ತುಮಕೂರು: ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಯಡಿ ಕೈಗೊಳ್ಳುವ ಪರಿಶಿಷ್ಟ ಕಲ್ಯಾಣಾಭಿವೃದ್ದಿ ಕಾಮಗಾರಿಗಳನ್ನು ಸರ್ಕಾರದ ಮಾರ್ಗಸೂಚಿಗಳನ್ವಯ ನಿಗಧಿತ ಅವಧಿಯಲ್ಲಿ ಅನುμÁ್ಠನ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು. ತಮ್ಮ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿಂದು ಪರಿಶಿಷ್ಟ ಜಾತಿ ಉಪಯೋಜನೆ/ ಗಿರಿಜನ ಉಪಯೋಜನೆ 2013&2017ರ ಅನುμÁ್ಠನ ಕುರಿತ ಜಿಲ್ಲಾ ಮೇಲ್ವಿಚಾರಣ ಸಮಿತಿ ಸಭೆಗೆ ಮಾರ್ಚ್ 2022ರ ಮಾಹೆಯ ಅಂತ್ಯಕ್ಕೆ ವಿವಿಧ ಇಲಾಖೆಗಳ ಅನುμÁ್ಠನಾಧಿಕಾರಿಗಳು ಸಾಧಿಸಿರುವ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ಪರಿಶಿಷ್ಟರ ಕಲ್ಯಾಣಕ್ಕಾಗಿ ಸರ್ಕಾರವು ಹಲವು ಯೋಜನೆಗಳನ್ನು ಅನುμÁ್ಠನಕ್ಕೆ ತಂದಿದ್ದು ಅಧಿಕಾರಿಗಳು ಯಾವುದೇ ರೀತಿಯ ವಿಳಂಬ ಮಾಡದೇ ತ್ವರಿತಗತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು. ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ/ ಗಿರಿಜನ ಉಪಯೋಜನೆಯಡಿ ಸರ್ಕಾರವು ಸಾಕಷ್ಟು ಅನುದಾನವನ್ನು ಒದಗಿಸಿದ್ದು ಯಾವುದೇ ಕಾರಣಕ್ಕೂ ಪರಿಶಿಷ್ಟರ ಕಲ್ಯಾಣಕ್ಕೆ ಒದಗಿಸಿರುವ ಅನುದಾನ ವಾಪಸ್ಸಾಗಬಾರದು.ಶೀಘ್ರಗತಿಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಮಾಜ ಕಲ್ಯಾಣ…
Author: News Desk Benkiyabale
ತುಮಕೂರು: ಕುವೆಂಪು, ಬಸವಣ್ಣ ಅವರನ್ನು ಪಠ್ಯ ಪುಸ್ತಕದಲ್ಲಿ ಅವಹೇಳನ ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ, ಆದರೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿರುವುದು ಸರಿಯಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತುಮಕೂರು ಜಿಲ್ಲಾ ಕಾರಾಗೃಹದಲ್ಲಿರುವ ಎನ್.ಎಸ್.ಯು.ಐ. ಕಾರ್ಯಕರ್ತರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿದ 24 ಮಂದಿ ಮೇಲೆ ಪ್ರಕರಣ ದಾಖಲಿಸಿದ್ದಾರೆ, ಪ್ರತಿಭಟಿಸಿದ ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ವಿಡಿಯೋಗಳಿದ್ದರು ಸಹ ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆಯೇ ಹಲ್ಲೆ ಪ್ರಕರಣ ದಾಖಲಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು. ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿ, ಚೆಡ್ಡಿಗೆ ಬೆಂಕಿ ಹಚ್ಚಲು ಹೋದಾಗ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಆದರೆ ಮನೆಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ ಎಂದು ರಾಜಕೀಯ ಪ್ರೇರಿತ ದೂರು ದಾಖಲಿಸಿದ್ದಾರೆ, ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ವಿಡಿಯೋವನ್ನು ಎಡಿಟ್ ಮಾಡಿ ಹಲ್ಲೆ ಪ್ರಕರಣದಿಂದ…
ತುಮಕೂರು: ಚುನಾವಣಾ ಪೂರ್ವದಲ್ಲಿ ಹಿಂದುಳಿದ ವರ್ಗಗಳಿಗೆ ಮೊದಲ ಅದ್ಯತೆ ನೀಡುವುದಾಗಿ ಹೇಳಿದ್ದ ತುಮಕೂರು ನಗರ ಶಾಸಕರು, ನಗರದಲ್ಲಿ ನಿರ್ಮಾಣವಾದ ದೇವರಾಜು ಅರಸು ಭವನ ಉದ್ಘಾಟನೆಗೆ ಹಿಂದುಳಿದ ವರ್ಗಗಳ ಮುಖಂಡರಿಗೆ ಕನಿಷ್ಠ ಆಹ್ವಾನವನ್ನು ನೀಡದೆ ಅಪಮಾನ ಮಾಡಿದ್ದಾರೆ. ಇದು ಖಂಡನೀಯ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ಧನಿಯಕುಮಾರ್ ಆರೋಪಿಸಿದ್ದಾರೆ. ನಗರದ ಯಾದವ ಹಾಸ್ಟಲ್‍ನಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ 40ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದುಳಿದ ವರ್ಗದವರು ನನ್ನನ್ನು ಬೆಂಬಲಿಸಿ, ನಾನು ನಿಮ್ಮ ಬೆನ್ನಿಗೆ ನಿಂತು ಕೆಲಸ ಮಾಡುತ್ತೇನೆ ಎಂದಿದ್ದ ಶಾಸಕರು, ಈಗ ಉಲ್ಟಾ ಹೊಡೆದಿದ್ದಾರೆ ಎಂದರು. ದೇವರಾಜ ಅರಸು ಎಂಬುದು ಒಂದು ಹೆಸರಲ್ಲ. ಅದು ಹಿಂದುಳಿದ ವರ್ಗಗಳ ಶಕ್ತಿ. ಸಣ್ಣ ಸಣ್ಣ ಶ್ರಮ ಸಂಸ್ಕøತಿಯ ಜಾತಿಗಳನ್ನು ಗುರುತಿಸಿ, ಅವರಿಗೆ ರಾಜಕೀಯ ಅಧಿಕಾರ ನೀಡುವ ಮೂಲಕ ನಿಮ್ನ ವರ್ಗಗಳಿಗೆ ಅವಕಾಶದ ಭಾಗಿಲುಗಳು ತೆರೆದುಕೊಳ್ಳುವಂತೆ ಮಾಡಿ, ಸಮಾಜದ ಮುಖ್ಯವಾಹಿನಿಗೆ ಬರಲು ಕಾರಣಕರ್ತರಾದರು. ಜೀತಪದ್ದತಿ ರದ್ದು, ಉಳುವವನೇ ಭೂಮಿಯ…
ತುಮಕೂರು: ಇಂದಿನ ದಿನಗಳಲ್ಲಿ ವಿಚಾರಕ್ಕಿಂತ ಆಚಾರ ಮುಖ್ಯ. ವಿಕೇಂದ್ರಿಕರಣ ಇಂದಿನ ಜಾಗತಿಕ ಅಗತ್ಯ ಸ್ಥಳೀಕರಣ ಮತ್ತು ವಿಕೇಂದ್ರಿಕರಣಕ್ಕೆ ಇಂದು ಜನಾಂದೋಲನದ ಅಗತ್ಯವಿದೆ ಎಂದು ಗ್ರಾಮ ಸೇವಾ ಸಂಘದ ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟರು. ಕೃಷಿ ಗ್ರಾಮೀಣಾಭಿವೃದ್ಧಿಯ ಹೃದಯ. ಅದು ಇಂದು ಭೂ ಹಿಡುವಳಿ ವಿಶಿಷ್ಟವಾಗಬೇಕು. ಹಾಗಾದರೆ ಮಾತ್ರ ಕೃಷಿ ವಾಯುಗುಣ ವೈಪರಿತ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವೆಂದು ಸಹಜ ಬೇಸಾಯ ಶಾಲೆಯ ಕೃಷಿ ತಜ್ಞಾ ಡಾ|| ಹೆಚ್ ಮಂಜುನಾಥ ಹೇಳಿದರು. ಇಂದಿನ ಪರಿಸರ ಅಸಮತೋಲನ ಹಾಗೂ ವಿನಾಶಗಳ ದುಶ್ಪರಿಣಾಮಗಳನ್ನು ಎದುರಿಸಲು ವಿಕೇಂದ್ರಿಕರಣ ಅತ್ಯಗತ್ಯ ಎಂದು ಸಿ. ಯತಿರಾಜ ಹೇಳಿದರು. ಸುಮನವನದ ಸಂಜೀವಕುಲಕರ್ಣಿ ಮಾತನಾಡಿ ಗಾಂಧೀ ತೊರಿದ ವಿಕೇಂದ್ರಿಕರಣದ ಹಾದಿಯಲ್ಲಿ ನಾವಿಂದು ಸಾಗಬೇಕಾದ ಅನಿವಾಂiÀರ್iತೆ ಇದೆ ಎಂದರು. ವಿಕೇಂದ್ರೀಕರಣ ಜನಾಂದೋಲನದಲ್ಲಿ ಜಿ.ಹೆಚ್. ಪಟೇಲ್ ಟ್ರಸ್ಟ್ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಹೇಳಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಉದ್ದರಿಸಲು ವಿಕೇಂದ್ರಕರಣದಿಂದ ಮಾತ್ರ ಸಾಧ್ಯ ಶಿಕ್ಷಣ, ಅರೋಗ್ಯ ಸೌಲಭ್ಯಗಳನ್ನು ಬಡಜನರಿಗೆ ನೀಡಲು ಗ್ರಾಮ ಪಂಚಾಯಿತಿ ವ್ಯವಸ್ತೆ ಮುಂದಾಗಬೇಕೆಂದು…
ಚಿಕ್ಕನಾಯಕನಹಳ್ಳಿ: ಪ್ರಕೃತಿ ಕೊಟ್ಟ ಸಾಲವನ್ನು ಹೊತ್ತುಕೊಂಡು ಜೀವನ ಮಾಡುತ್ತಿದ್ದೇವೆ ಆ ಋಣ ತೀರಿಸಬೇಕಾದ ರೆ ಕನಿಷ್ಠಪಕ್ಷ ಪ್ರತಿಯೊಬ್ಬರು ಅರಣ್ಯವನ್ನು ಬೆಳೆಸಬೇಕು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳ ಹಾಗೂ ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದರು ಅವರು ಪ್ರಾದೇಶಿಕ ಹಾಗೂ ಸಾಮಾಜಿಕ ವಲಯ ಅರಣ್ಯ ಇಲಾಖೆಯು ತಾಲೂಕಿನ ಶೆಟ್ಟಿಕೆರೆ ಹೋಬಳಿ ಸಾಸಲು ಗ್ರಾಮದ ಹೊರವಲಯದ ನಿರ್ಮಾಣಗೊಂಡಿರುವ ಅಂಬೇಡ್ಕರ್ ವಸತಿ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು ನಾವೆಲ್ಲಾ ಪ್ರಕೃತಿಯ ಕೂಸುಗಳು ಪ್ರಕೃತಿಯ ನೀಡಿದ ಋಣ ಹೊತ್ತುಕೊಂಡು ಹುಟ್ಟಿದ್ದೇವೆ ಹಾಗೆ ಸಾಯುತ್ತೇವೆ ಪ್ರಕೃತಿ ನಮಗೆ ಕೊಟ್ಟ ಸಾಲವನ್ನು ಋಣ ತೀರಿಸುವ ಕೆಲಸ ಮಾಡಬೇಕಾದರೆ ಅದರ ಸದ್ಬಳಕೆ ಬಳಸಿಕೊಂಡು ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕು ಪ್ರಕೃತಿ ಸಮತೋಲನ ಹೇಗೆ ಮಾಡಬಹುದು ಅನ್ನೋದನ್ನ ಯಾರು ಹೇಳಿ ಕೊಡಬೇಕಾದ ಅವಶ್ಯಕತೆ ಇಲ್ಲ ವಿಜ್ಞಾನಿ…
ತುರುವೇಕೆರೆ: ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಕಾಲದಲ್ಲಿ ನಡೆದಿರುವ ಅಪೂರ್ಣ ಹಾಗೂ ಕಳಪೆ ಕಾಮಗಾರಿಗಳು ಅವರ ಕಿಕ್ ಬ್ಯಾಕ್ ಹಾಗೂ ಕಮಿಷನ್ ಸಂಸ್ಕೃತಿಯನ್ನು ಸಾರಿ ಹೇಳುತ್ತಿವೆ ನನಗೆ ಗೊತ್ತಿರುವುದು ಅಭಿವೃದ್ಧಿ ಒಂದು ಎಂದು ಶಾಸಕ ಮಸಾಲ ಜಯರಾಮ್ ಎಂ.ಟಿ.ಕೃಷ್ಣಪ್ಪನ ವಿರುದ್ದ ವ್ಯಂಗ್ಯವಾಡಿದರು. ತಾಲ್ಲೂಕಿನ ಮಾಯಸಂದ್ರ ಹೋಬಳಿಯ ತುಯಲಹಳ್ಳಿ ಗ್ರಾಮದ ಹತ್ತಿರ ಸಣ್ಣ ನೀರಾವರಿ ಇಲಾಖೆಯ 1.60ಕೋಟಿ ವೆಚ್ಚದ ಚೆಕ್ ಡ್ಯಾಮ್ ಹಾಗೂ ಬ್ರಿಡ್ಜ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಆಗುತ್ತಿರುವುದನ್ನು ಸಹಿಸದೆ ಮಾಜಿ ಶಾಸಕರು ಕಿಕ್ ಬ್ಯಾಕ್ ಬಗ್ಗೆ ಮಾತನಾಡುತ್ತಾರೆ ನನಗೆ ಅಂತಹ ಸಂಸ್ಕೃತಿಗಳ ಅರಿವಲ್ಲ ಕಾರಣ ನನ್ನ ಕಾಲದ ಅಭಿವೃದ್ಧಿ ಕೆಲಸಗಳು ಎಲ್ಲೂ ಅರ್ಧಕ್ಕೆ ನಿಂತಿಲ್ಲ ನಿರಂತರವಾಗಿ ನಡೆಯುತ್ತಿವೆ ಅವರ ಕಾಲದಲ್ಲಾದ ಪಟ್ಟಣದ ಯುಜಿಡಿ ಅಧ್ವಾನ ಹಾಗೂ ವಾಣಿಜ್ಯ ಸಂಕೀರ್ಣ ಅಪೂರ್ಣ ಕಾಮಗಾರಿ ಹಾಗೂ ಏತನೀರಾವರಿ ಕಳಪೆ ಕಾಮಗಾರಿಗಳು ಅವರ ಕಿಕ್ ಸಂಸ್ಕೃತಿ ಬಗ್ಗೆ ಹೇಳುತ್ತಿವೆ ನಮ್ಮದೇನಿದ್ದರು ಫ್ರೆಂಟ್ ಬ್ಯಾಕ್ ಜನರ ಮುಂದೆ ನನ್ನ ಅಭಿವೃದ್ಧಿ…
ತುಮಕೂರು: ಮಾಲಿನ್ಯ ನಿಂತ್ರಣ ಮಾಡಿ ಸುಸ್ಥಿರ ಪರಿಸರ ವ್ಯವಸ್ತೆಯನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಶಾಸಕ ರಾಜೇಶ್‍ಗೌಡ ಅಭಿಪ್ರಾಯ ಪಟ್ಟರು. ತುಮಕೂರು ವಿಶ್ವವಿದ್ಯಾನಿಲಯ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಸಿರಾದ ಸ್ನಾತಕ್ಕೋತ್ತರ ಅಧ್ಯಯನ ಕೇಂದ್ರ ಸಿರಾ ಕ್ಯಾಂಪಸ್‍ನಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ 2022 ಅನ್ನು ಗಿಡನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪರಿಸರದ ಅವನತಿಗೆ ಕಾರಣವಾಗುವ ಮಾನವನ ಚಟುವಟಿಕೆಗಳು ಮಾಲಿನ್ಯ, ದೋಷಯುಕ್ತ ಪರಿಸರ ನೀತಿಗಳು, ರಾಸಾಯನಿಕಗಳು, ಹಸಿರುಮನೆ ಅನಿಲಗಳು, ಜಾಗತಿಕ ತಾಪಮಾನ ಏರಿಕೆ, ಓಝೋನ್ ಸವಕಳಿ ಇವೆಲ್ಲವೂ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದಲ್ಲದೆ ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆಯು ಮನುಷ್ಯನಿಗೆ ಹಾನಿಯಂಟುಮಾಡಿ, ಜೀವಂತ ಗಾಳಿಯು ಅವಶ್ಯಕತೆಯನ್ನು ಕಲುಶಿತಗೊಳಿಸಿ ಉಸಿರಾಡಲು ಬಾಟಲಿಯ ಆಮ್ಲಜನಕವನ್ನು ಬಳಸಬೇಕಾಗುತ್ತದೆ. ಪರಿಸರವನ್ನು ರಕ್ಷಿಸುವುದು ಅಷ್ಟು ಸುಲಭವಲ್ಲ, ಇದು ಸಾಕಷ್ಟು ಶ್ರಮ ತೆಗೆದುಕೊಳ್ಳುತ್ತದೆ. ಮಾಲಿನ್ಯ ನಿಯಂತ್ರಣಕ್ಕೆ ಜನರು ಕಠಿಣ ಕಾನೂನುಗಳನ್ನು ಅನುಸರಿಸಬೇಕು. ನೀರಿನ ವ್ಯರ್ಥವನ್ನು ಕಡಿಮೆ ಮಾಡುವ ಮೂಲಕ ನೀರನ್ನು ಉಳಿಸಿ. ಶಕ್ತಿ…
ತುಮಕೂರು: ಜೂನ್ 12ರಂದು ನಡೆಯಲಿರುವ ‘ವಿಶ್ವ ಬಾಲಕಾರ್ಮಿಕರ ವಿರೋಧಿ ದಿನ’ದ ಅಂಗವಾಗಿ ಜೂನ್ 9ರಂದು ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಾಭಂಗಣದಲ್ಲಿ ಶನಿವಾರ ನಡೆದ ‘ವಿಶ್ವ ಬಾಲಕಾರ್ಮಿಕ ವಿರೋಧಿ’ ದಿನ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜೂನ್ 12ರಂದು ವಿಶ್ವ ಬಾಲಕಾಮಿಕ ವಿರೋಧಿ ದಿನ ಕಾರ್ಯಕ್ರಮದ ಅಂಗವಾಗಿ ಜೂ. 9ರಂದು ಬೆಳಿಗ್ಗೆ. 10 ಗಂಟೆಗೆ ನಗರದ ಬಾಲಭವನದ ಆವರಣದಲ್ಲಿ ಪ್ರೌಢಶಾಲಾ ಮಕ್ಕಳಿಗೆ ‘ಬಾಲಕಾರ್ಮಿಕರ ಸಂಕಷ್ಟಗಳು’ ವಿಷಯ ಕುರಿತು ಚಿತ್ರಕಲೆ ಸ್ಪರ್ಧೆ, ಪಿಯುಸಿ ವಿದ್ಯಾರ್ಥಿಗಳಿಗೆ ‘ಬಾಲಕಾರ್ಮಿಕತೆಯಿಂದ ಸಮಾಜದ ಮೇಲೆ ಪರಿಣಾಮ’ ವಿಷಯದ ಕುರಿತು ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಪ್ರತಿ ಸ್ಪರ್ಧೆಗಳಲ್ಲೂ ಕನಿಷ್ಠ 10 ಜನ ವಿದ್ಯಾರ್ಥಿಗಳು ಭಾಗವಹಿಸಬೇಕು. ಸ್ಪರ್ಧೆಯ ಸಂಪೂರ್ಣ ಜವಾಬ್ದಾರಿಯನ್ನು ಡಿಡಿಪಿಐ ವಹಿಸಿಕೊಳ್ಳಬೇಕೆಂದು ಡಿಡಿಪಿಐ ನಂಜಯ್ಯನವರಿಗೆ ತಿಳಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ಪಟ್ಟಿಯನ್ನು ಜೂನ್ 10ರೊಳಗೆ ಬಾಲಕಾರ್ಮಿಕ ಇಲಾಖೆಗೆ ತಲುಪಿಸುವುದು ಹಾಗೂ ವಿಜೇತರಾದ ಮಕ್ಕಳಿಗೆ…
ತುಮಕೂರು: ನಗರದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಶಂಭುಕುಮಾರ್ ಅವರನ್ನು ಅಮಾನತ್ತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ತುಮಕೂರು ನಗರ ಲೋಕೋಪಯೋಗಿ ಉಪ ವಿಭಾಗದ ಸಹಾಯಕ ಇಂಜಿನಿಯರ್ ಶಂಭುಕುಮಾರ್ ಅವರನ್ನು ಅಮಾನತ್ತು ಮಾಡಲಾಗಿದ್ದು, ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆಯ ಅಧೀನ ಕಾರ್ಯದರ್ಶಿರವರು ವರದಿ ಪಡೆದು ಅಮಾನತ್ತು ಆದೇಶವನ್ನು ಹೊರಡಿಸಿರುತ್ತಾರೆ. ಸಹಾಯಕ ಇಂಜಿನಿಯರ್ ಮೇಲೆ ದಲಿತ ದೌರ್ಜನ್ಯ ಕಾಯ್ದೆ ಮತ್ತು ಕೊಲೆ ಯತ್ನದ ಪ್ರಕರಣ ದಾಖಲಾಗಿದ್ದು, ತುಮಕೂರು ಜಿಲ್ಲೆಯ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷನನ್ನೇ ಹತ್ಯೆಗೈಯಲು ಮುಂದಾದಾಗ ತಪ್ಪಿಸಿಕೊಂಡ ಬಿಜೆಪಿ ಮುಖಂಡ ಬೆಂಗಳೂರು ನಗರದ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕ್ರಿಮಿನಲ್ ಮೊಕದ್ದಮೆ ದಾಖಲಾದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶಂಭುಕುಮಾರ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಈ ಆರೋಪಿತ ಇಂಜಿನಿಯರ್ ಶಂಭುಕುಮಾರನ ಪತ್ತೆಗೆ ವಿಶೇಷ ತಂಡ ರಚಿಸಿ ಬಂಧಿಸುವ ಸಲುವಾಗಿ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದ್ದರೂ ಸಹ ಇಲಾಖೆಯ ಕಣ್ಣಿಗೆ ಮಣ್ಣೆರಚಿ ಪ್ರಭಾವಿ ರಾಜಕಾರಣಿಗಳ ಅಭಯಾಸ್ತದಿಂದ ನಿರೀಕ್ಷಣಾ ಜಾಮೀನು ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದ.…
ತುಮಕೂರು: ತುಮಕೂರು ವಿವಿಯ ಬಿ.ಎ., ಬಿಎಸ್ಸಿ, ಬಿ.ಕಾಮ್‍ನ 2ನೇ ಸೆಮಿಸ್ಟರ್ ಪಠ್ಯದಲ್ಲಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಜಾತಿ ವಿನಾಶ ಲೇಖನವನ್ನು ಪಠ್ಯದಿಂದ ಕೈಬಿಟ್ಟು, ಅಸ್ಪøಷ್ಯತೆ ನಿವಾರಣೆ ಕುರಿತಂತೆ ಅರ್ಟಿಕಲ್ 17ರ ಮೇಲಿನ ಚರ್ಚೆಯಲ್ಲಿ ಸಂವಿಧಾನ ರಚನಾ ಸಮಿತಿಯ ಸದಸ್ಯರಾದ ಬ್ಯಾನರ್ಜಿ ಮತ್ತು ಠಾಕೂರ್ ಅವರುಗಳು ಮಾಡಿರುವ ಭಾಷಣವನ್ನು ಸೇರಿಸಿ, ಅಂಬೇಡ್ಕರ್ ಅವರನ್ನು ಪಠ್ಯದಿಂದ ಹೊರಗಿಡುವ ಕೆಲಸ ಮಾಡಲಾಗಿದೆ ಎಂದು ಆರೋಪಿಸಿ, ಅಂಬೇಡ್ಕರ್ ಅನುಯಾಯಿಗಳು ವಿವಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪಾಲಿಕೆಯ ವಿರೋಧ ಪಕ್ಷದ ನಾಯಕ ಜೆ.ಕುಮಾರ್, ಅತಿಥಿ ಉಪನ್ಯಾಸಕ ಹೆತ್ತೇನಹಳ್ಳಿ ಮಂಜು, ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ಧನಿಯಕುಮಾರ್, ಬೆಳ್ಳಿ ಲೋಕೇಶ್ ಸೇರಿದಂತೆ ಹಲವಾರು ಯುವಜನರು ತುಮಕೂರು ವಿವಿಗೆ ಮುತ್ತಿಗೆ ಹಾಕಿ, ಪಠ್ಯದಿಂದ ತೆಗೆದಿರುವ ಜಾತಿ ವಿನಾಶ ಚಾಪ್ಟರ್ ಸೇರಿಸಬೇಕು ಹಾಗೂ ಪಠ್ಯ ಪರಿಷ್ಕರಣಾ ಸಮಿತಿಯಲ್ಲಿದ್ದ ಸದಸ್ಯರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಪಾಲಿಕೆಯ ವಿರೋಧ ಪಕ್ಷದ ನಾಯಕ ಜೆ.ಕುಮಾರ್, ಇಂದು ಇಡೀ ವಿಶ್ವವೇ…










