ತುಮಕೂರು : ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಪರೀಕ್ಷೆಗಳ ತಯಾರಿ ಹಾಗೂ ಮಾರ್ಗದರ್ಶನ ಕುರಿತಂತೆ ಮತ್ತು ಪೋಷಕರಿಗೆ ಪರೀಕ್ಷೆ ಕುರಿತ ಅನುಮಾನಗಳನ್ನು ಬಗೆಹರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ “ನೇರ ಫೋನ್ ಇನ್” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ವಿಷಯ ತಜ್ಞರು ಭಾಗವಹಿಸಿ ವಿದ್ಯಾರ್ಥಿಗಳ ದೂರವಾಣಿ ಕರೆ ಸ್ವೀಕರಿಸಿ ಸಮಸ್ಯೆಗಳಿಗೆ ಪರಿಹಾರ, ಪ್ರಶ್ನೆಗಳಿಗೆ ಉತ್ತರ ಹಾಗೂ ಮಾರ್ಗದರ್ಶನ ನೀಡಿದರು. ಪ್ರಶ್ನೆ ಪತ್ರಿಕೆ ವಿನ್ಯಾಸ, ಮಾದರಿ ಪ್ರಶ್ನೆ ಪತ್ರಿಕೆ, ರೂಪಣಾತ್ಮಕ ಪರೀಕ್ಷೆಗಳ ಬಗ್ಗೆ, ಪರೀಕ್ಷಾ ತಯಾರಿ ಬಗ್ಗೆ, ನೆನಪಿನಲ್ಲಿ ಉಳಿಯುವಂತೆ ಅಭ್ಯಾಸ ಮಾಡುವ ವಿಧಾನ, ವಿಷಯವಾರು ಪಠ್ಯದ ಬಗ್ಗೆ, ಹೆಚ್ಚು ಅಂಕಗಳನ್ನು ಗಳಿಸುವ ಕುರಿತು ವಿದ್ಯಾರ್ಥಿಗಳ ಹಾಗೂ ಪಾಲಕರ ಪ್ರಶ್ನೆಗಳಿಗೆ ವಿಷಯ ತಜ್ಞರು ದೂರವಾಣಿ ಮೂಲಕವೇ ಪರಿಹಾರ ನೀಡಿದರು. ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕರೆ ಮಾಡಿ ಇದರ ಸದುಪಯೋಗ ಪಡೆದುಕೊಂಡರು.…
Author: News Desk Benkiyabale
ತುಮಕೂರು : ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ತೆಗೆದು ಕೇಸರಿ ಬಾವುಟ ಹಾರಿಸುವುದಾಗಿ ಹೇಳಿ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪನವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಹಾಗೂ ಮಾಜಿ ಶಾಸಕ ಡಾ. ರಫೀಕ್‍ಅಹಮದ್‍ರವರ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಈಶ್ವರಪ್ಪ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಸಚಿವ ಈಶ್ವರಪ್ಪ ಅವರು ನೀಡಿರುವುದು ದೇಶದ್ರೋಹ ಹೇಳಿಕೆ. ತ್ರಿವರ್ಣ ಧ್ವಜವು ನಮ್ಮ ರಾಷ್ಟ್ರದ ಸ್ವಾತಂತ್ರ್ಯ, ಅಖಂಡತೆ, ಸಾರ್ವಭೌಮತೆ, ಅಸ್ಮಿತೆ ಮತ್ತು ಸಂವಿಧಾನಗಳ ಸಂಕೇತವಾಗಿದೆ. ಆದ್ದರಿಂದ ಈಶ್ವರಪ್ಪನವರನ್ನು ಸಂಪುಟದಿಂದ ಕೈ ಬಿಟ್ಟು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಕಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ದೇಶ ದ್ರೋಹದ ಹೇಳಿಕೆ, ಸಂವಿಧಾನ ಆಶಯಗಳಿಗೆ ಧಕ್ಕೆಯಾಗುವ ವಿಚಾರ ಹಾಗೂ ರಾಷ್ಟ್ರ…
ಮಧುಗಿರಿ : ‘ಚಿರತೆಗಳು ಸರ್ ಚಿರತೆಗಳು, ಅರಣ್ಯ ಇಲಾಖಾಧಿಕಾರಿಗಳು ಎಲ್ಲಿ ಸರ್’’ ಎಂದು ಪಟ್ಟಣದ ಪುರಸಭೆ ವ್ಯಾಪ್ತಿಯ ಸೀಮೆಯಾದ ಬಾವಿ ಸಮೀಪ ವಾಸಿಸುತ್ತಿರುವ ಜನತೆಯ ಮಾತಾಗಿದೆ. ಕಳೆದ ಒಂದು ವಾರದಿಂದ ರಾತ್ರಿಯಾಗುತ್ತಿದ್ದಂತೆ ವಿಶ್ವಪ್ರಸಿದ್ಧ ಏಕಶಿಲಾ ಬೆಟ್ಟದ ತಪ್ಪಲಿನಲ್ಲಿ 2 ಚಿರತೆಗಳು ಬೆಟ್ಟದ ಬುಡದಲ್ಲಿರುವ ಮನೆ ಹಿಂಬದಿಯಲ್ಲಿ ಆಹಾರಕ್ಕಾಗಿ ಹೊಂಚು ಹಾಕಿ ಕುಳಿತಿರುತ್ತದೆ. ನಾಯಿ, ಕುರಿ ,ದನಗಳನ್ನು ಚಿರತೆಗಳು ಕೊಂಡೊಯ್ಯುತ್ತಿವೆ. ಈ ವೇಳೆ ಪ್ರಾಣಿಗಳ ಚೀರಾಟ ಕಂಡು ಜನ ಭಯಭೀತರಾಗಿದ್ದಾರೆ.ಜನರು ತಮ್ಮ ಪ್ರಾಣ ರಕ್ಷಣೆಗಾಗಿ ಮನೆಗಳನ್ನು ಬಿಟ್ಟು ಹೊರಗಡೆ ಬರುತ್ತಿಲ್ಲ. ಕೆಲವು ಯುವಕರು ಪಟಾಕಿಗಳನ್ನು ಸಿಡಿಸಿದರೂ ಕೂಡ ಚಿರತೆಗಳನ್ನು ಜಗ್ಗುತ್ತಿಲ್ಲ. ರಾತ್ರಿ 8ಆಗುತ್ತಿದ್ದಂತೆ ಚಿರತೆಗಳು ಕಾಣಿಸುತ್ತಿವೆ, ಬೆಳಗ್ಗೆ 9ಗಂಟೆಯ ವರೆಗೂ ಮನೆಯಿಂದ ಯಾರು ಹೊರ ಬರುವಂತಿಲ್ಲ. ಇತ್ತೀಚೆಗೆ ಆನಂದ ರಾಯನ ಗುಡ್ಡ (ಬಸವಣ್ಣನ ಗುಡ್ಡದ) ಬೆಟ್ಟದಲ್ಲಿ ಹಾಡುಹಗಳಿನಲ್ಲಿ ಚಿರತೆಗಳು ಕಂಡುಬಂದಿತ್ತು. ಸಾರ್ವಜನಿಕರು ಕಣ್ಣಾರೆ ಕಂಡಿದ್ದರು. ಈಗ ರಾತ್ರಿಯಾಗುತ್ತಿದ್ದಂತೆ ಚಿರತೆಗಳು ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆ ಚಿರತೆ ಹಿಡಿಯುವ ಬೋನು ಇಡುವಂತೆ…
ತುಮಕೂರು : ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅವಕಾಶವಿಲ್ಲ, ಇದು ಸಂವಿಧಾನಕ್ಕೆ ವಿರೋಧ ಎಂದು ಪ್ರತಿಭಟಿಸಿ ಉಪನ್ಯಾಸಕಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ನಗರದ ಜೈನ್ ಪಿಯು ಕಾಲೇಜಿನ ಇಂಗ್ಲಿಷ್? ಉಪನ್ಯಾಸಕಿ ಚಾಂದಿನಿ ಹಿಜಾಬ್ ಧರಿಸಲು ಅವಕಾಶ ನೀಡದಿರುವುದನ್ನು ಖಂಡಿಸಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಿಂದಿನಿಂದಲೂ ಹಿಜಾಬ್ ಧರಿಸಿಯೇ ಕಾಲೇಜಿಗೆ ಚಾಂದಿನಿ ಹಾಜರಾಗುತ್ತಿದ್ದರು. ಇತ್ತೀಚೆಗೆ ಹಿಜಾಬ್-ಕೇಸರಿಶಾಲು ವಿವಾದ ತಾರಕ್ಕೇರಿದ ನಂತರ ಹಿಜಾಬ್ ಧರಿಸಿ ಕಾಲೇಜಿಗೆ ಹಾಜರಾಗದಂತೆ ಆಡಳಿತ ಮಂಡಳಿ ಸೂಚಿಸಿತ್ತು. ಜೈನ್ ಪಿಯು ಕಾಲೇಜು, ವಿದ್ಯಾವಾಹಿನಿ ಕಾಲೇಜು ಸೇರಿದಂತೆ ತುಮಕೂರು ನಗರದ ಹಲವು ಕಡೆ ಚಾಂದಿನಿ ಅಥಿತಿ ಉಪನ್ಯಾಸಕಿಯಾಗಿ ಕೆಸಲ ಮಾಡುತ್ತಿದ್ದರು. ಗುರುವಾರ ಜೈನ್ ಪಿಯು ಕಾಲೇಜಿಗೆ ರಾಜೀನಾಮೆ ಕೊಟ್ಟಿದ್ದಾರೆ.
ತುಮಕೂರು : ಹೈಕೋರ್ಟ್ ಸೂಚನೆ ಮೇರೆಗೆ ಇಂದಿನಿಂದ ರಾಜ್ಯಾದ್ಯಂತ ಬಿಗಿ ಪೆÇಲೀಸ್ ಬಂದೋಬಸ್ತ್‍ನಲ್ಲಿ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳನ್ನು ಆರಂಭಿಸಲಾಗಿರುವ ಮೊದಲ ದಿನವೇ ನಗರದಲ್ಲಿ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ಮುಂಭಾಗ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್‍ಗೆ ಅನುಮತಿ ನೀಡುವಂತೆ ಪಟ್ಟು ಹಿಡಿದ ಘಟನೆ ನಡೆದಿದೆ. ನಗರದ ಟೌನ್‍ಹಾಲ್ ಸಮೀಪ ಅಶೋಕ ರಸ್ತೆಯಲ್ಲಿರುವ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜಿಗೆ ಸುಮಾರು 40 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು, ಕಾಲೇಜಿನ ಮುಂಭಾಗದಲ್ಲೇ ಭದ್ರತಾ ಕಾರ್ಯದಲ್ಲಿ ತೊಡಗಿದ್ದ ಪೆÇಲೀಸರು ವಿದ್ಯಾರ್ಥಿನಿಯರನ್ನು ತಡೆದು ಹಿಜಾಬ್ ತೆಗೆದು ಕಾಲೇಜು ಒಳಗೆ ಹೋಗುವಂತೆ ಸೂಚಿಸಿದರು. ಆದರೆ ವಿದ್ಯಾರ್ಥಿನಿಯರು ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯುವುದಿಲ್ಲ. ನಮಗೆ ಹಿಜಾಬ್ ಧರಿಸಿಯೇ ತರಗತಿ ಒಳಗೆ ಹೋಗಲು ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆಗೆ ಮುಂದಾದರು. ಆಗ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದ ಪೆÇಲೀಸರು ವಿದ್ಯಾರ್ಥಿನಿಯರಿಗೆ ಶಾಲಾ-ಕಾಲೇಜುಗಳ ಸುತ್ತ 200 ಮೀಟರ್…
ತುಮಕೂರು : ಹಿಜಾಬ್ ವಸ್ತ್ರ ವಿಷಯವಾಗಿ ಜಿಲ್ಲೆಯಲ್ಲಿ ರಜೆ ಘೋಷಿಸಲಾಗಿದ್ದ ಪಾಲಿಟೆಕ್ನಿಕ್/ ಡಿಪ್ಲೋಮಾ, ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಮತ್ತು ಮೇಲ್ಪಟ್ಟ ಕಾಲೇಜುಗಳು ಇಂದಿನಿಂದ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಪಾಲಿಸದ ಕಾಲೇಜು ಆಡಳಿತ ಮಂಡಳಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ವಿವಿಧ ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖಾಧಿಕಾರಿಗಳೊಂದಿಗೆ ಜûೂಮ್ ಸಭೆ ನಡೆಸಿ ಮಾತನಾಡಿದ ಅವರು ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುದಾನಿತ/ ಅನುದಾನರಹಿತ/ ಸರ್ಕಾರಿ ಕಾಲೇಜುಗಳು ಉಚ್ಚ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದೇಶವನ್ನು ಪಾಲಿಸುವಲ್ಲಿ ಆಯಾ ಕಾಲೇಜಿನ ಪ್ರಾಚಾರ್ಯರು, ಪ್ರಾಂಶುಪಾಲರು, ಆಡಳಿತ ಮಂಡಳಿಗಳೇ ಸಂಪೂರ್ಣ ಜವಾಬ್ದಾರಿ ಎಂದು ತಿಳಿಸಿದರು. ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶ ಉಲ್ಲಂಘನೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಹಿತಕರ ಘಟನೆ…
ತುಮಕೂರು : ಜಿಲ್ಲೆಯ ಗುಬ್ಬಿ, ಕೊರಟಗೆರೆ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ ಘಟಕ ಪ್ರಾರಂಭಿಸಬೇಕು, ವಿದ್ಯಾರ್ಥಿಗಳಿಗಾಗುತ್ತಿರುವ ತೊಂದರೆಯನ್ನು ನಿವಾರಿಸಬೇಕು ಮತ್ತು ಗ್ರಾಮಾಂತರದ ವಿವಿಧ ಭಾಗಗಳೀಗೆ ಬಸ್ ಸೌಕರ್ಯ ಹೆಚ್ಚಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಕೆಪಿಸಿಸಿ ಮಾಧ್ಯಮ ವಿಶ್ಲೇಷಕರು ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅವರು ಒತ್ತಾಯಿಸಿದರು. ನಗರದ ಅಂತರಸನಹಳ್ಳಿಯಲ್ಲಿರುವ ಸಾರಿಗೆ ನಿಯಂತ್ರಣಾಧಿಕಾರಿಗಳ ಕಚೇರಿಗೆ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ ಮತ್ತು ತುಮಕೂರು ನಗರದ ಕಾಂಗ್ರೆಸ್ ಮುಖಂಡರೊಂದಿಗೆ ನಿಯೋಗದಲ್ಲಿ ತೆರಳಿ ಕ.ರಾ.ರ.ಸಾ.ನಿ.,ದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್. ಬಸವರಾಜು ಅವರೊಂದಿಗೆ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುರಳೀಧರ ಹಾಲಪ್ಪ ಅವರು ಗುಬ್ಬಿ, ಚಿಕ್ಕನಾಯಕನಹಳ್ಳಿ, ಕೊರಟಗೆರೆ ತಾಲ್ಲೂಕುಗಳಲ್ಲಿ ಬಸ್ ಡಿಪೋ ಪ್ರಾರಂಭಿಸುವುದರಿಂದ ಅಲ್ಲಿನ ಸ್ಥಳೀಯರಿಗೆ ಉದ್ಯೋಗದ ಜೊತೆಗೆ ಆ ಭಾಗದ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ನಿವಾರಿಸಿದಂತಾಗುತ್ತದೆ. ಆದುದರಿಂದ ಶೀಘ್ರವಾಗಿ ಬಸ್ ಡಿಪೋ…
ತುಮಕೂರು : ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಮಂಡಿಪೇಟೆ ವೃತ್ತದಲ್ಲಿ ಒಳಚರಂಡಿಯ ಪೈಪ್‍ಲೈನ್ ಒಡೆದು ಹೋಗಿರುವ ಪರಿಣಾಮ ಭೂಕುಸಿತ ಉಂಟಾಗಿರುವ ಘಟನೆ ನಡೆದಿದೆ. ಮಂಡಿಪೇಟೆ ವೃತ್ತದಲ್ಲಿ ಉಂಟಾಗಿರುವ ಭೂಕುಸಿತದಿಂದಾಗಿ ಈ ಭಾಗದ ವರ್ತಕರು, ಹಮಾಲರು ಹಾಗೂ ಗ್ರಾಹಕರು ಸುಗಮ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗಿದೆ. ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಮಂಡಿಪೇಟೆಗೆ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಈಗ ಈ ವಾಹನಗಳ ಸಂಚಾರಕ್ಕೂ ತೀವ್ರ ಅಡಚಣೆಯಾಗಿದೆ. ರಸ್ತೆ ಬದಿಯಲ್ಲೆ ಭೂಕುಸಿತ ಉಂಟಾಗಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಅದೃಷ್ಟವಶಾತ್ ಯಾವುದೇ ಅಪಘಾತಗಳು ಸಂಭವಿಸಿಲ್ಲ. ಮಂಡಿಪೇಟೆ ರಸ್ತೆಯಲ್ಲಿ ಸ್ಮಾರ್ಟ್‍ಸಿಟಿ ವತಿಯಿಂದ ಕೈಗೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆ ಗುಣಮಟ್ಟದಿಂದಾಗಿ ಈ ಭೂಕುಸಿತ ಉಂಟಾಗಿದೆ ಎಂಬುದು ಈ ಭಾಗದ ಸಾರ್ವಜನಿಕರ ಆರೋಪವಾಗಿದೆ. ಶಾಸಕರ ಭೇಟಿ ಮಂಡಿಪೇಟೆ ಸರ್ಕಲ್‍ನಲ್ಲಿ ಭೂಕುಸಿತ ಉಂಟಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಬೆಳ್ಳಂಬೆಳಿಗ್ಗೆಯೇ ಶಾಸಕ ಜ್ಯೋತಿಗಣೇಶ್ ಪಾಲಿಕೆ ಮತ್ತು ಇಂಜಿನಿಯರ್‍ಗಳು, ಪಾಲಿಕೆ ಸದಸ್ಯರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ…
ಕೊರಟಗೆರೆ : ಗ್ರಾಹಕರಿಂದ ತೆರಿಗೆ ಪಡೆಯದೇ ವಹಿವಾಟು ಮಾಡ್ತಾರಂತೆ.. ಅದಕ್ಕಾಗಿ ಸರಕಾರಕ್ಕೆಚಿನ್ನದಅಂಗಡಿ ಮಾಲೀಕರುತೆರಿಗೆಕಟ್ಟಲ್ವಂತೆ.. ಜ್ಯೂಯಲರ್ಸ್, ಬ್ಯಾಂಕರ್ಸ್ ಹಾಗೂ ಗೋಲ್ಡ್ ಲೋನ್‍ಅಂಗಡಿಯ ಮಾಲೀಕರು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಶೇ.30ರಷ್ಟು ಮಾತ್ರ ಜಿಎಸ್‍ಟಿ ರಸೀದಿ ಕೋಡ್ತಾರಂತೆ.. ಇನ್ನೂಳಿದ ಶೇ.70ರಷ್ಟು ವಹಿವಾಟಿನ ಲೆಕ್ಕಕ್ಕೆ ನಕಲಿ ರಸೀದಿಯೇ ನೀಡ್ತಾರಂತೆ.. ತೆರಿಗೆಮುಕ್ತಆಗಿರುವಕೊರಟಗೆರೆಕ್ಷೇತ್ರದ ಬಲಿಷ್ಟ ಚಿನ್ನದ ಅಂಗಡಿಗಳ ವಹಿವಾಟಿನತನಿಖೆಗೆಆದಾಯಇಲಾಖೆಯ ಮೌನವೇಕೆಎಂಬುದೇ ಯಕ್ಷಪ್ರಶ್ನೆ. ಕೊರಟಗೆರೆ ಪಟ್ಟಣದ ಮತ್ತುಗ್ರಾಮೀಣ ಪ್ರದೇಶದಲ್ಲಿ 30ಜ್ಯೂಯಲರ್ಸ್, ಐದಾರು ಬ್ಯಾಂಕರ್ಸ್ ಮತ್ತು ನಕಲಿ ಗೋಲ್ಡ್ ಲೋನ್ ಅಂಗಡಿಗಳಿವೆ. ಕೇಂದ್ರ ಮತ್ತುರಾಜ್ಯ ಸರಕಾರಕ್ಕೆಆದಾಯದ ಲೆಕ್ಕ ನೀಡಲು ಶೇ.30ರಷ್ಟು ಜಿಎಸ್‍ಟಿ ರಸೀದಿ ನೀಡ್ತಾರಂತೆ. ಆದಾಯ ಮರೆಮಾಚಲು ಶೇ.70ರಷ್ಟು ನಕಲಿ ರಸೀದಿ ನೀಡಿ ಸರಕಾರಕ್ಕೆತೆರಿಗೆಕಟ್ಟದೇ ವಂಚನೆ ಮಾಡ್ತಾರೇ. ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಬಂದಾಕ್ಷಣ ಅಂಗಡಿಗಳಿಗೆ ವಾರಪೂರ್ತಿರಜೆಘೋಷಣೆ ಮಾಡಿಕೇಂದ್ರ ಮತ್ತುರಾಜ್ಯ ಸರಕಾರಕ್ಕೆ ವಂಚನೆ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ನಕಲಿ ರಸೀದಿಯಿಂದ ಪ್ರಕರಣ ಬೆಳಕಿಗೆ.. ಕೊರಟಗೆರೆ ಪಟ್ಟಣದ ಗುಪ್ತ…
ತುಮಕೂರು : ಹಿಜಾಬ್ ವಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆಯು ಉಚ್ಚ ನ್ಯಾಯಾಲಯದಲ್ಲಿ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಜಿಲ್ಲಾದ್ಯಂತ ಫೆಬ್ರುವರಿ 14 ರಿಂದ ಮುಂದಿನ ಆದೇಶದವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆದೇಶ ಹೊರಿಡಿದ್ದಾರೆ. ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಹಿಜಾಬ್ ಪ್ರಕರಣ ಹಾಗೂ ಇತರೆ ಪ್ರಕರಣಗಳಲ್ಲಿ ಶಾಲಾ ಕಾಲೇಜುಗಳನ್ನು ಪುನರಾರಂಭಿಸುವಂತೆ ಮಧ್ಯಂತರ ಆದೇಶದಲ್ಲಿ ಫೆಬ್ರುವರಿ 14 ರಿಂದ 9 ಮತ್ತು 10ನೇ ತರಗತಿಯನ್ನು ಪ್ರಾರಂಭಿಸಲು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗಾಗಿ ಈ ಆದೇಶವನ್ನು ಹೊರಡಿಸಲಾಗಿದೆ. ಈ ನಿಷೇಧಾಜ್ಞೆಯು ಜಿಲ್ಲೆಯ ಎಲ್ಲಾ ಸರ್ಕಾರಿ/ ಅನುದಾನಿತ/ ಅನುದಾನರಹಿತ ಶಾಲೆಯ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶಕ್ಕೆ ಅನ್ವಯಿಸುತ್ತದೆ. ನಿಷೇಧಾಜ್ಞೆ ಅವಧಿಯಲ್ಲಿ ಅಧಿಕೃತ ಗುರುತಿನ ಚೀಟಿ ಹೊಂದಿರುವ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ನಿಷೇಧಿತ ಪ್ರದೇಶದ ಶಾಲಾ…











