Author: News Desk Benkiyabale

ಕೊರಟಗೆರೆ: ಮಹಿಳೆಯರ ಸಂಪೂರ್ಣ ಸಬಲೀಕರಣವಾಗಿ ಆಕೆ ಎಲ್ಲಾ ಸಮಯದಲ್ಲೂ ಸುರಕ್ಷಿತಳಾದಾಗ ಮಾತ್ರ ವಿಶ್ವಮಹಿಳಾ ದಿನಾಚರಣೆಗೆ ಪರಿ ಪೂರ್ಣ ಅರ್ಥ ಬರುತ್ತದೆ ಎಂದು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಅಂಬಿಕಾ ತಿಳಿಸಿದರು ಅವರು ತಾಲೂಕಿನ ಎಲೆರಾಂಪುರ ಗ್ರಾಮದ ಶ್ರೀ ರೇಣುಕೇಶ್ವರ ಸಮುದಾಯದಲ್ಲಿ ನಡೆದ “ಎಲ್ & ಟಿ ಫೈನಾನ್ಸ್, ಆಕ್ಸಸ್‌ಲೈವ್‌ಲಿಹುಡ್ಸ್” ರವರ ಸಹಯೋಗದಲ್ಲಿ ನಡೆದ ಅಂತರ ರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ದೇಶ ಅಭಿವೃದ್ದಿ ಹೊಂದಬೇಕಾದರೆ ಮಹಿಳೆಯರಿಗೆ ಎಲ್ಲಾ ರಂಗದಲ್ಲೂ ಸಮಾನ ಅವಕಾಶ ನೀಡಬೇಕು, ಮಹಿಳೆಯರು ತಾಯಂದಿರಾಗಿ ಮಕ್ಕಳಿಗೆ ಗುಣಮಟ್ಟದ ನೈತಿಕ ಶಿಕ್ಷಣ ನೀಡಬೇಕು, ವಿಶೇಷವಾಗಿ ಪ್ರತಿ ಕುಟುಂಬದಲ್ಲಿ ತಾಯಂದಿರು ಹೆಣ್ಣು ಮಕ್ಕಳ ಬಾಲ್ಯ ಮತ್ತು ಪ್ರೌಡಾ ಬೆಳವಣಿಗೆಯಲ್ಲಿ ಸಂಪೂರ್ಣ ಗಮನ ಹರಿಸಬೇಕು, ಈ ಸಮಯದಲ್ಲಿ ಕೆಲವು ಹೆಣ್ಣುಮಕ್ಕಳು ಲೈಂಗಿಕ ದೌರ್ಜನ್ಯಕ್ಕೂ ಒಳಗಾಗುತ್ತಿವೆ, ಇಂತಹ ಸಂದರ್ಭದಲ್ಲಿ ಮಕ್ಕಳ ಮನಸ್ಥಿತಿ ಕುಗ್ಗಿರುತ್ತದೆ ತಾಯಂದಿರು ಇದರ ಬಗ್ಗೆ ಸೂಕ್ಷö್ಮವಾಗಿ ಅರಿತು ಮಕ್ಕಳ ಜೊತೆ ಇರಬೇಕು, ಪ್ರೌಡಾವಸ್ಥೆಯಲ್ಲಿ ಹೆಣ್ಣು ಮಕ್ಕಳು ಕಾಮುಕರ ಮತ್ತು ಮೋಸಗಾರರ…

Read More

ತುಮಕೂರು: ಒಳಮೀಸಲಾತಿಗಾಗಿ ಒತ್ತಾಯಿಸಿ ದಸಂಸ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ ಸಮಾದಿ ಸ್ಥಳ ಹರಿಹರದಿಂದ ಮಾರ್ಚ್ ೦೫ ರಂದು ಹೊರಟಿರುವ ಕ್ರಾಂತಿಕಾರಿ ಪಾದಯಾತ್ರೆ ಮಾರ್ಚ್ ೧೬ರ ಭಾನುವಾರದಂದು ತುಮಕೂರು ನಗರ ಪ್ರವೇಶಿಸಲಿದ್ದು ಪಾದಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿ, ಬೀಳ್ಕೊಡುವ ಸಂಬAಧ ಇಂದು ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮುದಾಯದ ಮುಖಂಡರ ಪೂರ್ವಭಾವಿ ಸಭೆ ನಡೆಯಿತು. ಸುಮಾರು ೩೦ ವರ್ಷಗಳ ನಿರಂತರ ಹೋರಾ ಟದ ಫಲವಾಗಿ ೨೦೨೪ರ ಆಗಸ್ಟ್ ೦೧ ರಂದು ಸುಪ್ರಿಂಕೋರ್ಟಿನ ೭ ನ್ಯಾಯಾಧೀಶರ ಪೀಠ ಒಳ ಮೀಸಲಾತಿ ಜಾರಿ ಅಯಾಯ ರಾಜ್ಯ ಸರಕಾರಗಳ ಮಾಡಬಹುದು ಎಂಬ ತೀರ್ಪು ನೀಡಿದೆ. ಎಂಪೇರಿಕಲ್ ಡಾಟಾ ಹೆಸರಿನಲ್ಲಿ ಸರಕಾರಗಳು ವಿಳಂಭ ಧೋರಣೆ ಅನುಸರಿಸುತ್ತಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಎರಡು ವರ್ಷ ಕಳೆದರೂ ಮೀನಾಮೇಷ ಎಣಿಸುತ್ತಿದ್ದು, ಸರಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಪ್ರೊ.ಹರಿರಾಮ್ ಮತ್ತು ಭಾಸ್ಕರ್ ಪ್ರಸಾದ್ ನೇತೃತ್ವದ ಸುಮಾರು ೪೦ ಜನರ ತಂಡ…

Read More

ತುಮಕೂರು: ಜಿಲ್ಲೆಯಲ್ಲಿ ಮಾರ್ಚ್ ೨೧ ರಿಂದ ಏಪ್ರಿಲ್ ೪ರವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ತರಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ನಗರದ ಎಂಪ್ರೆಸ್ ಪದವಿಪೂರ್ವ ಕಾಲೇಜಿ ನ ಆಡಿಟೋರಿಯಂನಲ್ಲಿ ಮಂಗಳವಾರ ಏರ್ಪ ಡಿಸಲಾಗಿದ್ದ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆ-೧ರ ಸಂಬAಧ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು ೧೨೯ ಪರೀಕ್ಷಾ ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯಲಿದ್ದು, ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ ಪ್ರತಿ ವಿದ್ಯಾರ್ಥಿಗೂ ವಿಶ್ವಾಸದಿಂದ ಪರೀಕ್ಷೆ ಬರೆಯುವ ವಾತಾವರಣ ಹಾಗೂ ಏಕ ರೀತಿಯಾದ ಗುಣಮ ಟ್ಟದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು. ಪರೀಕ್ಷಾ ಕಾರ್ಯವು ಅತ್ಯಂತ ಸೂಕ್ಷö್ಮ ಕಾರ್ಯ ವಾಗಿದ್ದು, ಯಾವುದೇ ಸಮಯದಲ್ಲಿ ತೊಂದರೆಗಳು ಸಂಭವಿಸಿದಲ್ಲಿ ನೇರವಾಗಿ ಜಿಲ್ಲಾಧಿಕಾರಿಗಳ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ತಿಳಿಸಿದರು. ಜಿಲ್ಲಾ…

Read More

ಗುಬ್ಬಿ: ಹನಿಟ್ರ‍್ಯಾಪ್‌ಗೆ ಸಿಲುಕಿ ಲಲನೆಗೆ ಲಕ್ಷಾಂತರ ರೂಗಳ ದಂಡ ತೆತ್ತ ಗುಬ್ಬಿ ಪಟ್ಟಣ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಜಿ.ಎನ್ ಅಣ್ಣಪ್ಪಸ್ವಾಮಿ ನಂತರದ ದಿನಗಳಲ್ಲಿ ಬರೋಬ್ಬರಿ ೨೦ ಲಕ್ಷ ರೂಗಳ ಹಣದ ಬೇಡಿಕೆಗೆ ಹೆದರಿ ಗುಬ್ಬಿ ಪೊಲೀಸರ ಮೊರೆಹೋಗಿ ದೂರು ದಾಖಲಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಟ್ಟಣದ ಪಟ್ಟಣ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಜೊತೆಗೆ ಹಾಲಿ ಸದಸ್ಯ ಜಿ.ಎನ್ ಅಣ್ಣಪ್ಪ ಸ್ವಾಮಿ ಲಲನೆಯರ ಪ್ರೇಮಪಾಶದ ಮೋಸದ ಬಲೆಗೆ ಬಿದ್ದು ಲಕ್ಷಾಂತರ ಹಣ ಕಳೆದುಕೊಂಡ ವ್ಯಕ್ತಿ. ಫೇಸ್ ಬುಕ್ ನಲ್ಲಿ ಬಂದ ಫ್ರೆಂಡ್ ರಿಕ್ವೆಸ್ಟ್ ಗೆ ಒಪ್ಪಿಗೆ ನೀಡಿ ನಂತರ ಹಾಯ್, ಬಾಯ್, ಗುಡ್ ಮಾರ್ನಿಂಗ್, ಅಂತೆಲ್ಲ ಬೆಳೆದ ಸಲುಗೆ ಮಿತಿ ಮೀರಿ ವಿಡಿಯೋ ಕಾಲಿಂಗ್ ಮಾಡಿ ಮಾತನಾಡುವ ಘಟ್ಟ ತಲುಪಿದ್ದು ಇದನ್ನೇ ಬಂಡವಾಳ ಮಾಡಿಕೊಂಡ ಮಹಿಳೆ ಹಲವು ಕಡ ಬಲವಂತವಾಗಿ ಕರೆಸಿಕೊಂಡು ಮದುವೆಯಾಗುವಂತೆ ಒತ್ತಾಯಿಸುತ್ತಿದಳು ಎನ್ನಲಾಗಿದೆ. ನಾನು ನಿಮ್ಮನ್ನ ಪ್ರೀತಿಸುತ್ತಿದ್ದೇನೆ ಮದುವೆ ಮಾಡಿಕೊಳ್ಳಿ ಎಂದು ಒತ್ತಡ ಹೇರುತ್ತಿದ್ದು ಇದಕ್ಕೆ ಒಪ್ಪದಿದ್ದ ಕಾರಣ…

Read More

ತುಮಕೂರು: ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶದ ಮೂಲಕ ವಿಶ್ವದಲ್ಲಿ ಶಾಂತಿ, ನೆಮ್ಮದಿ ಬಯಸಿದ್ದ ಜಗದ್ಗುರು ಶ್ರೀರೇಣುಕಾಚಾರ್ಯರು ವಿಶ್ವಕಂಡ ಮೇರು ವ್ಯಕ್ತಿತ್ವದ ದಾರ್ಶಾನಿಕರು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇ ತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ತುಮಕೂರು ಜಿಲ್ಲಾ ಜಿಲ್ಲೆಯ ವೀರಶೈವ, ಲಿಂಗಾಯಿತ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಧರ್ಮದ ಸಂಸ್ಥಾಪಕರಾದ ಜಗದ್ಗುರು ಶ್ರೀರೇಣುಕಾ ಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಮಾನವ ಧರ್ಮಕ್ಕೆ, ಜಯವಾಗಲಿ, ಧರ್ಮದಿಂದಲೇ ವಿಶ್ವ ಶಾಂತಿ ಎಂಬ ಉಕ್ತಿಗಳು ಸೇರಿದಂತೆ ೧೦ಕ್ಕು ಹೆಚ್ಚು ತತ್ವಗಳನ್ನು ಜನರಿಗೆ ಭೋಧಿಸುವ ಮೂಲಕ ಜನರಲ್ಲಿ ಶಾಂತಿ,ನೆಮ್ಮದಿ ನೆಲೆಸುವಂತೆ ಮಾಡಿದ ಕೀರ್ತಿ ಶ್ರೀಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲಬೇಕು ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಪ್ರಾಚೀನ ಧರ್ಮ ಪ್ರವರ್ತಕರಲ್ಲಿ ಒಬ್ಬರಾದ ಶ್ರೀಜಗದ್ಗುರು…

Read More

ತುಮಕೂರು : ಕುಡಿಯುವ ನೀರು ಹಾಗೂ ಜಾನುವಾರು ಮೇವಿನ ಸಮಸ್ಯೆಗಳಿಗೆ ಸಂಬAಧಿಸಿದ ಸಾರ್ವಜನಿಕ ದೂರುಗಳನ್ನು ಸಲ್ಲಿಸಲು ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ಸಂಜೆ ಕುಡಿಯುವ ನೀರು ಹಾಗೂ ಮೇವಿನ ಪರಿಸ್ಥಿತಿ ಕುರಿತಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಸಹಾಯವಾಣಿ ಕೇಂದ್ರವು ದಿನದ ೨೪ ಗಂಟೆಗಳ ಕಾಲವೂ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆಯನ್ನು ತ್ವರಿತವಾಗಿ ವಿಶ್ಲೇಷಿಸಿ, ಅಗತ್ಯವಿದ್ದಾಗ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು. ಸಹಾಯವಾಣಿ ಕೇಂದ್ರದಲ್ಲಿ ದಾಖಲಾಗುವ ಸಾರ್ವಜನಿಕರ ಸಮಸ್ಯೆ ಹಾಗೂ ಪರಿಹಾರ ಕ್ರಮದ ವರದಿಯನ್ನು ಪ್ರತಿದಿನ ತಮಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು. ಕುಡಿಯುವ ನೀರಿನ ಸಮಸ್ಯೆ ತಲೆದೋರಿದಾಗ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಜನ-ಜಾನುವಾರುಗಳಿಗೆ ನೀರಿನ ಪೂರೈಕೆ, ಶುದ್ಧೀಕರಣ ಮತ್ತು ಲಭ್ಯತೆ ಬಗ್ಗೆ ಮುಂದಿನ ಸಭೆಯಲ್ಲಿ ಮಾಹಿತಿ ನೀಡಬೇಕು ಸೂಚನೆ ನೀಡಿದರು. ಕೊಳವೆ ಬಾವಿ…

Read More

ಹುಳಿಯಾರು: ಬಡವರಿಗೆ ಗಂಭೀರ ಕಾಯಿಲೆಗಳಾದಾಗ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಪುನಃ ಯಶಸ್ವಿನಿ ಯೋಜನೆ ಜಾರಿಗೆ ತಂದಿದೆ. ಆದರೆ ಜನರಿಗೆ ಅನುಕೂಲವಾಗುವ ಈ ಯೋಜನೆಯ ನೊಂದಣಿಗೆ ಕ್ಷಿಣಿಸಿದೆ. ಸಿಬ್ಬಂದಿಗಳ ಮೂಲಕ ಅರಿವು ಮೂಡಿಸಿ ಯಶಸ್ವಿನಿ ನೊಂದಣಿ ಪ್ರಗತಿ ಶೇ.೧೦೦ ರಷ್ಟು ಸಾಧಿಸುವಂತೆ ಹುಳಿಯಾರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಡ್ಡಿಪುಟ್ಟಣ್ಣ ಅವರು ಸಿಇಒ ಶಿವಣ್ಣ ಅವರಿಗೆ ಸೂಚನೆ ನೀಡಿದರು. ಹುಳಿಯಾರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೋಮವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶೇರುದಾರರಾಗಿರುವ ಎಸ್‌ಸಿಎಸ್‌ಟಿ ಸಮುದಾಯದವರಿಗೆ ಉಚಿತ ವಾಗಿ ಯಶಸ್ವಿನಿ ಯೋಜನೆಗೆ ನೊಂದಾ ಣಿ ಮಾಡಬಹುದಾಗಿದೆ. ಆದರೆ ಅರಿವಿನ ಕೊರತೆ ಯಿಂದಾಗಿ ಇದೂವರೆವಿಗೂ ಬಹಳಷ್ಟು ಮಂದಿ ನೊಂದಣಿ ಮಾಡಿಸಿಲ್ಲ ಎಂದು ತಿಳಿಸಿದರು. ೧ ಗ್ರಾಂ ಒಡವೆಗೆ ೪೬೦೦ ರೂನಂತೆ ಶೇ.೧ ರ ಬಡ್ಡಿ ದರದಲ್ಲಿ ಇದುವರೆವಿಗೂ ಒಡವೆ ಸಾಲ ಕೊಡಲಾಗುತ್ತಿತ್ತು. ಈಗ ೧ ಗ್ರಾಂ ಒಡವೆ ಬೆಲೆ…

Read More

ಹುಳಿಯಾರು: ಹುಳಿಯಾರು ಹೋಬಳಿಯ ಬೋರನಕಣಿವೆ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡಸುತ್ತಿದ್ದ ಹಸಿರು ಶಾಲಾ ಕಾರ್ಯಕ್ರಮ ಶನಿವಾರ ಸಂಪನ್ನಗೊAಡಿತು. ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರ ನಡೆದ ಚಟುವಟಿಕೆಯಾಧಾರಿತ ಕಾರ್ಯಕ್ರಮ ಮಕ್ಕಳಲ್ಲಿ ಪರಿಸರ ಪ್ರಜ್ಞೆಮೂಡಿಸುವಲ್ಲಿ ಯಶ ಕಂಡಿದೆ. ಮಾಸ್ ಟ್ರಸ್ಟ್ ಅಧ್ಯಕ್ಷೆ ಎನ್,ಇಂದಿರಮ್ಮ ಮಾತನಾಡಿ, ಇದೊಂದು ವಿಶಿಷ್ಟ ಕಾರ್ಯಕ್ರಮ. ಇಂತಹ ಕಾರ್ಯಕ್ರಮ ಯಾವ ಶಾಲೆಯಲ್ಲೂ ನಡೆದಿರಲು ಸಾಧ್ಯವಿಲ್ಲ. ನಾಲ್ಕು ಜನ ಸಂಪನ್ಮೂಲ ವ್ಯಕ್ತಿಗಳ ಸ್ವಪ್ರೇರಣೆಯಿಂದ ಈ ಕಾರ್ಯಕ್ರಮ ನಡೆಸಲಾಯಿತು. ಪಠ್ಯಾದಾರಿತ ಮತ್ತು ಜೀವನ್ಮಖಿ ಆಶಯ ಹೊಂದಿದ್ದ ಕಾರ್ಯಕ್ರಮ ಮಕ್ಕಳಲ್ಲಿ ಪಠ್ಯ ವಿಷಯ ಆಸಕ್ತಿ ಬೆಳೆಸುವುದಕ್ಕಿಂತ ಪರಿಸರ ಪ್ರೀತಿಯನ್ನು ಹೆಚ್ಚು ಬೆಳೆಸಿದೆ ಎಂದು ಹೇಳಿದರು. ವಿಶ್ರಾಂತ ಪ್ರಾಂಶುಪಾಲರಾದ ಯು.ಪಿ. ಉಮಾದೇವಿ ಮಾತನಾಡಿ ಪರಿಸರ ಪ್ರೀತಿಯನ್ನು ಬೆಳಸಿಕೊಂಡಿರುವ ನೀವು ತರಗತಿಯಲ್ಲಿ ಸಕ್ರಿಯವಾಗಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ನಮಗೆ ಖುಷಿ ತಂದಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಮಾಸ್ ಟ್ರಸ್ಟ್ ಕಾರ್ಯದರ್ಶಿ ರಾಮಕೃಷ್ಣಪ್ಪ ಮಾತನಾಡಿ ನಾವೆಲ್ಲರೂ ಪಕ್ಷಿ ತಜ್ಞ ಸಲಿಂ ಆಲಿ ಯವರ ಹೇಳಿಕೆ ಮನುಷ್ಯನಿಲ್ಲದೆ ಪ್ರಾಣಿ…

Read More

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕು ವಜ್ಜನಕುರಿಕೆ ಗ್ರಾಮ ಪಂಚಾಯತಿ ಮೋರಗಾನಹಳ್ಳಿ ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಬಳಿ ಗ್ರಾಮಸ್ಥರು ಅಳಲು ತೋಡಿಕೊಂಡರು. ಮೋರಗಾನಹಳ್ಳಿ ಗ್ರಾಮದಲ್ಲಿ ಕಳೆದ ಕೆಲವು ತಿಂಗಳುಗಳಿAದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಗ್ರಾಮಸ್ಥರು ಅಹವಾಲು ನೀಡಿದ್ದರು. ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಕುಡಿಯುವ ನೀರಿನ ಸಮಸ್ಯೆಗೆ ತುರ್ತಾಗಿ ಪರಿಹಾರ ಒದಗಿಸಬೇಕೆಂದು ತಹಶೀಲ್ದಾರ್ ಮಂಜುನಾಥ್ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಾಂತರಾಜು ಅವರಿಗೆ ಸೂಚನೆ ನೀಡಿದರು. ನಂತರ ಜಾನುವಾರುಗಳ ಮೇವಿನ ಬಗ್ಗೆ ಆಲಿಸಿದ ಅವರು ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗದAತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರಲ್ಲದೆ ಜನರು ವಾಸಿಸುವ ಸ್ಥಳದ ಸುತ್ತಮುತ್ತ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಿಬ ರಲು…

Read More

ತುಮಕೂರು: ಸುಮಾರು ೪ ಲಕ್ಷ ರೂಪಾಯಿ ಮೌಲ್ಯದ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಆಟೋ ಚಾಲಕರೊಬ್ಬರು ವಾರಸುದಾರರಿಗೆ ಹಿಂತಿ ರುಗಿಸಿ ಮಾನವೀಯತೆ ಮೆರೆದಿದ್ದಾರೆ. ನಗರದ ಹನುಮಂತಪುರ ನಿವಾಸಿ ರವಿಕುಮಾರ್ ಎಂಬುವರೇ ವಾರಸುದಾರರಿಗೆ ಚಿನ್ನದ ಒಡವೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ. ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಗಾಯತ್ರಿ ಎಂಬುವರು ೪ ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಒಡವೆಗಳಿದ್ದ ಬ್ಯಾಗ್‌ನ್ನು ಬಿಟ್ಟು ಹೋಗಿದ್ದರು. ಈ ಚಿನ್ನದ ಒಡವೆಗಳಿದ್ದ ಬ್ಯಾಗ್‌ನ್ನು ಆಟೋ ಚಾಲಕ ರವಿಕುಮಾರ್ ಅವರು ಗಾಯತ್ರಿರವರಿಗೆ ವಾಪಸ್ ನೀಡಿದ್ದು, ಆಟೋ ಚಾಲಕ ರವಿಕುಮಾರ್‌ರವರಿಗೆ ಗಾಯತ್ರಿ ರವರು ಧನ್ಯವಾದ ತಿಳಿಸಿದ್ದಾರೆ. ಗಾಯತ್ರಿ ಅವರು ಕುಂದೂರು ಗ್ರಾಮದಲ್ಲಿ ತಮ್ಮ ಸಂಬAಧಿಕರೊಬ್ಬರ ಮನೆಗೆ ಸೀಮಂತ ಕಾರ್ಯಕ್ರಮಕ್ಕೆ ಬಂದಿದ್ದರು. ಸೀಮಂತ ಮುಗಿದ ಮೇಲೆ ಮೂವರು ಆಟೋದಲ್ಲಿ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಆಟೋದಿಂದ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಮಹಿಳೆ ಚಿನ್ನದ ಆಭರಣಗಳು ಇರುವ ಬ್ಯಾಗ್ ಮರೆತು ಹೋಗಿದ್ದರು. ಬಳಿಕ ಸ್ವಲ್ಪ ದೂರ ಹೋದ ಮೇಲೆ ನೆನಪು ಮಾಡಿಕೊಂಡು…

Read More