ತುಮಕೂರು ವಿದ್ಯುತ್ ಮಾರ್ಗಗಳಲ್ಲಿ ಕೆಲಸ ಮಾಡುವಾಗ ಲೈನ್‍ಮನ್‍ಗಳು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಬೆಸ್ಕಾಂ ಚಿತ್ರದುರ್ಗ ವಲಯದ ಮುಖ್ಯ ಇಂಜಿಯರ್ ಕೆ.ವಿ. ಗೋವಿಂದಪ್ಪ ಸಲಹೆ ನೀಡಿದರು. ನಗರದ ಹೊರಪೇಟೆಯಲ್ಲಿರುವ ಕೆ.ಇ.ಬಿ ಇಂಜಿನಿಯರ್ಸ್ ಅಸೋಸಿಯೇಷನ್ ಬಿಲ್ಡಿಂಗ್‍ನಲ್ಲಿ ಬೆಸ್ಕಾಂ ಹಾಗೂ ಬೆವಿಕಂ ತುಮಕೂರು ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಬೆಸ್ಕಾಂ ನೌಕರರ ಸುರಕ್ಷತಾ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ತುಮಕೂರು ವಿಭಾಗ ಮಟ್ಟದ ಎಲ್ಲ ಪವರ್ ಮನ್‍ಗಳಿಗೆ ವಿದ್ಯುತ್ ಮಾರ್ಗದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಸುರಕ್ಷತಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದರು. ಕೆಲಸಕ್ಕೆ ಹೋಗುವ ಮುನ್ನ ವಿದ್ಯುತ್ ಸರಬರಾಜಿನ ಮಾರ್ಗಗಳ ಬಗ್ಗೆ ಹಾಗೂ ಉಂಟಾಗಿರುವ ದೋಷವನ್ನು ಸರಿಪಡಿಸಲು ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ಪಡೆದು ಎಲ್ಲಾ ಸುರಕ್ಷತಾ ಸಾಮಗ್ರಿಗಳನ್ನು ತಪ್ಪದೇ ಕೊಂಡೊಯ್ಯಬೇಕು. ಕೆಲಸ ಪ್ರಾರಂಭಕ್ಕೆ ಮುನ್ನ ಕೆಲಸ ಮಾಡುವ ಸ್ಥಳಕ್ಕೆ ಯಾವ ಯಾವ ಮಾರ್ಗದಿಂದ ವಿದ್ಯುತ್ ಸರಬರಾಜಾಗುತ್ತದೆ ಎಂಬುದನ್ನು ಗಮನಿಸಿ, ಸಂಬಂಧಪಟ್ಟ ಮಾರ್ಗಗಳಲ್ಲಿ ಮಾರ್ಗಮುಕ್ತತೆ ತೆಗೆದುಕೊಂಡಿರುವ ಬಗ್ಗೆ…
Author: News Desk Benkiyabale
ತುಮಕೂರು ಮಾಜಿ ಶಾಸಕರಾದ ಬಿ ಸುರೇಶ್ ಗೌಡ ಅವರ 57ನೇ ಜನ್ಮದಿನದ ಆಚರಣೆಯನ್ನು ಬೆಳ್ಳಾವಿ ಹೋಬಳಿ ಬುಗುಡನಹಳ್ಳಿ ಗ್ರಾಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಕಾರದ ವೀರ ಬಸವ ಮಹಾ ಸ್ವಾಮೀಜಿ ಗಳ ಆರ್ಶಿವಾದಗಳೊಂದಿಗೆ ಎಲ್ಲಾ ಗ್ರಾಮಗಳ ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಬಹಳ ಅದ್ಧೂರಿಯಾಗಿ ಗ್ರಾಮದ ಪ್ರಮುಖ ರಾಜಭೀದಿಗಳಲ್ಲಿ ವಾದ್ಯಗೋಷ್ಠಿಗಳೊಂದಿಗೆ ಜಾನಪದ ಕಲಾ ತಂಡಗಳನ್ನ ಒಳಗೊಂಡಂತೆ ಹೂ ಮಳೆ ಸುರಿಸುತ್ತಾ ಕಾರ್ಯಕ್ರಮ ಆಚರಿಸಿದರು. ಈ ಸಂದರ್ಭದಲ್ಲಿ ಸುರೇಶ್ ಗೌಡರ ಬಗ್ಗೆ ಶ್ರೀ ಮಠದ ಕಾರದ ವೀರ ಬಸವ ಮಹಾಸ್ವಾಮಿಜಿಗಳು ಬುಗುಡನಹಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ದೊಂದಿಗೆ ಜನಪ್ರಿಯತೆಯನ್ನು ಪಡೆದಿರುವ ಜನನಾಯಕ ಸುರೇಶ್ ಗೌಡರ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿರುವ ಅಭಿಮಾನಿಗಳಿಗೆ ಹಿತವಚನ ಹೇಳುತ್ತಾ ನಿಜವಾದ ಜನನಾಯಕ ಅಂದರೆ ಯಾರು? ಹಣ ಖರ್ಚು ಮಾಡಿ ನಾಯಕ ಎಂದು ಕರೆಸಿ ಕೊಳ್ಳುವವನು ನಾಯಕನಲ್ಲ. ದುಡ್ಡು ಖರ್ಚು ಮಾಡದೆ ಪಟಾಕಿ ಹೊಡೆಸಿಕೊಳ್ಳುವ, ಹಾರ ಹಾಕಿಸಿಕೊಳ್ಳುವ, ಕೇಕ್ ಕಟ್ ಮಾಡಿಸಿ ಕೊಳ್ಳುವ, ಪ್ರತಿ ದಿನ ಸಾರ್ವಜನಿಕರ ಜೀವನದಲ್ಲಿ ಕಾಯಕ…
ತುಮಕೂರು ನಗರದ ಜೆಡಿಎಸ್ ಪಕ್ಷದಲ್ಲಿ ಆಂತರಿಕವಾಗಿ ಭಿನ್ನಮತ ಸ್ಪೋಟಗೊಂಡಿದ್ದು ಟಿಕೆಟ್ ಆಕಾಂಕ್ಷೆಗಳ ಸಂಖ್ಯೆ ಹೆಚ್ಚಾಗುತ್ತಲಿದೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಎನ್.ಗೋವಿಂದರಾಜು ಅಧಿಕೃತ ಅಭ್ಯರ್ಥಿ ನಾನೇ ಎಂದು ಸ್ವಯಂ ಘೋಷಿಸಿಕೊಳ್ಳುತ್ತಾ ಇತ್ತೀಚಿನ ದಿನ ಮಾನಗಳಲ್ಲಿ ನಗರದಲ್ಲಿ ಕಾಣ ಸಿಗುತಿದ್ದಾರೆ. ಇನ್ನೂ ಜಿಲ್ಲಾ ಕಾರ್ಯಧ್ಯಕ್ಷ ನಾಗರಾಜು ಬೆಳ್ಳಿ ಲೋಕೇಶ್, ನರಸೆಗೌಡ ಹಿಂದಿನಿಂದಲೂ ಟಿಕೆಟ್ ಆಕಾಂಕ್ಷೆಗಳಾಗಿದ್ದಾರೆ. ಇತ್ತೀಚಿಗೆ ನಗರದಲ್ಲಿ ನಾನು ಅಭ್ಯರ್ಥಿ ಎಂದು ಹೇಳಿಕೆ ನೀಡುತ್ತಿರುವ ಬೊಮ್ಮನಹಳ್ಳಿ ಬಾಬು ಅಲೀಯಾಸ್ ಅಟ್ಟಿಕಾ ಬಾಬು ನಾನೇ ಮುಂದಿನ ಅಭ್ಯರ್ಥಿ ಎನ್ನುವುದರಲ್ಲಿ ಸಂಶಯವಿಲ್ಲ. ಎಲ್ಲಾರೂ ನನಗೆ ಸಹಕಾರ ನೀಡುತ್ತಾರೆ ಎಂದು ಬಹಿರಂಗವಾಗಿಯೆ ಹೇಳಿಕೆ ನೀಡುತ್ತಿದ್ದಾರೆ. ಹಣವಂತರೇಲ್ಲಾರೂ ನಾನೇ ಅಭ್ಯರ್ಥಿ ಎಂದು ಸ್ವಯಂ ಘೋಷಿಸಿಕೊಳ್ಳುತ್ತಿದ್ದು, ಸೇವಾ ಮನೋಭಾವ ಹೊಂದಿರುವ ನಿಷ್ಠಾವಂತ ಪಕ್ಷದ ಕಟ್ಟಾಳುವಂತೆ ದುಡಿದ ಜೆಡಿಎಸ್‍ನ ಮುಂಚೂಣಿಯ ಮುಖಂಡರು ಧ್ವನಿ ಎತ್ತದೆ ಮೌನಕ್ಕೆ ಶರಣಾಗಿದ್ದಾರೆ. ಒಟ್ಟಾರೆ ಜೆಡಿಎಸ್ ಪಕ್ಷದಲ್ಲಿ ಹಣವಂತರಿಗೆ ಮಣೆ ಎಂಬ ಡೋಲಾಯಮಾನ ಸ್ಥಿತಿಯಲ್ಲಿ ಬಂದುನಿಂತಿದೆ. ತುಮಕೂರು ನಗರದ ಅಭಿವೃದ್ಧಿಯ ಹೊಂಗನಸು ಟಿಕೆಟ್ ಆಕಾಂಕ್ಷಿಗಳಲ್ಲಿ ಕಂಡುಬರುತ್ತಿಲ್ಲ. ಸ್ವ-ಅಭಿವೃದ್ಧಿ…
ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿಯ ತುಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಮ್ಮೆದೇವರಹಳ್ಳಿ ಗ್ರಾಮದಲ್ಲಿ ಕೊರಟಗೆರೆ ತಾಲ್ಲೂಕು ಕಂದಾಯ ಇಲಾಖೆಯ ವತಿಯಿಂದ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ತಾಲ್ಲೂಕಿನ ತಹಶೀಲ್ದಾರ್ ನಾಹಿದಾ ಜಮ್ ಜಮ್ ರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಸರ್ಕಾರದ ಸವಲತ್ತುಗಳಾದ ಪಿಂಚಣಿ, ಆರೋಗ್ಯ ಕಾರ್ಡ್ ಸೇರಿದಂತೆ 72 ಗಂಟೆಗಳಲ್ಲಿ ಪಿಂಚಣಿ ಮಂಜೂರಾತಿ ಆದೇಶ ಪತ್ರವನ್ನು ಗ್ರಾಮದ ಫಲಾನುಭವಿಗಳಿಗೆ ತಲುಪಿಸುವುದು, ನವೋದಯ ಮೊಬೈಲ್ ಆ?ಯಪ್ ಮೂಲಕ ಪಿಂಚಣಿ ಪಡೆಯಬಹುದು. ಆದೇಶ ಪತ್ರವನ್ನು ಪಾಲನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಲಾಗುವುದು. ಮತದಾರರ ನೋಂದಣಿ ಬಗ್ಗೆ ಅರಿವು ಮೂಡಿಸಿ ಗ್ರಾಮ ಒನ್ ಸೇವಾ ಕೇಂದ್ರದಲ್ಲಿ ಸಮಸ್ಯೆಗಳನ್ನು ತಮ್ಮ ಗ್ರಾಮದಲ್ಲಿಯೇ ಬಗೆಹರಿಸಿಕೊಳ್ಳಬಹುದು. ಇದರಿಂದ ಗ್ರಾಮದಿಂದ ತಾಲ್ಲೂಕು ಪಂಚಾಯಿತಿಗೆ ಸಾರ್ವಜನಿಕರು ಅಲೆದಾಡುವುದು ತಪು?ಪತ್ತದೆ ಎಂದು ತಿಳಿಸಿದರು. ಈ ವೇಳೆ ಗ್ರಾಮದ ಸುಮಾರು 26 ಜನ ವೃದ್ಧರು ಹೊಸದಾಗಿ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಿದರು, ನಾಲ್ಕು ಜನ ಪಿಂಚಣಿದಾರರ…
ತುಮಕೂರು ಕೇಂದ್ರ ಸರಕಾರಿ ಸೇವೆಯಲ್ಲಿ ಐಎಎಸ್, ಐಪಿಎಸ್, ಐಎಫ್‍ಎಸ್ ಮಾತ್ರವಲ್ಲ, ಸೇನೆ, ಆರ್ಥಿಕ ಸಚಿವಾಲಯ, ಆಹಾರ ಪರಿಸರ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಮಂತ್ರಾಲಯಗಳಲ್ಲಿ ಗ್ರೂಪ್‍ಬಿ ಹುದ್ದೆಗಳು ಸೇರಿದಂತೆ ಅನೇಕ ಹುದ್ದೆಗಳನ್ನು ಸ್ಟಾಫ್ ಸೆಲೆಕ್ಷನ್ ಕಮೀಷನ್ ಹಾಗೂ ಇತರೆ ನೇಮಕಾತಿ ಪ್ರಾಧಿಕಾರದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಆ ಹುದ್ದೆಗಳಿಗೂ ಅರ್ಜಿಹಾಕಿ ನೇಮಕ ಪರೀಕ್ಷೆ ಎದುರಿಸಿ ಎಂದು ನೀತಿ ಆಯೋಗದ ಉಪ ಸಲಹೆಗಾರ ಡಾ.ಮುನಿರಾಜು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ಕನಕ ಶ್ರೀ ಸೇವಾ ಸಮಿತಿಯಿಂದ ನಗರದ ಶ್ರೀದೇವಿ ಛಾರಿಟಬಲ್ ಟ್ರಸ್ಟ್, ಇನ್‍ಸೈಟ್ ಐಎಎಸ್ ಅಕಾಡೆಮಿ ಸಹಕಾರದೊಂದಿಗೆ ಶ್ರೀದೇವಿ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ದಾಸಶ್ರೇಷ್ಠ ಕನಕ ಜಯಂತಿ ಅಂಗವಾಗಿ ಏರ್ಪಡಿಸಿರುವ ‘ಎಜುಕಾನ್-2022’ ಹೆಸರಿನ 5 ದಿನಗಳ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಇಂದು ಹುದ್ದೆಗಳ ನೇಮಕಾತಿಯಲ್ಲಿ ತೀವ್ರ ಸ್ಪರ್ಧೆಇದೆ. ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನಗಳು ಕಠಿಣವಾಗಿದ್ದು, ಒಂದೇ ಪ್ರಯತ್ನಕ್ಕೆ ಎಲ್ಲರೂ ಯಶಸ್ಸುಗಳಿಸಲು ಸಾಧ್ಯವಿಲ್ಲ. ಉನ್ನತ ಸ್ಥಾನ ಪಡೆಯಲು ನಿರಂತರ ಶ್ರಮ ಪ್ರಯತ್ನ…
ತುಮಕೂರು ಆಟೋ ಒಇಎಂ ಮತ್ತು ಬಿಡಿ ಭಾಗಗಳ ಉತ್ಪಾದನಾ ಕಾರ್ಮಿಕರಿಗೆ ಮಾಸಿಕ ಕನಿಷ್ಟ ವೇತನ 26,000 ನಿಗಧಿಮಾಡಬೇಕು, ಕಾರ್ಮಿಕರನ್ನು ಬಲಿಪಶುಮಾಡುವುದು ಬಲವಂತದ ರಿಟ್ರೇಂಚ್ಮೇಂಟ್, ಮಾನವ ಶಕ್ತಿಕಡಿತ ನಿಲ್ಲಿಸಬೇಕು, ಉದ್ಯೋಗಗಳ ರಕ್ಷಣೆ ಮಾಡಬೆಕು, ಈ ಘಟಕಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ಮತ್ತು ನಿಗಧಿತ ಅವಧಿ, ಟ್ರೈನಿ ಮತ್ತು ಖಾಯಂಯೇತರ ಕಾರ್ಮಿಕರ ಸೇವೆಗಳನ್ನು ಖಾಯಂ ಮಾಡಬೇಕು, ಹೋರಾಟಗಳಿಂದ ಗಳಿಸಿರುವ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಿ, ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು,ದೇಶಿಯ ಉತ್ಪಾದನೆ ಮೂಲಕ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಬೇಕು, ಆಟೋಮೋಬೇಲ್‍ಗಳು ಮತ್ತು ಆಟೋ ಬಿಡಿಭಾಗಗಳನ್ನು ಆಮದನ್ನು ನಿಯಂತ್ರಿಸಬೇಕು, ಸಾರ್ವಜನಿಕ ಸಾರಿಗೆ ಸೇವೆಯನ್ನು ಉತ್ತೇಜಿಸಿ ಬೆಂಬಲಿಸುವ ಯೊಜನೆಗಳನ್ನು ರೂಪಿಸಿಬೇಕು, ಈ ಕೈಗಾರಿಕೆಗಳಲ್ಲಿ ವ್ಯಾಪ್ತಿಯನ್ನು ವಿಸ್ತರಿಸಲು ಸರ್ಕಾರ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ಬೇಡಿಕೆ ದಿನದ ಭಾಗವಾಗಿ ತುಮಕೂರಿನ ಅಂತರಸನ ಹಳ್ಳಿ ಕೈಗಾರಿಕಾ ಪ್ರದೇಶದ ಪ್ಯಾಕ್ಟರಿಗಳ ಮುಂದೆ ದಿ; 11-11-2022 ರಂದು ಪ್ರತಿಭಟನೆ ನಡೆಸಲಾಯಿತು ಕರ್ನ – ಲಿಬರ್ಸ್ ಕೈಗಾರಿಕೆ ಮುಂದೆ ನಡೆದ ಪ್ರತಿಭಟನೆಯಲ್ಲಿ ಕರ್ನ ಲಿಬರ್ಸ್ ಕಾರ್ಮಿಕರ…
ಗುಬ್ಬಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ. ಅವಶ್ಯಕತೆ ಇದ್ದು ಇದರ ಜಾರಿಗಾಗಿ ಡಿಸೆಂಬರ್ 11 ರಂದು ದಾವಣಗೆರೆ ಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು ಅಂದು ಅಲ್ಲಿ ಬೃಹತ್ ಸಮಾವೇಶ ನೆಡಯಲಿದೆ ಎಂದು ಮಾದಿಗ ದಂಡೋರದ ಜಿಲ್ಲಾ ಅಧ್ಯಕ್ಷ ಆಟೋ ಶಿವರಾಜು ತಿಳಿಸಿದರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಪಾದಯಾತ್ರೆ ಕೈಗೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಮುದಾಯದ ಜನ ಭಾಗವಹಿಸಬೇಕು, ಸರಕಾರಗಳು ಬಂದು ಹೋಗುತ್ತಿವೆ ಆದರೆ ನಮ್ಮ ಸಮಸ್ಯೆಯನ್ನು ಮಾತ್ರ ಥಿಚಿಡಿu ಕೇಳುತ್ತಿಲ್ಲ ಹಾಗಾಗಿ ರಾಜ್ಯದ 45ಕ್ಕೂ ಹೆಚ್ಚು ಸಂಘಟನೆಗಳು ಒಂದುಗೂಡಿ ಪಾದಯಾತ್ರೆ ಹಾಗೂ ಬೃಹತ್ ಸಮಾವೇಶ ಮಾಡಲಾಗುತ್ತಿದ್ದು ನಮ್ಮ ಸಮಸ್ಯೆಗಳಿಗೆ ಹಾಗೂ ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸದೆ ಹೋದರೆ ಬೃಹತ್ ಮಟ್ಟದ ಹೋರಾಟಕ್ಕೆ ನಾವು ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. ಬೆಂಗಳೂರು ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ರಾಪ್ಟೆ…
ತುಮಕೂರು ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ವಿವಿಧ ಪ್ರಕರಣಗಳಲ್ಲಿ 5 ಜೋಡಿಗಳನ್ನು ಪುನಃ ಒಂದು ಮಾಡಿ ಹಾರ ಬದಲಾಯಿಸಿ ಒಬ್ಬರಿಗೊಬ್ಬರು ಸಿಹಿ ತಿನ್ನಿಸಿದ ಅಪರೂಪದ ಪ್ರಸಂಗಕ್ಕೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಸಾಕ್ಷಿಯಾಯಿತು. ಶನಿವಾರ ನಡೆದ ಲೋಕ್ ಅದಾಲತ್ ನಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳಲ್ಲಿ, ದಂಪತಿಗಳಲ್ಲಿ ಚಿಕ್ಕ ಚಿಕ್ಕ ಮನಸ್ತಾಪಗಳು,ವೈಮನಸ್ಯಗಳು ಇದ್ದವು ಅದಕ್ಕೆ ಜೀವನಾಂಶ,ವಿಚ್ಛೇದನಕ್ಕೆ ಅರ್ಜಿ ಹಾಕಿ ನ್ಯಾಯಾಲಯಕ್ಕೆ ಬಂದಿದ್ದ ದಂಪತಿಗಳ ಪೈಕಿ 5 ದಂಪತಿಗಳನ್ನು ನ್ಯಾಯಾಧೀಶರು,ಮಧ್ಯಸ್ಥಿಕೆದಾರರು,ಎರಡೂ ಕಡೆಯ ವಕೀಲರು ಸೇರಿ ಬುದ್ಧಿ ಹೇಳಿ ಒಂದು ಮಾಡಿ ಅವರ ಪ್ರಕರಣವನ್ನು ಮುಕ್ತಾಯ ಮಾಡಿ ಕಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಒಂದು ಪ್ರಕರಣದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರು ಸಹ ಬೇರೆ ಬೇರೆಯಾಗಿದ್ದನ್ನು ಗಮಿನಿಸಿದ ನ್ಯಾಯಾಧೀಶರು ಕಕ್ಷಿದಾರರ ವಕೀಲರು ಮತ್ತು ಕಕ್ಷಿದಾರರಿಗೆ ಮನವಿ ಮಾಡಿ ಪ್ರಕರಣವನ್ನು ಮುಕ್ತಾಯಗೊಳಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ,ಪೋಸ್ಕೋ ನ್ಯಾಯಾಲಯದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂಧ್ಯಾರಾವ್. ಪಿ, ಕೌಟುಂಬಿಕ…
ತುಮಕೂರು ಯಾವುದೇ ಅಡಂಬರವಿಲ್ಲದೆ ಸರಳವಾಗಿ ಜೀವಿಸಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಂತ ಶ್ರೇಷ್ಠ ಕನಕದಾಸರು ದಾಸ ಸಾಹಿತ್ಯದ ಅಗ್ರಗಣ್ಯ ಸುಧಾರಕರಾಗಿದ್ದರೆ ಎಂದು ಶಾಸಕ ಜೆ.ಬಿ.ಜ್ಯೋತಿಗಣೇಶ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ತುಮಕೂರು ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರದಲ್ಲಿ ಇಂದು ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರ್ರದಲ್ಲಿ ಆಯೋಜಿಸಿದ್ದ ಸಂತ ಶ್ರೇಷ್ಠ ಕನಕದಾಸರ 535ನೇ ಜಯಂತ್ಯುತ್ಸವ ಆಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಮ್ಮ ಸಾಹಿತ್ಯದ ಮೂಲಕ ದಾಸಸಾಹಿತ್ಯಕ್ಕೆ ವೈಶಿಷ್ಟಪೂರ್ಣವಾದ ಮೆರುಗನ್ನು ಕೀರ್ತನೆಗಳ ಮೂಲಕ ತಂದಿತ್ತ ಸಂತಶ್ರೇಷ್ಠ ಕನಕದಾಸರು, ತತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ವ್ಯೆಚಾರಿಕ ಪರಂಪರೆಗೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಕನಕದಾಸರು ದಂಡನಾಯಕರಾಗಿದ್ದು, ನಂತರ ಅವರಿಗೆ ವೈರಾಗ್ಯ ಉಂಟಾಗಿ ಹರಿದಾಸರಾದರು, ‘ಕುಲ ಕುಲವೆಂದು ಹೊಡೆದಾಡದಿರಿ ಎಂದು ಸಾರಿದ ದಾಸವರೇಣ್ಯರು, ಮಾಡಿದರೆ ಮಾಡಬೇಕು ಸತ್ಯವಂತರ ಸಂಗವನು’ ಎಂದು ಹೇಳಿದ್ದಾರೆ. ತಮ್ಮ ಚಿಂತನೆಯ ಮೂಲಕ ಮೇಲು-ಕೀಳು ಮತ್ತು ತಾರತಮ್ಯವನ್ನು ಹೋಗಲಾಡಿಸಲು ಪ್ರಯತ್ನಿಸಿದ ಮಹಾನುಭಾವರು. ತಮ್ಮ ರಚನೆಗಳಲ್ಲಿ ಸಮಾಜದ…
ತುಮಕೂರು ಕನಕದಾಸರ ಸಾಹಿತ್ಯ ದೀನ ದಲಿತರ ವರ್ಗದ ಜನರಿಂದ ಹಿಡಿದು ಮೇಲ್ವರ್ಗ ಜನರ ಸಮುದಾಯಗಳಲ್ಲಿ, ಮಠ-ಮಾನ್ಯಗಳಲ್ಲಿ, ದಾಸ ಸಾಹಿತ್ಯ ಸ್ವೀಕಾರವಾಗಿದೆ. ವಿದ್ವತ್ ಪಂಡಿತರ ಶಾಸ್ತ್ರೀಯ ಸಂಗೀತದಿಂದ ಹಿಡಿದು ಜನಸಾಮಾನ್ಯರ ಜಾನಪದರ ಭಜನೆಗಳವರೆಗೂ ಕನಕ ಸಾಹಿತ್ಯ ತುಂಬಿಕೊಂಡಿದೆ ಎಂದು ಹೊಸದುರ್ಗದ ಶ್ರೀ ಕುಂಚಿಟಿಗ ಗುರುಪೀಠದ ಜಗದ್ಗುರು ಡಾ.ಶ್ರೀ ಶಾಂತವೀರ ಸ್ವಾಮೀಜಿಯವರು ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿಗುರುಪೀಠದಲ್ಲಿ ಹಮ್ಮಿಕೊಂಡಿದ್ದ ಕನಕಜಯಂತಿ ಹಾಗೂ ಒನಕೆ ಓಬವ್ವ ಜಯಂತಿಯ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೂಡಿಬಂದ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಜನಸಾಮಾನ್ಯರ ಸಾಹಿತ್ಯವಾಗಿ ಹಾಸುಹೊಕ್ಕಾಗಿದೆ. ಈ ಎರಡು ಸಾಹಿತ್ಯ ಜೀವನವನ್ನು ಆನಂದಮಯವಾಗಿ ಪರಿವರ್ತಿಸುವ ವಿಚಾರಧಾರೆಗಳು. ನಾವು ಸಮಾಜದಲ್ಲಿ ಜೀವನೋತ್ಸಾಹದಿಂದ ಸಂತೋಷದಿಂದ ಬಾಳಬೇಕೆಂಬ ದಿಕ್ಸೂಚಿಯನ್ನು ರೂಪಿಸಿದ ಸಾಹಿತ್ಯ. ವಚನ ಮತ್ತು ಕೀರ್ತನೆಗಳ ಸಂದೇಶ ನೇರ, ನಿಷ್ಠೂರ, ಸ್ಪಷ್ಟ, ವಿಡಂಬನೆಯಿಂದ ಸಮಾಜನ್ನು ಜಾಗೃತಿಗೊಳಿಸಿದ್ದಾರೆ. ಜ್ಞಾನ ಹಾಗೂ ಭಕ್ತಿ ಸಾಹಿತ್ಯ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗಿದ್ದಾರೆ. ಅವರವರ ಧರ್ಮದ ಅಸ್ತಿತ್ವವನ್ನು, ಅವರವರ…











