Author: News Desk Benkiyabale

ತುಮಕೂರು: ರಾಜ್ಯದಲ್ಲಿ ಹಾಗೂ ದೇಶದಲ್ಲಿ ಯಾವುದೇ ರಾಜಕೀಯ ಪಕ್ಷ ಸುಧೀರ್ಘವಾಗಿ ಆಡಳಿತ ನಡಸಿಲ್ಲ. ಹಾಗಾಗಿ ಪ್ರಾದೇಶಿಕ ಪಕ್ಷಗಳೆಲ್ಲಾ ಒಗ್ಗೂಡಿ ಆಡಳಿತ ನಡೆಸುವ ಕಾಲ ಒಂದಲ,ಒಂದು ದಿನ ಬಂದೇ ಬರುತ್ತದೆ ಎಂದು ಹೇಳುವ ಮೂಲಕ ಜೆಡಿಎಸ್ ವರಿಷ್ಸ ಹೆಚ್.ಡಿ.ದೇವೇಗೌಡ ತೃತೀಯ ರಂಗದ ಸುಳಿವನ್ನು ಬಿಚ್ಚಿಟ್ಟಿದ್ದಾರೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಳ್ಳಗೆರೆ ಗ್ರಾಮದ ಶ್ರೀಚಿಕ್ಕಮ್ಮದೇವಿ ಅಮ್ಮನವರ ನೂತನ ದೇವಾಲಯ ಮತ್ತು ಮೂಲಶಿಲಾಬಿಂಬ ಪ್ರತಿಷ್ಟಾಪನೆ ಹಾಗೂ ವಿಮಾನಗೋಪುರ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದ ಲೋಕಾರ್ಪಣೆ ಮಾಡಿ ಮಾತನಾಡುತಿದ್ದ ಅವರು, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಇದೆ.ರಾಜಧಾನಿಯಲ್ಲಿ ಏನೇನು ನಡೆಯುತ್ತಿದೆ ಎಂಬ ವಿದ್ಯಾಮಾನಗಳ ಅರಿವಿದೆ.ಇದುವರೆಗೂ ರಾಜ್ಯದ ಮತದಾರರು ನಮಗೆ ಪೂರ್ಣ ಬಹುಮತ ನೀಡಿಲ್ಲ. ಹಾಗಿದ್ದೂ ಸಹ ಸಿದ್ದರಾಮಯ್ಯನ ವಿರೋಧದ ನಡುವೆಯೂ 25 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ಈ ರಾಜ್ಯದ ರೈತರ ಬೆನ್ನಿಗೆ ನಿಂತಿದ್ದೇವೆ ಎಂದರು. ಸಿದ್ದರಾಮಯ್ಯ ಅಹಿಂದ ಸೋಗಿನಲ್ಲಿ ಜನರಲ್ಲಿ ವಿಷ ಬೀಜ ಬಿತ್ತುತಿದ್ದಾರೆ.ನಾವು ಎಲ್ಲಾ ಜನಾಂಗದವರಿಗೂ ಒಳ್ಳೆಯ ಕೆಲಸವನ್ನೇ ಮಾಡಿದ್ದೇವೆ.ಸ್ಥಳೀಯ ಸಂಸ್ಥೆಗಳಲ್ಲಿ…

Read More

ತುಮಕೂರು: ಪ್ರಸ್ತುತ ದಿನಗಳಲ್ಲಿ ಹೊಸ ಹೊಸ ತಂತ್ರಜ್ಞಾನ ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು ಅಸ್ಸಾಂನ ಗುವ್ಹಾಟಿಯ ಐಐಟಿ ಕಾಲೇಜಿನ ಪೆÇ್ರಫೆಸರ್ ಡಾ. ರಾಯ್ ಪಿ. ಪೈಲಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಟೆಕ್ನಿಷಿಯಮ್-2022 ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳು ಬಹಳ ಆಸಕ್ತಿ ವಹಿಸಿ ಸಮಾಜದ ಪ್ರಗತಿಗೆ ಕೊಡುಗೆ ನೀಡಬೇಕು. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ತಂತ್ರಜ್ಞಾನದ ಬಗ್ಗೆ ಒಲವು ತೋರಬೇಕು ಎಂದು ಅವರು ಹೇಳಿದರು. ನವೀನ ತಂತ್ರಜ್ಞಾನ ಬಳಕೆಯಿಂದ ಭವ್ಯ ಭಾರತ ಮತ್ತು ವಿಜ್ಞಾನಯುತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು. ವಿದ್ಯಾರ್ಥಿಗಳ ಹವ್ಯಾಸಿ ಮಾದರಿ ಪ್ರದರ್ಶನ ಉದ್ಘಾಟಿಸಿದ ಧಾರವಾಡದ ಐಐಟಿಯ ಪೆÇ್ರ. ಡಾ ಎಸ್.ಆರ್. ಮಹಾದೇವ ಪ್ರಸನ್ನ ಮಾತನಾಡಿ, ಹೊಸ ಹೊಸ ಆಲೋಚನೆಗಳೊಂದಿಗೆ ಯುವ ಸಮುದಾಯ ತಂತ್ರಜ್ಞಾನದ ಸದ್ಭಳಕೆ ಮಾಡಿಕೊಂಡು, ಪ್ರಯೋಗತ್ಮಕ ಮತ್ತು ಸಮುದಾಯ ಸ್ನೇಹಿ ಅನ್ವೇಷಣೆಗಳತ್ತ ಗಮನ ಹರಿಸಬೇಕು ಎಂದರು. 21ನೇ ಶತಮಾನವನ್ನು…

Read More

ತುಮಕೂರು: ಮಕ್ಕಳಿಗೆ ಆತ್ಮವಿಶ್ವಾಸ ತುಂಬಿ, ಬದುಕು ಕಟ್ಟಿಕೊಳ್ಳುವಂತೆ ಪ್ರೇರೆಪಿಸುವ ವ್ಯಕ್ತಿಯೇ ನಿಜವಾದ ಶಿಕ್ಷಕ, ಅದೇ ನಿಜವಾದ ಶಿಕ್ಷಣ ಎಂದು ಚಿಂತಕ ಕೆ.ದೊರೈರಾಜು ಅಭಿಪ್ರಾಯಪಟ್ಟಿದ್ದಾರೆ. ನಗರದ ಕನ್ನಡ ಭವನದಲ್ಲಿ ಶ್ರೀಸಿದ್ದಾರ್ಥ ಪಿಯು ಕಾಲೇಜು ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ನಿವೃತ್ತ ಪ್ರಾಂಶಪಾಲರಾದ ಎಂ.ರಾಜಯ್ಯ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಜೊತೆಗೆ, ಬದುಕು ಕಟ್ಟಿಕೊಡುವಂತಹ ಮಾನವೀಯ ಸಂಬಂಧಗಳನ್ನು ಎಂ.ರಾಜಯ್ಯ ರೂಢಿಸಿಕೊಂಡಿದ್ದರು. ಇದರ ಫಲವಾಗಿಯೇ ಇಂದು ಅವರ ಶಿಷ್ಯ ವೃಂದ ಮತ್ತು ಸಹಪಾಠಿಗಳು ಸೇರಿ ಅಭಿನಂದಿಸುತ್ತಿರುವುದು ಅಪರೂಪದ ಕಾರ್ಯಕ್ರಮ ಎಂದರು. ವರ್ತಮಾನದ ಎಚ್ಚರಿಕೆ ಇಲ್ಲದೆ, ಭವಿಷ್ಯ ಕಟ್ಟಲು ಸಾಧ್ಯವಿಲ್ಲ.ಹಾಗಾಗಿ ಶಿಕ್ಷಕರಾದವರಿಗೆ ವರ್ತಮಾನದ ತಲ್ಲಣಗಳಿಗೆ ಉತ್ತರ ಹುಡುಕುತ್ತಾ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಆಗಬೇಕಾಗಿದೆ. ನನ್ನ ಜೊತೆಗೆ, ನಾನು ಬದುಕುತ್ತಿರುವ ಸಮಾಜವೂ ಚನ್ನಾಗಿರಬೇಕು ಎಂಬ ಅಂಬೇಡ್ಕರ್ ಅವರ ತತ್ವವನ್ನು ಅಳವಡಿಸಿಕೊಂಡು ಮುನ್ನೆಡೆಯಬೇಕಿದೆ.ಶೋಷಿತ ಸಮುದಾಯಗಳಿಗೆ, ಬಡತನದಿಂದ ಬದುಕುತ್ತಿರುವ ಯುವಜನರಿಗೆ ಶಿಕ್ಷಣವೇ ಬಂಡವಾಳ. ಆದರೆ ಶಿಕ್ಷಣ ಉದ್ಯಮಿಕರಣದಿಂದಾಗಿ ಬಡವರಿಗೆ ಶಿಕ್ಷಣ ಕೈಗೆಟುಕದಂತಾಗಿದೆ.ಇದರ ಬಗ್ಗೆಯೂ…

Read More

ತುಮಕೂರು: ಪಠ್ಯಪುಸ್ತಕದಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆಮುಂದೆ ಪ್ರತಿಭಟನೆ ನಡೆಸುತ್ತಿದ್ದ ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ, ಅವರನ್ನು ಬಂಧಿಸಿ, ಜೈಲಿಗೆ ಹಾಕಿರುವುದ್ನು ಖಂಡಿಸಿರುವ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ, ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಬಂಧಿತ ಎನ್.ಎಸ್.ಯು.ಐ ಕಾರ್ಯಕರ್ತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದರು. ನಗರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಬಂಧಿತರೊಂದಿಗೆ ಕೆಲ ಕಾಲ ಮಾತನಾಡಿ, ಪ್ರಕರಣದ ಸಂಪೂರ್ಣ ವಿವರಣೆ ಪಡೆದ ಆರ್.ರಾಜೇಂದ್ರ ಅವರು,ಬಂಧಿತರಿಗೆ ಧೈರ್ಯ ತುಂಬಿರುವುದಲ್ಲದೆ,ಶಾಂತಿಯುತ ಪ್ರತಿಭಟನೆ ನಡಸಲು ಮುಂದಾದ ಕಾರ್ಯಕರ್ತರನ್ನು ಮನೆಗೆ ಬೆಂಕಿ ಹಚ್ಚಲು ಬಂದಿದ್ದರು ಎಂದು ಸುಳ್ಳು ಆರೋಪ ಹೊರಸಿ ಜೈಲಿಗೆ ಅಟ್ಟಿರುವುದು ಸರಿಯಲ್ಲ.ಶಾಂತಿಯುತ ಪ್ರತಿಭಟನೆಯ ಭಾಗವಾಗಿಯೇ ಆರ್.ಎಸ್.ಎಸ್.ಸಂಕೇತವಾದ ಚಡ್ಡಿಗೆ ಬೆಂಕಿ ಹಚ್ಚಿದ್ದಾರೆ. ಆದರೆ ಇದನ್ನು ಸಹಿಸದ ಬಿಜೆಪಿ ಮುಖಂಡರು, ಎನ್.ಎಸ್.ಯು.ಐ ಕಾರ್ಯಕರ್ತರು ಗುಂಡಾಗಳು ಎಂಬಂತೆ ಬಿಂಬಿಸಿ,ವಿದ್ಯಾರ್ಥಿ ಸಂಘಟನೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಂಧನಕ್ಕೆ ಒಳಗಾಗಿರುವ ಎನ್.ಎಸ್.ಯು.ಐ ಕಾರ್ಯಕರ್ತರು ಹೇಳುವ…

Read More

ಗುಬ್ಬಿ: ತಾಲೂಕಿನ ನಿಟ್ಟೂರಿನಲ್ಲಿ ಹಾದು ಹೋಗಿರುವ ಎನ್.ಎಚ್ 206 ನಲ್ಲಿ ಅಂಡರ್ ಪಾಸ್ ನೀಡುವಂತೆ ಏನ್ ಎಚ್ 206 ಅಧಿಕಾರಿಗಳ ವಿರುದ್ದ ಗ್ರಾಮದ ಸಾರ್ವಜನಿಕರು ರೈತರು ವ್ಯಾಪಾರಸ್ಥರು ಹಾಗೂ ಈ ಮುಖಂಡರುಗಳು ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಏನ್.ಸಿ ಗಿರೀಶ್ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಈ ಭಾಗದಲ್ಲಿ ದಿನನಿತ್ಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಓಡಾಟ ಮಾಡುತ್ತಾರೆ ಆದರೆ ಇಲ್ಲಿ ಅಂಡರ್ ಪಾಸ್ ಇಟ್ಟಿಲ್ಲ ಹಲವು ಬಾರಿ ಮನವಿ ಮಾಡಿದರು ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿ ಕೊಂಡಿಲ್ಲ ಇಡೀ ಊರನ್ನೇ ಎರಡು ಭಾಗ ಮಾಡಿದ್ದಾರೆ ಪ್ರತಿನಿತ್ಯ ರೈತರು ದನಕರು, ಹಸು, ಒಡೆದು ಕೊಂಡು ತೋಟಗಳಿಗೆ ಹೋಗಬೇಕು ಅಂದರೆ ಅರ್ಧ ಕಿ. ಮೀ ಗೂ ಹೆಚ್ಚು ದೂರ ಸಾಗಬೇಕಿದೆ ಇದರಿಂದ ಸಾಕಷ್ಟು ಸಮಸ್ಯೆ ಇದೆ ಇದನ್ನು ಕೊಡಲೇ ಬಗೆ ಹರಿಸಬೇಕು ಇಲ್ಲ ದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ…

Read More

ತುಮಕೂರು: ಶುಕ್ರವಾರ ಏಕಾಏಕಿ ದಿಢೀರನೇ ಮಾರುಕಟ್ಟೆಗೆ ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ ನೇತೃತ್ವದ ಅಧಿಕಾರಿಗಳು ಹಾಗೂ ಎಪಿಎಂಸಿ ಸದಸ್ಯರ ತಂಡ ಬೇಟಿ ನೀಡಿ ಅನದಿಕೃತ ಅಂಗಡಿ ಮಳಿಗೆಗಳಿಗೆ ಶಾಕ್ ನೀಡಿದ್ದಲ್ಲದೇ ಅನಧಿಕೃತ ಅಂಗಡಿ ಮಳಿಗೆಗಳು ಹಾಗೂ ಸ್ವಚ್ಚತೆ ಕಾಪಾಡದ ಅಂಗಡಿಗಳಿಗೆÉ 1,07,500-00 ದಂಡ ವಿಧಿಸಿದ್ದಾರೆ. ಸ್ವಚ್ಚತೆ ಇಲ್ಲದವರಿಗೆ ಒತ್ತುವರಿಯವರಿಗೂ ದಂಡ: ಅಂಗಡಿ ಮಳಿಗೆಗಳ ಮುಂದೆ ಕಸಕಡ್ಡಿ, ತ್ಯಾಜ್ಯ ಎಸೆದು ಸರಿಯಾಗಿ ಬಳಕೆ ಮಾಡದೆ, ರೋಗರುಜಿನಗಳು ಉದ್ಬವವಾಗುವಂತೆ ಸ್ವಚ್ಚತೆ ಕಾಪಾಡದ ಅಂಗಡಿಗಳನ್ನಾ, ಸ್ವತಃ ಕಾಲ್ನೆಡಿಗೆಯ ಮೂಲಕ ಸುತ್ತಿ ಹುಡುಕಿ ದಂಡ ವಿದಿಸಲಾಯಿತು. ಹಾಗೆಯೇ ಎಪಿಎಂಸಿ ನೀಡಿದ ಜಾಗ ಬಿಟ್ಟು ರಸ್ತೆ ತುಂಬಾ ತರಕಾರಿ ಸುರಿದು ವಾಹನಗಳಿಗೆ, ಸಾರ್ವಜನಿಕರಿಗೆ ತೊಂದರೆಯುಂಟುಮಾಡುತ್ತಿದ್ದ ವರ್ತಕರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗಿದೆ. ಅನಧಿಕೃತ ಅಂಗಡಿಗಳಿಗೆ ಶುಕ್ರವಾರದವರೆಗೆ ಗಡುವು..! ಅನದಿಕೃತವಾಗಿ ಸಿಕ್ಕಸಿಕ್ಕ ಜಾಗದಲ್ಲೇ ಶೆಡ್ ನಿರ್ಮಿಸಿಕೊಂಡು, ನೈಜ ವ್ಯಾಪಾರಸ್ಥರಿಗೆ ತೊಂದರೆಯುಂಟು ಮಾಡುತ್ತಿದ್ದ ಅನಧಿಕೃತ ವ್ಯಾಪಾರಸ್ಥರಿಗೆ ಸ್ಥಳದಲ್ಲೇ ಚಳಿಬಿಡಿಸಿದ ಸಮಿತಿ, ಶುಕ್ರವಾರದೊಳಗೆ ಅನಧಿಕೃತ ಅಂಗಡಿಗಳನ್ನಾ ಮುಚ್ಚಲು ಡೆಡ್‍ಲೈನ್ ನೀಡಿದೆ. ಮಾರುಕಟ್ಟೆ ಸಮಯ ಮೊದಲಿನಂತೆ..…

Read More

ತುಮಕೂರು: ಜಿಲ್ಲೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡುವ ಪ್ರಮಾಣ ಜಾಸ್ತಿಯಾಗಿದ್ದು, ಇದನ್ನು ತಗ್ಗಿಸುವ ಅಗತ್ಯವಿದೆ. ಆಸ್ಪತ್ರೆಗಳಿಗೆ ದಾಖಲಾಗುವ ಗರ್ಭಿಣಿಯರಿಗೆ ಅಗತ್ಯ ಪರೀಕ್ಷೆಗಳನ್ನು ನಡೆಸಿ, ಅನಗತ್ಯವಾಗಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವುದನ್ನು ಕಡಿಮೆ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿಂದು ಜರುಗಿದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ತಾಯಿ ಮತ್ತು ಶಿಶುಗಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ರಚಿಸಿ ಕರ್ತವ್ಯವನ್ನು ನಿರ್ವಹಿಸಬೇಕೆಂದು ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಕಳೆದ ಏಪ್ರಿಲ್ 2021 ರಿಂದ 2022ರ ಮಾರ್ಚ್‍ವರೆಗೆ ಒಟ್ಟು 37 ತಾಯಿ ಮರಣ ಹಾಗೂ 23 ಶಿಶು ಮರಣ ಪ್ರಕರಣ ದಾಖಲಾಗಿದ್ದು, ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸಲು ಅಗತ್ಯ ಕ್ರಮವಹಿಸಬೇಕು ಇಲ್ಲವಾದಲ್ಲಿ ತಮ್ಮಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದರು. ಗರ್ಭಿಣಿ ಮತ್ತು ಶಿಶುಗಳಿಗೆ ನೀಡುವ ಚುಚ್ಚುಮದ್ದು ಪ್ರಗತಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು…

Read More

ತುರುವೇಕೆರೆ: ರೈತ ನಾಯಕ ಟಿಕಾಯತ್‍ಗೆ ಮಸಿ ಬಳಿದಿರುವ ಘಟನೆಯನ್ನು ಖಂಡಿಸಿ ರೈತ ಸಂಘ, ಸಿ.ಐ.ಟಿ.ಯು. ಸೇರಿದಂತೆ ವಿವಿದ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು ಕೃಷಿ ಪ್ರಧಾನ ರಾಷ್ಟ್ರದಲ್ಲಿ ರೈತ ನಾಯಕನಿಗೆ ಮಸಿ ಬಳಿದಿರುವುದು ಇಡೀ ದೇಶದ ರೈತ ಸಂಕುಲವನ್ನು ಅವಮಾನಿಸಿದಂತಾಗಿದೆ. ಬಿ.ಜೆ.ಪಿ. ಪಕ್ಷವು ಪರೋಕ್ಷವಾಗಿ ತನ್ನದೇ ಪಕ್ಷದ ಗೂಂಡಾಗಳಿಂದ ಕೃತ್ಯವೆಗಿರುವುದು ನಾಚಿಕೆಗೇಡು. ರೈತ ನಾಯಕನೆಂದು ಬಿಂಬಿಸಿಕೊಂಡು ವಸೂಲಿ ದಂದೆಗಿಳಿದಿರುವ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ಸರಕಾರ ತನಿಖೆ ನಡೆಸಲಿ ಎಂದು ಆಗ್ರಹಿಸಿದರು. ಸಿ.ಐ.ಟಿ.ಯು ಕಾರ್ಯದಶೀ ಸತೀಶ್ ಮಾತನಾಡಿ ದೇಶದಲ್ಲಿ ದಿನಗಳೆದಂತೆ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಬಿ.ಜೆ.ಪಿ. ಸರಕಾರ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ರೈತರು ಬಡ ಜನರನ್ನು ಶೋಷಣೆ ಮಾಡಲು ಮುಂದಾಗಿದೆ. ಹೋರಾಟಗಾರನ್ನು ಸಹ ಬಿಡದೇ ಅವಮಾನಿಸುತ್ತಿರುವುದು ದೇಶವಾಸಿಗಳಿಗೆ ಮಾಡಿದ ಅವಮಾನ, ದಿನಕ್ಕೊಂದು ಅನಗತ್ಯಗಳು ರಾಜ್ಯದಲ್ಲಿ ಘಟಿಸುತ್ತಿದ್ದು ರಾಜ್ಯ ಸರಕಾರದ ಆಡಳಿತ ನಿಷ್ಕ್ರಿಯವಾಗಿದ್ದು ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ರೈತ ಟಿಕಾಯತ್ ಅವರಿಗೆ ಮಸಿ ಬಳಿದಿರುವ…

Read More

ತುಮಕೂರು: ನಗರದ ಬೆಳಗುಂಬ ರಸ್ತೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಮೀಪದಲ್ಲಿ ನೂತನವಾಗಿ ಆರಂಭಗೊಂಡಿರುವ ಕರುನಾಡ ಮಿತ್ರ ಫೌಂಡೇಷನ್ (ರಿ.) ಕಚೇರಿಯನ್ನು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಟೂಡಾ ಅಧ್ಯಕ್ಷ ಬಾವಿಕಟ್ಟೆ ಬಿ.ಎಸ್.ನಾಗೇಶ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಮಾಜಸೇವೆಯನ್ನು ಗುರಿಯಾಗಿಸಿಕೊಂಡು ಅನೇಕರು ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ, ಅವರ ಸಾಲಿನಲ್ಲಿ ಟೂಡಾ ಸದಸ್ಯರಾದ ಜೆ.ಜಗದೀಶ್ ಅವರೂ ಸಹ ಹಲವಾರು ವರ್ಷಗಳಿಂದಲೂ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಜೊತೆಗೆ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಯುವಕರಿಗೆ ಉತ್ತೇಜನ ನೀಡುತ್ತಿದ್ದಾರೆ. ಈಗ ಕರುನಾಡಮಿತ್ರ ಫೌಂಡೇಷನ್ ಆರಂಭಿಸಿದ್ದು, ಇದರಡಿಯಲ್ಲಿ ಇವರ ಸೇವಾ ಕಾರ್ಯ ಮತ್ತಷ್ಟು ಮುಂದುವರೆಯಲಿ ಎಂದು ಶುಭ ಹಾರೈಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಯುವಕರಿಗೆ ಸ್ಪೂರ್ತಿಯಾಗಿರುವ ಜಗದೀಶ್ ಅವರು, ಸೇವಾ ಮನೋಭಾವದಿಂದ ಕರುನಾಡಮಿತ್ರ ಫೌಂಡೇಷನ್ ಆರಂಭಿಸಿದ್ದು, ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾವಿಕಟ್ಟೆ ಬಿ.ಎಸ್.ನಾಗೇಶ್ ಮಾತನಾಡಿ, ಹಲವಾರು ವರ್ಷಗಳಿಂದಲೂ ಜಗದೀಶ್ ಅವರ ಸೇವಾ…

Read More

ತುಮಕೂರು: ಶೋಷಣೆ ರಹಿತ ಸಮಾನತೆಯ ಸಮಾಜದ ಸೃಷ್ಟಿಗಾಗಿ ಹೋರಾಡಿದ ಸಾಮಾಜಿಕ ಹರಿಕಾರ ವಿಶ್ವಗುರು ಬಸವಣ್ಣ ಹಾಗೂ ಮೋಕ್ಷ ಸಾಧಿಸಲು ಕರುಣೆ ಮತ್ತು ಶಾಂತಿಯ ದೂತರಾದ ಬುದ್ಧನ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದು ಮೈಸೂರಿನ ಬಸವ ಧ್ಯಾನಮಂದಿರದ ಶ್ರೀ ಬಸವಲಿಂಗಮೂರ್ತಿ ಶರಣರು ಕರೆ ನಿಡಿದರು. ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ಕನ್ನಡ ವಿಭಾಗ ಮತ್ತು ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಬುದ್ಧ ಮತ್ತು ಬಸವಣ್ಣನವರ ಜನ್ಮದಿನಾಚರಣೆ ಹಾಗೂ ಡಾ.ಹೆಚ್.ಎಂ.ಗಂಗಾಧರಯ್ಯ ಸ್ಮಾರಕ ಉಪನ್ಯಾಸ ಮಾಲೆ-2 ಅಂಗವಾಗಿ ‘ಬುದ್ಧ-ಬಸವಣ್ಣನವರ’ ವಿಚಾರಧಾರೆ ಕಾರ್ಯಕ್ರಮದಲ್ಲಿ ಬುದ್ಧ ಹಾಗೂ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಇಡೀ ಜಗತ್ತಿಗೆ ಬೆಳಕನ್ನು ನೀಡಿದ ಬುದ್ಧ-ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಆದರ್ಶ ಬದುಕು ಸಾಗಿಸಬೇಕು. ಬುದ್ಧ-ಬಸವಣ್ಣನವರ ಕಾಲಮಿತಿ ಬೇರೆಯಾದರು ಅವರಿಬ್ಬರು ಸಮಾನ ಮನಸ್ಕರು. ಜನರಿಗೆ ತಿಳುವಳಿಕೆ ಹೇಳುವ ಮೂಲಕ ಸಮಾಜದಲ್ಲಿ ಮೇಲು-ಕೀಳು ಇಲ್ಲದೇ ಎಲ್ಲರೂ ಸಮಾನತೆಯಿಂದ ಬದುಕುವ ಸಂಕಲ್ಪ ಅವರದಾಗಿತ್ತು…

Read More