ತುಮಕೂರು ದೈನಂದಿನ ಜೀವನದಲ್ಲಿ ಆರೋಗ್ಯ ಕಾಳಜಿಯೂ ಕೂಡ ಒಂದು ಕರ್ತವ್ಯದಂತೆ ಭಾವಿಸಿದರೆ ಬಹುಪಾಲು ಆರೋಗ್ಯ ಸಮಸ್ಯೆಗಳಿಂದ ಹೊರ ಬರಬಹುದು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು. ಅವರು ಸಿದ್ಧಗಂಗಾ ನಗರ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತ ಪರೀಕ್ಷಾ ಘಟಕಕ್ಕೆ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿ 30 ರಿಂದ 40 ವರ್ಷ ದಾಟಿದ ಪ್ರತಿಯೊಬ್ಬ ವ್ಯಕ್ತಿಯೂ ವರ್ಷಕ್ಕೆ ಎರಡು ಬಾರಿಯಾದರೂ ಆರೋಗ್ಯ ಪರೀಕ್ಷೆಗೆ ಒಳಗಾಗಬೇಕು.ಜೊತೆಗೆ ತನ್ನ ಕುಟುಂಬದ ಇತರರಿಗೂ ಆರೋಗ್ಯ ಪರೀಕ್ಷೆಗೆ ಮುಂದಾಗುವಂತೆ ಪ್ರೇರೇಪಿಸಿ ಸ್ವಸ್ಥ ಕುಟುಂಬವನ್ನು ನಿರ್ಮಿಸಿಕೊಳ್ಳಬೇಕು ಎಂದರು. ಮಹಾನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್ ಮಾತನಾಡಿ ಬಸ್ ನಿಲ್ದಾಣದ ಬಳಿಯೇ ಸಿದ್ಧಗಂಗಾ ಆಸ್ಪತ್ರೆ ನಗರ ಆರೋಗ್ಯದ ಕೇಂದ್ರದ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಪೌರಕಾರ್ಮಿಕರಿಗೆ ಹಾಗೂ ವಾರ್ಡ್‍ವಾರು ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಮೂಲಕ ಆರೋಗ್ಯದ ಅರಿವು ಮೂಡಿಸುತ್ತಿದ್ದಾರೆ ಎಂದರು. ಮಹಾನಗರ ಪಾಲಿಕೆ ಸದಸ್ಯ ಸಯ್ಯದ್ ನಯಾಜ್ ಮಾತನಾಡಿ ಸಿದ್ಧಗಂಗಾ ಶ್ರೀಗಳು ಎಲ್ಲಾ ಜನರಿಗೆ ಉಚಿತ ಆರೋಗ್ಯ…
Author: News Desk Benkiyabale
ತುಮಕೂರು ಗ್ರಾಚ್ಯುಟಿ ಪಾವತಿಸಲು ಕೂಡಲೇ ಸರ್ಕಾರ ನಿರ್ದೇಶನ ನೀಡಬೇಕು.,25 ಏಪ್ರೀಲ್ 2022 ರಂದು ಮಾನ್ಯ ಸುಪ್ರೀಂ ಕೋರ್ಟ್ 1972 ರ ಗ್ರಾಚ್ಯುಟಿ ಕಾಯ್ದೆಯ ಪ್ರಕಾರ ‘ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರು’ ಎಂಬ ಐತಿಹಾಸಿಕ ತೀರ್ಪು ನೀಡಿದೆ. ಗ್ರಾಚ್ಯುಟಿಗೆ ಸಲ್ಲಿಸಿರುವ ಅರ್ಜಿದಾರರಿಗೆ ಕೂಡಲೇ ಪರಿಹಾರ ನೀಡಲು “ರಾಜ್ಯ ಸಚಿವ ಸಂಪುಟ” ಆದೇಶಿಸ ಬೇಕು. ಅನ್ನದೊಟ್ಟಿಗೆ ಅಕ್ಷರ ಕೇಂದ್ರವಾಗಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ, ಬಲಿಷ್ಠ ಪಡಿಸಬೇಕು. IಅಆS ಮಾರ್ಗದರ್ಶಿ ಸೂಚಿಗಳ ಪ್ರಕಾರ ಇರುವ 6 ಸೇವೆಗಳಿಗೆ ಮಾತ್ರ ಅಂಗನವಾಡಿ ನೌಕರರನ್ನು ಬಳಸಬೇಕು. .ಪೂರಕ ಪೌಷ್ಠಿಕ ಆಹಾರ, ರೋಗ ನಿರೋದಕ ಚುಚು ಮದ್ದು. ಆರೋಗ್ಯ ತಪಾಸಣೆ – ಮಾಹಿತಿ ಸೇವೆ. ಶಾಲಾ ಪೂರ್ವ ಶಿಕ್ಷಣ.=ಪೌಷ್ಠಿಕತೆ ಮತ್ತು ಆರೋಗ್ಯ ಶಿಕ್ಷಣ (ಮಹಿಳೆಯರಿಗೆ) ಆದರೆ ಇಂದು ಯೋಜನೇತರ ಕೆಲಸಗಳಾದ ಸರ್ವೆ, ಸ್ತ್ರೀ ಶಕ್ತಿ, ಭಾಗ್ಯಲಕ್ಷ್ಮಿ, ಮಾತೃವಂದನಾ,ಇಲಾಖೇತರ ಕೆಲಸಗಳಾದ ಚುನಾವಣೆ, ಸರ್ಕಾರದ ಸಾರ್ವಜನಿಕ ಹಬ್ಬಗಳು, ಕಾರ್ಯಕ್ರಮಗಳಲ್ಲಿ ತೊಡಗಿಸುವುದು ಹೆಚ್ಚಾಗುತ್ತಿದೆ. ಸ್ಕೌಟ್ಸ್ –ಗೈಡ್ಸ್ ಕಾರ್ಯಕ್ರಮ, ಕೋಟಿಕಂಠಗಾಯನ, ಮುಖ್ಯ ಮಂತ್ರಿಗಳು ಹಾಗೂ ಪ್ರಧಾನ…
ತುಮಕೂರು ಬಿಜೆಪಿಯ ಪದಾಧಿಕಾರಿಗಳು, ಪ್ರಮುಖರು ಜಾತಿ, ವರ್ಗ ಎಂಬ ಭಾವನೆ ಬಿಟ್ಟು ದೇಶ, ಪಕ್ಷ ಎನ್ನೋಣ. ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಿ, ವಿವಿಧ ವಿಚಾರ ವಿಷಯಗಳ ಬಗ್ಗೆ ತಿಳಿದರೆ, ಜಾತಿ-ಅಧಿಕಾರದ ಅಮಲಿನಿಂದ ದೂರವಾಗಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಹೇಳಿದರು. ಇವರು ಬಿಜೆಪಿ ತುಮಕೂರು-ಮಧುಗಿರಿ ಸಂಘಟನಾತ್ಮಕ ಜಿಲ್ಲೆಗಳ ಪ್ರಶಿಕ್ಷಣ ವರ್ಗ ಕೊರಟಗೆರೆ ತಾಲ್ಲೂಕು ಚಿಕ್ಕತೊಟ್ಲುಕೆರೆ ಅಟವಿ ಮಠದಲ್ಲಿ (ನಿನ್ನೆ ಸಂಜೆ) ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕಾರ್ಯಕರ್ತರು ತಮ್ಮ ನಡೆ,ನುಡಿ,ಆಚಾರ, ವಿಚಾರಗಳ ಮೂಲಕ ಜನತೆಯ ಕಷ್ಟ-ದುಃಖ-ದುಮ್ಮಾನಗಳಿಗೆ ಸ್ಪಂದಿಸಬೇಕು. ಸಮಾಜದಲ್ಲಿನ ನ್ಯೂನತೆಗಳ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯಬೇಕು. ಪಕ್ಷದ ಹಿರಿಯರು, ಸಾಮಾನ್ಯರ ಕಾಳಜಿ ಬಗ್ಗೆ ಗೌರವಿಸಬೇಕಾಗಿದ್ದು, ಕಾರ್ಯಕರ್ತರು ಜನರು ಬಯಸುವ ವ್ಯಕ್ತಿಗಳಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು. ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷ ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷವಾಗಿದ್ದು, ವಿಚಾರ-ವಿಷಯ ಆಧಾರಿತದಲ್ಲಿ ಪಕ್ಷ ಸಂಘಟನೆ, ಬಲವರ್ದನೆಗೆ ಪ್ರತಿವರ್ಷ ನಡೆಯುವ ಪ್ರಶಿಕ್ಷಣದಲ್ಲಿ ಎಲ್ಲಾ ಮೋರ್ಚಾದ ಪ್ರಮುಖರು ಭಾಗವಹಿಸಬೇಕೆಂದು ಎಂ.ಬಿ.ನಂದೀಶ್ ವಿನಂತಿಸಿದರು. ಭಾರತ ಸರ್ವಧರ್ಮಗಳ ಸಮ್ಮೀಳಿನದÀ…
ತುಮಕೂರು ನಗರದ ಶ್ರೀಗುರುಕುಲ ವಿವಿದೋದ್ದೇಶ ಸೌಹಾರ್ಧ ಸಹಕಾರಿ ನಿಯಮಿತದವತಿಯಿಂದ 2022ನೇ ಸಾಲಿನ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕøತರಾದ ಶ್ರೀಗುರುಕುಲ ವಿವಿದೋದ್ದೇಶ ಸೌಹಾರ್ಧ ಸಹಕಾರಿಯ ಅಧ್ಯಕ್ಷರಾದ ಜಿ.ಮಲ್ಲಿಕಾ ರ್ಜುನಯ್ಯ ಅವರಿಗೆ ಅಭಿನಂದನಾ ಸಮಾರಂಭವನ್ನು ಬಿ.ಹೆಚ್.ರಸ್ತೆಯಲ್ಲಿರುವ ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಜಿ.ಮಲ್ಲಿಕಾರ್ಜುನಯ್ಯ ಉತ್ತಮ ನಡೆ, ನುಡಿ ಮತ್ತು ದಕ್ಷ ಆಡಳಿತಕ್ಕೆ ಹೆಸರು ವಾಸಿಯಾದವರು. ಹೆಚ್.ಎಂ.ಟಿ.ಯ ನೌಕರರಾಗಿದ್ದ ಕಾಲದಿಂದಲೂ ಅವರನ್ನು ನಾನು ಬಲ್ಲ. ನೇರ ಮತ್ತು ನಿಷ್ಠೂರ ನಡೆ. ಯಾವುದೇ ರಾಜಿಗೆ ಒಳಗಾಗದ ವ್ಯಕ್ತಿ. ಅವರ ಗುರುಕುಲ ಡಿಪಾರ್ಟಮೆಂಟಲ್ ಸ್ಟೋರ್ ನೋಡಿದಾಗ ನಿಜಕ್ಕೂ ಆಶ್ಚರ್ಯವೆನಿಸಿತ್ತು.ಗ್ರಾಹಕರ ಮನೆ ಬಾಗಿಲಿಗೆ ಅತ್ಯಂತ ಶುಚಿ ಮತ್ತು ಗುಣಮಟ್ಟದ ಆಹಾರ ಪದಾರ್ಥ ಮತ್ತು ಇತರೆ ಅಗತ್ಯ ವಸ್ತುಗಳನ್ನು ನೀಡುತಿದ್ದಾರೆ.ಇದರ ಬಳಕೆಯನ್ನು ನಾವೆಲ್ಲರೂ ಮಾಡಬೇಕಿದೆ ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಚಿಕ್ಕತೊಟ್ಲುಕೆರೆಯ ಅಟವಿ ಜಂಗಮ ಸುಕ್ಷೇತ್ರದ ಶ್ರೀಅಟವಿ ಶಿವಲಿಂಗಸ್ವಾಮೀಜಿ ಆಶೀರ್ವಚನ ನೀಡಿದರು. ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾದ ಜಿ.ಎನ್.ಬಸವರಾಜಪ್ಪ…
ತುಮಕೂರು ಶ್ರೀ ಸಿದ್ದಗಂಗಾ ಕ್ಷೇತ್ರದಲ್ಲಿ 2022-23ನೇ ಸಾಲಿನ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನವು ಫೆಬ್ರವರಿ 8, 2023 ರಿಂದ ಫೆ.22ರವರೆಗೆ ನಡೆಯಲಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಸಹ ವ್ಯವಸ್ಥಿತವಾಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಿವಿಧ ಇಲಾಖೆಗಳ ವಸ್ತುಪ್ರದರ್ಶನ ಏರ್ಪಡಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ವಿದ್ಯಾಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅವರಿಂದು ಸಿದ್ದಗಂಗಾ ಮಠದ ವಸ್ತುಪ್ರದರ್ಶನ ಆವರಣದಲ್ಲಿ ನಡೆದ ಶ್ರೀ ಸಿದ್ದಗಂಗಾ ಕ್ಷೇತ್ರದ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ವಿವಿಧ ಇಲಾಖೆಗಳ ಜನಪರ ಯೋಜನೆಗಳಿಗೆ ವ್ಯಾಪಕ ಪ್ರಚಾರ ನೀಡುವ ಇಂತಹ ಕಾರ್ಯಕ್ರಮಗಳ ಸದ್ಭಳಕೆ ಮಾಡಿಕೊಂಡು ಸಾರ್ವಜನಿಕರಿಗೆ ಸರ್ಕಾರಿ ಕಾರ್ಯಕ್ರಮಗಳ ಕುರಿತು ಉಪಯುಕ್ತ ಮಾಹಿತಿ ನೀಡುವ ವ್ಯವಸ್ಥೆಯಾಗಬೇಕು. ವಸ್ತುಪ್ರದರ್ಶನ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಲಿದ್ದು, ಸಂವಹನ ಕೌಶಲ್ಯ ಇರುವಂತಹ ಸಿಬ್ಬಂದಿಗಳನ್ನು ಮಳಿಗೆಗಳ ಬಳಿ ನೇಮಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸವಾಗಬೇಕು ಎಂದು ಸೂಚಿಸಿದರು. ಮಳಿಗೆಗಳು ವಿನೂತನವಾಗಿದ್ದು, ಹೊಸತನದಿಂದ ಕೂಡಿರಲಿ ಎಂದು ತಿಳಿಸಿದ…
ತುಮಕೂರು ಆರಂಭದ ಹಂತದಲ್ಲಿಯೇ ಅನಾರೋಗ್ಯದ ಸಮಸ್ಯೆಗಳನ್ನು ತಪಾಸಣೆ ಮಾಡಿಸಿಕೊಂಡರೆ ಖರ್ಚು ಕಡಿಮೆ ಮಾಡಿಕೊಳ್ಳಬಹುದು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಲಹೆ ನೀಡಿದರು. ಜಿಲ್ಲಾ ಒಕ್ಕಲಿಗರ ಒಕ್ಕೂಟ, ವಿಜಯ ಆಸ್ಪತ್ರೆ, ಪದ್ಮಶ್ರೀ ಡಯಾಗ್ನಾಸ್ಟಿಕ್ ಸೆಂಟರ್ ಇವರ ಸಂಯುಕ್ತಾಶ್ರಯದಲ್ಲಿ ಎಂ.ಜಿ.ರಸ್ತೆಯಲ್ಲಿರುವ ಪದ್ಮಶ್ರೀ ಡಯಾಗ್ನಾಸ್ಟಿಕ್ ಸೆಂಟರ್‍ನಲ್ಲಿ ಆರೋಗ್ಯ ಮಹಿಳೆ ವಿಶೇಷ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದÀರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕಾರ್ಯಕಾರಿ ಸಮಿತಿ ಸದಸ್ಯರು, ಪ್ರಜಾಪ್ರಗತಿ ಸಂಪಾದಕರೂ ಆದ ಎಸ್.ನಾಗಣ್ಣ ಮಾತನಾಡಿ ಮನುಷ್ಯನ ಜೀವನಶೈಲಿ ದಿನೆ ದಿನೆ ಬದಲಾಗುತ್ತಿರುವುದರಿಂದ ಬಹುತೇಕ ಮಂದಿಯ ಬದುಕು ಔಷಧಿಯ ಮೇಲೆ ನಿಂತಿದೆ ಎಂದು ಅಭಿಪ್ರಾಯಪಟ್ಟರು. ಆಹಾರದಿಂದಾಗಿಯೇ ನಮ್ಮ ಜೀವನಶೈಲಿ ಬದಲಾಗುತ್ತಿದೆ. ಅನಾರೋಗ್ಯ ಹೆಚ್ಚುತ್ತಿದೆ. ಔಷಧಗಳಿಂದಾಗಿ ಕಾಯಿಲೆಗಳು ನಿವಾರಣೆಯಾಗುತ್ತಿವೆ. ಮರಣ ಪ್ರಮಾಣವೂ ಕಡಿಮೆಯಾಗಿದೆ. ಆದರೆ ಅನಾರೋಗ್ಯಗಳು ಹೆಚ್ಚುತ್ತಿದ್ದು, ಆರೋಗ್ಯ ಕ್ಷೇತ್ರದ ಸುಧಾರಣೆಯ ಕಡೆಗೆ ಸರ್ಕಾರಗಳು, ಸಂಘ ಸಂಸ್ಥೆಗಳು ಹೆಚ್ಚು ಗಮನ ಹರಿಸಬೇಕಾಗಿದೆ ಎಂದರು. ವಿಜಯ ಆಸ್ಪತ್ರೆಯ ಡಾ.ವಿಜಯಕುಮಾರ್ ಮಾತನಾಡಿ ಇಂದಿನ ದಿನಗಳಲ್ಲಿ ಕ್ಯಾನ್ಸರ್ ಹೆಚ್ಚು ಹರಡುತ್ತಿದೆ.…
ತುಮಕೂರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತಿದ್ದದನ್ನು ಪ್ರಶ್ನಿಸಿದಕ್ಕೆ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ವರದರಾಜು ಹಲ್ಲೆಗೊಳಗಾದ ಫಾರೆಸ್ಟ್ ಗಾರ್ಡ್ ಎಂದು ತಿಳಿದು ಬಂದಿದೆ. ಡಿ.ಕೊರಟಗೆರೆ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತಿದ್ದ ಗೌರಿಶಂಕರ ಸಹಚರರು ಇದನ್ನು ಪ್ರಶ್ನಿಸಿದ ಅಧಿಕಾರಿಯನ್ನು ತಳ್ಳಿ ನಾವು ಎಂಎಲ್‌ಎ ಕಡೆಯವರು ಎಂದು ಅವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 3ಶಫಿ, ಕುಮಾರ್, ಕೆಆರ್ ಬಸವರಾಜು, ಲಾಯರ್ ಗಂಗರಾಜು, ಸಿರಾಜ್, ಕೆಂಪರಾಜು, ಆಚಾರ್ ಹೊನ್ನಪ್ಪ ರಮೇಶ್ ,ಮಂಜುನಾಥ್ ಕೆಂಪ ಹನುಮಯ್ಯ ಫಾರೆಸ್ಟ್ ಗಾರ್ಡ್ ಮೇಲೆ ಹಲ್ಲೆ ನಡೆಸಿರುವವರು ಎಂದು ತಿಳಿದು ಬಂದಿದೆ. ಸದ್ಯ ಹೆಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ತುಮಕೂರು ಅನುಭಾವ ಹಾಗೂ ರಸಾನುಭವ ಎರಡು ಪ್ರೇಕ್ಷರಲ್ಲಿ ಮೂಡಿಸಲು ಸಾಧ್ಯವಿರುವುದು ರಂಗಭೂಮಿಗೆ ಮಾತ್ರ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಅಭಿಪ್ರಾಯಪಟ್ಟರು. ನವೆಂಬರ್ 25ರ ಶುಕ್ರವಾರ ಸಂಜೆ ನಗರದ ಕನ್ನಡ ಭವನದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗಮ ನಾಟಕ ಪ್ರಯೋಗದಲ್ಲಿ ಮಾತನಾಡಿದ ಅವರು. ವಚನಾಮೃತವೇ ದೊಡ್ಡ ಸಂಗಮ, ಹಳ್ಳಗಳೆಲ್ಲ ಸೇರಿ ನದಿ ಯಾದಂತೆ ಎಲ್ಲ ಪ್ರಕಾರವೂ ಸೇರಿ ಸಂಗಮಗೊಂಡಿರುವ ವಚನ ಸಾಹಿತ್ಯವನ್ನು ಆಧಾರಿಸಿ ಸಂಗಮ ನಾಟಕ ರೂಪಿಸಲಾಗಿದ್ದು, ವಚ ನಾಮೃತದ ರಸಾನುಭವದ ಸವಿಯನ್ನು ಸವಿಯೋಣ ಎಂದು ಕರೆ ನೀಡಿದರು. ಕೇಂದ್ರ ನಾಟಕ ಅಕಾಡಮಿ ಪುರಸ್ಕøತ ಲಕ್ಷಣ್ ದಾಸ್ ಮಾತನಾಡಿ, ರಂಗಭೂಮಿಯ ತೊಟ್ಟಿಲು ತುಮಕೂರಿನಲ್ಲಿ ರಂಗಚಟು ವಟಿಕೆಗಳು ಜೀವಂತವಾಗಿರುವುದಕ್ಕೆ ಹವ್ಯಾಸಿ ತಂಡಗಳೇ ಕಾರಣ, ಅನೇಕ ಪ್ರಯೋಗಗಳ ಮೂಲಕ ಜನಮನ್ನಣೆಯನ್ನು ಪಡೆದಿರುವ ಗ್ರಾಮೀಣ ಕ್ರೀಯಾತ್ಮಕ ರಂಗ ತಂಡ ಇನ್ನಷ್ಟು ಪ್ರಯೋಗಳನ್ನು ಮಾಡುವ ಮೂಲಕ ಜನಮನ್ನಣೆಯನ್ನು ಪಡೆಯಲಿ ಎಂದು ಹಾರೈಸಿದರು. ಲೇಖಕಿ ಶೈಲಾ ನಾಗರಾಜ್ ಮಾತನಾಡಿ…
ತುಮಕೂರು ಸಂವಿಧಾನ ಸಂರಕ್ಷಣೆ, ಪ್ರಜಾಪ್ರಭುತ್ವ ಹಾಗೂ ಮೂಲಭೂತ ಹಕ್ಕುಗಳ ಜನಜಾಗೃತಿ ಕುರಿತು ಟೌನ್ ಹಾಲ್ ನಲ್ಲಿ ಕೆಆರ್ ಎಸ್ ಪಕ್ಷದಿಂದ ಜಾಗೃತಿ ಮೂಡಿಸಲಾಯಿತು. ಡಾ. ಬಿ. ಆರ್ . ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಕೆಆರ್ ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧುಸ್ವಾಮಿ, ಒಕ್ಕೂಟ ಸರ್ಕಾರದ ವ್ಯವಸ್ಥೆಯಿಂದ ಕರ್ನಾಟಕಕ್ಕೆ ಅನೇಕ ತಾರತಮ್ಯ ಅನ್ಯಾಯವಾಗುತ್ತಿದ್ದು, ಅವುಗಳನ್ನು ಪ್ರಶ್ನಿಸಿ ಹೋರಾಟ ಮಾಡಿ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. 15ನೇ ಹಣಕಾಸು ಯೋಜನೆಯಲ್ಲಿ ಬಹುದೊಡ್ಡ ಅನ್ಯಾಯವಾಗಿದ್ದು, 14ನೇ ಹಣಕಾಸು ಆಯೋಗದಲ್ಲಿ ಶೇ 4.71 ಪಾಲು ಬರುತ್ತಿತ್ತು, ಆದರೆ, 15ನೇ ಹಣಕಾಸು ಆಯೋಗದಲ್ಲಿ ಶೇ.3.67 ಇರುವುದು ಕರ್ನಾಟಕ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಮತ್ತು ರಾಜ್ಯದ ಅಭಿವೃದ್ಧಿಗಿಂತ ಹೆಚ್ಚಾಗಿ ಉತ್ತರ ಭಾರತದ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುವ ಮೂಲಕ ಪ್ರಾದೇಶಿಕತೆಗೆ ದ್ರೋಹ ಬಗೆದಿದೆ. ಇಡೀ ದೇಶದಲ್ಲೇ ಕೇಂದ್ರಕ್ಕೆ ತೆರಿಗೆ ಕಟ್ಟುವ 2ನೇ ರಾಜ್ಯವಾದ ಕರ್ನಾಟಕಕ್ಕೆ ಎಲ್ಲ ರಾಜ್ಯಕ್ಕಿಂತಲೂ ಕಡಿಮೆ ಅನುದಾನ ನೀಡುತ್ತಿದೆ. ಆದ್ದರಿಂದ ಪ್ರಾದೇಶಿಕ ಪಕ್ಷವನ್ನು…
ಪಾವಗಡ ಪ್ರತೀ ವರ್ಷದಂತೆ ಈ ಬಾರಿಯೂ ನಿರ್ಗತಿಕರಿಗೆ ಹಾಗೂ ಅಲೆಮಾರಿ ಜನರಿಗೆ ಚಳಿಯನ್ನು ಎದುರಿಸುವ ಸಲುವಾಗಿ ಸರಿಸುಮಾರು 1000ಕ್ಕೂ ಮಿಗಿಲಾದ ಬೆಚ್ಚನೆಯ ಉಲ್ಲನ್ ಹೊದಿಕೆಗಳನ್ನು ವಿತರಿಸಲಾಗುತ್ತಿದೆ ಎಂದು ಪೂಜ್ಯ ಸ್ವಾಮಿ ಜಪಾನಂದಜೀ ರವರು ತಿಳಿಸಿರುತ್ತಾರೆ. ಇದರ ಆರಂಭೋತ್ಸವ ಎಂಬಂತೆ ಕಳೆದ 23-11-2022ರಂದು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಸುಮಾರು 150ಕ್ಕೂ ಮಿಗಿಲಾದ ಕುಷ್ಠರೋಗಿಗಳು ಹಾಗೂ ಹೆಚ್.ಐ.ವಿ. ಪೀಡಿತರಿಗೆ ವಿತರಿಸಲಾಯಿತು. ಮುಂದುವರೆದ ಭಾಗದಂತೆ ಇಂದು ದೂರದ ರಾಜಸ್ಥಾನದಿಂದ ಹೊಟ್ಟೆಪಾಡಿಗೆ ಚಾಕುಗಳನ್ನು, ಮಚ್ಚುಗಳನ್ನು ಹಾಗೂ ಕೃಷಿ ಉಪಕರಣಗಳನ್ನು ತಯಾರಿಸುತ್ತಾ ಊರಿಂದೂರಿಗೆ ಸಂಚರಿಸುತ್ತಿರುವ ಈ ನತದೃಷ್ಟ ಅಲೆಮಾರಿ ಜನರಿಗೆ ಹೊದಿಕೆಗಳನ್ನು ಅವರಿದ್ದಲ್ಲಿಯೇ ಅಂದರೆ ರಸ್ತೆಯ ಬದಿಯಲ್ಲಿ ವಾಸಿಸುತ್ತಿರುವ ಪುಟ್ಟ ಪುಟ್ಟ ಮಕ್ಕಳು ಹಾಗೂ ವೃದ್ಧರಾದಿಯಾಗಿ ಎಲ್ಲರಿಗೂ ಉಲ್ಲನ್ ಹೊದಿಕೆಯನ್ನು ವಿತರಿಸಲಾಯಿತು. ಕಳೆದ ಕೋವಿಡ್ ಸಂದರ್ಭದಲ್ಲಂತೂ ಭಯಂಕರ ಪರಿಸ್ಥಿತಿಯಲ್ಲಿಯೂ ಸಹ ರಾತ್ರಿಯ ವೇಳೆ ಪೂಜ್ಯ ಸ್ವಾಮಿ ಜಪಾನಂದಜೀ ರವರು ಹಾಗೂ ಆಶ್ರಮದ ಸ್ವಯಂಸೇವಕರು ಮತ್ತು ಸಮರ್ಪಣ ಇನ್ಫೋಸಿಸ್ ಸ್ವಯಂಸೇವಕರು ಈ ಕಾರ್ಯದಲ್ಲಿ ನಿರಂತರವಾಗಿ…











