Author: News Desk Benkiyabale

ತುಮಕೂರು ಕನ್ನಡ ಭಾಷೆಯನ್ನು ನಾವೆಲ್ಲರೂ ಬಳಸುವ ಮೂಲಕ ಬೆಳೆಸೋಣ ಎಂದು ಜಿಲ್ಲಾ ವಕೀಲರ ಸಂಘದ ಹಿರಿಯ ವಕೀಲೆ ಸಿ.ಆರ್.ಭಾಗ್ಯಮ್ಮ ಕರೆ ನೀಡಿದರು. ಕಾರಾಗೃಹದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಾರಾಗೃಹ ಬಂದಿಗಳಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಖಂಡ ಕರ್ನಾಟಕ ಬೆಳೆದು ಬಂದ ರೀತಿ, ಕನ್ನಡ ನಾಡು-ನುಡಿ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಕಾರಾಗೃಹದ ಅಧೀಕ್ಷಕಿ ಎಂ. ಶಾಂತಮ್ಮ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ದೈನಂದಿನ ಜೀವನದಲ್ಲಿ ನಮಗರಿವಿಲ್ಲದೆ ಪರಿಕೀಯ ಭಾಷೆಯನ್ನು ಬಳಸಿ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದೇವೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನೇ ಮಾತನಾಡುವುದನ್ನು ನಾವೆಲ್ಲ ರೂಢಿಸಿಕೊಳ್ಳಬೇಕು. ಇತರರಿಗೂ ಕನ್ನಡದ ಹಿರಿಮೆಯ ಬಗ್ಗೆ ತಿಳಿಸಬೇಕು ಎಂದು ತಿಳಿಸಿದರು. ಜಿಲ್ಲಾ ವಕೀಲರ ಸಂಘದ ಹಿರಿಯ ವಕೀಲ ಡಿ. ರಾಮಕೃಷ್ಣ ಮಾತನಾಡಿ, ಕನ್ನಡ ನಾಡಿನ ಅಭಿವೃದ್ದಿಗಾಗಿ ಹಲವಾರು ಕವಿಗಳು, ಸಾಹಿತಿಗಳು ಹೋರಾಟ ಮಾಡಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವೆಂದು ಅಭಿಪ್ರಾಯಪಟ್ಟರು. ಜಿಲ್ಲಾ ಕಾರಾಗೃಹದ ಸಹಶಿಕ್ಷಕ ಸಿದ್ಧರಾಜಯ್ಯ ಮಾತನಾಡಿ, ಕನ್ನಡಿಗರೆಲ್ಲರೂ ಕನ್ನಡ ನಾಡನ್ನು ಕಟ್ಟುವ, ಕನ್ನಡ…

Read More

ಗುಬ್ಬಿ ಅಂಬೇಡ್ಕರ್ ಆಶಯಕ್ಕೆ ತಣ್ಣಿರೆರಚುವ ಕೆಲಸ ಕೆಲ ವ್ಯಕ್ತಿಗಳಿಂದ ಸಮಾಜಕ್ಕೆ ಡಿ.ಎಸ್.ಎಸ್ ಬಗ್ಗೆ ಗೌರವ ಹಾಳಾಗುತ್ತಿದೆ. ಇದನ್ನು ತಪ್ಪಿಸಲು ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಪಾಂಡುರಂಗಯ್ಯ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ದಲಿತ ಸಂಘರ್ಷ ಸಮಿತಿಯ ಹೆಸರನ್ನು ಹೇಳಿಕೊಂಡು ಅಧಿಕಾರಿಗಳನ್ನು ಹೆದರಿಸಿ ಜೀವನ ನಡೆಸುತ್ತಿರುವ ಇವರಿಗೆ ಅಂಬೇಡ್ಕರ್‍ರವರ ಹೆಸರು ಹೇಳಲು ಇವರಿಗೆ ನೈತಿಕತೆ ಇಲ್ಲ. ಸಮಾಜದಲ್ಲಿ ಎಲ್ಲಾ ಸಮುದಾಯದವರು ಒಗ್ಗಟ್ಟಾಗಿ ಬಾಳುತ್ತಿರುವ ಸಮಯದಲ್ಲಿ ಈ ಕಿಡಿಗೇಡಿಗಳು ಮಾನನಷ್ಠ ಮೊಕದ್ದಮೆಯ ಹೆಸರನ್ನು ಬಳಸಿಕೊಂಡು ಜನಾಂಗದ ನಾಯಕರುಗಳ ಮುಖಗಳಿಗೆ ಮಸಿ ಬಳಿಯುತ್ತಿದ್ದಾರೆ ಎಂದು ದೂರಿದರು. ಇನ್ನೋರ್ವ ದಲಿತ ಮುಖಂಡ ಮಂಜೇಶ್ ಮಾತನಾಡಿ ಪೆದ್ದನಹಳ್ಳಿ ಘಟನೆಯಿಂದ ಇಲ್ಲಿಯವರೆಗೂ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದು ಮೊನ್ನೆ ನಿಟ್ಟೂರಿನಲ್ಲಿ ನಡೆದ ದೇವಸ್ಥಾನದ ಗಲಾಟೆಯಲ್ಲಿಯೂ ಸಹ ಈ ಕಿಡಿಗೇಡಿಗಳು ಗ್ರಾಮದ ಸ್ವಾಸ್ಥ್ಯವನ್ನು ಕಳೆಯುತ್ತಿದ್ದು ಇದರಿಂದ ಅಲ್ಲಿನ ದಲಿತರು ಮೇಲ್ವರ್ಗದ ಸಮಾಜದವರ ಕೆಂಗಣ್ಣಿಗೆ ಗುರಿಯಾಗಲು ಈ ಕಿಡಿಗೇಡಿಗಳ…

Read More

ತುಮಕೂರು ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ತುಮಕೂರು ವಿವಿ ಪತ್ರಿಕೋಧ್ಯಮ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಇಬ್ಬರು ವಿದ್ಯಾರ್ಥಿಗಳನ್ನು ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು. ಈ ಸರಳ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅವರು, ವಿದ್ಯಾರ್ಥಿ ಜೀವನ ಒಂದು ಪವಿತ್ರವಾದ ನದಿ ಇದ್ದ ಹಾಗೆ ಅದರಲ್ಲಿ ಕಲ್ಲು, ಬಂಡೆ, ಏರು ಪೇರು, ಮುಳ್ಳು ಕಂಟಿಗಳು ಇರುತ್ತವೆ. ಅದರಂತೆ ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಲು ಹಲವಾರು ಅಡೆ ತಡೆಗಳು, ಕಷ್ಟ ಕಾರ್ಪಣ್ಯಗಳು ಬಂದೇ ಬರುತ್ತವೆ. ಇವುಗಳನ್ನು ಎದುರಿಸಿ ಆತ್ಮಸ್ಥೈರ್ಯದಿಂದ ಮುಂದೆ ಬರಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಮಾತನಾಡಿ, ಪತ್ರಿಕೋಧ್ಯಮ ವಿಭಾಗ ನಿರುದ್ಯೋಗ ಸೃಷ್ಠಿ ಮಾಡುವ ವಿಭಾಗವಲ್ಲ, ಅನ್ನ ಹುಟ್ಟಿಸಿಕೊಟ್ಟು ತನ್ನ ಕಾಲಮೇಲೆ ತಾನು ನಿಲ್ಲುವಂತಹ ಶಕ್ತಿಯನ್ನು ರೂಪಿಸಲಿದೆ ಎಂದು ಹೇಳಿದರು. ತುಮಕೂರು ವಿವಿ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥರಾದ ಕೆ.ವಿ.ಸಿಬಂತಿ ಪದ್ಮನಾಭ ಮಾತನಾಡಿ, ಮುರಳೀಧರ ಹಾಲಪ್ಪ ಅವರು ತಮ್ಮ ತಂದೆಯವರ…

Read More

ತುಮಕೂರು ನಗರದ ಅಗಳಕೋಟೆಯ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ, ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗಾಗಿ ‘ಸ್ಕಿಲ್ಸ್ ಅಂಡ್ ಸಿಮುಲೇಷನ್’ ಪ್ರಯೋಗಾಲಯ ಆರಂಭಗೊಂಡಿದೆ. ಆಧುನಿಕ ವೈದ್ಯಕೀಯ ತಂತ್ರಜ್ಞಾನ ಸಲಕರಣೆಗಳನ್ನು ಒಳಗೊಂಡಿರುವ ಪ್ರಯೋಗಾಲಯವನ್ನು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು, ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರು ಉದ್ಘಾಟಿಸಿ ಮಾತನಾಡಿದರು. ವೈದ್ಯಕೀಯ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ, ಸುರಕ್ಷಿತವಾಗಿ ಮತ್ತು ಸಮರ್ಥವಾಗಿ ತರಬೇತಿ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ, ಪ್ರಯೋಗಾಲಯವನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಮಹಾವಿದ್ಯಾಲಯದಲ್ಲಿ ವಿದೇಶಿ ವೈದ್ಯರು ಮತ್ತು ಪ್ರಾಧ್ಯಾಪಕÀರುಗಳು ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದುಕೊಳ್ಳುವ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ ಎಂದರು. ವೈದ್ಯಕೀಯ ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗಳಲ್ಲಿ, ‘ಸ್ಕಿಲ್ಸ್ ಅಂಡ್ ಸಿಮುಲೇಷನ್’ ಪ್ರಯೋಗಾಲಯದ ಅಳವಡಿಕೆ ಒಂದು ಮಹತ್ತರ ಹೆಜ್ಜೆ. ‘ಸ್ಕಿಲ್ಸ್ ಅಂಡ್ ಸಿಮುಲೇಷನ್’ ಪ್ರಯೋಗಾಲಯದಲ್ಲಿ, ಕ್ರತಕ ಮಾನವ ಮಾದರಿಗಳನ್ನು ಬಳಸಿಕೊಂಡು, ಪ್ರಾಯೋಗಿಕವಾಗಿ ಹೇಳಿಕೊಡಲಾಗುತ್ತದೆ. ಇಲ್ಲಿ ರೋಗಿಗಳಿಗೆ ಬದಲಾಗಿ, ಕೃತಕ ಮಾನವ ಮಾದರಿಗಳನ್ನು ಬಳಸಿಕೊಳ್ಳಲಾಗುತ್ತದೆ. ಕಾಲೇಜಿನ ಎಲ್ಲಾ ವಿಭಾಗದ…

Read More

ಕೊಡಿಗೇನಹಳ್ಳಿ ಭೋವಿ ಸಮಾಜ ಧಾರ್ಮಿಕ ಕಾರ್ಯಗಳೊಂದಿಗೆ ಸಮಾಜದ ಯುವಕರ ಸಬಲೀಕರಣಕ್ಕೆ ಒತ್ತು ನೀಡಲಾಯಿತು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಪ್ರಕಟಿಸಿದರು. ತಾಲೂಕಿನ ಪುರವರ ಹೋಬಳಿ ಬ್ಯಾಲ್ಯ ಗ್ರಾಪನ್ನ ವಡ್ಡರಹಟ್ಟಿ ಗ್ರಾಮದ ವಡ್ಡರಹಟ್ಟಿ ಗ್ರಾಮದ ವೆಂಕಟೇಶ್ವರಸ್ವಾಮಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಇಲ್ಲಿನ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಮಾಜದ ಪ್ರತಿಭಾವಂತ ಮಕ್ಕಳ ಪುರಸ್ಕಾರ ಕಾರ್ಯಕ್ರಮಗಳು ನಡೆದಾಗ ಸಮಾಜದ ಉನ್ನತೀಕರಣಕ್ಕೆ ಚಾಲನೆ ನೀಡಲಾಗಿದೆ.ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಸೇರಿದಂತೆ ಒಟ್ಟು 20 ಲಕ್ಷ ರೂ. ಜಿ ಪರಮೇಶ್ವರ್ ತಿಳಿಸುವಂತೆ ಹೇಳಿದ್ದಾರೆ.ಈ ದೇವಸ್ಥಾನ ಕೇವಲ ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗದೆ. ಪ್ರತಿ ವರ್ಷ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಬೇಕು, ಶಿಕ್ಷಣಕ್ಕೆ ತೊಂದರೆ ಇರುವ ಮಕ್ಕಳಿಗೆ ಅನುಕೂಲವಾಗುವಂತೆ ದತ್ತಿ ನಿಧಿಯನ್ನು ಸಂಗ್ರಹಿಸಬೇಕು ಈ ಮೂಲಕ ಯುವಕರಿಗೆ ಹಾಗೂ ಅನುಕೂಲವಾಗಬೇಕು. ಪೂಜಾ ಕೈಂಕರ್ಯಗಳೊಂದಿಗೆ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಯುವಕರು ಸಬಲೀಕರಣ ಅನುಕೂಲವಾಗುವಂತೆ ಚಿಂತನೆ ಮಾಡಬೇಕು.

Read More

ಬೆಂಗಳೂರು ಮುಂದುವರಿದ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕೇಂದ್ರೀಯ ಸಂಸ್ಥೆಗಳು ಮತ್ತು ಉದ್ಯೋಗದಲ್ಲಿ ಶೇ. 10ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನದ 103ನೇ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ.ಸಾಮಾನ್ಯ ವರ್ಗಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 10ರಷ್ಟು ಮೀಸಲಾತಿ ಒದಗಿಸುವ ಸಂವಿಧಾನದ 103ನೇ ತಿದ್ದುಪಡಿ ಮಾನ್ಯತೆಯನ್ನು ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಮೂರನೇ ಎರಡರಷ್ಟು ಬಹುಮತದೊಂದಿಗೆ ಎತ್ತಿ ಹಿಡಿದಿದೆ.ನಾಲ್ವರು ನ್ಯಾಯಾಧೀಶರು ಈ ಕಾಯ್ದೆಯ ಪರವಾಗಿ ವಾದಿಸಿದರು, ಮತ್ತೋರ್ವರು ವಿರುದ್ಧವಾಗಿ ವಾದಿಸಿದ್ದಾರೆ. ತೀರ್ಪನ್ನು ಓದಿದ ನ್ಯಾಯಾಧೀಶ ಮಹೇಶ್ವರಿ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 10ರಷ್ಟು ಮೀಸಲಾತಿ ಒದಗಿಸುವುದಿಲ್ಲ ಸಂವಿಧಾನದ ಮೂಲ ರಚನೆ ಉಲ್ಲಂಘನೆಯಾಗಿದೆ ಎಂದು ಹೇಳಿದರು. ಮೀಸಲಾತಿ ನೀತಿಯನ್ನು ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ನ್ಯಾಯಾಧೀಶರಾದ ತ್ರಿವೇದಿ ಮತ್ತು ಪಾರ್ದಿವಾಲಾ ಹೇಳಿದರು. ಆದಾಗ್ಯೂ, ನ್ಯಾಯಾಧೀಶರಾದ ಎಸ್. ರವೀಂದ್ರ ಭಟ್ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 10ರಷ್ಟು ಮೀಸಲಾತಿಗೆ ವಿರೋಧವಿದೆ. ಪರಿಶಿಷ್ಟ ಜಾತಿ,

Read More

ತುಮಕೂರು ಕರ್ನಾಟಕ ಸಂಗೀತ, ಯಕ್ಷಗಾನ ಹಾಗೂ ಗಮಕ ಕಲೆಗಳ ನಡುವಿನ ಪರಸ್ಪರ ಪ್ರಭಾವ, ಸಾಮ್ಯ ಹಾಗೂ ವ್ಯತ್ಯಾಸಗಳ ಕುರಿತ ವಿಸ್ತøತ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್. ಜಿ. ಚಂದ್ರಶೇಖರ್ ಅಭಿಪ್ರಾಯಪಟ್ಟರು. ಯಕ್ಷದೀವಿಗೆ ಸಂಸ್ಥೆಯು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ನಗರದ ಎಂ.ಜಿ. ರಸ್ತೆಯ ಮಹಿಳಾ ಸಮಾಜ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಯಕ್ಷಗಾನ-ಕರ್ನಾಟಕ ಸಂಗೀತ-ಗಮಕಗಳ ನಡುವಿನ ಸಾಮ್ಯ, ವ್ಯತ್ಯಾಸಗಳ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲ ಕಲೆಗಳೂ ತಮ್ಮಷ್ಟಕ್ಕೇ ಸ್ವತಂತ್ರ ಹಾಗೂ ವೈಶಿಷ್ಟ್ಯಪೂರ್ಣವಾದವು. ಅವುಗಳಿಗೆ ಸ್ವಂತಿಕೆ ಇದೆ. ಆದರೆ ಆ ನಿಯಮಗಳ ನಡುವೆಯೂ ಅವು ಪರಸ್ಪರ ಜತೆಯಾಗಿ ಸಾಗಬಲ್ಲವು. ಇವುಗಳ ಕುರಿತ ಇನ್ನಷ್ಟು ಸಂಶೋಧನೆ ನಡೆಯಬೇಕು ಎಂದರು. ಸಂಗೀತವು ಆಪ್ಯಾಯಮಾನತೆಗೆ, ದೀನತೆಗೆ ಹಾಗೂ ಆತ್ಮದರ್ಶನಕ್ಕೆ ನಿಮಿತ್ತವಾಗಿದೆ ಎಂಬ ಡಿ.ವಿ.ಜಿ.ಯವರ ಮಾತನ್ನು ಉಲ್ಲೇಖಿಸಿದ ಅವರು ಸಂಗೀತದಂತಹ ಕಲೆಗಳು ಆತ್ಮಸಾಕ್ಷಾತ್ಕಾರಕ್ಕೆ ದಾರಿಯಾಗಬೇಕು ಎಂದರು. ಗಮಕ ಕಲಾವಿದ ಗ. ಸೀ. ಶ್ರೀನಿವಾಸಮೂರ್ತಿ, ಭಾಗವತ ರಮೇಶ್ ಭಟ್…

Read More

ತುಮಕೂರು ಮಹಾತ್ಮಗಾಂಧಿ ಕ್ರೀಡಾಂಗಣದ ನಿರ್ಮಾಣ ಪೂರ್ಣಗೊಂಡಿದ್ದರೂ,ಕ್ರೀಡಾಪಟುಗಳ ಅಭ್ಯಾಸಕ್ಕೆ ಮುಕ್ತಗೊಳಿ ಸದೆ, ಜಿಲ್ಲಾಡಳಿತ ಮತ್ತು ಕ್ರೀಡಾ ಇಲಾಖೆ ನಿರ್ಲಕ್ಷ ತೋರಿದ್ದು, ಡಿಸೆಂಬರ್ 1ರೊಳಗೆ ಕ್ರೀಡಾಂಗಣದ ಪ್ರವೇಶಕ್ಕೆ ಅವಕಾಶ ಕಲ್ಪಿಸದಿದ್ದರೆ, ಬೀಗ ಹೊಡೆದು, ಅಭ್ಯಾಸ ಆರಂಭಿಸುವುದು ಅನಿವಾರ್ಯ ಎಂದು ಕ್ರೀಡಾಪಟುಗಳು ಹಾಗೂ ಕ್ರೀಡಾಪೋಷಕರು ತಿಳಿಸಿದ್ದಾರೆ. ನಗರದ ಮಹಾತ್ಮಗಾಂಧಿ ಕ್ರೀಡಾಂಗಣದ ಮುಂಭಾಗದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರೀಡಾಪಟುಗಳಾದ ಅನಿಲ್, ಟಿ.ಕೆ.ಆನಂದ್,ಲಕ್ಷ್ಮಿನಾರಾಯಣ್,ಪ್ರಭಾಕರ್,ಶ್ರೀನಿವಾಸ್,ಧನಿಯಕುಮಾರ್ ಅವರುಗಳು ಈ ಸಂಬಂಧ ನವೆಂಬರ್ 08ರ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಎಲ್ಲಾ ಕ್ರೀಡಾಪಟುಗಳು ಮನವಿ ಸಲ್ಲಿಸಲಿದೇವೆ. ಡಿಸೆಂಬರ್ 01ಕ್ಕೆ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಅವಕಾಶ ನೀಡದಿದ್ದರೆ ನಾವೇ ಬಾಗಿಲು ತೆಗೆದು ಅಭ್ಯಾಸ ಆರಂಭಿಸುತ್ತೇವೆ ಎಂದು ಸ್ಪಷ್ಟ ಪಡಿಸಿದರು. ಕಳೆದ 2018ರಲ್ಲಿ ಸ್ಮಾರ್ಟ್‍ಸಿಟಿಯ 66 ಕೋಟಿರೂಗಳ ಅನುದಾನದಲ್ಲಿ ನೂತನ ಕ್ರೀಡಾಂಗಣ ನಿರ್ಮಾಣಕ್ಕೆ ಇದ್ದ ಕ್ರೀಡಾಂಗಣವನ್ನು ನೆಲಸಮ ಮಾಡಿದ್ದರಿಂದ ಅಥ್ಲೇಟಿಕ್,ಬ್ಯಾಸ್ಕೇಟ್‍ಬಾಲ್,ಕಬ್ಬಡಿ,ಹಾಕಿ,ವಾಲಿಬಾಲ್,ಪುಟ್‍ಬಾಲ್, ಟೆಕ್ವಾಂಡೋ,ಶೂಟಿಂಗ್ ಸೇರಿದಂತೆ ಹಲವಾರು ಕ್ರೀಡೆಗಳಿಗೆ ಅಭ್ಯಾಸಕ್ಕೆ ಅವಕಾಶವೇ ಇಲ್ಲದಂತಾಗಿದೆ.ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿಯೂ ಹಲವಾರು ನಿರ್ಮಾಣ ಕಾಮಗಾರಿಗಳು ನಡೆಯುತ್ತಿರುವುದರಿಂದ ಅಲ್ಲಿಯೂ ಕ್ರೀಡಾ ಚಟುವಟಿಕೆಗಳ ಅಭ್ಯಾಸಕ್ಕ್ಕೆ ಜಾಗವಿಲ್ಲ.ಇದೇ ಸ್ಥಿತಿ…

Read More

ತುಮಕೂರು ಮೂಡಲಪಾಯ ದೊಡ್ಡಾಟವು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಮಾತ್ರ ಕಾಣಸಿಗುತ್ತದೆ ತುಮಕೂರು, ಬೆಂಗಳೂರು ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಾನು ಬಯಲಾಟವನ್ನ ನೋಡಿಯೇ ಇಲ್ಲ. ಡಮರುಗ ರಂಗ ಸಂಪನ್ಮೂಲ ಕೇಂದ್ರದ ಮೆಳೇಹಳ್ಳಿ ದೇವರಾಜ್ ಈ ರೀತಿಯ ಪ್ರಯತ್ನಕ್ಕೆ ಕೈ ಹಾಕಿರುವುದು ತುಂಬಾ ಸಂತೋಷದ ವಿಷಯ, ಅವರ ಬೆಂಬಲಕ್ಕೆ ತುಮಕೂರಿನ ಪ್ರಜ್ಞಾವಂತ ನಾಗರೀಕರು ನಿಲ್ಲಬೇಕಿದೆ, ಎಂದು ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ಎಂ.ರವಿಕುಮಾರ್ ಅಭಿಪ್ರಾಯ ಪಟ್ಟರು. ಅವರು ದಿನಾಂಕ: 05-11-22 ನೇ ಶನಿವಾರ ಸಂಜೆ 6.30 ಕ್ಕೆ ಕನ್ನಡ ಭವನದಲ್ಲಿ ದ್ರೌಪದಿ ವಸ್ತ್ರಾಪಹರಣ ದೊಡ್ಡಾಟ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ್, ತುಮಕೂರು ವಿಶ್ವವಿದ್ಯಾನಿಲಯದ ಉಪನ್ಯಾಸಕರಾದ ರಾಮು ಹೆಚ್., ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಮಾರುತಿ ಎನ್.ಎನ್., ಕೋರ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರಾದ ಮಧುಸೂದನ್ ರಾವ್ ಉಪಸ್ಥಿತರಿದ್ದರು. ನಂತರ ಬಹಳ ಸುಂದರವಾಗಿ ದೊಡ್ಡಾಟ ಮೂಡಿ ಬಂದಿತು. ಆಟದಲ್ಲಿ ದ್ರೌಪದಿಯು, ಪಗಡೆಯಾಟದ ಸಮಯದಲ್ಲಿ ನಾನಿದ್ದಿದ್ದರೆ ಎಲ್ಲವನ್ನು ಸೋಲಲು ಬಿಡುತ್ತಿರಲಿಲ್ಲ…

Read More

ತುಮಕೂರು ಭಾರತೀಯ ಸಂಸ್ಕøತಿಯಲ್ಲಿ ಗೋಪೂಜೆಗೆ ವಿಶೇಷ ಸ್ಥಾನಮಾನವಿದ್ದು,ನೂರು ಪುಣ್ಯಕ್ಷೇತ್ರಗಳ ದರ್ಶನದ ಭಾಗ್ಯ ಒಂದು ಗೋಪೂಜೆಯಿಂದ ದೊರೆಯಲಿದೆ.ಇದು ವೀರಶೈವ,ಲಿಂಗಾಯಿತರಿಗಷ್ಟೇ ಒಳ್ಳೆಯದನ್ನು ಮಾಡುವುದಿಲ್ಲ.ಇಡೀ ಮನುಕುಲಕ್ಕೆ ಒಳ್ಳೆಯದನ್ನು ಮಾಡಲಿದೆ ಎಂದು ಶ್ರೀಅಟವಿ ಜಂಗಮ ಸುಕ್ಷೇತ್ರದ ಶ್ರೀಅಟವಿ ಶಿವಲಿಂಗಸ್ವಾಮೀಜಿಗಳು ತಿಳಿಸಿದ್ದಾರೆ. ಚಿಕ್ಕತೊಟ್ಲುಕೆರೆಯ ಶ್ರೀಅಟವಿ ಜಂಗಮ ಸುಕ್ಷೇತ್ರದಲ್ಲಿ ಶ್ರೀಅಟವಿ ಮಹಾಸ್ವಾಮಿಗಳ 122ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳ ಕೊನೆಯ ದಿನದ ಗೋಪೂಜಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು,ಗೋಪೂಜೆಯ ಫಲ ಶ್ರೀಮಠದ ಭಕ್ತಾಧಿಗಳಿಗೆ ದೊರೆಯಬೇಕು ಎಂಬ ಉದ್ದೇಶದಿಂದ ಇಂದು 108 ಗೋವುಗಳಿಗೆ 1108 ದಂಪತಿಗಳಿಂದ ಗೋಪೂಜೆ ಹಮ್ಮಿಕೊಳ್ಳಲಾಗಿದೆ.ಇದೊಂದು ಪುಣ್ಯದ ಕಾರ್ಯ ಎಂದರು. ಶ್ರೀಮಠದ ಪರಮ ಭಕ್ತರಾದ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ದಂಪತಿಗಳು ಇಂದು ಬ್ರಾಹ್ಮಿ ಮರ್ಹೂತದಲ್ಲಿ ಗೋಪೂಜೆ ನೆರವೇರಿಸಿದರು. ಶ್ರೀಅಟವಿ ಜಂಗಮ ಸುಕ್ಷೇತ್ರದ ಮುಂದಿನ ಉತ್ತರಾಧಿಕಾರಿಯಾಗಿ ಶ್ರೀಮಲ್ಲಿಕಾರ್ಜುನ ದೇವರ ನ್ನು ಈಗಾಗಲೇ ನಾಡಿನ ಹಲವು ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ನೇಮಿಸಿದ್ದು,ಅವರು ಮುಂದಿನ ದಿನಗಳಲ್ಲಿ ಮಠವನ್ನು ನಡೆಸಿಕೊಂಡು ಹೋಗಲಿದ್ದಾರೆ.ನಾವುಗಳು ಅವರಿಗೆ ಬೇಕಾದ ಆಧ್ಯಾತ್ಮ ಸಾಧನೆ,…

Read More