Author: News Desk Benkiyabale

ತುಮಕೂರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆಯು ಡಿ. 1 ರಂದು ತುಮಕೂರು ಜಿಲ್ಲೆಗೆ ಆಗಮಿಸಲಿದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಆರ್.ಸಿ. ಆಂಜನಪ್ಪ ಮತ್ತು ಜಿಲ್ಲಾ ಉಸ್ತುವಾರಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ತಿಳಿಸಿದರು. ಜೆಡಿಎಸ್ ಕಚೇರಿಯಲ್ಲಿ ಜಂಟಿಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಥಮ ಹಂತದಲ್ಲಿ ಡಿ.1 ರಂದು ತುಮಕೂರು ನಗರ, 2 ರಂದು ಮಧುಗಿರಿ, 3 ರಂದು ಕೊರಟಗೆರೆ, 4 ರಂದು ಪಾವಗಡ, 5 ರಂದು ಶಿರಾ, 6 ರಂದು ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಪಂಚ ರತ್ನ ರಥಯಾತ್ರೆ ಸಂಚರಿಸಲಿದೆ.ಪೂರ್ವನಿಯೋಜಿತ ಕಾರ್ಯಕ್ರಮ ನಿಗಧಿಯಾಗಿರುವ ಕಾರಣ ಕುಮಾರಸ್ವಾಮಿ ದೆಹಲಿಗೆ ಹೋಗುವುದರಿಂದ ಮೂರು ದಿನಗಳ ಕಾಲ ವಿರಾಮವಿರುತ್ತದೆ. ನಂತರ ಪಂಚರತ್ನ ರಥಯಾತ್ರೆಯು ಡಿ.11 ರಂದು ಚಿ.ನಾ.ಹಳ್ಳಿ, 12 ರಂದು ತುರುವೇಕೆರೆ, 13 ರಂದು ಕುಣಿಗಲ್ ಮತ್ತು 14 ರಂದು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಂಚರಿಸಲಿದೆ ಎಂದು ತಿಳಿಸಿದರು.ರಥ ಯಾತ್ರೆಯಲ್ಲಿ ಗ್ರಾಮೀಣ ಜನರಿಗೆ ಶಿಕ್ಷಣ, ಮೂಲಸೌಕರ್ಯ, ಉದ್ಯೋಗ, ಕೃಷಿ ಹಾಗೂ ಇನ್ನಿತರೆ ಸೌಕರ್ಯಗಳ ಕುರಿತು…

Read More

ಕೊರಟಗೆರೆ ಪಟ್ಟಣದಲ್ಲಿ ನ.27ರಂದು ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ ವತಿಯಿಂದ ಗಾಯಕಿ ಡಾ.ಶಮಿತಾ ಮಲ್ಮಾಡ್ ರವರ ಸಂಗೀತ ರಸ ಸಂಜೆ ಕಾರ್ಯಕ್ರದಲ್ಲಿ ನಾಡಿಗೆ ನಾಯಕ ಡಾ.ಜಿ.ಪರಮೇಶ್ವರ್ ರವರ ದ್ವನಿಸುರಳಿ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಿರುವುದಾಗಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ ರಾಜ್ಯಾಧ್ಯಕ್ಷ ನಗುತರಂಗನಾಥ್ ತಿಳಿಸಿದರು. ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿ ಅಖಿಲ ಕರ್ನಾಟಕ ಡಾ.ಜಿ.;ಪರಮೇಶ್ವರ್ ಯುವ ಸೈನ್ಯ ವತಿಯಿಂದ ಡಾ.ಪುನೀತ್‍ರಾಜ್ ಕುಮಾರ್ ರವರ ಪುಣ್ಯಸ್ಮರಣಾರ್ಥ ಹಾಗೂ ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನ.27ರಂದು ಭಾನುವಾರ ಸಂಜೆ 6 ಗಂಟೆಗೆ ಕೊರಟಗೆರೆ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ಗಾಯಕಿ ಡಾ.ಶಮಿತಾಮಲ್ಮಾಡ್ ರವರ ತಂಡದಿಂದ ಲೈವ್ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಿದ್ದ ಈ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಕೊರಗಟೆರೆ ಕ್ಷೇತ್ರದ ಶಾಸಕರಾದ ಡಾ.ಜಿ.ಪರಮೇಶ್ವರ್ ರವರ ಮೇಲೆ ಸಂಗೀತ ನಿರ್ದೇಶಕ ರಾಜ ಮೌರ್ಯ ರಚಿಸಿದ ನಾಡಿಗೆ ನಾಯಕ ಡಾ.ಜಿ.ಪರಮೇಶ್ವರ್…

Read More

ತುಮಕೂರು ಸರ್ಕಾರಿ ಅನುದಾನಿತ ವಸತಿ ಶಾಲೆಯ ಮಕ್ಕಳ ಮೇಲೆ ಆಡಳಿತ ಮಂಡಳಿಯ ಕಾರ್ಯದರ್ಶಿ ಪುತ್ರ ಬೆಲ್ಟ್ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಮಲ್ಲಸಂದ್ರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ತಾಲ್ಲೂಕಿನ ಮಲ್ಲಸಂದ್ರದಲ್ಲಿರುವ ವಿಶ್ವಭಾರತಿ ಸರ್ಕಾರಿ ಅನುದಾನಿತ ವಸತಿ ಶಾಲೆಯಲ್ಲಿ ಈ ಘಟನೆ ಸೋಮವಾರ ರಾತ್ರಿ 10 ಗಂಟೆಯಲ್ಲಿ ನಡೆದಿದ್ದರೂ ಸಹ ಮಾಹಿತಿ ಮಾತ್ರ ಬಹಿರಂಗಗೊಂಡಿರಲಿಲ್ಲ. ವಿಶ್ವಭಾರತಿ ವಸತಿ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಎನ್. ಮೂರ್ತಿ ಎಂಬುವರ ಪುತ್ರ ಭರತ್ ಎಂಬಾತ ವಸತಿ ಶಾಲೆಗೆ ಸೋಮವಾರ ರಾತ್ರಿ 10 ಗಂಟೆ ಸಮಯದಲ್ಲಿ ಹೋಗಿ ಇಷ್ಟು ಬೇಗ ಮಲಗಿದ್ದೀರಾ, ಓದಿಕೊಳ್ಳುವುದಿಲ್ವಾ ಎಂದು ಹೇಳಿ ಕುಡಿದ ಅಮಲಿನಲ್ಲ ಸುಮಾರು 40 ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಬೆಲ್ಟ್ ಮತ್ತು ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಘಟನೆ ನಡೆದು 4 ದಿನ ಕಳೆದಿದ್ದರೂ ಸಹ ಶಾಲಾ ಆಡಳಿತ ಮಂಡಳಿ ಈ ವಿಚಾರವನ್ನು ಯಾವುದೇ ಅಧಿಕಾರಿಗಳಿಗಾಗಲೀ, ಪೆÇೀಷಕರಿಗಾಗಲೀ ತಿಳಿಸದೆ ಮುಚ್ಚಿಟ್ಟಿದ್ದರು. ಮಕ್ಕಳು ದಮ್ಮಯ ಅಂದ್ರೂ…

Read More

ತುಮಕೂರು ಸರ್ಕಾರಗಳು ರೈತರಿಗಾಗಿ ರೂಪಿಸುವ ಅನೇಕ ಯೋಜನೆಗಳು ಜನಪರವಾಗಿದ್ದು ಅನೇಕ ನಿಗಮ ಮಂಡಳಿಗಳ ವಿವಿಧ ಯೋಜನೆಗಳು ಫಲಾನುಭಾವಿಗಳಿಗೆ ಫಲಪ್ರದವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಗಂಗಾ ಕಲ್ಯಾಣ ಯೋಜನೆಯು ಅರ್ಹತೆಯುಳ್ಳ ಎಲ್ಲಾ ವರ್ಗದ ರೈತರಿಗೆ ಸಿಗುವಂತಾಗಬೇಕು ಎಂದು ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಗುಬ್ಬಿ ಶ್ರೀನಿವಾಸ್ (ವಾಸಣ್ಣ) ಅವರು ತಿಳಿಸಿದರು. ಗುಬ್ಬಿ ಪಟ್ಟಣದಲ್ಲಿ ಪಟ್ಟಣ ಪಂಚಾಯ್ತಿ ಬಳಿ 2018-19ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಒಂದು ಫಲಾನುಭವಿಗೆ 4 ಲಕ್ಷ ರೂ. ವೆಚ್ಚದಂತೆ ಕೊರೆಯಲಾಗಿದ್ದ ಕೊಳವೆ ಬಾವಿ ವಿವಿಧ ಫಲಾನುಭವಿಗಳಿಗೆ ಮೊಟಾರ್ ಪಂಪು ಹಾಗೂ ಅಗತ್ಯ ಪರಿಕರ ಪೂರಕ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಶಾಸಕರು ಗುಬ್ಬಿ ವಿಧಾನಸಭಾದ ಅನೇಕ ರೈತರು ತೋಟಗಾರಿಕಾ ಆಧಾರಿತ ಬೆಳೆ ಪದ್ದತಿ ಅಳವಡಿಸಿಕೊಂಡಿದ್ದು ವಾಣಿಜ್ಯ ಬೆಳೆ ಬೆಳೆದು ಆರ್ಥಿಕ ವಾಗಿ ಸಬಲೀಕರಣರಾಗಲು ಗಂಗಾ ಕಲ್ಯಾಣ ಯೋಜನೆ ಉತ್ತಮವಾಗಿದ್ದು ಕೇವಲ ಶಿಪ್ಪಾರಸು ಮಾಡುವ ರೈತರಿಗೆ ಸೌಲಭ್ಯಗಳು ಸಿಗದೇ ಅರ್ಹತೆಯುಳ್ಳ ಎಲ್ಲಾ ವರ್ಗದ ರೈತರಿಗೆ ಯೋಜನೆಯು ತಲುಪುವಂತಾಗಬೇಕು ಈ ಹಿನ್ನೆಲೆಯಲ್ಲಿ ನಿಗಮ ಮಂಡಳಿಯ…

Read More

ಕುಣಿಗಲ್ ಎಡೆಯೂರು ಕ್ಷೇತ್ರದಲ್ಲಿರುವ ಶ್ರೀ ಮದ್ರಂಭಾಪುರಿ ಖಾಸಾ ಶಾಖಾ ಮಠದ ಆವರಣದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದ ನಂತರ ಜರುಗಿದ ಧರ್ಮ ಸಮಾರಂಭದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿದರು. ಪ್ರಾಚೀನ ಇತಿಹಾಸ ಪರಂಪರೆ ಹೊಂದಿದ ಬಾಳೆಹೊನ್ನೂರು ಖಾಸಾ ಮಠದ ಪರಿಸರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂಬ ಬಹು ದಿನಗಳ ಅಪೇಕ್ಷೆ ಇಂದು ಸಾಕಾರಗೊಂಡಿದ್ದಕ್ಕೆ ಹರುಷ ವ್ಯಕ್ತಪಡಿಸಿದ ಜಗದ್ಗುರುಗಳು ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನ ನಿರ್ಮಿಸಲು ಸಂಕಲ್ಪಿಸಿದ್ದೇವೆ. ಈ ಭಾಗದ ಜನ ಪ್ರತಿನಿಧಿಗಳು ಮತ್ತು ಭಕ್ತರು ಹೆಚ್ಚಿನ ಸಹಕಾರ ಕೊಡಬೇಕೆಂದು ಬಯಸಿದರು. ವೀರಶೈವ ಧರ್ಮದ ಮೂಲ ಪುರುಷರ ಹೆಸರಿನಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನ ಸಾಮಾನ್ಯ ಜನರಿಗೆ ಬಹಳಷ್ಟು ಸಹಕಾರಿಯಾಗಿರುತ್ತದೆ. ಒಂದು ವರ್ಷದ ಅವಧಿಯೊಳಗಾಗಿ ಕಟ್ಟಡ ಪೂರ್ಣಗೊಳಿಸುವ ಇಂಗಿತ ವ್ಯಕ್ತಪಡಿಸಿದರು. ಎಡೆಯೂರು ಕ್ಷೇತ್ರದ ಪಟ್ಟಾಧ್ಯಕ್ಷರಾದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ…

Read More

ತುಮಕೂರು ನನ್ನ ಕೊಲೆಗೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಬೊಮ್ಮನಹಳ್ಳಿ ಬಾಬು, ಹೀರೇಹಳ್ಳಿ ಮಹೇಶ್ ಸೇರಿ ಮತ್ತೊಬ್ಬ ಅನಾಮಧೇಯ ವ್ಯಕ್ತಿ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಬಿ.ಸುರೇಶ್‍ಗೌಡ ಕ್ಯಾತ್ಸಂದ್ರ ಠಾಣೆಗೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಎಫ್ .ಐ ಆರ್ ದಾಖಲಾಗಿದೆ. ದೂರಿನಲ್ಲಿ ಹೈ ಕೋರ್ಟಿನಲ್ಲಿರುವ ಶಾಸಕರ ವಿರುದ್ಧದ ಚುನಾವಣಾ ತಕರಾರು ಅರ್ಜಿ ಅಂತಿಮ ತೀರ್ಪಿಗೆ ಕಾಯಿರಿಸಲಾಗಿದ್ದು, ಸದರಿ ತಕರಾರು ಅರ್ಜಿಯಲ್ಲಿ ಹಿರೇಹಳ್ಳಿ ಮಹೇಶ್ ವಿರುದ್ಧ ಸಾಕ್ಷ್ಯಾ ನೀಡಿರುತ್ತೇನೆ. ಅಲ್ಲದೆ ನನ್ನ ಸಹೋದರ ನೀಡಿದ ಕ್ರಿಮಿನಲ್ ದೂರಿನ ಸಂಬಂಧ ಶಾಸಕರ ಮೇಲೆ ಸಿಓಡಿ ತನಿಖೆಯಾಗಿದ್ದು ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಹಿನ್ನೆಲೆಯಲ್ಲಿ ನನ್ನ ಮತ್ತು ನನ್ನ ಕುಟುಂಬದವರ ಮೇಲೆ ಗೌರಿ ಶಂಕರ್ ಮತ್ತು ಅವರ ಸಹಚರರಿಂದ ಜೀವ ಬೆದರಿಕೆ ಇದೆ ಎಂದು ಸುರೇಶ್ ಗೌಡ ಆರೋಪಿಸಿ ನನಗೆ ಸೂಕ್ತ ರಕ್ಷಣೆ ಒದಗಿಸಬೇಕಾಗಿ ಕೋರಿದ್ದಾರೆ. ಮಾಜಿ ಶಾಸಕರ ಆರೋಪಗಳ ಸಂಭಂದ ಮಂಗಳವಾರ ಅಷ್ಟೇ ಶಾಸಕ ಗೌರಿಶಂಕರ್ ಎಸ್ಪಿ ಕಛೇರಿಗೆ ತಮಗೂ ಸುರೇಶ್ ಗೌಡರಿಂದ ಜೀವ…

Read More

ಕೊರಟಗೆರೆ ಕೊರಟಗೆರೆ ಪಟ್ಟಣದ 15 ವಾರ್ಡ್ ಗಳಲ್ಲಿ ಒಟ್ಟು 11.12 ಕೋಟಿ ರೂಗಳ ವಿಶೇಷ ಅನುಧಾನದ ಕಾಮಗಾರಿಗಳಿಗೆ ಶಾಸಕ ಡಾ.ಜಿ.ಪರಮೇಶ್ವರ ಶಂಕುಸ್ಥಾಪನೆ ನೆರವೇರಿಸಿದರು. ಪಟ್ಟಣ ಪಂಚಾಯತಿಯ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿದ ಶಾಸಕ ಡಾ.ಜಿ.ಪರಮೇಶ್ವರ ಪಟ್ಟಣ ಪಂಚಾಯತಿ ಮುಂಬಾಗದ ವೇದಿಕೆಯಲ್ಲಿ ಮಾತನಾಡಿ ಕ್ಷೇತ್ರದಲಿ ಅಭಿವೃದಿ ಪರ್ವ ಮುಂದುವರೆದಿದೆ, ಪಟ್ಟಣದ ಸಮಗ್ರ ಅಭಿವೃದ್ದಿಗಾಗಿ ಸರ್ಕಾರದಿಂದ ವಿಶೇಷ 16 ಕೋಟಿ ರೂಗಳ ಅನುದಾನ ಮುಂಜೂರು ಮಾಡಿಸಲಾಗಿದೆ, ಅದರಲ್ಲಿ ಇಂದು 11 ಕೋಟಿ 11 ಲಕ್ಷ 13 ಸಾವಿರ ರೂಗಳ ಕಾಮಗಾರಿಗಳಿಗೆ ಇಂದು ಎಲ್ಲಾ ವಾರ್ಡ್‍ಗಳಿಗೂ ಚಾಲನೆ ನೀಡಲಾಗಿದೆ, ಇದರಲ್ಲಿ ಟಿ.ಎಸ್.ಪಿ. 189.92 ಲಕ್ಷ, ಎಸ್.ಸಿ.ಎಸ್.ಪಿ. 96.00 ಲಕ್ಷ, ಎಸ್.ಎಷ್.ಸಿ ವಿಶೇಷ ಅನುದಾನ 600 ಲಕ್ಷ, 14 ನೇ ಹಣಕಾಸು 38.58 ಲಕ್ಷ, 15 ನೇ ಹಣಕಾಸು 157.67 ಲಕ್ಷ, ಎಸ್.ಎಷ್.ಸಿ 29.36 ಲಕ್ಷ, ಸೇರಿ ಒಟ್ಟು 111.13 ಲಕ್ಷ ರೂಗಳ ಅನುಧಾನ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು. ಕೊರಟಗೆರೆ ಪಟ್ಟಣದ ಅಭಿವೃದಿಗೆ…

Read More

ತುಮಕೂರು ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಮತ್ತು ಜವಾಬ್ದಾರಿಯಾಗಿದ್ದು, ಎಲ್ಲರೂ ತಪ್ಪದೇ ತಮ್ಮ ಜವಾಬ್ದಾರಿಯನ್ನು ಮತದಾನ ಮಾಡುವ ಮೂಲಕ ಚಲಾಯಿಸಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ. ಕೆ.ವಿದ್ಯಾಕುಮಾರಿ ಅವರು ತಿಳಿಸಿದರು. ತುಮಕೂರು ನಗರದ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸ್ವಿಪ್ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ತುಮಕೂರು(ದ) ಜಿಲ್ಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿವಿಧ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡು, ತಪ್ಪದೇ ಮತಚಲಾಯಿಸಬೇಕು. ಪ್ರಜಾಪ್ರಭುತ್ವ ದೇಶದಲ್ಲಿ ಬದುಕುತ್ತಿರುವ ನಾವು ದೇಶವನ್ನು ಉಳಿಸಿ, ಬೆಳೆಸಬೇಕಿದೆ. ನಮ್ಮ ಹಿರಿಯ ಹೋರಾಟಗಾರರ ಪರಿಶ್ರಮದಿಂದ ನಮಗೆ ಸ್ವಾತಂತ್ರ್ಯ ದೊರೆತು 75 ವರ್ಷವಗಳಾಗಿದೆ. ಹಾಗಾಗಿ ಪ್ರತಿಯೊಬ್ಬ ನಾಗರೀಕನೂ ಸಂವಿಧಾನದತ್ತವಾಗಿ ನಮಗೆ ನೀಡಿರುವ ಮತದಾನ ಮಾಡುವ ಹಕ್ಕನ್ನು ಚಲಾಯಿಸಬೇಕು. ಈ ನಿಟ್ಟಿನಲ್ಲಿ…

Read More

ಪಾವಗಡ ತಾಲ್ಲೂಕಿನ ಮತದಾರರ ಒಲವು ನನ್ನ ಮೇಲಿದ್ದು ಮುಂಬರುವ ಚುನಾವಣೆಯಲ್ಲಿ ನನಗೆ ಆರ್ಶಿವಾದ ನೀಡಲಿದ್ದಾರೆ ಎಂದು ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿ ಎಚ್.ವಿ. ವೆಂಕಟೇಶ್ ತಿಳಿಸಿದರು. ಕಾರ್ತಿಕ ಮಾಸದ ಅಂಗವಾಗಿ ಪಟ್ಟಣದ ಮೂರು ಮುಖ ನೆಲದಲ್ಲಿರುವ ಕರಿಕಲ್ಲು ಗಂಗಮ್ಮ ಮತ್ತು ಸಪ್ತಮಾತ್ರಿಕಾ ದೇವಸ್ಥಾನದಲ್ಲಿ ಲಕ್ಷ್ಮದಿಪೋತ್ಸವ ಮತ್ತು ಗಂಗಾರತಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನನ್ನ ತಂದೆಯವರು ಕೈಗೊಂಡಿರುವ ಅಭಿವೃದ್ದಿ ಕೆಲಗಳನ್ನು ನೋಡಿ ಜನರು ಮೆಚ್ಚಿದ್ದಾರೆ, ಹೀಗಾಗಲೆ ಹೈಕಮಾಂಡ್ ನನ್ನನ್ನು ಗುರ್ತಿಸಿದ್ದು, ಮುಂದಿನ ಜನವರಿಯಲ್ಲಿ ರಾಜ್ಯದ 150 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಪ್ರಕಟಣೆ ಮಾಡಲಿದ್ದು ಅದರಲ್ಲಿ ನನ್ನ ಹೆಸರು ಇರುತ್ತದೆ ಎಂದು ತಿಳಿಸಿ, ಗಂಗಮ್ಮ ದೇವಸ್ಥಾನವು ದಿನೇ ದಿನೇ ಹೆಚ್ಚು ಪ್ರಖ್ಯಾತಿಯಾಗುತ್ತಿದ್ದು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದು ಈ ದೇವಿಯ ಅರ್ಶೀವಾದ ನನ್ನ ಮೇಲೆ ಇದ್ದು, ಕರಿಕಲ್ಲುಗಂಗಮ್ಮ ಅನುಗ್ರಹದಿಂದ ತಾಲ್ಲೂಕಿನ ಜನರ ಸೇವೆ ಮಾಡುತ್ಥೇನೆ ಮತ್ತು ದೇವಸ್ಥಾನದ ಅಭಿವೃದ್ದಿಗೆ ಸಹಾಯಹಸ್ತ ನೀಡುತ್ತೇನೆ ಎಂದು ತಿಳಿಸಿದರು. ಕರಿಕಲ್ ಗಂಗಮ್ಮ ದೇವಸ್ಥಾನ ನಿರ್ಮಾಣವಾದಾಗಿನಿಂದ ಪಾವಗಡ…

Read More

ತುಮಕೂರು ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಬೆಂಗಳೂರಿನ ಸಿಂಧಿ ಚಾರಿಟಬಲ್ ಟ್ರಸ್ಟ್ ವತಿಯಿಂದ 12 ಆಮ್ಲಜನಕಗಳ ಸಾಂದ್ರಕಗಳನ್ನು(ಆಕ್ಸಿಜನ್ ಕಾನ್ಸೆಂಟ್ರೇಟರ್) ನೀಡುವ ಮೂಲಕ ಸಮಾಜದ ಬಡವರ್ಗದ ರೋಗಿಗಳಿಗೆ ಉಚಿತವಾಗಿ ಬಳಸಿಕೊಳ್ಳುವಂತೆ ಮನವಿ ಮಾಡಿದೆ. ಕಾರ್ಯಕ್ರಮದಲ್ಲಿ ಸಿಂಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ದೀಪಕ್ ಮಹಾರಾಜ್ ಮಾತನಾಡಿ ಸಾರ್ವಜನಿಕರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಸಿಂಧಿ ಚಾರಿಟಬಲ್ ಟ್ರಸ್ಟ್ ಸಂಸ್ಥೆಯನ್ನು ಆರಂಭಿಸಿದ್ದು, ಇದುವರೆಗೂ 50 ಸಾಂದ್ರಿಕೆಗಳನ್ನು ಗ್ರಾಮೀಣ ಪ್ರದೇಶಗಳ ಆರೋಗ್ಯ ಕೇಂದ್ರಗಳಿಗೆ ನೀಡಿದ್ದೇವೆ. ಬಡತನದ ಜನರಿಗೆ ಸಹಾಯವಾಗುವಂತೆ ಮಾನವ ಸಂಪನ್ಮೂಲಗಳು ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು. ಸಾಹೇ ವಿಶ್ವವಿದ್ಯಾಲಯದ ಕುಲಪತಿ ಪಿ ಬಾಲಕೃಷ್ಣ ಶೆಟ್ಟಿ ಮಾತನಾಡಿ ಸಾಕ್ಷರತೆ ಹೆಚ್ಚುತ್ತಿರುವುದರಿಂದ ವೈದ್ಯಕೀಯ ಕಾಲೇಜು, ಸಮಾಜಕ್ಕೆ ಅನೇಕ ಸೇವೆ ಕೊಡುಗೆ ನೀಡುತ್ತಾ ಬರುತ್ತಿದೆ. ಇದನ್ನೆಲ್ಲಾ ಪರಿಗಣಿಸಿ ಬೆಂಗಳೂರಿನ ಸಿದ್ದು ಚಾರಿಟಬಲ್ ಟ್ರಸ್ಟ್, ಸಿದ್ದಾರ್ಥ ಆಸ್ಪತ್ರೆಗೆ 12 ಆಕ್ಸಿಜನ್ ಸಾಂದ್ರಕಗಳನ್ನು ನೀಡಿದ್ದಾರೆ ಎಂದರು. ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ಸಾಹೇ ವಿಶ್ವವಿದ್ಯಾಲಯದ…

Read More