Author: News Desk Benkiyabale

ತುಮಕೂರು:       ಕೊರೊನಾದಿಂದಾಗಿ ಇಂಗ್ಲೀಷ್ ಮೆಡಿಷನ್ ಅಬ್ಬರದಲ್ಲಿ ಮೂಲೆಗುಂಪಾಗಿದ್ದ ಆಯುರ್ವೇದ ಸೇರಿದಂತೆ ಭಾರತೀಯ ವೈದ್ಯಪದ್ದತಿಗಳು ಮತ್ತಷ್ಟು ಪ್ರಕರತೆ ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ.       ತುಮಕೂರು.ನಗರದ ಹೊಸ ಬಡಾವಣೆ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಪಾರ್ಕಿನಲ್ಲಿ ತುಮಕೂರು ಜಿಲ್ಲಾ ಆಯುರ್ವೇದ ಪದವಿಧರ ವೈದ್ಯರ ಸಂಘ(ರಿ) ಪೌರಕಾರ್ಮಿಕರಿಗೆ ಆಯೋಜಿಸಿದ್ದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಕೊಳ್ಳುವ ಆರೋಗ್ಯ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ,ಪಿಕೆಎಸ್‍ಗಳಿಗೆ ಆರೋಗ್ಯಕಿಟ್ ವಿತರಿಸಿ ಮಾತನಾಡುತಿದ್ದ ಅವರು,ಶತಮಾನ ಗಳಿಂದ ಅನುಸರಿಸಿಕೊಂಡು ಬರುತ್ತಿದ್ದ ಆಯುರ್ವೇದ, ಯುನಾನಿ,ಹೋವಿಯೋಪತಿ ಸೇರಿದಂತೆ ಹಲವಾರು ಭಾರತೀಯ ಚಿಕಿತ್ಸಾ ಪದ್ದತಿಗಳು,ಇಂಗ್ಲಿಷ್ ಮೆಡಿಷನ್‍ನಿಂದ ಜನರಿಂದ ದೂರವಾಗಿದ್ದವು,ಆದರೆ ಕೋರೋನಾ ದಿಂದಾಗಿ ಮತ್ತೊಮ್ಮೆ ಅವುಗಳ ಲಾಭವನ್ನು ಜನರು ಪಡೆದುಕೊಳ್ಳುವಂತಾಗಿದೆ.ಆಯುರ್ವೇದ ವೈದ್ಯಕೀಯ ಪದ್ದತಿಗಳನ್ನು ಜನರಿಗೆ ತಲುಪಿಸಲು ಹಗಲಿರುಳು ಶ್ರಮಿಸುತ್ತಿರುವ ವೈದ್ಯರ ಕಾರ್ಯ ಶ್ಲಾಘನೀಯ ಎಂದರು.       ನಗರದ ಸ್ವಚ್ಚತೆಗೆ ಶ್ರಮಿಸುವ ಪೌರಕಾರ್ಮಿಕರು ತಮ್ಮ ಮತ್ತು ತಮ್ಮ ಕುಟುಂಬದ ಸ್ವಚ್ಚತೆ ಮತ್ತು ಆರೋಗ್ಯದ ಕಡೆಗೂ ಗಮನಹರಿಸಬೇಕು.…

Read More

ತುರುವೇಕೆರೆ:       ತಾಲೂಕಿನಲ್ಲಿ ಕೋವಿಡ್ ನೆಪವೊಡ್ಡಿ 144 ಸೆಕ್ಷನ್ ಜಾರಿ ಮಾಡುವ ಮೂಲಕ, ತಾಲೂಕು ಅಡಳಿತ ಪ್ರತಿಪಕ್ಷವನ್ನು ಧÀಮನ ಮಾಡಲು ಹೊರಟಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.       ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಗುಡ್ಡೇನಹಳ್ಳಿ ರೈತರನ್ನು ಸಾಗುವಳಿ ಭೂಮಿಯಿಂದ ಒಕ್ಕಲೆಬ್ಬಿಸಿರುವ ತಾಲೂಕು ಅಡಳಿತ ಹಾಗೂ ಪೋಲೀಸ್ ಇಲಾಖೆಗಳ ರೈತ ವಿರೋದಿ ಖಂಡಿಸಿ ಇದೇ 31 ರಂದು ಪ್ರತಿಭಟನೆ ಮಾಡಿಯೇ ತೀರುವುದಾಗಿ ಹೇಳಿದ ಅವರು ಪ್ರತಿಭಟನೆಯಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮರಸ್ವಾಮಿಯವರು ಸಹಾ ನಮ್ಮೊಂದಿಗೆ ಧ್ವನಿಗೂಡಿಸಲಿದ್ದಾರೆ. ಅದರಂತೆ ಗುಡ್ಡೇನಹಳ್ಳಿ ರೈತರೊಂದಿಗೆ ಹಾಗೂ ಜೆಡಿಎಸ್ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ತಾಲ್ಲೂಕು ಕಛೇರಿ ಆವರಣದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.       ತಾಲೂಕು ಆಡಳಿತ ಕೋವಿಡ್ ನೆಪವೊಡ್ಡಿ 144 ಸೆಕ್ಷನ್ ಜಾರಿ ಮಾಡಿದೆ ಆದರೆ ತಾಲೂಕಿನಲ್ಲಿ ಯಾವುದೇ ಕೋಮುವಾದ ಗಲಾಟೆಯಾಗಲಿ ಅಥವಾ ಗೋಲಿಬಾರ್ ಆಗಲಿ ನಡೆದಿಲ್ಲ ಆದರೂ 144ಸೆಕ್ಷನ್ ಜಾರಿಗೆ ತಂದಿರುವುದು ಖಂಡನೀಯ.…

Read More

ತುಮಕೂರು :      ಜಿಲ್ಲೆಯಲ್ಲಿ 211 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3211 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 32, ಪಾವಗಡ-08, ಕುಣಿಗಲ್-10, ಮಧುಗಿರಿ-24, ಕೊರಗಟಗೆರೆ-25, ತುರುವೇಕೆರೆ-08, ಶಿರಾ-30, ತಿಪಟೂರು-11, ಗುಬ್ಬಿ-42, ಚಿಕ್ಕನಾಯಕನಹಳ್ಳಿ-18 ಮಂದಿ ಸೇರಿ ತಾಲೂಕಿನಲ್ಲಿ ಒಟ್ಟು 211 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.        ಜಿಲ್ಲಾಸ್ಪತ್ರೆಯಿಂದ 169 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 3906 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1442 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 160 ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Read More

ತುಮಕೂರು:       ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೇ ಸೆಪ್ಟೆಂಬರ್ 1 ರಿಂದ ಬಚ್ಚಲು ಗುಂಡಿ(ಸೋಕ್ ಪಿಟ್) ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಾಕಲ್ಯಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.       ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರ ಸೂಚನೆಯ ಮೇರೆಗೆ ನರೇಗಾ ಯೋಜನೆಯಡಿ ಬಚ್ಚಲು ಗುಂಡಿ, ಅಣಬೆ ಬೇಸಾಯ, ಪೌಷ್ಠಿಕ ತೋಟ ನಿರ್ಮಾಣ ಕಾಮಗಾರಿಗಳನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುವುದು.       ನರೇಗಾ ಯೋಜನೆಯಡಿ ಹೊಸದಾಗಿ ಸೇರ್ಪಡೆಗೊಂಡಿರುವ ಬಚ್ಚಲು ಗುಂಡಿ (ಸೋಕ್ ಪಿಟ್) ವೈಯಕ್ತಿಕ ಕಾಮಗಾರಿಗೆ 17000/- ರೂ., ಅಣಬೆ ಬೇಸಾಯ (ಸಮುದಾಯ ಆಧಾರಿತ) ಕಾಮಗಾರಿಗೆ 95000/- ರೂ., ಪೌಷ್ಠಿಕ ತೋಟ ನಿರ್ಮಾಣ ವೈಯಕ್ತಿಕ ಕಾಮಗಾರಿಗೆ 2391/- ರೂ. ಹಾಗೂ ಸಮುದಾಯ ಕಾಮಗಾರಿಗೆ 37391/- ರೂ.ಗಳನ್ನು ನೀಡಲಾಗುವುದು. ಗ್ರಾಮೀಣ ಭಾಗದ ಜನರು ನರೇಗಾ…

Read More

ತುಮಕೂರು:       ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಎನ್.ಐ.ಸಿ.ಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಮೇಲ್ವಿಚಾರಕಿಯರಿಗೆ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಕುರಿತು ವಿಡಿಯೋ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.      ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಗೌರವಾನ್ವಿತ ನ್ಯಾಯಾಧೀಶರಾದ ರಾಘವೇಂದ್ರ ಶೆಟ್ಟಿಗಾರ್ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಾ, ಕೋವಿಡ್-19ರ ಅಂಗವಾಗಿ ಸಭೆ ಸಮಾರಂಭಗಳನ್ನು ಮಾಡಲಾಗದ ಕಾರಣ ಸೆಪ್ಟೆಂಬರ್ 1 ರಿಂದ 7 ರವರೆಗೆ “ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ”ವನ್ನು ಹಮ್ಮಿಕೊಳ್ಳಲಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು ಈ ಸಪ್ತಾಹದಲ್ಲಿ ಗರ್ಭಿಣಿ, ಬಾಣಂತಿಯರು ಮತ್ತು ಮಕ್ಕಳ ಪೋಷಕರ ಮನೆ-ಮನೆಗೆ ತೆರಳಿ ಪೌಷ್ಟಿಕ ಆಹಾರದ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು. ಮಗು ಜನಿಸಿದ 1 ಗಂಟೆಯೊಳಗಾಗಿ ತಾಯಿಯ ಎದೆ ಹಾಲನ್ನು ಉಣಿಸಿದರೆ ಆಗುವ ಮಹತ್ವದ ಬಗ್ಗೆ,…

Read More

ಹುಳಿಯಾರು:       ಪಟ್ಟಣ ಪಂಚಾಯ್ತಿಯ ನಿರ್ಲಕ್ಷ್ಯದಿಂದಾಗಿ ಹುಳಿಯಾರಿನ ಶಂಕರಾಪುರ ಬಡಾವಣೆಯಲ್ಲಿ ಕಳೆದೆರಡು ತಿಂಗಳಿನಿಂದ ನೀರಿಗಾಗಿ ಹಾಹಾಕಾರ ಉಂಟಾಗಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.       ಶಂಕರಾಪುರ ಬಡಾವಣೆಗೆ ಸಿಹಿ ಮತ್ತು ಉಪ್ಪು ನೀರು ಸರಬರಾಜಿವಿನ ಎರಡು ವ್ಯವಸ್ಥೆಯಿತ್ತು. ಇದರಲ್ಲಿ ಸಿಹಿನೀರು ಸರಬರಾಜು ಮಾಡುವ ಪೈಪ್‍ನಲ್ಲಿ ಅಕ್ರಮವಾಗಿ ನಲ್ಲಿಗಳನ್ನು ಹಾಕಿಕೊಂಡ ಪಡಿಣಾಮ ಬ್ರಾಹ್ಮಣರ ಬೀದಿಗೆ ಹನಿ ನೀರು ಬಾರದಾಗಿದೆ. ಇನ್ನು ಉಪ್ಪು ನೀರು ಸರಬರಾಜು ಮಾಡುವ ಪೈಪ್ ಇತ್ತೀಚೆಗೆ ಸಿಸಿ ರಸ್ತೆ ಮಾಡುವಾಗ ಹೊಡೆದಿದೆ. ಇದನ್ನು ಸರಿಪಡಿಸದ ಪರಿಣಾಮ ಇಡೀ ಶಂಕರಾಪುರ ಬಡಾವಣೆಗೆ ಉಪ್ಪು ನೀರು ಬಾರದೆ ನೀರಿನ ತಾತ್ವರ ಆರಂಭವಾಗಿದೆ.        ಇಲ್ಲಿನ ನಿವಾಸಿಗಳಲ್ಲಿ ಶೇ.80 ರಷ್ಟು ಕೂಲಿಕಾರ್ಮಿಕರಾಗಿದ್ದು ಕೊರೊನಾದಿಂದಾಗಿ ಕೂಲಿನಾಲಿ ಸಿಗದೆ ಸಂಸಾರ ನಿರ್ವಹಣೆ ಕಷ್ಟವಾಗಿದೆ. ಇಂತಹ ಸಂಕಷ್ಟದಲ್ಲಿ ದುಡ್ಡು ಕೊಟ್ಟು ನೀರು ಖರೀಧಿಸುವ ಅನಿವಾರ್ಯತೆ ಸೃಷ್ಠಿಯಾಗಿದೆ.        ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್‍ಗೆ ಎಷ್ಟು ಬಾರಿ ಮನವಿ…

Read More

ತುಮಕೂರು:      ವಾದ್ಯಗಾರರ ಸಂಘ ತನ್ನ ವೃತ್ತಿಯಲ್ಲಿ ತೊಡಗಿರುವ ಕುಲಕಸುಬುದಾರರು, ಅಶಕ್ತರನ್ನು ಗುರುತಿಸಿ ಅವರಿಗೆ ಸಹಕಾರಿಯಾಗುವಂತೆ ಹಟ್ಟಿಲಕ್ಕಮ್ಮ ದೇವಿ ಪ್ರಧಾನ ಅರ್ಚಕರಾದ ಗೋಪಾಲಸ್ವಾಮಿ ಅವರು ಹೇಳಿದರು.       ನಗರದ ಗೋಕುಲ ಬಡಾವಣೆಯಲ್ಲಿ ಗುರುವಾರ ನಡೆದ ಜಿಲ್ಲಾ ರಂಗಭೂಮಿ ವಾದ್ಯಗಾರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ತುಮಕೂರು ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಜಿಲ್ಲಾ ರಂಗಭೂಮಿ ವಾದ್ಯಗಾರರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸಂಘವು ಹೆಚ್ಚಿನ ಚಟುವಟಿಕೆಗೆ ಒತ್ತು ನೀಡಿ, ಅಶಕ್ತರು, ನೊಂದವರಿಗೆ ಧ್ವನಿಯಾಗಲಿ ಎಂದು ಹೇಳುತ್ತ ಸಂಘಕ್ಕೆ ಶುಭ ಹಾರೈಸಿದರು.       ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷರಾದ ಡಿ.ಶಿವಮಹದೇವಯ್ಯ ಅವರು ಮಾತನಾಡುತ್ತ, ಜಿಲ್ಲಾ ರಂಗಭೂಮಿ ಕಲಾವಿದರ ಬಳಕ, ಜಿಲ್ಲಾ ರಂಗಭೂಮಿ ವಾದ್ಯಗಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳುತ್ತ, ವಾದ್ಯಗಾರರ ಸಂಘ ಜಿಲ್ಲೆಯ ಎಲ್ಲ ವಾದ್ಯಗಾರರನ್ನು ಒಗ್ಗೂಡಿಸಿ, ಜಿಲ್ಲೆಯಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸಲಿ ಎಂದು ಹೇಳಿದರು.      …

Read More

ಮಧುಗಿರಿ:       ಇಲ್ಲಿನ ಪುರಸಭಾ ಆವರಣದಲ್ಲಿರುವ ಈಜುಕೊಳ ಪಕ್ಕದಲ್ಲಿದ್ದ ಕೊಠಡಿಯಲ್ಲಿ ಪ್ಲಾಸ್ಟಿಕ್ ಮತ್ತು ರಟ್ಟುಗಳನ್ನು ತುಂಬಿದ ರೂಂನಲ್ಲಿ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣ ಭಸ್ಮವಾಗಿರುವ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.       ಈ ಅಗ್ನಿ ದುರಂತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಮುಖ್ಯಾಧಿಕಾರಿ ಅಮರನಾರಾಯಣ ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿದ್ದರಿಂದ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.       ವಾರಕ್ಕೊಮ್ಮೆ ಈ ತ್ಯಾಜ್ಯವನ್ನು ಖರೀದಿ ಮಾಡಿಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿತ್ತು. ವಿಲೇವಾರಿ ಮಾಡಬೇಕಾದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

Read More

ಗುಬ್ಬಿ:       ಅಂಗನವಾಡಿ ಕೇಂದ್ರಗಳ ದುರಸ್ಥಿ ಮತ್ತು ಎಲೆಕ್ಟ್ರಿಕ್ ಕೆಲಸದ ಪಟ್ಟಿ ಸಿದ್ಧಪಡಿಸಿದ ಶಿಶು ಅಭಿವೃದ್ಧಿ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಸದಸ್ಯರನ್ನೇ ನಿರ್ಲಕ್ಷ್ಯಿಸಿ ತಯಾರಾದ ಕಾಮಗಾರಿಗಳ ಪಟ್ಟಿಯನ್ನು ಅನುಮೋದನೆಗೆ ತಂದಿರುವುದು ಸರಿಯಲ್ಲ. ನಮ್ಮಗಳ ಗಮನಕ್ಕೆ ಬಾರದ ಈ ಗುತ್ತಿಗೆ ಮತ್ತು ಕಾಮಗಾರಿ ಪಟ್ಟಿ ರದ್ದುಪಡಿಸಿ ಮರುಪಟ್ಟಿ ತಯಾರಿಸಬೇಕು ಎಂದು ತಾಪಂ ಸದಸ್ಯೆ ಮಮತಾ ಯೋಗೀಶ್ ಆಗ್ರಹಿಸಿದರು.       ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಅಂಗನವಾಡಿ ಕೇಂದ್ರಗಳ ಕೆಲಸದ ಪಟ್ಟಿ ಅನುಮೋದನೆಗೆ ಬಂದ ಸಂದರ್ಭದಲ್ಲಿ ಗರಂ ಆದ ಸದಸ್ಯೆ ಮಮತಾ ಈ ಕೆಲಸಗಳನ್ನು ಕಮೀಷನ್‍ಗೆ ಮಾರಾಟ ಮಾಡಿದಂತೆ ಕಾಣುತ್ತಿದೆ. ಚುನಾಯಿತ ಪ್ರತಿನಿಧಿಗಳಾದ ನಮ್ಮ ಗಮನಕ್ಕೆ ಬಾರದೆ ನಮ್ಮ ವ್ಯಾಪ್ತಿಯಲ್ಲಿ ಗುರುತಿಸಲಾದ ಕೆಲಸಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಅಧಿಕಾರಿಗಳು ಕೇವಲ ಅನುಮೋದನೆಗೆ ಪಟ್ಟಿ ಹಿಡಿದು ಸಭೆಗೆ ಬರುವ ಮುನ್ನಾ ನಮಗೆ ಈ ಕೆಲಸಗಳ ಬಗ್ಗೆ ಮಾಹಿತಿ ನೀಡದಿರಲು ನಿಖರ ಕಾರಣ ನೀಡಬೇಕು ಎಂದು ಒತ್ತಾಯಿಸಿದರು.…

Read More

ಮಧುಗಿರಿ:      ಈ ಬಾರಿ ಹಲವು ಕಡೆ ಉತ್ತಮ ಮಳೆಯಾಗುತ್ತಿದ್ದು, ರೈತರ ಬದುಕು ಹಸನಾಗುವುದಲ್ಲದೆ ಶ್ರೀ ನಂಜುಂಡೇಶ್ವರನ ಕೃಪೆಯಿಂದ ನಾಡು ಸುಭಿಕ್ಷವಾಗಲಿ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.       ತಾಲೂಕಿನ ಕಸಬಾ ಸಿದ್ದಾಪುರದ 510 ವರ್ಷದ ಐತಿಹಾಸಿಕ ಶ್ರೀ ನಂಜುಂಡೇಶ್ವರ ದೇಗುಲದ ಜೀರ್ಣೋದ್ಧಾರ ಹಾಗೂ ದೇವತಾ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಉತ್ತಮ ಮಳೆಯ ಕಾರಣ ರೈತರು ಈ ಬಾರಿ ಶೇ.90 ರಷ್ಟು ವ್ಯವಸಾಯ ಕೈಗೊಂಡಿದ್ದು, ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರ ಕೂಡ ರೈತರ ನೆರವಿಗೆ ಧಾವಿಸಬೇಕು. ದೇಗುಲ ಅಭಿವೃದ್ಧಿಗೆ ಹೆಚ್ಚುವರಿಯಾಗಿ ತನ್ನ ಅನುದಾನದಲ್ಲಿ 3 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು.       ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ದೈವದ ಕುರುಹನ್ನು ಪ್ರಜ್ವಲಿಸುವಂತೆ ಮಾಡಿದರೆ ಧರ್ಮ ಉಳಿದು ಲೋಕ ಕಲ್ಯಾಣವಾಗಲಿದೆ. ಶಿಥಿಲವಾಗಿದ್ದ ಈ ದೇಗುಲದ ಜೀರ್ಣೋದ್ಧಾರಕ್ಕೆ ಸಹಕರಿಸಿದ ಸದ್ಬಕ್ತರಿಗೆಲ್ಲ ಒಳಿತಾಗಲಿ ಎಂದರು.       ಎಲೆರಾಂಪುರದ ಕುಂಚಿಟಿಗ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ…

Read More