Author: News Desk Benkiyabale

ಕೊರಟಗೆರೆ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಶ್ರೀ ಭಕ್ತಕನಕದಾಸರ ಜಯಂತಿ,ವಾಲ್ಮೀಕಿಜಯಂತಿ, 67ನೇ ಕನ್ನಡ ರಾಜ್ಯೋತ್ಸವ, ಡಾ.ಪುನಿತ್ ರಾಜ್ ಕುಮಾರ್ ರವರ 1ನೇ ಪುಣ್ಯಸ್ಮರಣೆ ಹಾಗೂ ಕರಾಟೆ ಕಿಂಗ್ ದಿ!ಶಂಕರ್ ನಾಗ್ ರವರ ಜನ್ಮದಿನ ಕಾರ್ಯಕ್ರಮಗಳನ್ನು ಪುಷ್ಪ ನಮನ ಸಲ್ಲಿಸುವ ಮೂಲಕ ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳ(ರಿ)ದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಮಾಜಿ ಸೈನಿಕರು, ಉಚ್ಛ ಮತ್ತು ಸರ್ವೊಚ್ಛ ನ್ಯಾಯಲಯದ ವಕೀಲರಾದ ಸಿಂಹ ಶಿವುಗೌಡ ಭಾರತೀಯ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಖಂಡ ಕರ್ನಾಟಕ ರಕ್ಷಣಾ ಸೇವಾದಳದ ತುಮಕೂರು ಜಿಲ್ಲಾ ಅಧ್ಯಕ್ಷರನ್ನಾಗಿ ಕೊರಟಗೆರೆ ತಾಲೂಕಿನ ಯುವ ನಾಯಕ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಹೋರಾಟಗಳಲ್ಲಿ ಸದಾ ಮುಂದಿರುವ ಹೋರಾಟಗಾರರಾದ ಶ್ರೀಯುತ ಪವನ್ ರಾಮಯ್ಯ ಅವರನ್ನು ಇದೇ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅವರು ಮಾತನಾಡುತ್ತಾ ಅಖಂಡ ಕರ್ನಾಟಕ ರಕ್ಷಣಾ ಸೇವಾದಳ ಸಂಘಟನೆಯ ಗುರಿ-ಉದ್ದೇಶಗಳು ಸಂಘಟನೆ ನಡೆದು ಬಂದ ದಾರಿಯನ್ನು ತಿಳಿಸುತ್ತಾ ಸಂಘಟನೆ ವತಿಯಿಂದ ಇದೂವರೆಗೂ ಮಾಡಿರುವ ಅನೇಕ ಸಾಮಾಜಿಕ ಹೋರಾಟಗಳ ಬಗ್ಗೆ ಮಾತನಾಡಿ,…

Read More

ತುಮಕೂರು ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದರು. ತುಮಕೂರು ವಿವಿ ಸಾವಯವ ರಸಾಯನಶಾಸ್ತ್ರ ವಿಭಾಗ ಹಾಗೂ ವಿವಿ ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ತುಮಕೂರು ವಿಶ್ವವಿದ್ಯಾನಿಲಯವು ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಆಧುನಿಕ ಸೌಲಭ್ಯಗಳಾದ ಡಿಜಿಟಲ್ ಲೈಬ್ರರಿ, ಉಚಿತ ವೈಫೈ ವ್ಯವಸ್ಥೆಯನ್ನು ಪೂರಕವಾಗಿ ಬಳಸಿಕೊಳ್ಳಬೇಕು. ಸುಸಜ್ಜಿತ ಸೌಲಭ್ಯಗಳ ಬಳಕೆ ಪ್ರತಿ ವಿದ್ಯಾರ್ಥಿಯ ಭವಿಷ್ಯವನ್ನು ಉತ್ತಮವಾಗಿ ರೂಪಿಸುತ್ತದೆ ಎಂದರು. ಇಂದಿನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಡಾ. ವಿಷ್ಣು ಹೆಗಡೆ ಅವರ ಜೀವನ-ಸಾಧನೆ ಪ್ರತೀ ವಿದ್ಯಾರ್ಥಿಗೂ ಮಾದರಿಯಾಗಬೇಕು. ಕರಾವಳಿ ಭಾಗದ ಹಳ್ಳಿಯಿಂದ ಅಮೆರಿಕಾ ದೇಶವನ್ನು ರಸಾಯನಶಾಸ್ತ್ರ ಅಧ್ಯಯನದ ಮೂಲಕ ತಲುಪಿದ ಭಾರತದ ಪ್ರಜೆಯ ಬದುಕು ಇಂದಿನ ಯುವಪೀಳಿಗೆಯ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಲಿದೆ ಎಂದರು. ಅಮೇರಿಕದ ಅಡೆಸಿಸ್ ಇಂಕ್‍ನ ಗ್ರೂಪ್ ಲೀಡರ್ ಡಾ. ವಿಷ್ಣು…

Read More

ತುಮಕೂರು ಹರಳೂರು ಶ್ರೀ ವೀರಭದ್ರ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾದ ಗುರುಮೂರ್ತಿರವರು ಯೋಗ ಶಿಕ್ಷಣ ಶಿಕ್ಷಕರಾಗಿದ್ದು ,ಯೋಗ ಶಿಕ್ಷಣದಲ್ಲಿ ಮಾಸ್ಟರ್ ಡಿಗ್ರಿ ಪದವಿಯನ್ನು ಪಡೆದಿದ್ದಾರೆ. ಶಾಲೆಯ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ದೈಹಿಕ ಒತ್ತಡವನ್ನು ನಿಯಂತ್ರಿಸಲು ಧ್ಯಾನ ಮತ್ತು ಯೋಗ ಶಿಕ್ಷಣ ಕಾರ್ಯಕ್ರಮವನ್ನು ನಡೆಸಿ. ಅವರು ವಿದ್ಯಾರ್ಥಿಗಳಿಗೆ ಧ್ಯಾನ ಮತ್ತು ಯೋಗ ಶಿಕ್ಷಣದ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳಿಗೆ ಕುಳಿತು ಮಾಡುವ ಆಸನಗಳಾದ ಪದ್ಮಾಸನ, ವಜ್ರಾಸನ, ಮಾಲಾಸನ, ಕಕ್ಕುಟಾಸನ, ಮಾಲಾಸನ, ಮತ್ಸ್ಯಾಸನ, ವೀರಾಸನ, ನಿಂತು ಮಾಡುವ ಆಸನಗಳಾದ ನಮಸ್ಕಾರಾಸನ, ವೃಕ್ಷಾಸನ.ಪರ್ವತಾಸನ. ವೀರಭದ್ರಾಸನ, ಹಸ್ತಪಾದಾಸನ, ನಟರಾಜಾಸನ, ಚಕ್ರಾಸನ, ಸರ್ವಗಾಂಸನ ಇತ್ಯಾದಿ ಆಸನಗಳು ಜೊತೆಗೆ ಸೂರ್ಯ ನಮಸ್ಕಾರ, ಪ್ರಾಣಯಾಮ ಇವುಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿ ಯೋಗ ಮತ್ತು ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ಆಗುವ ಪ್ರಯೋಜನಗಳನ್ನು, ಮಹತ್ವಗಳನ್ನು ತಿಳಿಸಿದರು. ವಿದ್ಯಾರ್ಥಿಗಳು ಆಸಕ್ತಿ ಮತ್ತು ಶ್ರದ್ಧೆಯಿಂದ ಕಲಿಯಬೇಕು ಎಂದು ಕಿವಿಮಾತು ಹೇಳಿದರು. ಯೋಗ ಶಿಕ್ಷಣದ ಶಿಬಿರದಲ್ಲಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ನಡೆಸಿದರು.

Read More

ತುಮಕೂರು ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಮೊಟ್ಟ ಮೊದಲ ಬಾರಿಗೆ ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಲಾಂಡ್ರಿ (ಬಟ್ಟೆ ತೊಳೆಯುವ) ಘಟಕವನ್ನು ಆರಂಭಿಸಲಾಗಿದೆ. ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಕನ್ನಿಕಾ ಪರಮೇಶ್ವರಿ ಅವರು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಲಾಂಡ್ರಿ ಘಟಕದ ಉದ್ಘಾಟನೆ ನೆರವೇರಿಸಿದರು. ಸ್ಮಾರ್ಟ್ ಡಿಜಿಟಲ್ ತಂತ್ರಜ್ಞಾನ ಬಳಕೆಯ ವ್ಯವಸ್ಥಿತ ಹೈಟೆಕ್ ಲಾಂಡ್ರಿ ಇದಾಗಿದ್ದು, ಪ್ರತೀ ವಾಷಿಂಗ್ ಮಿಷಿನ್ 8 ಕೆ.ಜಿ. ಸಾಮಥ್ರ್ಯ ಹೊಂದಿದೆ. ಬೆಂಗಳೂರಿನ ಹೈಯರ್ ಕಂಪನಿಯ ಸಹಭಾಗಿತ್ವದಲ್ಲಿ ಲಾಂಡ್ರಿ ಘಟಕವನ್ನು ಅಳವಡಿಸಿದ್ದು, ವಸತಿ ನಿಲಯದ ವಿದ್ಯಾರ್ಥಿನಿಯರು ಮೊಬೈಲ್ ಆ್ಯಪ್ ಮುಖಾಂತರ ಲಾಂಡ್ರಿಯನ್ನು ಬಳಸಿಕೊಳ್ಳಬಹುದು ಎಂದು ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್.ರವಿಪ್ರಕಾಶ ತಿಳಿಸಿದರು. ಸಾಹೇ ರಿಜಿಸ್ಟ್ರಾರ್ ಡಾ.ಎಂ.ಝೆಡ್.ಕುರಿಯನ್, ಹೈಯರ್ ಕಂಪನಿಯ ಶಾಖಾ ವ್ಯವಸ್ಥಾಪಕ ಸುರೇಶ್ ಸಿ. ಎನ್, ಹಾಸ್ಟೆಲ್ ವಾರ್ಡನ್ ಪ್ರೊ. ಎಂ.ಸುಷ್ಮಾ ಮತ್ತು ಹಾಸ್ಟೆಲ್ ಉಪ ವಾರ್ಡನ್ ಡಾ.ಎಂ.ಸಿ. ಸುಪ್ರಿಯಾ ಸ್ಮಾರ್ಟ್ ಲಾಂಡ್ರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Read More

ತುಮಕೂರು ವಾಯು ಮಾಲಿನ್ಯ ನಿಯಂತ್ರಣವೆಂಬುದು ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸಿಮೀತವಾಗದೆ, ಪ್ರತಿ ದಿನ ಈ ನಿಟ್ಟಿನಲ್ಲಿ ವಾಹನ ಸವಾರರು ಮತ್ತು ಮಾಲೀಕರು ಗಮನಹರಿಸಬೇಕಾಗಿದೆ. ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸು ವಂತೆ ಹಿರಿಯ ಸಾರಿಗೆ ಇಲಾಖೆ ಇನ್ಸ್‍ಪೆಕ್ಟರ್ ಸದರುಲ್ಲಾ ಷರೀಫ್ ತಿಳಿಸಿದ್ದಾರೆ. ನಗರದ ಆರ್.ಟಿ.ಓ. ಕಚೇರಿ ಆವರಣದಲ್ಲಿ ಆಯೋಜಿಸಿದ್ದ ವಾಯು ಮಾಲಿನ್ಯ ನಿಯಂತ್ರಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದ ಅವರು,ಪ್ರತಿವರ್ಷ ನವೆಂಬರ್ ತಿಂಗಳನ್ನು ಇಲಾಖೆಯ ವತಿಯಿಂದ ವಾಯು ಮಾಲಿನ್ಯ ತಡೆ ಮಾಸಾಚರಣೆ ನಡೆಸುತ್ತೇವೆ.ಈ ವೇಳೆ ಸಭೆ, ಸಮಾರಂಭ,ಕಾರ್ಯಾಗಾರಗಳ ಮೂಲಕ ವಾಹನಗಳ ಮಾಲೀಕರು, ಚಾಲಕರು ಹಾಗೂ ವಾಹನಗಳ ನಿರ್ಮಾಣ ಕಂಪನಿಗಳ ಜನರಿಗೆ ದೇಶದಲ್ಲಿ ವಾಹನಗಳ ಹೊಗೆಯಿಂದ ಹೆಚ್ಚುತ್ತಿರುವ ವಾಯು ಮಾಲೀನ್ಯ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳೇನು ಎಂಬುದನ್ನು ತಿಳಿಸಿಕೊಡುವುದರ ಜೊತೆಗೆ,ಪರಿಸರಕ್ಕೆ ಮಾರಕವಾದ ಹೊಗೆಯನ್ನು ಉಗುಳದಂತೆ ತಮ್ಮ ವಾಹನವನ್ನು ಹೇಗೆ ಸುರಕ್ಷಿತವಾಗಿಟ್ಟುಕೊಳ್ಳಬಹುದು ಎಂಬುದನ್ನು ತಜ್ಞರಿಂದ ಮಾಹಿತಿ ನೀಡುವ ಕೆಲಸವನ್ನು ಮಾಡಲಾಗುತ್ತದೆ ಎಂದರು. ಇಂದು ಆರ್.ಟಿ.ಓ ಕಚೇರಿ ಆವರಣದಲ್ಲಿ ಸಾಂಕೇತಿಕವಾಗಿ ವಾಯುಮಾಲಿನ್ಯ ತಡೆ ಮಾಸಾಚರಣೆಗೆ ಚಾಲನೆ…

Read More

ತುಮಕೂರು ಭಾರತದ ಜನರಿಗೆ ಕೋರೋನ ಇದ್ದ ಎರಡು ವರ್ಷ ಅತ್ಯಂತ ಸಂಕಷ್ಟದ ಕಾಲ.ಹಿಂದೆ ಅವರನ್ನು ಮುಟ್ಟಬೇಡಿ, ಇವರನ್ನು ಮುಟ್ಟಬೇಡಿ ಎಂದು ಹೇಳುತಿದ್ದರು. ಕೋರೋನದಿಂದಾಗಿ ನಮ್ಮನ್ನೇ ಮುಟ್ಟಬೇಡಿ ಎಂದು ಹೇಳುವಂತಹ ವಾತಾವರಣ ಸೃಷ್ಟಿಯಾಗಿದ್ದು ವಿಪರ್ಯಾಸ ಎಂದು ಹಿರೇಮಠಾಧ್ಯಕ್ಷ ಡಾ.ಶ್ರೀಶಿವಾನಂದಶಿವಾಚಾರ್ಯಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ. ನಗರದ ಕುಣಿಗಲ್ ರಸ್ತೆಯ ಕೆ.ಎ.ಎಸ್ ರೈಸ್ ಮಿಲ್ ಆವರಣದಲ್ಲಿ ನಗರಪಾಲಿಕೆ 17ನೇ ವಾರ್ಡಿನ ಸದಸ್ಯ ಹೆಚ್.ಡಿ.ಕೆ.ಮಂಜುನಾಥ್ ಅವರ 38ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ,ಸ್ಪರ್ಷ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಪ್ರಕ್ರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉಚಿತ ಅರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು,ಕೋರೋನದ ಎರಡು ವರ್ಷ ಮಾನವ ಕುಲಕ್ಕೆ ಒಂದು ಸವಾಲಿನ ಕಾಲವಾಗಿತ್ತು.ಮಾನವ ಎಷ್ಟೇ ಬುದ್ದಿವಂತನಾದರೂ,ಮಂಗಳ ಗ್ರಹಕ್ಕೆ ಹೋಗಿಬಂದಿದ್ದರೂ,ಒಂದು ವೈರಾಣು ಇಡೀ ಜಗತ್ತನ್ನು ಎರಡು ವರ್ಷಗಳ ಕಾಲ ಸ್ತಬ್ದಗೊಳಿಸಿತ್ತು ಎಂದರು. ಕೋರೋನ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಮುಟ್ಟಿಸಿಕೊಳ್ಳದಂತಹ ಸ್ಥಿತಿ ನಿರ್ಮಾಣವಾಗಿತ್ತು.ಇಂತಹ ಸಂದರ್ಭದಲ್ಲಿ ಹಲವಾರು…

Read More

ತುಮಕೂರು ಪಡಿತರ ಚೀಟಿದಾರರಿಗೆ 2 ಬಾರಿ ಬಯೋಮೆಟ್ರಿಕ್ ನಿಂದ ಹಾಗೂ ಸರ್ವರ್ ಅಭಾವದಿಂದ ತೊಂದರೆಯಾಗುತ್ತಿದ್ದು ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಕೊರಟಗೆರೆ ಎಪಿಜೆ ಅಬ್ಧುಲ್ ಕಲಾಂ ಯೂತ್ ಕೇರ್ ಹಾಗೂ ಸಾರ್ವಜನಿಕ ರು ಆಗ್ರಹಿಸಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಕೊರಟಗೆರೆ ಎಪಿಜೆ ಅಬ್ಧುಲ್ ಕಲಾಂ ಯೂತ್ ಕೇರ್ ಅಧ್ಯಕ್ಷ ನಯಾಜ್ ಅಹಮದ್ ಮಾತನಾಡಿ, ಪಡಿತರ ಆಹಾರ ಪದಾರ್ಥವನ್ನು ಪಡೆಯಲು 2 ಬಾರಿ ಬಯೋಮೆಟ್ರಿಕ್ ನಿಯಮ ಮಾಡಿದ್ದು, ಇದರಿಂದ ಬಡವರಿಗೆ ಹಾಗೂ ತೊಂದರೆಯಾಗುತ್ತಿದ್ದು, ಕಾರ್ಮಿಕರಿಗೆ ರೈತರಿಗೆ, ಮಹಿಳೆಯರಿಗೆ, ವೃದ್ಧರಿಗೆ ಮತ್ತು ಅಭಾವದಿಂದ ಕೂಲಿ ಕೆಲಸಗಳನ್ನು ಬಿಟ್ಟು ದಿನವಿಡೀ ತೊಂದರೆಯಾಗುತ್ತಿರುವುದರಿಂದ ಪದಾರ್ಥಗಳನ್ನು ಪಡೆಯಲು 2-3 ದಿನ ನ್ಯಾಯಬೆಲೆ ಅಂಗಡಿಗೆ ಅಲೆಯುವಂತಾಗಿರುತ್ತದೆ. ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಪಡೆಯಲು ತಾವು ಸಂಬಂಧಪಟ್ಟ ಆಹಾರ ಇಲಾಖಾಧಿಕಾರಿಗಳಿಗೆ ಆದೇಶಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಸುರೇಶ್ ಬಾಬು, ಮಹಮ್ಮದ್ ಫಾರೋಕ್, ಪುಷ್ಪಲತಾ, ಶಭಾನಾ, ಅಮ್ಜದ್ ಖಾನ್ , ಮಹಮ್ಮದ್ ಪಾμÁ ಹಾಗೂ ಸ್ಥಳೀಯರು…

Read More

ತುಮಕೂರು ವಿದ್ಯಾರ್ಥಿಗಳು ಮಾರಾಟದ ಸರಕಾಗದೆ ಸಮಾಜಕ್ಕೆ ಆಸ್ತಿಯಾಗಬೇಕು. ನಮ್ಮ ಓದು, ಕೆಲಸ ಮಾರಾಟವಾಗದೆ ಸಾಧನೆಯ ಉನ್ನತಸ್ತರಕ್ಕೆ ನಮ್ಮನ್ನು ಕೊಂಡೊಯ್ಯುವಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಕರೆಕೊಟ್ಟರು ಶ್ರೀ ಕನಕಶ್ರೀ ಸೇವಾ ಸಮಿತಿಯಿಂದ ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಲ್ಲಿ ಕಳೆದ ಐದು ದಿನಗಳಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಅವರು ಸಮಾರೋಪ ಉದ್ಘಾಟಿಸಿ ಮಾತನಾಡಿ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಾತ್ಮಕತೆ ಇದೆ. ಐದು ದಿನಗಳಲ್ಲಿ ತಾವೂ ಕಲಿತಿದ್ದನ್ನು ಜೀವನದಲ್ಲಿ ಸ್ವಲ್ವವಾದರೂ ಅಳವಡಿಸಿಕೊಂಡರೆ ಮಾತ್ರ ಈ ಕಾರ್ಯಾಗಾರ ಸಾರ್ಥಕವಾಗುತ್ತದೆ. ಯುವಜನರು ಜಾಗತಿಕ ಸಂಸ್ಥೆಗಳಿಗೆ ಮಾರಾಟದ ವಸ್ತುಗಳಾಗದೆ, ಬೇಡಿಕೆಯ ಸ್ವತ್ತುಗಳಾಗಿ ರೂಪುಗೊಳ್ಳಬೇಕು ಎಂದರು. ಶ್ರೀದೇವಿ ಛಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಯುವಜನಾಂಗ ವಿದ್ಯಾವಂತರಾಗಿ ಉನ್ನತ ಅವಕಾಶಗಳನ್ನು ಪಡೆದರೆ ಸಮಾಜ ಸುಂದರ ತೋಟವಾಗುತ್ತದೆ. ಎಲ್ಲಾ ಸ್ಪರ್ದಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿದರು. ಕೈಗಾರಿಕಾ…

Read More

ತುರುವೇಕೆರೆ ಮೂವತ್ತು ವರ್ಷಗಳ ನಂತರ ಪಟ್ಟಣ ಪಂಚಾಯಿತಿ ಅಧ್ಯಕ್ಷಗಾದಿ ಯಾದವ ಸಮುದಾಯಕ್ಕೆ ದೊರಕಿರುವುದು ಶಾಸಕ ಮಸಾಲಾ ಜಯರಾಮ್ ರವರ ಇಚ್ಚಾ ಶಕ್ತಿಯಿಂದ ಎಂದು ನೂತನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಭಾಕರ್ ತಿಳಿಸಿದರು. 16 ಸದಸ್ಯ ಬಲವುಳ್ಳ ತುರುವೇಕೆರೆ ಪಟ್ಟಣ ಪಂಚಾಯಿತಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಹಿಂದೆ ಅಧ್ಯಕ್ಷರಾಗಿದ್ದ ಆಶಾರಾಣಿ ಸಿ.ಎಸ್. ಇವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ.ಪಂ. ಸದಸ್ಯ ಪ್ರಭಾಕರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ, ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಪ.ಪಂ. ಸದಸ್ಯ ಪ್ರಭಾಕರ್ ಆಯ್ಕೆಯನ್ನು ಅವಿರೋಧ ಎಂದು ಘೋಷಿಸಿದರು. ನೂತನ ಅಧ್ಯಕ್ಷ ಪ್ರಭಾಕರ್ ಮಾತನಾಡಿದರು. ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ಶಾಸಕ ಮಸಾಲಾ ಜಯರಾಮ್ ಮಾತನಾಡಿ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಘೋಷ ವಾಕ್ಯದೊಂದಿಗೆ ಯಾದವ ಸಮುದಾಯದ ಪ್ರಭಾಕರ್ ಅಧ್ಯಕ್ಷರಾಗಿದ್ದಾರೆ ಎಂದರು. ನೂತನ ಅಧ್ಯಕ್ಷರನ್ನು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಪ.ಪಂ. ಮುಖ್ಯಾಧಿಕಾರಿ ಲಕ್ಷ್ಮಣಕುಮಾರ್ ಸೇರಿದಂತೆ…

Read More

ತುರುವೇಕೆರೆ ಕಾಂಗ್ರೆಸ್ ಪಕ್ಷದಿಂದ ಬೆಮೆಲ್ ಕಾಂತರಾಜ್ ಸೇರಿದಂತೆ ಬೇರೆ ಯಾರಿಗೂ ಹೈಕಮಾಂಡ್ ವಿಧಾನಸಭಾ ಟಿಕೆಟ್ ಘೋಷಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಸುಬ್ರಮಣಿ ಶ್ರೀಕಂಠೇಗೌಡ ತಿಳಿಸಿದರು. ಪಟ್ಟಣ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ತುರುವೇಕೆರೆ ವಿಧಾನ ಸಭಾ ಕ್ಷೇತ್ರಕ್ಕೆ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಬಿ.ಫಾರ್ಮ್ ಬಯಸಿ ಪಕ್ಷದ ಕೆ.ಪಿ.ಸಿ.ಸಿ. ಕಛೇರಿಗೆ ಅರ್ಜಿ ಸಲ್ಲಿಸುತ್ತಿರುವುದಾಗಿ ತಿಳಿಸಿದ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತುರುವೇಕೆರೆ ಕ್ಷೇತ್ರದಲ್ಲಿ ಸ್ಥಳೀಯ ಕಾರ್ಯಕರ್ತರಿಗೆ ಪಕ್ಷದ ಬಿ.ಫಾರ್ಮ್ ದೊರೆಯಲಿದ್ದು ಈ ನಿಟ್ಟಿನಲ್ಲಿ ಮುಂದಿನ ಪಕ್ಷದ ಅಭ್ಯರ್ಥಿ ನಾನೇ ಇದರಲ್ಲಿ ಕಾರ್ಯಕರ್ತರು ಅನುಮಾನ ಪಡುವ ಅವಶ್ಯಕತೆಯಿಲ್ಲ ಎಂದರು. ತುರುವೇಕೆರೆ ಮಣ್ಣಿನ ಮಗನಾದ ನಾನು ಕಳೆದ 15 ವರ್ಷಗಳಿಂದಲೂ ಪಕ್ಷವನ್ನು ತಾಲ್ಲೂಕಿನಲ್ಲಿ ಬಲಪಡಿಸುವುದರ ಜೊತೆಗೆ ನೂರಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲೇ ಟಿಕೆಟ್ ಆಕಾಂಕ್ಷಿಯಾಗಿದ್ದ ನಾನು ವರಿಷ್ಠರ ಸೂಚನೆಯಂತೆ ಬಿ.ಫಾರ್ಮ್ ನೀಡಿದ ಪಕ್ಷದ ಅಭ್ಯರ್ಥಿಯಾಗಿದ್ದ ಚೌದ್ರಿ ರಂಗಪ್ಪ ನವರ ಪರ ಕೆಲಸ…

Read More