Author: News Desk Benkiyabale

ತುಮಕೂರು ಕರ್ನಾಟಕದ ಜನತೆ ಬದಲಾವಣೆ ಬಯಸುತಿದ್ದು, ಇದನ್ನು ಸಕಾರಗೊಳ್ಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಬ್ಲಾಕ್ ಮತ್ತು ಬೂತ್ ಹಂತದಲ್ಲಿ ಮನೆ ಮನೆಗೆ ತೆರಳಿ ಜನರ ಮನವೊಲಿಸುವ ಕೆಲಸ ಮಾಡಬೇಕೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಉಸ್ತುವಾರಿ ಮಯೂರ ಜಯಕುಮಾರ್ ತಿಳಿಸಿದ್ದಾರೆ. ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಹೆಚ್.ಎಂ.ಎಸ್.ಕಾಲೇಜು ಆವರಣದಲ್ಲಿ ತುಮಕೂರು ನಗರ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಮಾತನಾಡುತಿದ್ದ ಅವರು,ರಾಜ್ಯದಲ್ಲಿರುವ ಜನವಿರೋಧಿ, ಶೇ40ರ ಕಮಿಷನ್ ಆಧಾರಿತ ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಜನತೆ ಬಯಸಿದ್ದು,ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ಸಜ್ಜಾಗಬೇಕೆಂದರು. ಮಾಜಿ ಶಾಸಕ ಎಸ್.ಷಪಿ ಅಹಮದ್ ಮಾತನಾಡಿ,ಇಂದು ಕಾಂಗ್ರೆಸ್ ಪಕ್ಷಕ್ಕೆ ಕಷ್ಟಕಾಲವಿರಬಹುದು. ಆದರೆ ಎಂದಿಗೂ ಕಾರ್ಯಕರ್ತರು ಎದೆಗುಂದಬಾರದು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವಂತೆ ಮಾಡಬೇಕೆಂದರು. ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಪಕ್ಷದ ಹೈಕಮಾಂಡ್ ಸೂಚನೆಯಂತೆ ಎಲ್ಲಾ ಬ್ಲಾಕ್‍ಗಳಲ್ಲಿಯೂ ಪಕ್ಷದ ಕಚೇರಿ ತೆರೆಯಲಾಗುತ್ತಿದೆ.ಅದರ ಭಾಗವಾಗಿ ಇಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಚೇರಿ ಆರಂಭಗೊಂಡಿದೆ.ಪ್ರತಿಯೊಬ್ಬ ಬೂತ ಮಟ್ಟದ ಸಹಾಯಕನು…

Read More

ತುಮಕೂರು ಸಂವಿಧಾನವು ಅನೇಕ ಜನರ ಪರಿಶ್ರಮದ ಪ್ರತಿಫಲವಾಗಿ ಅಂಗೀಕಾರವಾಗಿದ್ದು, ಸಂವಿಧಾನದ ಅರಿವು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಎಂದು ಉಪನ್ಯಾಸಕ ಅರುಣ್ ಕುಮಾರ್ ಪಿ. ತಿಳಿಸಿದರು. ಚಿಕ್ಕನಾಯಕನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಿಧಾನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು ಸಂವಿಧಾನವು ನೂರಾರು ಜನರ ಪರಿಶ್ರಮದ ಪ್ರತಿಫಲವಾಗಿ ನವೆಂಬರ್ 26, 1949ರಂದು ಅಂಗೀಕಾರವಾಯಿತು. ಅಂದಿನಿಂದ ಈ ದಿನವನ್ನು ರಾಷ್ಟ್ರೀಯ ಕಾನೂನು ಎಂದು ಆಚರಿಸಲಾಗುತ್ತಿತು. 2015 ನವೆಂಬರ್ 26ರಿಂದ ಸಂವಿಧಾನ ದಿನ ಎಂದು ಆಚರಿಸಲಾಗುತ್ತಿದೆ ಎಂದು ತಿಳಿಸಿ,ಇಂತಹ ಸಂವಿಧಾನದ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ  ಎಂದರು ನಂತರ ಮಾತಾನಾಡಿದ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಪೆÇ್ರ. ಹೆಚ್.ಎಸ್. ಬಸವರಾಜು ವಿದ್ಯಾರ್ಥಿಗಳಿಗೆ ಸಂವಿಧಾನದ ಮೂಲ ಧ್ಯೇಯೋದ್ಧೇಶಗಳು, ಸಂವಿಧಾನದ ರಚನೆಯ ಹಿನ್ನೆಲೆ, ಸಧೃಡ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಮತದಾನದ ಪ್ರಾಮುಖ್ಯತೆಯನ್ನು ಹೇಳುತ್ತಾ, ಸಂವಿಧಾನದ ಬಗ್ಗೆ ಗ್ರಹಿಸಿ ಪ್ರಜಾಪ್ರಭುತ್ವದಲ್ಲಿ ನಡೆಯುವ ಅನ್ಯಾಯ ದೌರ್ಜನ್ಯಗಳನ್ನು ಪ್ರಶ್ನಿಸುವ ಮೂಲಕ…

Read More

ತುಮಕೂರು ಜೀವನದ ಸೋಲು ಗೆಲವುಗಳ ದಾಟಿ ಯಶಸ್ಸು ಸಾಧಿಸುವ ಪ್ರೇರಣೆಯನ್ನು ಕ್ರೀಡೆಗಳು ಕಲಿಸುತ್ತವೆ, ಕ್ರೀಡೆಗಳಲ್ಲಿ ಭಾಗವಹಿಸುದರ ಮೂಲಕ ಪ್ರತಿಯೋಬ್ಬರೂ ತಮ್ಮ ದೇಹ ಹಾಗೂ ಮನಸ್ಸನ್ನು ಸಧೃಡಗೊಳಿಸಬಹುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಹೇಳಿದರು. ಇಂದು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲೆಯ ಎಲ್ಲಾ ಕ್ರೀಡಾ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ, ನಡೆದ ‘ಜಿಲ್ಲಾ ಮಟ್ಟದ ಗ್ರಾಮೀಣÀ ಕ್ರೀಡಾಕೂಟ-2022’ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಪ್ರಥಮವಾಗಿ ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಇಂದು ಅಯೋಜಿಸಲಾಗಿದೆ, ರಾಜ್ಯದ ದೇಸೀ, ಜಾನಪದ ಮತ್ತು ಸ್ಥಳೀಯ ಕ್ರೀಡೆಗಳಾದ ಕಬ್ಬಡಿ, ಕೊಕ್ಕೊ, ಎತ್ತಿನ ಬಂಡಿ, ಕುಸ್ತಿಯಂತಹ ಕ್ರೀಡೆಗಳಿಗೆ ಉತ್ತೇಜನ ನೀಡಲು ಗ್ರಾಮ ಪಂಚಾಯತ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಗ್ರಾಮೀಣ ಕ್ರೀಡಾಕೂಟ ಆಯೋಜನೆ ಮಾಡಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಸ್ಪರ್ಧಾ ಮನೋಭಾವದಿಂದ ಕ್ರೀಡೆಗಳಲ್ಲಿ ಪಾಲ್ಗೊಂಡು, ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ…

Read More

ತುಮಕೂರು ಕುಣಿಗಲ್ ತಾಲೂಕಿನ ಸ್ಟಡ್ ಫಾರಂನ ಕುದುರೆಗಳು ವಿಶ್ವವಿಖ್ಯಾತ. ಈ ಸ್ಟಡ್ ಫಾರಂ ರಾಜ್ಯದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೊಯ್ದಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಹೇಳಿದರು. ಅವರು ಇಂದು ಕುಣಿಗಲ್‍ನ ಕುದುರೆ ಫಾರಂಗೆ ಭೇಟಿ ನೀಡಿ ಸ್ಟಡ್ ಫಾರಂ ವಿವಿಧ ತಳಿಯ ಕುದುರೆಗಳು, ಕುದುರೆಗಳಿಗೆ ನೀಡುವ ಪೌಷ್ಟಿಕ ಆಹಾರ, ಕುಡಿಯಲು ಶುದ್ಧ ನೀರು ವ್ಯವಸ್ಥೆ, ಸಾಕಾಣಿಕೆ ವಿಧಾನಗಳ ಪರಿಶೀಲನೆ ನಡೆಸಿ, ಮಾತನಾಡಿದರು. ಇದೇ ಮೊದಲ ಬಾರಿಗೆ ಸ್ಟಡ್ ಫಾರಂಗೆ ಆಗಮಿಸಿದ ಸಚಿವರು ಕುದುರೆ ಫಾರಂ ವೀಕ್ಷಿಸಿ ಕುಣಿಗಲ್ ಸ್ಟಡ್ ಫಾರ್ಮ್ 240 ವರ್ಷಗಳಿಂದ ವಿಶ್ವದ ಅತ್ಯಂತ ಹಳೆಯ ಕುದುರೆ ತಳಿ ಕೇಂದ್ರವಾಗಿದ್ದು, ಪುರಾತನವಾದ ನರಸಿಂಹ ದೇವರ ದೇವಾಲಯ ಒಳಗೊಂಡಿದೆ, ಹಿಂದಿನ ಮೈಸೂರು ರಾಜ್ಯದ ಉಸ್ತುವಾರಿಯಲ್ಲಿ ಅಶ್ವ ಸಂವರ್ಧನಾ ಕೇಂದ್ರವಾಗಿ ಮುಂದುವರೆಯಿತು ನಂತರ ಕರ್ನಾಟಕ ಸರ್ಕಾರವು ಅಶ್ವದಳ ಮತ್ತು ಮೌಂಟೆಡ್ ಪೆÇೀಲಿಸ್ಗಾಗಿ ಕುದುರೆಗಳನ್ನು ಸಾಕಲು ಪ್ರಾರಂಭಿಸಿತು. ಸ್ಟಡ್ ಫಾರಂನ ಪರಿಶೀಲನೆಗಾಗಿ ಬಂದಿರುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಕುಣಿಗಲ್ ಸ್ಟಡ್ ಫಾರ್ವರ್ಡ್…

Read More

ತುಮಕೂರು ನಗರದ ಮಲ್ಲಸಂದ್ರ ವಿಶ್ವಭಾರತಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಸತಿ ನಿಲಯದಲ್ಲಿ 48 ವಿದ್ಯಾರ್ಥಿಗಳ ಮೇಲೆ ಆಡಳಿತ ಮಂಡಳಿಯ ಕಾರ್ಯದರ್ಶಿಯ ಪುತ್ರ ಹಲ್ಲೆ ನಡೆಸಿದ್ದು, ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಚಿಕಿತ್ಸಾ ವೆಚ್ಚವನ್ನು ವಸತಿ ಶಾಲೆಯ ಆಡಳಿತ ಮಂಡಳಿಯೇ ಭರಿಸಬೇಕು. ಆರೋಪಿ ಭರತ್‍ನನ್ನು ಕೂಡಲೇ ಬಂಧಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ ತುಮಕೂರು ಜಿಲ್ಲಾಧ್ಯಕ್ಷ ಈ.ಶಿವಣ್ಣ ಒತ್ತಾಯಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಲಕ್ಷ್ಮಣ್ ಎಂಬ ವಿದ್ಯಾರ್ಥಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಆತನ ಕೈಯನ್ನು ಮುರಿದು ಹಾಕಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಘವೇಂದ್ರ ಎಂಬ ವಿದ್ಯಾರ್ಥಿಗೆ ಕಾಲು ಕೈ ಎರಡನ್ನೂ ಮುರಿದು ಹಾಕಲಾಗಿದೆ. ನಿಖಿಲ್ ಏಳನೇ ತರಗತಿ ವಿದ್ಯಾರ್ಥಿ ಸೊಂಟ ಮುರಿಯಲಾಗಿದೆ. ಚಿಕ್ಕ ಮಕ್ಕಳ ಮೇಲಿನ ಈ ರೀತಿಯ ಹಲ್ಲೆ ಅತ್ಯಂತ ಅಮಾನವೀಯ ಸಂಗತಿಯಾಗಿದೆ. ವಸತಿ ಶಾಲೆಯಲ್ಲಿ ಒಟ್ಟು 48 ವಿದ್ಯಾರ್ಥಿಗಳ…

Read More

ತುಮಕೂರು “ಮತದಾರರ ಪಟ್ಟಿ ಪರಿಷ್ಕರಣೆ” ಕಾರ್ಯ ಅತ್ಯಂತ ಪವಿತ್ರವಾದದ್ದು ಮತ್ತು ಅತ್ಯಂತ ಜವಾಬ್ದಾರಿಯುತ ಕಾರ್ಯವಾಗಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ದೋಷರಹಿತ ಮತದಾರರ ಪಟ್ಟಿ ಮೂಲ ಆಧಾರವಾಗಿದೆ. ಇದನ್ನು ಅರಿತು ಅಧಿಕಾರಿಗಳು ಜಾಗೃತಿಯಿಂದ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚಿಗೆ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿ, ಜಿಲ್ಲೆಯ ಎಇಆರ್‍ಓ ಮತ್ತು ಇಆರ್‍ಓ ಹಾಗೂ ಇತರೆ ಅಧಿಕಾರಿಗಳೊಂದಿಗೆ ಕರಡು ಮತದಾರರ ಪಟ್ಟಿ ಪರಿಷ್ಕರಣೆ-2023ಕ್ಕೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆ ಹಾಗೂ ಇತರೆ ಚುನಾವಣಾ ವಿಷಯಗಳ ಕುರಿತು ಚರ್ಚಿಸಿ ಅವರು ಮಾತನಾಡಿದರು. ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ನು ಅನುಸರಿಸಿ ಮತದಾರರ ಪಟ್ಟಿಯನ್ನು ತಯಾರಿಸಿ ಜಾಗೃತಿಯಿಂದ ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯದಲ್ಲಿ ಯಾವುದೇ ಲೋಪ, ನಿರ್ಲಕ್ಷ್ಯತೆ, ಬೇಜವಾಬ್ದಾರಿ ಉಂಟಾದಲ್ಲಿ ಅಂತಹ ಅಧಿಕಾರಿ/ ಸಿಬ್ಬಂದಿಯವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕ್ರಮಕೈಗೊಳ್ಳಲಾಗುವುದು ಎಂದರು. ನಮೂನೆ-7 ಇಲ್ಲದೆ ಯಾವುದೇ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಬಾರದು. ಮರಣ ಪ್ರಕರಣಗಳಲ್ಲಿ ಹೆಸರನ್ನು ಡಿಲೀಟ್ ಮಾಡುವ…

Read More

ತುಮಕೂರು ಅನುಭಾವ ಹಾಗೂ ರಸಾನುಭವ ಎರಡು ಪ್ರೇಕ್ಷರಲ್ಲಿ ಮೂಡಿಸಲು ಸಾಧ್ಯವಿರುವುದು ರಂಗಭೂಮಿಗೆ ಮಾತ್ರ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಅಭಿಪ್ರಾಯಪಟ್ಟರು. ನವೆಂಬರ್ 25ರ ಶುಕ್ರವಾರ ಸಂಜೆ ನಗರದ ಕನ್ನಡ ಭವನದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗಮ ನಾಟಕ ಪ್ರಯೋಗದಲ್ಲಿ ಮಾತನಾಡಿದ ಅವರು. ವಚನಾಮೃತವೇ ದೊಡ್ಡ ಸಂಗಮ, ಹಳ್ಳಗಳೆಲ್ಲ ಸೇರಿ ನದಿ ಯಾದಂತೆ ಎಲ್ಲ ಪ್ರಕಾರವೂ ಸೇರಿ ಸಂಗಮಗೊಂಡಿರುವ ವಚನ ಸಾಹಿತ್ಯವನ್ನು ಆಧಾರಿಸಿ ಸಂಗಮ ನಾಟಕ ರೂಪಿಸಲಾಗಿದ್ದು, ವಚ ನಾಮೃತದ ರಸಾನುಭವದ ಸವಿಯನ್ನು ಸವಿಯೋಣ ಎಂದು ಕರೆ ನೀಡಿದರು. ಕೇಂದ್ರ ನಾಟಕ ಅಕಾಡಮಿ ಪುರಸ್ಕøತ ಲಕ್ಷಣ್ ದಾಸ್ ಮಾತನಾಡಿ, ರಂಗಭೂಮಿಯ ತೊಟ್ಟಿಲು ತುಮಕೂರಿನಲ್ಲಿ ರಂಗಚಟು ವಟಿಕೆಗಳು ಜೀವಂತವಾಗಿರುವುದಕ್ಕೆ ಹವ್ಯಾಸಿ ತಂಡಗಳೇ ಕಾರಣ, ಅನೇಕ ಪ್ರಯೋಗಗಳ ಮೂಲಕ ಜನಮನ್ನಣೆಯನ್ನು ಪಡೆದಿರುವ ಗ್ರಾಮೀಣ ಕ್ರೀಯಾತ್ಮಕ ರಂಗ ತಂಡ ಇನ್ನಷ್ಟು ಪ್ರಯೋಗಳನ್ನು ಮಾಡುವ ಮೂಲಕ ಜನಮನ್ನಣೆಯನ್ನು ಪಡೆಯಲಿ ಎಂದು ಹಾರೈಸಿದರು. ಲೇಖಕಿ ಶೈಲಾ ನಾಗರಾಜ್ ಮಾತನಾಡಿ…

Read More

ತುಮಕೂರು ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸದ ಸಂದರ್ಭದಲ್ಲಿಯೇ ತನ್ನ ಮುಂದಿನ ಭವಿಷ್ಯದ ಬಗ್ಗೆ ಕನಸನ್ನು ಕಂಡಾಗ ಅಂತಹ ವಿದ್ಯಾರ್ಥಿ ಯಶಸ್ಸನ್ನುಗಳಿಸುತ್ತಾನೆ. ಉತ್ತಮ ಫಲಿತಾಂಶ ಪಡೆದವರು ಉದ್ಯೋಗವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಯಶಸ್ಸಿನ ಹಾದಿ ತಲುಪುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಸಮಯ ನೀಡಬೇಕು ಹಾಗೂ ಅದರ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್. ಪಾಟೀಲ್‍ರವರು ತಿಳಿಸಿದರು. ನÀಗರದ ಶಿರಾ ರಸ್ತೆಯ ಶ್ರೀದೇವಿ ಪದವಿ ಕಾಲೇಜು ಮತ್ತು ಶ್ರೀದೇವಿ ಸ್ನಾತಕೋತ್ತರ ಕೇಂದ್ರದ ವತಿಯಿಂದ ಶ್ರೀಆಗಮನ 2022 ಎಂಬ ಸ್ವಾಗತ ಸಮಾರಂಭವನ್ನುಇತ್ತೀಚಿಗೆ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಅಡಿಟೋರಿಯಂ ಸಭಾಂಗಣದಲ್ಲಿ ಸ್ವಾಗತ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟಿಸಿದ್ದ ಬೆಂಗಳೂರಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು, ಗಾಯಕರಾದ ಡಾ.ಅಕೈ ಪದ್ಮಶಾಲಿರವರು ಮಾತನಾಡುತ್ತಾ ವಿದ್ಯಾರ್ಥಿಗಳು ಆತ್ಮವಿಶ್ವಾಸ, ಕೌಶಲ್ಯ, ಶ್ರದ್ದೆ, ಸಮಯಪ್ರಜ್ಞೆ ಇತ್ಯಾದಿಗಳ ಮೂಲಕ ಯಶಸ್ಸುನ್ನು ಸಾಧಿಸಬಹುದು. ಉತ್ತಮ ಫಲಿತಾಂಶ ಪಡೆದವರು ಉದ್ಯೋಗವನ್ನು ಸುಲಭವಾಗಿ ಪಡೆಯಲು…

Read More

ತುಮಕೂರು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ-2023ರ ಹಿನ್ನೆಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೇಂದ್ರ ತಂಡ ಇಂದು ತುಮಕೂರು ಜಿಲ್ಲೆಗೆ ಆಗಮಿಸಿ ಪರಿಶೀಲನೆ ನಡೆಸಿತು. ಭಾರತದ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸುತ್ತಿದ್ದಾರಾ ಎಂಬುದನ್ನು ತುಮಕೂರು ಗ್ರಾಮಾಂತರ ಮತ್ತು ತುಮಕೂರು ನಗರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಿಎಲ್‍ಓ ಸೂಪರ್‍ವೈಸರ್‍ಗಳ ಕಾರ್ಯವೈಖರಿ ಪರಿಶೀಲಿಸಲಾಯಿತು. ಬಿಎಲ್‍ಓಗಳು ಪ್ರತಿ ಮನೆ-ಮನೆಗೂ ಭೇಟಿ ನೀಡಿ ಇತ್ತೀಚೆಗೆ ಪ್ರಚುರಪಡಿಸಿದ ಕರಡು ಮತದಾರರ ಪಟ್ಟಿ ಆಧರಿಸಿ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಯುವ ಮತದಾರರು ಮತ್ತು ಸೇರ್ಪಡೆಗೊಳ್ಳುವವರ ಕುರಿತು ಕೇಂದ್ರ ತಂಡವು ಪರಿಶೀಲನೆ ನಡೆಸಿತು. ಮರಣ ಹೊಂದಿದವರು, ಖಾಯಂ ಸ್ಥಳಾಂತರಗೊಂಡಿರುವವರು ಅಂತಹವರನ್ನು ಫಾರಂ-7 ತೆಗೆದು ಡಿಲೀಟ್ ಮಾಡುವ ಪ್ರಕ್ರಿಯೆಗಳನ್ನು ಪರಿಶೀಲಿಸಲಾಯಿತು. ಒಂದು ಬೀದಿಯಿಂದ ಮತ್ತೊಂದು ಬೀದಿಗೆ, ಒಂದು ಊರಿನಿಂದ ಮತ್ತೊಂದು ಊರಿಗೆ, ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ವಲಸೆ ಹೋಗಿದ್ದಲ್ಲಿ ಅಂತಹವರಿಂದ ಫಾರಂ-8 ಪಡೆದು ಬಿಎಲ್‍ಓಗಳು ಅವರ ಹೆಸರುಗಳನ್ನು ಸೇರ್ಪಡೆಗೊಳಿಸುವ ಕೆಲಸವನ್ನು ಮಾಡುತ್ತಿದ್ದು, ಇದನ್ನು ಪರಿಶೀಲಿಸಲಾಯಿತು. ನವದೆಹಲಿಯಿಂದ ಆಗಮಿಸಿರುವ ಕೇಂದ್ರ ಚುನಾವಣಾ…

Read More

ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಅಕ್ಕಾಜಿಹಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನುಸಿಳಿ ಬೇಲಿ ಹಾಕಿಕೊಂಡಿರುವ ಬೆಂಗಳೂರಿನ ಮೂಲದವರಿಗೆ ಯಾವುದೇ ಕಾರಣಕ್ಕೂ ಜಮೀನು ಮಂಜೂರು ಮಾಡುವುದಿಲ್ಲ, ಅದನ್ನು ತಾಲ್ಲೂಕಿನ ರೈತರಿಗೆ ಕೊಡಿಸುವುದು ಶತ ಸಿದ್ದ ಮಾಜಿ ಡಿಸಿಎಂ ಹಾಗೂ ಶಾಸಕ ಡಾ. ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ ಹಾಗೂ ಸಂದೇಶ ನೀಡಿದರು. ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಕಂದಾಯ ಇಲಾಖಾ ವತಿಯಿಂದ ಕೊರಟಗೆರೆ ತಾಲ್ಲೂಕಿನ ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ, ಪಹಣಿ, ಹಕ್ಕು ಪತ್ರ ದಾಖಲಾತಿಗಳು ಹಾಗೂ ಪಿಂಚಣಿ ಮಾಸಾಶನ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ದಾಖಲಾತಿ ಪತ್ರಗಳನ್ನು ವಿತರಿಸಿ ಮಾತನಾಡಿದರು. ಕಂದಾಯ ಇಲಾಖೆಯು 1951 ರಿಂದ ಉಳುವವನಿಗೆ ಭೂಮಿ ಎನ್ನುವ ಆದೇಶ ತಂದು ಜಮೀನಿಲ್ಲದ ರೈತರಿಗೆ ಜಮೀನನ್ನು ಮಂಜೂರು ಮಾಡಿಕೊಟ್ಟಿದೆ. ದೇವರಾಜು ಅರಸು ಅವರ ಕಾಲದಲ್ಲಿ ಪ್ರಾರಂಭವಾದ ಈ ಪ್ರಕ್ರಿಯೆ ಲಕ್ಷಾಂತರ ರೈತರು ಇದರ ಉಪಯೋಗ ಪಡೆದು ವ್ಯವಸಾಯ ಮಾಡುತ್ತಿದ್ದಾರೆ ಎಂದರು. ತಾಲ್ಲೂಕಿನಲ್ಲಿ ಶನಿವಾರ…

Read More