ತುಮಕೂರು: ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿ ಜಲಸಂಗ್ರಹಾಗಾರ ನೀರಿಲ್ಲದೆ ಖಾಲಿಯಾಗಿ ಕುಡಿಯುವ ನೀರಿಗೆ ಅಭಾವ ಸೃಷ್ಠಿಯಾಗುತ್ತಿರುವುದನ್ನು ಮನಗಂಡಿರುವ ರಾಜ್ಯ ಸರ್ಕಾರ ರಾತ್ರಿಯಿಂದಲೇ ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ನೀರು ಹರಿಸಲು ತೀರ್ಮಾನಿಸಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಠಿಯಾಗುತ್ತಿರುವ ಬಗ್ಗೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಶಾಸಕರಾದ ಜ್ಯೋತಿಗಣೇಶ್, ಡಾ. ರಾಜೇಶ್‍ಗೌಡ ಅವರು ನನ್ನನ್ನು ಭೇಟಿ ಮಾಡಿ ಜಿಲ್ಲೆಗೆ ಕುಡಿಯುವ ನೀರಿಗೆ ಅನುಕೂಲವಾಗುವಂತೆ ಹೇಮಾವತಿ ನೀರು ಹರಿಸುವಂತೆ ಒತ್ತಾಯಿಸಿದ್ದರು. ಜತೆಗೆ ಮಾಜಿ ಸಂಸದ ಮುದ್ದಹನುಮೇಗೌಡ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದನ್ನೆಲ್ಲ ಗಮನಿಸಿ ರಾತ್ರಿಯಿಂದಲೇ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು. ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಜೂ. 17 ರಂದು ಹಮ್ಮಿಕೊಂಡಿರುವ ಬಸವಣ್ಣ ಹಾಗೂ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ…
Author: News Desk Benkiyabale
ತುಮಕೂರು: ನಾಗರಿಕರು ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಕೊಡುಗೆ ನೀಡಬೇಕು. ಹೀಗಾದಾಗ, ಶಿಕ್ಷಣ ಸಂಸ್ಥೆಗಳು ಗುಣಮಟ್ಟದಲ್ಲಿ ಮೇಲ್ದರ್ಜೆಗೇರುವ ಜೊತೆಗೆ ನಾಗರಿಕರ ಸಬಲೀಕರಣವೂ ಸಾಧ್ಯವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾನಿಲಯದ ತಿಪಟೂರು ಸ್ನಾತಕೋತ್ತರ ಕೇಂದ್ರ “ಕಲ್ಪಸಿರಿ”ಯ ನಿರ್ಮಾಣಕ್ಕೆ ಹತ್ತಿರದ ರಂಗಾಪುರದಲ್ಲಿ ಸೋಮವಾರ ಭೂಮಿಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಇಪ್ಪತ್ತೊಂದನೇ ಶತಮಾನವು ಜ್ಞಾನಾಧಾರಿತ ಸಮಾಜವಾಗಿದೆ. ಇಂತಹ ಶಿಕ್ಷಣ ಸಂಸ್ಥೆಗಳು ಸುಸ್ಥಿರವಾಗಿರಬೇಕೆಂದರೆ ಗುಣಮಟ್ಟ ಮುಖ್ಯ. ಇಂತಹ ಕೇಂದ್ರಗಳು ಸ್ಥಳೀಯವಾಗಿ ಪ್ರತಿಭೆಯನ್ನು ಉತ್ತೇಜಿಸುವ ಜೊತೆಗೆ ಇಡೀ ದೇಶದೆಲ್ಲೆಡೆಯ ಪ್ರತಿಭೆಗಳನ್ನು ಇಲ್ಲಿಗೆ ಸೆಳೆಯುವ ರೀತಿಯಲ್ಲಿ ಬೆಳೆಯಬೇಕು. ಇದು ಸಾಧ್ಯವಾದಾಗ, ವೈವಿಧ್ಯತೆಯನ್ನು ಉಳಿಸಿಕೊಂಡು ನಮ್ಮತನದ ಛಾಪನ್ನು ಒತ್ತಿದಂತಾಗುತ್ತದೆ ಎಂದು ಸಚಿವರು ವಿವರಿಸಿದರು. ಯಾವ ಜಾಗದಲ್ಲಿ ಗುಣಮಟ್ಟದ ಶಿಕ್ಷಣ ಇರುತ್ತದೋ ಅದು ಸಮೃದ್ಧತೆಯ ತಾಣವಾಗುತ್ತದೆ. ಇಲ್ಲಿ 16 ಎಕರೆ ಕ್ಯಾಂಪಸ್ ತಲೆಯೆತ್ತಲಿದ್ದು, ಎಂ.ಕಾಂ, ಎಂಸಿಎ ಕೋರ್ಸ್ ಗಳು ಇರಲಿವೆ. ಜಿಲ್ಲೆಯ ಬಿದರೆಕಟ್ಟೆಯಲ್ಲಿ 44 ಕೋಟಿ ವೆಚ್ಚದಲ್ಲಿ ಹೊಸ ಕ್ಯಾಂಪಸ್ ನಿರ್ಮಾಣ ಕಾರ್ಯ ನಡೆದಿದೆ. ಸಿರಾದಲ್ಲಿ…
ತುಮಕೂರು: ಕೆನಡಾ ದೇಶದ ಸಂಸದ ಶ್ರೀ ಚಂದ್ರ ಆರ್ಯ ಹಾಗೂ ಅವರ ಕುಟುಂಬ ಸದಸ್ಯರನ್ನು ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಅವರು ಸೋಮವಾರ ಭೇಟಿ ಮಾಡಿದರು. ಈ ವೇಳೆ ರಾಜ್ಯ ಮತ್ತು ಕೇಂದ್ರವನ್ನು ಒಳಗೊಂಡಂತೆ ಇತ್ತೀಚಿನ ರಾಜಕೀಯ ವಿದ್ಯಾಮಾನಗಳು ಮತ್ತು ಸಾಮಾಜಿಕ ವಿಚಾರಗಳ ಕುರಿತು ಕೆಲಕಾಲ ಆರ್.ರಾಜೇಂದ್ರ ಅವರು ಸಂಸದರೊಂದಿಗೆ ಚರ್ಚೆಯನ್ನು ನಡೆಸಿದರು. ಇದೇ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಸಿಂಗದಳ್ಳಿ ರಾಜಕುಮಾರ್ ಹಾಗೂ ಮುಂತಾದವರು ಹಾಜರಿದ್ದರು.
ತುಮಕೂರು ನೌಕರರ ವಿರೋಧಿ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ.ಇದನ್ನು ಅರಿತು ಸಂಘಟಿತರಾಗಿ ಹೋರಾಟಮಾಡಿದರೆ ಮಾತ್ರ ಹಕ್ಕುಗಳು ಪಡೆದುಕೂಳ್ಳಬಹುದು ಇಲ್ಲದಿದ್ದರೆ ಕೆಲಸದಿಂದ ವಂಚಿತರಾಗಬೇಕಾಗುತ್ತದೆ ಎಂದು ಸಿ.ಐ.ಟಿ.ಯುನ ಜಿಲ್ಲಾಧ್ಯಕ್ಷರಾದ ಸೈಯದ್ ಮುಜಿಬ್ ಎಚ್ಚರಿಸಿದರು.ಕರ್ನಾಟಕ ರಾಜ್ಯ ಗ್ರಾಮ ಪಂಚಾಯಾತಿ ನೌಕರರ ಸಂಘ ಸಿ.ಐ.ಟಿ.ಯು ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಹಮ್ಮಿಕೊಂಡಿದ್ದ ತುಮಕೂರು -ಹಾಸನ ಜಿಲ್ಲಾ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು. ಆಳುವ ಸರ್ಕಾರಗಳು ಎಲ್ಲಾ ಹಂತದಲ್ಲೂ ನೌಕರರ ವಿರೋಧಿಯಾಗಿ ನಡೆದುಕೂಳ್ಳುತ್ತದೆ.ನೌಕರರಿಗೆ ವೇತನ ಹೆಚ್ಚಳ ಮಾಡಿ ಎಂದರೆ ಹಣಕಾಸಿಕೂರತೆ ಎಂದು ಹೇಳುತ್ತದೆ ಅದರೆ ಶಾಸಕg Àವೇತನವನ್ನು ಬೆಲೆಏರಿಕೆ ನೆಪ ಹೇಳಿ ಸರ್ವಾನು ಮತದಿಂದ ಹೆಚ್ಚಳಮಾಡಿಕೂಳ್ಳುತ್ತಾರೆ. ಕೆಲವರು ನೌಕರರ ನಡುವೆ ಒಡಕನ್ನು ಉಂಟುಮಾಡುವವರ ಮಾತಿಗೆ ಕೀವಿ ಕೂಡದೆ ಹೋರಾಟ ಮಾಡುವ ಸಂಘಟನೆಯೂಂದಿಗೆ ಮುನ್ನಡೆಯಬೇಕೆಂದು ಕರೆ ನೀಡಿದರು. ಗ್ರಾಮ ಪಂಚಾಯಾತಿ ನೌಕರರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ ಮಾತಾನಾಡುತ್ತಾ ಸತತ ನಾಲ್ಕು ವರ್ಷಗಳ ಹೋರಾಟದ ಪರಿಣಾಮ ಪಂಚಾಯಾತಿ ನೌಕರರ ವೇತನಕ್ಕಾಗಿ ಸರ್ಕಾರವು ಬಜೆಟ್ ನಲ್ಲಿ ಹಣ ಬಿಡುಗಡೆಮಾಡಿದೆ ಕೆಲ…
ತುಮಕೂರು: ಜೀವನದಲ್ಲಿ ಬಸವಣ್ಣನವರ ಆದರ್ಶಗಳನ್ನು ರೂಢಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕರೆ ನೀಡಿದರು. ನಗರದ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, 12ನೇ ಶತಮಾನದಲ್ಲೇ ಬಸವಣ್ಣನವರು ಸಮಾನತೆಯ ಸಂದೇಶವನ್ನು ಸಾರಿದ್ದರು. ಇಂದು ಅದನ್ನು ಪ್ರತಿಯೊಬ್ಬರು ಚಾಚೂತಪ್ಪದೇ ಪಾಲಿಸಬೇಕು ಎಂದರು. ವಿದ್ಯಾರ್ಥಿಗಳು ಬಸವಣ್ಣನವರ ಸಂದೇಶ, ವಚನಗಳನ್ನು ತಿಳಿದುಕೊಳ್ಳುವ ಮೂಲಕ ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಬಸವಣ್ಣನವರ ಕಾಯಕವೇ ಕೈಲಾಸ ಮಾತನ್ನು ಚಾಚೂತಪ್ಪದೇ ಯುವಕರು ಪಾಲಿಸಬೇಕು. ಆಗ ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಬದುಕು ನಡೆಸೋಣ ಎಂದರು. ಉಪನ್ಯಾಸ ನೀಡಿದ ಡಾ. ನಂಜುಂಡಸ್ವಾಮಿ ಅವರು, ಬಸವ ಜಯಂತಿ ಆಚರಣೆಗೆ ಬಂದ ರೀತಿ, ಬಸವಣ್ಣನವರ ಕಾಲದ ವಚನಗಳ ಸಂಶೋಧನೆ, ಸಂರಕ್ಷಣೆ ಬಗ್ಗೆ ತಿಳಿಸಿದರು. ಕಾಲೇಜಿನ ನಿರ್ದೇಶಕರಾದ ಡಾ. ಎಂ.ಎನ್. ಚನ್ನಬಸಪ್ಪ, ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ಶಿವಕುಮಾರಯ್ಯ, ಪ್ರಾಂಶುಪಾಲರು ಮಾತನಾಡಿದರು. ಇದೇ ಸಂದರ್ಭದಲ್ಲಿ…
ತುಮಕೂರು: ಕೇಂದ್ರದ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ನಿರ್ದೇಶಕರಾದ ವೇದಪ್ರಕಾಶ್ ಮಿಶ್ರಾ ಅವರಿಂದು, ಜಿಲ್ಲೆಯಲ್ಲಿ ‘ಜಲಶಕ್ತಿ ಅಭಿಯಾನ’ದಡಿ ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳಲಾದ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ‘ಜಲಶಕ್ತಿ ಅಭಿಯಾನ’ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕುಡಿಯುವ ನೀರು ಮಾನವನ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದ್ದು, ಜಲಮೂಲ ಪ್ರದೇಶಗಳ ಅತಿಕ್ರಮಣ ಕಾನೂನು ಬಾಹಿರ. ಅಂತರ್ಜಲ ಅಭಿವೃದ್ಧಿಯತ್ತ ನಾವುಗಳು ಇಂದು ಗಮನಹರಿಸಬೇಕಾಗಿದೆ. ಹಿಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಸಂತೃಪ್ತ ವಲಯದಲ್ಲಿರುತ್ತಿತ್ತು ಆದರೆ, ಈಗ ಅಂತರ್ಜಲ 1000 ಅಡಿಗೂ ಕೆಳಮಟ್ಟ ತಲುಪಿದ್ದು, ಮಾನವನ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಫೀಡಿಂಗ್ ಕಾಲುವೆಗಳಲ್ಲೂ ಸಹ ಅತಿಕ್ರಮಣ ಆಗದ ಹಾಗೆ ನೋಡಿಕೊಳ್ಳಬೇಕಿದೆ, ಹೀಗಾದಲ್ಲಿ ಮಾತ್ರ ಜಲ ಮೂಲಗಳು ಸಂರಕ್ಷಿಸಲ್ಪಡುತ್ತವೆ. ಕೊಳವೆ ಬಾವಿಗಳು, ಅಚ್ಚುಕಟ್ಟು ಪ್ರದೇಶಗಳು ಮತ್ತು ಜಲ ಮೂಲಗಳ ಪುನರುಜ್ಜೀವನ ಯೋಜನೆಗಳು ನಿರಂತರವಾಗಿ ನಡೆಯುತ್ತಿರಬೇಕು. ಮಹಿಳೆಯರು ಸಹ ಜಲ ಜಾಗೃತಿ ಅಭಿಯಾನಗಳಲ್ಲಿ ಹೆಚ್ಚು ಭಾಗವಹಿಸುವಂತಾಗಬೇಕು ಮತ್ತು ಜಲ ಅಭಿಯಾನದಲ್ಲಿ…
ತುಮಕೂರು: ಬ್ರಕೀದ್ ಹಬ್ಬ ಹಿನ್ನೆಲೆಯಲ್ಲಿ ಮಾಂಸಕ್ಕಾಗಿ ಗೋವುಗಳನ್ನು ಕಡಿಯಲು ಯತ್ನಿಸಿದ ಮೂವರನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಅಮೃತೂರು ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಮೃತೂರು ಸಮೀಪದ ಬಿಸಿನೆಲೆ ಅರಣ್ಯ ಪ್ರದೇಶದಲ್ಲಿ 16 ಹಸುಗಳು ಹಾಗೂ 13 ಕೋಣಗಳನ್ನು ತೆಗೆದುಕೊಂಡು ಹೋಗಿ ಹತ್ಯ ಮಾಡಲು ಯತ್ನಿಸಿದರು. ಈ ವಿಚಾರ ತಿಳಿಯುತ್ತಿದ್ದಂತೆ ಡಿವೈಎಸ್ ಪಿ ನೇತೃತ್ವದಲಲಿ ರಮೇಶ್ ಹಾಗೂ ಸರ್ಕಲ್ ಇನ್ಸೆಪೆಕ್ಟರ್ ಗುರುಪ್ರಸಾದ್ ತಂಡ ನೇತೃತ್ವದಲ್ಲಿ ದಾಳಿ ನಡೆಸಿ, 15 ಹಸುಗಳು ಹಾಗೂ 13 ಕೋಣಗಳನ್ನು ರಕ್ಷಿಸಲಾಗಿದೆ. ಪೆÇಲೀಸರು ಸ್ಥಳಕ್ಕೆ ಧಾವಿಸುವ ವೇಳೆಗಾಗ್ಲೇ ಒಂದು ಹಸುವನ್ನು ಹತ್ಯೆಮಾಡಿ ಮಾಂಸವನ್ನು ತುಂಡುತಾಂಡಾಗಿಸಿದ್ದರು, ಗೋವುಗಳನ್ನು ಕಡಿಯುತ್ತಿದ್ದ ಜಗದೀಶ್, ಮಂಜುನಾಥ್ ಹಾಗೂ ಶಿವು ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಜಾನುವಾರುಗಳನ್ನು ಸಾಗಿಸಲು ಬಳಸಿದ್ದ ಇಂದು ಟಾಟಾ ಏಸ್ ಹಾಗೂ ಎರಡು ಬೈಕ್‍ಗಳು ಜೊತೆಗೆ ಹಸುವಿನ ಮಾಂಸವನ್ನು ವಶ ಪಡಿಸಿದ್ದಾರೆ. ಅಮೃತೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ತುಮಕೂರು: ಕಾಂಗ್ರೆಸ್ ಸಂಪ್ರದಾಯಕ ಮತದಾರರಾದ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಮುಂಬರುವ ಸೆಪ್ಟಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ, ವರ್ಗದ ಕಾರ್ಯಕರ್ತರ ಬೃಹತ್ ಸಮಾವೇಶ ಹಮ್ಮಿಕÉೂಳ್ಳಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಿ.ಜಿ.ನಿಂಗರಾಜು ತಿಳಿಸಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷ ನೀಡುತ್ತಿರುವ ಸುಳ್ಳು ಭರವಸೆಗಳನ್ನು ನಂಬಿ, ದಲಿತ ಯುವಕರು ಕಾಂಗ್ರೆಸ್ ಪಕ್ಷದಿಂದ ದೂರವಾಗುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಯುವಜನತೆಗೆ ಬಿಜೆಪಿ ಹಿಡನ್ ಅಜೆಂಡಾವನ್ನು ತಿಳಿಸಿ, ಕಾಂಗ್ರೆಸ್ ಪಕ್ಷ ತನ್ನ ಆಡಳಿತದ ಅವಧಿಯಲ್ಲಿ ತಳಸಮುದಾಯದ ಏಳಿಗೆಗೆ ನೀಡಿರುವ ಕೊಡುಗೆಗಳನ್ನು ನೆನಪು ಮಾಡಿ, ಅವರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುವ ನಿಟ್ಟಿನಲ್ಲಿ ಈ ಸಮಾವೇಶ ಮಹತ್ವವನ್ನು ಪಡೆದುಕೊಳ್ಳಲಿದೆ ಎಂದರು. ಕಾಂಗ್ರೆಸ್…
ಗುಬ್ಬಿ: ತಾಲೂಕಿನ ಭೂ ಹಗರಣದಲ್ಲಿ ನನ್ನ ಹಿಂಬಾಲಕರಾಗಲಿ ಅಥವಾ ನನ್ನ ಒಡಹುಟ್ಟಿದವರು ಆಗಲಿ ಎಲ್ಲರನ್ನು ಜೈಲಿಗೆ ಕಳಿಸುತ್ತೇನೆ ಎಂದು ಶಾಸಕ ಎಸ್ ಆರ್. ಶ್ರೀನಿವಾಸ್ ತಿಳಿಸಿದರು. ತಾಲೂಕಿನ ಕಸಬಾ ಹೋಬಳಿಯ ಹಳೇಗುಬ್ಬಿ, ಜ್ಯೋತಿನಗರ ಮತ್ತು ತೊರೇಹಳ್ಳಿ ಗ್ರಾಮದಲ್ಲಿ 39 ಲಕ್ಷ ರೂಗಳ ಸಿ.ಸಿ.ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು ರೈತರಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ ತಾಲೂಕಿನಲ್ಲಿ ಎಷ್ಟು ಭೂಮಿ ಲಭ್ಯವಿದೆ ಎಂದು ಹುಡುಕಾಟ ನಡೆಸಿದಾಗ ಈ ಭೂ ದಂಧೆಯ ಅ ವ್ಯವಹಾರ ಬೆಳಕಿಗೆ ಬಂದಿದ್ದು ತಕ್ಷಣವೇ ಉಪ ವಿಭಾಗಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿಗಳನ್ನು ಕರೆಯಿಸಿ ಎಲ್ಲಿ ವ್ಯತ್ಯಾಸವಾಗಿದೆ ಎಂಬುದನ್ನು ಕಂಡು ಹಿಡಿಯಲು ಹೋದಾಗ ಸುಮಾರು 99 ರಿಂದ 2002 ರವರೆಗೆ ಆಗಿನ ತಹಸಿಲ್ದಾರ್ ಅವರೇ ಜಮೀನನ್ನು ರೈತರಿಗೆ ನೀಡುತ್ತಿದ್ದು ಕೈಬರಹದ ಪಹಣಿಗಳನ್ನು ಹಾಗೂ ಎಂ ಆರ್ ಪುಸ್ತಕದಲ್ಲಿ ನೊಂದಣಿ ಮಾಡಿದ ಕಾರಣ ಈ ದಂದೆಗೆ ನಾಂದಿ ಹಾಡಲು ದಾರಿಯಾಗಿದೆ. ಸುಮಾರು ವರ್ಷಗಳಿಂದ ಯಾವುದೇ ದಾಖಲಾತಿಗಳು ಇಲ್ಲದೆ ಜಮೀನನ್ನು…
ಕೊರಟಗೆರೆ: ಖಚಿತ ಮಾಹಿತಿಯ ಆಧಾರದ ಮೇಲೆ, ಜೂಜು ಅಡ್ಡೆ ಮೇಲೆ ಪೊಲೀಸರು ಮಿಂಚಿನ ದಾಳಿ ನಡೆಸಿದ ಪೊಲೀಸರು, 15 ಮಂದಿಯನ್ನು ಬಂಧಿಸಿ, 7 ಲಕ್ಷ ಸೇರಿದಂತೆ 4 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಕೊರಟಗೆರೆ ಬಳಿಯ ನಾಗೇನಹಳ್ಳಿಯ ಸಿ.ಜೆ ಎಲೈಟ್ ರೆಸಾರ್ಟ್ ಮೇಲೆ ದಾಳಿ ನಡೆಸಿದ ಕೊರಟಗೆರೆ ಸಿಪಿಐ, ಸಿದ್ದರಾಮೇಶ್ವರ, ಪಿಎಸ್ಸೈ ನಾಗರಾಜು, ಬಡವನಹಳ್ಳಿ ಇನ್ಸೆಪೆಕ್ಟರ್ ಹನುಮಂತರಾಯಪ್ಪ ನೇತೃತ್ವದಲ್ಲಿ ತಂಡ 7,00,650 ರೂಪಾಯಿ ಹಣ ಹಾಗೂ 4 ಕಾರು, 15 ಮೊಬೈಲ್ ಜಪ್ತಿಮಾಡಿ, ಜೂಜಾಟದಲ್ಲಿ ತೊಡಗಿದ್ದ 15 ಜನ ಆರೋಪಿಗಳು ಪೊಲೀಸರ ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರು ಬೆಂಗಳೂರು- ತುಮಕೂರು- ಮಧುಗಿರಿ ಮತ್ತು ಕೋಳಾಲ ಮೂಲದ ಜೂಜುಕೋರರು ಎಂದು ಹೇಳಲಾಗಿದೆ. ದಾಳಿ ಸಂದರ್ಭದಲ್ಲಿ ಮಧುಗಿರಿ ಡಿವೈಎಸ್‍ಪಿ ರಾಮಕೃಷ್ಣ, ಕೊರಟಗೆರೆಯ ಸಿಪಿಐ ಸಿದ್ಧರಾಮೇಶ್ವರ, ಪಿಎಸ್‍ಐ ನಾಗರಾಜು, ಬಡವನಹಳ್ಳಿಯ ಇನ್ಸ್‍ಪೆಕ್ಟರ್ ಹನುಮಂತರಾಯಪ್ಪ, ಸಿಬ್ಬಂದಿ, ಧರ್ಮಪಾಲ್ ನಾಯಕ್ ಶಶಿಕುಮಾರ್, ಸತೀಶ್ ಸೇರಿದಂತೆ ಮಿಂಚಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಟಗೆರೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










