ಮಧುಗಿರಿ: ತಾಲ್ಲೂಕಿನಲ್ಲಿ ಇನ್ನೊಂದು ವಾರದೊಳಗೆ ಕೊರೋನಾ ಸೋಂಕಿತರ ಸಂಖ್ಯೆ ಶೇಕಡ 5ರಷ್ಟು ಇರಬೇಕು, ಇದಕ್ಕಾಗಿ ತಾಲ್ಲೂಕು ಆಡಳಿತ ಮತ್ತು ಪಿಡಿಒಗಳು,ಇತರೆ ಇಲಾಖೆಯ ಅಧಿಕಾರಿಗಳು ಇನ್ನಷ್ಟು ಶ್ರಮವಹಿಸಿ ಕೆಲಸ ಮಾಡಬೇಕೆಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು. ಸೋಮವಾರದಂದು ಪಟ್ಟಣದಲ್ಲಿರುವ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಿಡಿಒಗಳು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಲ್ಲಿಯವರೆಗೆ ಹಗಳಿರುಳು ಶ್ರಮವಹಿದ ಎಲ್ಲಾ ಅಧಿಕಾರಿಗಳು,ವ್ಯೆಧ್ಯರು,ಅಂಗನವಾಡಿ,ಅಶಾಕಾರ್ಯಕರ್ತರು,ಪಿಡಿಓಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಕರೋನಾ ಪರೀಕ್ಷೆ ನಡೆಸಿದ ಬಳಿಕ ಸೋಂಕಿತ ನನ್ನು ಬೇಗ ಪತ್ತೆ ಹಚ್ಚುತ್ತೀರಿ, ಆರ್ ಟಿಪಿಸಿಆರ್ ನೆಗೆಟಿವ್ ಬಂದವರ ವರದಿ ತಡವಾಗಿ ಬರುತ್ತಿರುವುದರಿಂದ ಆತಂಕ ಹೆಚ್ಚಾಗುತ್ತಿದ್ದು ಬೇಗ ವರದಿ ನೀಡಿದರೆ ಸಾರ್ವಜನಿಕರು ನಿರಾಳರಾಗುತ್ತಾರೆ ಎಂದರು. ಸೋಂಕಿತರು ಪತ್ತೆಯಾದ ತಕ್ಷಣ ಆಶಾ ಕಾರ್ಯಕರ್ತರು ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಬೇಕು. ಇವರಿಗೆ ಪೊಲೀಸರು ಸಹಕಾರ ನೀಡುವಂತೆ ತಿಳಿಸಿದರು. ಲಸಿಕೆ ಬಗ್ಗೆ ಅಪಪ್ರಚಾರ ಬೇಡ :ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ, ಟಾಸ್ಕ್ ಫೋರ್ಸ್ ಸಭೆಗಳನ್ನು ನಿರಂತರವಾಗಿ ಮಾಡಿ ಸೋಂಕಿತರು ಹೆಚ್ಚಿರುವ ಗ್ರಾಮಗಳಲ್ಲಿ…
Author: News Desk Benkiyabale
ತುಮಕೂರು: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಂಪೂರ್ಣ ಉಚಿತವಾಗಿ ಮಹಾಮಾರಿ ಕೊರೋನಾ ವೈರಸ್ ಸೋಂಕಿಗೆ ಚಿಕಿತ್ಸೆ ನೀಡಬೇಕು, ಜಿಲ್ಲೆಯ ಯುವಜನತೆಗೆ 1 ಮತ್ತು 2ನೇ ಡೋಸ್ ಲಸಿಕೆ, ಕೋವಿಡ್ ಅಲೆಯಿಂದ ಮಕ್ಕಳ ರಕ್ಷಣೆ, ಆಕ್ಸಿಜನ್ ರೆಮಿಡಿಸಿವರ್, ಆಂಬುಲೆನ್ಸ್, ಕೋವಿಡ್ ಹಾಗೂ ಫಂಗಸ್ ಔಷಧಿಗಾಗಿ ಕ್ರಿಯಾಯೋಜನೆ ಸಿದ್ಧಪಡಿಸುವ ಮೂಲಕ ಕೋವಿಡ್ ಮುಕ್ತ ಮೊದಲ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಮುರಳೀಧರ ಹಾಲಪ್ಪ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಒತ್ತಾಯಿಸಿದರು. ನಗರದ ಅಮಾನಿಕೆರೆ ಬಳಿ ಇರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಅವರು, ಕೋವಿಡ್ 2ನೇ ಅಲೆಯು ಇಡೀ ದೇಶಾದ್ಯಂತ ಹಾಗೂ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲೂ ಕೊರೋನಾ ಆರ್ಭಟ ತೀವ್ರವಾಗಿದೆ. ಇದರಿಂದ ಸಾಮಾನ್ಯ ಜನರ…
ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ಪ್ಲೋರೆನಿಸಿಕ್ ಲ್ಯಾಬ್ ಹಾಗೂ ಮರಣೋತ್ತರ ಪರೀಕ್ಷೆ ತಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ರುದ್ರಮೂರ್ತಿ ಅವರ ವರ್ಗಾವಣೆಯನ್ನು ರದ್ದುಗೊಳಿಸಿ, ತುಮಕೂರು ಜಿಲ್ಲಾಸ್ಪತ್ರೆ ಯಲ್ಲಿಯೇ ಮುಂದುವರೆಸುವಂತೆ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ಟಿ.ಎಸ್.ಗೌಸ್‍ಪಾಷಶೇಖ್ ಅವರ ನೇತೃತ್ವದಲ್ಲಿ ನಾಗರಿಕರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಕಳೆದ 10 ವರ್ಷಗಳಿಂದಲೂ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ವಿಭಾಗ ಹಾಗೂ ಬೆರಳಚ್ಚು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ರುದ್ರಮೂರ್ತಿ ಅವರ ಸೇವೆ ಅನನ್ಯ, ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ. ಸಾವನ್ನಪ್ಪಿದವರ ಸಂಬಂಧಿಕರ ಕೋರಿಕೆಯ ಮೇರೆಗೆ ತಡರಾತ್ರಿಯಾದರೂ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಹಸ್ತಾಂತರಿಸಿರುವ ಉದಾಹರಣೆ ಇದೆ. ಇವರ ಸೇವೆ ಇನ್ನು ಎರಡುವರೆ ವರ್ಷ ಬಾಕಿ ಇರುವ ವೇಳೆ ಸರಕಾರ ಜಿಲ್ಲಾ ಸರ್ಜನ್ ಆಗಿ ಮುಂಬಡ್ತಿ ನೀಡಿ ಬೇರೆ ಜಿಲ್ಲೆಗೆ ವರ್ಗಾಯಿಸಿದೆ. ಇವರ ಸೇವೆ ಜಿಲ್ಲಾಸ್ಪತ್ರೆಗೆ ಅಗತ್ಯ ಇರುವುದರಿಂದ ಅವರನ್ನು ತುಮಕೂರು ಜಿಲ್ಲೆಯಲ್ಲಿಯೇ ಮುಂದುವರೆಸಬೇಕೆಂಬುದು ನಮ್ಮಂತಹ ಹಲವರ ಬೇಡಿಕೆ ಯಾಗಿದೆ…
ತುಮಕೂರು : ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಮತ್ತು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಲ್ಯಾಬ್ ಬ್ಯುಲ್ಟ್ ಆನ್ ವೀಲ್ಸ್ ಎನ್ನುವ ಮೊಬೈಲ್ ಕ್ಲಿನಿಕ್‍ಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ಬೆಂಗಳೂರು ಹೈಗ್ರೌಂಡ್ಸ್ ರೋಟರಿ, ಸಾಯಿಕಾರ್ಪ್ ಸಂಸ್ಥೆಯೊಂದಿಗೆ ಟಾಟಾ ಮೆಡಿಕಲ್ ಡಯೋಗ್ನಿಸ್ಟಿಕ್ ಸಂಸ್ಥೆಯವರು ಸಿಆರ್‍ಐಎಸ್‍ಪಿಆರ್ ತಂತ್ರಜ್ಞಾನದ ಮೊಬೈಲ್ ಕ್ಲಿನಿಕ್‍ಗೆ ಪೂಜೆ ಸಲ್ಲಿಸುವ ಮೂಲಕ ಸಚಿವ ಜೆ.ಸಿ.ಮಾಧುಸ್ವಾಮಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ರೋಟರಿ ಹೈಗ್ರೌಂಡ್ಸ್ ಮತ್ತು ಆಟೋಮೋಟಿವ್ ಆಕ್ಸಿಸ್ ಕಂಪನಿಯವರು ತನ್ನ ಸಿಎಸ್‍ಆರ್ ನಿಧಿಯಿಂದ 1 ಕೋಟಿ ರೂ ವೆಚ್ಚದ ವಾಹನ ಮತ್ತು ಟಾಟಾ ಮೆಡಿಕಲ್ ಅಂಡ್ ಡಯಾಗ್ನಾಸ್ಟಿಕ್ ಕಂಪನಿಯವರು 80 ಲಕ್ಷ ರೂ.ವೆಚ್ಚದ ತಾಂತ್ರಿಕ ಉಪಕರಣಗಳನ್ನು ನೀಡಿದ್ದಾರೆ. ಇದು ಕೋವಿಡ್‍ಗೆ ಬಹಳ ಉಪಯೋಗವಾಗಲಿದ್ದು, ಜೊತೆಗೆ ವೈರಸ್‍ನಿಂದ ಉಂಟಾಗಬಹುದಾದಂತಹ ಎಲ್ಲಾ ಕಾಯಿಲೆಗಳಿಗೆ ಅತ್ಯಂತ ನಿಖರವಾಗಿ…
ತುಮಕೂರು: ಕೋವಿಡ್ ಕೇರ್ ಸೆಂಟರ್‍ನಲ್ಲಿ ಕೊರೋನಾ ಸೋಂಕು ತಗುಲಿರುವವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಸಾಧ್ಯವಾದಷ್ಟು ಬೇಗ ಕೊರೋನಾ ಸೋಂಕು ನಿವಾರಣೆಯಾಗಿ ಮನೆಗಳಿಗೆ ತೆರಳಲಿ ಹಾಗೂ ಗ್ರಾಮದಲ್ಲಿ ಇತರರಿಗೆ ಸೋಂಕು ತಗುಲದೆ ಇರಲಿ ಅಂತಾ ಜಿಲ್ಲಾ ಆರೋಗ್ಯ ಇಲಾಖೆ ಆಯಾ ತಾಲೂಕುಗಳಲ್ಲಿ ಕೊವಿಡ್ ಕೇರ್ ಸೆಂಟರ್‍ಗಳನ್ನು ತೆರದಿದೆ. ಪಾಸಿಟಿವ್ ಬಂದವರನ್ನು ಕೂಡಲೇ ಕೊವಿಡ್ ಕೇರ್ ಸೆಂಟರ್‍ಗೆ ದಾಖಲಿಸಿ ಚಿಕಿತ್ಸೆ ನೀಡುವ ಜೊತೆಗೆ ಮೂರು ಹೊತ್ತು ಆಹಾರ, ಬಿಸಿ ನೀರು ವ್ಯವಸ್ಥೆ ಕೂಡ ಕಲ್ಪಿಸಲಾಗುತ್ತದೆ. ಈ ನಡುವೆ ಸೋಂಕಿತರು ಕೊವಿಡ್ ಕೇರ್ ಸೆಂಟರ್‍ನಲ್ಲಿ ಯಾರ ಭಯವಿಲ್ಲದೆ ಇಸ್ಪೀಟ್ ಆಟವನ್ನು ಶುರು ಮಾಡಿದ್ದಾರೆ. ಸೋಂಕು ನಿವಾರಿಸಿಕೊಂಡು ಸಾಧ್ಯವಾದಷ್ಟು ಬೇಗ ತಮ್ಮ ಊರಿಗೆ ತೆರಳಬೇಕಾಗಿರುವ ಸೋಂಕಿತರು, ಸೋಂಕು ಬಂದಿರುವುದನ್ನು ಮರೆತು ಕೊವಿಡ್ ಕೇರ್ ಸೆಂಟರ್‍ನಲ್ಲಿ ಜೂಜಾಟ ಆಡಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಇರುವ ಕೊವಿಡ್ ಕೇರ್ ಸೆಂಟರ್‍ನಲ್ಲಿ ಜೂಜಾಟ ಆಡಿದ್ದು, ಪ್ರತ್ಯೇಕವಾಗಿ ಎರಡು ಗುಂಪುಗಳನ್ನು ಮಾಡಿಕೊಂಡು ಜೂಜಾಟ ಆಡಿದ್ದಾರೆ. ಜೂಜಾಟ ಆಡುವ…
ಹುಳಿಯಾರು: ಅರಳಿ ಮರದ ಕೊಂಬೆ ಬಿದ್ದು ಮುರಿದಿರುವ ವಿದ್ಯುತ್ ಕಂಬ ದುರಸ್ಥಿ ಮಾಡದೆ ನಿರ್ಲಕ್ಷ್ಯಿಸಿರುವ ಪರಿಣಾಮ ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿಗೊಲ್ಲರಹಟ್ಟಿಯ ಕೆಲ ನಿವಾಸಿಗಳು ಕತ್ತಲೆಯಲ್ಲಿ ರಾತ್ರಿ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಬಾವಿಯ ಹತ್ತಿರದ ವಿದ್ಯುತ್ ಕಂಬದಿಂದ ಕಿರುನೀರು ಸರಬರಾಜು ವ್ಯವಸ್ಥೆಗೆ ಹಾಗೂ ಕೆಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಈ ಕಂಬ ಕಳೆದ ಒಂದು ವಾರದ ಹಿಂದೆ ಮಳೆಗಾಳಿಗೆ ಬಿದ್ದ ಮರದ ಕೊಂಬೆಯಿಂದ ಮುರಿದಿದೆ. ವಿಷಯ ತಿಳಿದ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು ಬಿಟ್ಟರೆ ಕಂಬ ಬದಲಾವಣೆಗೆ ಮುಂದಾಗಿಲ್ಲ. ಪರಿಣಾಮ ಒಂದು ವಾರದಿಂದ ನೀರು ಸರಬರಾಜು ಇಲ್ಲದೆ ಇಲ್ಲಿನ ನಿವಾಸಿಗಳು ಸಮೀಪದ ತೋಟಗಳಿಂದ ಹಾಗೂ ಕೈ ಪಂಪುಗಳಿಂದ ನೀರನ್ನು ತರುತ್ತಿದ್ದಾರೆ. ಅಲ್ಲದೆ ವಾರದಿಂದ ಮನೆಗಳಿಗೆ ಕರೆಂಟ್ ಇಲ್ಲದೆ ವಿದ್ಯುತ್ ಇರುವ ಮನೆಗಳಿಗೆ ತೆರಳಿ ಅಡಿಗೆಗೆ ಮಸಾಲೆ ರುಬ್ಬಿಸಿಕೊಳ್ಳುವ, ಟಿವಿ ನೋಡುವ ಅನಿವಾರ್ಯತೆ…
ತುಮಕೂರು: ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ,ಮೇ 30ಕ್ಕೆ ಎರಡು ವರ್ಷಗಳು ಪೂರೈಸುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಯುವಮೋರ್ಚಾ ವತಿಯಿಂದ ನಗರದಲ್ಲಿರುವ ಕೋವಿಡ್-19 ಸೋಂಕಿತ ರೋಗಿಗಳಿಗೆ ಪೌಷ್ಠಿಕ ಆಹಾರವಾದ ಡ್ರೈಪ್ರೂಟ್ಸ್‍ಗಳ ಕಿಟ್ ವಿತರಿಸಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶಗೌಡ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಅರಕೆರೆ ರವೀಶ್, ಪ್ರಧಾನ ಕಾರ್ಯದರ್ಶಿ ಯಶಸ್ಸ್, ಶಿವಕುಮಾರಸ್ವಾಮಿ ಕಾರ್ಯದರ್ಶಿ ಚೇತನ್, ಗ್ರಾಮಾಂತರ ತಾಲೂಕು ಅಧ್ಯಕ್ಷರಾದ ಶಂಕರಣ್ಣ, ಮುಖಂಡರಾದ ಮಾಸ್ತಿಗೌಡರು, ವೈ.ಟಿ.ನಾಗರಾಜು, ಶ್ರೀಧರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿದ್ದೇ ಗೌಡ,ಹಾಗೂ ಯುವಮೋರ್ಚಾ ಮುಖಂಡರು ಜಲ್ಲಾಸ್ಪತ್ರೆ, ಸಿದ್ದಗಂಗಾಮಠ ಕೋವಿಡ್ ಸೆಂಟರ್, ಕ್ಯಾತ್ಸಂದ್ರದ ಕೋವಿಡ್ ಸೆಂಟರ್ ಹಾಗು ಕೋಡಿ ಮುದ್ದನಹಳ್ಳಿಯ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಸೆಂಟರ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು 600 ರೋಗಿಗಳಿಗೆ ತಲಾ ತೂಕವಿರುವ ಬಾದಾಮಿ, ಗೋಡಂಬಿ,ದ್ರಾಕ್ಷಿ ಹಾಗೂ ವಾಲ್‍ನಟ್ ಡ್ರೈಪ್ರೂಟ್ಸ್‍ಗಳನ್ನು ಒಳಗೊಂಡ ಪಟ್ಟಣಗಳನ್ನು ವಿತರಿಸಿ…
ಮಧುಗಿರಿ: ವಿಶಾಲ ಕಟ್ಟಡದಲ್ಲಿರುವ ಸಿಂಡಿಕೇಟ್ ಬ್ಯಾಂಕನ್ನು ಮತ್ತೊಂದು ಕೆನರಾ ಬ್ಯಾಂಕ್ ಶಾಖೆಗೆ ವರ್ಗಾಯಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದು, ಮೂಲ ಶಾಖೆಯನ್ನೇ ಇಲ್ಲಿಗೆ ವರ್ಗಾಯಿಸ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪಟ್ಟಣದ ಡಿಸಿಸಿ ಬ್ಯಾಂಕ್ ಮುಂಭಾಗದಲ್ಲಿ ಈ ಹಿಂದೆ ಸಿಂಡಿಕೇಟ್ ಬ್ಯಾಂಕ್ ಶಾಖೆಯು ಆರಂಭವಾಗಿ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಿತ್ತು. ಆದರೆ ಸಿಂಡಿಕೇಟ್ ಬ್ಯಾಂಕನ್ನು ಕೆನರಾ ಬ್ಯಾಂಕಿನಲ್ಲಿ ವಿಲೀನಗೊಳಿಸಿದ ನಂತರ ಮೂಲ ಕೆನರಾ ಬ್ಯಾಂಕ್ ಕಟ್ಟಡದಲ್ಲಿ ಸಿಂಡಿಕೇಟ್ ಶಾಖೆಯನ್ನು ವಿಲೀನಗೊಳಿಸಲಾಗುವುದು ಎಂದು ಬ್ಯಾಂಕಿನಲ್ಲಿ ಫ್ಲೆಕ್ಸ್ ಹಾಕಿ ಸಾರ್ವಜನಿಕರ ಗಮನಕ್ಕೆ ತಂದಿದ್ದು, ಇದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿಂಡಿಕೇಟ್ ಬ್ಯಾಂಕಿನ ಶಾಖೆಯು ಮುಖ್ಯ ರಸ್ತೆಯಲ್ಲಿದ್ದು, ವಿಶಾಲವಾದ ಕಟ್ಟಡದ ಜೊತೆಗೆ ಎಲ್ಲಾ ಅನುಕೂಲಗಳಿದ್ದು, ಸೂಕ್ತ ಗಾಳಿ ಬೆಳಕಿನ ಜೊತೆಗೆ, ಭದ್ರತೆ, ಪಾರ್ಕಿಂಗ್ ವ್ಯವಸ್ಥೆಯೂ ಇದೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಆದರೆ ಕೆನರಾ ಬ್ಯಾಂಕಿನ ಶಾಖೆಯು ಬಹಳಷ್ಟು ಚಿಕ್ಕದಾಗಿದ್ದು, ಇಕ್ಕಟ್ಟಾದ ಸ್ಥಳದಲ್ಲಿದೆ. ಪಕ್ಕದಲ್ಲೇ ಸಂತೆ ಮೈದಾನ, ವೈನ್ಸ್…
ಕೊರಟಗೆರೆ: ಇಸ್ಪೀಟ್ ಜೂಜು ಅಡ್ಡದಲ್ಲಿ ತೊಡಗಿದ್ದವರ ಮೇಲೆ ಸಿಪಿಐ ಸಿದ್ದರಾಮೇಶ್ವರ ರವರ ತಂಡ ದಾಳಿ ಮಾಡಿ 10 ಜನ ಆರೋಪಿಗಳನ್ನ ಬಂಧಿಸಿ ಪಣಕ್ಕಿಟ್ಟಿದ್ದ 10,700 ರೂಗಳನ್ನ ವಶಕ್ಕೆ ಪಡೆದಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮದ ಖಲೀಲ್ ಸಾಬ್ ಎನ್ನುವವರ ಶೆಡ್‍ನ ಹತ್ತಿರ ಇಸ್ಪೀಟ್ ಜೂಜು ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ಕೊರಟಗೆರೆ ಪೊಲೀಸರ ತಂಡ 10 ಆರೋಪಿಗಳನ್ನ ಜನರನ್ನ ಬಂಧಿಸಿ ಪಣಕ್ಕಿಟ್ಟದ್ದ 10,700 ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಸಿಪಿಐ ಸಿದ್ದರಾಮೇಶ್ವರ್, ಎಎಸ್‍ಐ ಗಳಾದ ಯೋಗೀಶ್, ಮಂಜುನಾಥ್, ಪೇದೆಗಳಾದ ರಂಗನಾಥ್, ಧರ್ಮಪಾಲ್ ನಾಯ್ಕ್, ಪ್ರಶಾಂತ್, ನಜುರುಲ್ಲಾ ಖಾನ್ ಭಾಗಿಯಾಗಿದ್ದರು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ನಗರದ ಶ್ರೀದೇವಿ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರವು ಕೋವಿಡ್-19 ಹಾಗೂ ಆರೋಗ್ಯ ವೃದ್ಧಿಯ ಕಾಳಜಿಯ ಕುರಿತಾಗಿ ನುರಿತ ತಜ್ಞ ವೈದ್ಯರೊಂದಿಗೆ ಆನ್‍ಲೈನ್ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ರಾಯಚೂರು ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿಯಾದ ಡಾ.ಅಜಯ್ ಪವಾರ್, ಕೊರಟಗೆರೆ ಸರ್ಕಾರಿ ಆಸ್ಪತ್ರೆ ಡಾ.ಪುರುಷೋತ್ತಮ್ ಇವರುಗಳ ಮುಖೇನ ನೂರಾರು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕೋವಿಡ್-19 ಬಗ್ಗೆ ಉತ್ತಮ ಸಲಹೆಗಳನ್ನು ನೀಡಲಾಯಿತ್ತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆಗಳನ್ನು ಪಡೆಯುವುದರ ಜೊತೆಗೆ ವೈದ್ಯರೊಂದಿಗೆ ಕೋವಿಡ್-19 ಮತ್ತು ವ್ಯಾಕ್ಸಿಲೇಷನ್ ಬಗ್ಗೆ ಚರ್ಚಿಸಿ ತಮ್ಮ ಸಲಹೆಗಳನ್ನು ಪರಿಹರಿಸಿಕೊಂಡರು. ಈ ಪ್ರಪಂಚವನ್ನೇ ನಡುಗಿಸಿದ ಈ ಕೊರೋನ ರೋಗದ ಲಕ್ಷಣಗಳನ್ನು ಸೇರಿದಂತೆ, ಬ್ಯಾಕ್ ಫಂಗಸ್, ಶ್ವಾಸಕೋಶದ ಸಂಬಂಧಿಸಿದ ಪರಿಣಾಮಗಳ ಬಗ್ಗೆ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಪಾಲನೆಯ ಬಗ್ಗೆ ಡಾ.ಅಜಯ್ ಪನಾರ್‍ರವರು ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಕೊರಟಗೆರೆ…