ತುಮಕೂರು : ರಾಜ್ಯ ಚುನಾವಣಾ ಆಯೋಗವು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ 28 ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ. ವೇಳಾಪಟ್ಟಿಯನ್ವಯ ಡಿಸೆಂಬರ್ 13ರಂದು ಚುನಾವಣಾ ನೋಟೀಸನ್ನು ಹೊರಡಿಸಲಾಗಿದ್ದು, ಡಿಸೆಂಬರ್ 17 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ನಾಮಪತ್ರಗಳ ಪರಿಶೀಲನೆಯನ್ನು ಡಿಸೆಂಬರ್ 18ರಂದು ನಡೆಸಲಾಗುವುದು. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಡಿಸೆಂಬರ್ 20 ಕಡೆಯ ದಿನವಾಗಿದೆ. ಮತದಾನ(ಅವಶ್ಯವಿದ್ದರೆ)ವನ್ನು ಡಿಸೆಂಬರ್ 27ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಹಾಗೂ ಮರು ಮತದಾನದ ಅವಶ್ಯವಿದ್ದಲ್ಲಿ ಡಿ.29ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಸಲಾಗುವುದು. ಮತಗಳ ಎಣಿಕೆಯು ಡಿಸೆಂಬರ್ 30ರ ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡಿಸೆಂಬರ್ 13 ರಿಂದ 30ರವರೆಗೆ ಚುನಾವಣಾ ನೀತಿ ಸಂಹಿತೆ…
Author: News Desk Benkiyabale
ತುಮಕೂರು : ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾದ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಬಾಕಿ ಉಳಿಸಿಕೊಂಡಿರುವ ನೋಂದಣಿ ಕಾರ್ಯವನ್ನು ಪರಿಹಾರ ಪೋರ್ಟಲ್‍ನಲ್ಲಿ ದಾಖಲಿಸುವ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ 63,911 ಹೆ. ಬೆಳೆ ಸಮೀಕ್ಷೆ ನೋಂದಣಿ ಕಾರ್ಯ ಮುಗಿದಿದ್ದು, ಬಾಕಿ ಉಳಿಸಿಕೊಂಡಿರುವ 35,427 ಹೆ. ಪ್ರದೇಶದ ನೋಂದಣಿ ಕಾರ್ಯವನ್ನು 7 ದಿನಗಳ ಒಳಗಾಗಿ ಮೂರ್ಣಗೊಳಿಸಬೇಕು. ಬೋಗಸ್ ದಾಖಲೆಗಳನ್ನು ನಮೂದಿಸುವುದನ್ನು ನಿಯಂತ್ರಸಬೇಕು ಹಾಗೂ ಸಂಕಷ್ಟದಲ್ಲಿರುವ ಯಾವೊಬ್ಬ ನೈಜ ಫಲಾನುಭವಿಯೂ ಪರಿಹಾರದಿಂದ ಹೊರಗುಳಿಯದಂತೆ ಎಚ್ಚರವಹಿಸಬೇಕು. ಪರಿಹಾರ ನೀಡಲು ಅನುದಾನವಿಲ್ಲವೆಂಬ ನೆಪ ಹೇಳದೆ, ಲಭ್ಯವಿರುವ ಅನುದಾನದಲ್ಲಿ ನಷ್ಟ ಹೊಂದಿರುವ ನೈಜ ರೈತರಿಗೆ ಪರಿಹಾರ ನೀಡುವ ಕಾರ್ಯಗಳಾಗಬೇಕು. ಅದೇ ರೀತಿ ಅತೀವೃಷ್ಟಿಯಿಂದ ಮನೆ ಕಳೆದುಕೊಂಡ ಹಾಗೂ ಇನ್ನೂ ಪರಿಹಾರ ಸಿಗದ ಫಲಾನುಭವಿಗಳನ್ನು ಗುರುತಿಸಿ ನಿಗಧಿತ ಸಮಯದೊಳಗೆ…
ಚಿಕ್ಕನಾಯಕನಹಳ್ಳಿ: ತುಮಕೂರು ವಿಧಾನ ಪರಿಷತ್ ಸ್ಥಾನದ ಬಿಜೆಪಿ ಅಭ್ಯರ್ಥಿ ಲೋಕೇಶ್‍ಗೌಡಗೆಲುವು ಪಡೆಯಲಿದ್ದಾರೆಎಂದುಜಿಲ್ಲಾಉಸ್ತುವಾರಿಸಚಿವ ಜೆ.ಸಿ.ಮಾಧುಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಪಟ್ಟಣದ ಪುರಸಭೆಯಲ್ಲಿ ಶುಕ್ರವಾರಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿಜಿಲ್ಲೆಯಲ್ಲಿ ನಮ್ಮ ಪಕ್ಷದಅಭ್ಯರ್ಥಿಗೆಲುವುಸಾಧಿಸಲಿದ್ದಾರೆ, ನಾವು ಮತದಾರರ ಮನೆಮನೆಗೆ ಹೋಗಿ ಮತಕೇಳಿದ್ದೇವೆಯೇ ಹೊರೆತುಯಾವುದೇ ಪಕ್ಷದ ಮುಖಂಡರೊಂದಿಗೆಒಪ್ಪಂದ ಮಾಡಿಕೊಂಡಿಲ್ಲಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಎಲ್ಲಾ ಪಕ್ಷದಿಂದ ಮತದಾರರಿಗೆಇಂತಿಷ್ಟುಹಣ ಸಂದಾಯವಾಗಿದೆ ಎಂಬ ವದಂತಿಯಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ನನಗೆಯಾರೂ ಹಣ ನೀಡಿಲ್ಲ, ಪುಗ್ಸಟ್ಟೆಓಟಾಕಿದಾಯ್ತಲ್ಲ, ಓಟಾಕಾಕಿಂತ ಮೊದಲೆ ಹೇಳೋದಲ್ವನಯ್ಯ ಎಂದು ನಗೆ ಚಟಾಕಿಹಾರಿಸಿ ಜಾರಿಕೊಂಡರು. ತಾಲ್ಲೂಕಿನಲ್ಲಿ 29 ಮತಕೇಂದ್ರಗಳಿದ್ದು ಒಟ್ಟು 495 ಮತದಾರರಿದ್ದಾರೆ. ಕೆಲವು ಕೇಂದ್ರಗಳಲ್ಲಿ ಮತದಾರರಿಗಿಂತ ಸಿಬ್ಬಂದಿಗಳೇ ಹೆಚ್ಚಾಗಿದ್ದಾರೆ, ಈ ವ್ಯವಸ್ಥೆ ಬದಲಾಯಿಸಬಹುದಿತಲ್ವ ಎಂಬ ಪ್ರಶ್ನೆಗೆ, ಸಂಘ ಸಂಸ್ಥೆ ಚುನಾವಣೆ ಅ ಸಂಸ್ಥೆಗಳಲ್ಲಿಯೇ ಆಗಬೇಕು ಅಲ್ಲಿನ ಕಾರ್ಯದರ್ಶಿಇಲ್ಲವೇ ಮುಖ್ಯಾಧಿಕಾÀರಿಯೇಚುನವಣಾಧಿಕಾರಿಎಂದು ಮಾಡಿದ್ದಾರೆ, ಇದೊಂದು ಪುರಸಭೆಯ ಭಾಗಎಂದೆ ಹೇಳುವುದರಿಂದ ಈ ನಿಯಮದಡಿಯೇ ನಡೆಯಬೇಕುಎಂದರು.
ಚಿಕ್ಕನಾಯಕನಹಳ್ಳಿ: ವಿಧಾನಪರಿಷತ್‍ಚುನಾವಣೆಯಲ್ಲಿತಾಲ್ಲೂಕಿನಾದ್ಯಂತ ನಡೆದ ಮತದಾನದಲ್ಲಿ ಶೇ.99.39 ಮತದಾನವಾಗಿದೆ. ತಾಲ್ಲೂಕಿನ 29 ಮತಕೇಂದ್ರಗಳಿಂದ ಒಟ್ಟು 495 ಮತದಾರಲ್ಲಿ 238 ಪುರುಷರು, 254 ಮಹಿಳೆಯರುಇದ್ದಾರೆ. ಪುರಸಭಾ ಮತಕೇಂದ್ರದಲ್ಲಿ ಪುರಸಭಾ ಸದಸ್ಯರೂ ಸೇರಿದಂತೆಒಂದು ಶಾಸಕರು ಹಾಗೂ ಒಂದು ಸಂಸದರ ಮತ ಸೇರಿದಂತೆ 30 ಮತದಾನವಾಗಬೇಕಿದ್ದು ಸಂಸದರ ಮತಇಲ್ಲಿಚಲಾವಣೆಆಗದಕಾರಣ ಶೇ.99.39 ಆಗಿದೆ. ಒಂದು ಪುರಸಭೆ, ಒಂದು ಪಟ್ಟಣಪಂಚಾಯಿತಿಯೂ ಸೇರಿದಂತೆತಾಲ್ಲೂಕಿನಲ್ಲಿ 29 ಮತಗಟ್ಟೆಯಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು.ಎಲ್ಲಾ ಮತಗಟ್ಟೆಗಳಲ್ಲಿ ಆಯಾ ಪಕ್ಷದ ಸದಸ್ಯರುಒಟ್ಟಾಗಿ ಬಂದು ಮತಚಲಾವಣೆ ಮಾಡಿದರು. ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿಜಿಲ್ಲಾಉಸ್ತುವಾರಿ ಸಚಿವರುತಮ್ಮ ಮತಚಲಾಯಿಸಿದರು. ಹುಳಿಯಾರು ಪಟ್ಟಣ ಪಂಚಾಯಿತಿ ಮತಗಟ್ಟೆಗೆಕಾಂಗ್ರೆಸ್‍ಅಭ್ಯರ್ಥಿರಾಜೇಂದ್ರ ಭೇಟಿನೀಡಿದ್ದರು.
ತುಮಕೂರು : ಕರ್ನಾಟಕ ವಿಧಾನ ಪರಿಷತ್ತಗೆ 14 ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಇಂದು ನಡೆದ ಚುನಾವಣೆಯಲ್ಲಿ ಶೇ. 99.78ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ. ಜಿಲ್ಲಾದ್ಯಂತ ಶಾಂತಿಯುತ ಮತದಾನವಾಗಿದ್ದು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಶೇ.99.39, ತಿಪಟೂರು-ಶೇ.99.77, ತುರುವೇಕೆರೆ-ಶೇ.99.76, ಕುಣಿಗಲ್-ಶೇ.99.62, ತುಮಕೂರು-ಶೇ.100, ಕೊರಟಗೆರೆ-ಶೇ.99.75, ಗುಬ್ಬಿ-ಶೇ.99.68, ಶಿರಾ-ಶೇ.100, ಪಾವಗಡ-ಶೇ.99.83, ಮಧುಗಿರಿ-ಶೇ.99.84 ಸೇರಿದಂತೆ ಒಟ್ಟಾರೆ ಶೇ.99.78ರಷ್ಟು ಮತದಾನವಾಗಿದೆ. ಜಿಲ್ಲೆಯ 338 ಮತದಾನ ಕೇಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ 8 ರಿಂದ 4 ಗಂಟೆಯವರೆಗೂ ನಡೆದ ಚುನಾವಣೆಯಲ್ಲಿ 2621 ಪುರುಷರು ಹಾಗೂ 2938 ಮಹಿಳೆಯರು ಸೇರಿದಂತೆ 5559 ಅರ್ಹ ಮತದಾರರಲ್ಲಿ 2610 ಪುರುಷರು(ಶೇ.99.58) ಹಾಗೂ 2937 ಮಹಿಳೆಯರು(ಶೇ.99.97) ಸೇರಿದಂತೆ 5547 ಮತದಾರರು ಮತದಾನ ಮಾಡಿದ್ದಾರೆ. ಮತದಾನ ಮಾಡಿದ 5547 ಮತದಾರರ ಪೈಕಿ 8 ಪುರುಷರು ಹಾಗೂ 5 ಮಹಿಳೆಯರು ಸೇರಿದಂತೆ 13 ಮಂದಿ ವಿಕಲಚೇತನರು ಸೇರಿದ್ದಾರೆ. ತಾಲ್ಲೂಕುವಾರು ಮತದಾನ ಮಾಡಿದ…
ತುಮಕೂರು: ಇತಿಹಾಸ ಪ್ರಸಿದ್ಧ ಗೂಳೂರು ಮಹಾಗಣಪತಿ ವಿಸರ್ಜನಾ ಮಹೋತ್ಸವ ಡಿ.11ರಂದು ಶನಿವಾರ ರಾತ್ರಿ 10 ಗಂಟೆಗೆ ನಡೆಯಲಿದೆ. ವಿದ್ಯುದ್ದೀಪಗಳಿಂದ ಅಲಂಕೃತವಾದ ಭವ್ಯ ಹೂಲಿನ ಮಂಟಪದಲ್ಲಿ ಶ್ರೀ ಮಹಾಗಣಪತಿ ಉತ್ಸವ ನಡೆಯಲಿದ್ದು, ತುಮಕೂರಿನ ಶುಭಂ ಶ್ರೀನಿವಾಸನ್ ಜಿ.ವಿ. ಇಂಟರ್ ನ್ಯಾಷನಲ್ ನಾದಸ್ವರ ಮತ್ತು ತುಮಕೂರಿನ ದಿ.ಹೆಚ್.ಆರ್.ಜಯಣ್ಣ ಮತ್ತು ಸಂಗಡಿಗರಿಂದ ಕರಡಿ ಮಜಲು ಮತ್ತು ನಾಸಿಕ್ ಡೋಲು, ಕರ್ನಾಟಕ ಫೈರ್ ವರ್ಕ್ ಅವರಿಂದ ಬಾಣಬಿರುಸು, ಮದ್ದಿನಮರ, ಕರಡಿ ವಾದ್ಯ ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ರಾಣೆಬೆನ್ನೂರಿನ ಶ್ರೀ ಹನುಮಾನ್ ನಾಸಿಕ್ ಡೋಲ್, ಹನುಮಂತ ಹಾಗೂ ಚಿಕ್ಕಮಂಗಳೂರಿನ ಶ್ವೇತ ತಂಡದವರಿಂದ ವೀರಗಾಸೆ, ನಂದಿ, ನವಿಲು, ಜಿರಾಫೆ, ಕವಾಡ ಡ್ಯಾನ್ಸ್, ನಕ್ಕಲು ನಲಿಸುವ ಚಾರ್ಲಿ ಡ್ಯಾನ್ಸ್ ಮತ್ತು, ನಂದಿಧ್ವಜ ಕುಣಿತ ವೀರಗಾಸೆ, ಕೀಲುಕುದುರೆ ಡೊಳ್ಳು ಕುಣಿತ ಸೇರಿದಂತೆ ಅನೇಕ ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವದ ರಾತ್ರಿ 2 ಗಂಟೆಗೆ 500 ಅಡಿ ಉದ್ದದ ಜೋಗ್‍ಫಾಲ್ಸ್, ನೂರು ಬಾರಿ ಒಡೆಯುವ…
ತುಮಕೂರು : ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಇಂದು(ಡಿಸೆಂಬರ್ 10ರಂದು) ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಲು ಜಿಲ್ಲೆಯಾದ್ಯಂತ 338 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ತಾಲ್ಲೂಕುವಾರು ವಿವರ ಇಂತಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದಸೂಡಿ, ಹೊಯ್ಸಳಕಟ್ಟೆ, ಗಾಣದಾಳು, ಕೆಂಕೆರೆ, ಯಳನಾಡು, ಕೋರಗೆರೆ, ದೊಡ್ಡೆಣ್ಣೆಗೆರೆ, ಹಂದನಕೆರೆ, ಚೌಳಕಟ್ಟೆ, ತಿಮ್ಲಾಪುರ, ದೊಡ್ಡಬಿದರೆ, ಬರಕನಾಳ್, ತಿಮ್ಮನಹಳ್ಳಿ, ರಾಮನಹಳ್ಳಿ, ಕಂದಿಕೆರೆ, ಬೆಳಗುಲಿ, ಬರಗೂರು, ಮತ್ತಿಘಟ್ಟ, ಮಲ್ಲಿಗೆರೆ, ಕುಪ್ಪೂರು, ಶೆಟ್ಟಿಕೆರೆ, ದುಗಡಿಹಳ್ಳಿ, ಮುದ್ದೇನಹಳ್ಳಿ, ಹೊನ್ನೆಬಾಗಿ, ತೀರ್ಥಪುರ, ಗೋಡೆಕೆರೆ, ಜಯಚಾಮರಾಜಪುರ ಗ್ರಾಮ ಪಂಚಾಯತಿ, ಚಿಕ್ಕನಾಯಕನಹಳ್ಳಿ ಪುರಸಭೆ ಹಾಗೂ ಹುಳಿಯಾರ್ ಪಟ್ಟಣ ಪಂಚಾಯತಿ ಸೇರಿದಂತೆ ಒಟ್ಟು 29 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ತಿಪಟೂರು ತಾಲ್ಲೂಕಿನ ಬಳುವನೆರಲು, ಹಾಲ್ಕುರಿಕೆ, ಮಣಕೀಕೆರೆ, ಸಾರ್ಥವಳ್ಳಿ, ಗ್ಯಾರಘಟ್ಟ, ಗುಡಿಗೊಂಡನಹಳ್ಳಿ, ಹುಚ್ಚಗೊಂಡನಹಳ್ಳಿ, ಕರಡಿ, ಕುಪ್ಪಾಳು, ಅರಳಗುಪ್ಪೆ, ಬಿಳಿಗೆರೆ, ಹಿಂಡಿಸ್ಕೆರೆ, ಈಚನೂರು, ಮತ್ತಿಹಳ್ಳಿ, ಗುರುಗದಹಳ್ಳಿ, ತಡಸೂರು, ರಂಗಾಪುರ, ನಾಗರಘಟ್ಟ, ನೆಲ್ಲಿಕೆರೆ, ನೊಣವಿನಕೆರೆ, ಬಜಗೂರು, ಹುಣಸೇಘಟ್ಟ, ದಸರಿಘಟ್ಟ, ಮಸವನಘಟ್ಟ, ಗುಂಗುರುಮಳೆ ಗ್ರಾಮ ಪಂಚಾಯತಿ ಹಾಗೂ ತಿಪಟೂರು ನಗರಸಭೆ ಸೇರಿದಂತೆ ಒಟ್ಟು 26…
ತುಮಕೂರು : ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಡಿಸೆಂಬರ್ 10ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯನ್ನು ನಿಷ್ಪಕ್ಷಪಾತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಮತದಾನಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 338 ಮತಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 194 ಸಾಮಾನ್ಯ, 95 ಸೂಕ್ಷ್ಮ ಹಾಗೂ 49 ಅತಿಸೂಕ್ಷ್ಮ ಮತಕೇಂದ್ರಗಳೆಂದು ಗುರುತಿಸಲಾಗಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತ ಕೇಂದ್ರಗಳಿಗೆ ಹೆಚ್ಚಿನ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ. ಎಲ್ಲಾ ಕೇಂದ್ರಗಳಲ್ಲಿಯೂ ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಹಿಸಲಾಗಿದೆ ಎಂದು ಹೇಳಿದರು. ಈ ಚುನಾವಣೆಯಲ್ಲಿ 2623 ಪುರುಷರು ಹಾಗೂ 2936 ಮಹಿಳೆಯರು ಸೇರಿದಂತೆ ಒಟ್ಟು 5559 ಮತದಾರರು ಮತದಾನ ಮಾಡಲಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆಯನ್ನು…
ತುಮಕೂರು : ರಾಜ್ಯ ಚುನಾವಣಾ ಆಯೋಗವು ಶಿರಾ ನಗರಸಭೆ 31 ವಾರ್ಡ್‍ಗಳ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ವೇಳಾಪಟ್ಟಿಯನ್ನು ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ. ವೇಳಾಪಟ್ಟಿಯನ್ವಯ ಡಿಸೆಂಬರ್ 8ರಂದು ಚುನಾವಣಾ ನೋಟೀಸನ್ನು ಪ್ರಕಟಿಸಲಾಗಿದ್ದು, ಡಿಸೆಂಬರ್ 15 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ನಾಮಪತ್ರಗಳ ಪರಿಶೀಲನೆಯನ್ನು ಡಿಸೆಂಬರ್ 16ರಂದು ನಡೆಸಲಾಗುವುದು. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಡಿಸೆಂಬರ್ 18 ಕಡೆಯ ದಿನವಾಗಿದೆ. ಮತದಾನ(ಅವಶ್ಯವಿದ್ದರೆ)ದ ಡಿಸೆಂಬರ್ 27ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಹಾಗೂ ಮರು ಮತದಾನದ ಅವಶ್ಯವಿದ್ದಲ್ಲಿ ಡಿ.29ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಸಲಾಗುವುದು. ಮತಗಳ ಎಣಿಕೆಯು ಡಿಸೆಂಬರ್ 30ರ ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರದಲ್ಲಿ ನಡೆಯಲಿದ್ದು, ಡಿಸೆಂಬರ್ 30ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ. ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ಡಿಸೆಂಬರ್ 8 ರಿಂದ 30ರವರೆಗೆ ಜಾರಿಯಲ್ಲಿದ್ದು, ಡಿಸೆಂಬರ್ 11ರಂದು…
ತುಮಕೂರು : ಇಂದಿನ ಆಧುನಿಕ ಜೀವನ ಶೈಲಿಯಿಂದ ಉಂಟಾಗುವ ಮಾನಸಿಕ ಒತ್ತಡಗಳಿಂದ ಹೊರಗೆ ಬರಲು ಸಂಗೀತ ಉತ್ತಮ ಸಾಧನವಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ: ಟಿ.ಎ. ವೀರಭದ್ರಯ್ಯ ಅಭಿಪ್ರಾಯಪಟ್ಟರು. ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸ್ವರ ಸಿಂಚನ ಸುಗಮ ಸಂಗೀತ ಜನಪದ ಕಲಾಸಂಸ್ಥೆ ಹಾಗೂ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ‘ಯುವ ಸೌರಭ’ ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತಕ್ಕೆ ಎಂಥಹ ನೋವನ್ನಾದರೂ ಕಡಿಮೆ ಮಾಡುವ ಅಪಾರವಾದ ಶಕ್ತಿಯಿದೆ. ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೈಹಿಕ ಚಟುವಟಿಕೆಗಳನ್ನೇ ಮರೆತಿರುವ ಇಂದಿನ ಯುವಕರಲ್ಲಿ ಕಲೆ ಮತ್ತು ದೇಸೀ ಸಂಸ್ಕøತಿಯ ಬಗೆಗಿನ ಆಸಕ್ತಿ ಹೆಚ್ಚುವಂತೆ ಮಾಡುವುದು ಅಗತ್ಯವಾಗಿದೆ ಎಂದರು. ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ ಮಾತನಾಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಪ್ರತಿ ವರ್ಗಕ್ಕೂ ವಿಶೇಷವಾಗಿ ಯುವ ಸಮುದಾಯವನ್ನು ಕಲಾಕ್ಷೇತ್ರದೆಡೆಗೆ ಕರೆತರುವ ಸದುದ್ದೇಶದಿಂದ ಯುವಸೌರಭ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,…










