ತುಮಕೂರು ನಾಗರೀಕತೆ ಮತ್ತು ಜ್ಞಾನದ ಬೆಳವಣಿಗೆಯಲ್ಲಿ ಹಾಗೂ ಜನ ಸಾಮಾನ್ಯರ ಮತ್ತು ವಿಧ್ಯಾರ್ಥೀಗಳ ಜ್ಞಾನ ಹೆಚ್ಚಿಸಲು ಸಾರ್ವಜನಿಕ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು. ಇಂದು ತಿಪಟೂರು ನಗರದ ಕಲ್ಪತರು ಕಾಲೇಜು ಕಾಲೇಜು ಸಭಾಂಗಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಮತ್ತು ಸಿಬ್ಬಂದಿ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತವು ಜ್ಞಾನದ ಮೂಲನೆಲೆಯಾಗಿದ್ದು, ಅಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಸಾರ್ವಜನಿಕರು ಮತ್ತು ಮಕ್ಕಳಲ್ಲಿ ಓದುವಂತಹ ಅಭ್ಯಾಸವನ್ನು ಹೆಚ್ಚು ಮಾಡುವ ಕೆಲಸ ಮಾಡುತ್ತಿದೆ, ರಾಜ್ಯದಲ್ಲಿ ಪ್ರಸ್ತುತ 6890 ಕ್ಕೂ ಹೆಚ್ಚು ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿದೆ. 1968 ರಿಂದ ಗ್ರಂಥಾಲಯ ಸಪ್ತಾಹ ಪ್ರಪ್ರಥಮವಾಗಿ ಆಚರಣೆಗೆ ಬಂದಿತು. ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ತುಮಕೂರಿನಲ್ಲಿ 19…
Author: News Desk Benkiyabale
ತುಮಕೂರು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ತುಮಕೂರು, ವಿಶ್ವವಿದ್ಯಾನಿಲಯ, ತುಮಕೂರು, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಂಕಲ್ಪ ಭವನದಲ್ಲಿ “ಭಾರತ ರತ್ನ ಡಾ: ಬಿ.ಆರ್.ಅಂಬೇಡ್ಕರ್ ಓದು” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರದ ನಿರ್ದೇಶಕರಾದ ಪ್ರೊ.ಬಸವರಾಜು ನೆರವೇರಿಸಿದರು. ನಂತರ ಮಾತನಾಡಿದ ಅವರು, ಅಂಬೇಡ್ಕರ್ ಅವರ ವಿಚಾರಧಾರೆ ಮತ್ತು ವ್ಯಕ್ತಿತ್ವವನ್ನು ಜಾತಿಯ ಕಾರಣಕ್ಕೆ ಸಂಕುಚಿತಗೊಳಿಸಲಾಗಿದೆ. ಚಿಂತಕರು ಮಾನವ ಹೊಸ ಚಿಂತನೆಗಳಲ್ಲಿ ಭೌದ್ಧಿಕ ವಿಕಸಗೊಳ್ಳಲು ಹೊಸ ಮಾದರಿಯನ್ನು ನೀಡಿದರೆ ಸರ್ವಶ್ರೇಷ್ಠ ರೀತಿಯಲ್ಲಿ ಜಗತ್ತೇ ಒಪ್ಪುವಂತ ಅನೇಕ ಉದಾತ್ತ ಚಿಂತನೆಗಳನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿ ದೇಶದ ಕೀರ್ತಿಯನ್ನು ಭೂತ, ಭವಿಷ್ಯ, ವರ್ತಮಾನಕ್ಕೆ ಒಗ್ಗುವ ರೀತಿಯಲ್ಲಿ ವಿಸ್ತರಿಸಿದ್ದಾರೆ. ಇವರ ಎಲ್ಲಾ ಸಾಧನೆಗಳು ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೇಲ್ವಿಚಾರಕರಾದ ಡಿ.ವಿ. ಸುರೇಶ್…
ತುಮಕೂರು ಪ್ರಾಣಾಪಾಯದಲ್ಲಿ ಇರುವ ಯಾವುದೇ ವ್ಯಕ್ತಿಗೆ ಸನಿಹದಲ್ಲಿ ಇರುವ ಇತರೆ ವ್ಯಕ್ತಿಯು ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಲು ಸಹಕಾರಿ ಆಗುವುದು ಅತ್ಯಾವಶ್ಯಕವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ಡಿ.ಎನ್. ಅವರು ತಿಳಿಸಿದರು. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಮಾಗಡಿ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರ ತುಮಕೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಚಿಕಿತ್ಸೆ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಶಿಕ್ಷಣದಲ್ಲೇ ಒಂದು ಭಾಗವಾಗಿ ಪ್ರಥಮ ಚಿಕಿತ್ಸೆ ಬಗ್ಗೆ ತಿಳುವಳಿಕೆ ನೀಡುವುದು ಅನೇಕ ದೇಶಗಳಲ್ಲಿದೆ. ಈ ರೀತಿಯ ತರಬೇತಿಯಿಂದ ಜೀವ ಹಾನಿ ಆಗುವ ಸಂದರ್ಭದಲ್ಲಿ ಮೂಕ ಪ್ರೇಕ್ಷಕರಾಗುವುದರ ಹೊರತು ಅPಖ (ಅಚಿಡಿಜioಠಿuಟmoಟಿಚಿಡಿಥಿ ಡಿesusಛಿiಣಚಿಣioಟಿ) ಗೊತ್ತಿದ್ದರೆ ಜೀವ ಉಳಿಸಬಹುದೆಂದು ತಿಳಿಸಿದರು. ಡಾ.ಚಂದ್ರಶೇಖರ್ ಅವರು ಮಾತನಾಡುತ್ತಾ, ಒಬ್ಬ ವೈದ್ಯರಿಗೆ ಇಂತಹ ಸಂದರ್ಭದಲ್ಲಿ ಕೇವಲ 03 ನಿಮಿಷ ಇರುತ್ತದೆ. ಈ 03 ನಿಮಿಷದಲ್ಲಿ ಸಿ.ಪಿ.ಆರ್ ಮಾಡಿ ಮೆದುಳಿಗೆ ಆಮ್ಲಜನಕ ಸಿಗುವ ಹಾಗೆ ಮಾಡದೆ ಇದ್ದರೆ ರೋಗಿಯ…
ತುಮಕೂರು ನಗರದ ವಿವಿದೆಡೆಗಳಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಹಾಸ್ಟಲ್ ವಿದ್ಯಾರ್ಥಿಗಳು ನಗರ ಪ್ರದೇಶಗಳಲ್ಲಿರುವ ಶಾಲಾ ಕಾಲೇಜುಗಳಿಗೆ ಬರಲು ತೀವ್ರ ತೊಂದರೆಯಾಗುತ್ತಿದ್ದು, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾದಿಗ ದಂಡೋರ ರಾಜ್ಯ ವಕ್ತಾರ ಎಂ.ವಿ.ರಾಘವೇಂದ್ರಸ್ವಾಮಿ ಒತ್ತಾಯಿಸಿದ್ದಾರೆ. ನಗರದ ಅಂಬೇಡ್ಕರ್ ಭವನದಲ್ಲಿ ಹಾಸ್ಟಲ್ ವಿದ್ಯಾರ್ಥಿಗಳು ಅನುಭವಿಸುತ್ತಿರುವ ನೋವುಗಳ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು,ತುಮಕೂರು ಜಿಲ್ಲೆಯ ವಿವಿಧ ತಾಲೂಕುಗಳಿಂದ ವಿದ್ಯಾಭ್ಯಾಸಕ್ಕಾಗಿ ನಗರ ಪ್ರದೇಶಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಒದಗಿಸುವ ಉದ್ದೇಶದಿಂದ ನಗರದ ಹೊರವಲಯದಲ್ಲಿರುವ ಸಿ.ಎ.ಸೈಟ್‍ಗಳಲ್ಲಿ ಜಿಲ್ಲಾಡಳಿತ ಎಲ್ಲಾ ವರ್ಗದ ವಿದ್ಯಾರ್ಥಿಗಳ ಮೆಟ್ರಿಕ್‍ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟಲ್‍ಗಳನ್ನು ನಿರ್ಮಿಸಿ,ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಸಿವೆ.ಆದರೆ ನಗರದ ಬಹುತೇಕ ಶಾಲಾ, ಕಾಲೇಜುಗಳು ನಗರದ ಒಳಭಾಗದಲ್ಲಿದ್ದು,ಐದಾರು ಕಿ.ಮಿ.ದೂರು ನಡೆದು ಬರಬೇಕಾಗಿದೆ.ಕೆಲವು ಕಡೆಗಳಲ್ಲಿ ಬಸ್ ಸೌಲಭ್ಯವಿದ್ದರೆ, ಮತ್ತೆ ಕೇಲವು ಕಡೆಗಳಲ್ಲಿ ಬಸ್ ಸೌಲಭ್ಯಗಳಿಲ್ಲ. ಇದು ವಿದ್ಯಾರ್ಥಿಗಳು ನಿಗಧಿತ ಸಮಯದಲ್ಲಿ ಶಾಲೆ,ಕಾಲೇಜುಗಳಿಗೆ ಹೋಗಿ ಪಾಠ, ಪ್ರವಚನ…
ತುಮಕೂರು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತದ ವಿದ್ಯುತ್ ಮೇಲು ಮಾರ್ಗಗಳ (ಓವರ್ ಹೆಡ್ ಲೈನ್ಸ್ ಮಾರ್ಗದ) ಕೆಳಗೆ ಕಟ್ಟಡಗಳನ್ನು ನಿರ್ಮಿಸುವುದು ಹಾಗೂ ಪಕ್ಕದಲ್ಲಿ ಹಾದುಹೋಗುವ ಸಂದರ್ಭಗಳಲ್ಲಿ ಸೂಕ್ತ ಅಂತರ ಕಾಪಾಡದೇ ಕಟ್ಟಡ ಕಟ್ಟುವುದು, ಅಇಂ(ಒeಚಿsuಡಿes ಡಿeಟಚಿಣiಟಿg ಣo sಚಿಜಿeಣಥಿ ಚಿಟಿಜ eಟeಛಿಣಡಿiಛಿ suಠಿಠಿಟಥಿ) ಖeguಟಚಿಣioಟಿs 2010ರ ಅನುಬಂಧನೆಗಳನ್ವಯ ನಿಷೇಧಿಸಲಾಗಿರುತ್ತದೆ ಎಂದು ಬೆವಿಕಂ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿಬಂಧನೆಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ಸುರಕ್ಷತಾ ಅಂತರ ಕಾಪಾಡದೇ ನಿರ್ಮಿಸುವುದು. ನಿರ್ಮಿಸಿರುವ ಕಟ್ಟಡಗಳಲ್ಲಿ ವಾಸಿಸುತ್ತಿರುವುದು ಹಾಗೂ ಹಾಗೇ ನಿಯಮಬಾಹಿರವಾಗಿ ನಿರ್ಮಿಸುವ ಕಟ್ಟಡಗಳ ಛಾವಣಿಗಳ ಮೇಲೆ ಇತರೆ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು, ವಿದ್ಯುತ್ ಕಂಬ/ಗೋಪುರಗಳಿಗೆ ಹೊಂದಿಕೊಂಡಂತೆ ಕಟ್ಟಡಗಳನ್ನು/ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸುವುದು ಮತ್ತು ಕಂಬಗಳಿಗೆ ಬ್ಯಾನರ್‍ಗಳು ಮತ್ತು ಬಂಟಿಂಗ್‍ಗಳನ್ನು ಕಟ್ಟುವುದು, ಅಡಿಕೆ, ತೆಂಗು ಮತ್ತು ತೋಟಗಳನ್ನು ಮತ್ತು ನೀಲಗಿರಿ ಮರಗಳನ್ನು ಬೆಳೆಸುವುದು ಮತ್ತು ಕಬ್ಬಿಣದ ರೋಟಿಗಳನ್ನು ಬಳಸುವುದು, ವಿದ್ಯುತ್ ಮಾರ್ಗದ ಕೆಳಗಡೆ ಸಾರ್ವಜನಿಕ/ ಮಕ್ಕಳ…
ತುಮಕೂರು ಆರೋಗ್ಯ ಸಮಸ್ಯೆಯಿಂದ ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಸಾರ್ವಜನಿಕರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯಬೇಕೆಂದು ಆರೋಗ್ಯ ಮತ್ತು ಕುಟುಂಬ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವರಾದ ಡಾ: ಕೆ. ಸುಧಾಕರ್ ತಿಳಿಸಿದರು. ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಆಡಿಟೋರಿಯಂನಲ್ಲಿ ವೈದ್ಯರುಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು. ಆಸ್ಪತ್ರೆಗಳಿಗೆ ಡಯಾಲಿಸಿಸ್ ಮಾಡಿಸಿಕೊಳ್ಳಲು ಬರುವಂತಹ ರೋಗಿಗಳಿಗೆ ಯಾವುದೇ ರೀತಿ ಸೋಂಕು ಆಗದ ರೀತಿ ವೈದ್ಯರುಗಳು ಮತ್ತು ಶುಶ್ರೂಷಕರು ಎಚ್ಚರಿಕೆ ವಹಿಸಬೇಕು. ಇದರಿಂದ ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ತಪ್ಪುತ್ತದೆ. ಬಳಸಿದ ಉಪಕರಣಗಳನ್ನು ಮರು ಬಳಸದಂತೆ ‘ಸಿಂಗಲ್ ಯೂಸ್’ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ: ವೀಣಾ ಅವರು ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 10 ಡಯಾಲಿಸಿಸ್ ಯಂತ್ರಗಳಿದ್ದು, 3 ಪಾಳಿಯಲ್ಲಿ ಡಯಾಲಿಸಿಸ್ ಮಾಡಲಾಗುತ್ತಿದ್ದು, ಪ್ರತಿ ತಿಂಗಳು 500-700 ಸೈಕಲ್ ಡಯಾಲಿಸಿಸ್ ಮಾಡಲಾಗುತ್ತಿದೆ ಎಂದು ಸಚಿವರಿಗೆ ವಿವರಿಸಿದರು. ದಂತ ಭಾಗ್ಯ ಹಾಗೂ ನೇತ್ರ ಚಿಕಿತ್ಸೆ ಕ್ಯಾಂಪ್‍ಗಳನ್ನು ಜಿಲ್ಲೆಯಾದ್ಯಂತ ನಡೆಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಚತೆಯನ್ನು…
ಗುಬ್ಬಿ ಗುಬ್ಬಿಯಲ್ಲಿ ರಾಜಯಕೀಯ ಬೆಳವಣಿಗೆ ದಿನ ಕೊಂದು ತಿರುವು ಪಡೆಯುತ್ತಿದೆ. ಜೆ ಡಿ ಎಸ್ ಉಚ್ಚಾಟಿತ ಶಾಸಕ ಎಸ್ ಆರ್ ಶ್ರೀನಿವಾಸ್ ಜೆಡಿಎಸ್ ನಾಯಕ ಕುಮಾರಸ್ವಾಮಿಯೊಂದಿಗೆ ಮುನಿಸಿ ಕೊಂಡು ಕಾಂಗ್ರೆಸ್ ಸೇರಲು ಕ್ಷಣಗಣನೆ ಸಮೀಪಿಸುತ್ತಿರುವ ಸಮಯದಲ್ಲಿ ಅವರ ಆಗಮನ ಸಹಿಸಲು ಮೂಲ ಕಾಂಗ್ರೇಸಿಗರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗಬಹುದು ಎನ್ನುವ ಭಯದಲ್ಲಿ ಅಕಾಂಕ್ಷಿಗಳಿದ್ದಾರೆ. ಎಸ್ ಆರ್ ಶ್ರೀನಿವಾಸ್ ಪಕ್ಷಕ್ಕೆ ಬಂದರೆ ಹಾಲಿ ಇರುವ ನಾಯಕರಿಗೆ ಉಳಿಗಾಲವಿಲ್ಲ ಎಂಬ ಭಯದ ವಾತಾವರಣ ಗುಬ್ಬಿ ಕಾಂಗ್ರೆಸ್‍ನಲ್ಲಿ ಸೃಷ್ಟಿಯಾಗಿದೆ. ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಲು ಹರಸಾಹಸ ಪಡುತ್ತಿರುವ ಹೊನ್ನಗಿರಿಗೌಡ , ಜಿಎಸ್ ಪ್ರಸನ್ನಕುಮಾರ್ ಇತರರಿಗೆ ವಾಸು ತನ್ನ ಪಕ್ಷದ ಅಭ್ಯರ್ಥಿ ಆಗುವುದು ಇಷ್ಟವಿಲ್ಲ ಕಾರಣ ತಮಗೆ ಕವಡೆಕಾಸಿನ ಕಿಮ್ಮತ್ತು ಇರುವುದಿಲ್ಲ ಎನ್ನವಚಿಂತೆ ಕಾಡುತ್ತಿದೆ. ಗುಬ್ಬಿ ಕ್ಷೇತ್ರ ಹಾಲಿ ಶಾಸಕ ಶ್ರೀನಿವಾಸ್ ಅವಧಿಯಲ್ಲಿ ಅಭಿವೃದ್ಧಿ ವಂಚಿತವಾಗಿದೆ ಎನ್ನುವುದು ಮತ್ತೋರ್ವ ಆಕಾಂಕ್ಷಿ ಜಿ ,ಎಸ್, ಪ್ರಸನ್ನಕುಮಾರ್ ಮಾತು, ಕೋಟಿಗಟ್ಟಲೆ ಖರ್ಚು ಮಾಡಿರುವ…
ಕೊರಟಗೆರೆ ನನ್ನ 35ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಕಹಿ ಘಟನೆ ನಡೆದಿಲ್ಲ.. ರಾತ್ರೋರಾತ್ರಿ ಹಿರಿಯ ಅಧಿಕಾರಿಗಳಿಗೆ ಕಾಮಗಾರಿಯ ಶಂಕುಸ್ಥಾಪನೆಗೆ ಆದೇಶ ಮಾಡಿಸ್ತಾರೇ. ತುಮಕೂರು ಕೆಪಿಟಿಸಿಎಲ್ ಇಲಾಖೆ ಅಧಿಕಾರಿಗಳ ವೈಫಲ್ಯ ಮತ್ತು ಕೊರಟಗೆರೆ ಬಿಜೆಪಿ ರಾಜಕೀಯ ಕುತಂತ್ರದ ಬಗ್ಗೆ ರಾಜ್ಯ ಸರಕಾರ ಮತ್ತು ಇಂಧನ ಸಚಿವರ ಗಮನಕ್ಕೆ ತರುತ್ತೇನೆ ಎಂದು ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರಟಗೆರೆ ತಾಲೂಕಿನ ಐ.ಕೆ.ಕಾಲೋನಿ(ಸಂಕೇನಹಳ್ಳಿ)ಯಲ್ಲಿ 11ಕೋಟಿ 68ಲಕ್ಷ ಮತ್ತು ತುಂಬಾಡಿ ಗ್ರಾಮದಲ್ಲಿ 10ಕೋಟಿ 19ಲಕ್ಷ ಸೇರಿ ಒಟ್ಟು 21ಕೋಟಿ 85ಲಕ್ಷ ವೆಚ್ಚದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ಎರಡು ಕಡೆಯಲ್ಲಿ ವಿದ್ಯುತ್ ಉಪ ಸ್ಥಾವರ ಘಟಕಗಳ ಕಾಮಗಾರಿಗಳಿಗೆ ಬುಧವಾರ ಶಂಕುಸ್ಥಾಪನೆ ನೇರವೆರಿಸಿದ ವೇಳೆ ಮಾತನಾಡಿದರು. 21ಕೋಟಿ ವೆಚ್ಚದ ಕಾಮಗಾರಿಯ ಶಂಕುಸ್ಥಾಪನೆ ಆಯೋಜನೆಗೆ ಕಾರಣ ತುಮಕೂರು ಕೆಪಿಟಿಸಿಎಲ್ ಇಲಾಖೆ. ರಾತ್ರೋರಾತ್ರಿ ಶಂಕುಸ್ಥಾಪನೆ ಕಾಮಗಾರಿಯನ್ನು ಮುಂದೂಡಲು ಕಾರಣವೇನು. ಕೆಪಿಟಿಸಿಎಲ್ ಇಇ ಕಾರ್ಯಕ್ರಮಕ್ಕೆ ಗೈರಾಗಿ ಮೊಬೈಲ್ ಸ್ವೀಚ್ ಆಫ್ ಮಾಡಿದ್ದಾರೆ. ಶಂಕುಸ್ಥಾಪನೆಯ ನಾಮಫಲಕವೇ ಇಲ್ಲದೇ ಗುದ್ದಲಿಪೂಜೆ ಮಾಡಲಾಗಿದೆ. ಸ್ಥಳೀಯ…
ತುಮಕೂರು ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ 2023-24ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅಭಿಯಾನದ ಭಾಗವಾಗಿ ಜಲ ಸಂಜೀವಿನಿ ಕಾರ್ಯಕ್ರಮದ ಮಹತ್ವದ ಬಗ್ಗೆ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ಆಂದೋಲನ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ. ವೈಜ್ಞಾನಿಕ ಆಧಾರದ ಮೇಲೆ ಜಿಯೋ ಸ್ಪೇಷಿಯಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳನ್ನೊಳಗೊಂಡ ವಿವರವಾದ ವೈಜ್ಞಾನಿಕ ಯೋಜನಾ ವರದಿ ತಯಾರಿಸಿ, ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುವುದು. ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಜಲ ಸಂಜೀವಿನಿ ಕಾರ್ಯಕ್ರಮದ ಬಗ್ಗೆ ತರಬೇತಿ ನೀಡಲಾಗಿದ್ದು, ವೈಜ್ಞಾನಿಕ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರಿನ ಆಯವ್ಯಯ ಮತ್ತು ಸಂಪನ್ಮೂಲ ನಕ್ಷೆಗಳಿಂದ ವಿವರವಾದ ಯೋಜನಾ ವರದಿ, ಜಿಐಎಸ್ ಆಧಾರಿತ ಜಲಾನಯನ ಪ್ರದೇಶದ ಅಭಿವೃದ್ಧಿಯಡಿ ಕಾಮಗಾರಿಗಳನ್ನು ಆಯ್ಕೆ ಮಾಡಿ, ಕಾಮಗಾರಿಗುಚ್ಚ ತಯಾರಿಸಲಾಗುತ್ತಿದೆ. ಈ ಕಾಮಗಾರಿಗಳನ್ನು ದಿಬ್ಬದಿಂದ ಕಣಿವೆ ಪರಿಕಲ್ಪನೆಯಡಿ, ದೂರದೃಷ್ಟಿ…
ತುಮಕೂರು ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಪ್ಲೇಸ್‍ಮೆಂಟ್ ವಿಭಾಗದಿಂದ ಇತ್ತೀಚೆಗೆ ಎರಡು ದಿನಗಳ ಕಾಲ “ಎಕ್ಸ್‍ಪ್ಲಿಯೋ” ಕಂಪನಿಯಿಂದ ಪೂಲ್ ಕ್ಯಾಂಪಸ್ ಡ್ರೈವ್ ಅನ್ನು (ಕ್ಯಾಂಪಸ್ ನೇಮಕಾತಿ) ನಗರದ ಎಸ್‍ಎಸ್‍ಐಟಿ ಕ್ಯಾಂಪಸ್‍ನಲ್ಲಿ ಆಯೋಜಿಸಿತ್ತು. ತುಮಕೂರು ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂಲ್ ಕ್ಯಾಂಪಸ್ ಡ್ರೈವ್‍ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ತಿಪಟೂರಿನ ಕಲ್ಪತರು, ಗುಬ್ಬಿಯ ಸಿಐಟಿ, ಅಕ್ಷಯ, ಎಚ್‍ಎಂಎಸ್, ಶ್ರೀದೇವಿ ಮತ್ತು ಎಸ್‍ಎಸ್‍ಐಟಿ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಒಟ್ಟು ಏಳು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಸುಮಾರು 254ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ. ಎಕ್ಸ್‍ಪ್ಲಿಯೋ ಕಂಪನಿಯು ಭಾರತದಲ್ಲಿ ಬೆಂಗಳೂರು, ಪುಣೆ ಮತ್ತು ಚೆನ್ನೈ ಶಾಖೆಗಳು ಹೊಂದಿದ್ದು, ಬೆಂಗಳೂರಿನ ಶಾಖೆಗೆ ನೇಮಕಾತಿ ನಡೆದಿದೆ. ಎಕ್ಸ್‍ಪ್ಲಿಯೋ ಕಂಪನಿಯ ವ್ಯವಸ್ಥಪಕರಾದ ವೆಂಕಟೇಶ್ ಸಿ, ಕಾಂಚನ್ ಸೈನಿಕ್ ನೇತೃತ್ವದ 8 ಮಂದಿಯ ತಂಡ ಪೂಲ್ ಕ್ಯಾಂಪಸ್ ಡ್ರೈವ್ ನಡೆಸಿಕೊಟ್ಟರು. ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ…











