಚಿಕ್ಕನಾಯಕನಹಳ್ಳಿ ಕಾರ್ಯಕ್ರಮ ತಿಪಟೂರು ವಿಧಾನಸಭಾ ಕ್ಷೇತ್ರಕ್ಕೆ ಬೆಳಿಗ್ಗೆ 10.30ಕ್ಕೆ ತಿಪಟೂರು…
ತುಮಕೂರು ಮಹಾನಗರಪಾಲಿಕೆಯಿಂದ ನಗರದ ಜನಸಾಮಾನ್ಯರಿಗೆ ಯಾವುದೇ ತೆರಿಗೆ ಹೆಚ್ಚಳವಿಲ್ಲದೆ 227.53 ಕೋಟಿ ಮೊತ್ತದ ಬಜೆಟ್ ಅನ್ನು ಮಂಗಳವಾರ ಮಂಡಿಸಲಾಯಿತು. ಮುಂಗಡಪತ್ರದಲ್ಲಿ 227 ಕೋಟಿ 73 ಲಕ್ಷ 30 ಸಾವಿರ ಆದಾಯ ಸಂಗ್ರಹ ನಿರೀಕ್ಷೆ ಹೊಂದಲಾಗಿದ್ದು, 223 ಕೋಟಿ 15ಲಕ್ಷ 60 ಸಾವಿರ ವೆಚ್ಚದ ನಿರೀಕ್ಷೆಯೊಂದಿಗೆ 4 ಕೋಟಿ 57 ಲಕ್ಷ 70 ಸಾವಿರ ಉಳಿತಾಯ ನಿರೀಕ್ಷೆಯನ್ನು ತೋರಿಸಲಾಗಿದೆ. ಹಣಕಾಸು ತೆರಿಗೆ ನಿರ್ಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷೆ ನೂರುನ್ನೀಸಾ ಬಾನು ಮಂಡನೆ ಮಾಡಿದ ಬಜೆಟ್ ಅನ್ನು ಅವರಿಗೆ ಅನಾರೋಗ್ಯದ ಕಾರಣ ಸಭೆಯ ಅಧ್ಯಕ್ಷತೆ ವಹಿಸಿದ್ದ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್ ವಿಸ್ತೃತವಾಗಿ ಓದಿದರು. ಪ್ರಮುಖ ಆದಾಯ ಅಂಶಗಳು : ಬಜೆಟ್‍ನಲ್ಲಿ ಪಾಲಿಕೆಯ ಸ್ವಂತ ಆದಾಯ ಮೂಲದಿಂದ 78.63 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ಸರ್ಕಾರದಿಂದ 125.46 ಲಕ್ಷ ವಿವಿಧ ಯೋಜನಾ ಅನುದಾನ ನಿರೀಕ್ಷಿಸಲಾಗಿದೆ. ಆಸ್ತಿ ತೆರಿಗೆಯಲ್ಲಿ 45 ಕೋಟಿ, ತೆರಿಗೆ ದಂಡ 3 ಕೋಟಿ, ಘನ ತ್ಯಾಜ್ಯ ಉಪಕರದಿಂದ 2 ಕೋಟಿ, ನೀರಿನ ಕಂದಾಯ…
ಗುಬ್ಬಿ ಶಾಸಕ ಶ್ರೀನಿವಾಸ್ ಎಲ್ಲ ಸಮುದಾಯಗಳ ನಾಯಕನಾಗಿದ್ದು ಅವರು ಎಲ್ಲಿಗೆ ಯಾವ ಪಕ್ಷಕ್ಕೆ ತೆರಳಿದರು ನಾವೆಲ್ಲರೂ ಜೊತೆಯಾಗಿ ನಿಲ್ಲುತ್ತೇವೆ ಎಂದು ಮುಖಂಡ ಹೊಸಕೆರೆ ಬಾಬು ತಿಳಿಸಿದರು. ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನಡೆದ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಪರ್ವ ದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿ ಮಾತನಾಡಿದ ಅವರು 20 ವರ್ಷಗಳ ಅವಧಿಯಲ್ಲಿ ನಮ್ಮ ಭಾಗಕ್ಕೆ ಎಲ್ಲ ರೀತಿಯ ಸಹಕಾರವನ್ನು ನೀಡಿದ್ದಾರೆ ಮುಂದೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತೋಷ ತಂದಿದ್ದು ಇಡೀ ತಾಲೂಕಿನ ಜನರ ಆಶೀರ್ವಾದ ಅವರ ಮೇಲಿದೆ ಎಂದು ತಿಳಿಸಿದರು.ಮುಖಂಡರಾಜು ಮಾತನಾಡಿ ಜಿಲ್ಲೆಯ ನಾಲ್ಕರಿಂದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕ ಶ್ರೀನಿವಾಸ್ ಅವರ ಶಕ್ತಿ ಏನೆಂಬುದು ಗೊತ್ತಿದೆ ಇಂದು ಜೆಡಿಎಸ್ ಪಕ್ಷ ಅವರನ್ನು ಕಳೆದುಕೊಳ್ಳುವ ಮೂಲಕ ಅನಾಥವಾಗಿದೆ ಎಂಬುದನ್ನು ಅವರೇ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು ಮುಖಂಡ ವೆಂಕಟೇಶ್ ಮಾತನಾಡಿ ಬಿಜೆಪಿ ಸರ್ಕಾರ ಜನಸಾಮಾನ್ಯರನ್ನು ಸಂಪೂರ್ಣವಾಗಿ ಹಾಳು ಮಾಡಿದೆ ಸರಕಾರ ಬಂದಾಗ ನಿಂದ ಇಲ್ಲಿಯವರೆಗೂ ಯಾರು ಸಹ ನೆಮ್ಮದಿಯಿಂದ ಜೀವನ ಮಾಡಲು…
ತಿಪಟೂರು ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಗಂಗಾಧರ್ ಕರಿಕೆರೆ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ನಗರದ ಗೊರಗೊಂಡನಹಳ್ಳಿ ಯಲ್ಲಿರುವ ಪಕ್ಷದ ಕಚೇರಿಯಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗಂಗಾಧರ್‍ಕÀರೀಕೆರೆ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಣಾಳಿಕೆಯನ್ನು ತಿಳಿಸಿದರು. ಇದೇ ವೇಳೆ ಮಾತನಾಡಿದ ಅವರು ಕಳೆದ ಮೂರೂವರೆ ದಶಕಗಳಿಂದ ಆಳ್ವಿಕೆ ಮಾಡುತ್ತಿರುವ ಜೆ ಸಿ ಬಿ ಪಕ್ಷಗಳು ಕರ್ನಾಟಕ ರಾಜ್ಯವನ್ನು ಭ್ರμÁ್ಟಚಾರದಲ್ಲಿ ನಂಬರ್ ಒನ್ ಮಾಡಿದ್ದಾರೆ. ಚುನಾವಣೆಗಳಲ್ಲಿ ಭ್ರμÁ್ಟಚಾರದಲ್ಲಿ ತೊಡಗಿ ಆಳು ಗೆಡವಿದ್ದಾರೆ 1974 ರಲ್ಲಿ ಭ್ರμÁ್ಟಚಾರ ಸಣ್ಣ ಸಸಿಯಾಗಿತ್ತು ಇಂದು ಹೆಮ್ಮರವಾಗಿ ಬೆಳೆದಿದೆ. ತಿಪಟೂರು ಅದರಿಂದ ಹೊರತಾಗಿಲ್ಲ ಯಾವುದೇ ಸರ್ಕಾರ ಯೋಜನೆಗಳು ಎಲ್ಲಾ ಕಚೇರಿಗಳು ಒಂದಲ್ಲ ಒಂದು ರೀತಿ ಭ್ರμÁ್ಟಚಾರದಿಂದ ತಾಂಡವ ಆಡುತ್ತಿದೆ ಹಾಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಕೃμÁ್ಣರೆಡ್ಡಿ ನೇತೃತ್ವದಲ್ಲಿ ಪರ್ಯಾಯ ರಾಜಕಾರಣ ಮಾಡುತ್ತಿದೆ ಸಾತ್ವಿಕ ರೀತಿಯಲ್ಲಿ ಚುನಾವಣೆ ನಡೆಸಲು ಯಾವುದೇ ಅಮಿಷ ವಡ್ಡದೆ ಚುನಾವಣೆ ನಡೆಸಬೇಕೆಂದು ಕರ್ನಾಟಕದ…
ಚಿಕ್ಕನಾಯಕನಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಈಗಾಗಲೇ ಉದ್ಘಾಟನೆಗೊಂಡಿರುವ ಕೆಲವು ಕಾಮಗಾರಿಗಳು ಹಾಗೂ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ಪೂರ್ಣಗೊಳ್ಳದೆ ಉದ್ಘಾಟನೆಗೆ ಸನ್ಮಾನ್ಯ ಮುಖ್ಯಮಂತ್ರಿ ಅವರು ಹಾಗೂ ಆಗಮಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ತಾಲೂಕಿನ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, ಸಾಸಲುನಲ್ಲಿ ನಿರ್ಮಾಣಗೊಂಡು ಉದ್ಘಾಟನೆ ಕೂಡ ಆಗಿರುವ ಕಟ್ಟಡ ಕಳೆದ ಬಾರಿ ಮಳೆಯ ಒತ್ತಡಕ್ಕೆ ತತ್ತರಿಸಿ ಶಿಥಿಲವಾಗಿದ್ದರೂ ಅಂತಹ ಕಟ್ಟಡವನ್ನು ಮತ್ತೆ ಮುಖ್ಯಮಂತ್ರಿ ಉದ್ಘಾಟನೆಗೆ ಕಾಮಗಾರಿಗಳ ಪಟ್ಟಿಯಲ್ಲಿ ಸೇರಿರುವುದು ಅಪಹಾಸ್ಯಕ್ಕೆ ದಾರಿ ಮಾಡಿಕೊಟ್ಟಿದೆ ಅಲ್ಲದೆ ಸುಮಾರು 15 ಕೋಟಿ ವೆಚ್ಚದ ನಿರ್ಮಾಣಗೊಳ್ಳುತ್ತಿರುವ ಆಡಳಿತ ಸೌಧ ಪೂರ್ಣ ಪ್ರಮಾಣದಲ್ಲಿ ಕಟ್ಟಡ ಕಾಮಗಾರಿ ಮುಗಿಯದೆ ಏಕಾ ಏಕೆ ಉದ್ಘಾಟನೆಗೆ ಮುಂದಾಗಿರುವುದು ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಕಾರಣ ಆಡಳಿತ ಸೌಧ ಇನ್ನೂ ಆರು ತಿಂಗಳಾದರೂ ಕಟ್ಟಡ ಪೂರ್ಣಗೊಳ್ಳಲು ಅವಧಿ ಬೇಕಾಗುತ್ತದೆ ಹೀಗಿರುವಾಗ ಚುನಾವಣೆ ಸಮೀಪಿಸುತ್ತಿದ್ದು ನೀತಿ ಸಂಹಿತೆ ಜರೂರು ಬರುವ ಕಾರಣದಿಂದ ಉದ್ಘಾಟನೆ ಮಾಡಲಾಗದು ಎಂಬ ಕಾರಣಕ್ಕಾಗಿ ಸಚಿವರ ನಾಮಫಲಕ ಬೀಳಬೇಕು ಎಂಬ ಕಾರಣಕ್ಕಾಗಿಯೇ ತುರ್ತಾಗಿ…
ತುಮಕೂರು ಮುಂಬರುವ ವಿಧಾನಸಭಾ ಚುನಾವಣೆ-2023ರ ಹಿನ್ನೆಲೆಯಲ್ಲಿ ಕರಪತ್ರ, ಪೋಸ್ಟರ್ ಇತ್ಯಾದಿಗಳನ್ನು ಮುದ್ರಿಸುವಾಗ ಕಡ್ಡಾಯವಾಗಿ ಪ್ರಕಾಶಕರ ಹೆಸರು, ವಿಳಾಸವನ್ನು ಮುದ್ರಿಸತಕ್ಕದ್ದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧವಾಗಿ ಇಂದು ನಡೆದ ಜಿಲ್ಲೆಯ ಪ್ರಿಂಟರ್ಸ್ ಮತ್ತು ಕೇಬಲ್ ಅಪರೇಟರ್ ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 1951 ಸೆಕ್ಷನ್ 127ಎ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಚುನಾವಣಾ ನೀತಿ ಸಂಹಿತೆ ಜಾರಿಯಾದ ತಕ್ಷಣವೇ ಈ ಮೇಲಿನಂತೆ ಕ್ರಮ ವಹಿಸತಕ್ಕದು ಎಂದು ತಿಳಿಸಿದರು. ಅಲ್ಲದೆ, ಕರಪತ್ರ, ಪೋಸ್ಟರ್‍ಗಳ ಮೇಲೆ ಕಡ್ಡಾಯವಾಗಿ ಪ್ರತಿಗಳ ಸಂಖ್ಯೆ ಮುದ್ರಿಸ ತಕ್ಕದ್ದು. ಒಮ್ಮೆ ಮುದ್ರಿಸಿದ ಪ್ರತಿಗಳನ್ನು ಜೆರಾಕ್ಸ್ ಮಾಡಲು ಅನುಮತಿ ಇರುವುದಿಲ್ಲ. ಈ ರೀತಿ ಪ್ರಕರಣಗಳು ಕಂಡುಬಂದಲ್ಲಿ ಚುನಾವನಾಧಿಕಾರಿಗಳಿಗೆ ದೂರು ಸಲ್ಲಿಸತಕ್ಕದ್ದು ಎಂದು ಸೂಚಿಸಿದರು. ಅಂತೆಯೇ ಜಿಲ್ಲೆಯಲ್ಲಿರುವ ಕೇಬಲ್ ಅಪರೇಟರ್‍ಗಳು ಕಡ್ಡಾಯವಾಗಿ ಜಿಲ್ಲಾ ಹಾಗು ತಾಲ್ಲೂಕು ಮಟ್ಟದ ಎಂ.ಸಿ.ಎಂ.ಸಿ ಸಮಿತಿಗೆ ತಮ್ಮ ಕೇಬಲ್ ಪ್ರಸಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಬೇಕು, ತಮ್ಮ ಕೇಬಲ್‍ಗಳ…
ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಶ್ರೀ ಗಂಗಾಕ್ಷೇತ್ರದಲ್ಲಿ ಇನ್ನೂರಕ್ಕೂ ಹೆಚ್ಚು ಜನ ರೈತರು ಸಭೆ ಸೇರಿ ಈ ಭಾಗಕ್ಕೆ ಎಂವಿಎಸ್‍ಎಸ್ ಮಾಡಿಕೊಡಲೇಬೇಕು ಎಂದು ಆಗ್ರಹಿಸಿ ಸಭೆ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ತಾತಯ್ಯ ಇಈ ಭಾಗದ ನಂದಿಹಳ್ಳಿ, ದೊಣ್ಣೆರೆ, ಡಿ.ರಾಂಪುರ, ಅತ್ತಿಕಟ್ಟೆ, ಬಿ ಕೋಡಿಹಳ್ಳಿ, ಬೆಣ್ಣೂರು, ಗಂಗಸಂದ್ರ, ಸೇರಿದಂತೆ ಸುಮಾರು 20 ಗ್ರಾಮಗಳ ರೈತರಿಗೆ ಅನುಕೂಲ ವಾಗುವಂತಹ ಕೆಇಬಿ ಸ್ಟೇಷನ್ ಮಂಜೂರಾಗಿದೆ ಇಲಾಖೆಯವರು ಸಹ ಕೆಲಸವನ್ನು ಪ್ರಾರಂಭಿಸಲು ಸಿದ್ಧತೆಯನ್ನು ಮಾಡಿದ್ದಾರೆ ಆದರೆ ಸ್ಥಳೀಯ ರೈತರೊಬ್ಬರೂ ನಿಗದಿ ಮಾಡಿರುವ ಜಾಗ ನಮ್ಮದು ಎಂದು ಉಚ್ಚ ನ್ಯಾಯಾಲಯಕ್ಕೆ ಹೋಗಿರುವ ಕಾರಣದಿಂದಾಗಿ ಹಲವು ªಷರ್Àಗಳಿಂದ ನೆನಗುದಿಗೆ ಬಿದ್ದಿದೆ ಹಾಗಾಗಿ ಈ ಭಾಗದ ರೈತರೆಲ್ಲರು ಸೇರಿಕೊಂಡು ಕೂಡಲೇ ನ್ಯಾಯಾಲಯದಲ್ಲಿರುವಂತಹ ಪ್ರಕರಣವನ್ನು ತೆರವು ಗೊಳಿಸಿ ನಮಗೆ ಇಲ್ಲಿಗೆ ಸ್ಟೇಷÀನ್ ಮಾಡಿ ಕೊಡಬೇಕು ಹಾಗಾಗಿ ಸರ್ಕಾರ ಈ ವಿಚಾರದಲ್ಲಿ ಸಹಕಾರ ಮಾಡಿ ಕೊಡಬೇಕು ಎಂದು ಅಗ್ರಹ ಮಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಮುರುಳಿಧರ್ ಹಾಲಪ್ಪ ಮಾತನಾಡಿ ಕೆಪಿಟಿಸಿಎಲ್ ನಿಂದ 10…
ಚಿಕ್ಕನಾಯಕನಹಳ್ಳಿ ಆಶ್ರಯ ಯೋಜನೆ ಮತ್ತು ನಗರ ಹಂತ ನಾಲ್ಕರ ಕಾಮಗಾರಿಗಳ ಗುದ್ದಲಿ ಪೂಜೆಗೆ ಬಂದ ಸಚಿವರಿಗೆ ಜನರು ಇಲ್ಲದೆ ನಿರಾಶರಾಗಿ ಕೆಲವು ಕಾಮಗಾರಿಗಳನ್ನು ಉದ್ಘಾಟನೆ ಮಾಡದೆ ಹೋದ ಘಟನೆ ಚಿಕ್ಕನಾಯಕನಹಳ್ಳಿಯ ಪುರಸಭಾ ವ್ಯಾಪ್ತಿಯಲ್ಲಿ ನಡೆದಿದೆ ಕಾನೂನು ಸಂಸದೀಯ ಮತ್ತು ಸಣ್ಣ ನೀರಾವರಿ ಸಚಿವ ಜೆಸಿ ಮಾಧುಸ್ವಾಮಿಯವರು ಪಟ್ಟಣದಲ್ಲಿ ಅಮೃತ ನಗರ ಯೋಜನೆ ಒಳಚರಂಡಿ ಕಾಮಗಾರಿ ಆಶ್ರಯ ಯೋಜನೆಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಪುರಸಭಾ ಕಟ್ಟಡದ ಮೇಲಿನ ಮೀಟಿಂಗ್ ಹಾಲನ್ನು ಉದ್ಘಾಟಿಸಿ ಪುರಸಭಾ ಕಚೇರಿಯ ಆವರಣದಲ್ಲಿ ಆಶ್ರಯ ಹಕ್ಕುಪತ್ರ ನೀಡಲು ಆಯೋಜಿಸಿದ್ದ ಕಾರ್ಯಕ್ರಮ ನಿರೀಕ್ಷಿತ ಜನರು ಆಗಮಿಸದೆ ಇದ್ದ ಕಾರಣ ಕೆಲವೇ ಕೆಲವು ಕಾಮಗಾರಿಗಳನ್ನು ಉದ್ಘಾಟಿಸಿ ಬೇರೆ ಕಾರ್ಯಕ್ರಮ ಇದೆ ಎಂದು ಹೋದ ಘಟನೆ ಪಟ್ಟಣದಲ್ಲಿ ನಡೆಯಿತು ಕಾನೂನು ಸಂಸದೀಯ ಸಚಿವರಿಂದ ಉದ್ಘಾಟನೆಗೆ ಸಿದ್ಧಗೊಂಡಿದ್ದ ಪುರಸಭಾ ಸದಸ್ಯರ ಸಭಾ ನಿಲಯ ಮೀಟಿಂಗಲ್ ಸಚಿವರು ಇತರ ಉದ್ಘಾಟನೆಗೆ ಬಾರದೆ ಹೋದ ಪ್ರಸಂಗ ನಡೆಯಿತು ಪಟ್ಟಣದ ಪುರಸಭಾ ಆವರಣದಲ್ಲಿ ಆಶ್ರಯ ನಿವೇಶನದ ಹಕ್ಕು ಪತ್ರ…











