Author: News Desk Benkiyabale

ತುಮಕೂರು ವಿಪಕ್ಷದ ನಾಯಕ ಸಿದ್ದರಾಮಯ್ಯನವರು ರಾಜ್ಯದ 224 ಕ್ಷೇತ್ರಗಳಲ್ಲಿ ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸಬಹುದು ಹಾಗೂ ಗೆದ್ದುಬರುತ್ತಾರೆ ಕೂಡ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು. ಇಲ್ಲಿನ ಡಿಸಿಸಿ ಬ್ಯಾಂಕ್ ಸಭಾಂಗಣ ದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಅವರು, ನಾವು ಈ ಹಿಂದೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ಮನವಿ ಮಾಡಿದ್ದೆವು, ತುಮಕೂರು ಜಿಲ್ಲೆಗೆ ಬಂದರೆ ಸಂತೋಷ ಎಂದ ಅವರು ಮಾಜಿ ಶಾಸಕ ಎಚ್.ನಿಂಗಪ್ಪ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ, ಟಿಕೆಟ್ ನೀಡುವುದು ಬಿಡುವುದು ಹೈಕಮಾಂಡ್‍ಗೆ ಬಿಟ್ಟದ್ದು, ಆ ಬಗ್ಗೆ ನಾನೇನು ಹೇಳುವುದಿಲ್ಲ ಎಂದರು. ರಾಜ್ಯ ಸರ್ಕಾರದಿಂದ ಪುನರ್ ಸ್ಥಾಪಿಸಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಅಡಿಯಲ್ಲಿ ಸಹಕಾರ ಸಂಘಗಳ ಮೂಲಕ ಜಿಲ್ಲೆಯ ಹೆಚ್ಚು ಮಂದಿ ರೈತರು ಸದಸ್ಯತ್ವ ನೊಂದಾಯಿಸಬೇಕೆಂದು ಮನವಿ ಮಾಡಿಕೊಂಡರು. ಯಶಸ್ವಿನಿ ಯೋಜನೆಯಡಿ ನೊಂದಾಯಿತ ನೆಟ್‍ವರ್ಕ್ ಆಸ್ಪತ್ರೆಗಳಲ್ಲಿ 1650 ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ವರೆಗೆ ಆರೋಗ್ಯ ವಿಮಾ…

Read More

ತುಮಕೂರು ನಗರದ ಜನಚಳುವಳಿ ಕೇಂದ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಭಾರತೀಯ ಸಾಮಾಜಿಕ ಕಾರ್ಯಕರ್ತೆ ಗುಜರಾತ್ ನ ಇಳಾಭಟ್ ರವರ ಶ್ರದ್ದಾಂಜಲಿ ಸಭೆಯನ್ನು ಜನಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಳ್ಳಲಾಗಿತ್ತು. ಸಭೆಯನ್ನುದ್ದೇಶಿಸಿ ಚಿಂತಕ ಸಿ.ಯತಿರಾಜ್ ಮಾತನಾಡಿ ಬೀದಿ ಬದಿ ವ್ಯಾಪಾರಿಗಳು ಮತ್ತು ಮಹಿಳಾ ವ್ಯಾಪಾರಿಗಳು ಗುಜರಾತ್‍ನ ಇಳಾಭಟ್ ರವರನ್ನು ಸ್ಮರಿಸಲೇಬೇಕು, ದೇಶಕ್ಕೆ ಮಾದರಿ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಮಹಿಳೆ ಅಂದಿನ ಜಾಗತೀಕರಣವನ್ನು ಬಹಳ ಹತ್ತಿರದಿಂದ ಕನಸು ಕಂಡವರು. ವೃತ್ತಿಯಲ್ಲಿ ವಕೀಲರಾಗಿ ಸಮಾಜಿಕ ಬದ್ದತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಸೇವೆಗೆ ಸಮಯ ಕೊಟ್ಟವರು. ಇವರು ಭಾರತದ ಬಡಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸಲು ಮಹಿಳಾ ಸಂಘವನ್ನು (ಸೇವಾ) ಸಂಸ್ಥೆಯನ್ನು 1972 ರಲ್ಲಿ ಸ್ಥಾಪಿಸಿ ಮಹಿಳೆಯರಿಗಾಗಿ ಟ್ರೇಡ್ ಯೂನಿಯನ್’ ಸಂಸ್ಥೆಯಾಗಿ 1.2 ಮಿಲಿಯನ್‍ಗೂ ಹೆಚ್ಚು ಸದಸ್ಯರನ್ನು ಹೊಂದಿದೆ ಸಹಕಾರಿ ಬ್ಯಾಂಕ್ ಸ್ಥಾಪಿಸಿದರು ಸುಮಾರು 3 ಮಿಲಿಯನ್ (30ಲಕ್ಷ) ಹೆಣ್ಣು ಮಕ್ಕಳ ಜೀವನವನ್ನು ರೂಪಿಸಿ ಸಹಾಯ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಇವತ್ತಿನ ಬೀದಿಬದಿ ವ್ಯಾಪಾರಿಗಳು ಮಹಿಳಾ ವ್ಯಾಪಾರಿಗಳು ಇಂತಹ…

Read More

ತುಮಕೂರು ಸಾಂಸ್ಕøತಿಕ ಕಾರ್ಯಕ್ರಮಗಳು ಮನುಷ್ಯನ ಮನಸ್ಸನ್ನು ಅರಳಿಸುವಲ್ಲಿ ಸಹಕಾರಿಯಾಗಿವೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕೆಂದು ಎಂದು ಪತ್ರಿಕೋದ್ಯಮಿ ಎಸ್.ನಾಗಣ್ಣ ತಿಳಿಸಿದ್ದಾರೆ. ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕರುನಾಡು ವಿಜಯ ಸೇನೆ ಆಯೋಜಿಸಿದ್ದ ಕರುನಾಡ ಸಾಂಸ್ಕøತಿಕ ಹಬ್ಬದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಚಲನಚಿತ್ರ,ಸಂಗೀತ ಕ್ಷೇತ್ರಗಳಲ್ಲಿ ಹೆಸರು ಮಾಡಿದಂತಹ ಮಹಾ ಕಲಾವಿದರ ಕಾರ್ಯಕ್ರಮಗಳನ್ನು ಟಿ.ವಿ.ಷೋಗಳಲ್ಲಿ ಮಾತ್ರ ನೋಡುತಿದ್ದೇವು. ಇಂದು ತುಮಕೂರಿನ ಜನ ನಿಜವಾಗು ನೋಡುವಂತಾಗಿರುವುದಕ್ಕೆ ಕರುನಾಡ ವಿಜಯಸೇನೆಯ ಅಧ್ಯಕ್ಷ ಹೆಚ್.ಎನ್.ದೀಪಕ್ ಹಾಗೂ ಅವರ ಪದಾಧಿಕಾರಿಗಳು ಕಾರಣ ಎಂದರು. ಇತ್ತೀಚಿನ ದಿನಗಳಲ್ಲಿ ಖಾಸಗಿ ವಾಹಿನಿಗಳು ಪೈಪೋಟಿಯ ಮೇಲೆ ಸಂಗೀತ,ನೃತ್ಯ ರಿಯಾಲಿಟಿ ಷೋಗಳನ್ನು ನಡೆಸುತಿದ್ದಾರೆ.ಅವರಿಗೆ ಸರಿಸಮ ವೆಂಬಂತೆ ತುಮಕೂರಿನಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕರು, ಹಾಸ್ಯ ಕಲಾವಿದರು, ನೃತ್ಯಗಾರರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ.ಇಂತಹ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಿದೆ ಎಂದು ಎಸ್.ನಾಗಣ್ಣ ತಿಳಿಸಿದರು. ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶಾಸಕ ಜೋತಿಗಣೇಶ್,ಕಳೆದ ಎರಡು ದಿನಗಳಿಂದ ಒಂದು ಉತ್ತಮ ಕಾರ್ಯಕ್ರಮ ನಡೆಯುತ್ತಿದೆ.ಪ್ರಾಯೋಜಕರು…

Read More

ಗುಬ್ಬಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ತುಮಕೂರು ಜಿಲ್ಲೆಯ ಅಧಿಕಾರಿಗಳಿಂದ ಅಧಿಕ ವಿದ್ಯುತ್ ಕಂಬಗಳ ಕೆಳಗೆ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬ ಅರಿವು ಮೂಡಿಸುವ ಕಾರ್ಯಕ್ರಮವನ್ನು ಗುಬ್ಬಿ ನಗರದ ಎಲ್ಲಾ ಬೀದಿಗಳಲ್ಲೂ ಜಾಥಾ ಮುಖಾಂತರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ವಿದ್ಯುತ್ ಪ್ರಸರಣ ನಿಗಮದ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಸೈಯದ್ ಅಂಜನ್ ಮಾತನಾಡಿ ಹೈಟೆನ್‍ಷನ್ ಹೋದ ಹಾದಿಯಲ್ಲಿ ಯಾವುದೇ ರೀತಿಯ ಕಟ್ಟಡಗಳು, ಶೆಡ್‍ಗಳನ್ನು ನಿರ್ಮಿಸಬಾರದು. ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಅವಘಡಗಳು ನಡೆದಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಥಾವನ್ನು ಗುಬ್ಬಿ ಕೆ.ಪಿ.ಟಿ.ಎಲ್.ನ ಅಧಿಕಾರಿಗಳು ಹಾಗೂ ನಿರ್ವಾಹಕರೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಾಗೂ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೊಸದಾಗಿ ಲೇಔಟ್‍ಗಳನ್ನು ನಿರ್ಮಿಸುತ್ತಿದ್ದು ಹೈಟೆನ್‍ಷನ್ ಕೆಳಗಡೆ ಯಾವುದೇ ನಿವೇಶನವನ್ನು ಹಂಚಬಾರದು. ಈಗಾಗಲೇ ಇಂತಹ ಲೇಔಟ್‍ಗಳ ನಿರ್ಮಾಣದ ಮಾಲೀಕರಿಗೆ ಹಾಗೂ ಅಧಿಕಾರಿಗಳಿಗೆ ಕಛೇರಿಯಿಂದ ತಿಳುವಳಿಕೆ ನೋಟೀಸ್‍ನ್ನು ನೀಡಿದ್ದು ಇದನ್ನು ಸರಿಯಾದ ಹಾದಿಯಲ್ಲಿ ತಮ್ಮ ನಿರಾಪೇಕ್ಷಣಾ ಪತ್ರವನ್ನು…

Read More

ತುಮಕೂರು ಯಾವುದೇ ಒಂದು ಸಮುದಾಯ ಜಾಗತಿಕ ಮಟ್ಟದಲ್ಲಿ ತಮ್ಮನ್ನು ಗುರುತಿಸಬೇಕೆಂದರೆ, ಅದಕ್ಕೆ ಶಿಕ್ಷಣವೇ ಪೂರಕವಾದ ಅಂಶವಾಗಿದ್ದು, ನೇಕಾರರು ತಮ್ಮ ಮಕ್ಕಳನ್ನು ಉನ್ನತ ವ್ಯಾಸಾಂಗದತ್ತ ಗಮನಹರಿಸುವಂತೆ ಮಾಡಬೇಕೆಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಮಹಾವೀರ ಭವನದಲ್ಲಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಮತ್ತು ತುಮಕೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದವತಿಯಿಂದ ಆಯೋಜಿಸಿದ್ದ ಜಿಲ್ಲಾ ನೇಕಾರರ ಸಮಾವೇಶ ಮತ್ತು ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಸಮುದಾಯದಲ್ಲಿ ಹೆಚ್ಚು ಹೆಚ್ಚು ಜನ ವಿದ್ಯಾವಂತರಾದಂತೆ, ಅವರ ಅರ್ಥಿಕ, ಸಾಮಾಜಿಕ ಸ್ಥಿತಿಗತಿಯೂ ಬದಲಾಗಲಿದೆ. ಹಾಗಾಗಿ ಎಲ್ಲರೂ ಶಿಕ್ಷಣದತ್ತ ಗಮನಹರಿಸಬೇಕೆಂದರು. ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ,ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಅರ್ಥಿಕವಾಗಿ ಹಿಂದುಳಿದಿರುವ ಈ ಸಮುದಾಯಕ್ಕೆ ಇದುವರೆಗೂ ಒಂದು ಅಭಿವೃದ್ದಿ ನಿಗಮ ಇಲ್ಲದಿರುವುದು ಶೋಚನೀಯ.ನಿಗಮಗಳ ಸ್ಥಾಪನೆಯಿಂದ ಸರಕಾರದಿಂದ ಜನಾಂಗದ ಅಭಿವೃದ್ದಿಗೆ ಅನುದಾನ ಬಿಡುಗಡೆಯಾಗುತ್ತದೆ.ಆ ಅನುದಾನವನ್ನು ಶೈಕ್ಷಣಿಕ ಮತ್ತು ಅರ್ಥಿಕ ಅಭಿವೃದ್ದಿಗೆ ವಿನಿಯೋಗಿಸಿ, ಸಮುದಾಯವನ್ನು ಬಲಿಷ್ಠಗೊಳಿಸಲು ಸಾಧ್ಯ. ನೇಕಾರರ ಅಭಿವೃದ್ದಿ ನಿಗಮ ಸ್ಥಾಪನೆ ಕುರಿತಂತೆ ನಾವು…

Read More

ತುಮಕೂರು ವಿದ್ಯುತ್ ಮಾರ್ಗಗಳಲ್ಲಿ ಕೆಲಸ ಮಾಡುವಾಗ ಲೈನ್‍ಮನ್‍ಗಳು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಬೆಸ್ಕಾಂ ಚಿತ್ರದುರ್ಗ ವಲಯದ ಮುಖ್ಯ ಇಂಜಿಯರ್ ಕೆ.ವಿ. ಗೋವಿಂದಪ್ಪ ಸಲಹೆ ನೀಡಿದರು. ನಗರದ ಹೊರಪೇಟೆಯಲ್ಲಿರುವ ಕೆ.ಇ.ಬಿ ಇಂಜಿನಿಯರ್ಸ್ ಅಸೋಸಿಯೇಷನ್ ಬಿಲ್ಡಿಂಗ್‍ನಲ್ಲಿ ಬೆಸ್ಕಾಂ ಹಾಗೂ ಬೆವಿಕಂ ತುಮಕೂರು ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಬೆಸ್ಕಾಂ ನೌಕರರ ಸುರಕ್ಷತಾ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ತುಮಕೂರು ವಿಭಾಗ ಮಟ್ಟದ ಎಲ್ಲ ಪವರ್ ಮನ್‍ಗಳಿಗೆ ವಿದ್ಯುತ್ ಮಾರ್ಗದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಸುರಕ್ಷತಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದರು. ಕೆಲಸಕ್ಕೆ ಹೋಗುವ ಮುನ್ನ ವಿದ್ಯುತ್ ಸರಬರಾಜಿನ ಮಾರ್ಗಗಳ ಬಗ್ಗೆ ಹಾಗೂ ಉಂಟಾಗಿರುವ ದೋಷವನ್ನು ಸರಿಪಡಿಸಲು ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ಪಡೆದು ಎಲ್ಲಾ ಸುರಕ್ಷತಾ ಸಾಮಗ್ರಿಗಳನ್ನು ತಪ್ಪದೇ ಕೊಂಡೊಯ್ಯಬೇಕು. ಕೆಲಸ ಪ್ರಾರಂಭಕ್ಕೆ ಮುನ್ನ ಕೆಲಸ ಮಾಡುವ ಸ್ಥಳಕ್ಕೆ ಯಾವ ಯಾವ ಮಾರ್ಗದಿಂದ ವಿದ್ಯುತ್ ಸರಬರಾಜಾಗುತ್ತದೆ ಎಂಬುದನ್ನು ಗಮನಿಸಿ, ಸಂಬಂಧಪಟ್ಟ ಮಾರ್ಗಗಳಲ್ಲಿ ಮಾರ್ಗಮುಕ್ತತೆ ತೆಗೆದುಕೊಂಡಿರುವ ಬಗ್ಗೆ…

Read More

ತುಮಕೂರು ಮಾಜಿ ಶಾಸಕರಾದ ಬಿ ಸುರೇಶ್ ಗೌಡ ಅವರ 57ನೇ ಜನ್ಮದಿನದ ಆಚರಣೆಯನ್ನು ಬೆಳ್ಳಾವಿ ಹೋಬಳಿ ಬುಗುಡನಹಳ್ಳಿ ಗ್ರಾಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಕಾರದ ವೀರ ಬಸವ ಮಹಾ ಸ್ವಾಮೀಜಿ ಗಳ ಆರ್ಶಿವಾದಗಳೊಂದಿಗೆ ಎಲ್ಲಾ ಗ್ರಾಮಗಳ ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಬಹಳ ಅದ್ಧೂರಿಯಾಗಿ ಗ್ರಾಮದ ಪ್ರಮುಖ ರಾಜಭೀದಿಗಳಲ್ಲಿ ವಾದ್ಯಗೋಷ್ಠಿಗಳೊಂದಿಗೆ ಜಾನಪದ ಕಲಾ ತಂಡಗಳನ್ನ ಒಳಗೊಂಡಂತೆ ಹೂ ಮಳೆ ಸುರಿಸುತ್ತಾ ಕಾರ್ಯಕ್ರಮ ಆಚರಿಸಿದರು. ಈ ಸಂದರ್ಭದಲ್ಲಿ ಸುರೇಶ್ ಗೌಡರ ಬಗ್ಗೆ ಶ್ರೀ ಮಠದ ಕಾರದ ವೀರ ಬಸವ ಮಹಾಸ್ವಾಮಿಜಿಗಳು ಬುಗುಡನಹಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ದೊಂದಿಗೆ ಜನಪ್ರಿಯತೆಯನ್ನು ಪಡೆದಿರುವ ಜನನಾಯಕ ಸುರೇಶ್ ಗೌಡರ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿರುವ ಅಭಿಮಾನಿಗಳಿಗೆ ಹಿತವಚನ ಹೇಳುತ್ತಾ ನಿಜವಾದ ಜನನಾಯಕ ಅಂದರೆ ಯಾರು? ಹಣ ಖರ್ಚು ಮಾಡಿ ನಾಯಕ ಎಂದು ಕರೆಸಿ ಕೊಳ್ಳುವವನು ನಾಯಕನಲ್ಲ. ದುಡ್ಡು ಖರ್ಚು ಮಾಡದೆ ಪಟಾಕಿ ಹೊಡೆಸಿಕೊಳ್ಳುವ, ಹಾರ ಹಾಕಿಸಿಕೊಳ್ಳುವ, ಕೇಕ್ ಕಟ್ ಮಾಡಿಸಿ ಕೊಳ್ಳುವ, ಪ್ರತಿ ದಿನ ಸಾರ್ವಜನಿಕರ ಜೀವನದಲ್ಲಿ ಕಾಯಕ…

Read More

ತುಮಕೂರು ನಗರದ ಜೆಡಿಎಸ್ ಪಕ್ಷದಲ್ಲಿ ಆಂತರಿಕವಾಗಿ ಭಿನ್ನಮತ ಸ್ಪೋಟಗೊಂಡಿದ್ದು ಟಿಕೆಟ್ ಆಕಾಂಕ್ಷೆಗಳ ಸಂಖ್ಯೆ ಹೆಚ್ಚಾಗುತ್ತಲಿದೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಎನ್.ಗೋವಿಂದರಾಜು ಅಧಿಕೃತ ಅಭ್ಯರ್ಥಿ ನಾನೇ ಎಂದು ಸ್ವಯಂ ಘೋಷಿಸಿಕೊಳ್ಳುತ್ತಾ ಇತ್ತೀಚಿನ ದಿನ ಮಾನಗಳಲ್ಲಿ ನಗರದಲ್ಲಿ ಕಾಣ ಸಿಗುತಿದ್ದಾರೆ. ಇನ್ನೂ ಜಿಲ್ಲಾ ಕಾರ್ಯಧ್ಯಕ್ಷ ನಾಗರಾಜು ಬೆಳ್ಳಿ ಲೋಕೇಶ್, ನರಸೆಗೌಡ ಹಿಂದಿನಿಂದಲೂ ಟಿಕೆಟ್ ಆಕಾಂಕ್ಷೆಗಳಾಗಿದ್ದಾರೆ. ಇತ್ತೀಚಿಗೆ ನಗರದಲ್ಲಿ ನಾನು ಅಭ್ಯರ್ಥಿ ಎಂದು ಹೇಳಿಕೆ ನೀಡುತ್ತಿರುವ ಬೊಮ್ಮನಹಳ್ಳಿ ಬಾಬು ಅಲೀಯಾಸ್ ಅಟ್ಟಿಕಾ ಬಾಬು ನಾನೇ ಮುಂದಿನ ಅಭ್ಯರ್ಥಿ ಎನ್ನುವುದರಲ್ಲಿ ಸಂಶಯವಿಲ್ಲ. ಎಲ್ಲಾರೂ ನನಗೆ ಸಹಕಾರ ನೀಡುತ್ತಾರೆ ಎಂದು ಬಹಿರಂಗವಾಗಿಯೆ ಹೇಳಿಕೆ ನೀಡುತ್ತಿದ್ದಾರೆ. ಹಣವಂತರೇಲ್ಲಾರೂ ನಾನೇ ಅಭ್ಯರ್ಥಿ ಎಂದು ಸ್ವಯಂ ಘೋಷಿಸಿಕೊಳ್ಳುತ್ತಿದ್ದು, ಸೇವಾ ಮನೋಭಾವ ಹೊಂದಿರುವ ನಿಷ್ಠಾವಂತ ಪಕ್ಷದ ಕಟ್ಟಾಳುವಂತೆ ದುಡಿದ ಜೆಡಿಎಸ್‍ನ ಮುಂಚೂಣಿಯ ಮುಖಂಡರು ಧ್ವನಿ ಎತ್ತದೆ ಮೌನಕ್ಕೆ ಶರಣಾಗಿದ್ದಾರೆ. ಒಟ್ಟಾರೆ ಜೆಡಿಎಸ್ ಪಕ್ಷದಲ್ಲಿ ಹಣವಂತರಿಗೆ ಮಣೆ ಎಂಬ ಡೋಲಾಯಮಾನ ಸ್ಥಿತಿಯಲ್ಲಿ ಬಂದುನಿಂತಿದೆ. ತುಮಕೂರು ನಗರದ ಅಭಿವೃದ್ಧಿಯ ಹೊಂಗನಸು ಟಿಕೆಟ್ ಆಕಾಂಕ್ಷಿಗಳಲ್ಲಿ ಕಂಡುಬರುತ್ತಿಲ್ಲ. ಸ್ವ-ಅಭಿವೃದ್ಧಿ…

Read More

ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿಯ ತುಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಮ್ಮೆದೇವರಹಳ್ಳಿ ಗ್ರಾಮದಲ್ಲಿ ಕೊರಟಗೆರೆ ತಾಲ್ಲೂಕು ಕಂದಾಯ ಇಲಾಖೆಯ ವತಿಯಿಂದ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ತಾಲ್ಲೂಕಿನ ತಹಶೀಲ್ದಾರ್ ನಾಹಿದಾ ಜಮ್ ಜಮ್ ರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಸರ್ಕಾರದ ಸವಲತ್ತುಗಳಾದ ಪಿಂಚಣಿ, ಆರೋಗ್ಯ ಕಾರ್ಡ್ ಸೇರಿದಂತೆ 72 ಗಂಟೆಗಳಲ್ಲಿ ಪಿಂಚಣಿ ಮಂಜೂರಾತಿ ಆದೇಶ ಪತ್ರವನ್ನು ಗ್ರಾಮದ ಫಲಾನುಭವಿಗಳಿಗೆ ತಲುಪಿಸುವುದು, ನವೋದಯ ಮೊಬೈಲ್ ಆ?ಯಪ್ ಮೂಲಕ ಪಿಂಚಣಿ ಪಡೆಯಬಹುದು. ಆದೇಶ ಪತ್ರವನ್ನು ಪಾಲನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಲಾಗುವುದು. ಮತದಾರರ ನೋಂದಣಿ ಬಗ್ಗೆ ಅರಿವು ಮೂಡಿಸಿ ಗ್ರಾಮ ಒನ್ ಸೇವಾ ಕೇಂದ್ರದಲ್ಲಿ ಸಮಸ್ಯೆಗಳನ್ನು ತಮ್ಮ ಗ್ರಾಮದಲ್ಲಿಯೇ ಬಗೆಹರಿಸಿಕೊಳ್ಳಬಹುದು. ಇದರಿಂದ ಗ್ರಾಮದಿಂದ ತಾಲ್ಲೂಕು ಪಂಚಾಯಿತಿಗೆ ಸಾರ್ವಜನಿಕರು ಅಲೆದಾಡುವುದು ತಪು?ಪತ್ತದೆ ಎಂದು ತಿಳಿಸಿದರು. ಈ ವೇಳೆ ಗ್ರಾಮದ ಸುಮಾರು 26 ಜನ ವೃದ್ಧರು ಹೊಸದಾಗಿ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಿದರು, ನಾಲ್ಕು ಜನ ಪಿಂಚಣಿದಾರರ…

Read More

ತುಮಕೂರು ಕೇಂದ್ರ ಸರಕಾರಿ ಸೇವೆಯಲ್ಲಿ ಐಎಎಸ್, ಐಪಿಎಸ್, ಐಎಫ್‍ಎಸ್ ಮಾತ್ರವಲ್ಲ, ಸೇನೆ, ಆರ್ಥಿಕ ಸಚಿವಾಲಯ, ಆಹಾರ ಪರಿಸರ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಮಂತ್ರಾಲಯಗಳಲ್ಲಿ ಗ್ರೂಪ್‍ಬಿ ಹುದ್ದೆಗಳು ಸೇರಿದಂತೆ ಅನೇಕ ಹುದ್ದೆಗಳನ್ನು ಸ್ಟಾಫ್ ಸೆಲೆಕ್ಷನ್ ಕಮೀಷನ್ ಹಾಗೂ ಇತರೆ ನೇಮಕಾತಿ ಪ್ರಾಧಿಕಾರದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಆ ಹುದ್ದೆಗಳಿಗೂ ಅರ್ಜಿಹಾಕಿ ನೇಮಕ ಪರೀಕ್ಷೆ ಎದುರಿಸಿ ಎಂದು ನೀತಿ ಆಯೋಗದ ಉಪ ಸಲಹೆಗಾರ ಡಾ.ಮುನಿರಾಜು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ಕನಕ ಶ್ರೀ ಸೇವಾ ಸಮಿತಿಯಿಂದ ನಗರದ ಶ್ರೀದೇವಿ ಛಾರಿಟಬಲ್ ಟ್ರಸ್ಟ್, ಇನ್‍ಸೈಟ್ ಐಎಎಸ್ ಅಕಾಡೆಮಿ ಸಹಕಾರದೊಂದಿಗೆ ಶ್ರೀದೇವಿ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ದಾಸಶ್ರೇಷ್ಠ ಕನಕ ಜಯಂತಿ ಅಂಗವಾಗಿ ಏರ್ಪಡಿಸಿರುವ ‘ಎಜುಕಾನ್-2022’ ಹೆಸರಿನ 5 ದಿನಗಳ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಇಂದು ಹುದ್ದೆಗಳ ನೇಮಕಾತಿಯಲ್ಲಿ ತೀವ್ರ ಸ್ಪರ್ಧೆಇದೆ. ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನಗಳು ಕಠಿಣವಾಗಿದ್ದು, ಒಂದೇ ಪ್ರಯತ್ನಕ್ಕೆ ಎಲ್ಲರೂ ಯಶಸ್ಸುಗಳಿಸಲು ಸಾಧ್ಯವಿಲ್ಲ. ಉನ್ನತ ಸ್ಥಾನ ಪಡೆಯಲು ನಿರಂತರ ಶ್ರಮ ಪ್ರಯತ್ನ…

Read More