ತುರುವೇಕೆರೆ: ಯೋಗ ಕೇವಲ ದೈಹಿಕ ವ್ಯಾಯಾಮ ಮಾತ್ರವಲ್ಲ, ಇದು ಆಧ್ಯಾತ್ಮ ಮತ್ತು ಮನೋದೈಹಿ ಆರೋಗ್ಯ ವಿಜ್ಞಾನವಾಗಿದೆ ಮನೋ ದೈಹಿಕ ಆರೋಗ್ಯ ವೃದ್ಧಿಗೆ ಯೋಗ ಸಹಕಾರಿ ಎಂದು ಯೋಗ ಗುರು ಲಕ್ಷ್ಮಣ್ ಜೀ ಅಭಿಪ್ರಾಯಪಟ್ಟರು. ತಾಲ್ಲೂಕಿನ ದಂಡಿನಶಿವರ ಹೋಬಳಿ ಸಾರಿಗೇಹಳ್ಳಿ ಗ್ರಾಮದಲ್ಲಿ ನಡೆದ ಯೋಗ ಮತ್ತು ದೇಶಿ ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ನಾಡಿನ ಖ್ಯಾತ ಯೋಗ ಗುರು ಲಕ್ಷ್ಮಣ್ ಜೀ ಯವರು ಇಂದಿನ ನಮ್ಮ ಬಹುತೇಕ ಸಮಸ್ಯೆಗಳಿಗೆ ಪ್ರಜ್ಞಾ ಅಪರಾಧಗಳೇ ಕಾರಣವಾಗಿವೆ. ತಿಳಿದು ತಿಳಿದು ನಾವು ಪದೇ ಪದೇ ಅನೇಕ ತಪ್ಪುಗಳನ್ನು ಮಾಡುತ್ತಿದ್ದೇವೆ ಆ ಧುನಿಕ ಯುಗದಲ್ಲಿ ಜನರು ಅತಿಯಾಗಿ ಯಂತ್ರ ಮತ್ತು ತಂತ್ರಜ್ಞಾನದ ಮೇಲೆ ಅವಲಂಭಿತರಾಗಿದ್ದು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳ ನಡುವೆಯೂ ಹೆಚ್ಚು ಹೆಚ್ಚು ಜನರು ಮನೋದೈಹಿಕ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದು ವಿಪರ್ಯಾಸ. ನಮ್ಮ ಆಹಾರ ಪದ್ದತಿ, ಜೀವನ ಶೈಲಿ ಹಾಗೂ ಆಲೋಚನಾ ರೀತಿ ನೀತಿಗಳಲ್ಲಾಗಿರುವ ಅಮೂಲಾಗ್ರ ಬದಲಾವಣೆಗಳನ್ನು ಗಮನಿಸಿದರೆ ನಿತ್ಯದಲ್ಲಿ ನೂರಾರು ತಪ್ಪುಗಳಾಗುತ್ತಿವೆ. ನಮ್ಮ…
Author: News Desk Benkiyabale
ಚಿಕ್ಕನಾಯಕನಹಳ್ಳಿ: ಶಿಕ್ಷಣದಿಂದ ಸಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾದ್ಯ ಅದ್ದರಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕು ಅದ್ಯತೆ ನೀಡಿ ಪರಿಶ್ರಮದ ಅದ್ಯಯನ ವ್ಯಕ್ತಿಯನ್ನು ನಿರ್ಮಿಸುತ್ತದೆ ಇಂತಹ ವ್ಯಕ್ತಿಗಳಿಂದ ಮಠ ಮಂದಿರಗಳ ಉತ್ತಮ ಸಮಾಜದ ನಿರ್ಮಣವಾಗುತ್ತದೆ ಎಂದು ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮಿ ತಿಳಿಸಿದರು. ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಅಜ್ಜೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬೀರಲಿಂಗೇಶ್ವರಸ್ವಾಮಿ ದೇವಾಲಯ ನಿರ್ಮಾಣದ ಶಿಲ್ಪಿಗಳಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡಿದ, ಅವರು ಶ್ರೀಮಠದಲ್ಲಿ ನಿತ್ಯ ದಾಸೋಹಕ್ಕಾಗಿ ಶಾಸಕರು ೨೪ ಲಕ್ಷ ರೂಪಾಯಿಗಳನ್ನು ನೀಡುವ ಮೂಲಕ ಭಕ್ತಿ ತೋರಿಸಿದ್ದು ಅದರಂತೆ ಮುಂದಿನ ತಿಂಗಳ ೮ ರಂದು ಮಠದಲ್ಲಿ ಕನಕ ದಾಸ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ಕಾರ್ಯಕ್ರಮಕ್ಕೆ ಸಮಾಜದ ಎಲ್ಲರೂ ಆಗಮಿಸುವಂತೆ ತಿಳಿಸಿದ ಅವರು ಈ ಗ್ರಾಮದ ಇಬ್ಬರು ಉಪ ವಿಭಾಗಾಧಿಕಾರಿಗಳು ಇದ್ದು ಅವರು ಮುಂದೆ ಇನ್ನು ಉನ್ನತ ಹುದ್ದೆಗಳಿಗೆ ಹೋಗುತ್ತಾರೆ ಅದಕ್ಕೆ ಕಾರಣ ಅವರ ಶ್ರಮದ ಅದ್ಯಯನ ಅದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಮೂಲಕ…
ತುಮಕೂರು/ನವದೆಹಲಿ: ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ತುಮಕೂರು ಲೋಕಸಭಾ ಸದಸ್ಯರು ಹಾಗೂ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣನವರ ನೇತೃತ್ವದಲ್ಲಿ ಕನ್ನಡನಾಡಿನ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ ೨೦೧ನೇ ವಿಜಯೋತ್ಸವ ಹಾಗೂ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ರಾಣಿ ಚೆನ್ನಮ್ಮನವರ ಪುತ್ಥಳಿಯನ್ನು ಸಂ¸ತ್ತಿನ ಆವರಣದಲ್ಲಿ ೨೦೦೭ರಲ್ಲಿ ಸ್ಥಾಪಿಸಲಾಗಿದೆ. ಕಳೆದ ವಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆಂಬಲ ಮತ್ತು ಲೋಕಸಭಾ ಅಧ್ಯಕ್ಷ ಶ್ರೀ ಒಂ ಬಿರ್ಲಾ ಅವರ ಸಹಕಾರದಿಂದ ೨೦೦ನೇ ರಾಣಿಚೆನ್ನಮ್ಮನವರ ವಿಜಯೋತ್ಸವ ಮತ್ತು ಜನ್ನದಿನೋತ್ಸವವನ್ನು ವಿಜ್ರಂಭಣೆಯಿAದ ಆಚರಿಸಲಾಗಿತ್ತು. ಅದೇ ರೀತಿ ಈ ವರ್ಷವೂ ಸಹ ರಾಣಿ ಚೆನ್ಮಮ್ಮನವರ ೨೦೧ನೇ ವಿಜಯೋತ್ಸವ ಮತ್ತು ಜನ್ಮದಿನೋತ್ಸವ ಆಚರಣೆಯನ್ನು ಸಂಸತ್ತಿನ ಅವರಣದ ಪ್ರೇರಣಾ ಸ್ಥಳದಲ್ಲಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ವಿ. ಸೊಮಣ್ಣ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕದ ಸಂಸ್ಕೃತಿ, ಈ ದೇಶಕ್ಕೆ ಕೊಡುಗೆ ನೀಡಿದ ಕನ್ನಡದ…
ತುಮಕೂರು: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ನೀನಾಸಂ ತಂಡ ನಾಟಕದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಾ ಬಂದಿದೆ ಎಂದು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಅಭಿಪ್ರಾಯಪಟ್ಟರು. ಅವರು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇ ತ್ರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಝೆನ್ ಟೀಮ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಎರಡು ದಿವಸಗಳ ಜಿಲ್ಲಾ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಾಮಾನ್ಯವಾಗಿ ತುಮಕೂರಿನಲ್ಲಿ ಕುರುಕ್ಷೇತ್ರ, ರಾಮಾಯಣ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಆದರೆ ನೀನಾಸಂ ಪ್ರಯೋಗಾತ್ಮಕ ನಾಟಕಗಳಿಗೆ ಹೆಸರು ವಾಸಿಯಾಗಿದೆ. ಸಂಭಾಷಣೆಗೆ ಹೆಚ್ಚು ಒತ್ತು ಕೊಡದೆ ಕ್ರಿಯೆಗೆ ಒತ್ತು ನೀಡುವ ನಾಟಕಗಳನ್ನು ನೀನಾಸಂ ಪ್ರದರ್ಶಿಸುತ್ತಾ ಬಂದಿದೆ ಎಂದರು. ಹಲವಾರು ದಶಕಗಳಿಂದ ನೀನಾಸಂ ಸದಭಿರುಚಿ ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶನ ಮಾಡುತ್ತಿದೆ. ಶಿಸ್ತು ಬದ್ಧ ತಂಡವಾದ ನೀನಾಸಂ ಹಲವಾರು ಜನಪ್ರಿಯ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿರು ವುದು ಖುಷಿಯ ಸಂಗತಿ ಎಂದರು. ನೀನಾಸ0 ಕೇವಲ ರಂಗ ಪ್ರದರ್ಶನಕ್ಕೆ ಸೀಮಿತವಾಗಿಲ್ಲ. ಬದಲಿಗೆ ಕಲಾ ಶಿಕ್ಷಣ…
ತುಮಕೂರು: ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಶೌರ್ಯದ ಸಂಕೇತ. ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಮೊದಲ ಮಹಿಳಾ ಯೋಧೆ ಎಂದು ತುಮಕೂರು ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಕನ್ನಡ ಭವನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮೊದಲ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಅವರ ಶೌರ್ಯ, ತ್ಯಾಗ ಮತ್ತು ದೇಶಪ್ರೇಮ ನಮ್ಮೆಲ್ಲರಿಗೂ ಪ್ರೇರಣೆಯ ದೀಪ. ದೇಶದ ಪ್ರತಿಯೊಬ್ಬ ಮಹಿಳೆಯಲ್ಲೂ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವ ಇದ್ದಾಳೆ ಎಂಬ ಶಕ್ತಿ ಅರಿವಾದಾಗ ಸಮಾಜ ಪರಿವರ್ತನೆ ಖಚಿತ ಎಂದು ಹೇಳಿದರು. ಕಿತ್ತೂರು ರಾಣಿ ಚೆನ್ನಮ್ಮ ಅವರು ಭಾರತದ ಸ್ವಾತಂತ್ರ‍್ಯ ಹೋರಾಟದ ಇತಿಹಾಸದಲ್ಲಿ ಅಜರಾಮರ. ಚೆನ್ನಮ್ಮ ಅವರ ಕಾಲದಲ್ಲಿ ಅನೇಕ ಸವಾಲುಗಳನ್ನು ಸ್ವೀಕರಿಸಿ, ಮಹಿಳೆಯರು…
ತುಮಕೂರು: ಪುಷ್ಕರ ಸೆಂಟರ್ ಫಾರ್ ಪರ್‌ಫಾರ್ಮಿಂಗ್ ಆರ್ಟ್ಸ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷರೂ ಹೆಸರಾಂತ ನೃತ್ಯ ಶಿಕ್ಷಕಿಯಾದ ಡಾ.ಕೆ.ಆರ್.ಸತ್ಯವತಿ ರಾಮನ್ ಅವರ ಭರತನಾಟ್ಯದ ಶಿಷ್ಯೆ ಕು.ವೃದ್ಧಿ ಕಾಮತ್ ಈ ತಿಂಗಳ ೨೪ರಂದು ರಂಗಪ್ರವೇಶ ಮಾಡಲಿದ್ದಾರೆ. ನೃತ್ಯಗುರು ಡಾ.ಸತ್ಯವತಿ ಅವರ ಮಾರ್ಗದರ್ಶನದಲ್ಲಿ ಶ್ರದ್ಧೆಯಿಂದ ನೃತ್ಯದಲ್ಲಿ ಪರಿಣತಿ ಪಡೆದು ತಮ್ಮ ಪ್ರತಿಭೆ ಪ್ರದರ್ಶನ ಮಾಡಲಿದ್ದಾರೆ. ಕೆ.ವಿ.ಕಾಮತ್ ಹಾಗೂ ಸುಚಿತ್ರಪ್ರಭು ಅವರ ಪುತ್ರಿ ವೃದ್ಧಿ ಕಾಮತ್ ಅವರು ತಮ್ಮ ೯ನೇ ವಯಸ್ಸಿನಲ್ಲಿ ಅಕ್ಕ ಸೃಷ್ಟಿ ಕಾಮತ್ ಜೊತೆಗೆ ಭರತ ನಾಟ್ಯ ಅಭ್ಯಾಸಕ್ಕಾಗಿ ನೃತ್ಯ ಶಿಕ್ಷಕಿ ಡಾ.ಸತ್ಯವತಿ ಕೆ.ಆರ್. ಅವರಲ್ಲಿ ಭರತ ನಾಟ್ಯ ಕಲಿಯಲು ಸೇರಿಕೊಂಡರು. ಶ್ರದ್ಧೆಯಿಂದ ಕಲಿತು ೨೦೧೪ರಲ್ಲಿ ನೃತ್ಯದಲ್ಲಿ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ೫ನೇ ರ‍್ಯಾಂಕ್ ಗಳಿಸಿದರು. ಡಾ.ಸತ್ಯವತಿಯವರ ಗರಡಿಯಲ್ಲಿ ಪಳಗಿ ನೃತ್ಯದ ಆಯಾಮಗಳನ್ನು ಸೂಕ್ಷö್ಮವಾಗಿ ಗ್ರಹಿಸಿ ಕಲಿತು ಅದನ್ನು ಅನೇಕ ವೇದಿಕೆಗಳಲ್ಲಿ ಪ್ರದರ್ಶಿಸಿ ಗಮನ ಸೆಳೆದರು. ಡಾ.ಸತ್ಯವತಿಯವರ ಪುಷ್ಕರ ಪ್ರದರ್ಶನ ಕಲೆಗಳ ಸಂಸ್ಥೆ ಹಾಗೂ ನೃತ್ಯ ಸಾಮ್ರಾಟ್ ಆರ್ಟ್ಸ್ ಅಕಾಡೆಮಿಯ…
ತುಮಕೂರು: ಇತಿಹಾಸ ಪ್ರಸಿದ್ದ ಗೂಳೂರು ಮಹಾ ಗಣಪತಿ ಮೂರ್ತಿಯನ್ನು ಬಲಿಪಾಢ್ಯಮಿಯಂದು ೧೮ ಕೋಮಿನ ಜನರು ಸೇರಿ ವಿವಿಧ ಧಾರ್ಮಿಕ ವಿಧಿ ವಿಧಾನ ಹಾಗೂ ಸಂಪ್ರದಾಯದೊ0ದಿಗೆ ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತಿದ್ದು, ಇನ್ನು ಒಂದು ತಿಂಗಳ ಕಾಲ ಭಕ್ತರಿಗೆ ಇತಿಹಾಸ ಪ್ರಸಿದ್ದ ಗಣೇಶಮೂರ್ತಿಯ ದರ್ಶನ ಭಾಗ್ಯ ದೊರೆಯಲಿದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಗೂಳೂರು ಮಹಾಗಣಪತಿಯನ್ನು ಕಾರ್ತಿಕ ಮಾಸದಲ್ಲಿ ೧ ತಿಂಗಳ ಕಾಲ ಪ್ರತಿಷ್ಠಾಪಿಸಿ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯಗಳೊAದಿಗೆ ಭಕ್ತರ ದರ್ಶನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಬಲಿಪಾಡ್ಯಮಿ ದಿನದಂದು ಗಣೇಶಮೂರ್ತಿಗೆ ವಿಶೇಷ ಪೂಜೆಯೊಂದಿಗೆ ಕಣ್ಣುಧಾರಣೆ ಮಾಡಲಾಯಿತು. ನಿನ್ನೆಯಿಂದ ಆರಂಭವಾಗಿರುವ ಗಣೇಶಮೂರ್ತಿಯ ವಿಶೇಷ ಪೂಜಾ ಕೈಂಕರ್ಯ ಇನ್ನು ಒಂದು ತಿಂಗಳ ಕಾಲ ಪ್ರತಿನಿತ್ಯ ನೆರವೇರಲಿದೆ. ಈ ಬೃಹತ್ ಗಣೇಶ ಮೂರ್ತಿಗೆ ವಿಶೇಷ ಐತಿಹ್ಯವಿದ್ದು, ೧ ತಿಂಗಳ ಕಾಲ ಗ್ರಾಮದ ಪ್ರತಿಯೊಂದು ಮನೆಯವರು ನಿತ್ಯ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸುವರು. ಪ್ರತಿದಿನ ರಾತ್ರಿ ೯ ಗಂಟೆಗೆ…
ತುಮಕೂರು: ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತಿನ ಮನೋಭಾವ, ಸಹಕಾರ ಮತ್ತು ನಾಯಕತ್ವದ ಗುಣವನ್ನು ಬೆಳೆಸುತ್ತದೆ. ಕ್ರೀಡಾಂಗಣವು ವಿದ್ಯಾರ್ಥಿಗಳ ವ್ಯಕ್ತಿತ್ವ ಅಭಿವೃದ್ಧಿಗೆ ಪಾಠಶಾಲೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ: ಜಿ.ಪರಮೇಶ್ವರ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಮಟ್ಟದ ಈ ಹೊನಲು ಬೆಳಕಿನ ಕಬಡ್ಡಿ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಲಿದೆ ಎಂದು ಹೇಳಿದರಲ್ಲದೆ, ಕಳೆದ ಬಾರಿ ಚಿಕ್ಕೋಡಿಯಲ್ಲಿ ನಡೆದಿದ್ದು, ಈ ಬಾರಿ ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವುದು ನಮ್ಮ ಜಿಲ್ಲೆಯ ಹೆಮ್ಮೆ ಎಂದು ಹೇಳಿದರು. ಕ್ರೀಡೆಗಳಲ್ಲಿ ಸೋಲು ಎಂದರೆ ವಿಫಲತೆ ಅಲ್ಲ, ಅದು ಮುಂದಿನ ಗೆಲುವಿನ ದಾರಿ. ಸೋಲಿನಲ್ಲೂ ಪಾಠವಿದೆ. ಸೋಲು ಮುಂದಿನ ಪ್ರಯತ್ನಕ್ಕೆ ಪ್ರೇರಣೆ ನೀಡುತ್ತದೆ. ಕ್ರೀಡಾ ಮನೋಭಾವನೆ ಎಂದರೆ ಪ್ರತಿಯೊಂದು ಪಂದ್ಯವನ್ನು…
ಹುಳಿಯಾರು: ಹುಳಿಯಾರು ಕಸ ವಿಲೇವಾರಿ ಘಟಕಕ್ಕೆ ಜಿಲ್ಲಾಡಳಿತ ಭೂಮಿ ನೀಡದೆ ನಿರ್ಲಕ್ಷಿö್ಯ ಸಿರುವುದನ್ನು ಖಂಡಿಸಿ ಹೋರಾಟ ರೂಪಿಸುವ ಸಲುವಾಗಿ ಹುಳಿಯಾರು ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಘ ಸಂಸ್ಥೆಗಳ ಸಭೆ ನಡೆಯಿತು. ಮರ‍್ನಲ್ಕು ಮಂದಿ ಪಟ್ಟಣ ಪಂಚಾಯ್ತಿ ಸದಸ್ಯರೂ ಕೂಡ ಸಭೆಗೆ ಆಗಮಿಸಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು. ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ ಹುಳಿಯಾರಿನ ಜನ ಸೌಮ್ಯ ಸ್ವಭಾವದವರಾಗಿದ್ದು ಯಾವುದಕ್ಕೂ ತಿರುಗಿಬೀಳುವುದಿಲ್ಲ ಎನ್ನುವ ಕಾರಣಕ್ಕೆ ೭ ವರ್ಷಗಳಿಂದ ಕಸ ವಿಲೇವಾರಿ ಘಟಕಕ್ಕೆ ಭೂಮಿ ನೀಡದೆ ಸತಾಯಿಸುತ್ತಿದ್ದಾರೆ. ಹುಳಿಯಾರಿನ ಜನ ಮೌನ ಮುರಿಯದಿದ್ದರೆ ಕಸದ ನಡುವೆಯೇ ಬದುಕಬೇಕಾದ ದುಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಸಂಘಸAಸ್ಥೆಗಳು ಮೊದಲು ಹೋರಾಟಕ್ಕೆ ಧುಮುಕಬೇಕಿದೆ ನಂತರ ಜನ ಸಾಮಾನ್ಯರು ತಮ್ಮ ಮನೆಯ ಕಸದೊಂದಿಗೆ ಪ್ರತಿಭಟನೆಗೆ ಬರಬೇಕಿದೆ. ಆಗ ಮಾತ್ರ ದಪ್ಪ ಚರ್ಮದ ಸರ್ಕಾರಿ ಆಧಿಕಾರಿಗಳಿಗೆ ಎಚ್ಚರಿಸಲು ಸಾಧ್ಯ ಎಂದರು. ಪಪ0 ಸದಸ್ಯ ಎಸ್‌ಆರ್‌ಎಸ್ ದಯಾನಂದ್ ಅವರು ಮಾತನಾಡಿ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಬಳಿ ಖುದ್ದು ಪಪಂ…
ತುಮಕೂರು: ಶಿಕ್ಷಣದಿಂದ ಈ ದೇಶದಲ್ಲಿ ದೊಡ್ಡ ಬದಲಾವಣೆಯೇ ಆಗಿದೆ.೧೯೪೭ರಲ್ಲಿ ಶೇ೩ರಷ್ಟಿದ್ದ ಸಾಕ್ಷರತೆ,ಪ್ರಸ್ತುತ ಶೇ೮೦ರಷ್ಟಿದೆ.ಇದರ ಫಲವಾಗಿ ಇಂದು ಇಡೀ ವಿಶ್ವದಲ್ಲಿಯೇ ದೊಡ್ಡ ತಾಂತ್ರಿಕ ಮಾನವ ಸಂಪನ್ಮೂಲವನ್ನು ಉತ್ಪಾಧಿಸುವ ದೊಡ್ಡ ರಾಷ್ಟçವಾಗಿದೆ.ಮೆಡಿಕಲ್, ಇಂಜಿನಿಯರಿAಗ್ ಹಾಗೂ ಜನರಲ್ ಡಿಗ್ರಿ ಪಡೆದ ಲಕ್ಷಾಂತರ ಜನ ಯುವಜನರು ನಮ್ಮದೇಶದಲ್ಲಿ ಇದ್ದಾರೆ ಇದಕ್ಕೆ ಕಾರಣ ಶಿಕ್ಷಣ ಎಂದು ಗೃಹ ಹಾಗೂ ತುಮಕೂರು ವಿವಿ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ. ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀದೇವಿ ಶಿಕ್ಷಣ ಸಂಸ್ಥೆ ಹಾಗೂ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ಅವರ ಆತ್ಮಕಥೆ ಆಂತರ0ಗದ ಆವಲೋಕನದ ಇಂಗ್ಲಿಷ್ ಅನುವಾದ ನೆನಪುಗಳುಮತ್ತು ಪ್ರತಿಬಿಂಬಗಳು ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಶಿಕ್ಷಣ ಪಡೆದ ಯುವಜನತೆಗೆ ಅವಕಾಶಗಳನ್ನು ಸೃಷ್ಟಿಸಲು ನಾವೆಲ್ಲರೂ ಮುಂದಾಗಬೇಕಿದೆ ಎಂದರು. ತುಮಕೂರಿನಲ್ಲಿ ಸಾಧನೆ ಮಾಡುವುದು ತುಂಬ ಕಷ್ಟ ಅಂತಹದರಲ್ಲಿ ಒಂದು ತಳಸಮುದಾಯದಲ್ಲಿ ಹುಟ್ಟಿದ ವ್ಯಕ್ತಿ ಶಿಕ್ಷಣ ಪಡೆಯುವುದು ಕಷ್ಟ.ಇಂತಹ ಹೊತ್ತಿನಲ್ಲಿ ಡಾ.ಎಂ.ಆರ್.ಹುಲಿನಾಯ್ಕರ್ ತನಗಿದ್ದ ಸರಕಾರಿ ಹುದ್ದೆಯನ್ನು ಬಿಟ್ಟು, ಏಕಾಂಗಿಯಾಗಿ ಶ್ರೀದೇವಿ…











