Author: News Desk Benkiyabale

ತುಮಕೂರು: ಶಿಕ್ಷಣದಲ್ಲಿ ರಂಗಸಾಧ್ಯತೆಗಳನ್ನು ನಿರಂತರವಾಗಿ ಅನ್ವೇಷಿಸುತ್ತಿರುವ ರಂಗಾಯಣವು ಈ ಬಾರಿ ನಾಟಕೋತ್ಸವವನ್ನು ನವೆಂಬರ್ ೧೭ ರಿಂದ ೨೧ರವರೆಗೆ ತುಮಕೂರು ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸುತ್ತಿದೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು. ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ನಾಟಕೋತ್ಸವದಲ್ಲಿ ಶ್ರೀ ಗಣೇಶ ಮಂದಾರ್ತಿಯವರ ನಿರ್ದೇಶನದ ‘ಮೈ ಫ್ಯಾಮಿಲಿ’ ನಾಟಕವನ್ನು ಪ್ರದರ್ಶಿಸಲಾಗುವುದು. ತುಮಕೂರು ನಗರ ವ್ಯಾಪ್ತಿಯ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ, ಮಕ್ಕಳ ಮಾನಸಿಕ, ದೈಹಿಕ ಸಹಜ ವಿಕಾಸಕ್ಕೆ ಪೂರಕವಾಗಿ ರಂಗಾಯಣವು ರೂಪಿಸಿರುವ ಉತ್ಸವದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ನಾಟಕದ ಪ್ರವೇಶ ದರ ಪ್ರತಿ ವಿದ್ಯಾರ್ಥಿಗೆ ೫೦ ರೂ.ಗಳನ್ನು ನಿಗದಿಪಡಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ೧೦.೩೦ ಹಾಗೂ ಮಧ್ಯಾಹ್ನ ೨ ಗಂಟೆಗೆ ನಾಟಕವನ್ನು ಪ್ರದರ್ಶಿಸಲಾಗುವುದು. ಈ ನಾಟಕದ ಕಥನವು ಮಕ್ಕಳ ನೋಟಗಳ ಮೂಲಕ ಅವರ ಲೋಕವಿನ್ಯಾಸ, ಗ್ರಹಿಕೆ, ಭಾವನೆ, ಕಲ್ಪನೆಗಳನ್ನು “ಮಕ್ಕಳು” ಎಂದು ಪ್ರತ್ಯೇಕಿಸದೆ ಒಟ್ಟಂದದಲ್ಲಿ ಹಿಡಿದಿಡಲು ಪ್ರಯತ್ನಿಸಿದೆ. ತಂತ್ರಜ್ಞಾನ ಯುಗದ ಈ…

Read More

ತುಮಕೂರು: ಒಂದು ಭಾಷೆ ಕಣ್ಮರೆಯಾಗುವುದೆಂದರೆ ಒಂದು ವಿವೇಕ ಸತ್ತಂತೆ. ಸ್ಥಳೀಯ ಭಾಷೆಗಳು ವೇಗಗತಿಯಲ್ಲಿ ನಶಿಸಿಹೋ ಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು. ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊ ಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾ ಡಿದರು. ೧೯೯೦ರ ದಶಕದ ಉದಾರೀಕರಣದ ಪರಿಣಾಮ ವಾಗಿ ಭಾರತವೂ ಜಾಗತೀಕರಣದ ಪ್ರಭಾವಕ್ಕೆ ಒಳಗಾಯಿತು. ಇಂಗ್ಲಿಷ್‌ನ ಪ್ರಬಲ ಹಿಡಿತದಿಂದಾಗಿ ಸ್ಥಳೀಯ ಭಾಷೆಗಳು ತೆರೆಮರೆಗೆ ಸರಿಯುತ್ತಿವೆ. ಹಲವು ಭಾಷೆಗಳ ಪತನಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಕನ್ನಡವನ್ನು ಉಳಿಸಿಕೊಳ್ಳುವ ಸವಾಲಿನಷ್ಟೇ ಸ್ಥಳೀಯ ಭಾಷೆಗಳನ್ನು ಉಳಿಸಿಕೊಳ್ಳುವುದೂ ದೊಡ್ಡ ಸವಾಲಾಗಿದೆ ಎಂದರು. ಕನ್ನಡಕ್ಕೆ ತನ್ನನ್ನು ತಾನು ಉಳಿಸಿಕೊಳ್ಳುವ ಮತ್ತು ಬೆಳೆಯುವ ಶಕ್ತಿಯಿದೆ. ಹಾಗೆಂದು ಕನ್ನಡಿಗರಾದ ನಾವೇ ನಮ್ಮ ಅನ್ನದ ಭಾಷೆಯ ಕುರಿತು ಅಲಕ್ಷö್ಯವನ್ನು ತಾಳಬಾರದು. ನಮ್ಮ ಭಾಷೆಯ ಜೊತೆಗೆ ಅನ್ಯಭಾಷೆಗಳನ್ನೂ ಗೌರವಿಸುವ ಸೌಜನ್ಯವನ್ನು ಬೆಳೆಸಿ ಕೊಳ್ಳೋಣ ಎಂದರು. ಕನ್ನಡಿಗರು ವಿಶಾಲಹೃದಯಿಗಳು. ಕನ್ನಡಿಗರು ದೇವರಿಗೆ ಕನ್ನಡ ಕಲಿಸಿದವರು.…

Read More

ಹುಳಿಯಾರು: ಈ ವರ್ಷ ಹಿಂಗಾರು ಹಂಗಾಮಿನಲ್ಲಿ ಉತ್ತಮವಾಗಿ ಮಳೆ ಸುರಿದ ಪರಿಣಾಮ ರೈತರು ಬಂಪರ್ ರಾಗಿ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ರಾಗಿ ತೆನೆ ಕಟ್ಟಿದ್ದು, ಕಾಳು ಬಲಿಯುವ ಹಂತದಲ್ಲಿದೆ. ಕೆಲವು ಕಡೆ ರಾಗಿ ಕಟಾವಿಗೆ ಬಂದಿದ್ದು ರೈತರಿಗೆ ಹರ್ಷ ತಂದಿದೆ. ಕಳೆದ ವರ್ಷವೂ ಸಹ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಬಂಪರ್ ಬೆಳೆಯಾಗಿತ್ತು. ಪರಿಣಾಮ ಈ ವರ್ಷವೂ ಸಹ ರೈತರು ಉತ್ಸಾಹದಿಂದ ರಾಗಿ ಬಿತ್ತಿದ್ದರು. ಪರಿಣಾಮ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ತಾಲೂಕಿನ ಗುರಿ ಮೀರಿ ಬಿತ್ತನೆಯ ಪ್ರಗತಿಯಾಗಿದೆ. ಆದರೆ ಸೆಪ್ಟೆಂಬರ್ ಮಾಹೆಯಲ್ಲಿ ಒಂದೇ ಒಂದು ಹನಿ ಮಳೆ ನೀರು ಭೂ ರಮೆಯ ತಣಿಸದೆ ರೈತನಿಗೆ ಆಘಾತ ನೀಡಿತ್ತು. ತೇವಾಂಶದ ಕೊರತೆಯುಂಟಾಗಿ ಬೆಳೆ ಹಾನಿಯ ಭೀತಿ ಎದುರಾಗಿತ್ತು. ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ಸಾಲ, ಸೋಲ ಮಾಡಿ ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಿದ್ದ ರೈತ ಚಿಂತಾಕ್ರಾ0ತರಾನ್ನಾಗಿಸಿತ್ತು. ಅದೃಷ್ಟವಶತ್ ರಾಗಿ ಕಾಳು ಕಟ್ಟುವ ಹಂತದಲ್ಲಿದ್ದ ಸಂದರ್ಭದಲ್ಲಿ ಉತ್ತಮ ಮಳೆಯಾಯಿತು. ಇಡೀ ವಾರ ತುಂತುರು ಮಳೆಯಾದ ಪರಿಣಾಮ ಒಣಗುತ್ತವೆ ಎನ್ನುತ್ತಿದ್ದ…

Read More

ತುಮಕೂರು: ಗರ್ಭಕಂಠ ಕ್ಯಾನ್ಸರ್, ಪಲ್ಸ್ ಪೋಲಿಯೋ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ರೋಟರಿ ತುಮಕೂರು ಮಂಗಳವಾರ ನಗರದಲ್ಲಿ ಬೃಹತ್ ಜಾಗೃತಿ ಜಾಥಾ ಹಮ್ಮಿಕೊಂಡಿತ್ತು. ಗರ್ಭ ಕಂಠದ ಕ್ಯಾನ್ಸರ್ ತಡೆಗಟ್ಟುವ ಬಗ್ಗೆ ಮಹಿಳೆಯರಲ್ಲಿ ಹಾಗೂ ೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವ ಬಿತ್ತಿ ಪತ್ರ ಪ್ರದರ್ಶಿಸಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಪ್ರಮುಖ ರಸ್ತೆಗಳಲ್ಲಿ ಜಾಥಾ ಸಾಗಿದರು. ಇದೇ ವೇಳೆ ಬಿಜಿಎಸ್ ವೃತ್ತದಲ್ಲಿ ರೋಟರಿ ಸಂಸ್ಥೆಯ ಕಾಮಧೇನು ಯೋಜನೆಯಡಿ ನೀಡುವ ಹಸುವನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ರೈತ ಮಹಿಳೆಗೆ ಹಸುವನ್ನು ಹಸ್ತಾಂತರ ಮಾಡಿದರು. ರೋಟರಿ ಸಂಸ್ಥೆಯ ಸಮಾಜ ಸೇವಾ ಕಾರ್ಯವನ್ನು ಶ್ಲಾಘಿಸಿದ ಶಾಸಕರು, ಕ್ಯಾನ್ಸರ್‌ನಂತಹ ಕಾಯಿಲೆ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿಸಬೇಕು. ಆರಂಭದ ಹಂತದಲ್ಲಿ ಕಂಡುಬರುವ ಕ್ಯಾನ್ಸರ್ ಅನ್ನು ಚಿಕಿತ್ಸೆ ಮೂಲಕ ವಾಸಿ ಮಾಡಬಹುದು. ಈ ಬಗ್ಗೆ ಜನರಲ್ಲಿರುವ ಭಯ ನಿವಾರಿಸಲು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ರೋಟರಿಯಂತಹ ಸಂಸ್ಥೆಗಳು ತಿಳುವಳಿಕೆ ಮೂಡಿಸುತ್ತಿರುವುದು ಒಳ್ಳೆಯ ಕಾರ್ಯ…

Read More

ತುಮಕೂರು: ನಗರದ ವಾಸವಿ ಪದವಿ ಪೂರ್ವ ಕಾಲೇಜು ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಕನಕದಾಸ ಜಯಂತಿ ಕಾರ್ಯಕ್ರಮದ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ವಾಸವಿ ವಿದ್ಯಾಪೀಠದ ಅಧ್ಯಕ್ಷರಾದ ಕೆ.ಎಲ್. ಅಮರನಾರಾಯಣ್ ಕನ್ನಡ ರಾಜ್ಯೋತ್ಸವ ಮತ್ತು ಕನಕದಾಸರ ಜಯಂತಿಯ ಶುಭಾಶಯ ಹೇಳಿ, ವಿದ್ಯಾರ್ಥಿಗಳು ಓದುವ ಕಡೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಯಶಸ್ಸು ಗಳಿಸಬೇಕು ಎಂದು ಕರೆ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಸಿ.ಆರ್. ಮೋಹನ್‌ಕುಮಾರ್ ಮಾತ ನಾಡಿ, ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಆದ್ಯ ಕರ್ತವ್ಯ. ಅದೇ ರೀತಿ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಸಂಸ್ಥೆಯ ಉಪಾಧ್ಯಕ್ಷರು ಜಿ ಕೃಷ್ಣಮೂರ್ತಿ ರವರು ಕನ್ನಡ ರಾಜೋತ್ಸವ ಕುರಿತು ಮಾತನಾಡಿದರು. ಸಂಸ್ಥೆಯ ಖಜಾಂಚಿ ಟಿ.ಎಸ್. ಅಶೋಕ್ ಕುಮಾರ್ ಮಾತ ನಾಡಿ, ಕೇವಲ ಅಂಕಗಳಿಗೆ ಸೀಮಿತಗೊಳ್ಳದೆ ಎಲ್ಲ ವಿಷಯ ಗಳ ಬಗ್ಗೆಯೂ ಜ್ಞಾನಾರ್ಜನೆ ಪಡೆದುಕೊಳ್ಳಬೇಕು ಎಂದು ಹೇಳಿದರು. ಸಂಸ್ಥೆಯ ನಿರ್ದೇಶಕರಾದ…

Read More

ಹುಳಿಯಾರು: ಹುಳಿಯಾರಿನ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಾಸ ಶ್ರೇಷ್ಠ ಕನಕ ಜಯಂತಿಯನ್ನು ಆ ಚರಿಸಲಾಯಿತು. ರಾಜ್ಯಶಾಸ್ತç ಉಪನ್ಯಾಸಕರಾದ ತಿಪ್ಪೇಸ್ವಾಮಿ ಎಂ.ಕೆ ಮಾತ ನಾಡುತ್ತಾ ಕನಕದಾಸರು ಕರ್ನಾಟಕದಲ್ಲಿ ಹುಟ್ಟಿದ ದೈತ್ಯ ಪ್ರತಿಭೆ. ದಾಸ ಸಾಹಿತ್ಯದ ಪರಂಪರೆಯನ್ನು ಹರಡಿದ ಸಮಾಜ ಸುಧಾರಕ. ಮೋಹನ ತರಂಗಣಿ, ನಳಚರಿತ್ರೆ, ರಾಮಧಾನ್ಯ ಚರಿತ್ರೆ ಮುಂತಾದ ಕಾವ್ಯಗಳನ್ನು ರಚಿಸಿ ಧಾನ್ಯವನ್ನು ರೂಪಕವಾಗಿರಿಸಿಕೊಂಡು ವರ್ಗ ಸಂಘರ್ಷವನ್ನು ವಿವರಿಸಿ ಸಾಮಾಜಿಕ ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸಲು ಶ್ರಮಿಸಿದ ಸಂತ ಎಂದು ತಿಳಿಸಿದರು. ಕವಿ ತಮ್ಮ ಕೀರ್ತನೆಗಳಾದ ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರಿಗೂ, ಕುಲಕುಲವೆಂದು ಹೊಡೆದಾಡದಿರಿ, ಜಪವ ಮಾಡಿದರೇನು? ತಪವ ಮಾಡಿದರೆ ಏನು ಕಪಟ ಗುಣ ವಿಪರೀತ ಕಲುಷಿತ ವಿದ್ದವರು, ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಎಂಬ ಕೀರ್ತನೆಗಳನ್ನು ಸಮಾಜಕ್ಕೆ ಅರ್ಪಿಸಿ ಆ ಮೂಲಕ ಸ್ವಸ್ಥ ಸಮಾಜವನ್ನ ಕಟ್ಟಲು ಹೊರಟವರು ಕನಕದಾಸರು ಎಂದು ತಿಳಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾದ ಸುಮಯ್ಯ ಮಾತನಾಡಿ ಕನಕದಾಸರ ಕುಟುಂಬಿಕ ಜೀವನ, ದಾಸರಾಗಿ ಬದಲಾದ…

Read More

ತುಮಕೂರು: ಸಂವಿಧಾನ ಬದ್ದ ನೊಂದಾಯಿತ ಸಂಸ್ಥೆಯಲ್ಲದ ಆರ್.ಎಸ್.ಎಸ್‌ನ್ನು ದೇಶದಲ್ಲಿ ಬ್ಯಾನ್ ಮಾಡಬೇಕು, ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕೆರೆ ಮಾಡಿದ,ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಶೂ ಎಸದ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಇಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಹತ್ತಾರು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು,ಬ್ರಾಹ್ಮಣವಾದವನ್ನು ಮುಂದಿಟ್ಟು,ಸ0ವಿಧಾನದ ಬದಲಿಗೆ ಮನುಸೃತಿಯನ್ನು ತಮ್ಮ ಆಡಳಿತ ಗ್ರಂಥವಾಗಿ ಮಾರ್ಪಡಿಸುವ ಗುರಿ ಹೊಂದಿರುವ ಆರ್.ಎಸ್,ಎಸ್ ಸಂಘಟನೆಯನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕೆಂದು ಎ.ಡಿ.ಸಿ. ಡಾ..ಎನ್.ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜಾತ್ಯಾತೀತ ಯುವ ವೇದಿಕೆ ಅಧ್ಯಕ್ಷ ಡ್ಯಾಗೇರಹಳ್ಳಿ ವಿರೂಪಾಕ್ಷ, ೧೯೫೦ ರ ದಶಕದಲ್ಲಿಯೇ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರು ಯಾವುದೇ ಕಾರಣಕ್ಕೂ ಆರ್.ಎಸ್.ಎಸ್. ಹಾಗೂ ವಿಶ್ವ ಹಿಂದೂ ಮಹಾಸಭಾದಂತಹ ಸಂಘಟನೆಗಳೊ0ದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದೆಂದು ರಾಜಕೀಯ ಪರಿಶಿಷ್ಟ ಜಾತಿಗಳ ಒಕ್ಕೂಟದ…

Read More

ತುಮಕೂರು: ತುಮಕೂರಿನ ಶ್ರೀ ರಂಗರAಗ ಹವ್ಯಾಸಿ ಕಲಾವೃಂದ ಟ್ರಸ್ಟ್, ತನ್ನ ೩೯ನೇ ರಾಜ್ಯ ಮಟ್ಟದ ಮಕ್ಕಳ ನಾಟಕೋತ್ಸವವನ್ನು “ಚಿಲಿಪಿಲಿ” ಶೀರ್ಷಿಕೆಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ನವದೆಹಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ನ.೧೨ ಮತ್ತು ೧೩ ನವೆಂಬರ್ ೨೦೨೫ರ ಸಂಜೆ ೪-೦೦ ಗಂಟೆಯಿ0ದ ೭-೩೦ ಗಂಟೆವರೆಗೆ ತುಮಕೂರು ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಏರ್ಪಡಿಸಿದೆ. ೧೯೮೭ರಲ್ಲಿ ರಿಚರ್ಡ್ ಜಿ. ಲೂಯೀಸ್ ಅವರ ಮಾರ್ಗದರ್ಶದಲ್ಲಿ ಆರಂಭವಾಗಿ ನವೆಂಬರ್ ೧೨ ಮತ್ತು ೧೩ ೨೦೨೫ ರಂದು ಅದೇ ರಂಗಶಕ್ತಿ ರಿಚರ್ಡ್ ಜಿ. ಲೂಯೀಸ್ ಅವರಿಂದ ಉದ್ಘಾಟನೆಯಾಗುತ್ತಿದೆ. ಅಧಕ್ಷತೆಯನ್ನು ಕಲಾವೃಂದದ ಬೆನ್ನೆಲುಬಾಗಿರುವ ಪತ್ರಿಕಾ ಕ್ಷೇತ್ರದ ಡಾ. ಎಸ್. ನಾಗಣ್ಣನವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿಕ್ಷಣ ಮತ್ತು ಸಹಕಾರಿ ಕ್ಷೇತ್ರದ ರೂವಾರಿ ಡಾ. ಲ್ಯಾನ್ಸಿ ಹೆಚ್. ಪಾಯಸ್ ಆಗಮಿಸುವರು. ಜೊತೆಯಲ್ಲಿ ಬೆಂಗಳೂರಿನ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಮಾಲಿನಿ ಎಸ್, ತುಮಕೂರು ವಿಶ್ವವಿದ್ಯಾಲಯ ಮತ್ತು ಜಿಲ್ಲಾ…

Read More

ತುರುವೇಕೆರೆ: ಸಮಾಜದಲ್ಲಿ ತಾಂಡವಾಡುತ್ತಿರುವ ಅಜ್ಞಾನ ಹೋಗಿ ಸುಜ್ಞಾನ ಬರಲಿ. ಮಕ್ಕಳು ಸಣ್ಣವರಿರುವಾಗಲೇ ಉತ್ತಮ ಸಂಸ್ಕಾರವನ್ನು ಪೋಷಕರು ಕಲಿಸಬೇಕು ಎಂದು ಶ್ರೀ ಆದಿಚುಂಚನಗಿರಿ ಮಠಾಧೀಶರಾದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಆಶಿಸಿದರು. ತಾಲೂಕಿನ ಅರೇಮಲ್ಲೇನಹಳ್ಳಿಯ ಶ್ರೀ ಲಕ್ಕಮ್ಮ ದೇವಿ, ಶ್ರೀ ತುಳಸಮ್ಮ ದೇವಿ, ಶ್ರೀ ಭೈರವೇಶ್ವರಸ್ವಾಮಿ ದೇವರುಗಳ ನೂತನ ದೇವಾಲಯ ಉದ್ಘಾಟನೆ, ನೂತನ ದೇವತಾಮೂರ್ತಿಗಳ ಪ್ರತಿಷ್ಠಾಪನೆ, ನೂತನ ಗೋಪುರ ಕಳಸ ಪ್ರತಿಷ್ಠಾಪನೆ ಕುಂಭಾಭಿಷೇಕ ಮಹೋತ್ಸವದಲ್ಲಿ ದಿವ್ಯ ಸಾನಿದ್ಯ ವಹಿಸಿ ಅವರು ಮಾತನಾಡಿದ ಅವರು ನಮ್ಮಲ್ಲಿ ಪಾಪ ಕರ್ಮಗಳು ತುಂಬಿ ತುಳುಕುತ್ತಿರುವುದರಿಂದ ದೇವರು ನಮ್ಮ ಕಣ್ಣಿಗೆ ಕಾಣದಾಗಿದ್ದಾನೆ. ನಮ್ಮಲ್ಲಿ ಅಜ್ಞಾನ ತುಂಬಿ ಹೋಗಿದೆ. ಎಲ್ಲಿ ನೋಡಿದರೂ ಅನ್ಯಾಯ, ಭ್ರಷ್ಠಾಚಾರ ತುಂಬಿಹೋಗಿದೆ. ದೇವರ ಇರುವಿಕೆಯನ್ನು ಪ್ರಶ್ನಿಸುವ, ದೇವರನ್ನೇ, ದೇವರ ದುಡ್ಡನ್ನೇ ಹೊತ್ತೊಯ್ಯುವ ದುರ್ಬುದ್ದಿ ಜನರಲ್ಲಿ ಬಂದಿದೆ. ದೇವರೆಂಬ ಭಯ ಇಲ್ಲದಾಗಿದೆ. ಅನೇಕ ಜನ್ಮಗಳಿಂದಲೂ ಪಾಪ ಕರ್ಮಗಳನ್ನು ಮಾಡಿರುವುದರಿಂದ ನಮಗೆ ದೇವರು ಕಾಣಲಾರ. ನಾವು ಮಾಡಿರುವ ಕರ್ಮ ಗಳನ್ನು ಈ ಜನ್ಮದಲ್ಲಾದರೂ ತೊಳೆದುಕೊಳ್ಳಲು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಹಾಗಾಗಿ ಮಕ್ಕಳು…

Read More

ತುಮಕೂರು: ಶಿಕ್ಷಣ, ಸಂಸ್ಕೃತಿ, ಮಾನವತೆ ಉಳಿಸುವ ಘೋಷವಾಕ್ಯದೊಂದಿಗೆ ತುಮಕೂರಿನ ರವೀಂದ್ರ ಕಲಾನಿಕೇತನದಲ್ಲಿ ಜಿಲ್ಲಾ ಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರವನ್ನು ನಡೆಸಲಾಯಿತು. ಶಿಬಿರವನ್ನು ಎಐಡಿಎಸ್‌ಒ ತುಮಕೂರು ಜಿಲ್ಲಾ ಸಮಿತಿಯ ಕಾರ್ಯದರ್ಶಿಗಳಾದ ಲಕ್ಕಪ್ಪ ಸಿ.ಬಿ. ಅವರು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಭಾಷಣಕಾರರಾಗಿ ರಾಜ್ಯ ಉಪಾಧ್ಯಕ್ಷ ರಲ್ಲೊಬ್ಬರಾದ ಅಪೂರ್ವರವರು “ಸಾಮಾಜಿಕ ಬದಲಾವಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ” ಎಂಬ ಮುಖ್ಯ ವಿಷಯದ ಕುರಿತು ಮಾತನಾಡಿದರು. ಅವರು ತಮ್ಮ ಭಾಷಣದಲ್ಲಿ ಸಮಾಜದ ಉನ್ನತಿಗಾಗಿ ನಿಸ್ವಾರ್ಥವಾಗಿ ಬದುಕಿದ ಮತ್ತು ತ್ಯಾಗ ಮಾಡಿದ ವಿವೇಕಾನಂದ, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಶಿಕ್ಷಣಕ್ಕಾಗಿ ಹೋರಾಟ ಮಾಡಿದ ಸಾವಿತ್ರಿಬಾಯಿ ಫುಲೆ ಮತ್ತು ಅನೇಕ ಮಹನೀಯರ ಜೀವನದಿಂದ ಸ್ಫೂರ್ತಿ ಪಡೆದು ವಿದ್ಯಾರ್ಥಿಗಳು ಸದಾ ಸಾಮಾಜಿಕ ಬದಲಾವಣೆಗೆ ಮುನ್ನುಗ್ಗಬೇಕು. ವಿದ್ಯಾರ್ಥಿಗಳನ್ನು ಕೇವಲ ವೈಯಕ್ತಿಕ ಯಶಸ್ಸಿಗಾಗಿ ಮಾತ್ರವಲ್ಲದೆ ಸಮಾಜದ ಪ್ರಗತಿ ಮತ್ತು ಉನ್ನತಿಗಾಗಿ ಸಿದ್ಧಪಡಿಸುವ ಸಮಗ್ರ ವ್ಯಕ್ತಿತ್ವ ವಿಕಸನದ ಅಗತ್ಯವನ್ನು ಅವರು ವಿವರಿಸಿದರು. ಮುಂದುವರೆದು ಪ್ರಸ್ತುತ ಶೈಕ್ಷಣಿಕ ಮತ್ತು ಸಮಾಜದ ಸಮಸ್ಯೆಗ ಳನ್ನು ಕುರಿತು ಹೇಳಿದರು,…

Read More