Author: News Desk Benkiyabale

ಗುಬ್ಬಿ ನಿಟ್ಟೂರುನ ದೇವಾಲಯ ವೊಂದರಲ್ಲಿ ದಲಿತ ಕುಟುಂಬಕ್ಕೆ ದೇವಾಲಯದ ಒಳ ಪ್ರವೇಶ ನಿರಾಕರಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಇಂದು ತಹಸೀಲ್ದಾರ್ ಬಿ. ಆರತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮಣ್ಣ ಹಾಗೂ ಇಓ ಶಿವಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೇವಾಲಯದ ಟ್ರಸ್ಟ್ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರ ಸಭೆಯನ್ನು ನಡೆಸಿ ಸಮಾಜದಲ್ಲಿ ಸಾಮರಸ್ಯ ಮೂಡಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ದಲಿತ ಮುಖಂಡರನ್ನು ದೇವಾಲಯದ ಒಳ ಪ್ರವೇಶ ಮಾಡಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮಣ್ಣ ಮಾತನಾಡಿ ಪೂಜೆಯ ವಿಚಾರವಾಗಿ ಹಾಗೂ ದಲಿತರ ಒಳ ಪ್ರವೇಶ ಕ್ಕೆ ನಿರಾಕರಣೆಯ ಯಿಂದಾಗಿ ಗೊಂದಲ ಸೃಷ್ಟಿ ಯಾಗಿ ದೇವಾಲಯದ ಅರ್ಚಕ ಹಾಗೂ ಟ್ರಸ್ಟ್ ಸದಸ್ಯರ ನಡುವಿನ ಸಂಬಂಧ ವಿವರ ಪಡೆದು ಇನ್ನೂ ಮುಂದೆ ಯಾವುದೇ ಈ ರೀತಿಯ ಅಹಿತಕರ ಘಟನೆ ನಡೆಯದಂತೆ ಎರಡು ಪಂಗಡಗಳಿಗೆ ತಿಳಿಸಿ ದೇವಾಲಯಕ್ಕೆ ಪೂಜೆ ಹಾಗೂ ಬೇರೆ ಬೇರೆ…

Read More

ತುಮಕೂರು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಸಾಲ ಸೌಲಭ್ಯ ಕೊಡಿಸುವುದಾಗಿ ವಂಚಿಸಿ ನಾಮ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಫಲಾನುಭವಿಗಳಿಗೆ ಸಾಲ ಸೌಲಭ್ಯವನ್ನು ಕೊಡಿಸುವುದಾಗಿ ಹೇಳಿ 40 ಲಕ್ಷ ಹಣವನ್ನು ವಂಚನೆ ಮಾಡಿ ಪರಾರಿಯಾಗಿರುವ ಘಟನೆ ಗುಬ್ಬಿ ತಾಲೂಕಿನಲ್ಲಿ ನಡೆದಿದೆ. ಮಹರ್ಷಿ ವಾಲ್ಮೀಕಿ ಸಂಘ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ ನಿಗಮ ಮಂಡಳಿಯಲ್ಲಿ ಸಾಲ ಸೌಲಭ್ಯವನ್ನು ಕೊಡಿಸುವುದಾಗಿ ಹೇಳಿ ನಂಬಿದ ಜನತೆಯಿಂದ 10ಲಕ್ಷ ವಂಚನೆ ಮಾಡಿದ್ದೇನೆ ಎಂದು ಹೇಳಿ ಕುಪ್ಪೂರು ಶ್ರೀಧರ್ ನಾಯಕ ಸುಳ್ಳು ಆರೋಪ ಮಾಡಿದ್ದು, ಅದು 10 ಲಕ್ಷವಲ್ಲ 40 ಲಕ್ಷ ಹಣವನ್ನು ಫ್ಯಲಾನುಭವಿಗಳಿಂದ ಪಡೆದು ನನ್ನ ಸಂಬಂಧಿ ಕುಮುದಾ ಎಂಬಾಕೆಯ ಖಾತೆಗೆ ಜಮೆ ಮಾಡಿರುವುದಾಗಿ ತಿಳಿಸಿದ ಅವರು ಗುಬ್ಬಿ ತಾಲೂಕಿನ ವಾಲ್ಮೀಕಿ ಬಂಧುಗಳ ಮುಖಾಂತರ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕುಮುದಾ ಎಂಬಾಕೆ ನಿಗದಲ್ಲಿ ಗುತ್ತಿಗೆ…

Read More

ತುಮಕೂರು ಕರ್ನಾಟಕ ಸರ್ಕಾರಿ ನೌಕರರ ಸಂಘ ತುಮಕೂರು ಭವನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರಿ ಅಡುಗೆಯವರು ಹಾಗೂ ಅಡುಗೆ ಸಹಾಯಕರ ಕ್ಷೇಮಾಭಿವೃದ್ಧಿ ಸಂಘ ರಿ ಬೆಂಗಳೂರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರಸಂಘದೊಂದಿಗೆ ಸಂಯೋಜನೆಗೊಂಡಿದ್ದು ಜಿಲ್ಲಾ ಶಾಖೆ ತುಮಕೂರು ವತಿಯಿಂದ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಉದ್ಘಾಟನೆಯನ್ನು ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷರಾದ ನರಸಿಂಹರಾಜು ಎನ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕರಾದಂತಹ ಗುರುಮೂರ್ತಿ ನೆರವೇರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರಿ ಅಡುಗೆಯವರು ಹಾಗೂ ಅಡುಗೆ ಸಹಾಯಕರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಶಾಖೆ ತುಮಕೂರು ಅಧ್ಯಕ್ಷರಾದ ಎಸ್ ಜಿ ನಿರ್ಮಲ ಉಪಾಧ್ಯಕ್ಷರಾದ ಬಸವರಾಜು ಎಸಿ ಖಜಾಂಜಿಗಳಾದ ಶಶಿಕುಮಾರ್ ಪ್ರಧಾನ ಕಾರ್ಯದರ್ಶಿಗಳಾದ ನಿರಂಜನ್ ಆರ್ ಯಾದವ್ ಸಂಘಟನಾ ಕಾರ್ಯದರ್ಶಿ ಮಮತಾ ಕೆಎಸ್ ಕಾನೂನು ಸಲಹೆಗಾರರದಂತಹ ಸಿದ್ದೇಶ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯದರ್ಶಿ ವಾಣಿಶ್ರೀ ಯಾರ್…

Read More

ತುಮಕೂರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತದ ಕನಸು ನನಸಾಗಬೇಕೆಂದರೆ ರೈತರು ಉತ್ತಮ ಬೆಳೆ ಬೆಳೆದು ಆದಾಯವನ್ನು ದುಪ್ಪಟ್ಟು ಹೆಚ್ಚಿಸಿಕೊಂಡಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಸಂಸದ ಜಿ.ಎಸ್. ಬಸವರಾಜು ಅಭಿಪ್ರಾಯಪಟ್ಟರು. ನಗರದ ರೇಷ್ಮೆ ಕೃಷಿ ಉಪನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ರೇಷ್ಮೆ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿಪರ ರೇಷ್ಮೆ ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಬೆಳೆಯುವಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದೆ. ಶೇ.80 ರಷ್ಟು ರೇಷ್ಮೆ ಉತ್ಪಾದನೆ ಮಾಡುತ್ತಿರುವ ರಾಜ್ಯವಾಗಿದೆ ಎಂದರು. ರೇಷ್ಮೆ ಬೆಳೆ ಬೆಳೆಯಲು ಉತ್ತಮ ವಾತಾವರಣವೂ ನಮ್ಮ ರಾಜ್ಯದಲ್ಲಿರುವುದರಿಂದ ಪ್ರತೀ ವರ್ಷ ರೇಷ್ಮೆ ಬೆಳೆ ಬೆಳೆಯುವ ರೈತರು ಹೆಚ್ಚಾಗುತ್ತಿದ್ದಾರೆ. ಇದರಿಂದ ಆತ್ಮನಿರ್ಭರ ಭಾರತ್ ಸಾಕಾರಗೊಳ್ಳಲು ಸಾಧ್ಯವಾಗುತ್ತದೆ ಹೇಳಿದರು. ಇತ್ತೀಷಿನ ದಿನಗಳಲ್ಲಿ ಹೊಸ ಹೊಸ ಸಂಶೋಧನೆ ಮುಖಾಂತರ ರೈತರು ಯಾವ ರೀತಿ ಬೆಳೆ ಬೆಳೆಯಬಹುದು ಎಂಬುದನ್ನು ಕಂಡುಕೊಂಡಿದ್ದು, ರೇಷ್ಮೆ ಕೃಷಿಯ ಮೂಲಕ ಅತ್ಯಂತ ಸಂಪತ್ಪಭರಿತವಾದ ಆದಾಯ ಕೊಡುವ…

Read More

ತುಮಕೂರು ಯುವಜನತೆ ತಮ್ಮ ರಾಷ್ಟ್ರಾಭಿಮಾನವನ್ನು ಚುನಾವಣೆ ಸಂದರ್ಭದಲ್ಲಿ ತೋರಿಸಿದರೆ ಸಾಲದು, ಮಹಿಳೆಯರು, ಮಕ್ಕಳು, ಅಸಾಹಯಕರ ಮೇಲೆ ದೌರ್ಜನ್ಯಗಳಾದಾಗಲೂ ಪ್ರತಿಭಟಿಸುವ ಮೂಲಕ ದೇಶಾಭಿಮಾನವನ್ನು ತೋರಿಸುವ ಅಗತ್ಯವಿದೆ ಎಂದು ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಬಿ.ಎನ್.ಜಗದೀಶ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಕನ್ನಡ ಭವನದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಹಸುಗೂಸುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಜರುಗಿಸುವ ಕಾನೂನು ಬರುವಂತೆ ಸರಕಾರಗಳ ಮೇಲೆ ಒತ್ತಡ ತರುವ ಕೆಲಸ ಮಾಡಬೇಕಿದೆ ಎಂದರು. ಜಯಕರ್ನಾಟಕ ಸಂಘಟನೆ ಸ್ವಾರ್ಥಕ್ಕಾಗಿ ಹುಟ್ಟಿಕೊಂಡ ಸಂಘಟನೆಯಲ್ಲ.ಬಡವರು,ಅಶಕ್ತರ ಪರವಾಗಿ ಸಾಮಾಜಿಕ ಕಳಕಳಿಯಿಂದ ಹುಟ್ಟಿಕೊಂಡ ಸಂಸ್ಥೆಯಾಗಿದೆ.ಇಂದು ಇಡೀ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಕಳೆದ ಎರಡು ದಿನಗಳ ಹಿಂದೆ ಮಂಡ್ಯದಲ್ಲಿ ಲೈಗಿಂಕ ದೌರ್ಜನ್ಯಕ್ಕೆ ಒಳಗಾಗಿ ಹತ್ಯೆಗೀಡಾದ ಕುಮಾರಿ ದಿವ್ಯಾ ಅವರ ಆತ್ಮಕ್ಕೆ ಶಾಂತಿ ಕೋರಿದ್ದೇವೆ. ಇದು ಸಾಲದು, ಇಂತಹ ಕೃತ್ಯವೆಸಗುವ ವ್ಯಕ್ತಿಗಳಿಗೆ ತಕ್ಷಣವೇ ಗಲ್ಲು ಶಿಕ್ಷೆ ವಿಧಿಸುವಂತಹ ಕಾನೂನು ಜಾರಿಗೆ ಬರುವಂತೆ…

Read More

ತುಮಕೂರು ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಉನ್ನತವಾಗಿ ಬೆಳೆದು ಪೆÇೀಷಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿಯನ್ನು ತರಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನೀಸ ಹೇಳಿದರು. ಇಲ್ಲಿನ ಗಾಂಧಿನಗರದಲ್ಲಿರುವ ಸೈಂಟ್ ಮೇರಿಸ್ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಅಂತರ್‍ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರುವಾಗ ಜಾಗ್ರತೆಯಿಂದ ಇರಬೇಕು, ಪೆÇೀಷಕರು ಮಕ್ಕಳಿಗೆ ಉತ್ತಮವಾದ ಉಡುಪು ನೀಡಬೇಕು, ಮತ್ತು ನಿಮ್ಮ ರಕ್ಷಣೆ ನಿಮ್ಮ ಕೈಯಲ್ಲೇ ಇದೆ. ಬೇರೆಯವರಿಗೆ ಆಕರ್ಷಣೆಯಾಗದ ರೀತಿಯಲ್ಲಿ ವಿದ್ಯಾರ್ಥಿಗಳು ಉಡುಪು ಧರಿಸಬೇಕು, ಅತ್ಯಾಚಾರಗಳ ಮತ್ತು ನೂತನ ವ್ಯಕ್ತಿಗಳ ಸಂಪರ್ಕದಿಂದ ಹಾಗೂ ಪರಿಚಯಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು. ಮಕ್ಕಳ ಮೇಲೆ ದೌರ್ಜನ್ಯ ನಡೆಯುವುದನ್ನು ತಪ್ಪಿಸಲು ಕಠಿಣ ಶಿಕ್ಷೆ ಒಳಗೊಂಡ ಪೆÇೀಕ್ಸೊ ಕಾಯ್ದೆ ಬಗ್ಗೆ ತಾವೆಲ್ಲರೂ ತಿಳಿದುಕೊಂಡು ಇತರರಿಗೂ ಜಾಗೃತಿ…

Read More

ತುಮಕೂರು ರಾತ್ರಿ ಸುರಿದ ಭಾರಿ ಮಳೆಯ ಕಾರಣದಿಂದ ನಗರದ ವಿವಿಧೆಡೆನೀರು ನುಗ್ಗಿ ಸಮಸ್ಯೆಉಂಟಾಗಿತ್ತು. ನಗರ ಪಾಲಿಕೆ ಮೇಯರ್ ಪ್ರಭಾವತಿ, ಉಪ ಮೇಯರ್ ಟಿ.ಕೆ.ನರಸಿಂಹಮೂರ್ತಿ, ಆಯುಕ್ತೆರೇಣುಕಾಅವರೊಂದಿಗೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಶುಕ್ರವಾರವಿವಿಧೆಡೆಭೇಟಿ ಪರಿಶೀಲನೆ ಮಾಡಿದರು. 8 ಮತ್ತು 9ನೇ ವಾರ್ಡ್ ವ್ಯಾಪ್ತಿಯಗುಬ್ಬಿಗೇಟ್‍ರಿಂಗ್‍ರಸ್ತೆಯಲ್ಲಿಚರಂಡಿ ನೀರುಅಕ್ಕಪಕ್ಕದ ಅಂಗಡಿಗಳಿಗೆ ನುಗ್ಗಿ ಅವಾಂತರಉಂಟು ಮಾಡಿತ್ತು.ಅವೈಜ್ಞಾನಿಕಚರಂಡಿ ವ್ಯವಸ್ಥೆಯಿಂದ ಈ ಪರಿಸ್ಥಿತಿ ಬಂದಿದೆ,ಕೂಡಲೇ ಸರಿಪಡಿಸಿ ಎಂದುಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಮೇಯರ್, ಉಪ ಮೇಯರ್,ಆಯುಕ್ತರು, ಆ ಭಾಗದ ನಗರಪಾಲಿಕೆ ಸದಸ್ಯ ಸೈಯದ್ ನಯಾಜ್‍ಅಹ್ಮದ್, ಕಾರ್ಯಪಾಲಕಇಂಜಿನಿಯರ್ ಆಶಾ ಇತರೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಪರಿಶೀಲಿಸಿ, ಸಾರ್ವಜನಿಕರ ಆಹವಾಲು ಸ್ವೀಕರಿಸಿದರು. ನಗರದ ಬಹುತೇಕ ಚರಂಡಿಗಳು ಕಸ ತುಂಬಿಕೊಂಡು ನೀರು ಸರಾಗಹರಿಯದ ದುಸ್ಥಿತಿಯಲ್ಲಿವೆ. ಮಳೆ ಸುರಿದಾಗ ಇಂತಹ ಅವಾಂತರ ಉಂಟಾಗುತ್ತದೆ.ಅಂತಹಕಡೆ ಚರಂಡಿ ಕಸ, ಹೂಳು ತೆಗೆದು ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಉಪ ಮೇಯರ್ ಟಿ.ಕೆ.ನರಸಿಂಹಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು. ರಾತ್ರಿ ಸುರಿದ ಮಳೆಯಿಂದ ಅಮಾನಿಕೆರೆಗೆ ಒಳಹರಿವು ಹೆಚ್ಚಾಗಿ ಬೆಳಗ್ಗೆಯಿಂದ ಕೆರೆಭರ್ತಿಯಾಗಿಕೋಡಿ ನೀರುಭೋರ್ಗರೆದು ಹರಿಯುತ್ತಿದೆ. ಮೇಯರ್,…

Read More

ಲಖನೌ ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಕಳೆದ ವಾರ 11 ಬಾರಿ  ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಇದು ದ್ವೇಷದ ಅಪರಾಧ ಎಂದು ಆತನ ಕುಟುಂಬ ಆರೋಪಿಸಿದೆ. ಸಿಡ್ನಿಯ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‍ಡಿ ವ್ಯಾಸಂಗ ಮಾಡುತ್ತಿರುವ ಐಐಟಿ ಪದವೀಧರ ಶುಭಂ ಗಾರ್ಗ್ 28 ಅವರ ಮೇಲೆ ಅಕ್ಟೋಬರ್ 6 ರಂದು ದಾಳಿ ನಡೆದಿತ್ತು. ದಾಳಿ ನಡೆದ ಒಂದು ವಾರದ ನಂತರ ಉತ್ತರ ಪ್ರದೇಶದ ಆಗ್ರಾದಲ್ಲಿರುವ ಅವರ ಕುಟುಂಬಕ್ಕೆ ಇಂದು ವೀಸಾ ನೀಡಲಾಗಿದೆ. ಶುಭಂ ಸಹೋದರನಿಗೆ ಆಸ್ಟ್ರೇಲಿಯಾಕ್ಕೆ ತೆರಳಲು ವೀಸಾ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಇಂದು ಎನ್‍ಡಿಟಿವಿಯೊಂದಿಗೆ ಮಾತನಾಡಿದ ಅವರು, ಅವರು ಸಹಾಯಕ್ಕಾಗಿ ಮನವಿ ಮಾಡುವಾಗ ಕ್ಯಾಮೆರಾ ಮುಂದೆ ಅತ್ತಿದ್ದಾರೆ. ಐಐಟಿ-ಮದ್ರಾಸ್‍ನಲ್ಲಿ ಪದವಿ ಪಡೆದ ನಂತರ ಶುಭಂ ಸೆಪ್ಟೆಂಬರ್ 1 ರಂದು ಆಸ್ಟ್ರೇಲಿಯಾಕ್ಕೆ ತೆರಳಿದ್ದರು.ಅಕ್ಟೋಬರ್ 6ರಂದು ರಾತ್ರಿ 10.30ರ ಸುಮಾರಿಗೆ ಎಟಿಎಂನಿಂದ ಹಣದೊಂದಿಗೆ ವಾಪಸಾಗುತ್ತಿದ್ದಾಗ ವ್ಯಕ್ತಿಯೊಬ್ಬ ಹಣಕ್ಕೆ ಬೇಡಿಕೆಯಿಟ್ಟು ಚಾಕು ತೋರಿಸಿ ಬೆದರಿಸಿದ್ದಾನೆ. ಅವನು ನಿರಾಕರಿಸಿದಾಗ, ದಾಳಿಕೋರ ಹಲವು…

Read More

ಗುಬ್ಬಿ ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಇಂಜಿನಿಯರ್ ಗಳು ಕೇವಲ ದುಡ್ಡು ಮಾಡುವ ಕೆಲಸ ಮಾಡುತ್ತಾ ಇದ್ದಾರೆ ಎಂದು ಕಿಡಿಕಾರಿದ ಶಾಸಕ ಎಸ್ ಆರ್ ಶ್ರೀನಿವಾಸ್. ತಾಲೂಕಿನ ಬೆಣಚಿಗೆರೆ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮನೆ ಮನೆ ನಳ ಸಂಪರ್ಕ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಮಾತನಾಡಿದ ಅವರು ಹಿಂದಿನ ಬಾರಿ ಈ ಯೋಜನೆಯಡಿ 60 ಕಾಮಗಾರಿಗಳನ್ನು ಮುಗಿದಿದ್ದು, 70 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು ತಾಲೂಕಿನಲ್ಲಿ ಗ್ರಾಮೀಣಾ ಪ್ರದೇಶದಲ್ಲಿ 22 ಕೋಟಿ ಹಣದಿಂದ ಸಿಸಿ ರಸ್ತೆ ಕಾಮಗಾರಿಗಳನ್ನು ಹಂತ ಹಂತವಾಗಿ ಮುಗಿಸುತ್ತಾ ಇದ್ದು, ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ 25 ಕೋಟಿ ಹಣವನ್ನು ಈಗಾಗಲೇ ಟೆಂಡರ್ ಪ್ರಕ್ರಿಯೆ ಗೆ ನೀಡಿದ್ದು, ಪಟ್ಟಣದ ಒಳಚರಂಡಿ ವ್ಯವಸ್ಥೆಗು ಈಗಾಗಲೇ ಹಣ ಬಿಡುಗಡೆಯಾಗಿದ್ದು, ಕೆಲವು ಕಾನೂನು ತೊಡಕುಗಳ ಗಳಿಂದ ಕಾಮಗಾರಿಯು ಸ್ಥಗಿತವಾಗಿದೆ ಎಂದ ಅವರು ಫಲಾನುಭವಿಗೆ ಹಣ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿಯು ಪೂರ್ಣವಾಗಲಿದೆ ಎಂದು ತಿಳಿಸಿದರು. ಪಟ್ಟಣದ ರಸ್ತೆಯ…

Read More

ಬೆಂಗಳೂರು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಆರೋಪದ ಮೇಲೆ ಮಂಡ್ಯ ಜಿಲ್ಲೆಯ ಮಳವಳ್ಳಿಯ ಪೆÇಲೀಸರು 51 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಕಾಂತರಾಜು, 10 ವರ್ಷದ ಬಾಲಕಿ ದಿವ್ಯಾ ಟ್ಯೂಶನ್ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಚಾಕಲೇಟ್ ಕೊಟ್ಟು ಪುಸಲಾಯಿಸಿ ಕರೆದೊಯ್ದಿದ್ದಾನೆ. ಬಾಲಕಿ ಟ್ಯೂಶನ್ ಗೆ ಹೋಗುತ್ತಿರುವ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಕಾಂತರಾಜು ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಕೊಂದು ಹಾಕಿದ್ದಾನೆ. ನಂತರ ಮಳವಳ್ಳಿಯ ಮೈಸೂರು ರಸ್ತೆಯ ಪಕ್ಕದಲ್ಲಿ ನಿರ್ಮಾಣ ಹಂತದ ಕಟ್ಟಡದ ಸಂಪ್ ಒಳಗೆ ಮೃತದೇಹವನ್ನು ಎಸೆದು ಹೋಗಿದ್ದಾನೆ. ಬಾಲಕಿಯ ಪೆÇೀಷಕರು ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ ನಂತರ ಹುಡುಕಾಡಿದ ಮಳವಳ್ಳಿ ಪೆÇಲೀಸ್ ಠಾಣೆಯ ವಿಶೇಷ ತಂಡಕ್ಕೆ ಕಾಂತರಾಜು ಈ ಕುಕೃತ್ಯ ಎಸಗಿರುವ ಬಗ್ಗೆ ಸಂದೇಹ ಬಂತು. ಕಾಂತರಾಜು ಕಳೆದ 15 ವರ್ಷಗಳಿಂದ ಈ ಟ್ಯೂಶನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಕೂಡ ಬಾಲಕಿಗೆ ಅನೇಕ ಬಾರಿ ಚಾಕಲೇಟ್ ನೀಡಿದ್ದನಂತೆ. ಮೊನ್ನೆ…

Read More