ಕೊರಟಗೆರೆ: ಪಟ್ಟಣದ 15ವಾರ್ಡಿನ ಜನತೆಯ ಆರೋಗ್ಯ ರಕ್ಷಣೆಗೆ ಪಪಂಯಿಂದ ಮೊದಲ ಆಧ್ಯತೆ ನೀಡುವುದರ ಜೊತೆಯಲ್ಲಿ ಮೂಲಸೌಕರ್ಯ ಮತ್ತು ಸಮಗ್ರ ಅಭಿವೃದ್ದಿಗೆ ಪಪಂ ಅಧ್ಯಕ್ಷರ ನೇತೃತ್ವದ ತಂಡ ಶ್ರಮಿಸಲಿದ್ದಾರೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು. ಕೊರಟಗೆರೆ ಪಟ್ಟಣದ ಪಪಂ ಕಚೇರಿಯಲ್ಲಿ ತಹಶೀಲ್ದಾರ್ ನಾಹೀದಾ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪಪಂ ಅಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕಾವ್ಯರಮೇಶ್ ಅವಿರೋದವಾಗಿ ಆಯ್ಕೆಯಾದ ನಂತರ ಮಾತನಾಡಿದರು. ಕೊರಟಗೆರೆ ಪಟ್ಟಣದ ಜನತೆ ಜೆಡಿಎಸ್ ಪಕ್ಷಕ್ಕೆ ಪಪಂಯ ಅಧಿಕಾರ ನೀಡಿದ್ದಾರೆ. ಪಟ್ಟಣದ ಜನತೆ ನೀಡಿರುವ ಅಧಿಕಾರವನ್ನು ಅವರ ಸೇವೆಗಾಗಿ ಮೀಸಲಿಟ್ಟು ಅಭಿವೃದ್ದಿಗೆ ಪ್ರತಿಯೊಬ್ಬ ಸದಸ್ಯರು ಶ್ರಮಿಸಬೇಕಿದೆ. ಕೋವಿಡ್ ಹರಡುವಿಕೆ ತಡೆಗಟ್ಟಲು ಆರೋಗ್ಯ ಇಲಾಖೆ ಮತ್ತು ಪಪಂ ಅಧಿಕಾರಿವರ್ಗ ಜೊತೆಗೂಡಿ ಜನರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದರು. ಕೊರಟಗೆರೆ ಪಪಂಯ ನೂತನ ಅಧ್ಯಕ್ಷೆ ಕಾವ್ಯರಮೇಶ್ ಮಾತನಾಡಿ ನಾನು ಪಪಂಯ ಸದಸ್ಯರನ್ನಾಗಿ ಆಯ್ಕೆ ಮಾಡಿದ 1ನೇ ವಾರ್ಡಿನ ಜನತೆ ಮತ್ತು ಪಪಂಯ ಅಧ್ಯಕ್ಷರನ್ನಾಗಿ…
Author: News Desk Benkiyabale
ತುಮಕೂರು : ಜಿಲ್ಲೆಯ ಪಶುಗಳ ಉತ್ತಮ ಆರೋಗ್ಯಕ್ಕಾಗಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ನಗರದ ಶಿರಾಗೇಟ್ ಬಳಿಯ ಅರಳೀಮರದ ಪಾಳ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಸ್ಪೆಷಾಲಿಟಿ ಪಶು ಆಸ್ಪತ್ರೆಯನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಣವಾಗದ ಮತ್ತು ತುರ್ತು ಸಂದರ್ಭಗಳಲ್ಲಿ ರಾಸುಗಳನ್ನು ನಗರದ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಿಸಿ ಅಗತ್ಯ ಚಿಕಿತ್ಸೆ ಕೊಡಿಸಬೇಕು. ತಾಲೂಕು ಪಶು ಆಸ್ಪತ್ರೆಗಳಿಂದ ಶಿಫಾರಸ್ಸು ಮಾಡಲಾದ ಪ್ರಾಣಿಗಳನ್ನು ಈ ಆಸ್ಪತ್ರೆಯಲ್ಲಿ ಆಧುನಿಕ ಸೌಲಭ್ಯಗಳಾದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಎಕ್ಸ್-ರೇ, ಪ್ರಯೋಗಾಲಯ ಹಾಗೂ ಶಸ್ತ್ರಚಿಕಿತ್ಸೆ ಸೌಲಭ್ಯಗಳೊಂದಿಗೆ ಚಿಕಿತ್ಸೆ ನೀಡಲಾಗುವುದು ಎಂದರು. ಈ ಆಸ್ಪತ್ರೆ ನಿರ್ಮಾಣದಿಂದ ಸಾರ್ವಜನಿಕರು ತಮ್ಮ ಸಾಕು ಪ್ರಾಣಿಗಳನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಒಯ್ಯುವುದು ತಪ್ಪುತ್ತದೆ ಎಂದರಲ್ಲದೆ, ತುಮಕೂರು ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸುತ್ತಿದ್ದು, ಇದಕ್ಕೆ ಪೂರಕವಾಗಿ ಪಶುಗಳ ಆರೋಗ್ಯ ಸ್ಥಿತಿಯನ್ನು ಉತ್ತಮವಾಗಿಡಲು…
ತುಮಕೂರು : ಬಹುದಿನದ ಬೇಡಿಕೆಯಾಗಿದ್ದ ನಗರದ ಗುಬ್ಬಿಗೇಟ್‍ನಿಂದ ದಿಬ್ಬೂರು ಮೂಲಕ ಶಿರಾಗೇಟ್ ಸಂಪರ್ಕಿಸುವ ರಿಂಗ್‍ರಸ್ತೆ ನಗರದ ಜನರಿಗೆ ಉಪಯೋಗವಾಗಲಿದೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ರಿಂಗ್‍ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ ಮೂಲಕವೇ ಭಾರೀ ಗಾತ್ರದ ವಾಹನಗಳು ಓಡಾಡುವ ಪರಿಸ್ಥಿತಿ ಇದ್ದರಿಂದ ನಗರದೊಳಗೆ ವಾಹನ ಸಂಚಾರ ದಟ್ಟಣೆ ಆಗುವುದರಿಂದ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆಗೂ ಈ ರಿಂಗ್ ರಸ್ತೆ ಪರಿಹಾರ ದೊರಕಲಿದೆ ಎಂದು ಅಭಿಪ್ರಾಯಪಟ್ಟರು. ಬಹುದಿನಗಳಿಂದ ನೆನೆಗುಂದಿಗೆ ಬಿದ್ದಿದ್ದ ರಿಂಗ್ ರಸ್ತೆಯನ್ನು ತುಮಕೂರು ಅಭಿವೃದ್ಧಿ ಪ್ರಾಧಿಕಾರ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು 9 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದು, ಸಿರಾ-ಮಧುಗಿರಿ ರಸ್ತೆಯಿಂದ, ಕುಣಿಗಲ್ ಕಡೆಯಿಂದ ಬರುವ ಭಾರೀ ವಾಹನಗಳು ನಗರವನ್ನು ಪ್ರವೇಶಿಸದೇ ಹೆದ್ದಾರಿಯ ಸಂಪರ್ಕವನ್ನು ಹೊಂದಬಹುದಾಗಿದೆ ಎಂದರು. ಟೂಡಾ ಅಧ್ಯಕ್ಷ ಬಿ.ಎಸ್.ನಾಗೇಶ್ ಮಾತನಾಡಿ, ನಗರದ ಜನರ ಬಹುದಿನದ ಬೇಡಿಕೆಯಾಗಿದ್ದ ಈ ರಿಂಗ್‍ರಸ್ತೆಯನ್ನು ಅಭಿವೃದ್ಧಿಪಡಿಸಲು, 5 ಕೋಟಿ…
ಕೊರಟಗೆರೆ : ಚಾಲಕನ ಅತಿವೇಗ ಚಾಲನೆ ಮತ್ತು ದಿವ್ಯ ನಿರ್ಲಕ್ಷದಿಂದ ಸರಕಾರಿ ಬಸ್ ಬಿಕ್ಷುಕ ಮತ್ತು ರೈತನ ಮೇಲೆ ಹರಿದು ಬೇವಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಿರ್ವಾಹಕ ಸೇರಿದಂತೆ ಬಸ್ಸಿನಲ್ಲಿದ್ದ ನಿರ್ವಾಹಕ ಸೇರಿದಂತೆ 8ಜನ ಪ್ರಯಾಣಿಕರಿಗೆ ಗಂಬೀರ ಗಾಯವಾಗಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಭಾನುವಾರ ನಡೆದಿದೆ. ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು-ಮಧುಗಿರಿ-ಶಿರಾ ಮಾರ್ಗವಾಗಿ ತಿರುಪತಿಗೆ ತೆರಳುತ್ತೀದ್ದ ಕೆಎಸ್‍ಆರ್‍ಟಿಸಿ ಬಸ್ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂಯ ಕಾಶಾಪುರ ಗೇಟ್‍ನ ಸಮೀಪದ ಮುಖ್ಯರಸ್ತೆಯ ತಿರುವಿನಲ್ಲಿ ಚಾಲಕನ ಅಜಾಗರುಕತೆಯ ಚಾಲನೆಯಿಂದ ಅಪಘಾತಮಾಡಿ ಸ್ಥಳದಿಂದ ಪರಾರಿ ಆಗಿದ್ದಾನೆ. ಸರಕಾರಿ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಅಪರಿಚಿತ ಬಿಕ್ಷುಕ ಸ್ಥಳದಲ್ಲಿಯೇ ಮೃತಪಟ್ಟರೇ ದ್ವೀಚಕ್ರ ವಾಹನದಲ್ಲಿ ನಿಂತಿದ್ದ ರೈತ ಗೋಪಾಲನಾಯ್ಕ ಸಾರ್ವಜನಿಕ ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಅಪಘಾತ ಮಾಡಿದ ಸರಕಾರಿ ಬಸ್ ಚಾಲಕ ಸ್ಥಳದಿಂದ ಪರಾರಿ ಆಗಿದ್ದಾನೆ. ನಿರ್ವಾಹಕ ಸೇರಿದಂತೆ ಬಸ್ಸಿನಲ್ಲಿದ್ದ 8ಜನರಿಗೆ ಗಂಬೀರ ಗಾಯವಾಗಿವೆ.…
ತುಮಕೂರು : ಜಿಲ್ಲೆಯಲ್ಲಿ ಪ್ರತಿದಿನವೂ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟು ವರದಿ ಬಂದ ದಿನದಿಂದ ಆಯಾ ಶಾಲೆಗಳಿಗೆ 7 ದಿನಗಳ ಕಾಲ ರಜೆ ಘೋಷಿಸಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಮ್ಮ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ ವಿವಿಧ ಅಧಿಕಾರಿಗಳೊಂದಿಗೆ ಜûೂಮ್ ಮೀಟಿಂಗ್ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ದೃಢಪಡುವ (ಪಾಸಿಟಿವಿಟಿ) ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿರುವುದು ಕಂಡು ಬಂದಿದ್ದು, ಮಕ್ಕಳಲ್ಲೂ ಸಹ ಕೋವಿಡ್ ಸೋಂಕು ಹೆಚ್ಚಾಗಿ ಹರಡುತ್ತಿದೆ. ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ನಿರ್ದೇಶಿಸಿದರು. ಕೋವಿಡ್ ಮೊದಲ ಹಾಗೂ ಎರಡನೇ ಅಲೆಗಿಂತ 3ನೇ ಅಲೆ ಹರಡುವಿಕೆಯ ಸ್ವರೂಪ ಭಿನ್ನವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಸಂಬಂಧಿಸಿದ ಅಧಿಕಾರಿಗಳ ಪರಿಶ್ರಮ ಅಗತ್ಯವಿದೆ ಎಂದರಲ್ಲದೆ, ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಎಲ್ಲಾ ಡಿಡಿಪಿಐ, ಬಿಆರ್‍ಸಿ, ಸಿಆರ್‍ಸಿ,…
ತುಮಕೂರು : ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರಿ/ ಖಾಸಗಿ ಆಸ್ಪತ್ರೆ ಸೇರಿದಂತೆ ಮೆಡಿಕಲ್ ಕಾಲೇಜುಗಳಲ್ಲಿ ಶೇ. 75ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ಆಕ್ಸಿಜನ್, ಬೆಡ್, ಐಸಿಯು, ವೆಂಟಿಲೇಟರ್ ಬೆಡ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಅವುಗಳ ಸಾಮಥ್ರ್ಯದ ಶೇ.75ರಷ್ಟು ಬೆಡ್‍ಗಳನ್ನು ಮೀಸಲಿಡಬೇಕೆಂದು ತಿಳಿಸಿದರು. ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ಹಾಸಿಗೆಗಳು ಸಿಗದೆ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಡ್‍ಗಳನ್ನು ಮೀಸಲಿಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕೋವಿಡ್ 2ನೇ ಅಲೆಯಲ್ಲಿದ್ದಷ್ಟು ಒತ್ತಡ 3ನೇ ಅಲೆಯಲ್ಲಿ ಕಂಡು ಬಂದಿಲ್ಲ ಎಂದರಲ್ಲದೆ, 1400 ಸಕ್ರಿಯ ಪ್ರಕರಣಗಳು ವರದಿಯಾಗಿದ್ದರೂ ಆಸ್ಪತ್ರೆಯಲ್ಲಿ 80 ಮಂದಿ ಮಾತ್ರ ದಾಖಲಾಗಿದ್ದು, ಮುಂದಿನ 2 ತಿಂಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದೆಂದು ಮನಗಂಡು ಹಾಸಿಗೆಗಳನ್ನು ಮೀಸಲಿಡಬೇಕೆಂದು ಖಾಸಗಿ…
ಪಾವಗಡ : ತಾಲ್ಲೂಕಿನ ಗಡಿನಾಡಿನ ಜನತೆಯ ಆಶೋತ್ತರಗಳಿಗೂ ಹಾಗೂ ದಿನನಿತ್ಯದ ಸಮಸ್ಯೆಗಳಿಗೆ ಹೆಲ್ಪ್ ಸೊಸೈಟಿ ಸಂಘಟನೆಯು ಶೀಘ್ರವಾಗಿ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದು ಕೆಎಂಎಫ್ ನಿರ್ದೇಶಕರಾದ ಚನ್ನಮ್ಮನವರ ತಿಳಿಸಿದರು. ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪದ ಎಸ್ ಬಿಐ ಬ್ಯಾಂಕ್ ಪಕ್ಕದಲ್ಲಿ ಹೆಲ್ಪ್ ಸೊಸೈಟಿ ಗುರುವಾರ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೆಎಂಎಫ್ ನಿರ್ದೇಶಕರಾದ ಚನ್ನಮಲ್ಲಯ್ಯ ನವರು ಕಚೇರಿಯ ಉದ್ಘಾಟನೆ ಮಾಡಿ ನಂತರ ಮಾತನಾಡುತ್ತಾ , ತಾಲ್ಲೂಕಿನ ಜನತೆಯ ಸಮಸ್ಯೆಗೆ ಶೀಘ್ರ ಸ್ಪಂದಿಸುತ್ತಿರುವುದರಿಂದ ಜನರಲ್ಲಿ ವಿಶ್ವಾಸಗಳಿಸಿದೆ. ಯಾವುದೇ ಪಲಾಪೇಕ್ಷವಿಲ್ಲದೆ, ಕೊರೋನದ ಸಂಕಷ್ಟ ಸಮಯದಲ್ಲಿ ಜನತೆಗೆ ಮಾಸ್ಕೊ ಹಯ ಆಹಾರ ಕಿಟ್ ಗಳನ್ನು ನೀಡಲಾಗಿದೆ.ಮೂರನೇ ಅಲೆಗೆ ಸಹ ವ್ಯಾಪಕವಾಗಿ ಹರಡುತ್ತಿದ್ದು ಬುಧ ವಾರ 34 ಪ್ರಕರಣಗಳು ದಾಖಲಾಗಿರುವುದರಿಂದ ಜನತೆಯು ಸರ್ಕಾರದ ಕಾರ್ಯಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದರು. ಪುರಸಭೆಯ ಮಾಜಿ ಅಧ್ಯಕ್ಷರಾದ ಮಾನ ವೆಂಕಟಸ್ವಾಮಿ ಅವರು ಮಾತನಾಡುತ್ತಾ ಸಂಘ-ಸಂಸ್ಥೆಗಳು ಜನಪರವಾಗಿ ಕೆಲಸ ಮಾಡಬೇಕು. ಅದೇ ರೀತಿ ಎಲ್ಪ್ರೋ ಸೈಟಿ ಸಂಘಟನೆಯು…
ತುಮಕೂರು : ಕೊರೊನಾ ಮಹಾಮಾರಿ ಆರ್ಭಟದ ನಡುವೆಯೂ ನಗರದ ವಿವಿಧ ಬಡಾವಣೆಗಳಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಿದ್ದು, ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಇಲ್ಲಿನ ಜಯನಗರ ರಿಂಗ್ ರಸ್ತೆಯ ತಿರುಮಲ ನಗರ ದಕ್ಷಿಣದ ಕೆ.ಹೆಚ್.ಬಿ. ಕಾಲೋನಿಯಲ್ಲಿರುವ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಬೆಳಿಗ್ಗೆ 4 ಗಂಟೆ ಪಂಚಾಮೃತ ಅಭಿಷೇಕ, ಅಲಂಕಾರ, ಉಯ್ಯಾಲೆ ಸೇವೆ, ಪ್ರಕಾರೋತ್ಸವಗಳು ಜರುಗಿದವು. ವೈಕುಂಠ ಏಕಾದರ್ಶಿ ದರ್ಶನಕ್ಕಾಗಿ ದೇವಾಲಯಕ್ಕೆ ಬಂದ ಭಕ್ತಾದಿಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದ್ದು, ಮಾಸ್ಕ್ ಧರಿಸಿದ ಭಕ್ತರಿಗಷ್ಟೇ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಈ ದೇವಾಲಯಕ್ಕೆ ಬಂದ ಭಕ್ತರು ಮಾಸ್ಕ್ ಧರಿಸಿ, ಕೈಗಳಿಗೆ ಸ್ಯಾನಿಟೈಸ್ ಮಾಡಿಕೊಂಡು ದೇವರ ದರ್ಶನ ಪಡೆಯುತ್ತಿದ್ದ ದೃಶ್ಯ ಕಂಡು ಬಂತು. ಈ ಸಂದರ್ಭದಲ್ಲಿ ಮಾತನಾಡಿದ ದೇವಾಲಯದ ಧರ್ಮಾಧಿಕಾರಿ ಟಿ.ಆರ್. ವೆಂಕಟೇಶ್, ಎಲ್ಲರೂ ಜೀವಕ್ಕಾಗಿ ಬೆಲೆ ಕೊಡಬೇಕು. ಜೀವ ಇದ್ದರೆ…
ತುಮಕೂರು : ನಗರದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾನಗರಪಾಲಿಕೆ ವತಿಯಿಂದ ನಗರದ ಎಲ್ಲಾ ವಾರ್ಡುಗಳಲ್ಲಿಯೂ ಸಾಮೂಹಿಕ ಸಾನಿಟೈಜರ್ ಸಿಂಪರಣೆ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ. ಸುಮಾರು 10 ಕಿ.ಮಿ.ಸುತ್ತಳತೆಯನ್ನು ಹೊಂದಿರುವ ತುಮಕೂರು ನಗರದಲ್ಲಿ 35 ವಾರ್ಡುಗಳಿದ್ದು, 3.50 ಲಕ್ಷಕ್ಕೂ ಅಧಿಕ ಜನರು ವಾಸ ಮಾಡುತ್ತಿದ್ದು,ವಿವಿಧ ಕೆಲಸಗಳಿಗಾಗಿ ತುಮಕೂರು ನಗರಕ್ಕೆ ಬರುವವರು, ಇಲ್ಲಿಂದ ಬೇರೆಡೆಗೆ ಹೋಗುವವರ ಸಂಖ್ಯೆಯೂ ಹೆಚ್ಚಿದ್ದು, ಅದರಲ್ಲಿಯೂ ಬೆಂಗಳೂರು ನಗರಕ್ಕೆ ದಿನವೊಂದಕ್ಕೆ 9 ರಿಂದ 10 ಸಾವಿರ ಜನರು ವೃತ್ತಿ ನಿರತರಾಗಿ ಪ್ರತಿದಿನ ಬಸ್ಸು,ರೈಲುಗಳಲ್ಲಿ ಸಂಚರಿಸುವವರಿದ್ದಾರೆ. ಬೆಂಗಳೂರು ನಗರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು, ತುಮಕೂರು ನಗರದ ಮೇಲು ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ನಗರಪಾಲಿಕೆ ಜನವರಿ 11 ರಿಂದ ನಗರದಾದ್ಯಂತ ಸಾಮೂಹಿಕ ಸಾನಿಟೈಜರ್‍ಗೆ ಮುಂದಾಗಿದೆ. ಜನವರಿ11ರ ಮಂಗಳವಾರ ನಗರಪಾಲಿಕೆಯ ಕಚೇರಿ, ಕೆ.ಎಸ್.ಆರ್.ಟಿ.ಸಿ, ಖಾಸಗಿ ಬಸ್ ನಿಲ್ದಾಣಗಳು ಹಾಗೂ 14ನೇ ವಾರ್ಡಿನ ಕೆಲ ಬಡಾವಣೆಗಳಿಗೆ ಸಾಮೂಹಿಕ ಸಾನಿಟೈಜರ್…
ಶಿರಾ : ನಗರದ ಹೊರವಲಯದಲ್ಲಿನ ಅಂಬೇಡ್ಕರ್ ವಸತಿ ಶಾಲೆಯ (ಪ್ರೀ ಮೆಟ್ರಿಕ್) 25 ಮಕ್ಕಳಿಗೆ ಕೊರೋನಾ ಹಾಗೂ ನಾಲ್ವರು ಅಡುಗೆಯವರಿಗೆ ಸೇರಿ 29 ಮಂದಿಗೆ ಪಾಸಿಟೀವ್ ಕಂಡುಬಂದಿದ್ದು, ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬರಿಗೆ ಮೂರು ದಿನಗಳ ಹಿಂದೆ ಸಣ್ಣದಾಗಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಶಿರಾ ಸಾರ್ವಜ£ಕ ಆಸ್ಪತೆಯಲ್ಲಿ ಕೊರೋನಾ ರ್ಯಾಟ್ ಪರೀಕ್ಷೆ ನಡೆಸಲಾಗಿತ್ತು. ಆದರೆ ಫಲಿತಾಂಶ ನೆಗೆಟಿವ್ ಬಂದಿದ್ದ ಕಾರಣ, ಆರ್.ಟಿ.ಪಿ. ಸಿ.ಆರ್. ಸ್ಯಾಂಪಲ್ ಸಂಗ್ರಹಿಸಿ, ಜ್ವರಕ್ಕೆ ಚಿಕಿತ್ಸೆ ನೀಡಿ ವಾಪಸ್ ವಸತಿ ಶಾಲೆಗೆ ಕಳುಹಿಸಲಾಗಿತ್ತು. ಆದರೆ ವಿದ್ಯಾರ್ಥಿಯ ಆರ್.ಟಿ.ಪಿ.ಸಿ.ಆರ್. ಫಲಿತಾಂಶ ಪಾಸಿಟೀವ್ ಬಂದಿದೆ ಎಂದು ಆಕೆಯ ಪೆÇೀಷಕರಿಗೆ ಆಸ್ಪತ್ರೆಯಿಂದ ಮೆಸೇಜ್ ಹೋಗಿದ್ದು, ಸೋಮವಾರ ಸಂಜೆಗೆ ವಿಷಯ ತಿಳಿಯುತ್ತಿದ್ದಂತೆ ತಾಲ್ಲೂಕು ಆಡಳಿತದ ನಿರ್ದೇಶನದಂತೆ ವಸತಿ ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನೂ ಮಂಗಳವಾರ ರ್ಯಾಟ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ವಸತಿ ಶಾಲೆಯಲ್ಲಿ ಒಟ್ಟು 215 ಮಂದಿ ವಿದ್ಯಾಥಿಗಳು ಅಭ್ಯಾಸ…











