Author: News Desk Benkiyabale

ತುಮಕೂರು ಡಿಜಿಟಲ್ ಸಾಕ್ಷರತೆಯ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಿ ಭಾರತದ ಭವಿಷ್ಯ ರೂಪಿಸುವುದೇ ನಮ್ಮ ಗುರಿ ಎಂದು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ತರಬೇತುದಾರೆ ಸಹನಾ ಕುಮಾರಸ್ವಾಮಿ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯ ಮಂಗಳವಾರ ಆಯೋಜಿಸಿದ್ದ ‘ಇನ್ಫೋಸಿಸ್ ಸ್ಪ್ರಿಂಗ್‍ಬೋರ್ಡ್’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಪೀಳಿಗೆಯನ್ನು ಉತ್ಪಾದಕ ಮತ್ತು ಸ್ವಾವಲಂಬಿ ನಾಗರಿಕರನ್ನಾಗಿ ಮಾಡಿ, ಡಿಜಿಟಲ್ ಸಾಕ್ಷರತೆ ಮೂಲಕ ಡಿಜಿಟಲ್ ಸಾಮಥ್ರ್ಯವನ್ನು ಸಾಧಿಸಲು ಅಗತ್ಯವಿರುವ ಕಲಿಕೆ, ಕೌಶಲ್ಯ, ಸಂವಹನಕ್ಕಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಳಕೆಯ ರೂಪಗಳ ಅಡಿಪಾಯವನ್ನು ರೂಪಿಸುವ ಕೌಶಲ್ಯಗಳನ್ನು ವರ್ಧಿಸಲು ಇನ್ಫೋಸಿಸ್ ಸ್ಪ್ರಿಂಗ್‍ಬೋರ್ಡ್ ಸಹಕಾರಿಯಾಗುತ್ತದೆ ಎಂದರು. ತುಮಕೂರು ವಿವಿ ಪಿಎಂಇಬಿ ನಿರ್ದೇಶಕ ಪ್ರೊ. ಸಂಪತ್ ಕುಮಾರ್ ಬಿ. ಟಿ. ಮಾತನಾಡಿ, ಶೈಕ್ಷಣಿಕ ಮಟ್ಟದಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ವೃದ್ಧಿಸಲು ತುಮಕೂರು ವಿಶ್ವವಿದ್ಯಾನಿಲಯ ಶ್ರಮಿಸುತ್ತಿದೆ. ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳ ಜ್ಞಾನವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಲೂ ಇನ್ಫೋಸಿಸ್ ಸಂಸ್ಥೆಯ ಸಹಯೋಗದಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು…

Read More

ಚಿಕ್ಕನಾಯಕನಹಳ್ಳಿ ಸರ್ಕಾರದಿಂದ ಮಹಿಳೆಯರನ್ನು ಸಬಲರನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಸಂಜೀವಿನಿ ಸ್ವಸಹಾಯ ಸಂಘದ ಮೂಲಕ ಮಹಿಳೆಯರಿಗೆ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಅವರನ್ನು ಸ್ವ ಉದ್ಯೋಗ ಕಲ್ಪಿಸಿಕೊಟ್ಟಿರುವುದು ಸಂತೋಷದ ವಿಷಯ ಎಂದು ಕಾನೂನು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ತಿಳಿಸಿದರು. ನಗರದಲ್ಲಿ ಗುರುವಾರದಂದು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲಾಭಿವೃದ್ಧಿ ಉದ್ಯೋಗಶೀಲತೆ ಜೀವನೋಪಾಯ ಇಲಾಖೆಯ ಸಹಯೋಗದಲ್ಲಿ ತಾಲ್ಲೂಕಿನ ತೀನಂಶ್ರೀ ಭವನದಲ್ಲಿ “ವಿಶೇಷ ಕೇಂದ್ರೀಯ ನೆರವು ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಸ್ತ್ರೀ ಸಾಮಥ್ರ್ಯ ಯೋಜನೆಯ ಪಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದಲ್ಲಿ ಬರುವ ಹೆಚ್ಚು ಹೆಚ್ಚು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನಿರ್ವಹಣೆಗೆ ಪಾತ್ರರಾಗಿ ಎಂದರು. ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಸಂತ ಕುಮಾರ್ ಮಾತನಾಡಿ, ಸ್ತ್ರೀ ಸಾಮಥ್ರ್ಯ ಯೋಜನೆಯಡಿ ಸಂಘದ ಎಲ್ಲಾ ಮಹಿಳೆಯರಿಗೆ ಸಾಲ ಸೌಲಭ್ಯಗಳನ್ನು ಒದಗಿಸಿ ಕೊಡುವ ಮೂಲಕ ಮಹಿಳೆಯರನ್ನು ಸಬಲರನ್ನಾಗಿ ಹಾಗೂ ಸದೃಢರನ್ನಾಗಿ ಮಾಡಬೇಕು…

Read More

ತುರುವೇಕೆರೆ ಕಾಂಗ್ರೇಸ್ ಪಕ್ಷ ದೇಶದ ಎಲ್ಲ ಕಡೆಗಳಲ್ಲಿ ಠೇವಣಿ ಕಳೆದುಕೊಳ್ಳುತ್ತಿದ್ದು ದಿವಾಳಿ ಹಂತಕ್ಕೆ ಹೋಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಪಟ್ಟಣದ ಹಿರಣ್ಣಯ್ಯ ಬಯಲು ರಂಗ ಮಂದಿರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ವಿಜೆಯ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷ ನಮಗೆ ಸರಿ ಸಾಟಿ ಅಲ್ಲ, ದೇಶದ ಹಲವು ಕಡೆಗಳಲ್ಲಿ ನೆಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮಕಾಡೆ ಮಲಗಿದೆ. ಕಾಂಗ್ರೆಸ್ ರಾಹುಲ್‍ಗಾಂದಿ ನಮ್ಮ ನಾಯಕ ಮೋದಿ ಮುಂದೆ ಯಾವ ಲೆಕ್ಕ, ದೇಶ ಭಕ್ತಯಾಗಿರುವ ಮೋದಿಜೀಯವರನ್ನು ಇಡೇ ಜಗತ್ತೇ ಕೊಂಡಾಡುತ್ತಿದೆ, 8 ವರ್ಷದಲ್ಲಿ ಅದಿಕಾರದ ಅವದಿಯಲ್ಲಿ 1 ದಿನ ವಿಶ್ರಾಂತಿ ಪಡೆಯದೆ ದೇಶದ ಅಬಿವೃದ್ದಿಗೆ ಕೆಲಸ ಮಾಡುತ್ತಿದ್ಧಾರೆ, ನಮಗೆ ಅವರೇ ಅದರ್ಶ ಅದನ್ನು ಕಾರ್ಯಕರ್ತರು ಮನದಲ್ಲಿ ಇಟ್ಟುಕೊಂಡು ದೇಶಕ್ಕೆ ಗೌರವ ಕೊಡುವಂತ ಕೆಲಸ ಮಾಡಬೇಕು ಎಂದು ನೀಡಿದರು. ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ ಮಸಾಲೆ ಇಲ್ಲದ ಮನೆಯಂತೆ ಎಲ್ಲ ಮನಸ್ಸಿನಲ್ಲಿಯೂ ಸಹ…

Read More

ತುಮಕೂರು ಆರೋಗ್ಯ ವರ್ಧಕ ಮತ್ತು ನೈಸರ್ಗಿಕ ಉಂಡೆ ಕೊಬ್ಬರಿ ಬೆಲೆ ತೀವ್ರ ಕುಸಿತದ ಹಿನ್ನೆಲಯಲ್ಲಿ ಕಳೆದ ಇಪ್ಪತ್ತೆಂಟು ದಿನಗಳಿಂದ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ, ತಿಪಟೂರು ಅಡಿಯಲ್ಲಿ ಕ್ವಿಂಟಾಲ್‍ಗೆ 20,000 ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಮತ್ತು ರಾಜ್ಯ ಸರ್ಕಾರ ರೂ.5,000 ಪ್ರೋತ್ಸಾಹ ಧನವನ್ನು ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಹಾಗೂ ಅನಿರ್ಧಿಷ್ಟಾವಧಿ ಧರಣಿಯನ್ನು ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿ ಎದುರು ನಡೆಸಲಾಗುತ್ತಿದೆ. ಆಡಳಿತ ಪಕ್ಷದ ಉಸ್ತುವಾರಿ ಸಚಿವರಾಗಲಿ, ಈ ನೆಲದಿಂದ ಆರಿಸಿ ಹೋಗಿ, ಮಂತ್ರಿಗಳಾಗಿರುವ ಬಿ.ಸಿ.ನಾಗೇಶ್ ಹಾಗೂ ಜೆ.ಸಿ. ಮಾಧುಸ್ವಾವಿಯವರಾಗಲೀ ಮಧ್ಯಪ್ರವೇಶ ಮಾಢಿ, ಹೋರಾಟ ಸ್ಥಳಕ್ಕೆ ಬಂದು ಅಧಿಕಾರದಲ್ಲಿ ಇರುವಾಗಲೇ ಸಮಸ್ಯೆ ಇತ್ಯರ್ಥ ಮಾಡಲು ಪ್ರಯತ್ನಿಸದೆ ಇರುವುದು ಜಿಲ್ಲೆಯ ರೈತರಿಗೆ ದೊಡ್ಡ ದ್ರೋಹ ಬಗೆದಂತಾಗಿದೆ. ಅಷ್ಟು ಮಾತ್ರವಲ್ಲ, ಆಡಳಿತ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವಾರು ರಾಜ್ಯ ಮುಖಂಡರನ್ನು ತಿಪಟೂರಿಗೆ ಚುನಾವಣಾ ಪ್ರಚಾರಕ್ಕೆ ಕರೆಸಿ ರೈತರ ಸಮಸ್ಯೆ ಆಲಿಸಬೇಕಾಗುತ್ತದೆ ಎಂದು ವಿಜಯ ಸಂಕಲ್ಪ…

Read More

ತುಮಕೂರು ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಭಯಪಡದೆ ಧೈರ್ಯವಾಗಿ ಪರೀಕ್ಷೆ ಎದುರಿಸುವಂತೆ ಮಾಜಿ ಶಿಕ್ಷಣ ಸಚಿವ ಹಾಗೂ ಶಾಸಕ ಎಸ್. ಸುರೇಶ್‍ಕುಮಾರ್ ಹೇಳಿದರು. ಮಾ. 31 ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ನಗರದ ಸಿದ್ದಗಂಗಾ ಮಠದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಸಿದ್ದಗಂಗಾ ಮಠ ಸ್ಫೂರ್ತಿಯ ಕೇಂದ್ರ. ಇಲ್ಲಿರುವ ಮಕ್ಕಳಿಗೆ ನಡೆದಾಡುವ ದೇವರ ಆಶೀರ್ವಾದ ಇದೆ. ಯಾವುದೇ ಕಾರಣಕ್ಕೂ ಪರೀಕ್ಷೆ ಬಗ್ಗೆ ಭಯ ಪಡಬಾರದು. ಧೈರ್ಯದಿಂದ ಪರೀಕ್ಷೆ ಬರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನು 10 ದಿನ ಬಾಕಿ ಇದೆ. ಈ 10 ದಿನ ಮಕ್ಕಳಿಗೆ ಅತ್ಯಮೂಲ್ಯ. ಈ ಸಮಯವನ್ನು ವ್ಯರ್ಥ ಮಾಡದೆ ಕಾಳಜಿಯಿಂದ ಚೆನ್ನಾಗಿ ಓದಬೇಕು. ಪರೀಕ್ಷೆ ಬಗ್ಗೆ ಭಯಪಟ್ಟರೆ ಓದಿರುವುದೂ ಸಹ ಮರೆತು ಹೋಗುತ್ತದೆ ಎಂದರು. ಸಹಜವಾಗಿ ವಿದ್ಯಾರ್ಥಿಗಳಲ್ಲಿ ನಾವು ಓದಿರುವುದು ಪರೀಕ್ಷೆಗೆ ಬರುತ್ತದೋ ಇಲ್ಲವೋ, ಓದಿರುವುದೆಲ್ಲ ಮರೆತು ಹೋಗುತ್ತದೆ ಎಂಬ ಭಯ ಇರುತ್ತದೆ. ನಾನು ಈಗಾಗಲೇ ಸುಮಾರು 36 ಶಾಲೆಗಳಿಗೆ…

Read More

ತುಮಕೂರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್ ಅವರಿಗೆ ಟಿಕೇಟ್ ನೀಡಬೇಕೆಂದು ಡಾ.ರಫೀಕ್ ಅಭಿಮಾನಿ ಬಳಗದ ಮುಖಂಡರು ಕಾಂಗ್ರೆಸ್ ಪಕ್ಷದ ಹೈಕಮಾಂಡ್‍ನನ್ನು ಒತ್ತಾಯಿಸಿದ್ದಾರೆ. ಹೊಸದಾಗಿ ತುಮಕೂರು ನಗರ ವಿಧಾನಸಭಾ ಕ್ಷೇತ್ರ ರಚನೆಯಾದ ನಂತರ 2008ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ರಫೀಕ್ ಅಹಮದ್,ಅತಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು.ಆದರೂ ಕ್ಷೇತ್ರದಲ್ಲಿಯೇ ನಿರಂತರವಾಗಿ ಜನಸಂಪರ್ಕದಲ್ಲಿದ್ದ ಪರಿಣಾಮ 2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. 2018ರಲ್ಲಿ ಅತಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದಾರೆ. ಹಾಗಾಗಿ 2023ರ ಮೇ ನಲ್ಲಿ ನಡೆಯುವ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಡಾ.ರಫೀಕ್ ಅಹಮದ್ ಅವರಿಗೆ ಟಿಕೇಟ್ ನೀಡಬೇಕೆಂಬುದು ನಮ್ಮಗಳ ಆಗ್ರಹವಾಗಿದೆ. ಇಂದು ರಾಷ್ಟ್ರನಾಯಕರು,ರಾಜ್ಯ ನಾಯಕರು ತುಮಕೂರು ನಗರದಲ್ಲಿ ನಡೆದಿರುವ ಅಭಿವೃದ್ದಿ ಕಾಮಗಾರಿಗಳು, ಅದರಲ್ಲಿಯೂ ಸ್ಮಾರ್ಟ್‍ಸಿಟಿ ಯೋಜನೆಯನ್ನು ತಮ್ಮದೆಂದು ಬೀಗುತ್ತಿದ್ದಾರೆ.ಆದರೆ ಸ್ಮಾರ್ಟ್‍ಸಿಟಿ ಯೋಜನೆಯ ಮೂಲ ಕಾರಣಕರ್ತರು ಡಾ.ರಫೀಕ್ ಅಹಮದ್,ಅವರು ಶಾಸಕರಾಗಿದ್ದ ಕಾಲದಲ್ಲಿ ಸರಕಾರದ ನಿಗಧಿ ಪಡಿಸಿದ ಮಾನದಂಡಗಳನ್ನು ಅನುಸರಿಸಿ,ಸರಕಾರಕ್ಕೆ ಮನದಟ್ಟು ಮಾಡಿಕೊಟ್ಟ ಪರಿಣಾಮ…

Read More

ತುಮಕೂರು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನಾಂಕ ಘೋಷಣೆಗೆ ಮುನ್ನವೇ ರಂಗೇರಿದ್ದು, ಭಾರತೀಯ ಜನತಾ ಪಾರ್ಟಿ ಮಾ. 21 ರಂದು 3 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದೆ. ನಾಳೆ ಬೆಳಿಗ್ಗೆಯಿಂದ ಸಂಜೆವರೆಗೂ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್. ರವಿಶಂಕರ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.ಇಂದು ಬೆಳಿಗ್ಗೆ 11 ಗಂಟೆಗೆ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆ ಸಂಚರಿಸಲಿದೆ. ನಂತರ ರ್ಯಾಲಿ ಮತ್ತು ಸಾರ್ವಜನಿಕ ಸಭೆ ಸಹ ನಡೆಯಲಿದೆ. ಈ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಆರ್. ಅಶೋಕ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ಮತ್ತಿತರ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದರು. ತುರುವೇಕೆರೆ ಕ್ಷೇತ್ರದಿಂದ ಮಧ್ಯಾಹ್ನ 1 ಗಂಟೆಗೆ ವಿಜಯ ಸಂಕಲ್ಪ ಯಾತ್ರೆಯು ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬೆಳ್ಳಾವಿಗೆ ಆಗಮಿಸಿ ಯಡಿಯೂರಪ್ಪನವರ ನೇತೃತ್ವದಲ್ಲಿ ಈ ಯಾತ್ರೆ…

Read More

ತುಮಕೂರು ಭಾರತದಲ್ಲಿ ಋತುಮಾನದ ಇನ್‍ಪ್ಲೂಎನ್‍ಜಾ ಪ್ಲೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್‍ಪ್ಲೂಎನ್‍ಜಾ ನಿಯಂತ್ರಣ ಹಾಗೂ ತಡೆಗಟ್ಟುವ ಚಟುವಟಿಕೆಗಳನ್ನು ಹೆಚ್ಚಿಸುವಂತೆ ಹಾಗೂ ಜಿಲ್ಲೆಯ ಸಾರ್ವಜನಿಕರಲ್ಲಿ ಫ್ಲೂ ಕುರಿತ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ತುಮಕೂರು ಡಿಹೆಚ್‍ಓ ಮತ್ತು ಟಿಹೆಚ್‍ಓ ಅವರಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ರಾಜ್ಯಗಳಲ್ಲಿ ಈ ರೋಗವು ಹರಡುತ್ತಿದ್ದು, ಈ ಸಾಂಕ್ರಾಮಿಕ ರೋಗ ಭಾದಿತ ವ್ಯಕ್ತಿಯು ಕೆಮ್ಮುವಾಗ ಅಥವಾ ಸೀನುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ರೋಗ ಹರಡಬಹುದಾಗಿದ್ದು, ಅದರಲ್ಲೂ 15 ವರ್ಷ ಒಳಗಿನ ಹಾಗೂ 65 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಪ್ಲೂ ಬರುವ ಸಾಧ್ಯತೆ ಹೆಚ್ಚಿದ್ದು, ಕೆಮ್ಮು, ನೆಗಡಿ ಇದ್ದವರು ಮಾಸ್ಕ್ ಧರಿಸುಕೊಂಡು, ಸ್ವಚ್ಚತೆ ಕಾಪಾಡಿಕೊಳ್ಳಬೇಕು, ಮುನ್ನೆಚ್ಚರಿಕೆ ವಹಿಸಬೇಕು, ಆರೋಗ್ಯ ಕಾರ್ಯಕರ್ತೆಯರು ಪ್ಲೂ ಲಸಿಕೆಯನ್ನು ಪಡೆಯುವುದನ್ನು ಕಡ್ಡಾಯ ಮಾಡಬೇಕೆಂದು ತಿಳಿಸಿದರು. ಚುನಾವಣಾ ಸಮೀಪಿಸಿದಂತೆ…

Read More

ತುಮಕೂರು: ಡಬಲ್ ಎಂಜಿನ್ ಸರಕಾರ ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿ,ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ತಾಲೂಕಿನ ಬಳ್ಳಗೆರೆ ಬಳಿ ನಡೆದ ಬಿಜೆಪಿ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಭೇಟಿ ಬಜಾವೋ, ಭೇಟಿ ಪಡಾವೋ ಸೇರಿದಂತೆ ಹಲವಾರು ಯೋಜನೆಗಳ ಮೂಲಕ ನಾರಿಶಕ್ತಿಯ ಅಭ್ಯುದಯಕ್ಕೆ ಕಂಕಣ ಬದ್ದರಾಗಿ ನರೇಂದ್ರಮೊದಿ ನೇತೃತ್ವದ ಸರಕಾರ ದುಡಿಯುತ್ತಿದೆ ಎಂದರು. ರಾಜ್ಯದಲ್ಲಿ ಹೆಣ್ಣುಮಕ್ಕಳು ಕಡಿಮೆ ಆಗುತ್ತಿದ್ದಾರೆ ಎನ್ನುವುದನ್ನು ಗಮನಿಸಿ 2008 ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದರು.ಹೆಣ್ಣುಮಕ್ಕಳ ಬಗ್ಗೆ ಚಿಂತಿಸುವ ಸರಕಾರ ಎಂದರೆ ಅದು ಬಿಜೆಪಿ ಮಾತ್ರ, ಮೋದಿ ಸರಕಾರ ಉದ್ಯೋಗಸ್ಥ ಮಹಿಳೆಯರಿಗೆ 26 ವಾರಗಳ ಹೆರಿಗೆ ರಜೆ ಮಾಡಿದ್ದಾರೆ, ಆರೋಗ್ಯಕ್ಕಾಗಿ ಆಯುμÁ್ಮನ್ ಕಾರ್ಡ್ ಅನ್ನು ಜಾರಿಗೆ ತಂದಿದೆ.ಇಲ್ಲಿರುವ ಶಾಸಕರಿಗೆ ಜನರ ಆರೋಗ್ಯದ ಕಾಳಜಿ ಇದೆಯೋ ಇಲ್ಲವೋ ಗೊತ್ತಿಲ್ಲ, ಸುರೇಶ್ ಗೌಡರು ಶಾಸಕರಾಗಿದ್ದರೆ ಮನೆ ಮನೆಗೆ ಯೋಜನೆ ತಲುಪಿಸುತ್ತಿದ್ದರು,ದೇಶದ ಎಲ್ಲ…

Read More

ತುಮಕೂರು ಅಧ್ಯಯನಗಳ ಮೂಲಕ ಅನೇಕ ಬಿಕ್ಕಟ್ಟುಗಳು ಮತ್ತು ಸಾಮಾಜಿಕ ತೊಂದರೆಗಳನ್ನು ಸವಾಲಿನಂತೆ ಎದುರಿಸಿ ದೂರಮಾಡಬೇಕು ಎಂದು ವಿಮರ್ಶಕ ಪ್ರೊ. ಕೇಶವಶರ್ಮ ಕೆ. ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ವಿಭಾಗ, ಮಹಿಳಾ ಸಬಲೀಕರಣ ಘಟಕ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ‘ಸಮಕಾಲೀನ ಮಹಿಳೆ: ಸವಾಲು ಮತ್ತು ಸಾಧ್ಯತೆಗಳು’ ವಿಷಯದ ಕುರಿತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದಿನಿಂದಲೂ ನಮ್ಮ ಮನಸ್ಸು ಮತ್ತು ಪ್ರಜ್ಞೆಯನ್ನು ನಿಯಂತ್ರಿಸಲಾಗಿದೆ. ಚರಿತ್ರೆಯ ಉದ್ದಗಲಕ್ಕೂ ಹೆಣ್ಣು ಗಂಡು ಎಂಬ ಮನೋಭಾವವನ್ನು ಒಂದು ಅಚ್ಚಿನ ಎರಕದಲ್ಲಿ ಹೊಯ್ದು ಇಡಲಾಗಿದೆ. ಲಿಂಗತಾರತಮ್ಯ ನಮ್ಮನ್ನು ಆವರಿಸಿಕೊಂಡಿದೆ. ನಮಗೆ ಸಾಮಾನ್ಯ ಜ್ಞಾನದ ಅವಶ್ಯಕತೆ ಇದೆ ಎಂದರು. ಪ್ರತಿ ಗಂಡು ಮತ್ತು ಹೆಣ್ಣಿನ ಸಂಬಂಧದ ನಡುವೆ ಮೌನ ಪ್ರಭಲವಾಗಿ ಆವರಿಸದೆ. ಅನೇಕ ಸಾಮಾಜಿಕ ಸವಾಲುಗಳನ್ನು ಸಕಾರಾತ್ಮಕ ಮನೋಭಾವನೆಯಿಂದ ಚರ್ಚಿಸಿ ದೂರಮಾಡಬೇಕಾಗಿದೆ ಎಂದು ಹೇಳಿದರು. ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಮಾತನಾಡಿ, ಇಂದಿನ…

Read More