ತುಮಕೂರು ಚದುರಂಗ, ಶತ್‍ರಂಜ್ ಎಂದು ಕರೆಯಲ್ಪಡುವ ಚೆಸ್ ಆಟ ಭಾರತೀಯ ಮೂಲದ್ದು,ಆ ನಂತರ ಅದು ಬ್ರಿಟಿಷರ ಮೂಲಕ ವಿಶ್ವಕ್ಕೆ ಪರಿಚಯವಾಯಿತು ಎಂದು ಪಾವಗಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಜಪಾನಂದಜೀ ತಿಳಿಸಿದರು. ನಗರದ ಶ್ರೀದೇವಿ ಮೆಡಿಕಲ್ ಕಾಲೇಜು ಆಸ್ಪತ್ರೆ ಅಡಿಟೋರಿಯಂನಲ್ಲಿ ನ್ಯೂ ತುಮಕೂರು ಡಿಸ್ಟ್ರಿಕ್ ಚೆಸ್ ಅಸೋಸಿಯೇಷನ್ ಮತ್ತು ಎಂ.ಎಂ.ಚೆಸ್ ಡೆವಲಪ್‍ಮೆಂಟ್ ಟ್ರಸ್ಟ್, ಚೆಸ್ ಫೆಡರೇಷನ್ ಅಫ್ ಪಿಸಿಕಲಿ ಡಿಸೆಬಲ್ಡ್(ಸಿ.ಎಫ್.ಪಿ.ಡಿ.) ಅವರ ಸಹಯೋಗದಲ್ಲಿ ಆಯೋಜಸಿದ್ದ 3ನೇ ರಾಷ್ಟ್ರೀಯ ವಿಶೇಷಚೇತನರ ಚೆಸ್ ಚಾಂಪಿಯನ್‍ಶಿಪ್-2022 ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಗತಿ ಸಂಪಾದಕ ಹಾಗೂ ರೆಡ್‍ಕ್ರಾಸ್ ಸಂಸ್ಥೆಯ ರಾಷ್ಟ್ರೀಯ ಸದಸ್ಯ ಎಸ್.ನಾಗಣ್ಣ ಮಾತನಾಡಿ,2018ರಲ್ಲಿ ನಗರದ ಬಂಡಿಮನೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 7 ವರ್ಷದ ಒಳಗಿನ ಚೆಸ್ ಚಾಂಪಿಯನ್ ಕ್ರೀಡಾಕೂಟ ವಿಶೇಷಚೇತನರ ಪಂದ್ಯಾವಳಿ ಆಯೋಜನೆಗೆ ಪ್ರೇರಣೆ. ಮಧುಕರ್ ಮತ್ತು ಅವರ ತಂಡ ಹಾಗೂ ಆನಂದಬಾಬು ಮತ್ತು ತಂಡದ ಅವಿರತ ಶ್ರಮದ ಫಲವಾಗಿ ನಾಲ್ಕು ದಿನಗಳ ಈ ಚಾಂಪಿಯನ್‍ಶಿಫ್ ಆಯೋಜನೆಗೊಂಡಿದೆ. ಜೀವನವೂ ಒಂದು ರೀತಿ ಚೆಸ್ ಆಟವಿದ್ದಂತೆ, ರಣರಂಗದಲ್ಲಿ ಅನುಸರಿಸುವ…
Author: News Desk Benkiyabale
ತುಮಕೂರು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪ್ರಕಟಣೆ -2023 ಸಂಬಂಧ ನವೆಂಬರ್ 9, 2022ರಿಂದ ಡಿಸೆಂಬರ್ 8, 2022 ರವರೆಗೆ ಸಾರ್ವಜನಿಕರಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರರು ಮತದಾರರಿಂದ ಸ್ವೀಕೃತಗೊಳ್ಳುವ ಎಲ್ಲ ಅರ್ಜಿ ನಮೂನೆಗಳನ್ನು ಪ್ರತಿನಿತ್ಯ ಪರಿಶೀಲಿಸಿ ಇತ್ಯರ್ಥಗೊಳಿಸಬೇಕು ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ತುಮಕೂರು ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರೂ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕಾರ್ಯದರ್ಶಿಗಳೂ ಆದ ಪಂಕಜ್‍ಕುಮಾರ್‍ಪಾಂಡೆ(ಐಎಎಸ್) ಅವರು ಅಧಿಕಾರಿಗಳಿಗೆ ಸೂಚಿಸಿದರು. ಅವರಿಂದು ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಇಂದು ನಡೆದ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪ್ರಕಟಣೆ -2023ರ ಸಂಬಂಧ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನ್ನಾಡುತ್ತಾ, ದೋಷರಹಿತ ಮತದಾರರ ಪಟ್ಟಿ ಸಿದ್ದತೆಗೆ ಆದ್ಯತೆ ನೀಡಬೇಕು. ತುಮಕೂರು ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ದೂರು ಬರಬಾರದು.ಚುನವಣಾ ಅಯೋಗದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಯಾವುದೇ…
ತುಮಕೂರು ರದ್ದಾಗಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಮುಂದುವರಿಸಲು ಮಧ್ಯಸ್ಥಿಕೆ ವಹಿಸುವಂತೆ ರಾಷ್ಟ್ರಪತಿಗಳನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಅಧ್ಯಕ್ಷ ತಾಜುದ್ದೀನ್ ಷರೀಫ್ ಹಾಗೂ ಜಂಟಿ ಕಾರ್ಯದರ್ಶಿ ಉಮರ್ ಫಾರೂಕ್ ಅವರು ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಿದ್ದಾರೆ. ಅವರು ಮನವಿ ಪತ್ರದಲ್ಲಿ ರಾಷ್ಟ್ರೀಯ ವಿದ್ಯಾರ್ಥಿವೇತನ ಪೆÇೀರ್ಟಲ್‍ನ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆಯಲ್ಲಿ ಬರುವ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಕೊಡಮಾಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಈ ವರ್ಷದಿಂದ ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡ ಕೇಂದ್ರ ಸರ್ಕಾರದ ನಡೆಯ ಬಗ್ಗೆ ಕರ್ನಾಟಕ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದರು. 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳು ಆರ್ಟಿಇ ಅಡಿಯಲ್ಲಿ ಬರುವ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುತ್ತಿದ್ದು, ಅವರಿಗೆ ಸ್ಕಾಲರ್ಶಿಪ್ ನ ಅಗತ್ಯತೆ ಬೀಳುವುದಿಲ್ಲ ಹಾಗಾಗಿ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ, ಇದು ಆರ್ಟಿಇ ಕಾಯ್ದೆಯ ತಪ್ಪು ವ್ಯಾಖ್ಯಾನವಾಗಿದೆ, ಮೂಲಭೂತ ಹಕ್ಕಾದ ಆರ್‍ಟಿಇ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗುವ ಸ್ಕಾಲರ್ಶಿಪ್ ಅನ್ನು ಹೆಚ್ಚುವರಿ…
ತುಮಕೂರು ನಗರದ ಅಮಾನಿಕೆರೆ ಮುಂಭಾಗದಲ್ಲಿರುವ ಶ್ರೀ ರಾಮನಗರದ ಸರ್ಕಾರಿ ಶಾಲೆಯು ಶಿಥಿಲಾವಸ್ತೆಯಲ್ಲಿರುವುದನ್ನು ಮನಗಂಡು ತುಮಕೂರು ನಗರದ ಸ್ಮಾರ್ಟ್ ಸಿಟಿಯ ಶಾಸಕರಾದ ಶ್ರೀ ಜಿ ಬಿ ಜ್ಯೋತಿ ಗಣೇಶ್ ರವರಿಂದ 60 ಲಕ್ಷ ರೂ ವೆಚ್ಚದಲ್ಲಿ ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ 19ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ರೂಪಶ್ರೀ ಶೆಟ್ಟಳ್ಳಯ್ಯ , ಮಹಾನಗರ ಪಾಲಿಕೆ ಆಯುಕ್ತರಾದ ಯೋಗಾನಂದ , ಉದ್ಯಮಿಗಳು ಸಮಾಜ ಸೇವಕರು ಹಾಗೂ ಭಾಜಪದ ಮುಖಂಡರಾದ ಎಸ್.ಪಿ ಚಿದಾನಂದ್ , ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಬಶೀರ್ ಅಹ್ಮದ್ , ಬಿ .ಎಲ್ .ರವೀಂದ್ರ ಕುಮಾರ್ , ಬಂಬೂ ಮೋಹನ್, ಎಸ್ , ರಾಮಚಂದ್ರರಾವ್, ಶಾಲೆಯ ಮುಖ್ಯ ಶಿಕ್ಷಕರಾದ ರಂಗನಾಥ್ , ಬಿಇಓಹನುಮ ನಾಯಕ್ , ಪ್ರತಾಪ್ ಮಲ್ಲಣ್ಣ ,ಸುಬ್ಬಣ್ಣ , ಬಸವರಾಜು , ಕಿರಣ್, ಚಂದ್ರಶೇಖರ್ , ವಿಷ್ಣು , ರಾಘವೇಂದ್ರ , ವೆಂಕಟೇಶ್, ವಾಸು , ಇಂಜಿನಿಯರ್ ಸಿದ್ದಪ್ಪ,…
ತುಮಕೂರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ 123 ಸ್ಥಾನಗಳು ಬಂದರೆ ದಲಿತರನ್ನು ಮುಖ್ಯಮಂತ್ರಿ ಮಾಡಲು ನಾವು ಸಿದ್ದರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. 2023ರ ಚುನಾವಣೆಯಲ್ಲಿ ಜೆಡಿಎಸ್ 123 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರೆ ದಲಿತರನ್ನು ಮುಖ್ಯಮಂತ್ರಿ ಏಕೆ ಆಗಬಾರದು. ನಾವಂತೂ ದಲಿತರನ್ನು ಮುಖ್ಯಮಂತ್ರಿ ಮಾಡಲು ತಯಾರಿದ್ದೇವೆ ಎಂದರು. ನಗರದ ದಿಬ್ಬೂರಿನಲ್ಲಿ ವಾಸ್ತವ್ಯ ಹೂಡಿ ಬೆಳಿಗ್ಗೆ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಮೀಸಲಾತಿ ಇಲ್ಲದೇ ಇದ್ದಾಗಲೂ ದಲಿತರನ್ನು ಮುಖಂಡರನ್ನಾಗಿ ಮಾಡಿದ್ದರು. ಅದನ್ನು ನಾವ್ಯಾರೂ ಮರೆಯಲು ಆಗುವುದಿಲ್ಲ ಎಂದು ಹೇಳಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ದಲಿತ ಕುಟುಂಬದ ಮಹಿಳೆಗೆ ಚಿಕಿತ್ಸೆ ಕೊಡಿಸಿ ನಮ್ಮ ಮನೆಯಲ್ಲಿಯೇ ಇರಿಸಿಕೊಂಡಿದ್ದೆ. ಈ ಕೆಲಸ ಯಾವ ಮುಖ್ಯಮಂತ್ರಿ ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು. ದಲಿತರ ಬಗ್ಗೆ ಕಾಳಜಿ ಇದೆ ಎಂದು ಮೇಲ್ನೋಟಕ್ಕೆ…
ತುಮಕೂರು ಪಂಚ ಯೋಜನೆಗಳನ್ನು ಮುಂದಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಜೆಡಿಎಸ್ ಪಂಚರತ್ನ ಯಾತ್ರೆಗೆ ಕಲ್ಪತರುನಾಡಿನಲ್ಲಿ ಭವ್ಯ ಸ್ವಾಗತ ದೊರೆಯಿತು. ಶಿಕ್ಷಣವೇ ಅಧುನಿಕ ಶಕ್ತಿ, ವಸತಿಯ ಆಸರೆ, ಆರೋಗ್ಯ ಸಂಪತ್ತು, ರೈತ ಚೈತನ್ಯ, ಯುವ ನವ ಮಾರ್ಗ ಹಾಗೂ ಮಹಿಳಾ ಸಬಲೀಕರಣ ಈ ಪಂಚ ಯೋಜನೆ ಜಾರಿಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡಿರುವ ಜೆಡಿಎಸ್ ಪಂಚರತ್ನ ಯಾತ್ರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಗಿಸಿ ಇಂದು ಕಲ್ಪತರುನಾಡು ಪ್ರವೇಶಿಸುತ್ತಿದ್ದಂತೆ ನಗರದ ಹೊರವಲಯದ ಜಾಸ್‍ಟೋಲ್ ಬಳಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಅಭೂತ ಪೂರ್ವ ಸ್ವಾಗತ ನೀಡಿದರು. ಜಾಸ್‍ಟೋಲ್‍ನಿಂದ ಸಿದ್ದಗಂಗಾ ಮಠಕ್ಕೆ ಪಂಚರತ್ನ ರಥಯಾತ್ರೆ ತೆರಳಿತು. ಸಿದ್ದಗಂಗಾ ಮಠದಲ್ಲಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕರುಗಳು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಶ್ರೀಗಳ ಗದ್ದುಗೆ ದರ್ಶನ ಪಡೆದ ಬಳಿಕ ಆರಂಭಗೊಂಡ ಪಂಚರತ್ನ ರಥಯಾತ್ರೆ ಕ್ಯಾತ್ಸಂದ್ರ, ಬಟವಾಡಿ, ಗಂಗೋತ್ರಿ ರಸ್ತೆ ಸೇರಿದಂತೆ ನಗರದ…
ತುಮಕೂರು ಬಾಬಾ ಸಾಹೇಭ್ ಡಾ.ಬಿ.ಆರ್.ಅಂಬೇಡ್ಕರ್‍ರವರ 66ನೇ ಪರಿನಿಬ್ಬಾಣದ ದಿನದ ಅಂಗವಾಗಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಆಶಯಗಳನ್ನು ನಾಶಮಾಡುತ್ತಿರುವ ಆರ್‍ಎಸ್‍ಎಸ್-ಬಿಜೆಪಿ ದುರಾಡಳಿತದ ವಿರುದ್ಧ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತರ ಸಾಂಸ್ಕøತಿಕ ಪ್ರತಿರೋಧ ವ್ಯಕ್ತಪಡಿಸಲು ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶವನ್ನು ಡಿಸೆಂಬರ್6ರಂದುಬೆಳಿಗ್ಗೆ 11ಗಂಟೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಹಿರಿಯ ಮುಖಂಡರು ಹಾಗೂ ಚಿಂತಕ ಕೆ.ದೊರೈರಾಜ್ ತಿಳಿಸಿದರು. ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಈ ಸಂದರ್ಭದಲ್ಲಿ, ದೇಶ ಎಲ್ಲಾ ರಂಗಗಳಲ್ಲೂ ಅಧಃಪತನದತ್ತ ಸಾಗುತ್ತಿರುವುದನ್ನು ನಾವೆಲ್ಲಾ ಗಮನಿಸುತ್ತಿದ್ದೇವೆ. ಸಂವಿಧಾನದ ಆಶಯಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿವೆ. ಸಾಮಾಜಿಕ ನ್ಯಾಯ ಕನಸಿನ ಗಂಟಾಗಿದೆ. ನಿರುದ್ಯೋಗ ಯುವಜನಾಂಗವನ್ನು ಹತಾಶೆಗೆ ದೂಡಿದೆ. ಕೋಮು ರಾಜಕೀಯ ವಿಜೃಂಭಿಸುತ್ತಿದೆ. ನ್ಯಾಯ ಕೇಳುವವರು ದೇಶ ದ್ರೋಹಿಗಳಾಗುತ್ತಿದ್ದಾರೆ. ಪ್ರಗತಿಪರತೆ, ಜಾತ್ಯತೀತತೆ ಅಪಹಾಸ್ಯಕ್ಕೊಳಗಾಗುತ್ತಿವೆ. ಸಮ ಸಮಾಜದ ಕನಸು ಬಿತ್ತಿದ ಬುದ್ಧ, ಬಸವ, ಅಂಬೇಡ್ಕರ್ ಮರೆಯಾಗಿ, ಕೋಮು ವಿಷದ ಗೋಡ್ಸೆ, ಸಾವರ್ಕಗಳು…
ತುಮಕೂರು ಇಂದಿನ ದಿನಗಳಲ್ಲಿ ಇಂಗ್ಲೀμï ಬಲ್ಲವನಾಗಿದ್ದರೆ ಮಾತ್ರ ಬೆಲೆ ಎಂಬಂತಾಗಿದೆ. ಆದರೆ ಭಾμÉ ಎಂಬುದು ಕೇವಲ ಸಂವಹನ ಮಾಧ್ಯಮವಾಗಿದ್ದು, ಭಾμÉಯ ಮೂಲ ಉದ್ದೇಶವೇ ಸಂವಹನವಾಗಿದೆ ಎಂದು ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಪೆÇ್ರ.ಅಭಿಪ್ರಾಯ ಪಟ್ಟರು. ತುಮಕೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಪೀಠ ಹಾಗೂ ಕನ್ನಡ ವಿಭಾಗ, ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕನ್ನಡ ಕಾವ್ಯ: ತ್ಯಾಗ ಭೋಗ ಸಮನ್ವಯ ದೃಷ್ಟಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾμÁವಾರು ಪ್ರಾಂತ್ಯಗಳನ್ನು ರೂಪಿಸುವಲ್ಲಿ ಕನ್ನಡಿಗರ ಹೋರಾಟ ಅತಿ ದೊಡ್ಡದು. ಇಡೀ ವಿಶ್ವದಲ್ಲಿ ಭಾμÉಯ ಕುರಿತಾಗಿ ದಿನಾಚರಣೆಯನ್ನು ಉತ್ಸವದ ರೀತಿಯಲ್ಲಿ ಆಚರಿಸುವ ಏಕೈಕ ಭಾμÉ ಕನ್ನಡ. 5 ಭಾμÉಗಳು ಮಾತ್ರ ದ್ರಾವಿಡ ಭಾμÉಗಳಲ್ಲ. ಇವುಗಳನ್ನು ಹೊರತುಪಡಿಸಿ ತುಳು, ಲಂಬಾಣಿ, ಹಾಗಯೇ ಆದಿವಾಸಿ ಭಾμÉಗಳು ಸಹ ದ್ರಾವಿಡ ಭಾμÉಗಳಿವೆ ಎಂದರು. ಕನ್ನಡ ಭಾμÉ 2000 ವರ್ಷಗಳ ಸಾಹಿತ್ಯ ಶ್ರೀಮಂತಿಕೆಯನ್ನು ಹೊಂದಿದೆ ಎಂಬುದು ಅಧಿಕೃತ ದಾಖಲೆಗಳ ಮೂಲಕ ಸಾಬೀತಾಗುತ್ತದೆ. ಆದರೆ ಅದಕ್ಕೂ…
ಕೊರಟಗೆರೆ: ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯು ಗ್ರಾಮೀಣ ಜನತೆಯ ಅಭಿವೃದ್ದಿಯ ದಿಕ್ಸೂಚಿ.. ಶಿಕ್ಷಣ, ಆರೋಗ್ಯ, ರೈತಚೈತನ್ಯ, ವಸತಿ, ಯುವಮಾರ್ಗ ಮತ್ತು ಮಹಿಳಾ ಕ್ಷೇತ್ರದ ಅಭಿವೃದ್ದಿಯೇ ಕುಮಾರಣ್ಣನ ಬಹುದೊಡ್ಡ ಕನಸು.. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ 24ಗಂಟೆಯೊಳಗೆ ಕುಮಾರಣ್ಣ ಮಹಿಳೆಯರ ಸ್ತ್ರೀಶಕ್ತಿಸಾಲ ಸಂಪೂರ್ಣ ಮನ್ನಾ ಮಾಡುತ್ತಾರೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು. ಕೊರಟಗೆರೆ ಪಟ್ಟಣದ ಕಾಮಧೇನು ಸಭಾಂಗಣದಲ್ಲಿ ಕೊರಟಗೆರೆ ಜಾತ್ಯಾತೀತ ಜನತಾದಳ ಪಕ್ಷದ ವತಿದಿಂದ ಬುಧವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯವೇ ಸಂಪತ್ತು, ರೈತ ಚೈತನ್ಯ, ವಸತಿಯ ಆಸರೆ, ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ ಪಂಚರತ್ನ ರಥಯಾತ್ರೆಯ ಪ್ರಮುಖ ಅಂಶವಾಗಿದೆ. ಕರ್ನಾಟಕ ರಾಜ್ಯದ ಪ್ರತಿಮನೆಗೂ ಸರಕಾರದ ಸೌಲಭ್ಯ ಕಲ್ಪಿಸುವುದು ಮತ್ತು ದುರ್ಬಲ ಸಮುಧಾಯದ ಒಳಿತು ಕಲ್ಪಿಸುವ ಮೂಲಕ ಕರ್ನಾಟಕ ಸಮಗ್ರ ಅಭಿವೃದ್ದಿಗೆ ಪರಿಪೂರ್ಣ ಪರಿಹಾರ ನೀಡುವುದೇ ಕುಮಾರಣ್ಣನ ಬಹುದೊಡ್ಡ ಕನಸಾಗಿದೆ ಎಂದು ಹೇಳಿದರು. ಕೊರಟಗೆರೆ ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹರಾಜು ಮಾತನಾಡಿ ಜೆಡಿಎಸ್ ಭದ್ರಕೋಟೆ ಕೊರಟಗೆರೆ…
ತುಮಕೂರು ಪ್ರಾಮಾಣಿಕತೆ ನೈಜ ಬದುಕಿನ ಸಂಪನ್ನತೆಯನ್ನು ಪೌರಾಣಿಕ ನಾಟಕಗಳು ಹೊಂದಿವೆ ಎಂದು ಕಲಾಶ್ರೀ ಎನ್.ಕೆ. ಮೋಹನ್‍ಕುಮಾರ್ ಹೇಳಿದರು. ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜಿಲ್ಲಾ ರಂಗಭೂಮಿ ಕಲಾ ಸಂಘ, ಬತ್ಸಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪುರಾಣ ಪ್ರಾತಿನಿಧಿಕ ನಾಟಕಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೆಳೆಯುತ್ತಿರುವ ವೈಚಾರಿಕ ಯುಗದಲ್ಲಿ ಕೇವಲ ಆರ್ಥಿಕ ಭದ್ರತೆಯಿಂದ ಮಾನವನ ಶಾರೀರಿಕ ಭೌತಿಕ ವಿಕಾಸವಾಗದು. ಪ್ರಸ್ತುತ ಮನುಷ್ಯನ ಜೀವನ ಶೈಲಿಯನ್ನು ನೋಡಿದರೆ ತಾನು ಮಾನಸಿಕವಾಗಿ ಆರೋಗ್ಯಪೂರ್ಣನಾಗಬೇಕಿದೆ. ಈ ನಿಟ್ಟಿನಲ್ಲಿ ಪುರಾಣ ಪರಂಪರೆಯ ಗ್ರಂಥಗಳ ಅವಲೋಕನ ಪ್ರಾತಿನಿಧಿಕ ರಾಮಾಯಣ ಮಹಾಭಾರತ ಅನೇಕ ಸತ್ಪಭರಿತ ನಾಟಕಗಳ ಕುರಿತಾದ ರಂಗಪ್ರಯೋಗ ಸಂಗೀತ ಕಾವ್ಯಗಳಲ್ಲಿ ತೊಡಗಿಸಿಕೊಂಡು ತಾನು ಅರ್ಪಣೆ ಮಾಡಿಕೊಂಡು ಪ್ರಾಮಾಣಿಕತೆಯಿಂದ ತಾನು ನಡೆದರೆ ಸಮಾಜದಲ್ಲಿ ವಿಶ್ವ ಶಾಂತಿ ಮಂತ್ರ ಸಂಪನ್ನವಾಗುತ್ತದೆ ಎಂದರು. ಡಾ, ಲಕ್ಷ್ಮಣ್‍ದಾಸ್ ಮಾತನಾಡಿ, ಪುರಾಣದ ಕಥಾವಸ್ತುವಿನಲ್ಲಿ ಬರಬಹುದಾದ ಪಾತ್ರಗಳು ಜಗತ್ತಿಗೆ ಹೀಗೆ ಇರಬೇಕೆಂದು ಹೇಳುತ್ತವೆ. ರಾಮಾಯಣದಲ್ಲಿ ರಾಮ, ಲಕ್ಷಣ, ಭರತ, ಶತ್ರುಘ್ನ ಅಂದರೆ…











