Author: News Desk Benkiyabale

ತುಮಕೂರು : ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿರುವ ಗ್ರಾಮ ಒನ್ ಕೇಂದ್ರಗಳಲ್ಲಿ ಬಿಪಿಎಲ್, ಎಪಿಎಲ್ ಕಾರ್ಡುದಾರರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಎಆರ್‍ಕೆ) ಕಾರ್ಡುಗಳನ್ನು ಮೊದಲಾದ್ಯತೆ ಮೇರೆಗೆ ವಿತರಿಸುವ ನಿಟ್ಟಿನಲ್ಲಿ ಆಯಾ ತಹಶೀಲ್ದಾರರು ಹಾಗೂ ತಾಲ್ಲೂಕ್ ಆರೋಗ್ಯಾಧಿಕಾರಿಗಳು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದರು. ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿಂದು ತಾಲ್ಲೂಕ್ ಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫೆರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು 15 ರಿಂದ 17 ವಯಸ್ಸಿನೊಳಗಿನವರ ಲಸಿಕಾಕರಣವು ಮುಂದುವರೆದಿದ್ದು, ಮೊದಲ ಡೋಸ್ ಶೇ.77 ಹಾಗೂ ಎರಡನೇ ಡೋಸ್ ಶೇ.66 ಪೂರ್ಣಗೊಂಡಿದೆ ಎಂದರಲ್ಲದೇ ಲಸಿಕಾಕರಣವನ್ನು ತೀವ್ರಗತಿಯಲ್ಲಿ ಹೆಚ್ಚಿಸಿ ಶೇ.100ರಷ್ಟು ಪೂರ್ಣಗೊಳಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ ತಡೆಗಟ್ಟುವುದಕ್ಕಾಗಿ 12 ರಿಂದ 14 ವಯೋಮಾನದ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುತ್ತಿದ್ದು ಮೊದಲ ಡೋಸ್ ಶೇ.58ರಷ್ಟು ಪೂರ್ಣಗೊಂಡಿದೆ ಎಂದ ಅವರು ತಾಲ್ಲೂಕ್ ವೈದ್ಯಾಧಿಕಾರಿಗಳು ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚು ಮಕ್ಕಳಿರುವ ಕಡೆ ಲಸಿಕಾ ಕೇಂದ್ರಗಳನ್ನು ತೆರೆದು ಶೇ.100ರಷ್ಟು ಲಸಿಕಾಕರಣವನ್ನು ಪೂರ್ಣಗೊಳಿಸಲು ಮುಂದಾಗಬೇಕು ಎಂದರು. 18 ವರ್ಷ ಮೇಲ್ಪಟ್ಟವರಿಗೆ…

Read More

ತುಮಕೂರು: ನಗರದ ಕನ್ನಡ ಭವನದಲ್ಲಿ ತುಮಕೂರು ಜಿಲ್ಲಾ ವೈ.ಎ.ಎನ್.ಅಭಿಮಾನಿ ಬಳಗ ಹಾಗೂ ಶಿಕ್ಷಕರು ಮತ್ತು ಉಪನ್ಯಾಸಕರ ಸಂಘಟನೆಗಳ ವತಿಯಿಂದ ವಿಧಾನಪರಿಷತ್ ಸದಸ್ಯ ಹಾಗೂ ಸರಕಾರದ ಮುಖ್ಯ ಸಚೇತಕ ಡಾ.ವೈ.ಎ. ನಾರಾಯಣಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಮಾತನಾಡಿ, ವಿಧಾನಪರಿಷತ್ ಸದಸ್ಯರಿಗು ವಿಧಾನಸಭೆಗೆ ಇರುವಷ್ಟೇ ಜವಾಬ್ದಾರಿ ಇರುತ್ತೆ.ಕೆಳಮನೆಯ ತೀರ್ಮಾನಗಳು, ಮೇಲ್ಮೆನೆಯಲ್ಲಿ ವಿಸ್ಕøತ ಚರ್ಚೆಗಳಾಗಿ, ನಂತರ ಕಾಯ್ದೆಗಳಾಗಿ ಜಾರಿ ಬರುತ್ತದೆ.ಹಾಗಾಗಿ ವಿಧಾನಪರಿಷತ್ತಿನ ಚರ್ಚೆಗಳನ್ನು ಸರಕಾರ ಬಹಳ ಗಂಭೀರವಾಗಿ ಪರಿಗಣಿಸುತ್ತದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಉದ್ದೇಶಪೂರ್ವಕ ಮಾಡುವ ಕೆಲ ತಪ್ಪುಗಳು, ಇಡೀ ಇಲಾಖೆಯನ್ನೇ ಗೊಂದಲದ ಗುಡಾಗಿದೆ. ಶಿಕ್ಷಣ ಇಲಾಖೆ ಮತ್ತು ಕಾನೂನು ಇಲಾಖೆಯ ಮಂತ್ರಿಗಳ ಸಹಕಾರ ಪಡೆದು, ಈ ಗೊಂದಲಗಳಿಗೆ ಪರಿಹಾರ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಹಳೆ ಪಿಂಚಿಣಿ ವ್ಯವಸ್ಥೆ ಜಾರಿ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಡಾ.ವೈ.ಎ.ಎನ್.ಮುಖ್ಯಸಚೇತಕರಾಗಿರುವ ಕಾಲದಲ್ಲಿಯೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು. ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಸದಾ ನಗುಮುಖದ ವೈ.ಎ.ಎನ್.ಅವರು ಮೂರು…

Read More

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಪೆದ್ದನ ಹಳ್ಳಿಯಲ್ಲಿ ಇಬ್ಬರು ದಲಿತ ಯುವಕರ ಬರ್ಬರ ಹತ್ಯೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ ( ಮಾಕ್ರ್ಸವಾದಿ) ತುಮಕೂರು ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತದೆ. ಕೂಡಲೇ ಪ್ರಮುಖ ಅಪರಾಧಿಗಳನ್ನು ಬಂಧಿಸಿ ನಿಕ್ಷಪಾತವಾಗಿ ತನಿಕೆ ನಡೆಸಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತದೆ. ಯುವಕರು ತಪ್ಪು ಮಾಡಿದ್ದಾರೆಂಬ ಕಾರಣ ನೀಡಿ, ಕೊಲೆಗಳ ಸಮರ್ಥನೆಗೆ ಮುಂದಾಗುವುದನ್ನು ಒಪ್ಪಲಾಗದು. ಭೀಕರ ಕೊಲೆಯ ಪರಿಸ್ಥಿತಿಯನ್ನು ಗಮನಿಸಿದರೆ ಅದರ ಹಿಂದೆ ವ್ಯವಸ್ಥಿತ ಸಂಚು ಮತ್ತು ತಂಡ ಇರುವುದು ಕಂಡು ಬರುತ್ತದೆ. ಸಂಚನ್ನು ಭೇಧಿಸಿ ರಾಜ್ಯದ ಜನತೆಗೆ ನಿಜವೇನೆಂದು ತಿಳಿಸಲು ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಕೊಲೆಯಾದ ಕುಟುಂಬಗಳಿಗೆ ತಕ್ಷಣವೇ ಅಗತ್ಯ ಪರಿಹಾರವನ್ನು ಘೋಷಿಸುವಂತೆ ಸಿಪಿಐ(ಎಂ) ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ.

Read More

ತುಮಕೂರು : ಜಿಲ್ಲೆಯ ಗುಬ್ಬಿ ತಾಲೂಕಿನ ಪೆದ್ದನ ಹಳ್ಳಿಯಲ್ಲಿ ಇಬ್ಬರು ದಲಿತ ಯುವಕರ ಬರ್ಬರ ಹತ್ಯೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ ( ಮಾಕ್ರ್ಸವಾದಿ) ತುಮಕೂರು ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತದೆ. ಕೂಡಲೇ ಪ್ರಮುಖ ಅಪರಾಧಿಗಳನ್ನು ಬಂಧಿಸಿ ನಿಕ್ಷಪಾತವಾಗಿ ತನಿಕೆ ನಡೆಸಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತದೆ. ಯುವಕರು ತಪ್ಪು ಮಾಡಿದ್ದಾರೆಂಬ ಕಾರಣ ನೀಡಿ, ಕೊಲೆಗಳ ಸಮರ್ಥನೆಗೆ ಮುಂದಾಗುವುದನ್ನು ಒಪ್ಪಲಾಗದು. ಭೀಕರ ಕೊಲೆಯ ಪರಿಸ್ಥಿತಿಯನ್ನು ಗಮನಿಸಿದರೆ ಅದರ ಹಿಂದೆ ವ್ಯವಸ್ಥಿತ ಸಂಚು ಮತ್ತು ತಂಡ ಇರುವುದು ಕಂಡು ಬರುತ್ತದೆ. ಸಂಚನ್ನು ಭೇಧಿಸಿ ರಾಜ್ಯದ ಜನತೆಗೆ ನಿಜವೇನೆಂದು ತಿಳಿಸಲು ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಕೊಲೆಯಾದ ಕುಟುಂಬಗಳಿಗೆ ತಕ್ಷಣವೇ ಅಗತ್ಯ ಪರಿಹಾರವನ್ನು ಘೋಷಿಸುವಂತೆ ಸಿಪಿಐ(ಎಂ) ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ.

Read More

ತುಮಕೂರು: ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ಪೆದ್ದನಹಳ್ಳಿಯಲ್ಲಿ ಕಳ್ಳತನದ ಶಂಕೆ ಮೇಲೆ ಇಬ್ಬರು ದಲಿತ ಯುವಕರ ಹತ್ಯೆ ಆಘಾತಕಾರಿಯಾಗಿದೆ. ಗ್ರಾಮಸ್ಥರ ತೋಟದಲ್ಲಿ ಪಂಪ್‍ಸೆಟ್ ಕದಿಯಲು ಬಂದಿದ್ದಾರೆ ಎಂದು ಶಂಕಿಸಿ ಮಂಚಲದೊರೆ ಗ್ರಾಮದ ಗಿರೀಶ್ ಮತ್ತು ಪಿ.ಎಂ.ಗಿರೀಶ್ ಎಂಬ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಇಂತಹ ಅಮಾನವೀಯ ಕೃತ್ಯ ಎಸಗಿರುವ ದುರುಳರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಡಾ. ರಫೀಕ್ ಅಹ್ಮದ್ ಒತ್ತಾಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮನುಷ್ಯತ್ವಕ್ಕಿಂತ ಜಾತಿ ಎಂಬ ವಿಕೃತಿ ಮೇಲುಗೈ ಸಾಧಿಸಿ ದೌರ್ಜನ್ಯಗಳ ರುದ್ರನರ್ತನವಾಡುತ್ತಿದೆ. ದಿನೇ ದಿನೇ ದಲಿತರ ಮೇಲೆ ದೌರ್ಜನ್ಯ ಮಾಡುವ ಪ್ರಕರಣಗಳು ಹೆಚ್ಚುತ್ತಿದೆ. ದಿನೇ ದಿನೇ ದಲಿತರ ಮೇಲಿನ ದೌರ್ಜನ್ಯ ಮಡುಗಟ್ಟುತ್ತಿದೆ. ದಲಿತರು ಸಮಾಜದಲ್ಲಿ ಎಲ್ಲರಂತೆ ಬದುಕಲು ಸಾಧ್ಯವಾಗದ ದುಸ್ಥಿತಿ ನಮ್ಮ ದೇಶಕ್ಕೆ ಬಂದೊದಗಿದೆ ಎಂದು ಮಾಜಿ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವವನ್ನು ಕಡೆಗಣಿಸುತ್ತಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದಲಿತರ ವಿರುದ್ದ ತಮ್ಮದೇ ಪರ್ಯಾಯ ಪ್ರಭುತ್ವ ರಚಿಸಿಕೊಳ್ಳುತ್ತಿರುವ ಬೆಳವಣಿಗೆ ಇಡೀ ದೇಶಕ್ಕೆ ಮಾರಕವಾಗಿ ಪರಿಣಮಿಸಲಿದೆ.…

Read More

ತುಮಕೂರು: ಭಾರತಕ್ಕೆ ಮೊಘಲರು ಮತ್ತು ಬ್ರಿಟಿಷರು ಬರುವ ಮುಂಚೆ ದೇಶದ ಜಿಡಿಪಿಗೆ ಶೇ49ರಷ್ಟು ಕೊಡುಗೆ ನೀಡುತಿದ್ದ ಭಾರತೀಯ ಅರ್ಥಿಕತೆ, ಭಾರತದ ಸಂಪತ್ತನ್ನು ಮುಸ್ಲಿಂ ರಾಷ್ಟ್ರಗಳು ಮತ್ತು ಯುರೋಪಿಯನ್ ರಾಷ್ಟ್ರಗಳು ಕಬಳಿಸಿದ ಪರಿಣಾಮ ಇಂದು ಶೇ4 ರಷ್ಟು ಮಾತ್ರ ಜಿಡಿಪಿ ನೀಡಲು ಸಾಧ್ಯವಾಗಿದೆ ಎಂದು ವಿಶ್ವ ಹಿಂದು ಪರಿಷತ್‍ನ ರಾಷ್ಟ್ರ ಜಂಟಿ ಕಾರ್ಯದರ್ಶಿ ಹಾಗೂ ಹಿಂದು ಅರ್ಥಿಕ ವೇದಿಕೆ ಶ್ರೀಶ್ರೀವಿಜ್ಞಾನಾನಂದ ಸ್ವಾಮೀಜಿ ತಿಳಿಸಿದ್ದಾರೆ. ನಗರದ ಸಿದ್ದಗಂಗಾ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಹಿಂದೂ ಅರ್ಥಿಕ ವೇದಿಕೆಯ ತುಮಕೂರು ಘಟಕಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಹಿಂದೂ ಪರ ವ್ಯಾಪಾರಸ್ಥರನ್ನು ಒಗ್ಗೂಡಿಸಿ, ಅವರಿಗೆ ಇಂದಿನ ಭಾರತ ಆರ್ಥಿಕ ದುಸ್ಥಿತಿಗೆ ಕಾರಣಗಳೇನು, ಅವುಗಳನ್ನು ಹೇಗೆ ಮೆಟ್ಟಿನಿಂತು, 15ನೇ ಶತಮಾನದ ಅರ್ಥಿಕ ಗತವೈಭವವನ್ನು ಭಾರತದಲ್ಲಿ ಸ್ಥಾಪಿಸುವುದೇ ಹಿಂದೂ ಅರ್ಥಿಕ ವೇದಿಕೆ ಹುಟ್ಟು ಹಾಕುವುದೇ 2009ರಲ್ಲಿ ಸ್ಥಾಪನೆಗೊಂಡ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು. ವಿಶ್ವದ ಶೇ2 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಅಮೇರಿಕಾ ದೇಶ ಶೇ20ರಷ್ಟು ಆದಾಯವನ್ನು ಹೊಂದಿದೆ.ಚೀನಿ ಆರ್ಥಿಕ ಫೋರಂ ನಡೆಸಿದ…

Read More

ತುಮಕೂರು: ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್‍ಕುಮಾರ್ ಅವರು ಅಭಿನಯಿಸಿದ ಚಿತ್ರಗಳಲ್ಲಿ, ಕಲೆಯ ಜೊತೆಗೆ ಕನ್ನಡ ಸಾಹಿತ್ಯ, ಸಂಸ್ಕøತಿಗೆ ಹೆಚ್ಚು ಮೆರಗನ್ನು ನೀಡಿವೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಕರಿಬಸವೇಶ್ವರ ಮಠದ ಆವರಣದಲ್ಲಿ,ಶ್ರೀಚನ್ನಬಸವರಾಜೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಶತಶೃಂಗ ಡಾ.ರಾಜ್ ಅಭಿಮಾನಿ ಬಳಗದವತಿಯಿಂದ ಆಯೋಜಿಸಿದ್ದ ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಅವರ ಚಿತ್ರಗಳಲ್ಲಿ ಬಳಸಿರುವ ಭಾಷೆ, ಗೀತೆಗಳಲ್ಲಿರುವ ಸಾಹಿತ್ಯ ಎಲ್ಲವನ್ನು ಅವಲೋಕಿಸಿ ದಾಗ, ಕನ್ನಡ ಸಾಹಿತ್ಯ ಲೋಕಕ್ಕೆ ಆಪಾರ ಕೊಡುಗೆಯನ್ನು ಡಾ.ರಾಜ್ ಚಿತ್ರಗಳು ನೀಡಿವೆ. ಅಲ್ಲದೆ ಉತ್ತಮ ಸಾಮಾಜಿಕ ಸಂದೇಶವನ್ನು ನೀಡುವ ಮೂಲಕ ಅಂದಿನ ಯುವಜನತೆ ದಾರಿ ದೀಪವಾಗಿವೆ ಎಂದರು. ಪದ್ಮಭೂಷಣ ಡಾ.ರಾಜಕುಮಾರ್ ಅವರು ನಟಿಸಿದ ಬಂಗಾರದ ಮನುಷ್ಯ, ಬಂಗಾರದ ಪಂಜರ,ಬಲೆ ಬಸವ, ಜೀವನ ಜೈತ್ರ ಸೇರಿದಂತೆ ಹಲವಾರು ಸಿನಿಮಾಗಳನ್ನು ನೋಡಿ,ಲಕ್ಷಾಂತರ ತಮ್ಮ ಮನಃ ಪರಿವರ್ತನೆ ಮಾಡಿಕೊಂಡಿದ್ದನ್ನು ನಾವು ಹಿರಿಯರಿಂದ ಕೇಳಿ ತಿಳಿದಿದ್ದೇವೆ.ಆದರೆ ಇಂದು ಹೊಡಿ,ಬಡಿಯಂತಹ ಚಿತ್ರಗಳು ಹೆಚ್ಚಾಗಿ, ಸಾಮಾಜಿಕ ಸಂದೇಶಗಳಿರುವ ಚಿತ್ರಗಳು…

Read More

ತುಮಕೂರು: ವಿಶ್ವ ಮಲೇರಿಯಾ ದಿನದ ಅಂಗವಾಗಿ ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರ ಯದಲ್ಲಿ ಜನಸಾಮಾನ್ಯರಲ್ಲಿ ಮಲೇರಿಯಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಲೇರಿಯಾ ದಿನದ ಜಾಗೃತಿ ಜಾಥಾವನ್ನು ನಡೆಸಲಾಯಿತು. ನಗರದ ಟೌನ್‍ಹಾಲ್ ವೃತ್ತದಲ್ಲಿ ಜಮಾಯಿಸಿದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ನಡೆದ ಮಲೇರಿಯಾ ಜಾಗೃತಿ ಜಾಥಾಕ್ಕೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಜಿ.ಪಂ. ಸಿಇಓ ಡಾ. ಕೆ. ವಿದ್ಯಾಕುಮಾರಿ ಅವರು, ಮಲೇರಿಯಾ ಜ್ವರದ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಒಂದು ಸೊಳ್ಳೆಯಿಂದ ಬರುವಂತಹ ಕಾಯಿಲೆ ಇದಾಗಿದೆ. ಈ ಹಿಂದೆ ಈ ಕಾಯಿಲೆಯಿಂದ ಅನೇಕ ಜನ ಸಾವನ್ನಪ್ಪಿದ್ದಾರೆ. ಆದರೆ ಇಂದು ಚಿಕಿತ್ಸೆಯಿಂದಾಗಿ ಸಾವು ಸಂಭವಿಸುತ್ತಿಲ್ಲ. ಇದನ್ನು ನಿರ್ಲಕ್ಷ್ಯ ಮಾಡದೆ ಜ್ವರ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.…

Read More

ತುಮಕೂರು : ಗುತ್ತಿಗೆ ಪದ್ದತಿ ರದ್ದು ಮಾಡಿ, ನೇರ ನೇಮಕಾತಿಗೆ ಅವಕಾಶ ಕಲ್ಪಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ನೀರು ಸರಬರಾಜು ನೌಕರರ ಸಂಘದ ಸದಸ್ಯರು ಪಾಲಿಕೆಯ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತ ವಾಟರ್‍ಮನ್‍ಗಳನ್ನು ಉದ್ದೇಶಿಸಿ ಮಾತನಾಡಿದ ಕೆ.ಕುಮಾರ್, ಮಹಾನಗರ ಪಾಲಿಕೆಯಲ್ಲಿ ಕಳೆದ 20-25 ವರ್ಷಗಳಿಂದ ಅತಿ ಕಡಿಮೆ ವೇತನಕ್ಕೆ ದುಡಿಯುತ್ತಿರುವ ನೀರುಗಂಟಿಗಳಿಗೆ ಹುದ್ದೆ ಇದುವರೆಗೂ ಖಾಯಂ ಆಗಿಲ್ಲ. ಅಲ್ಲದೆ ವೇತನವೂ ಸರಿಯಾದ ಸಮಯಕ್ಕೆ ದೊರೆಯುತ್ತಿಲ್ಲ. ಪ್ರತಿ ಬಾರಿಯೂ ಪ್ರತಿಭಟನೆ ಮಾಡಿಯೇ ವೇತನ ಪಡೆಯಬೇಕಾದ ಸ್ಥಿತಿ ಇದೆ. ಸ್ವತಃ ರಾಜ್ಯಪಾಲರೆ ಪಾಲಿಕೆಗಳಲ್ಲಿ ಗುತ್ತಿಗೆ ನೌಕರರ ಪದ್ದತಿಯನ್ನು ರದ್ದು ಮಾಡುವಂತೆ ಸೂಚನೆ ನೀಡಿದ್ದರೂ ಇದುವರೆಗೂ ಅದನ್ನು ರಾಜ್ಯ ಸರಕಾರಗಳು ಜಾರಿಗೆ ತಂದಿಲ್ಲ. ಈ ಹಿಂದೆ ಹಲವು ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಅಲ್ಲದೆ 5-04-2022 ರಂದು ಮನವಿ ಸಲ್ಲಿಸಿ, 19-04-2022ರೊಳಗೆ ನಮ್ಮ ಸೇವೆ ಖಾಯಂ ಗೊಳಿಸದಿದ್ದಲ್ಲಿ ಬೃಹತ್ ಮುಷ್ಕರ ನಡೆಸುವುದಾಗಿ ತಿಳಿಸಿದ್ದೇವೆ. ಆದರೆ ಇದುವರೆಗೂ ಪಾಲಿಕೆ…

Read More

ತುಮಕೂರು: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಅಭಿವೃದ್ಧಿಯಿಂದ ಕೈಗಾರಿಕಾ ಅವಶ್ಯಕತೆಗಳನ್ನು ಪೂರೈಸಲು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ಕ್ಷೇತ್ರ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸೂಕ್ತವಾದ ವೇದಿಕೆಯಾಗಿದೆ. ತಾಂತ್ರಿಕ ಶಿಕ್ಷಣದ ಗುಣಮಟ್ಟ ಮತ್ತು ಪ್ರಾಮುಖ್ಯತೆಯ ಬಗ್ಗೆ ವಿವರಿಸುತ್ತಾ, ವಿದ್ಯಾರ್ಥಿಗಳಿಗೆ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಕ್ಷೇತ್ರದಲ್ಲಿ ಸಾಕಷ್ಟು ಬೇಡಿಕೆಯಾಗಿದೆ. ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದಲು ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನವನ್ನು ಹೊಂದಿರುವುದಲ್ಲಿ ಅತ್ಯುತ್ತಮವಾಗಿದೆ. ವಿದ್ಯಾರ್ಥಿಗಳು ಕೋರ್ಸ್ ಪಡೆದ ನಂತರ ದೇಶ-ವಿದೇಶಗಳಲ್ಲಿ ಸಾಕಷ್ಟು ಉದ್ಯೋಗಾವಕಾಶವನ್ನು ಹೊಂದುತ್ತಿದ್ದಾರೆ ಎಂದು ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಎಂ.ಎಸ್.ಪಾಟೀಲ್‍ರವರು ವಿದ್ಯಾರ್ಥಿಗಳಿಗೆ ತಿಳಿಸಿದರು. ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಉದ್ಘಾಟನಾ ಸಮಾರಂಭ ಇನ್ಸ್ಟಿಟ್ಯೂಷನ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯೂನಿಕೇಷನ್ ಎಂಜಿನೀರ್ಸ್ ಸ್ಯೂಡೆಂಟ್ಸ್ ಫೋರಮ್ (ಐ.ಎಫ್.ಎಸ್) ವಿದ್ಯಾರ್ಥಿಗಳ ವೇದಿಕೆಯ ಐ.ಇ.ಟಿ.ಇ. ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಶೇಷ ಉಪನ್ಯಾಸವನ್ನು ಏ.18 ರಂದು ಮೈಕ್ಯಾನಿಕಲ್ ಸೆಮಿನಾರ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಪ್ರೊ.ಸಿ.ಮುರುಳಿರವರು 5ಜಿ…

Read More