Author: News Desk Benkiyabale

ಗುಬ್ಬಿ ರಾಜ್ಯದಲ್ಲಿ 2023ಕ್ಕೆ ಪೂರ್ಣ ಪ್ರಮಾಣದ ಬಹುಮತ ಪಡೆದು ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದೆ ತರುತ್ತೇನೆಂದು ಮಾಜಿಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದರು ಗುಬ್ಬಿ ಪಟ್ಟಣದ ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯ ಹಾಗೂ ಗುಬ್ಬಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಚಂದ್ರಶೇಖರ್ ಬಾಬು ರವರ ಮನೆಯ ಗೃಹ ಪ್ರವೇಶದ ಖಾಸಗಿ ಸಮಾರಂಭದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳಿಲ್ಲದ ಆ ಪಕ್ಷದ ನಾಯಕರುಗಳು ಊಹಾ ಪೆÇೀಹದ ಹೇಳಿಕೆ ಗಳನ್ನು ನೀಡಿ ರಾಜ್ಯದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಇದರಿಂದ ಯಾವೊಬ್ಬ ಶಾಸಕನು ನಮ್ಮ ಪಕ್ಷದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದ ಆವರು ಭಾರತೀಯ ಜನತಾ ಪಕ್ಷ ಧಾರ್ಮಿಕ ನೆಲೆಗಟ್ಟು ಹಾಗೂ ಪಕ್ಷದ ಸಿದ್ಧಾಂತಕ್ಕೆ ಹೆಚ್ಚಿನ ಒತ್ತು ನೀಡುವ ಅಭ್ಯರ್ಥಿಗಳೇ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದರು. ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ ಮುಂಬರುವ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆಮಾಡಲು ಮತ ದಾರರ ಸಮೀಕ್ಷೆ ಮಾಡಿಸಲು ಈಗಾಗಲೇ ತಯಾರಿ ನೆಡೆಸಿದ್ದು ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡಿದರು…

Read More

ತುಮಕೂರು ಜಿಲ್ಲೆಯಲ್ಲಿ ಎಸ್‍ಸಿ/ಎಸ್‍ಟಿ ಸಮುದಾಯದ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಸ್ಸಿಎಸ್ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿ ಮಾತನಾಡಿದ ಸಮನ್ವಯ ನೌಕರರ ಸಂಘದ ಅಧ್ಯಕ್ಷ ವೈ.ಕೆ.ಬಾಲಕೃಷ್ಣಪ್ಪ ಅವರು, ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ನೇರವಾಗಿ ಅಥವಾ ಪರೋಕ್ಷವಾಗಿ ಎಸ್ಸಿ/ಎಸ್ಟಿ ನೌಕರರ/ಅಧಿಕಾರಿಗಳ ಮೇಲೆ ಮಾನಸಿಕ ಒತ್ತಡಗಳ ಸೃಷ್ಟಿ ಮಾಡಿ ಮಾನಸಿಕ ಹಿಂಸೆ ಕೊಡುವುದರ ಮೂಲಕ ಕಾನೂನು ರೀತಿ ಕೆಲಸ ನಿರ್ವಹಿಸಲು ಕೆಲವು ವ್ಯಕ್ತಿಗಳು ಅಡಚಣೆ ಮಾಡುತ್ತಿದ್ದಾರೆ ಎಂದು ದೂರಿದರು. ಸಿರಾ ತಾಲ್ಲೂಕು ತಹಶೀಲ್ದಾರ್ ಮತ್ತು ದಂಡಾಧಿಕಾರಿಗಳಾದ ಮಮತಾರವರ ಕುರಿತು ಅವರ ಕಚೇರಿಯನ್ನು ಬೆಡ್ ರೂಂಗೆ ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿರುತ್ತಾರೆ, ಪರಿಶಿಷ್ಟ ಜಾತಿಯ ಅಧಿಕಾರಿಗಳ ಮೇಲೆ ಈ ತರದ ಅವಹೇಳನ, ಒತ್ತಡ ಇಡೀ ನಾಗರಿಕ ಸಮಾಜದ ತಲೆ ತಗ್ಗಿಸುವಂತಹ ವಿಚಾರವಾಗಿದೆ ಎಂದರು. ಕಳೆದ ಕೆಲವು ದಿನಗಳ ಹಿಂದೆ ಶಿಕ್ಷಕರಿಬ್ಬರು ಫೆÇೀನ್ ಸಂಭಾಷಣೆಯಲ್ಲಿ ಮಾದಿಗ ಸಮು ದಾಯ ಮತ್ತು ಒಕ್ಕಲಿಗ…

Read More

ತುಮಕೂರು ನಗರದಲ್ಲಿ ಕೇಂದ್ರ ಸರ್ಕಾರದ ಸ್ಮಾರ್ಟ್‍ಸಿಟಿ ಕಾಮಗಾರಿಗಳ ಅನುಷ್ಠಾನ, ಪ್ರಗತಿ, ಅನುದಾನ ಬಿಡುಗಡೆ, ಖರ್ಚಾದ ಹಣಕಾಸಿನ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರನ್ನು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದರಾಜು ಒತ್ತಾಯಿಸಿದರು. ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆ ಕಾಮಗಾರಿಗಳಿಂದ ಸಾಕಷ್ಟು ಅದ್ವಾನ ಆಗಿದ್ದು, ಬೀದಿದೀಪ ಅಳವಡಿಕೆಯಲ್ಲಿ ಕಳಪೆ ಗುಣಮಟ್ಟ ಕಂಡು ಬರುತ್ತಿದ್ದು, ದೊಡ್ಡ ಹಗರಣವೇ ನಡೆದಿದೆ. ಈ ಬಗ್ಗೆ ಸಂಸದರು ಮತ್ತು ಶಾಸಕರು ಬಹಿರಂಗ ಚರ್ಚೆಗೆ ದಿನಾಂಕ ಮತ್ತು ಸ್ಥಳವನ್ನು ನಿಗಧಿಪಡಿಸಿದರೆ ಆ ದಿನ ಚರ್ಚೆಗೆ ಬರಲು ನಾನು ಸಿದ್ಧ ಎಂದು ಸವಾಲು ಹಾಕಿದರು. ಸ್ಮಾರ್ಟ್‍ಸಿಟಿ ಕಳಪೆ ಕಾಮಗಾರಿಗಳ ಬಗ್ಗೆ ನಾಲ್ಕು ಭಾರಿ ಶಾಸಕರಾಗಿ ಎರಡು ಭಾರಿ ಸಚಿವರಾಗಿದ್ದ ಅವರದ್ದೇ ಪಕ್ಷದ ಸೊಗಡು ಶಿವಣ್ಣ ಅವರೇ ಆರೋಪಿಸಿದ್ದಾರೆ. ಹೀಗಿರುವಾಗ ಸ್ಮಾರ್ಟ್‍ಸಿಟಿ ಕಾಮಗಾರಿಗಳ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು. ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ನಗರ ವ್ಯಾಪ್ತಿಯಲ್ಲಿ…

Read More

ತುಮಕೂರು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಹಾಗೂ ಅವಳಿ ಶಿಶುಗಳು ಸಾವನ್ನಪ್ಪಿರುವಂತಹ ಪ್ರಕರಣ ನಡೆದಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಸಿಬ್ಬಂದಿಗಳಿಗೆ ತಿಂಗಳಿಗೊಮ್ಮೆ ಸಭೆ ನಡೆಸಿ ಜಾಗೃತಿ ಮೂಡಿಸುವ ಜೊತೆಗೆ ವ್ಯವಸ್ಥೆಯನ್ನು ಬಿಗಿಗೊಳಿಸುವ ಅನಿವಾರ್ಯತೆ ಇದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಸಲಹೆ ನೀಡಿದ್ದಾರೆ. ತುಮಕೂರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಅವರು ಮೃತ ಬಾಣಂತಿ ಹಾಗೂ ಶಿಶುಗಳ ಶವಗಳನ್ನು ವೀಕ್ಷಿಸಿದ ನಂತರ ಮಕ್ಕಳ ತೀವ್ರ ಘಟಕ, ಮಕ್ಕಳ ಶುಶ್ರೂಷ ಘಟಕಗಳಿಗೂ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ನಾಗಣ್ಣ ಗೌಡ, ತುಮಕೂರು ಜಿಲ್ಲಾಸ್ಪತ್ರೆ ಪ್ರಕರಣ ನ್ಯಾಷನಲ್ ಕಮೀಷನ್‍ಗೂ ಸಹ ಸುದ್ದಿ ಹೋಗಿದೆ. ಒಂದು ತಪ್ಪು ಆಗಿದೆ ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ತಡೆಯುವುದು ಮುಖ್ಯವಾಗಿದೆ ಎಂದರು. ಆಸ್ಪತ್ರೆಗಳಿಗೆ ಬರುವವರಲ್ಲಿ ಮೊದಲು ಯಾರಿಗೆ ಚಿಕಿತ್ಸೆ ಆಗಬೇಕು ಅವರನ್ನು ಪರಿಗಣಿಸುವಂತಾಗಬೇಕು ಎಂಬುದನ್ನು…

Read More

ತುಮಕೂರು ತುಮಕೂರಿನ ಜೆಡಿಎಸ್ ನಗರಾಧ್ಯಕ್ಷರಾಗಿ .ಟಿ.ವಿಜಯ್ ಗೌಡ್ರು ಆಯ್ಕೆಯಾಗಿದ್ದಾರೆ. ಜೆಡಿಎಸ್ ಮುಖಂಡರಾದ ಮಾಜಿ.ಪ್ರಧಾನಿ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೆಗೌಡ, ಮಾಜಿ.ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು, ರಾಜ್ಯಾಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಿಹಿಂ ತುಮಕೂರು ಜೆಡಿಎಸ್ ನಗರಾಧ್ಯಕ್ಷರನ್ನಾಗಿ ಕೆ.ಟಿ.ವಿಜಯ್ ಗೌಡ್ರು ರವರನ್ನು ನೇಮಕ ಮಾಡಿದ್ದು, ಇವರು ತುಮಕೂರು ಹಾಪ್ ಕಾಮ್ಸ್ ಜಿಲ್ಲಾಧ್ಯಕ್ಷರಾಗಿ, ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರ ಜಿಲ್ಲಾ ಉಪಾಧ್ಯಕ್ಷರಾಗಿ ಹಾಗೂ ತುಮಕೂರು ಜೆಡಿಎಸ್ ಜಿಲ್ಲಾ ಮಟ್ಟದಲ್ಲಿ 1998 ರಿಂದ ನಿಷ್ಟೆ ಹಾಜೂ ಪ್ರಾಮಾಣಿಕ ಕಾರ್ಯಕರ್ತರಾಗಿ ಮುಖಂಡರಾಗಿ ಕಾರ್ಯನಿರ್ವಹಸಿದ್ದಾರೆ. ಜೆಡಿಎಸ್‍ನ ಎಲ್ಲಾ ಮುಖಂಡರು ಅಭಿನಂಧನೆ ಸಲ್ಲಿಸಿದರು.

Read More

ತುಮಕೂರು ವಿಮಾ ನಿಯಂತ್ರಣ ಪ್ರಾಧಿಕಾರನ ಉದ್ದೇಶಿತ ನೂತನ ನಿಯಮಗಳು ವಿಮಾ ಪ್ರತಿನಿಧಿಗಳಿಗೆ ಹಾಗೂ ವಿಮಾ ರಂಗಕ್ಕೆ ತೀವ್ರ ಮಾರಕವಾಗಲಿದೆ. ಅದ್ದರಿಂದ ಈ ಕುರಿತು Iಖಆಂ ಚೇರ್ಮನ್ ಹಾಗೂ ಕೇಂದ್ರದ ಅರ್ಥ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆಯಲು ಕೋರಿ ತುಮಕೂರು ಸಂಸದ ಶ್ರೀ ಜಿ.ಎಸ್.ಬಸವರಾಜ್ ಅವರಿಗೆ ಎಲ್.ಐ.ಸಿ.ಅಭಿವೃದ್ಧಿ ಅಧಿಕಾರಿಗಳ ಸಂಘದ ಮುಖಂಡರು ಮನವಿ ಸಲ್ಲಿಸಿದರು. ಇಡೀ ದೇಶದಾದ್ಯಂತ 25 ಲಕ್ಷಕ್ಕೂ ಹೆಚ್ಚು ವಿಮಾ ಪ್ರತಿನಿಧಿಗಳು ಕೆಲಸ ನಿರ್ವಹಿಸುತ್ತಿದ್ದು, ಕೇವಲ ಒಂದು ಪಾಲಿಸಿ ಮಾಡಲು ಪ್ರತಿ ದಿನ 7/8 ಜನರನ್ನು , ಕನಿಷ್ಠ ನಾಲ್ಕೈದು ಬಾರಿ ಆದರೂ ಭೇಟಿ ನೀಡಿ, ವಿಮಾ ರಕ್ಷಣೆಯನ್ನು ಒದಗಿಸುತ್ತಿದ್ದಾರೆ. ನಂತರ ರಿನಿವಲ್ ಪ್ರೀಮಿಯಂ ಕಟ್ಟಿಸಲು ಸಂಪರ್ಕಿಸಿ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡಲು ಪ್ರಯತ್ನ ಪಡುತ್ತಾರೆ. ಕೋವಿಡ್ ನ ಸಮಯದಲ್ಲಿ ತಮ್ಮ ಜೀವ ಭಯವನ್ನು ಬಿಟ್ಟು, ವಿಮಾ ಪ್ರತಿನಿಧಿಗಳು ಜನರಿಗೆ ವಿಮಾ ರಕ್ಷಣೆ ನೀಡಲು ಹಾಗೂ ಕ್ಲೈಮ್ ಪಾವತಿಸಲು ನೆರವಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ,…

Read More

ಭಾಷೆ ಮಾನವನಿಗೆ ಅವನ ಉಸಿರಿನಷ್ಟೇ ಅನಿವಾರ್ಯ. “ಮಾತೆಂಬ ಜ್ಯೋತಿ ಬೆಳಗದಿದ್ದರೆ ಲೋಕವೆಲ್ಲ ಕತ್ತಲೆಯಿಂದ ತುಂಬಿರುತ್ತಿತ್ತು. ಅಂಧಕಾರದಲ್ಲಿಯೇ ತೊಳಲುತ್ತಿತ್ತು ಎಂದಿದ್ದಾನೆ” ಮಹಾಕವಿ ದಂಡಿ. ಪ್ರಪಂಚದಾದ್ಯಂತ ಸುಮಾರು 6000 ಭಾಷೆಗಳಿವೆಯೆಂದು ಭಾಷೆ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಭಾರತದಲ್ಲೇ ಸುಮಾರು 3000 ಭಾಷೆಗಳಿವೆ ಎಂದು ಭಾಷಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಭಾಷೆಯು ಮೂಲತಃ ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ್ದು ದಕ್ಷಿಣ ಭಾರತದ ತಮಿಳು, ತೆಲುಗು, ಮಲೆಯಾಳಂ, ತುಳು ಭಾಷೆಗಳೊಂದಿಗೆ ಸೇರಿ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು ಕಾಲಕ್ರಮೇಣ ಒಂದು ಸ್ವತಂತ್ರ ಭಾಷೆಯಾಗಿ ರೂಪುಗೊಂಡಿದ್ದನ್ನು ಗುರುತಿಸಲಾಗಿದೆ. ಭಾಷೆ ಸೊಗಸು : ಕನ್ನಡ ಲಿಪಿಯನ್ನು ವಿನೋಭಾ ಭಾವೆ ಅವರು ‘ಲಿಪಿಗಳ ರಾಣಿ’ ಎಂದು ಕರೆದಿರುವುದು ಕನ್ನಡದ ಹೆಮ್ಮೆಯ ಸಂಗತಿ. ಕನ್ನಡ ಲಿಪಿಯು ಬ್ರಾಹ್ಮಿ ಲಿಪಿಯಿಂದ ರೂಪುಗೊಂಡಿದೆ. ವಿದೇಶಿಯರೊಬ್ಬರು ಕನ್ನಡದ ಪದಕೋಶ ರಚನೆ ಮಾಡಿರುವುದು (ಸುಮಾರು 70,000 ಪದಗಳಿಗೆ ಅರ್ಥ ನೀಡಿಕೆ) ಇಡೀ ದೇಶದಲ್ಲಿಯೇ ಮೊದಲು. ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಈ ಕಾರ್ಯ ಸಾಧಕರು. ಕರ್ನಾಟಕ ಏಕೀಕರಣ : ಏಕೀಕರಣದಲ್ಲಿ…

Read More

ತುಮಕೂರು ಜಿಲ್ಲಾ ಕೇಂದ್ರದಲ್ಲಿ ಇರುವ ಸರ್ಕಾರಿ ಅಸ್ವತ್ರೆಯಲ್ಲಿ ಮಹಿಳೆಯೊಬ್ಬರು ಆಧಾರ್ ಕಾರ್ಡ, ರೆಷನ್‍ಕಾರ್ಡ ಇಲ್ಲದ ಕಾರಣ ಹೆರಿಗೆ ಮಾಡಿಸಲು ನಿರಾಕರಿಸಿ ಕರ್ತವ್ಯ ನಿರ್ಲಕ್ಷ ತೋರಿದ ಕಾರಣ ಒಬ್ಬ ತಾಯಿ ಮತ್ತು ಜವಳಿ ಮಕ್ಕಳ ಸಾವಿಗೆ ಕಾರಣವಾಗಿರುವ ಘಟನೆ ನೆನ್ನೆ ದಿನ ನಡೆದಿರುವುದನ್ನು ಸಿಪಿಐ[ಎಂ] ಪಕ್ಷದ ತುಮಕೂರು ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಅಮಾಯಕರ ಸಾವಿಗೆ ಸಂತಾಪ ಸೂಚಿಸಿದೆ. ಈ ಘಟನೆಗೆ ಕಾರಣವಾಗಿರುವ ಎಲ್ಲಾ ಅಧಿಕಾರಿಗಳನ್ನು ಈ ಕೂಡಲೇ ತನಿಕೆಗೆ ಒಳಪಡಿಸಿ, ಕಾನೂನು ಕ್ರಮವಹಿಸುವಂತೆ ಸಿಪಿಐ[ಎಂ] ಜಿಲ್ಲಾ ಸಮಿತಿ ಅಗ್ರಹಿಸುತ್ತದೆ. ಸರ್ಕಾರ ಒಂದು ಕಡೆ ಆದಾರ್ ಖಡ್ಡಾಯವಿಲ್ಲ ಎಂದು ಕಡೆ ಹೇಳುತಿದ್ದರು ಇನ್ನೂಂದಕಡೆಯಿಂದ ಮೌಖಿವಾಗಿ ಜಾರಿಗೊಳಿಸುವುದು ಮತ್ತು ಬದಲಾದ ಸಂಧರ್ಬದಲ್ಲಿ ಮಾರ್ಗಸೂತ್ರಗಳನ್ನು ರೂಪಿಸದೆ ಇರುವುದು ಹಾಗೂ ಸರ್ಕಾರದಲ್ಲಿರುವ ಭ್ರಷ್ಠಾರಚಾರ ಸಹ ಈ ಸಾವುಗಳಿಗೆ ಸರ್ಕಾರವೇ ಪರೋಕ್ಷವಾಗಿ ಕಾರಣವಾಗಿದೆ. ಆದ್ದರಿಂದ ತಕ್ಷಣ ಆರೋಗ್ಯ ಸಚಿವರ ರಾಜೀನಾಮೆಯನ್ನು ಪಡೆಯಬೇಕು. ತುಮಕೂರು ಜಿಲ್ಲಾ ಅಸ್ಪತ್ರೆ ಸೇರಿದಂತೆ ತಾಲ್ಲುಕು ಕೇಂದ್ರಗಳಲ್ಲಿ ಸಹ ಸರ್ಕಾರಿ ಅಸ್ವತ್ರೆಗಳಲ್ಲಿ ರೋಗಿಗಳ ಜೊತೆಯಲ್ಲಿ ಸ್ನೇಹ…

Read More

ತುಮಕೂರು ತುರ್ತು ಚಿಕಿತ್ಸೆ ಅಗತ್ಯವಿದ್ದ ಸಮಯದಲ್ಲಿ ಸಿದ್ಧಗಂಗಾ ಆಸ್ಪತ್ರೆ ರೋಗಿಗಳನ್ನು ಅಪಾಯದಿಂದ ಹೊರತರುವುದೇ ಮೊದಲ ಆಧ್ಯತೆಯನ್ನಾಗಿಸಿಕೊಂಡಿದೆ ಎಂದು ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಶಾಲಿನಿ ತಿಳಿಸಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಿದ್ಧಗಂಗಾ ನಗರ ಆರೋಗ್ಯ ಕೇಂದ್ರದಲ್ಲಿ(ಸಿದ್ದರಾಮಣ್ಣ ಕಾಂಪ್ಲೆಕ್ಸ್) ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇದೇ ನವೆಂಬರ್ 4 ರಿಂದ 30 ವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಸ್ಪೆಷಾಲಿಟಿ ಸೇವೆಗಳ ಉಚಿತ ಸಂದರ್ಶನದ ಜೊತೆಗೆ ಉಚಿತ ಹೆರಿಗೆ(ನಾರ್ಮಲ್ ಡೆಲಿವರಿ) ಕೂಡ ಉಚಿತವಿರುತ್ತದೆ. ಶಿಬಿರದ ನಂತರವೂ ಈ ಉಚಿತ ಆರೋಗ್ಯ ತಪಾಸಣೆ ಮುಂದುವರೆಯಲಿದೆ ಎಂದರು. ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾಮನೋಹರಗೌಡ ಮಾತನಾಡಿ ಸಿದ್ಧಗಂಗಾ . ಮೆಡಿಕಲ್ ಕಾಲೇಜು ಈವರೆಗೂ ಜಿಲ್ಲೆಯ ಎಲ್ಲಡೆ ಸಾವಿರಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಆರೋಗ್ಯ ದಾಸೋಹದಿಂದ ಜನಮನ್ನಣೆ ಗಳಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಮುಖಂಡರಾದ ಜಿಯಾ ಖಾನ್, ಪಾಲಿಕೆ ಸದಸ್ಯರಾದ ದೀಪಶ್ರೀ ಮಹೇಶ್ ಬಾಬು,ಟಿ.ಎಂ.ಮಹೇಶ್, ಮೆಡಿಕಲ್…

Read More

ತುಮಕೂರು ಆಂದ್ರ ಪ್ರದೇಶ ಅನಂತಪುರಂ ಜಿಲ್ಲೆ ಮಡಕಸಿರಾ ಮಂಡಲಂ ಶ್ರೀಕ್ಷೇತ್ರ ಹೇಮಾವತಿ ಗ್ರಾಮದಲ್ಲಿ ಶ್ರೀ ಶರಣ ಹಂಪಣ್ಣ ತಾತಯ್ಯನವರ ಗದ್ದುಗೆ ಪುನರ್ ನಿರ್ಮಾಣದ ಕಾರ್ಯಕಾರಿ ಸಮಿತಿ ವತಿಯಿಂದ ನವೆಂಬರ್ 6 ರಂದು ಭಾನುವಾರ ಪುನರ್ ನಿರ್ಮಿತ ಹಂಪಣ್ಣ ತಾತಯ್ಯನವರ ಗದ್ದುಗೆ (ದೇವಾಲಯ) ಪ್ರಥಮ ವಾರ್ಷಿಕೋತ್ಸವ ಸಮಾರಂಭ ಜರುಗಲಿದೆ. ಈ ಕಾರ್ಯಕ್ರಮದ ಅಂಗವಾಗಿ ಅಂದು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಬೆಳಿಗ್ಗೆ 8.30 ಕ್ಕೆ ಗಂಗಾಪೂಜೆ, ರುದ್ರಕಳಸ ಸ್ಥಾಪನೆ, ಮಹಾಗಣಪತಿ ಪೂಜೆ, ಚರಲಿಂಗಕ್ಕೆ ರುದ್ರಾಭಿಷೇಕ, ಬೆಳಿಗ್ಗೆ 11ಕ್ಕೆ ಶ್ರೀ ಕ್ಷೇತ್ರದ ಹೆಂಜೇರು ಸಿದ್ದೇಶ್ವರಸ್ವಾಮಿ ಉತ್ಸವ ಮೂರ್ತಿ ತಾತಯ್ಯನ ಸನ್ನಿಧಿಗೆ ಆಗಮನ. ಬೆಳಿಗ್ಗೆ 11.30 ಕ್ಕೆ ಅಷ್ಟೋತ್ತರ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ 1 ಗಂಟೆಗೆ ದಾಸೋಹ ಏರ್ಪಡಿಸಲಾಗಿದೆ. ಈ ಸಮಾರಂಭಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಾತಯ್ಯನವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯ ಸಮಿತಿಯವರು ಕೋರಿದ್ದಾರೆ.

Read More