Author: News Desk Benkiyabale

ತುರುವೇಕೆರೆ ಸರ್ಕಾರ ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಬೊಮ್ಮೇನಹಳ್ಳಿ ನಂದೀಶ್ ಆಗ್ರÀ್ರಹಿಸಿದರು. ಇತ್ತೀಚಿಗೆ ಕೊರಟಗೆರೆ ತಾಲ್ಲೂಕಿನ ಆಸ್ಪತ್ರೆಗೆ ಅಪಘಾತದ ಸುದ್ದಿ ಮಾಡಲು ತೆರಳಿದ್ದ ಪತ್ರಕರ್ತರನ್ನು ನಿಂದಿಸಿ ಸಿಬ್ಬಂದಿಗಳೊಡಗೂಡಿ ಹಲ್ಲೆಮಾಡಿರುವ ಕ್ರಮವನ್ನು ಖಂಡಿಸಿ ಮಾತನಾಡಿದದರು. ಸರ್ಕಾರಗಳು ಗ್ರಾಮೀಣ ಭಾಗದ ಪತರಕರ್ತರುಗಳಿಗೆ ಸವಲತ್ತುಗಳನ್ನು ನೀಡುತ್ತೇವೆಂದು ಹೇಳುತ್ತಲೇ ಬಂದಿವೆ ಆದರೆ ಯಾವೊಂದು ಸವಲತ್ತುಗಳು ಇಲ್ಲಿಯವರೆಗೂ ಕಾಗದ ಪತ್ರದಲ್ಲೇ ಉಳಿದಿರುವುದು ಒಂದು ದುರಂತವಾದರೆ ಮತ್ತೊಂದೆಡೆ ಗ್ರಾಮೀಣ ಭಾಗದ ಪತ್ರಕರ್ತರು ಸುದ್ದಿ ಮಾಡಲು ಹೆದರುವ ಹಾಗೂ ಭಯದಿಂದ ಬದುಕುವ ಪರಿಸ್ಥಿತಿ ಉಂಟಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಗಳು ಪತ್ರಕರ್ತರ ರಕ್ಷಣೆಗೆ ಮುಂದಾಗಬೇಕು, ಕಟ್ಟು ನಿಟ್ಟಿನ ಕಾನೂನುಗಳನ್ನು ತರುವ ಮೂಲಕ ಪತ್ರಕರ್ತರ ರಕ್ಷಣೆ ಮಾಡಬೇಕಿದೆ ಹಾಗೂ ಸುದ್ದಿ ನಿರತ ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವ ಕೊರಟಗೆರೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯ ನವೀನ್ ಹಾಗೂ ತಪಿತಸ್ಥರ ಪರವಾಗಿ ನಿಂತು ಪತ್ರಕರ್ತರ ವಿರುದ್ದ ದೂರು ದಾಖಲಿಸಿರುವ ಪಿ…

Read More

ತುಮಕೂರು ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿಯಿಂದ ಕೊಳಚೆ ನಿಮೂರ್ಲನಾ ಮಂಡಳಿಗೆ ನೀಡಿರುವ 433 ಕೋಟಿ ರೂಗಳನ್ನು ಕೂಡಲೇ ಹಿಂಪಡೆಯಬೇಕು, ಆರ್ಹ ಫಲಾನುಭವಿಗಳ ವಸತಿ ಯೋಜನೆಗೆ ಅನುದಾನ ನೀಡುವಂತೆ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಕ್ಟೋಬರ್ 17 ರಂದು ರಾಜ್ಯದಾದ್ಯಂತ ಕಟ್ಟಡ ಕಾರ್ಮಿಕರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2006ರಲ್ಲಿ ಜಾರಿಗೆ ಬಂದ ಕಾರ್ಮಿಕ ಕಲ್ಯಾಣ ಮಂಡಳಿಯ ಸೆಸ್ ಹಣವನ್ನು ಮಂತ್ರಿಗಳು,ಅಧಿಕಾರಿಗಳು ಬೇಕಾಬಿಟ್ಟು ಖರ್ಚು ಮಾಡಲು ಹೊರಟಿದ್ದಾರೆ.ಇದರಿಂದ ನಿಜವಾದ ಕಟ್ಟಡ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. ಕಾರ್ಮಿಕರ ಹಲವಾರು ಹೋರಾಟಗಳ ಫಲವಾಗಿ 2006ರಲ್ಲಿ ಜಾರಿಗೆ ಬಂದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸುಮಾರು 48 ಲಕ್ಷ ಜನ ಕಾರ್ಮಿಕರು ತಮ್ಮ ಹೆಸರು ನೊಂದಾಯಿಸಿದ್ದು, ಇವರಲ್ಲಿ ಶೇ 50ರಷ್ಟು ಜನರು ನಕಲಿ ಕಾರ್ಮಿಕರನ್ನು ಅಧಿಕಾರಿಗಳು ಸೇರಿಸಿದ್ದಾರೆ. ಮೊದಲು ಇವರ ನೊಂದಾವಣೆಯನ್ನು ಕೈಬಿಡಬೇಕು, ಹಾಗೆಯೇ ಸೆಸ್ ಹಣದಲ್ಲಿ 1 ಲಕ್ಷ ಕಾರ್ಮಿಕರಿಗೆ…

Read More

ತುಮಕೂರು ವಿಶ್ವ ಆಹಾರ ದಿನವನ್ನು ವಿಶ್ವದಾದ್ಯಂತ ಅಕ್ಟೋಬರ್ 16ರಂದು ಆಚರಿಸಲಾಗುತ್ತಿದ್ದು, ಆಹಾರ ಭದ್ರತೆ ಒದಗಿಸುವಲ್ಲಿ ಮೀನುಗಾರಿಕೆಯೂ ಒಂದು ಪ್ರಮುಖ ಚಟುವಟಿಕೆಯಾಗಿರುವ ಹಿನ್ನೆಲೆಯಲ್ಲಿ“ಯಾರನ್ನೂ ಹಿಂದೆ ಬಿಡಬೇಡಿ” (ಐeಚಿve ಓಔ ಔಓಇ ಃehiಟಿಜ) ಎಂಬ ವಿಶ್ವ ಆಹಾರ ದಿನ 2022ರ ಘೋಷವಾಕ್ಯದೊಂದಿಗೆ ಮೀನು ಉತ್ಪಾದನೆಯಲ್ಲಿ ರಾಜ್ಯವನ್ನು ದೇಶದಲ್ಲಿಯೇ ಮುಂಚೂಣಿ ರಾಜ್ಯವನ್ನಾಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮೀನುಗಾರಿಕೆ ಇಲಾಖೆಯು ಫ್ರೀಡಂ ಆಪ್ ಸಹಯೋಗದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್ 16ರಂದು ಒಂದು ದಿನದ “ಒಳನಾಡು ಮೀನು ಉತ್ಪಾದಕರ ಸಮಾವೇಶ-2022”ಅನ್ನು ಆಯೋಜಿಸಿದೆ. ಒಳನಾಡು ಮೀನು ಉತ್ಪಾದನೆಯನ್ನು ಹೆಚ್ಚಿಸಲು ಸಮಾವೇಶ: ಒಳನಾಡು ಜಿಲ್ಲೆಯಲ್ಲಿರುವ ನೈಸರ್ಗಿಕ ಜಲಸಂಪನ್ಮೂಲಗಳನ್ನು ಬಳಸಿಕೊಳ್ಳುವುದರ ಜೊತೆಗೆ ಆಧುನಿಕ ತಂತ್ರಜ್ಞಾನಗಳಾದ ಃioಈಟoಛಿ ಮತ್ತು ಖಂS ತಂತ್ರಜ್ಞಾನಗಳನ್ನು ಬಳಸಿಕೊಂಡು ಒಳನಾಡು ಮೀನು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಜಿಜಿಡಿeeಜom ಂಠಿಠಿ ಸಂಸ್ಥೆಯು ಜಂಟಿಯಾಗಿ ರಾಜ್ಯದ ನಿರುದ್ಯೋಗ ಯುವಕ- ಯುವತಿಯರಿಗೆ ಮೀನುಮರಿ ಉತ್ಪಾದನೆ, ಪಾಲನೆ, ಕೆರೆ ಮೀನುಗಾರಿಕೆ, ಹಿನ್ನೀರು ಮೀನುಗಾರಿಕೆ, ಕೊಳ ಮೀನುಗಾರಿಕೆ ಮತ್ತು ಆಧುನಿಕ ತಂತ್ರಜ್ಞಾನಗಳ…

Read More

ತುಮಕೂರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ, ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರ ಅಲ್ಪಸಂಖ್ಯಾತರಅಭಿವೃದ್ಧಿಗೆಅಪಾರ ಕೊಡುಗೆಗಳನ್ನು ನೀಡಿದೆ. ಅಲ್ಪ ಸಂಖ್ಯಾತರಿಗಾಗಿ ಕೋಟ್ಯಾಂತರ ರೂಪಾಯಿ ಅನುದಾನ ನೀಡಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸರ್ಕಾರದ ಕೊಡುಗೆಗಳನ್ನು ಮನೆಮನೆಗೆ ಪ್ರಚಾರ ಮಾಡಿ, ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ರಾಜ್ಯ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಉಪಾಧ್ಯಕ್ಷ ಸಿರಾಜುದ್ದೀನ್ ಕಾರ್ಯಕರ್ತರಿಗೆ ಮನವಿ ಮಾಡಿದರು. ನಗರದಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಬಿಜೆಪಿ ಜಿಲ್ಲಾಅಲ್ಪಸಂಖ್ಯಾತರ ಮೋರ್ಚಾದ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರು ಬಿಜೆಪಿ ಹಾಗೂ ಬಿಜೆಪಿ ಸರ್ಕಾರಗಳ ಬಗ್ಗೆ ಅಲ್ಪಸಂಖ್ಯಾತರಲ್ಲಿ ಅಪಪ್ರಚಾರ ಮಾಡುವ ಮೂಲಕ ಗೊಂದಲ ಸೃಷ್ಟಿಸುವ ಪ್ರಯತ್ನಮಾಡುತ್ತಿದ್ದಾರೆ.ಅಂತಹವುಗಳಿಗೆ ಕಿವಿಗೊಡದೆ ಅಲ್ಪ ಸಂಖ್ಯಾತರಿಗೆ ಬಿಜೆಪಿ ಸರ್ಕಾರ ನೀಡಿರುವ ಕೊಡುಗೆಗಳನ್ನು ಸದ್ಬಳಕೆ ಮಾಡಿಕೊಂಡು, ಬಿಜೆಪಿಯನ್ನು ಬೆಂಬಲಿಸುವಂತೆ ಅಲ್ಪಸಂಖ್ಯಾತರಿಗೆ ಮನವರಿಕೆ ಮಾಡಿಕೊಡಬೇಕುಎಂದು ಕಾರ್ಯಕರ್ತರಿಗೆ ತಿಳಿಸಿದರು. ಬಿಜೆಪಿ ಹಾಗೂ ನಮ್ಮ ಸರ್ಕಾರ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದು…

Read More

ತುಮಕೂರು ಕೇಂದ್ರ ಸರ್ಕಾರಿ ಸಿಬ್ಬಂದಿ ನೇಮಕಾತಿ ಆಯೋಗದಿಂದ ಆಗುತ್ತಿರುವ ಬಿ ಮತ್ತು ಸಿ ದರ್ಜೆ ನೌಕರಿಗಳಲ್ಲಿ ಕನ್ನಡಿಗರ ಹಿತ ಕಾಪಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತುಮಕೂರು ಘಟಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು. ಜಿಲ್ಲಾಧ್ಯಕ್ಷ ಕೆ.ಎನ್. ಮಂಜುನಾಥ್ ಗೌಡ ಮಾತನಾಡಿ, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಖಾಲಿಯಿರುವ 20,000 ಕ್ಕೂ ಹೆಚ್ಚಿನ ಜಿ ಮತ್ತು ಸಿ ದರ್ಜೆಯ ಹುದ್ದೆಗಳಿಗಾಗಿ ಅರ್ಜಿಗಳನ್ನು ಅಹ್ವಾನಿಸಿದ್ದು ಈ ಪ್ರಕಿಯೆ 17 ನೇ ಸೆಪ್ಟೆಂಬರ್ 2022 ರಿಂದ ಆರಂಭವಾಗಿದ್ದು ಸದರಿ ನೇಮಕಾತಿಯ ಅರ್ಜಿ ಸಲ್ಲಿಸುವಿಕೆಯಿಂದ ಹಿಡಿದು ಎಲ್ಲ ಹಂತಗಳ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ತನಕ ಕೇವಲ ಹಿಂದಿ ಮತ್ತು ಇಂಗ್ಲೀμï ಭಾμÉಗಳಲ್ಲಿ ನಡೆಯಲಿವೆ. ಇದು ಕನ್ನಡಿಗರ ಉದ್ಯೋಗಾವಕಾಶಗಳನ್ನು ಕಸಿಯುವಂತಹ ತಾರತಮ್ಯದ ನಡೆಯಾಗಿದೆ ಎಂದು ಆರೋಪಿಸಿದರು. ನೇಮಕಾತಿಯ ಎಲ್ಲ ಹಂತದ ಪರೀಕ್ಷೆಗಳೂ ಹಿಂದಿ, ಇಂಗ್ಲೀμï ಭಾμÉಗಳಲ್ಲಿ ಮಾತ್ರ ನಡೆಸುವುದು ಹಿಂದಿ ಮಾತೃ ಭಾಷಿಕರಿಗೆ ಮಾತ್ರ ಅವರ ಭಾμÉಯಲ್ಲಿ ಅರ್ಜಿ ಸಲ್ಲಿಸುವ, ಪರೀಕ್ಷೆ ಬರೆಯುವ ಅನುಕೂಲ…

Read More

ಚಿತ್ರದುರ್ಗ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮತ್ತು ಪಕ್ಕದಲ್ಲಿರುವ ಸ್ಟೇಡಿಯಂ ರಸ್ತೆ ಮೇಲೆಲ್ಲಾ ಚರಂಡಿ ನೀರು ನಿಂತು, ನೋಡುಗರಿಗೆ ಅಸಹ್ಯ ಎನಿಸುತ್ತಿದೆ. ನಗರದ ಸೌಂದರ್ಯದ ಬಗ್ಗೆ ಗಮನ ನೀಡುತ್ತಿರುವ ನಗರಸಭೆಯವರು, ನಗರದ ಸ್ವಚ್ಛತೆಯ ಬಗ್ಗೆಯೂ ಸಹ ಗಮನ ಹರಿಸಬೇಕಾಗಿದೆ, ರಸ್ತೆಯ ಪಕ್ಕದಲ್ಲಿರುವ ಚರಂಡಿ ತುಂಬಿ ತುಳುಕುತ್ತಿದ್ದು, ಅದರಿಂದ ಹರಿದು ಬಂದ ನೀರು ರಸ್ತೆಯ ಮೇಲೆಲ್ಲಾ ಚೆಲ್ಲಾಡುತ್ತದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ದೂರಿದ್ದಾರೆ.. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನೀರು ನಿಂತು ಕೆರೆಯಂತಾಗಿದೆ, ಅಲ್ಲಿ ಎಮ್ಮೆಗಳು, ಪ್ರಾಣಿಗಳು ಈಜಾಡುತ್ತಿರುವ ದೃಶ್ಯ ನೋಡಿದರೆ, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ಆಟವಾಡಲು ಮೈದಾನವೇ ಸಿಗದಂತಾಗುತ್ತದೆ. ಇದರ ಬಗ್ಗೆ ಸಾಕಷ್ಟು ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಬರೆದರೂ ಸಹ, ಯಾವುದೇ ಕ್ರಮವನ್ನು ಜರುಗಿಸಿದಂತೆ ಕಾಣುತ್ತಿಲ್ಲ. ಒಮ್ಮೆ ಮಾತ್ರ ಮೈದಾನವನ್ನು ಸ್ವಚ್ಛಗೊಳಿಸಿದ ದೃಶ್ಯ ನಮ್ಮೆಲ್ಲರಿಗೂ ನೋಡಿ ಸಂತೋಷವಾಗಿತ್ತು, ಆದರೆ ಈಗ ಮತ್ತೆ…

Read More

ತುರುವೇಕೆರೆ ಒಳ್ಳೆಯ ಕೆಲಸಗಳ ಮೂಲಕ ಪರಮಾನಂದ ಕಡೆಗೆ ಹೋಗುವುದೇ ಸಂಸ್ಕಾರ. ಸಂಸ್ಕಾರ ನಮ್ಮ ವ್ಯಕ್ತಿತ್ವದ ದೋಷ ನಿವಾರಣೆ ಮಾಡಿ ಗುಣದಾನದೊಂದಿಗೆ ಶಕ್ತಿವರ್ಧನೆ ಮಾಡುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಚಿಂತಕ ಡಾ. ಸಂತೋಷ್ ಹಾನಗಲ್ ತಿಳಿಸಿದರು. ಪಟ್ಟಣದ ಚಿದಂಬರೇಶ್ವರ ಗ್ರಂಥಾಲಯದಲ್ಲಿ ಶತವಧಾನಿ ಆರ್. ಗಣೇಶ್ ಅವರು ರಚಿಸಿದ ‘ಸಂಸ್ಕಾರಗಳು’ ಕೃತಿಯ ವಿಶ್ಲೇಷಣೆ ಮಾಡಿ ಅವರು ಮಾತನಾಡಿದರು. ಸಂಸ್ಕಾರದಿಂದ ಸಮಾಜದ ಸದಸ್ಯರು ಸಂಘಟಿತರಾಗುತ್ತಾರೆ. ಹೃದಯದ ಶ್ರದ್ಧೆ ಮತ್ತು ವಿಶ್ವಾಸ ಬಲಿಯುತ್ತದೆ. ಕಲೆ, ಸಾಹಿತ್ಯದ ಸಂವೇದನೆ ಅರಳುತ್ತದೆ.ವೈವಿಧ್ಯಮಯ ಆಚರಣೆಗಳನ್ನು ಸಮಾನ ದೃಷ್ಟಿಯಿಂದ ನೋಡುವ ಮೂಲಕ ಪ್ರಜ್ಞಾವಂತಿಕೆ ಬೆಳೆಯುತ್ತದೆ.ಸಂಸ್ಕಾರವುಳ್ಳ ವ್ಯಕ್ತಿಗಳು ಒಂದು ಸುಸಂಸ್ಕøತ ಸಮುದಾಯವನ್ನು ನಿರ್ಮಿಸುತ್ತಾರೆ ಎಂದರು ಕೃತಿಯಲ್ಲಿನ ಹಲವು ಸಂಕೀರ್ಣ ವಿಷಯಗಳನ್ನು ಅರ್ಥೈಸಿದ ಅವರು ವರ್ಣ ವ್ಯವಸ್ಥೆ ಎಂದರೆ ಚರ್ಮದ ಬಣ್ಣ, ಕಸುಬಿನ ಮೂಲಕ ಮನುಷ್ಯನನ್ನು ಪ್ರತ್ಯೇಕಿಸುವುದಲ್ಲ. ಸ್ವಧರ್ಮ ಗುರುತಿಸಿಕೊಂಡು ವ್ಯಕ್ತಿತ್ವ ಗಟ್ಟಿಮಾಡಿಕೊಳ್ಳುವುದೇ ವರ್ಣ ವ್ಯವಸ್ಥೆ ಎನಿಸಿಕೊಳ್ಳುತ್ತದೆ. ಅಂತೆಯೇ ಆತ್ಮಗುಣಗಳಿಗೂ, ಮಾನವ ಮೌಲ್ಯಗಳಿಗೂ ನೇರ ಸಂಬಂಧವಿಲ್ಲ. ಅದು ಮತಕೋಲಾಹಲ ಎಂದು ಆಕ್ಷೇಪಿಸಲ್ಪಟ್ಟಿದೆ…

Read More

ತುಮಕೂರು ನಿಮ್ಮ ನಾಯಕತ್ವ, ಬದ್ಧತೆ ಮತ್ತು ದೂರದೃಷ್ಟಿ ಇಡೀ ರಾಜ್ಯಕ್ಕೆ ಸ್ಫೂರ್ತಿಯಾಗಿದೆ. ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ಮುನ್ನಡೆಸುತ್ತಿರುವ ನಿಮಗೆ ದೇವರು ಉತ್ತಮ ಆರೋಗ್ಯದ ಜೊತೆಗೆ ದೀರ್ಘಾಯುಷ್ಯ ನೀಡಲಿ ಎಂದು ಮಾಜಿ ಶಾಸಕರಾದ ಬಿ.ಸುರೇಶಗೌಡರ ಜನ್ಮದಿನಕ್ಕೆ ಮಾಜಿ ಸಂಸದ ಮುದ್ದಹನುಮೇಗೌಡ ಶುಭ ಕೋರಿದರು. ಅ10 ರಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಗ್ಗೆರೆ ಗ್ರಾಮದ ಗಂಗಾಧರಯ್ಯ ಮೆಮೋರಿಯಲ್ ಹಾಲ್ ನಲ್ಲಿ ಮಾಜಿ ಶಾಸಕ ಸುರೇಶಗೌಡರ 57 ನೇ ಜನ್ಮದಿನದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೆಜೆಪಿ ಬಿಜೆಪಿ ಆದಾಗಲೂ ಕೂಡ ಗೆಲುವು ಸಾದಿಸಿದ್ದ ನಾಯಕ ರಾಜ್ಯದಲ್ಲಿ ಕೆಜೆಪಿ ಬಿಜೆಪಿ ಆದಾಗ ಇಡಿ ರಾಜ್ಯದಲ್ಲಿ ಮತಗಳು ಇಬ್ಬಾಗ ಆದಾಗಲು ಕೂಡಾ ಗ್ರಾಮಾಂತರ ಕ್ಷೇತ್ರದಲ್ಲಿ ಮತಗಳ ವಿಭಜನೆ ಆಗಲಿಲ್ಲ ದುರಾದೃಷ್ಟವಶಾತ್ 2018 ರಲ್ಲಿ ಅವರಿಗೆ ಸೋಲಾಗಿದೆ ಅದು ಅವರ ಸೋಲಲ್ಲ ನಿಮ್ಮೆಲ್ಲರ ಸೋಲು 2023 ರಲ್ಲಿ ರಾಜ್ಯದಲ್ಲಿ ಮೊದಲ ಗೆಲವು ಸುರೇಶಗೌಡರದ್ದಾಗಬೇಕು ಇದಕ್ಕೆ ನಿಮ್ಮೆಲ್ಲರ ಶ್ರಮ ಬಹಳ ಮುಖ್ಯವಾಗುತ್ತದೆ ಎಂದು ತುಮಕೂರು ನಗರ…

Read More

ತುಮಕೂರು ಅಪಘಾತವಾದ ಕಾರು ನಂಬರ್ ಫಲಕ ಬೇರೆ ವಾಹನಕ್ಕೆ ಅಳವಡಿಸಿ ಎಫ್‍ಸಿ(ಅರ್ಹತಪತ್ರ) ಮಾಡಿಸಿಕೊಳ್ಳಲು ಬಂದ ಕಾರು ಮಾಲೀಕ ಆರ್‍ಟಿಒ ಕಚೇರಿಯ ಅಧಿಕಾರಿಗಳಿಗೆ ಸಿಕ್ಕಿ ಹಾಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಏಂ-06-ಂಂ-3691 ಟಯೋಟೊ ಇಟಿಯೋಸ್ ಕಾರಿನ ಮಾಲೀಕ ರಾಮಸ್ವಾಮಿ ತನ್ನ ಟ್ಯಾಕ್ಸಿ ಕಾರನ್ನು ಅಪಘಾತ ಮಾಡಿ,ಶೋರೂಂನ್ಲಲಿ ರಿಪೇರಿಗೆ ಬಿಟ್ಟು,ಇನ್ಸುರೇನ್ಸ್ ಪಡೆದುಕೊಳ್ಳಲು ಬೇರೆ ವ್ಯಕ್ತಿಯ ವೈಟ್ ಬೋರ್ಡ್‍ನ ಕಾರಿಗೆ ನಂಬರ್ ಪ್ಲೇಟ್ ಅಳವಡಿಸಿಕೊಂಡು ಆರ್‍ಟಿಒ ಕಚೇರಿಗೆ ಎಫ್‍ಸಿ(ಅರ್ಹತಪತ್ರ) ಮಾಡಿಸಿಕೊಳ್ಳಲು ಬಂದಿದ್ದನು,ಆರ್‍ಟಿಒ ಇನ್ಸ್‍ಪೆಕ್ಟರ್ ಸದ್ರುರುಲ್ಲಾ ಷರೀಪ್ ಅವರು ವಾಹನವನ್ನು ಪರಿಶೀಲನೆ ನೆಡೆಸುವ ಸಂದರ್ಭದಲ್ಲಿ ಅನುಮಾನ ಬಂದ ತಕ್ಷಣ ಸದರಿ ತಂದಿದ್ದ ಕಾರನ್ನು ಪರಿಶೀಲಿಸಿದ್ದಾಗ ಅಪಘಾತ ಆಗಿರುವ ಕಾರಿನ ನಂಬರ್ ಪ್ಲೇಟ್‍ನ್ನು ಬೇರೆ ಕಾರಿಗೆ ಅಳವಡಿಸಿ ಎಫ್‍ಸಿ ಮಾಡಿಸಿಕೊಳ್ಳಲು ಬಂದಿರುವುದಾಗಿ ತಿಳಿಯುತ್ತದೆ.ಕೂಡಲೇ ಷರೀಪ್ ಅವರು ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತಂದು ಕೂಡಲೇ ವಾಹನವನ್ನು ಚಾರ್ಸಿ ನಂಬರ್ ಹಾಕಿ ಪರಿಶೀಲಿಸಿದಾಗ ಬೇರೆ ವಾಹನ ತಂದಿರುವುದಾಗಿ ಸತ್ಯ ಬಯಲಾಗುತ್ತದೆ. ಮಾಲೀಕ ರಾಮಸ್ವಾಮಿಯನ್ನು ವಿಚಾರಿಸಿದಾಗ ಸತ್ಯವನ್ನು ಒಪ್ಪಿಕೊಂಡು ಹೌದು ನಾನು ಬೇರೆ…

Read More

ತುಮಕೂರು ಕರ್ನಾಟಕ ಸರಕಾರದ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಜನರಿಗೆ ಸಾಲ, ಸೌಲಭ್ಯ ಕೊಡಿಸುವುದಾಗಿ ನಂಬಿಸಿ, ಗುಬ್ಬಿ ತಾಲೂಕು ಕೊಮ್ಮನಹಳ್ಳಿಯ ಗುರುಸ್ವಾಮಿ ಕೆ.ಆರ್.ಬಿನ್ ರಂಗಶಾಮಯ್ಯ ನೂರಾರು ಜನರಿಂದ 10 ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡಿ, ಪರಾರಿಯಾಗಿದ್ದು,ಇತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ,ಗುಬ್ಬಿ ತಾಲೂಕಿನ ಹತ್ತಾರು ಜನರು ಇಂದು ಕುಪ್ಪೂರು ಶ್ರೀಧರನಾಯಕ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ನಗರದ ಎಸ್.ಪಿ.ಕಚೇರಿಗೆ ಮನವಿ ಸಲ್ಲಿಸಿದ ಗುಬ್ಬಿ ತಾಲೂಕಿನ ಸಾಗಸಂದ್ರದ ಬಸವರಾಜು,ನಾಗಣ್ಣ,ಶಂಕರಮ್ಮ,ನಟರಾಜು ಉನಗನಾಲದ ಕೃಷ್ಣಮೂರ್ತಿ,ಕೆರೆಮಾದನಹಳ್ಳಿಯ ಬಸವರಾಜು,ಮಹಾಲಿಂಗಪ್ಪ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರು, ಗುರುಸ್ವಾಮಿ ಕೆ.ಆರ್.ಅವರು ನನಗೆ ಶಾಸಕರು,ಸಚಿವರು,ನಿಗಮದ ಅಧ್ಯಕ್ಷರುಗಳು ಗೊತ್ತು ಎಂದು ಹೇಳಿ,ನಿಮಗೆ ನಿಗಮದವತಿ ಯಿಂದ ಗಂಗಕಲ್ಯಾಣದಲ್ಲಿ ಕೊಳವೆ ಬಾವಿ, ನೇರ ಸಾಲದಲ್ಲಿ ಟ್ಯಾಕ್ಟರ್ ಖರೀದಿಗೆ ಸಾಲ,ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ ಕೊಡಿಸುವುದಾಗಿ ಹತ್ತಾರು ಸಾವಿರ ರೂ ಪಡೆದು, ಪರಾರಿಯಾಗಿದ್ದಾನೆ. ಗುರುಸ್ವಾಮಿ ಕೆ.ಆರ್. ಬಿನ್ ರಂಗಶಾಮಯ್ಯ ಅವರು ನಮ್ಮ ಬಳಿ ವ್ಯವಹಾರ ನಡೆಸುವಾಗ ನೀಡಿದ್ದ ಎರಡು ಪೋನ್ ನಂಬರ್ ಗಳಿಗೆ ಕರೆ…

Read More