ತುಮಕೂರು ತಿಪಟೂರಿನ ಬಯಲುಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘವು ನೀಡುವ ಸಾಹಿತ್ಯ ಕಲ್ಪತರು ರಾಜ್ಯಮಟ್ಟದ ಪ್ರಶಸ್ತಿಗೆ ನಮ್ಮ ನಾಡಿನ ಹಿರಿಯ ಕವಯತ್ರಿ, ಅನುವಾದಕರು, ಪ್ರಬಂಧಕಾರರು, ಪ್ರಕಾಶಕರು ಆದ ಪೆÇ್ರ. ಎಂ.ಆರ್. ಕಮಲ ಅವರು ಭಾಜನರಾಗಿದ್ದಾರೆ. ಈ ಪ್ರಶಸ್ತಿಯು ಹತ್ತು ಸಾವಿರ ನಗದು, ಫಲಕ ಮತ್ತು ಸನ್ಮಾನಗಳನ್ನು ಒಳಗೊಂಡಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಭಾನುಪ್ರಶಾಂತ್ ತಿಳಿಸಿದ್ದಾರೆ. ಕಮಲ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಜೀವಮಾನದ ಸಾಧನೆಗಾಗಿ ಅವರನ್ನು ಈ ಪ್ರಶಸ್ತಿಗಾಗಿ ಆಯ್ಕೆಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಇದು ಸಂಘವು ಕೊಡಮಾಡುತ್ತಿರುವ ಮೂರನೆಯ ಪ್ರಶಸ್ತಿಯಾಗಿದ್ದು, ಕಳೆದರೆಡರು “ಸಾಹಿತ್ಯ ಕಲ್ಪತರು” ಪ್ರಶಸ್ತಿಗೆ ಹಿರಿಯ ಕವಿಗಳಾದ ಡುಂಡಿರಾಜ್ ಮತ್ತು ಬಿ.ಆರ್. ಲಕ್ಷ್ಮಣರಾವ್ ಅವರುಗಳು ಭಾಜನರಾಗಿದ್ದರು. ಈ ವರ್ಷದ ಪ್ರಶಸ್ತಿಯು ತಿಪಟೂರಿನ ಸೊಸೆ, ಪಕ್ಕದ ಮೇಟಿಕುರ್ಕೆಯ ಕವಯತ್ರಿ ಎಂ.ಆರ್. ಕಮಲ ಅವರನ್ನು ಆಯ್ಕೆ ಮಾಡಲಾಗಿದೆ. ಸಾಹಿತಿ ಹೆಚ್.ಎಸ್. ಸತ್ಯನಾರಾಯಣ ಮತ್ತು ಸಾಹಿತಿ ತುರುವೇಕೆರೆ ಪ್ರಸಾದ್ ನೇತೃತ್ವದ ಸಮಿತಿಯ ಹಿರಿಯ ಚಿಂತಕ ಉಜ್ಜಜ್ಜಿ ರಾಜಣ್ಣ, ಉಪನ್ಯಾಸಕರಾದ ಎಲ್.ಎಂ.…
Author: News Desk Benkiyabale
ಚಿಕ್ಕನಾಯಕನಹಳ್ಳಿ ಅಂತರಾಷ್ಟ್ರೀಯ ಕೊಕೊನಟ್ ಕಮ್ಯೂನಿಟಿ (ಕೃಷಿ ಸಂಸ್ಥೆ) ವತಿಯಿಂದ ನವಂಬರ್ 7 ರಿಂದ 11 ರ ವರೆಗೆ ಮಲೇಷಿಯಾ ದೇಶದ ಕೋಲಾಲಂಪುರ ನಗರದಲ್ಲಿ ಆಯೋಜಿಸಲಾಗಿದ್ದ 50 ನೇ ಅಂತರಾಷ್ಟ್ರೀಯ ಕೊ ಕೊ ಟೆಕ್ ಸಮಾವೇಶ ಮತ್ತು ವಸ್ತುಪ್ರದರ್ಶನ ದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕ ಸಿ ಟಿ ಮುದ್ದುಕುಮಾರ್ ಮತ್ತು ತಂಡ ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರ ಚಂದ್ರಶೇಖರ್ ದೊಡ್ಡಮನಿ, ತಾಂತ್ರಿಕ ಕೋಶ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಜೈ ಕುಮಾರ್ ತಂಡದಲ್ಲಿದ್ದರು. ಅಂತರಾಷ್ಟ್ರೀಯ ಕೊ ಕೊ ಟೆಕ್ ಸಮಾವೇಶ ಮತ್ತು ವಸ್ತುಪ್ರದರ್ಶನವು ಪ್ರತಿ 2 ವರ್ಷಕ್ಕೊಮ್ಮೆ ಜರುಗುವ ಸಮಾವೇಶವಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಏಷ್ಯ ಖಂಡದ 8 ದೇಶಗಳು ಒಳಗೊಂಡಂತೆ ಒಟ್ಟು 20 ತೆಂಗು ಬೆಳೆಯುವ ದೇಶಗಳು ಈ ಅಂತರಾಷ್ಟ್ರೀಯ ಒಕ್ಕೂಟಕ್ಕೆ ಒಳಪಟ್ಟಿದ್ದು, ಈ ಎಲ್ಲಾ ದೇಶಗಳು ಸಮಾವೇಶದಲ್ಲಿ ಭಾಗವಹಿಸಿವೆ. ಈ ಸಮಾವೇಶದಲ್ಲಿ ತೆಂಗು ಬೆಳೆಯುವ…
ತುಮಕೂರು ಛಲವಾದಿ ಕಲಾ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ನವೆಂಬರ್ 20ರ ಭಾನುವಾರದಂದು ವೀರ ವಿನಿತೆ ಒನಕೆ ಓಬವ್ವ ಅವರ ಜಯಂತಿಯನ್ನು ನಗರದ ಡಾ.ಗುಬ್ವಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ನಗರದ ಹರ್ತಿ ಪತ್ತಿನ ಸಹಕಾರ ಸಂಘದಲ್ಲಿ ಸೇರಿದ್ದ ಛಲವಾದಿ ಸಮುದಾಯದ ಮುಖಂಡರ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ಜಯಂತಿ ಕಾರ್ಯಕ್ರಮಕ್ಕೆ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕ ಡಾ.ಜಿ.ಪರಮೇಶ್ವರ್,ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ರಾಜ್ಯ ಆಯೋಗದ ಅಧ್ಯಕ್ಷ ಹಾಗೂ ಶಾಸಕರಾದ ಚ.ನೆಹರು ಓಲೆಕಾರ್,ಮಾಜಿ ಸಚಿವ ಹಾಗೂ ಶಾಸಕ ಹೆಚ್.ಕೆ.ಕುಮಾರಸ್ವಾಮಿ,ನೆಲಮಂಗಲ ಶಾಸಕರಾದ ಡಾ.ಕೆ.ಶ್ರೀನಿವಾಸಮೂರ್ತಿ, ತುಮಕೂರು ಮೇಯರ್ ಶ್ರೀಮತಿ ಪ್ರಭಾವತಿ ಸುಧೀಶ್ವರ್ ಸೇರಿದಂತೆ ಸಮುದಾಯದ ಗಣ್ಯರುಗಳನ್ನು ಒನಕೆ ಓಬವ್ವ ಜಯಂತಿಯ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲು ತೀರ್ಮಾನಿಸಲಾಯಿತು. ಒನಕೆ ಓಬವ್ವ ಜಯಂತಿ ಕಾರ್ಯಕ್ರಮದ ಅಂಗವಾಗಿ ಜನಾಂಗದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಕಲಾ,ಜನಪದ ಕ್ಷೇತ್ರದಲ್ಲಿ ದುಡಿದ ಹಿರಿಯರನ್ನು ಈ ವೇಳೆ ಗೌರವಿಸಲಾಗುವುದು.ಅಲ್ಲದೆ ಛಲವಾದಿ ಕಲಾ ಮತ್ತು ಸಾಂಸ್ಕøತಿಕ ವೇದಿಕೆಯಿಂದ ಕುರುಕ್ಷೇತ್ರ ನಾಟಕದ ಪ್ರದರ್ಶನವನ್ನು ಸಹ ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ.ಈ…
ತುಮಕೂರು ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರದಿದ್ದರೆ ಭವಿಷ್ಯದ ಭಾರತ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅಭಿಪ್ರಾಯಪಟ್ಟಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ದೇಶದ ಮೊದಲ ಪ್ರಧಾನಿ ನೆಹರು ಅವರ 134 ಜನ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತಿದ್ದ ಅವರು,ಸ್ವಾತಂತ್ರ ಬಂದಾಗ ದೇಶದಲ್ಲಿ ತಿನ್ನಲು ಅನ್ನವಿಲ್ಲದೆ, ಪ್ರತಿಯೊಂದಕ್ಕೂ ಪರಾವಲಂಭಿಯಾಗಿದ್ದ ಭಾರತವನ್ನು ಪಂಚವಾರ್ಷಿಕ ಯೋಜನೆಗಳ ಮೂಲಕ ಹಂತ ಹಂತವಾಗಿ ಕಟ್ಟಿ, ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸಿದ್ದು ನೆಹರು ಅವರು, ಆದರೆ ಇಂದಿನ ಪ್ರಧಾನಿ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡಿ, ದೇಶವನ್ನು ಮತ್ತೊಮ್ಮೆ ಅದೋಗತಿಗೆ ತಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಭಾರತ ಮತ್ತೊಮ್ಮೆ ನೆರೆ ಹೊರೆ ರಾಷ್ಟ್ರಗಳಲ್ಲಿ ತಿನ್ನುವ ಅನ್ನಕ್ಕೂ ಭೀಕ್ಷೆ ಬೇಡುವಂತಹ ಪರಿಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ ಎಂದರು. ನೆಹರು ಅವರಿಗೆ ಮಕ್ಕಳೆಂದರೆ ಪಂಚಪ್ರಾಣ.ಹಾಗಾಗಿ ತಮ್ಮ ಜನ್ಮ ದಿನವನ್ನು ಮಕ್ಕಳ ದಿನವಾಗಿ ಆಚರಿಸಲು ಕೋರಿಕೊಂಡರು. ಸಂಕಷ್ಟದ ಸಂದರ್ಭದಲ್ಲಿ ದೇಶದ ಚುಕ್ಕಾಣಿ…
ತುಮಕೂರು ಸಾರ್ವಜನಿಕರು ಹಾಗೂ ಕ್ರೀಡಾಪಟುಗಳ ಒತ್ತಾಯದ ಮೇರೆಗೆ ಮಹಾತ್ಮಗಾಂಧಿ ಕ್ರೀಡಾಂಗಣದ ಸಿಂಥಟಿಕ್ ಟ್ರಾಕ್ ನಿರ್ಮಾಣ ಕಾರ್ಯ ಬರದಿಂದ ಸಾಗಿದ್ದು,ಕ್ರೀಡಾಪಟುಗಳ ಮನವಿಗೆ ಸ್ಪಂದಿಸಿರುವ ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ತಿಳಿಸಿದ್ದಾರೆ. ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಂಥಟಿಕ್ ನಿರ್ಮಾಣ ಕಾಮಗಾರಿಯನ್ನು ಕ್ರೀಡಾಪಟುಗಳೊಂದಿಗೆ ವೀಕ್ಷಿಸಿದ ನಂತರ ಮಾತನಾಡಿದ ಅವರು,ಕಳೆದ ನಾಲ್ಕು ವರ್ಷದಿಂದ ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ಸ್ಥಳ ವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.ಕ್ರೀಡಾಂಗಣ ನಿರ್ಮಾಣಗೊಂಡರು,ಮಳೆಯ ಕಾರಣದಿಂದ ಅಧಿಕಾರಿಗಳು ಸಿಂಥಟಿಕ್ ಟ್ರಾಕ್ ಅಳವಡಿಸಲು ಮೀನಾಮೇಷ ಎಣಿಸುತ್ತಿರುವ ಬಗ್ಗೆ ಕ್ರೀಡಾಪುಟುಗಳು ಅಕ್ರೋಶ ವ್ಯಕ್ತಪಡಿಸಿ,ಹೋರಾಟಕ್ಕೆ ಮುಂದಾಗಿದ್ದರು.ವಿಷಯ ಅರಿತ ಶಾಸಕ ಜಿ.ಬಿ.ಜೋತಿಗಣೇಶ್, ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಗಳೊಂದಿಗೆ ಮಾತುಕತೆ ನಡೆಸಿ,ಟ್ರಾಕ್ ನಿರ್ಮಾಣದ ಜೊತೆಗೆ,ಪೂರಕ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭ ವಾಗಿದೆ. ಶಾಸಕರ ಈ ಪ್ರಯತ್ನಕ್ಕೆ ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳು ಕೃತ್ಞಜತೆ ಸಲ್ಲಿಸುತ್ತೇವೆ ಎಂದರು. ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜರ್ಮನಿಯಿಂದ ಅಮದು ಮಾಡಿಕೊಳ್ಳಲಾದ ಸಿಂಥಟಿಕ್ ಟ್ರಾಕ್‍ನ ವಸ್ತುಗಳನ್ನು ಬಳಸಿ ಕೊಂಡು ನುರಿತ ತಂಡ ಈ ಕಾರ್ಯವನ್ನು…
ತುಮಕೂರು ವಿಪಕ್ಷದ ನಾಯಕ ಸಿದ್ದರಾಮಯ್ಯನವರು ರಾಜ್ಯದ 224 ಕ್ಷೇತ್ರಗಳಲ್ಲಿ ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸಬಹುದು ಹಾಗೂ ಗೆದ್ದುಬರುತ್ತಾರೆ ಕೂಡ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು. ಇಲ್ಲಿನ ಡಿಸಿಸಿ ಬ್ಯಾಂಕ್ ಸಭಾಂಗಣ ದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಅವರು, ನಾವು ಈ ಹಿಂದೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ಮನವಿ ಮಾಡಿದ್ದೆವು, ತುಮಕೂರು ಜಿಲ್ಲೆಗೆ ಬಂದರೆ ಸಂತೋಷ ಎಂದ ಅವರು ಮಾಜಿ ಶಾಸಕ ಎಚ್.ನಿಂಗಪ್ಪ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ, ಟಿಕೆಟ್ ನೀಡುವುದು ಬಿಡುವುದು ಹೈಕಮಾಂಡ್‍ಗೆ ಬಿಟ್ಟದ್ದು, ಆ ಬಗ್ಗೆ ನಾನೇನು ಹೇಳುವುದಿಲ್ಲ ಎಂದರು. ರಾಜ್ಯ ಸರ್ಕಾರದಿಂದ ಪುನರ್ ಸ್ಥಾಪಿಸಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಅಡಿಯಲ್ಲಿ ಸಹಕಾರ ಸಂಘಗಳ ಮೂಲಕ ಜಿಲ್ಲೆಯ ಹೆಚ್ಚು ಮಂದಿ ರೈತರು ಸದಸ್ಯತ್ವ ನೊಂದಾಯಿಸಬೇಕೆಂದು ಮನವಿ ಮಾಡಿಕೊಂಡರು. ಯಶಸ್ವಿನಿ ಯೋಜನೆಯಡಿ ನೊಂದಾಯಿತ ನೆಟ್‍ವರ್ಕ್ ಆಸ್ಪತ್ರೆಗಳಲ್ಲಿ 1650 ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ವರೆಗೆ ಆರೋಗ್ಯ ವಿಮಾ…
ತುಮಕೂರು ನಗರದ ಜನಚಳುವಳಿ ಕೇಂದ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಭಾರತೀಯ ಸಾಮಾಜಿಕ ಕಾರ್ಯಕರ್ತೆ ಗುಜರಾತ್ ನ ಇಳಾಭಟ್ ರವರ ಶ್ರದ್ದಾಂಜಲಿ ಸಭೆಯನ್ನು ಜನಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಳ್ಳಲಾಗಿತ್ತು. ಸಭೆಯನ್ನುದ್ದೇಶಿಸಿ ಚಿಂತಕ ಸಿ.ಯತಿರಾಜ್ ಮಾತನಾಡಿ ಬೀದಿ ಬದಿ ವ್ಯಾಪಾರಿಗಳು ಮತ್ತು ಮಹಿಳಾ ವ್ಯಾಪಾರಿಗಳು ಗುಜರಾತ್‍ನ ಇಳಾಭಟ್ ರವರನ್ನು ಸ್ಮರಿಸಲೇಬೇಕು, ದೇಶಕ್ಕೆ ಮಾದರಿ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಮಹಿಳೆ ಅಂದಿನ ಜಾಗತೀಕರಣವನ್ನು ಬಹಳ ಹತ್ತಿರದಿಂದ ಕನಸು ಕಂಡವರು. ವೃತ್ತಿಯಲ್ಲಿ ವಕೀಲರಾಗಿ ಸಮಾಜಿಕ ಬದ್ದತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಸೇವೆಗೆ ಸಮಯ ಕೊಟ್ಟವರು. ಇವರು ಭಾರತದ ಬಡಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸಲು ಮಹಿಳಾ ಸಂಘವನ್ನು (ಸೇವಾ) ಸಂಸ್ಥೆಯನ್ನು 1972 ರಲ್ಲಿ ಸ್ಥಾಪಿಸಿ ಮಹಿಳೆಯರಿಗಾಗಿ ಟ್ರೇಡ್ ಯೂನಿಯನ್’ ಸಂಸ್ಥೆಯಾಗಿ 1.2 ಮಿಲಿಯನ್‍ಗೂ ಹೆಚ್ಚು ಸದಸ್ಯರನ್ನು ಹೊಂದಿದೆ ಸಹಕಾರಿ ಬ್ಯಾಂಕ್ ಸ್ಥಾಪಿಸಿದರು ಸುಮಾರು 3 ಮಿಲಿಯನ್ (30ಲಕ್ಷ) ಹೆಣ್ಣು ಮಕ್ಕಳ ಜೀವನವನ್ನು ರೂಪಿಸಿ ಸಹಾಯ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಇವತ್ತಿನ ಬೀದಿಬದಿ ವ್ಯಾಪಾರಿಗಳು ಮಹಿಳಾ ವ್ಯಾಪಾರಿಗಳು ಇಂತಹ…
ತುಮಕೂರು ಸಾಂಸ್ಕøತಿಕ ಕಾರ್ಯಕ್ರಮಗಳು ಮನುಷ್ಯನ ಮನಸ್ಸನ್ನು ಅರಳಿಸುವಲ್ಲಿ ಸಹಕಾರಿಯಾಗಿವೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕೆಂದು ಎಂದು ಪತ್ರಿಕೋದ್ಯಮಿ ಎಸ್.ನಾಗಣ್ಣ ತಿಳಿಸಿದ್ದಾರೆ. ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕರುನಾಡು ವಿಜಯ ಸೇನೆ ಆಯೋಜಿಸಿದ್ದ ಕರುನಾಡ ಸಾಂಸ್ಕøತಿಕ ಹಬ್ಬದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಚಲನಚಿತ್ರ,ಸಂಗೀತ ಕ್ಷೇತ್ರಗಳಲ್ಲಿ ಹೆಸರು ಮಾಡಿದಂತಹ ಮಹಾ ಕಲಾವಿದರ ಕಾರ್ಯಕ್ರಮಗಳನ್ನು ಟಿ.ವಿ.ಷೋಗಳಲ್ಲಿ ಮಾತ್ರ ನೋಡುತಿದ್ದೇವು. ಇಂದು ತುಮಕೂರಿನ ಜನ ನಿಜವಾಗು ನೋಡುವಂತಾಗಿರುವುದಕ್ಕೆ ಕರುನಾಡ ವಿಜಯಸೇನೆಯ ಅಧ್ಯಕ್ಷ ಹೆಚ್.ಎನ್.ದೀಪಕ್ ಹಾಗೂ ಅವರ ಪದಾಧಿಕಾರಿಗಳು ಕಾರಣ ಎಂದರು. ಇತ್ತೀಚಿನ ದಿನಗಳಲ್ಲಿ ಖಾಸಗಿ ವಾಹಿನಿಗಳು ಪೈಪೋಟಿಯ ಮೇಲೆ ಸಂಗೀತ,ನೃತ್ಯ ರಿಯಾಲಿಟಿ ಷೋಗಳನ್ನು ನಡೆಸುತಿದ್ದಾರೆ.ಅವರಿಗೆ ಸರಿಸಮ ವೆಂಬಂತೆ ತುಮಕೂರಿನಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕರು, ಹಾಸ್ಯ ಕಲಾವಿದರು, ನೃತ್ಯಗಾರರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ.ಇಂತಹ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಿದೆ ಎಂದು ಎಸ್.ನಾಗಣ್ಣ ತಿಳಿಸಿದರು. ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶಾಸಕ ಜೋತಿಗಣೇಶ್,ಕಳೆದ ಎರಡು ದಿನಗಳಿಂದ ಒಂದು ಉತ್ತಮ ಕಾರ್ಯಕ್ರಮ ನಡೆಯುತ್ತಿದೆ.ಪ್ರಾಯೋಜಕರು…
ಗುಬ್ಬಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ತುಮಕೂರು ಜಿಲ್ಲೆಯ ಅಧಿಕಾರಿಗಳಿಂದ ಅಧಿಕ ವಿದ್ಯುತ್ ಕಂಬಗಳ ಕೆಳಗೆ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬ ಅರಿವು ಮೂಡಿಸುವ ಕಾರ್ಯಕ್ರಮವನ್ನು ಗುಬ್ಬಿ ನಗರದ ಎಲ್ಲಾ ಬೀದಿಗಳಲ್ಲೂ ಜಾಥಾ ಮುಖಾಂತರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ವಿದ್ಯುತ್ ಪ್ರಸರಣ ನಿಗಮದ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಸೈಯದ್ ಅಂಜನ್ ಮಾತನಾಡಿ ಹೈಟೆನ್‍ಷನ್ ಹೋದ ಹಾದಿಯಲ್ಲಿ ಯಾವುದೇ ರೀತಿಯ ಕಟ್ಟಡಗಳು, ಶೆಡ್‍ಗಳನ್ನು ನಿರ್ಮಿಸಬಾರದು. ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಅವಘಡಗಳು ನಡೆದಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಥಾವನ್ನು ಗುಬ್ಬಿ ಕೆ.ಪಿ.ಟಿ.ಎಲ್.ನ ಅಧಿಕಾರಿಗಳು ಹಾಗೂ ನಿರ್ವಾಹಕರೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಾಗೂ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೊಸದಾಗಿ ಲೇಔಟ್‍ಗಳನ್ನು ನಿರ್ಮಿಸುತ್ತಿದ್ದು ಹೈಟೆನ್‍ಷನ್ ಕೆಳಗಡೆ ಯಾವುದೇ ನಿವೇಶನವನ್ನು ಹಂಚಬಾರದು. ಈಗಾಗಲೇ ಇಂತಹ ಲೇಔಟ್‍ಗಳ ನಿರ್ಮಾಣದ ಮಾಲೀಕರಿಗೆ ಹಾಗೂ ಅಧಿಕಾರಿಗಳಿಗೆ ಕಛೇರಿಯಿಂದ ತಿಳುವಳಿಕೆ ನೋಟೀಸ್‍ನ್ನು ನೀಡಿದ್ದು ಇದನ್ನು ಸರಿಯಾದ ಹಾದಿಯಲ್ಲಿ ತಮ್ಮ ನಿರಾಪೇಕ್ಷಣಾ ಪತ್ರವನ್ನು…
ತುಮಕೂರು ಯಾವುದೇ ಒಂದು ಸಮುದಾಯ ಜಾಗತಿಕ ಮಟ್ಟದಲ್ಲಿ ತಮ್ಮನ್ನು ಗುರುತಿಸಬೇಕೆಂದರೆ, ಅದಕ್ಕೆ ಶಿಕ್ಷಣವೇ ಪೂರಕವಾದ ಅಂಶವಾಗಿದ್ದು, ನೇಕಾರರು ತಮ್ಮ ಮಕ್ಕಳನ್ನು ಉನ್ನತ ವ್ಯಾಸಾಂಗದತ್ತ ಗಮನಹರಿಸುವಂತೆ ಮಾಡಬೇಕೆಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಮಹಾವೀರ ಭವನದಲ್ಲಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಮತ್ತು ತುಮಕೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದವತಿಯಿಂದ ಆಯೋಜಿಸಿದ್ದ ಜಿಲ್ಲಾ ನೇಕಾರರ ಸಮಾವೇಶ ಮತ್ತು ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಸಮುದಾಯದಲ್ಲಿ ಹೆಚ್ಚು ಹೆಚ್ಚು ಜನ ವಿದ್ಯಾವಂತರಾದಂತೆ, ಅವರ ಅರ್ಥಿಕ, ಸಾಮಾಜಿಕ ಸ್ಥಿತಿಗತಿಯೂ ಬದಲಾಗಲಿದೆ. ಹಾಗಾಗಿ ಎಲ್ಲರೂ ಶಿಕ್ಷಣದತ್ತ ಗಮನಹರಿಸಬೇಕೆಂದರು. ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ,ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಅರ್ಥಿಕವಾಗಿ ಹಿಂದುಳಿದಿರುವ ಈ ಸಮುದಾಯಕ್ಕೆ ಇದುವರೆಗೂ ಒಂದು ಅಭಿವೃದ್ದಿ ನಿಗಮ ಇಲ್ಲದಿರುವುದು ಶೋಚನೀಯ.ನಿಗಮಗಳ ಸ್ಥಾಪನೆಯಿಂದ ಸರಕಾರದಿಂದ ಜನಾಂಗದ ಅಭಿವೃದ್ದಿಗೆ ಅನುದಾನ ಬಿಡುಗಡೆಯಾಗುತ್ತದೆ.ಆ ಅನುದಾನವನ್ನು ಶೈಕ್ಷಣಿಕ ಮತ್ತು ಅರ್ಥಿಕ ಅಭಿವೃದ್ದಿಗೆ ವಿನಿಯೋಗಿಸಿ, ಸಮುದಾಯವನ್ನು ಬಲಿಷ್ಠಗೊಳಿಸಲು ಸಾಧ್ಯ. ನೇಕಾರರ ಅಭಿವೃದ್ದಿ ನಿಗಮ ಸ್ಥಾಪನೆ ಕುರಿತಂತೆ ನಾವು…










