Author: News Desk Benkiyabale

ತುಮಕೂರು ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ, ಭಾರತೀಯ ವಿಜ್ಞಾನ ಸಂಸ್ಥೆಯ ಎಂಎಸ್‍ಎಂಇ ಸೆಂಟರ್ ಆಫ್ ಎಕ್ಸಲೆನ್ಸ್‍ನ ಎಲೆಕ್ಟ್ರಾನಿಕ್ಸ್ ಸಿಸ್ಟಂ ಎಂಜಿನಿಯರಿಂಗ್ ವಿಭಾಗ, ಲಘು ಉದ್ಯೋಗ ಭಾರತಿ ಮತ್ತು ಅಖಿಲ ಭಾರತ ನಿರ್ವಹಣಾ ಸಂಸ್ಥೆ ಜಂಟಿಯಾಗಿ ಎಂಎಸ್‍ಎಂಇ (ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮ ಅಭಿವೃದ್ಧಿ) ಮತ್ತು ವಿದ್ಯಾರ್ಥಿಗಳಿಗೆ ಹೊಸ ಆವಿಷ್ಕಾರದ ಯೋಜನೆಗಳ ಒಂದು ದಿನದ ಅರಿವು ಕಾರ್ಯಕ್ರಮ ನಗರದ ಎಸ್‍ಎಸ್‍ಐಟಿ ಕ್ಯಾಂಪಸ್‍ನ ಪಿಜಿ ಸೆಮಿನಾರ್ ಹಾಲ್‍ನಲ್ಲಿ ಆಯೋಜಿಸಿತ್ತು. ತುಮಕೂರಿನಲ್ಲಯೇ ಹಲವಾರು ಹೊಸ ಆವಿಷ್ಕಾರ ಉದ್ಯಮ ಸೃಷ್ಟಿಗೆ ಅವಕಾಶಗಳು ಇದ್ದು, ವಿದ್ಯಾರ್ಥಿಗಳು ಸ್ಮಾರ್ಟ್ ಸ್ವಿಚ್‍ಗಳಿಂದ ಹಿಡಿದು ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸ್ಮಾರ್ಟ್ ಮಾಡುವ ಅವಕಾಶಗಳು ಮುಂದಿವೆ ಅವುಗಳಿಗಾಗಿ ಕೇಂದ್ರ ಸರ್ಕಾರ ಎಂಎಸ್‍ಎಂಇ ಯೋಜನೆಗಳಿಗೆ ಆರ್ಥಿಕ ನೆರವು ನೀಡುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಎಂಎಸ್‍ಎಂಇ ಸಂಯೋಜಕರಾದ ಡಾ. ಟಿ.ವಿ. ಪ್ರಭಾಕರ್ ವಿದ್ಯಾರ್ಥಿಗಳಿಗೆ ಹೊಸ ಉದ್ಯಮ ಸೃಷ್ಟಿಸಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ತುಮಕೂರಿನಲ್ಲಿಯೇ ಡ್ರೋನ್ ಮತ್ತು ತೇಜಸ್ ಏರ್‍ಕ್ರಾಫ್ಟ್…

Read More

ತುಮಕೂರು ಒಂದು ಬಡಾವಣೆ ಅಥವಾ ವಾರ್ಡು ಅಭಿವೃದ್ದಿಯಾಗಬೇಕೆಂದರೆ ಅಲ್ಲಿನ ನಾಗರಿಕರ ಹಿತರಕ್ಷಣಾ ಸಮಿತಿಗಳು ಹೆಚ್ಚು ಕ್ರಿಯಾಶೀಲದ ಜೊತೆಗೆ, ಗಟ್ಟಿತನದಿಂದ ಕೂಡಿದ್ದರೆ ಮಾತ್ರ ಸಾಧ್ಯ. ಇದಕ್ಕೆ 26ನೇ ವಾರ್ಡಿಗೆ ಸೇರಿದ ಎಸ್.ಎಸ್.ಐ.ಟಿ. ಬಡಾವಣೆ, ಎಸ್.ಎಸ್.ಪುರಂ ಬಡಾವಣೆಗಳ ನಾಗರಿಕ ಹಿತರಕ್ಷಣಾ ಸಮಿತಿಗಳೇ ಸಾಕ್ಷಿ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ. ನಗರದ 26ನೇ ವಾರ್ಡಿನ ದೋಬಿ ಘಾಟ್ ಪಕ್ಕದ ಸಾರ್ವಜನಿಕ ಸ್ಮಶಾನಕ್ಕೆ ಹೊಂದಿಕೊಂಡಂತೆ ಸ್ಮಾರ್ಟ್‍ಸಿಟಿಯಿಂದ ನಿರ್ಮಿಸಿರುವ ಶ್ರೀಸಿದ್ದಗಂಗಾ ಹೂವು, ಹಣ್ಣು, ತರಕಾರಿ ಮಾರುಕಟ್ಟೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತಿದ್ದ ಅವರು, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಸಮಿತಿಯವರು ಈ ಭಾಗದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದ ಸಂದರ್ಭದಲ್ಲಿ ವಾರ್ಡಿನ ಕಾರ್ಪೋರೇಟರ್ ಮಲ್ಲಿಕಾರ್ಜುನಯ್ಯ ಅವರ ಕೋರಿಕೆಯಂತೆ ಬೀದಿ ಬದಿ ವ್ಯಾಪಾರಿಗಳಿಗೆ ಮಾರುಕಟ್ಟೆ ನಿರ್ಮಿಸುವ ಪ್ರಸ್ತಾವನೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈ ಬಡಾವಣೆಯ ಶೇ90ಕ್ಕು ಹೆಚ್ಚು ನಾಗರಿಕರು ಮಾರುಕಟ್ಟೆಯ ಪರವಾಗಿ ನಿಂತಿದ್ದರಿಂದ ಇಂದು ಇಷ್ಟು ಸುಂದರ ಮಾರುಕಟ್ಟೆ ನಿರ್ಮಾಣವಾಗಿದೆ.ಇದರಿಂದ ಎಸ್.ಎಸ್.ಪುರಂ,ಎಸ್.ಐ.ಟಿ,ಗಂಗೋತ್ರಿ ನಗರ, ಅಶೋಕನಗರದ ನಾಗರಿಕರಿಗೆ ಮನೆ ಬಾಗಿಲಿನಲ್ಲಿ ತಾಜಾ ತರಕಾರಿ…

Read More

ತುಮಕೂರು ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಹಂತದ 124 ಮಂದಿ ಅಭ್ಯರ್ಥಿ ಗಳ ಪಟ್ಟಿ ಬಿಡುಗಡೆ ಯಾಗಿದ್ದು, ಜಿಲ್ಲೆಗೆ ಸಂಬಂಧಿಸಿದಂತೆ 8 ಕ್ಷೇತ್ರ ಕ್ಕೆ ಮಾತ್ರ ಅಭ್ಯರ್ಥಿ ಗಳ ಹೆಸರು ಘೋಷಣೆ ಯಾಗಿದೆ.ಟಿಕೆಟ್ ಗೊಂದಲವಿರುವ ತುಮಕೂರು ನಗರ ಸೇರಿ ತುಮಕೂರು ಗ್ರಾಮಾಂತರ ಹಾಗೂ ಗುಬ್ಬಿ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಎರಡನೇ ಪಟ್ಟಿಯಲ್ಲಿ ಬಿಡುಗಡೆ ಯಾಗುವ ನಿರೀಕ್ಷೆ ಯಿದೆ. ಪಾವಗಡದ ಹಾಲಿ ಶಾಸಕ ವೆಂಕಟರವಣಪ್ಪ ಬದಲಾಗಿ ಅವರ ಪುತ್ರ ಎಚ್. ವಿ. ವೆಂಕಟೇಶ್ ಅವರಿಗೆ ಈ ಬಾರಿ ಟಿಕೆಟ್ ಕೊಡಲಾಗಿದ್ದು, ಉಳಿದ ಕ್ಷೇತ್ರಗಳಲ್ಲಿ ಕಳೆದ ಬಾರಿ ಅಭ್ಯರ್ಥಿ ಯಾದವರು, ಶಾಸಕರಾದ ವರಿಗೆ ಟಿಕೆಟ್ ಹಂಚಿಕೆ ಯಲ್ಲಿ ಮನ್ನಣೆ ನೀಡಲಾಗಿದೆ. ಕ್ಷೇತ್ರ- ಟಿಕೆಟ್ ಪಡೆದ ಅಭ್ಯರ್ಥಿಗಳು ಕೊರಟಗೆರೆ (ಎಸ್ಸಿ ಮೀಸಲು) -ಡಾ. ಜಿ ಪರಮೇಶ್ವರ್, ಮಧುಗಿರಿ- ಕೆ. ಎನ್. ರಾಜಣ್ಣ, ಸಿರಾ-ಟಿ.ಬಿ.ಜಯಚಂದ್ರ, ತಿಪಟೂರು – ಷಡಾಕ್ಷರಿ, ಕುಣಿಗಲ್ – ಡಾ.ಎಚ್.ಡಿ.ರಂಗನಾಥ್, ಚಿಕ್ಕ ನಾಯಕನಹಳ್ಳಿ- ಕೆ.ಎಸ್.ಕಿರಣ್ ಕುಮಾರ್, ತುರುವೇಕೆರೆ ಬೆಮೆಲ್…

Read More

ತುಮಕೂರು ವಿಶ್ವ ಕ್ಷಯರೋಗ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದಲ್ಲಿ ಜನಜಾಗೃತಿ ಜಾಥಾ ನಡೆಸಲಾಯಿತು. ನಗರದ ಟೌನ್‍ಹಾಲ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್ ಮತ್ತು ಐಎಂಎ ಅಧ್ಯಕ್ಷ ಡಾ. ಚಂದ್ರಶೇಖರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಡಿಹೆಚ್‍ಓ ಡಾ. ಮಂಜುನಾಥ್ ಅವರು, 1882 ಮಾರ್ಚ್ 24 ರಂದು ವಿಜ್ಞಾನಿ ರಾಬರ್ಟ್ ಕಾಕ್ ಎಂಬುವರು ಕ್ಷಯ ರೋಗವನ್ನು ಕಂಡು ಹಿಡಿದರು. ಅಂದಿನಿಂದಲೂ ಪ್ರಪಂಚದಾದ್ಯಂತ ವಿಶ್ವಕ್ಷಯ ರೋಗ ದಿನವನ್ನು ಪ್ರತಿ ವರ್ಷವೂ ಒಂದೊಂದು ಘೋಷವಾಕ್ಯದಡಿ ಆಚರಿಸಲಾಗುತ್ತಿದೆ. ಈ ಬಾರಿ “ಕ್ಷಯ ರೋಗವನ್ನು ಕೊನೆಗಾಣಿಸಬಹುದು” ಎಂಬ ಘೋಷ ವಾಕ್ಯದಡಿ ವಿಶ್ವ ಕ್ಷಯ ರೋಗ ದಿನವನ್ನು ಆಚರಿಸಲಾಗುತ್ತಿದೆ ಎಂದರು. ಕ್ಷಯ ರೋಗ ನಿರ್ಮೂಲನೆ ಕಾರ್ಯಕ್ರಮದಡಿ ಇಡೀ ರಾಜ್ಯದಲ್ಲೇ ತುಮಕೂರು ಜಿಲ್ಲೆ 2ನೇ ಸ್ಥಾನದಲ್ಲಿ ಆಯ್ಕೆಯಾಗಿದ್ದು, ಈ ಬಾರಿ ಬೆಳ್ಳಿ…

Read More

ತುಮಕೂರು ಹೊಟೇಲ್ ಮ್ಯಾನೇಜ್‍ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಕಳೆದ 12 ವರ್ಷಗಳಿಂದ ಕೆಲಸ ಮಾಡುತ್ತಿರುವ ಬೆಂಗಳೂರು ಮೂಲದ ಅಂತುರಾಜ್ ಎಂಬ ವ್ಯಕ್ತಿಗೆ ತುಮಕೂರಿನ ದ ಬೀವ್ ಹೈವ್‍ಗ್ರಾಂಡ್ ಹೊಟೇಲ್ ಮಾಲೀಕರು ಮತ್ತು ಕುಟುಂಬದವರು ಕಿರಿಕುಳು ನೀಡಿ, ಅರ್ಥಿಕವಾಗಿ ಮೋಸ ಮಾಡಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಒಂದು ವಾರದೊಳಗೆ ಸೂಕ್ತ ನ್ಯಾಯ ದೊರಕಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ದಲಿತ ಸಂರಕ್ಷ ಸಮಿತಿ ರಾಜ್ಯ ಅಧ್ಯಕ್ಷ ಲಯನ್ ಕೆ.ವಿ.ಬಾಲಕೃಷ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ ಬೀವ್ ಹೈವ್ ಗ್ರಾಂಡ್ ಹೊಟೇಲ್‍ನ ಮಾಲೀಕರಾದ ಬಸವರಾಜು ಮತ್ತು ಆತನ ಮಗ ದರ್ಶನ ಮತ್ತು ಜಿ.ಪಂ.ಮಾಜಿ ಸದಸ್ಯರಾದ ವೈ.ಸಿ.ಸಿದ್ದರಾಮಯ್ಯ ಅವರುಗಳು ಅಂತುರಾಜ್ ಕುಟುಂಬಕ್ಕೆ ಕಿರುಕುಳ ನೀಡಿ,ಇಡೀ ಕುಟುಂಬವೇ ಬೀದಿಗೆ ಬೀಳುವಂತೆ ಮಾಡಿದೆ.ಇದನ್ನು ವಿರೋಧಿಸಿ ಕಳೆದ 155 ದಿನದಿಂದಲೂ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಇದುವರೆಗು ಜಿಲ್ಲಾಡಳಿತ,ಜಿಲ್ಲಾ ಪೊಲೀಸ್ ಯಾರು ಸಹ ತಿರುಗಿ ನೋಡಿಲ್ಲ.ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಿಶ್ಚಿತ ಎಂದರು. ಸಾಹಿತಿ ಡಾ.ವಡ್ಡಗೆರೆ…

Read More

ಬೆಂಗಳೂರು: ಈ ಬಾರಿ ಸರಕಾರದ ಅವಧಿಯ ಕೊನೆಯ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರದಂದು ತಮ್ಮ ಸರ್ಕಾರದ ಕೊನೆಯ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವೇಳೆ ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳು ಮತ್ತು ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಮತ ಬ್ಯಾಂಕ್‍ನಲ್ಲಿ ಬಿರುಕು ಉಂಟಾಗದಂತೆ ಲಿಂಗಾಯತ ಸಮುದಾಯದ ಉಪಪಂಗಡ ಪಂಚಮಸಾಲಿ ವರ್ಗಕ್ಕೆ ಮೀಸಲಾತಿ ಘೋಷಿಸುವ ಬಗ್ಗೆಯೂ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಸಂಜೆ 4 ಗಂಟೆಗೆ ಸಭೆ ನಡೆಯಲಿದೆ ಮತ್ತು ಎಲ್ಲಾ ಸಚಿವರು ಹಾಜರಿರಲು ತಿಳಿಸಲಾಗಿದೆ. ಮಾದರಿ ನೀತಿ ಸಂಹಿತೆ ಯಾವುದೇ ಸಮಯದಲ್ಲಿ ಘೋಷಣೆಯಾಗುವ ನಿರೀಕ್ಷೆಯಿದ್ದು, ಬೊಮ್ಮಾಯಿ ಅವರು ಪ್ರಮುಖ ವಿಚಾರಗಳ ನಿರ್ಧಾರ ತೆಗೆದುಕೊಳ್ಳಲು ಇದು ಕೊನೆಯ ಅವಕಾಶವಾಗಿದೆ. ಲಿಂಗಾಯತ ಪಂಚಮಸಾಲಿಗಳಿಗೆ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದ್ದು, ಮೀಸಲಾತಿ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ನೀಡಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್…

Read More

ತುಮಕೂರು ಇದೇ ಮಾರ್ಚ್ 26 ರಂದು ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ, ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಸಾಪ ಹಾಗೂ ತುಮಕೂರು ಜಿಲ್ಲೆಯ ನೇಕಾರರ ಸಮುದಾಯಗಳಾದ ದೇವಾಂಗ, ಕುರುಹೀನ ಶೆಟ್ಟಿ,ಪದ್ಮಶಾಲಿ ಹಾಗೂ ತೊಗಟವೀರ ಸಮುದಾಯಗಳ ವತಿಯಿಂದ ಅದ್ಯ ವಚನಕಾರ ದೇವರ ದಾಸಿಮಯ್ಯ ಅವರ 1044ನೇ ಜಯಂತಿ ಆಚರಣೆ ಆರಂಭವಾಗಿ ಹೊರಪೇಟೆಯಲ್ಲಿರುವ ಶ್ರೀನೀಲಕಂಠೇಶ್ವರ ದೇವಾಲಯದ ಅವರಣದಲ್ಲಿ ಜಿಲ್ಲಾ ನೇಕಾರರ ಒಕ್ಕೂಟದ ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್,ಉಪಾಧ್ಯಕ್ಷ ಎನ್.ವೆಂಕಟೇಶ್,ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣಪ್ಪ,ಕಾರ್ಯದರ್ಶಿ ರೇವಣ್ಣಕುಮಾರ್,ನೇಕಾರರ ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷ ಶ್ರೀಮತಿ ಚಂದ್ರಕಲಾ ದೇವರಾಜು,ಸಂಘಟನಾ ಕಾರ್ಯದರ್ಶಿ ಅನಿಲ್‍ಕುಮಾರ್,ನಿರ್ದೇಶಕರಾದ ರಂಗಸ್ವಾಮಿ, ಜೈರಂಗಶೆಟ್ಟಿ ಅವರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಧನಿಯಕುಮಾರ್ ಮಾತನಾಡಿ,ನೇಕಾರರ ಸಮುದಾಯ ತನ್ನದೇ ಆದ ಇತಿಹಾಸವನ್ನು ಹೊಂದಿರುವ ಸಮುದಾಯ.ಈ ಸಮುದಾಯಕ್ಕೆ ಸೇರಿದ ಅದ್ಯ ವಚನಕಾರ ದೇವರ ದಾಸಿಮಯ್ಯ ಅನುಭವ ಮಂಟಪದ ಪ್ರಮುಖರಲ್ಲಿ ಒಬ್ಬರಾಗಿದ್ದು, ಬಸವಣ್ಣನವರಿಗಿಂತಲೂ ಹಿರಿಯರು.ಸುಮಾರು 176ಕ್ಕೂ ಹೆಚ್ಚು ವಚನಗಳನ್ನು…

Read More

ಗುಬ್ಬಿ ರೈತರಿಗೆ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಎಲ್ಲಾ ರೀತಿಯ ಸೌಲಭ್ಯವುಳ್ಳ ನೂತನ ಕಟ್ಟಡ ನಿರ್ಮಾಣವಾಗುತ್ತಿರುವುದು ಈ ಭಾಗದ ರೈತರಿಗೆ ಸಂತೋಷ ತಂದಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಾಲಕೃಷ್ಣ ತಿಳಿಸಿದರು. ತಾಲೂಕಿನ ಕಡಬ ಗ್ರಾಮದಲ್ಲಿ ನೂತನ ಕೃಷಿ ಕಚೇರಿ ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕಡಬ ಸುತ್ತ ಮುತ್ತನೂರಾರು ಗ್ರಾಮಗಳಿದ್ದು ಸಾವಿರಾರು ರೈತರು ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ ನಮ್ಮ ಭಾಗದಲ್ಲಿ ರೈತ ಕಚೇರಿ ಆಧುನಿಕವಾಗಿ ನಿರ್ಮಾಣವಾಗುವುದರಿಂದ ರೈತರಿಗೆ ಸಹಾಯವಾಗುತ್ತದೆ ರೈತರಿಗೆ ಅನುಕೂಲವಾಗುವ ಯಾವುದೇ ಕೆಲಸವನ್ನು ಮಾಡಲು ಗುಬ್ಬಿ ನಗರಕ್ಕೆ ಹೋಗುವ ಸಮಸ್ಯೆ ತಪ್ಪುತ್ತದೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು. ಕಡಬದ ಕೃಷಿ ಅಧಿಕಾರಿ ದರ್ಶನ್ ಮಾತನಾಡಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಾಣ ಮಾಡುತ್ತಿರುವುದರಿಂದ ರೈತರಿಗೆ ಅನುಕೂಲವಾಗುವ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳು ಇಲ್ಲಿ ಸಿಗುತ್ತವೆ ಮತ್ತು ರೈತರಿಗೆ ಅವಶ್ಯಕತೆ ಇರುವ ಎಲ್ಲಾ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ನೀಡಲು ಸಹ ಸ್ಥಳ ಅವಕಾಶ ಮಾಡಲಾಗುತ್ತದೆ ಎಂದು ತಿಳಿಸಿದರು.…

Read More

ತುಮಕೂರು ಕೇಂದ್ರ ಸರ್ಕಾರವು ಬೀಡಿ ಕಾರ್ಮಿಕರ ನಿಜವಾದ ಬೇಡಿಕೆಗಳನ್ನು ಪರಿಹರಿಸಬೇಕು ಮತ್ತು ಸರ್ಕಾರದ ನಿಲುವುಗಳನ್ನು ಬಹಿರಂಗಗೊಳಿಸಬೇಕು. ಉದ್ಯೋಗ ಕಳೆದುಕೊಳ್ಳುವವರಿಗೆ ಆರ್ಥಿಕನೆರವು ನೀಡುವ, ಪರ್ಯಾಯ ಉದ್ಯೋಗದ ಯೋಜನೆಯನ್ನು ಪ್ರಕಟಿಸಬೇಕು. ನೋಂದಣಿಯಾಗದ/ಅಕ್ರಮ ಬೀಡಿ ಉತ್ಪಾದನೆಯನ್ನು ತಕ್ಷಣವೇ ನಿಲ್ಲಿಸಬೇಕು. ಬೀಡಿ ಕಾರ್ಮಿಕರಿಗೆ ಏಕರೂಪದ ರಾಷ್ಟೀಯ ಕನಿಷ್ಠ ವೇತನವನ್ನು ಪ್ರತಿ ಸಾವಿರ ಬೀಡಿ ಸುತ್ತಲು ರೂ.395/-, ತುಟ್ಟಿಭತ್ಯೆ @ 0.5 ಪೈಸೆ ಪ್ರತಿ ಪಾಯಿಂಟ್‍ಗೆ ನೀಡಬೇಕು ,ಬೀಡಿ ರೋಲರ್ಗಳನ್ನು ಹೊರತುಪಡಿಸಿ ಉಳಿದ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ 21,000/- ರೂ.ವೇತನ ನಿಗಧಿ ಮಾಡಬೇಕು,ಮಾರುವ ಮತ್ತು ಕೊಳ್ಳುವ ,ಉಪ-ಗುತ್ತಿಗೆ ವ್ಯವಸ್ಥೆಯನ್ನು ರದ್ದುಪಡಿಸಬೇಕು ಕಾರ್ಮಿಕರನ್ನು ನೇರವಾಗಿ ಪ್ರಧಾನ ಉದ್ಯೋಗ ದಾತರು ಮತ್ತು ಖಾತೆ ಸಂಖ್ಯೆಗಳು ನಿಜವಾದ ಕಾರ್ಮಿಕರ ಹೆಸರಿನಲ್ಲಿರಬೇಕು. ಬೀಡಿ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಹಣ ನೀಡುತ್ತಿರುವ ಬೀಡಿ ಉದ್ಯಮದಲ್ಲಿ ಸೆಸ್ ಅನ್ನು ಮರುಸ್ಥಾಪಿಸಿಬೇಕು. ಸರ್ಕಾರ/ ಮಾಲಕರು ಎಲ್ಲ ಬೀಡಿ ಕಾರ್ಮಿಕರಾಗಿ ಆರೋಗ್ಯ ಬಗ್ಗೆ ವಿಶೇಷ ಜವಾಬ್ದಾರಿಯನು ತೆಗೆದುಕೊಳ್ಳಬೇಕು.ಎಲ್ಲಾ ಬೀಡಿ ಕಾರ್ಮಿಕರಿಗೆ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕು ಹಾಗೂ ಎಲ್ಲಾರಿಗೆ ಆರೋಗ್ಯ…

Read More

ಕೊರಟಗೆರೆ ನೂತನ ಗ್ರಾಪಂ ಕಾರ್ಯಾಲಯವು ಸುಂದರವಾಗಿ ನಿರ್ಮಾಣವಾಗಿದೆ, ಆ ಸುಂದರತೆ ಹಾಗೇ ಉಳಿಯಬೇಕಾದರೆ ಗ್ರಾಮೀಣ ಭಾಗದ ಸಾಮಾನ್ಯ ಜನರಿಗೆ ಪ್ರಮಾಣಿಕವಾಗಿ ಸ್ಫಂದಿಸಿ ಉತ್ತಮ ಸೇವೆ ಸಲ್ಲಿಸಿದ್ದರೆ ಇದಕ್ಕೊಂದು ಸಾರ್ಥಕತೆ ಸಿಗಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ತಿಳಿಸಿದರು. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮದಲ್ಲಿ ನೂತನ ಗ್ರಾಮಪಂಚಾಯಿತಿ ಕಾರ್ಯಾಲಯ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದರು. ಈ ಗ್ರಾ.ಪಂ ಕಾರ್ಯಾಲಯ ಸುಮಾರು 1ಕೋಟಿ 15ಲಕ್ಷ ರೂ ವೆಚ್ಚÀದಲ್ಲಿ ನಿರ್ಮಿಸಲಾಗಿದೆ, ಅಂದೇ ಇಂದಿರಾ ಗಾಂಧಿಯವರ ಸರ್ಕಾರದಲ್ಲಿ ನಡೆದಂತಹ ಬೇಲೂರು ಘೋಷಣೆ ಎಂಬ ಕಾರ್ಯಕ್ರಮದಲ್ಲಿ ಗ್ರಾಪಂ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ನಾನು ಶಾಸಕನಾದ ಮೇಲೆ ಕ್ಷೇತ್ರದಲ್ಲಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸುಮಾರು 6ಕೋಟಿ 40ಲಕ್ಷ ರೂ.ಗಳನ್ನು ಅನುದಾನ ಮಂಜೂರಾಗಿ ಕಾರ್ಯರೂಪಕ್ಕೆ ತಂದಿದ್ದೇನೆ ಅವೆಲ್ಲವೂ ನಿಮ್ಮಗಳ ಕಣ್ಮುಂದೆಯೇ ಇದೆ ಎಂದು ಹೇಳಿದರು. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್ ಮಾತನಾಡಿ, ನಾನು ಹುಟ್ಟಿದ ಗ್ರಾಮ ಅಕ್ಕಿರಾಂಪುರ, ಈ ಹುದ್ದೆಯಲ್ಲಿ 4ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇವೆ…

Read More