Author: News Desk Benkiyabale

ತುಮಕೂರು ಕನ್ನಡ ನಾಡಿಗೆ ಕನ್ನಡವೇ ಬೇಕು ಎಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಪ್ರೊ. ಕೆ.ಎಸ್ ಸಿದ್ಧಲಿಂಗಪ್ಪನವರು ಅಭಿಪ್ರಾಯಪಟ್ಟರು. ನಗರದ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು, ಐಕ್ಯೂಎಸಿ ವಿಭಾಗ ಮತ್ತು ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಣ ಶಿಲ್ಪಿ ಡಾ.ಎಚ್.ಎಂ.ಗಂಗಾಧರಯ್ಯ ಸ್ಮಾರಕ ಉಪನ್ಯಾಸ ಮಾಲಿಕೆ-7ರಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ನಾಡು ನುಡಿ ವಿಚಾರಗಳು ಉಪನ್ಯಾಸ ಮಾಲಿಕೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸುಮಾರು 2500 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯು ಕಾಲಾಂತರ ಬದಲಾಗುತ್ತ ಬಂದಿದೆ. ಇಂದಿನ ದಿನಗಳಲ್ಲಿ ಭಾಷೆಯು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ವೈಜ್ಞಾನಿಕ ತಳಹದಿ ಇರುವ ಕನ್ನಡ ಭಾಷೆಯನ್ನು ಜನರು ಪ್ರಯೋಗಾತ್ಮಕವಾಗಿ ಬಳಸಬೇಕು. ವಿಷಯ ಅರ್ಥವಾಗುವಂತೆ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವ ಸಂವಹನ ಮಾಧ್ಯಮವೇ ಭಾಷೆ. ಈ ಭಾಷೆಗೆ ತನ್ನದೇ ಆದ ಮಹತ್ವವಿದೆ ಎಂದು ತಿಳಿಸಿದರು. ಪ್ರಾಂಶುಪಾಲರಾದ ಡಾ.ವಿಜಯ ಭಾಸ್ಕರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆ ಎನ್ನುವುದು ಕೇವಲ…

Read More

ತುಮಕೂರು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023ರ ಸಂಬಂಧ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳಲ್ಲಿ ಕರಡು ಮತದಾರರ ಪಟ್ಟಿಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗಿದೆ. ವೇಳಾಪಟ್ಟಿಯನ್ವಯ ಸಾರ್ವಜನಿಕರ ಮಾಹಿತಿಗಾಗಿ ಈಗಾಗಲೇ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗಿದ್ದು, ಡಿಸೆಂಬರ್ 8ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ಈ ಅವಧಿಯಲ್ಲಿ ಬಿ.ಎಲ್.ಓ.ಗಳು ಮನೆ-ಮನೆಗೆ ಭೇಟಿ ನೀಡಿ ಅರ್ಹ ಮತದಾರರಿಂದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರನ್ನು ತೆಗೆದು ಹಾಕುವ ಅಥವಾ ವರ್ಗಾವಣೆ ಮಾಡುವ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ಆನ್‍ಲೈನ್ ಮೂಲಕ ಅರ್ಜಿ ಪಡೆಯಲಿದ್ದಾರೆ. ನಂತರ 2023ರ ಜನವರಿ 5ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಕರಡು ಮತದಾರರ ಪಟ್ಟಿಯಲ್ಲಿ 10,82,752 ಪುರುಷರು, 10,79,769 ಮಹಿಳೆಯರು, 92 ಇತರರು ಸೇರಿದಂತೆ ಒಟ್ಟು 21,62,613 ಮತದಾರರಿದ್ದು, ಸೇವಾ ಮತದಾರರ ಪಟ್ಟಿಯಲ್ಲಿ 749 ಪುರುಷರು, 40 ಮಹಿಳೆಯರು ಸೇರಿದಂತೆ ಒಟ್ಟು 789 ಮತದಾರರಿರುತ್ತಾರೆ. ಅಲ್ಲದೆ, ಜಿಲ್ಲೆಯಲ್ಲಿ 26,856…

Read More

ತುಮಕೂರು ಮತದಾನ ಪ್ರಕ್ರಿಯೆಯಲ್ಲಿ ಯುವ ಸಮೂಹದ ಪಾತ್ರ ಅಪಾರವಾದುದು ಎಂದು ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ. ಕೆ.ವಿದ್ಯಾಕುಮಾರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ವಿಶ್ವ ಮಾನವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕ್ಲಬ್ನ ಸದಸ್ಯರುಗಳು ಹಾಗೂ ಕ್ಯಾಂಪಸ್ ಅಂಬಾಸಿಡರ್ ಗಳಿಗೆ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ಕುರಿತು ಗುರುವಾರ ಪ್ರಕಟವಾಗಲಿರುವ ಮತದಾರರ ಪಟ್ಟಿ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. 18 ವರ್ಷ ಪೂರೈಸಿದ ಪ್ರತಿಯೊಬ್ಬ ಪ್ರಜೆಯೂ ತಪ್ಪದೇ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬೇಕು. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ಹಾಗೂ ಮರಣಹೊಂದಿದ ವ್ಯಕ್ತಿಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಪ್ರತಿಯೊಬ್ಬರೂ ಶ್ರಮ…

Read More

ಗುಬ್ಬಿ ಗುಬ್ಬಿಯ ಗೋಸಲ ಶ್ರೀ ಚನ್ನಬಸವೇಶ್ವರರವರಿಗೆ ನಾಡಿನಾದ್ಯಂತ ಭಕ್ತ ವೃಂದವಿದ್ದು, ಕಾರ್ತಿಕ ಮಾಸದ ದೀಪೋತ್ಸವ ಹಾಗೂ ರಾತ್ರಿಯಲ್ಲಿ ನಡೆಯುವ ಹೂವಿ£ Àವಾಹನವು ಇತಿಹಾಸ ಪ್ರಸಿದ್ಧವಾಗಿದ್ದು, ಈ ಹೂವಿನ ವಾಹನಕ್ಕೆ ಪಟ್ಟಣದ ಹಾಗೂ ಸುತ್ತಮುತ್ತಲಿನ 18 ಕೋಮಿನ ಜನಾಂಗವು ಭಕ್ತವೃಂದವಾಗಿದ್ದು, ಇಲ್ಲಿನ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿ ಮನಸ್ಸೋ ಇಚ್ಛೆ ನಡೆದುಕೊಂಡು 18 ಕೋಮಿನ ಯಜಮಾನರುಗಳಿಗೆ ಅವಮಾನ ಮಾಡಿರುವುದು ಎಷ್ಟು ಸಮಂಜಸ…? ಪ್ರತಿ ಹೂವಿನವಾಹನ ನಡೆಸುವ ಹಿಂದಿನ ದಿನಗಳಲ್ಲಿ 18 ಕೋಮಿನ ಯಜಮಾನರುಗಳನ್ನು ಕರೆದು ಕಾರ್ಯಕ್ರಮವನ್ನು ರೂಪಿಸಲಾಗುತ್ತಿತ್ತು. ಈ ಬಾರಿ ಯಾವುದೇ ಪೂರ್ವಭಾವಿ ಸಭೆ ನಡೆಸದೆ ಈಗಾಗಲೇ ಕರಪತ್ರವನ್ನು ಮುದ್ರಿಸಿ ಹಂಚುತ್ತಿರುವುದು ಯಜಮಾನರುಗಳ ಕಿಡಿಗಣ್ಣಿಗೆ ಕಾರಣವಾಗಿದೆ. ಕೇವಲ ಮುಜರಾಯಿ ಇಲಾಖೆಯ ದೇವಸ್ಥಾನ ಎಂದು ಇಲ್ಲಿನ ಭಕ್ತರು ಯಾವತ್ತೂ ತಿಳಿದಿಲ್ಲ. ಹೂವಿನ ವಾಹನಕ್ಕೆ ಬಟ್ಟೆ ಕಟ್ಟುವುದರಿಂದ ಹಿಡಿದು ಹೂವಿನ ಅಲಂಕಾರ ಹಾಗೂ ಹೂವಿನ ಪಲ್ಲಕ್ಕಿಯನ್ನು ಮೆರಸುವವರು ಅಧಿಕಾರಿಗಳೇ… ಅಥವಾ ಯಜಮಾನರುಗಳೇ… ಎಂಬ ಪ್ರಶ್ನೆ ಭಕ್ತರಲ್ಲಿ ಕಾಡುತ್ತಿದೆ. ಪ್ರತಿ ವರ್ಷವೂ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಸ್ಥಾನದಿಂದ…

Read More

ತುಮಕೂರು ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ನೀಡುತ್ತಿರುವ ತರಬೇತಿ ಪ್ರಯೋಜನವನ್ನು ಪಡೆಯಬೇಕೆಂದು ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಎಂ. ಶಾಂತಮ್ಮ ಕಾರಾಗೃಹ ಬಂದಿಗಳಿಗೆ ಕರೆ ನೀಡಿದರು. ಜಿಲ್ಲಾ ಕಾರಾಗೃಹದಲ್ಲಿ ಬಂದಿಗಳಿಗಾಗಿ ಹಮ್ಮಿಕೊಂಡಿದ್ದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಾರ್ಯಾಗಾರದಲ್ಲಿ ಎಸ್‍ಬಿಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಬಂದಿಗಳಿಗೆ ಜೇನು ಸಾಕಾಣಿಕೆ, ಮೊಬೈಲ್ ರಿಪೇರಿ, ಎಲೆಕ್ಟ್ರಿಕಲ್ ರಿಪೇರಿ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದ್ದು, ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಕಾರಾಗೃಹದಿಂದ ಬಿಡುಗಡೆಯಾದ ನಂತರ ಬಂದಿಗಳು ಪ್ರಮಾಣಪತ್ರಗಳನ್ನು ತೋರಿಸಿದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್‍ಗಳಿಂದ ಸಾಲ ದೊರೆಯಲಿದೆ ಎಂದು ತಿಳಿಸಿದರು. ಎಸ್‍ಬಿಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಎಸ್. ಅರುಣ್ ಕುಮಾರ್ ಮಾತನಾಡಿ ಸ್ವಯಂ ಉದ್ಯೋಗ ಕಲ್ಪಿಸುವುದು ನಮ್ಮ ಸಂಸ್ಥೆಯ ಉದ್ದೇಶ. ಕಲಿಕೆ ನಿರಂತರವಾಗಿರಬೇಕು. ಆಸಕ್ತಿವಹಿಸಿ ಕಲಿತು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಮಾರ್ಗದರ್ಶನ ನೀಡಿದರು. ಎಸ್‍ಬಿಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ರಾಜಶೇಖರ್…

Read More

ಗುಬ್ಬಿ ಪಕ್ಷದಿಂದ ಉಚ್ಛಾಟಿಸಿದಾಗ ಯಾವ ಮುಖಂಡರುಗಳು ಇದರ ಬಗ್ಗೆ ಚಕಾರವೆತ್ತದೆ ಚುನಾವಣಾ ಸಮೀಪಿಸುತ್ತಿರುವಾಗ ಸಂಧಾನ ಪ್ರಕ್ರಿಯೆ ಎಷ್ಟು ಸಮಂಜಸ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕಿನ ಕಡಬ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಈಗಾಗಲೇ ಸಾಕಷ್ಟು ಸಿ.ಸಿ.ರಸ್ತೆ ಬಾಕ್ಸ್ ಚರಂಡಿಗಳನ್ನು ಮಾಡಿದ್ದು ಮಳೆ ಬಿದ್ದ ಕಾರಣ ರಸ್ತೆಗಳು ಹಾಳಾಗಿದ್ದು ನಿಟ್ಟೂರು ಮತ್ತು ಚೇಳೂರು ರಸ್ತೆಗೆ ಹಣ ಹಾಕಿದ್ದು ವ್ಯರ್ಥವಾಗುತ್ತಿದೆ ಹಾಗಾಗಿ ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತೇನೆ. ಸ್ಲಂಬೋರ್ಡ್‍ನಿಂದ ಕಡುಬಡವರಿಗೆ ನಿವೇಶನಗಳನ್ನು ಕಟ್ಟಿಕೊಳ್ಳಲು ಹಣ ಬಿಡುಗಡೆಯಾಗಿದ್ದು ಕೇವಲ ಸೀಮಿತ ಏರಿಯಾಕ್ಕೆ ಮಾತ್ರ ಹಣ ನೀಡಿದ್ದು ಹಾಗಾಗಿ ಪಟ್ಟಣದ ಎಲ್ಲಾ ವಾರ್ಡ್‍ಗಳಲ್ಲೂ ತಳಮಟ್ಟದ ಜನರನ್ನು ಗುರುತಿಸಿ ನಿವೇಶನಗಳನ್ನು ಕಟ್ಟಿಕೊಳ್ಳಲು ಮನವಿ ಸಲ್ಲಿಸಿದ್ದೇನೆ. ಬಿ.ಜೆ.ಪಿ. ಸರ್ಕಾರವು ವಿದ್ಯೆಗೆ ಒತ್ತು ನೀಡಲು ಸರ್ಕಾರವು ಹಣವನ್ನು ಈ ಬಾರಿಯೇ ಅತಿ ಹೆಚ್ಚಿನ ಮೀಸಲನ್ನು ಇಟ್ಟಿರುವುದಾಗಿ ತಿಳಿಸಿದರು. ಗುದ್ದಲಿ ಪೂಜೆಯಲ್ಲಿ ತಾ.ಪಂ. ಮಾಜಿ ಸದಸ್ಯರುಗಳು ಹಾಗೂ…

Read More

ತುಮಕೂರು ನಾಲ್ಕು ತಿಂಗಳ ಬಾಕಿ ವೇತನ ತಡೆಹಿಡಿದಿರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಬಿಸಿಯೂಟ ನೌಕರರ ಜಿಲ್ಲಾ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಸಂಚಾಲಕ ಕಾಂತರಾಜು ಮಾತನಾಡಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಯೋಜನೆಯಲ್ಲಿ ಸುಮಾರು 2003ನೇ ಸಾಲಿನಿಂದಲೂ ನಿರಂತರವಾಗಿ ಕಡಿಮೆ ವೇತನಕ್ಕೆ ಕೆಲಸವನ್ನು ನಿರ್ವಹಿಸಿಕೊಂಡು ಬಂದಿದ್ದಾರೆ ಸರ್ಕಾರ ಈ ಬಿಸಿಯೂಟ ನೌಖರರಿಗೆ ಕನಿಷ್ಠ ವೇತನವನ್ನಾಗಲೀ, ಇಎಸ್‍ಐ ಭವಿಷ್ಯನಿಧಿ ಸೇರಿದಣಂತೆ ಸಾಮಾಜಿಕ ಭದ್ರತೆಯನ್ನು ನೀಡದೆ ದುಡಿಸಿಕೊಳ್ಳುತ್ತಿರುವುದು ಖಂಡನೀಯ. ಇಷ್ಠಾದರೂ ಸಾಲದೆಂಬಂತೆ ಕಳೆದ ನಾಲ್ಕು ತಿಂಗಳಿನಿಂದ ಪ್ರತಿ ತಿಂಗಳು ನಿಗಧಿಯಾಗಿರುವ ಅಡುಗೆಯವರಿಗೆ 3700 ಸಾಹಾಯಕರಿಗೆ 3600 ರೂಗಳನ್ನು ಸರ್ಕಾರ ನೀಡಿರುವುದಿಲ್ಲ ಸರ್ಕಾರದ ಈ ನಡೆ ನೌಕರರ ಜೀವನ ನಿರ್ವಹಣೆಗೆ ಕಷ್ಟಕರವಾಗಿದೆ ಆದ್ದರಿಂದ ಈ ಕೂಡಲೇ ಸರ್ಕಾರ ತಡೆಹಿಡಿದಿರುವ ನಾಲ್ಕು ತಿಂಗಳ ವೇತನವನ್ನು ಬಿಡುಗಡೆ ಮಾಡಬೇಕು ಮತ್ತು ಬಿಸಿಯೂಟ ನೌಕರರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರಾಜ್ಯಧ್ಯಕ್ಷ ಹೊನ್ನಪ್ಪಮರೆಮ್ಮನವರ, ಜಿಲ್ಲಾ ಸಂಚಾಳಕ…

Read More

ಚಿಕ್ಕನಾಯಕನಹಳ್ಳಿ ಸಮಾಜವನ್ನು ಹಾಗೂ ದೇಶವನ್ನು ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಬಗ್ಗು ಬಡಿಯುವ ನಿಟ್ಟಿನಲ್ಲಿ ಸಾರ್ವಜನಿಕರು, ಪೆÇಲೀಸ್ ಸಿಬ್ಬಂದಿಗಳಿಗೆ, ಎಲ್ಲಾ ಸಹಕಾರ ನೀಡಬೇಕು, ಎಂದು, ಗೃಹ ಸಚಿವರೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ರವರು, ಇಂದಿಲ್ಲಿ ಕರೆ ನೀಡಿದರು. ಸಚಿವರು ಬುಧವಾರ ಚಿಕ್ಕನಾಯಕನಹಳ್ಳಿ ತಾಲ್ಲೂಕು ನೂತನ ಪೆÇಲೀಸ್ ಠಾಣೆಯ ನೂತನ ಕಟ್ಟಡವನ್ನು, ಉದ್ಘಾಟಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ದೇಶದ ಐಕ್ಯತೆ ಹಾಗೂ ಸಮಗ್ರತೆ” ಕಾಪಾಡಲು ಹಗಲಿರುಳು ಶ್ರಮಿಸುತ್ತಿರುವ ಪೆÇಲೀಸ್ ಸಿಬ್ಬಂದಿಗಳ ಜತೆ ಎಲ್ಲರೂ ಕೈ ಜೋಡಿಸಬೇಕು, ಎಂದರು. ರಾಜ್ಯದ ಪೆÇಲೀಸ್, ರಾಷ್ಟ್ರದಲ್ಲಿಯೇ ಅತ್ಯಂತ ದಕ್ಷ ಹಾಗೂ ಶಿಸ್ತಿನ ಪಡೆಗಳಲ್ಲಿ ಒಂದು, ಎಂಬ ಹಿರಿಮೆಯನ್ನು ಹೊಂದಿದ್ದು, ಸಿಬ್ಬಂದಿಗಳ ಮನೋಸ್ಥೈರ್ಯ ಹಾಗೂ ಕಾರ್ಯ ದಕ್ಷತೆ ಹೆಚ್ಚಿಸಲು ಆದ್ಯ ಗಮನ ನೀಡಲಾಗುತ್ತಿದೆ, ಎಂದರು. ಮತಾಂಧ ಶಕ್ತಿಗಳು ಹಾಗೂ ಮಾದಕ ದ್ರವ್ಯ ವಸ್ತುಗಳ ಸೇವನೆ, ಸಾಗಾಟ ಹಾಗೂ ಇನ್ನಿತರ ಸಮಾಜ ವಿಧ್ರೋಹಿ ಕೃತ್ಯಗಳ ವಿರುದ್ಧ ಪೆÇಲೀಸರು ಹಗಲಿರುಳು ಕಣ್ಗಾವಲು ವಹಿಸಿದ್ದು, ಅವರಿಗೆ ನಮ್ಮೆಲ್ಲರ…

Read More

ಕೊರಟಗೆರೆ ನವೆಂಬರ್ ತಿಂಗಳಲ್ಲಿ ಬಗರ್‍ಹುಕುಂ ರೈತರಿಗೆ ಸಾಗುವಳಿ ಚೀಟಿ ಮತ್ತು ಹಕ್ಕು ಪತ್ರವನ್ನು ಅಂದೋಲನದ ಮುಖಾಂತರ ವಿತರಣೆ ಮಾಡಲಾಗುವುದು ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು. ಅವರು ಪಟ್ಟಣದ ತಾಲೂಕು ಕಛೇರಿಯಲ್ಲಿ ಬಗರ್ ಹುಕುಂ ಸಭೆ ನಡೆಸಿ ನಂತರ ಪತ್ರಕರ್ತರೋಂದಿಗೆ ಮಾತನಾಡಿ ಹಲವು ವರ್ಷಗಳಿಂದ ಸರ್ಕಾರಿ ಜಮೀನಿಯಲ್ಲಿ ವ್ಯವಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ಪತ್ರ ನೀಡುತ್ತಿಲ್ಲ ಎನ್ನುವ ಚರ್ಚೆ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಈ ತಿಂಗಳಲ್ಲಿ ಬಗರ್ ಹುಕುಂ ರೈತರಿಗೆ ಸಾಗುವಳಿ ಪತ್ರ ಮತ್ತು ಹಕ್ಕುಪತ್ರ ವಿತರಣೆಯ ಆಂದೋಲವನ್ನು ಪ್ರಾರಂಭಿಸಲಾಗುವುದು, ಆದರೆ ಇದನ್ನು ಪಾರದರ್ಶಕತೆಯಿಂದ ಮಾಡಲು ನಿರ್ಣಯಿಸಲಾಗಿದ್ದು ಸಾರ್ವಜನಿಕರಲ್ಲಿ ಮತ್ತು ಬಗರ್‍ಹುಕುಂ ರೈತರಲ್ಲಿ ಮನವಿ ಮಾಡುವುದೇÉನೆಂದರೆ ಸಾಗುವಳಿ ಚೀಟಿ ಪಡೆಯಲು ಅಥವಾ ಇನ್ನು ಯಾವುದೇ ವಿಚಾರಕ್ಕಾಗಿ ಯಾರಿಗಾದಾರೂ ಹಣ ನೀಡಿದರೆ ಅದಕ್ಕೆ ಹೊಣೆ ಅವರೇ ಆಗುತ್ತಾರೆ, ಆ ರೀತಿ ಹಣ ಯಾರಾದೂ ಕೇಳಿದರೆ ಅದನ್ನು ಕಮಿಟಿಗೆ, ಶಾಸಕನಾದ ನನಗೆ, ತಹಶೀಲ್ದಾರ ಗಮನಕ್ಕೆ ತರುವುದು, ಪತ್ರ ನೀಡಲು ಅವಕ್ಯಕತೆ ಇರುವ ಕಡೆ ಸ್ಥಳ…

Read More

ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದರೂ ಜನಸೇವೆ ಮಾಡೋದನ್ನ ಮರೆಯಲಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಹೇಳಿದ್ದಾರೆ. ಕಾಂಗ್ರೆಸ್ ಮಾಜಿ ಶಾಸಕ ಡಾ.ರಫೀಕ್ ಅಹಮ್ಮದ್ ಅವರು ತುಮಕೂರು ನಗರಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ್ದರು ಇದಕ್ಕೆ ಪ್ರತ್ಯುತ್ತರವಾಗಿ ನಗರದಲ್ಲಿ 2013 ರಿಂದ 2018ರವರೆಗೆ ನಿರಂತರ ಐದು ವರ್ಷಗಳ ಕಾಲ ಶಾಸಕರಾಗಿದ್ದಾಗ, ತುಮಕೂರು ನಗರಕ್ಕೆ ತಮ್ಮ ಕೊಡುಗೆ ಏನು ಎಂಬುದನ್ನು ದಾಖಲೆ ಸಮೇತ ಬಿಡುಗಡೆ ಮಾಡಿ ಎಂದು ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಪ್ರತಿ ಸವಾಲು ಹಾಕಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎನ್.ಗೋವಿಂದರಾಜು ನಗರದ ಜನತೆಗೆ ಕಳೆದ 11 ವರ್ಷದಿಂದ ಶುದ್ದ ಕುಡಿಯುವ ನೀರನ್ನು ನೀಡುತ್ತಾ ಬಂದಿದ್ದೇನೆ. ಕೋವಿಡ್ ಸಂದರ್ಭದಲ್ಲಿ ನಿರಂತರವಾಗಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಿದ್ದೇನೆ. ಕೋವಿಡ್ ನಿಂದ ಸಾರ್ವಜನಿಕರಿಗೆ ಆಂಬ್ಯುಲೆನ್ಸ್ ಕೊರತೆ ಉಂಟಾದಾಗ ಎರಡು ಖಾಸಗಿ ಆಂಬ್ಯುಲೆನ್ಸ್ ಗಳನ್ನು ಒದಗಿಸಿ ಜನರಿಗೆ ವೈದ್ಯಕೀಯ ಸೇವೆ ನೀಡಿದ್ದೇನೆ. ತುಮಕೂರು ನಗರವನ್ನು ಕಾರ್ಯಕ್ಷೇತ್ರವಾಗಿಸಿಕೊಂಡು 2010…

Read More