ತುಮಕೂರು: ಕೋವಿಡ್ 3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗಲುವ ಸಂಭವವಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ಮಕ್ಕಳ ಆಸ್ಪತ್ರೆ ತೆರೆಯಬೇಕೆಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಕೊರಟಗೆರೆಯಲ್ಲಿ ಉಪನೋಂದಣಿ ಕಛೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿದ ನಂತರ ಪ್ರವಾಸಿ ಮಂದಿರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ 3ನೇ ಅಲೆಯಲ್ಲಿ ಹೆಚ್ಚಾಗಿ ಮಕ್ಕಳಿಗೆ ಸೋಂಕು ತಗಲುವ ಸಂಭವವಿದೆ ಎಂದು ತಜ್ಞವೈದ್ಯರು ಅಭಿಪ್ರಾಯ ಪಟ್ಟಿರುವುದರಿಂದ ಪ್ರಾಯೋಗಿಕವಾಗಿ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಆಸ್ಪತ್ರೆಯನ್ನು ಹಾಗೂ ನಂತರ ಎಲ್ಲಾ ತಾಲ್ಲೂಕುಗಳಲ್ಲಿಯೂ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ 65 ಮಂದಿ ಮಕ್ಕಳ ತಜ್ಞವೈದ್ಯರಿದ್ದಾರೆಂದು ಮಾಹಿತಿಯಿದ್ದು, ಮುಂದಿನ 10 ದಿನಗಳೊಳಗಾಗಿ ಮಕ್ಕಳ ವೈದ್ಯರು ಸೇರಿದಂತೆ ಎಲ್ಲಾ ವೈದ್ಯರಿಗೂ ಕೋವಿಡ್ ಸೋಂಕು ಸಂದರ್ಭದಲ್ಲಿ ಮಕ್ಕಳ ಆರೈಕೆ, ಔಷಧೋಪಚಾರ, ಚಿಕಿತ್ಸೆ ನೀಡುವ ಬಗ್ಗೆ ಸೂಕ್ತ ತರಬೇತಿ ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. ಮಕ್ಕಳ ಆಸ್ಪತ್ರೆ ತೆರೆಯಲು ಔಷಧಿ, ಐಸಿಯು, ಆಮ್ಲಜನಕ ಹಾಸಿಗೆ,…
Author: News Desk Benkiyabale
ಕೋರ: ಆಕಸ್ಮಿಕವಾಗಿ ಬಾವಿಗೆ ಬಿದ್ದು ತಾಯಿ ಮತ್ತು ಇಬ್ಬರು ಮಕ್ಕಳು ಸೇರಿ ಮೂವರು ಗುರುವಾರ ಸಾವನ್ನಪ್ಪಿದ್ದಾರೆ. ಹೋಬಳಿಯ ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಲಪಾಳ್ಯದಲ್ಲಿ ಈ ದುರ್ಘಟನೆ ಜರುಗಿದೆ. ತಿರುಮಲಪಾಳ್ಯದ ಕುಮಾರ್ ಎಂಬುವರ ಪತ್ನಿ ಹೇಮಲತಾ (34) ಹಾಗೂ ಮಕ್ಕಳಾದ ಮಾನಸ (6), ಪೂರ್ವಿಕಾ (3) ಬಾವಿಗೆ ಬಿದ್ದು ಸಾವನ್ನಪ್ಪಿದವರು. ಗುರುವಾರ ಹುಣ್ಣಿಮೆ ಪ್ರಯುಕ್ತ ತೋಟದಲ್ಲಿ ಮೊಸರನ್ನ ಎಡೆ ಹಾಕಲು ಹೋಗಿದ್ದಾರೆ. ಆ ಸಂದರ್ಭದಲ್ಲಿ ಮಾನಸ ಬಾವಿಯ ದಡದಲ್ಲಿದ್ದ ಸೀಬೆ ಹಣ್ಣಿನ ಮರದಲ್ಲಿ ಹಣ್ಣು ಕೀಳಲು ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾಳೆ. ಜತೆಯಲ್ಲೇ ಇದ್ದ ಪೂರ್ವಿಕಾ ಸಹ ಅಕ್ಕನಂತೆ ಬಾವಿಗೆ ಬಿದ್ದಿದ್ದಾಳೆ. ತನ್ನ ಇಬ್ಬರು ಮಕ್ಕಳು ಬಾವಿಗೆ ಬಿದ್ದಿದ್ದನ್ನು ನೋಡಿದ ತಾಯಿ ಹೇಮಲತಾ ಅವರು ಮಕ್ಕಳನ್ನು ರಕ್ಷಿಸಲು ಬಾವಿಗೆ ಹಾರಿದ್ದಾರೆ. ಮೂವರು ಮೇಲೆ ಬರಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ.
ತುಮಕೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಜಲ ಜೀವನ್ ಮಿಷನ್’ ಯೋಜನೆಯನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಅನುμÁ್ಠನಗೊಳಿಸಲು ಕ್ರಿಯಾ ಯೋಜನೆ ತಯಾರಿಸಿ ಮಾಹಿತಿ ಒದಗಿಸುವಂತೆ ಸಂಸದ ಜಿ.ಎಸ್. ಬಸವರಾಜು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಲ ಜೀವನ್ ಮಿಷನ್ ಯೋಜನೆಯ ಅನುμÁ್ಠನ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಲಜೀವನ್ ಮಿಷನ್ ಯೋಜನೆಯ ಯಶಸ್ವಿ ಅನುμÁ್ಠನಕ್ಕಾಗಿ ಗ್ರಾಮವಾರು ಕ್ರಿಯಾ ಯೋಜನೆ ರೂಪಿಸಿ, ರೂಪು-ರೇμÉ ಸಿದ್ಧಪಡಿಸಿಸುವಂತೆ ನಿರ್ದೇಶಿಸಿದರು. ಜಲ ಜೀವನ್ ಮಿಷನ್ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 82 ಹಳ್ಳಿಗಳ 11671 ಮನೆಗಳಿಗೆ ಕಾರ್ಯಾತ್ಮಕ ನಳ ಅಳವಡಿಸುವ ಕಾಮಗಾರಿಯನ್ನು ಕಾಲಮಿತಿಯೊಳಗೆ ಮುಗಿಸಿ ಕುಡಿಯುವ ನೀರು ಒದಗಿಸಲು ಕ್ರಮ ವಹಿಸಬೇಕು. ಜಿಲ್ಲೆಯ ಹತ್ತು ತಾಲೂಕಿನಲ್ಲೂ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸಬೇಕು. ನೀರಿನ ಮೂಲವಿರುವ ಸ್ಥಳದಲ್ಲಿ ಆದ್ಯತೆ ಮೇರೆಗೆ ಯೋಜನೆಯನ್ನು ಸಮರ್ಪಕವಾಗಿ ಅನುμÁ್ಟನಗೊಳಿಸಬೇಕು ಎಂದು ತಾಕೀತು ಮಾಡಿದರು. ಪ್ರಗತಿ ಪರಿಶೀಲನಾ ಸಭೆಗೆ ಪೂರ್ಣ ಮಾಹಿತಿ ಮತ್ತು ಸೂಕ್ತ ಯೋಜನಾ ತಯಾರಿ ಬಗ್ಗೆ…
ತುಮಕೂರು: ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದ್ದು, ಉತ್ತಮ ಪರ್ಯಾಯ ರಾಜಕೀಯ ಪಕ್ಷವಾಗಿರುವ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದೆಹಲಿಯಲ್ಲಿ ಆಗಿರುವ ಬದಲಾವಣೆಯನ್ನು ತುಮಕೂರು ಜಿಲ್ಲೆಯಲ್ಲಿ ಕಾಣಬೇಕು ಎನ್ನುವ ಕಾರಣಕ್ಕೆ ಆಮ್ ಆದ್ಮಿ ಜನರ ಬಳಿಗೆ ತೆರಳುತ್ತಿದೆ, ದೆಹಲಿಯಲ್ಲಿರುವ ಕ್ರೇಜಿವಾಲ್ ನೇತೃತ್ವದ ಸರ್ಕಾರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಜಾರಿಗೆ ತಂದಿರುವ ಕ್ರಾಂತಿಕಾರಿ ಬದಲಾವಣೆಗಳು ದೇಶಕ್ಕೆ ಅವಶ್ಯಕವಾಗಿದ್ದು, ಉನ್ನತ ವ್ಯಾಸಂಗ, ಉತ್ತಮ ಆರೋಗ್ಯ ಕಲ್ಪಿಸುವುದೇ ಆಮ್ಆದ್ಮಿ ಪಕ್ಷದ ಧ್ಯೇಯವಾಗಿದೆ ಎಂದು ಹೇಳಿದರು. ಪಕ್ಷದ ಜಿಲ್ಲಾ ಉಸ್ತುವಾರಿ ಬಿ.ಟಿ.ನಾಗಣ್ಣ ಮಾತನಾಡಿ ಜಿಲ್ಲೆಯಲ್ಲಿ ತೆಂಗು ಪ್ರಮುಖ ಬೆಳೆಯಾಗಿದ್ದು, ಬೆಳೆಗೆ ತಕ್ಕಂತೆ ಬೆಲೆ ಸಿಗದೇ ರೈತರು ಪರದಾಡುತ್ತಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದಲೂ ಹೇಮಾವತಿ ನೀರಿನ ಲಭ್ಯತೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಜಿಲ್ಲೆ ವಿಫಲವಾಗಿದೆ, ಇಂದಿಗೂ ಪಾವಗಡ ಸೇರಿದಂತೆ ಅನೇಕ ತಾಲ್ಲೂಕುಗಳು ನೀರಾವರಿಯಿಂದ ವಂಚಿತವಾಗಿದ್ದು, ನೀರಾವರಿ ಮೇಲೆ ರಾಜಕಾರಣ ಮಾಡುವ ರಾಜಕಾರಣಿಗಳಿಂದಾಗಿ ಜಿಲ್ಲೆಯಲ್ಲಿ ಇಂತಹ…
ತುಮಕೂರು: ಪ್ರಧಾನಿ ನರೇಂದ್ರ ಮೋದಿಯವರು ಜನರನ್ನ ಮೂರ್ಖರನ್ನಾಗಿಸಿದ್ದಾರೆ. ಸಬ್ಕಾ ವಿಕಾಸ್ ಹೆಸರಲ್ಲಿ ಯಾರ ವಿಕಾಸ ಮಾಡಲು ಹೊರಟಿದ್ದಾರೆಂಬುದು ತಿಳಿಯುತ್ತಿಲ್ಲ.ಈಗಾಗಲೇ ದಿನನಿತ್ಯದ ಗೃಹ ಬಳಕೆ ವಸ್ತುಗಳು, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿರುವ ಬೆನ್ನಲ್ಲೇ ವಿದ್ಯುತ್ ದರ ಏರಿಕೆಯು ಬಡಜನರಿಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರವಾಗಿವೆ. ದೀನ ದಲಿತರ, ರೈತರ ಹಾಗೂ ಆರ್ಥಿಕವಾಗಿ ಹಿಂದುಳಿದವರ ಪಾಲಿಗೆ ಗೋಮುಖ ವ್ಯಾಘ್ರದಂತಾಗಿವೆ. ಜನರು ಕೊರೊನಾ ಸಂಕಷ್ಟದಲ್ಲಿ ಸಿಲುಕಿ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಪರಿಸ್ಥಿತಿ ಭೀಕರ ಸ್ವರೂಪ ಪಡೆದಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಏಕಾಏಕಿ ವಿದ್ಯುತ್ ದರ ಏರಿಸಿದೆ. ಕಷ್ಟದಲ್ಲಿ ಇರುವವರಿಗೆ ಮತ್ತಷ್ಟು ಕಷ್ಟ ಕೊಡುತ್ತಿದೆ. ಕಷ್ಟದಲ್ಲಿರುವ ಜನತೆಯ ಸಮಸ್ಯೆ ಆಲಿಸಿಲ್ಲ. ಅವೈಜ್ಞಾನಿಕವಾಗಿ ವಿದ್ಯುತ್, ತೈಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ಬೆಲೆ ಏರಿಕೆ ನೀತಿಯನ್ನು ಹಿಂಪಡೆದು ಜನರ ಹಿತ ಕಾಪಾಡಬೇಕು. ಪಿಎಂ ಕೇರ್ಸ್ ಫಂಡ್ ಬಗ್ಗೆ ಲೆಕ್ಕ ನೀಡಲು…
ಚಿಕ್ಕನಾಯಕನಹಳ್ಳಿ : ಕೊರೋನಾ ಸಮಯದಲ್ಲಿ ಉಂಟಾದ ಆಮ್ಲಜನಕ ಕೊರತೆಯನ್ನು ನೀಗಿಸಲು ಜಿಲ್ಲೆಯಲ್ಲಿ ಆಮ್ಲಜನಕ ಘಟಕ ನಿರ್ಮಾಣ ಮಾಡುತ್ತಿದ್ದು ಚಿಕ್ಕನಾಯಕನಹಳ್ಳಿ, ಶಿರಾ, ತಿಪಟೂರಿನಲ್ಲಿ ಆಮ್ಲಜನಕ ಘಟಕ ಆರಂಭಿಸುತ್ತಾ ಕೊರೋನಾ 3ನೇ ಅಲೆಗೆ ಜಿಲ್ಲೆಯಲ್ಲಿ ಮುಂಜಾಗೃತವಾಗಿ ಸಜ್ಜಾಗುತ್ತಿದ್ದೇವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕದ ಆರಂಭದ ವೇಳೆ ಮಾತನಾಡಿದ ಸಚಿವರು, ಚಿಕ್ಕನಾಯಕನಹಳ್ಳಿ ಘಟಕ 500ಲೀ, ತಿಪಟೂರಿನಲ್ಲಿ 400ಲೀ ಹಾಗೂ ಶಿರಾದಲ್ಲಿ 400 ಲೀಟರ್ ಆಮ್ಲಜನಕ ಘಟಕವನ್ನು ಮಾಡುತ್ತಿದ್ದೇವೆ, ತುಮಕೂರು ಜಿಲ್ಲಾ ಆಸ್ಪತ್ರೆಗೆ 1 ಸಾವಿರ ಲೀಟರ್ ನೀಡಲಾಗಿದೆ, ಖಾಸಗಿಯವರ ನೆರವಿನೊಂದಿಗೆ ಕೊರಟಗೆರೆ, ತುರುವೇಕೆರೆ, ಕುಣಿಗಲ್ ನಲ್ಲಿ ಆಮ್ಲಜನಕ ಘಟಕ ಬರುತ್ತಿದೆ ಎಂದರಲ್ಲದೆ, ಪಾವಗಡ ತಾಲ್ಲೂಕಿನಲ್ಲಿ ಮೊದಲೇ 100 ಲೀ ಸಾಮರ್ಥ್ಯದ ಘಟಕವಿತ್ತು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಪಂ ಸಿಇಓ ವಿದ್ಯಾಕುಮಾರಿ, ಡಿಹೆಚ್ ಓ ನಾಗೇಂದ್ರಪ್ಪ, ಡಿವೈಎಸ್ಪಿ ಚಂದನ್ ಕುಮಾರ್, ಉಪವಿಭಾಗಾಧಿಕಾರಿ ದಿಗ್ವಜಯ್ ಸಿಂಗ್ ಬೋಡ್ಕೆ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್, ತಾಲ್ಲೂಕು…
ತುಮಕೂರು : ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ರೋಗಿಗಳಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದೆ. ರೋಗಿಯ ಶ್ವಾಸಕೋಶಕ್ಕೆ ವೈರಾಣು ದಾಳಿಮಾಡಿ ಉಸಿರಾಟದ ಗಾಳಿಯಲ್ಲಿರುವ ಆಕ್ಸಿಜನ್ ಹೀರಿ ಕೊಳ್ಳುವ ಶಕ್ತಿಯನ್ನು ಕುಂದಿಸುತ್ತದೆ. ಇದೇ ಕಾರಣಕ್ಕೆ ಅತೀ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಇತಂಹ ರೋಗಿಗಳಿಗೆ ಕೃತಕ ಆ್ಯಕ್ಸಿಜನ್ನ್ನು ಒದಗಿಸುವುದರಿಂದ ಅದೆಷ್ಟೊ ಪ್ರಾಣಗಳನ್ನು ಉಳಿಸಬಹುದಾಗಿದೆ. ಇರದಲ್ಲೂ ಎರಡು ಪ್ರಕಾರದ ಕೃತಕ ಆ್ಯಕ್ಸಿಜನ್ ನ್ನು ರೋಗಿಗಳಿಗೆ ನೀಡಬಹುದು. ಒಂದು ಮೆಡಿಕಲ್ ಆ್ಯಕ್ಸಿಜನ್ ಸಿಲಿಂಡರ್ಗಳ ಮುಖಾಂತರ ರೋಗಿಗಳಿಗೆ ಒದಗಿಸುವುದು. ಇನ್ನೊಂದು ಆ್ಯಕ್ಸಿಜನ್ ಕಾಂಟೈಟ್ರೆಟರ್, ಇವುಗಳನ್ನು ತುಂಬಾ ಸುಲಭವಾಗಿ ರೋಗಿಗಳು ಇರುವ ವಾರ್ಡ್, ಮನೆ ಮುಂತಾದ ಕಡೆಗಳಲ್ಲಿ ಬಳಸಬಹುದಾಗಿದೆ. ಇವುಗಳು ಕೃತಕ ಆಮ್ಲಜನಕವನ್ನು ಪೂರೈಸಿ ರೋಗಿಯು ಚಿಕಿತ್ಸೆಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಮೆಡಿಕಲ್ ಆ್ಯಕ್ಸಿಜನ್ ಪೂರೈಕೆ ತುಂಬಾ ಸಹಾಯಕಾರಿಯಾಗಿದೆ ಇಂತಹ ಸಂಜೀವಿನಿ ಆ್ಯಕ್ಸಿಜನ್ ಕಾಂಟೈಟ್ರೆಟರ್ಗಳನ್ನು ರೋಗಿಗಳು ಸದುಪಯೋಗಕ್ಕಾಗಿ ಡೋನೆಟ್ ಮಾಡಿರುವ ರೋಟರಿ ಬೆಂಗಳೂರು ಪಶ್ಚಿಮ ಕೆಲಸ ಮಾಡುತ್ತಿರುವುದು ನಿಜಕ್ಕೂ…
ಚಿಕ್ಕನಾಯಕನಹಳ್ಳಿ: ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಇತರೆ ಭಾಗಕ್ಕೆ ಹಾಗೂ ತಿಪಟೂರು ತಾಲ್ಲೂಕಿನ ಹಾಲ್ಕುರ್ಕೆ ಭಾಗದ ಹೇಮಾವತಿ ನಾಲಾ ಕಾಮಗಾರಿ ಜೂನ್ 30 ರಂದು ನಿರ್ಧಾರವಾಗಲಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು. ಅವರು ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಲಸಿಕಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮದ ನಂತರ ವರದಿಗಾರರ ಪ್ರಶ್ನೆಗೆ ಉತ್ತರಿಸಿ ಚಿಕ್ಕನಾಯಕನಹಳ್ಳಿ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಬೋರನಕಣಿವೆಯವರೆಗೆ ತಿಪಟೂರು ತಾಲ್ಲೂಕಿನ ಹಾಲ್ಕುರ್ಕೆ ಮಾರ್ಗದ ಹೇಮಾವತಿ ನಾಲಾ ಕಾಮಗಾರಿಗಳು ಸ್ಥಗಿತಗೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿ ಹಿಂದಿನ ಗುತ್ತಿಗೆದಾರರು ನ್ಯಾಯಾಲಯಕ್ಕೆ ಹೋಗಿ, ಆದೇಶ ತಂದ ಕಾರಣ ಈ ಭಾಗದ ಎಲ್ಲಾ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಇದಕ್ಕೂ ಮುನ್ನ ಈ ಹಿಂದೆ ಅವರ ಮನವೊಲಿಸಿ ಅವರೊಂದಿಗೆ ಕರಾರು ಮಾಡಿಕೊಂಡು ಶೆಟ್ಟಿಕೆರೆ ಭಾಗಕ್ಕೆ ನೀರು ಹರಿಸಿದ್ದೆವು. ಈಗ ಅದು ಕ್ಲೋಸ್ ಆಗಿದೆ. ಈಗ ಬಾಕಿಯಿರುವ ಕಾಮಗಾರಿಗಳನ್ನು ಮುಂದುವರೆಸಲು ಹೊಸದಾಗಿ 98 ಕೋಟಿ ರೂ.ಗಳ ಯೋಜನೆಯ ರೂಪುರೇಷೆಯನ್ನು ಸಿದ್ದಪಡಿಸಿ…
ತುಮಕೂರು : ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ ಪಿಸಿಗಳ ವಿತರಣೆ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಕರೆ ನೀಡಿದರು. ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ವ ಮಾನವ ಸಭಾಂಗಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಉಚಿತ ಟ್ಯಾಬ್ಲೆಟ್ ಪಿಸಿಗಳ ವಿತರಣೆ ಮತ್ತು ಐಸಿಟಿ ಯುಕ್ತ ಸ್ಮಾರ್ಟ್ ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಹಾಗೂ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಟ್ಯಾಬ್ಲೆಟ್ ವಿತರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಟ್ಯಾಬ್ಲೆಟ್ ಅನ್ನು ಶಿಕ್ಷಣಕ್ಕೆ ಮಾತ್ರ ಉಪಯೋಗಿಸಬೇಕೇ ಹೊರತು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು. ಶಿಕ್ಷಣವು ಜವಾಬ್ದಾರರನ್ನಾಗಿ, ಶಕ್ತಿಯುತರನ್ನಾಗಿ ಮಾಡುತ್ತದೆ. ಈ ದಿಕ್ಕಿನಲ್ಲಿ ಮಕ್ಕಳು ಬೆಳೆಯಬೇಕು. ಶ್ರಮಪಡಬೇಕು. ಸಾಧನೆಗೆ…
ತುಮಕೂರು : ದೇಶದ ಜನರ ಮೇಲೆ 1975ರ ಜೂನ್ 25 ರಂದು ತುರ್ತು ಪರಿಸ್ಥಿತಿ ಹೇರಿದ ಶ್ರೀಮತಿ ಇಂದಿರಾಗಾಂಧಿ ಅವರ ಪ್ರಜಾಪ್ರಭುತ್ವ ನೀತಿಯನ್ನು ವಿರೋಧಿಸಿ 2021ರ ಜೂನ್ 25 ರಂದು ಬಿಜೆಪಿ ರಾಷ್ಟ್ರದಾದ್ಯಂತ ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶಗೌಡ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನ್ಯಾಯಾಲಯದಿಂದ ತಮ್ಮ ವಿರುದ್ದ ತೀರ್ಪು ಬಂತು ಎಂಬ ಕಾರಣವನ್ನು ಮುಂದಿಟ್ಟುಕೊಂಡು ಪ್ರಜಾಪ್ರಭುತ್ವದಲ್ಲಿ ಪ್ರಧಾನಮಂತ್ರಿಯೇ ಸುಪ್ರಿಂ ಎಂಬ ಆಹಂ ನಿಂದ 1975ರ ಜೂನ್ 25 ರಂದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ಅಭಿವ್ಯಕ್ತಿ ಸ್ವಾತಂತ್ರದ ಜೊತೆಗೆ, ಎಲ್ಲ ರೀತಿಯ ಸ್ವಾತಂತ್ರಕ್ಕೂ ಧಕ್ಕೆ ತರುವ ಕೆಲಸವನ್ನು ಅಂದು ಕಾಂಗ್ರೆಸ್ ಮಾಡಿತ್ತು. ಇದರ ವಿರುದ್ದ ಜನಸಂಘ ಸೇರಿದಂತೆ ಅನೇಕ ದೇಶ ಪ್ರೇಮಿ ಸಂಘಟನೆಗಳ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿ, ಲಕ್ಷಾಂತರ ಜನರನ್ನು ಜೈಲಿಗೆ ಕಳುಹಿಸಲಾಯಿತು. ಹಾಗಾಗಿ ಇಂತಹ ಕರಾಳ ದಿನದ ನೆನಪಿಗಾಗಿ ಜೂನ್…











