Author: News Desk Benkiyabale

ಕೊರಟಗೆರೆ ತಹಶೀಲ್ದಾರ್ ನಹೀದಾ ಜಮ್ ಜಮ್ ರವರ ಕಾರ್ಯದಕ್ಷತೆ ಹಾಗೂ ಕಾರ್ತವ್ಯ ನಿಷ್ಠೆ ಎಷ್ಟಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ಹೌದು ಕೊರಟಗೆರೆ ತಾಲ್ಲೂಕಿನ ಅಲೆಮಾರಿ ಜನಾಂಗದವರು ಇಷ್ಟು ವರ್ಷಗಳ ಕಾಲ ಅನುಭವಿಸಿದ್ದ ಯಾತನೆ, ನೋವುಗಳೆಲ್ಲಾ ಕಳೆದು ಮರು ಜೀವನ ನಡೆಸಲು, ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ತಾಲ್ಲೂಕಿನ ಜನಸ್ನೇಹಿ ತಹಶಿಲ್ದಾರ್ ಎಂದೇ ಖ್ಯಾತಿ ಪಡೆದ ನಹೀದಾ ಜಮ್ ಜಮ್ ರವರು ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಪಣ ತೊಟ್ಟು ನಿಂತಿದ್ದಾರೆ. ಮೂರು ತಿಂಗಳಿಂದ ಹುಲಿಕುಂಟೆ ಗ್ರಾಮದ ಸರ್ವೆ ನಂಬರ್ 31ರಲ್ಲಿ ಒಂದು ಎಕರೆ ಜಮೀನಿನಲ್ಲಿ ಅಲೆಮಾರಿ ಕುಟುಂಬಸ್ಥರಿಗೆ 19 ನಿವೇಶನಗಳು ಸಿದ್ಧವಾಗುತ್ತಿವೆ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಹಾಗೂ ಉನ್ನತ ಅಧಿಕಾರಿಗಳ ತಂಡ ಅಲೆಮಾರಿ ಜನಾಂಗದ 19 ಕುಟುಂಬಗಳಿಗೆ ಸರ್ಕಾರದ ಸವಲತ್ತುಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಸೇರಿದಂತೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸೌಕರ್ಯ ಒಳಗೊಂಡಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಿರ್ಧರಿಸಿದ್ದು, ನಿವೇಶನದ ಕಾರ್ಯ ಭರದಿಂದ…

Read More

ತುಮಕೂರು ದೇಶದ ಪ್ರಗತಿಗೆ ಭ್ರಷ್ಟಾಚಾರ ಮಾರಕವಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಭ್ರಷ್ಟಾಚಾರ ಎಷ್ಟೇ ಬೇರೂರಿದರೂ ಸಹ ನಾವೆಲ್ಲರೂ ಮನಸ್ಸು ಮಾಡಿದ್ದಲ್ಲಿ ಕಡಿವಾಣ ಹಾಕಬಹುದು ಎಂದು ತುಮಕೂರು ಲೋಕಾಯುಕ್ತ ಪೊಲೀಸ್ ಸೂಪರಿಂಟೆಂಡೆಂಟ್ ವಲೀಬಾಷಾ ಕರೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ‘ಭ್ರಷ್ಟಾಚಾರ ನಿರ್ಮೂಲನಾ ಸಪ್ತಾಹ’ದ ಅಂಗವಾಗಿ ಅಧಿಕಾರಿ ವರ್ಗದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಅರಿವು ಮೂಡಿಸಲು ಇಂದು ಏರ್ಪಡಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಾ, ಜನಸಾಮಾನ್ಯರು ತಮ್ಮ ದಿನನಿತ್ಯದ ಕಷ್ಟ ಕಾರ್ಪಣ್ಯಗಳಿಗೆ ಸಂಬಂಧಿಸಿದಂತೆ ಪರಿಹಾರ ಪಡೆಯಲು ಸರ್ಕಾರಿ ಕಚೇರಿಗಳಿಗೆ ಬರುತ್ತಾರೆ. ಅವರನ್ನು ಅಲೆದಾಡಿಸದೆ ಕೆಲಸ ಮಾಡಿಕೊಡಬೇಕು ಅಥವಾ ತಾಂತ್ರಿಕ ಕಾರಣವಿದ್ದಲ್ಲಿ ಸೂಕ್ತ ಸ್ವೀಕೃತಿಯನ್ನು ನೀಡಬೇಕು ಎಂದು ತಿಳಿಸಿದರು. ಸರ್ಕಾರಿ ನೌಕರರು ಸಂಬಳ ಪಡೆಯುತ್ತಿರುವುದು, ಸರ್ಕಾರಿ ವಸತಿ, ಸರ್ಕಾರಿ ವಾಹನ ಮುಂತಾದ ಎಲ್ಲಾ ಸವಲತ್ತುಗಳನ್ನು ಪಡೆಯುತ್ತಿರುವುದು ಜನರ ತೆರಿಗೆ ಹಣದಿಂದ. ಆದುದರಿಂದ ನಾವು ವೃತ್ತಿಬದ್ಧತೆಯನ್ನು ಕಾಪಿಟ್ಟುಕೊಳ್ಳಬೇಕಾಗುತ್ತದೆ ಎಂದರು. ಸರ್ಕಾರಿ ಕಚೇರಿಗಳ ವಿವಿಧ ಇಲಾಖೆಗಳ ಮುಖ್ಯಸ್ಥರು ತಮ್ಮ ಸಿಬ್ಬಂದಿಗಳ ಮೇಲೆ ಪರಿಣಾಮಕಾರಿಯಾಗಿ ಹಿಡಿತ ಸಾಧಿಸಬೇಕು. ಪ್ರತಿ…

Read More

ತುಮಕೂರು ತುಮಕೂರು ಜಿಲ್ಲಾ ವಕ್ಕಲಿಗರ ಸಂಘದ ಆಡಳಿತಾಧಿಕಾರಿ ಚುನಾವಣಾ ವಿಚಾರದಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದು,ಕೂಡಲೇ ಅವರನ್ನು ವಜಾ ಮಾಡಬೇಕು ಹಾಗೂ ಷೇರು ಹಣ ಕಟ್ಟಿರುವ ಎಲ್ಲರಿಗೂ ಸದಸ್ಯತ್ವ ನೀಡಿ, ಮತದಾನಕ್ಕೆ ಅವಕಾಶ ಕಲ್ಪಿಸಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಇಂದು ವಕ್ಕಲಿಗ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ತುಮಕೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವಕ್ಕಲಿಗ ಮುಖಂಡರ ಬ್ಯಾಟರಂಗೇಗೌಡ ಮಾತನಾಡಿ,ತುಮಕೂರು ಜಿಲ್ಲಾ ವಕ್ಕಲಿಗರ ಸಂಘದ ಆಡಳಿತಾವಧಿ 2022ರ ಮಾರ್ಚ 31ಕ್ಕೆ ಪೂರ್ಣಗೊಂಡಿದ್ದು,ಸಹಕಾರ ಇಲಾಖೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ.ಆದರೆ ನಿಗಧಿತ ಅವಧಿಯೊಳಗೆ ಚುನಾವಣೆ ನಡೆಸದ ಕಾರಣ ಕರ್ನಾಟಕ ಹೈಕೋರ್ಟು ಸದರಿ ಆಡಳಿತಾಧಿಕಾರಿಗಳಿಗೆ ನಿಗಧಿತ ಅವಧಿಯೊಳಗೆ ಚುನಾವಣೆ ನಡೆಸುವಂತೆ ಆದೇಶ ಮಾಡಿದೆ ಎಂದರು. ಹೈಕೋರ್ಟಿನ ಆದೇಶವನ್ನು ನೆಪವಾಗಿಟ್ಟುಕೊಂಡು 2008-09ನೇ ಸಾಲಿನಿಂದಲೂ ಸುಮಾರು 22 ಸಾವಿರ ಜನರು ಷೇರು ಹಣ ಹೂಡಿಕೆ ಮಾಡಿ, ಸದಸ್ಯತ್ವಕ್ಕಾಗಿ ಕಾಯುತಿದ್ದರು, ಅವರಿಗೆ ಸದಸ್ಯತ್ವ ನೀಡದೆ.ಕೆಲವು ವ್ಯಕ್ತಿಗಳ ಕಡೆಯಿಂದ ಶಿಫಾರಸ್ಸಾಗಿ ಇತ್ತೀಚಗೆ ಷೇರು ಶುಲ್ಕ ತುಂಬಿರುವ 500 ಜನರಿಗೆ ಮಾತ್ರ…

Read More

ತುಮಕೂರು ಜಿಲ್ಲೆಯಲ್ಲಿನ 1-15 ವರ್ಷದ ಮಕ್ಕಳಿಗೆ ಜಪಾನಿಸ್ ಎನ್‍ಸಿಪಾಲಿಟಿಸ್(ಜೆ.ಇ.) ಲಸಿಕೆಯನ್ನು ನೀಡಬೇಕಿದ್ದು, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ಇ.ಓ., ಟಿಹೆಚ್‍ಓ ಇವರನ್ನೊಳಗೊಂಡ ಟಾಸ್ಕ್‍ಪೋರ್ಸ್ ರಚಿಸಿಕೊಂಡು, ಲಸಿಕಾ ಅಭಿಯಾನ ಪ್ರಾರಂಭಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಅವರು ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಐದೂವರೆ ಲಕ್ಷ ಜೆಇ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಇನ್ನು 3 ವಾರದೊಳಗಾಗಿ ಈ ಲಸಿಕಾ ಅಭಿಯಾನ ಪೂರ್ಣಗೊಳಿಸಬೇಕಿದೆ. ಲಸಿಕೆ ಕುರಿತು ಟಾಂಟಾಂ ಮಾಡುವ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು ಪೋಷಕರಲ್ಲಿ ಲಸಿಕೆ ಕುರಿತು ಸಕಾರಾತ್ಮಕ ಅರಿವು ಮೂಡಿಸಬೇಕು. ಈ ಲಸಿಕೆ ಬಗ್ಗೆ ಎಲ್ಲಿಯೂ ಸಹ ನಕಾರಾತ್ಮಕ ಘಟನೆ ವರದಿಯಾಗಿಲ್ಲ ಎಂದ ಅವರು, ಟಾಸ್ಕ್‍ಪೋರ್ಸ್ ಸಮಿತಿಯು ಸಭೆ ಸೇರಿ, ಮೈಕ್ರೋ ಪ್ಲಾನಿಂಗ್ ಮಾಡಿ, ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ವ್ಯಾಕ್ಸಿನ್ ಕಾರ್ಯಕ್ರಮ ಚುರುಕುಗೊಳಿಸಬೇಕು ಎಂದರು. ಜಿಲ್ಲೆಗೆ ಒದಗಿಸಲಾಗಿರುವ ಕಾರ್ಬಿವ್ಯಾಕ್ಸಿನ್, ಕೋವಿಶೀಲ್ಡ್, ಕೋವ್ಯಾಕ್ಸಿನ್ ಎಕ್ಸ್‍ಪೈರಿ ಆಗುವ ಮೊದಲೇ ಲಸಿಕಾಕರಣ ಪೂರ್ಣಗೊಳಿಸಬೇಕು…

Read More

ತುಮಕೂರು ಮಾಜಿ ಲೋಕಸಭಾ ಉಪಸಭಾಪತಿ,ದಿವಂಗತ ಎಸ್.ಮಲ್ಲಿಕಾರ್ಜುನಯ್ಯ ಅವರ 92ನೇ ಹುಟ್ಟು ಹಬ್ಬದ ಅಂಗವಾಗಿ ಇಂದು ಬಾಲಭವನದಲ್ಲಿ ರಾಷ್ಟ್ರಸೇವಕ ಮಲ್ಲಿಕ್ ಎಂಬ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಎಸ್.ಮಲ್ಲಿಕಾರ್ಜುನಯ್ಯ ಅವರ 92ನೇ ಜನ್ಮ ದಿನೋತ್ಸವ ಸಮಿತಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಸಮಾರಂಭ ಉದ್ಘಾಟಿಸುವುದರ ಜೊತೆಗೆ,ರಾಷ್ಟ್ರ ಸೇವಕ ಮಲ್ಲಿಕ್ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು,ಜನಸಂಘದ ಕಾಲಘಟ್ಟದಲ್ಲಿ ಕೆಲಸ ಮಾಡುವುದಕ್ಕೂ,ಭಾಜಪ ಕಾಲದಲ್ಲಿ ಕೆಲಸ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಜನಸಂಘದ ಕಾಲದಲ್ಲಿ ಜನರು ನಮ್ಮನ್ನು ಅಪಹಾಸ್ಯದಿಂದ ನೋಡುತ್ತಿದ್ದರು. ಜೈಲಿಗೋದವರೇ ಹೆಚ್ಚು ಜನ ಜನಸಂಘದಲ್ಲಿದ್ದರು.1972ರ ಜನಸಂಘದ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನಯ್ಯ,ಆವಾಗ ನಾನಿನ್ನು ಹಸುಗೂಸು.1992ರಲ್ಲಿ ಅವರು ಉಪಸಭಾಪತಿಯಾಗಿದ್ದಾಗ ಅವರನ್ನು ಭೇಟಿಯಾದಾಗ,ರಾಜಕಾರಣ ಜಾರು ಬಂಡೆ ಇದ್ದಂತೆ,ಎರುವುದು ಕಷ್ಟ,ಆದರೆ ಇಳಿಯುವುದು ಅತಿ ಸುಲಭ ಎಂಬ ಕಿವಿ ಮಾತು ಹೇಳಿದ್ದರು.ಅಂತಹವರ ಕಾರ್ಯಕ್ರಮಕ್ಕೆ ನನ್ನನ್ನು ಕರೆಸಿ,ಉದ್ಘಾಟಿಸಲು ಕರೆಸಿರುವುದು,ಅವರಲ್ಲಿಯ ಕೆಲ ಗುಣಗಳು ನನಗೆ ಬರಲಿ ಎಂಬುದು ಇರಬೇಕು ಎಂದರು. ಜನಸಂಘದ ಕಾಲದಲ್ಲಿ ಒಂದು…

Read More

ತುಮಕೂರು ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು, ಶ್ರೀ ಸಿದ್ಧಾರ್ಥ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಸ್‍ಎಸ್‍ಐಟಿ ಕ್ಯಾಂಪಸ್‍ನ ರೈಸ್ ಸೆಂಟರ್ ಆಫ್ ಎಕ್ಸಲೈನ್ಸ್ ಮತ್ತು ಎಂಐಟಿ ಸ್ಕ್ವೇರ್ ಗ್ರೂಪ್‍ಗಳ ಸಹಯೋಗದೊಂದಿಗೆ ಪಿಂಕ್ ಫಿಟ್ ವಾಕ್-2022 ಮಾಸಿಕ ಸ್ತನ ಕ್ಯಾನ್ಸರ್ ಜಾಗೃತಿ ಜಾಥಾ ನಡೆಯಿತು. ನಗರದ ಭಾರತೀಯ ವೈದ್ಯಕೀಯ ಸಂಘ ಕಚೇರಿ ಮುಂಭಾಗ ಆರಂಭಗೊಂಡ ಜಾಗೃತಿ ಜಾಥಾಕ್ಕೆ ಸಾಹೇ ವಿಶ್ವ ವಿದ್ಯಾಲಯದ ರಿಜಿಸ್ಟಾರ್ ಡಾ. ಎಂ ಝಡ್ ಕುರಿಯನ್ ಚಾಲನೆ ನೀಡಿದರು. ಆಧುನಿಕ ಜೀವನ ಶೈಲಿಯು ಮಹಿಳೆಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇಂದಿನ ದಿನದಲ್ಲಿ ಮಹಿಳೆಯರು ಸ್ತನಕ್ಯಾನ್ಸರ್‍ಗೆ ಒಳಗಾಗುತಿದ್ದಾರೆ. ಇತ್ತಿಚಿನ ದಿನದಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯ ಎನ್ನುವಂತಾಗಿದೆ. ಈ ಕುರಿತು ಮಹಿಳೆಯರಲ್ಲಿ ಅರಿವು ಮೂಡಿಸುವ ಸಲುವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಸ್ತನ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತೆ ಕ್ರಮವನ್ನು ಅನುಸರಿಸುವಂತೆ ಸಾರ್ವಜನಿಕರ ಗಮನ ಸೆಳೆದರು. ಉಚಿತ ತಪಾಸಣೆ : ಮಹಿಳೆಯರಿಗಾಗಿ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು…

Read More

ತುಮಕೂರು ತಾಯಿ ಕಾರ್ಡ್ ಆಧಾರ್ ಕಾರ್ಡ್ ಇಲ್ಲವೆಂದು ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಕೊಳ್ಳದೆ ನಿರ್ಲಕ್ಷ್ಯವಹಿಸಿ ತಾಯಿ ಮತ್ತು ಅವಳಿ ಶಿಶುಗಳ ಸಾವಿಗೆ ಕಾರಣರಾಗಿರುವ ಜಿಲ್ಲಾಸ್ಪತ್ರೆಯ ಡಾ.ಉಷಾ ಮತ್ತು ಕರ್ತವ್ಯದಲ್ಲಿದ್ದ ನರ್ಸ್‍ಗಳಾದ ಯಶೋಧ, ಸವಿತ, ವಿದ್ಯಾಭಾರತಿಯವರನ್ನು ಅಮಾನತು ಮಾಡಿರುವುದು ತಕ್ಷಣದ ಕ್ರಮವಾದರು ತಪ್ಪಿತಸ್ಥರ ವಿರುದ್ಧ ಕ್ರಮಿನಲ್ ಮೊಕದ್ದಮೆ ದಾಖಲಿಸಬೇಕು ಮತ್ತು ಉನ್ನತ ಮಟ್ಟದ ತನಿಖೆಯನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ತುರ್ತಾಗಿ ಮಾಡಿ ತಪ್ಪಿತಸ್ತರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುವಂತೆ ಪಿಯುಸಿಎಲ್ ತುಮಕೂರು, ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಆಗ್ರಹಿಸಲಾಯಿತು. ಇಂದು ಘಟನೆ ನಡೆದ ಭಾರತಿನಗರ ಪ್ರದೇಶಕ್ಕೆ ಇಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆಯಲಾಯಿತು, ಬುಧವಾರ ಕಸ್ತೂರಿ(30)ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಅಕ್ಕಪಕ್ಕದ ಮನೆಯ ಮಹಿಳೆಯರ ಪರವಾಗಿ ತುಮಕೂರು ಕೊಳಗೇರಿ ಸಮಿತಿಯ ಮಹಿಳಾ ಕಾರ್ಯಕರ್ತರು ಜಿಲ್ಲಾಸ್ಪತ್ರೆಗೆ ದಾಖಲಿಸಲು ಮುಂದಾದಾಗ ಕರ್ತವ್ಯನಿರತ ವೈಧ್ಯರು ಮತ್ತು ಸಿಬ್ಬಂಧಿಗಳು ತಾಯಿ ಕಾರ್ಡ್…

Read More

ತುಮಕೂರು ಸಮಾಜದಲ್ಲಿ ಎಲ್ಲರಿಗೂ ಕಾನೂನು ಅರಿವಿನ ಅಗತ್ಯವಿದೆ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಎಂ. ಶಾಂತಮ್ಮ ಅಭಿಪ್ರಾಯಪಟ್ಟರು. ಜಿಲ್ಲಾ ಕಾರಾಗೃಹ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಇತ್ತೀಚೆಗೆ ವಿಚಾರಣಾಧೀನ ಬಂದಿಗಳಿಗಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಏಕತಾ ದಿವಸ ಹಾಗೂ ಕಾನೂನು ಅರಿವು ಅಭಿಯಾನದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕಾರಾಗೃಹದಲ್ಲಿರುವ ಬಂದಿಗಳು ತಮ್ಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಕ್ತವಾಗಿ ಚರ್ಚಿಸಿ, ಉಚಿತವಾಗಿ ಕಾನೂನು ನೆರವು ಪಡೆಯಬಹುದೆಂದು ಸಲಹೆ ನೀಡಿದರು. ಜಿಲ್ಲಾ ವಕೀಲರ ಸಂಘದ ಹಿರಿಯ ವಕೀಲ ಬಿ.ದಾಸಪ್ಪ ಮಾತನಾಡಿ, ಸರ್ಕಾರದ ಸೌಲಭ್ಯ, ನಿಯಮಗಳ ಮೂಲಕ ಕಾನೂನು ನೆರವು ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ವಕೀಲರ ಸಂಘದ ಹಿರಿಯ ವಕೀಲ ಡಿ.ರಾಮಕೃಷ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಿ.ವಿ ಕೋಪರ್ಡೆ, ಜೈಲರ್ ಬಿ.ವೈ. ಬಿಜ್ಜೂರ, ಸಹಾಯಕ ಜೈಲರ್‍ಗಳಾದ ಎಂ.ಎಸ್. ರಾಮಚಂದ್ರ, ಶಿವರಾಜು ಟಿ. ಹಾಗೂ ಸಿದ್ದರಾಜಯ್ಯ, ಸಹ ಶಿಕ್ಷಕರು ಉಪಸ್ಥಿತರಿದ್ದರು.

Read More

ತುಮಕೂರು ಸರಕಾರ ಯಾವುದೇ ಇರಲಿ, ಅತಿವೃಷ್ಟಿ ಮತ್ತು ಆನಾವೃಷ್ಟಿಯಂತಹ ಸಂದರ್ಭದಲ್ಲಿ ತೊಂದರೆಗೆ ಒಳಗಾಗುವ ರೈತರ ನೆರವಿಗೆ ಬರುವ ಅಗತ್ಯವಿದೆ ಎಂದು ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಪ್ರತಿಪಾದಿಸಿದ್ದಾರೆ. ತುಮಕೂರು ತಾಲೂಕು ಚಿಕ್ಕತೊಟ್ಲುಕೆರೆಯ ಶ್ರೀಅಟವಿ ಜಂಗಮ ಸುಕ್ಷೇತ್ರದಲ್ಲಿ ಆಯೋಜಿಸಿದ್ದ ಕೃಷಿ ಮೇಳ ಉದ್ಘಾಟಿಸಿ ಮಾತನಾಡುತಿದ್ದ ಅವರು,ರೈತರ ಬದುಕಿದರೆ ಮಾತ್ರ ದೇಶ ಬದುಕಲು ಸಾಧ್ಯ. ರೈತನೇ ಬೆಳೆಯದಿದ್ದರೆ ಪುಕ್ಕಟೆ ಅಕ್ಕಿ ಕೊಡುವ ಯೋಜನೆಗೆ ಅಗತ್ಯ ವಸ್ತುವನ್ನು ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದ ಅವರು,ರೈತ ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಿದಾಗ ಮಾತ್ರ. ರೈತನನ್ನು ಉಳಿಸುವುದರ ಜೊತೆಗೆ, ನಾವುಗಳು ಉಳಿಯಲು ಸಾಧ್ಯ ಎಂದರು. ಭಾರತ ಕೃಷಿ ಪ್ರಧಾನ ರಾಷ್ಟ್ರ ಎಂಬುದು ಕೇವಲ ಹೇಳಿಕೆ ಮಾತ್ರ. 1960ರವರೆಗೆ ಭಾರತದ ಜನಸಂಖ್ಯೆಗೆ ಬೇಕಾಗುವಷ್ಟ ಆಹಾರ ಬೆಳೆಯಲು ನಮ್ಮಲ್ಲಿ ಯಾವುದೇ ಯೋಜನೆಗಳಿರಲಿಲ್ಲ. ಆದರೆ ಹಸಿರು ಕ್ರಾಂತಿಯ ಪರಿಣಾಮ ಇಂದು ನಾವು ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು. ಅದರ ಫಲವಾಗಿಯೇ ಇಂದು ನಾವು ಪುಕ್ಕಟ್ಟೆ ಅಕ್ಕಿ…

Read More

ತುಮಕೂರು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮೌಲ್ಯಾಂಕನ ಪರಿಷತ್ತಿನ ತಜ್ಞರ ಸಮಿತಿಯು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಎರಡು ದಿನಗಳ ಭೇಟಿಯನ್ನು ಪೂರ್ಣಗೊಳಿಸಿ ಶುಕ್ರವಾರ ಅಂತಿಮ ವರದಿಯನ್ನು ಸಲ್ಲಿಸಿತು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ-ಬೋಧಕೇತರನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ, ಭುವನೇಶ್ವರದ ಕಳಿಂಗ ಇನ್ಸ್‍ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‍ನ ವಿಶ್ರಾಂತ ಕುಲಪತಿ ಡಾ. ಹರೇಕೃಷ್ಣ ಸತ್ಪತಿ, ಉತ್ಕøಷ್ಟತೆ ಎಂಬುದು ಅಂತಿಮ ನಿಲ್ದಾಣವಲ್ಲ, ಅದೊಂದು ನಿರಂತರ ಪಯಣ ಎಂದರು. ಕಾಲೇಜನ್ನು ನೋಡಿದಾಗ ನನಗೆ ಠಾಗೋರರ ಶಾಂತಿ ನಿಕೇತನ ನೆನಪಾಯಿತು. ಅಂತಹ ಪ್ರಶಾಂತ, ಉತ್ಕøಷ್ಟ ವಾತಾವರಣ ಇಲ್ಲಿದೆ. ವಿದ್ಯಾರ್ಥಿಗಳು ಇಲ್ಲಿ ಸಂತೋಷವಾಗಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಆದರೆ ಈ ಪ್ರಗತಿ ನಿರಂತರವಾಗಿರಬೇಕು ಎಂದರು. ಕಾಲೇಜಿನಲ್ಲಿ ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳನ್ನು ಪ್ರಶಂಸಿಸಿದ ಅವರು, ಕಲಾ ಕಾಲೇಜು ನಡೆಸಿಕೊಂಡು ಬಂದಿರುವ ಮಾನವಿಕ, ಕಲಾಸಿರಿ, ಸಂಕಲ್ಪ ಹಾಗೂ ಸಂಸ್ಕøತಿ ಉತ್ಸವಗಳು ಶ್ರೇಷ್ಠ ಉಪಕ್ರಮಗಳು ಎಂದು ಅಭಿಪ್ರಾಯಪಟ್ಟರು. ರಾಷ್ಟ್ರೀಯ ಶಿಕ್ಷಣ ನೀತಿ-2020 ಯುವಮನಸ್ಸುಗಳ ಸಮಗ್ರ ವಿಕಾಸದ ಸದುದ್ದೇಶ ಇಟ್ಟುಕೊಂಡಿದೆ. ಭಾರತವು ಆತ್ಮನಿರ್ಭರವಾಗುವಲ್ಲಿ ಇದರ…

Read More