ತುಮಕೂರು : ಜಿಲ್ಲೆಯಲ್ಲಿ 266 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5017 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 110, ಪಾವಗಡ-16, ಕುಣಿಗಲ್-5, ಮಧುಗಿರಿ-09, ತುರುವೇಕೆರೆ-11, ಶಿರಾ-16, ತಿಪಟೂರು-29, ಗುಬ್ಬಿ-24, ಚಿಕ್ಕನಾಯಕನಹಳ್ಳಿ-32 ಮಂದಿ ಸೇರಿ ತಾಲೂಕಿನಲ್ಲಿ ಒಟ್ಟು 266 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯಿಂದ 174 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 3626 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1240 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 151 ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Author: News Desk Benkiyabale
ತುಮಕೂರು : ಜಿಲ್ಲೆಯಲ್ಲಿ 194 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4751 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 91, ಪಾವಗಡ-07, ಕುಣಿಗಲ್-15, ಮಧುಗಿರಿ-06, ತುರುವೇಕೆರೆ-22, ಶಿರಾ-07, ತಿಪಟೂರು-13, ಗುಬ್ಬಿ-06, ಚಿಕ್ಕನಾಯಕನಹಳ್ಳಿ-20 ಮಂದಿ ಸೇರಿ ತಾಲೂಕಿನಲ್ಲಿ ಒಟ್ಟು 194 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯಿಂದ 99 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 3452 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1151 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 147 ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತುಮಕೂರು: ತಾಲೂಕಿನ ಊರ್ಡಿಗೆರೆ ಹೋಬಳಿ ದೇವರಾಯನದುರ್ಗ ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಬರುವ ಭಕ್ತಾದಿಗಳ ಪಾದರಕ್ಷೆಗಳನ್ನು ಕಾಯುವ ಹಕ್ಕು ಭಾದ್ಯತೆಯನ್ನು ಪಡೆಯುವ ಬಗ್ಗೆ ಆಗಸ್ಟ್ 29ರಂದು ಬೆಳಿಗ್ಗೆ 11-30 ಗಂಟೆಗೆ ದೇವಾಲಯದ ಆವರಣದಲ್ಲಿ ಹರಾಜು (2020ರ ಸೆಪ್ಟೆಂಬರ್ 1ರಿಂದ 2021ರ ಫೆಬ್ರುವರಿ 28ರವರೆಗಿನ ಆರು ತಿಂಗಳ ಅವಧಿಗೆ)ನಡೆಸಲಾಗುವುದು. ಶ್ರೀ ಕ್ಷೇತ್ರದಲ್ಲಿ 2 ದೇವಾಲಯಗಳಿದ್ದು, ಸದರಿ ದೇವಾಲಯಗಳ ಹತ್ತಿರ ಇರುವ ಪಾದರಕ್ಷೆ ಕಾಯುವ ಹರಾಜನ್ನು ಪ್ರತ್ಯೇಕವಾಗಿ ಕೂಗಬೇಕು. ಈ ಬಾರಿ ಶ್ರೀ ಯೋಗ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಬಳಿ ಇರುವ ಪಾದರಕ್ಷೆ ಕಾಯುವ ಹರಾಜನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ಮೀಸಲಿಡಲಾಗಿದೆ. ಹರಾಜು ಹಕ್ಕಿನ ಗುತ್ತಿಗೆ ಪಡೆಯಲಿಚ್ಛಿಸುವವರು 5000 ರೂ.ಗಳ ಮುಂಗಡ ಠೇವಣಿ ಇಡಬೇಕು. ಹರಾಜಿನಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಸಂಪೂರ್ಣ ವಿಳಾಸದ ದಾಖಲೆ, ಫೋಟೊ, ಐಡಿ ದಾಖಲೆ(ಆಧಾರ್ ಕಾರ್ಡ್, ಚುನಾವಣೆ ಕಾರ್ಡ್, ಆಹಾರ ಪಡಿತರ ಚೀಟಿ, ಇತ್ಯಾದಿ)ಯ ಛಾಯಾ…
ತುಮಕೂರು: ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ಉಪಯುಕ್ತವಾಗುವಂತಹ ತಂತ್ರಜ್ಞಾನದ ನೆರವನ್ನು ಕೋವಿಡ್-19ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೀಡುತ್ತಿರುವುದು ಉತ್ತಮ ಬೆಳವಣಿಗೆ, ಮಕ್ಕಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ತಿಳಿಸಿದರು. ನಗರದ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯಲ್ಲಿ ಸ್ವಾದ ಫೌಂಡೇಶನ್ ಮತ್ತು ದೀಕ್ಷಾ ಸಂಸ್ಥೆ ಸಹಯೋಗದಲ್ಲಿ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಿಸಿ ಮಾತನಾಡಿದ ಅವರು, ಹಳ್ಳಿ ಪ್ರದೇಶ ಮಕ್ಕಳು ಹಾಗೂ ನಗರ ಪ್ರದೇಶದ ಮಕ್ಕಳ ನಡುವಿನ ತಂತ್ರಜ್ಞಾನದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಡಿಜಿಟಲ್ ಇಂಡಿಯಾದಂತಹ ಕಾರ್ಯಕ್ರಮವನ್ನು ರೂಪಿಸಿದ್ದು, ಆನ್‍ಲೈನ್ ಕೋಚಿಂಗ್ ಸೇರಿದಂತೆ ಎಲ್ಲರಿಗೂ ಮಾಹಿತಿ ಮುಕ್ತವಾಗಿ ದೊರಕುವಂತಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಮಕ್ಕಳು ಟ್ಯಾಬ್ಲೆಟ್ ಅನ್ನು ಮನರಂಜನೆಗೆ ಬಳಸದೇ ಜ್ಞಾನವನ್ನು ವೃದ್ಧಿಸಿಕೊಳ್ಳಲು ಬಳಸಬೇಕು ಎಂದು ಹೇಳಿದರು. ಕೋವಿಡ್-19 ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣ ನಿಲ್ಲಬಾರದು ಎನ್ನುವ ಉದ್ದೇಶದಿಂದ ತಂತ್ರಜ್ಞಾನದ ಬಳಕೆ ಹೆಚ್ಚಳವಾಗುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯನ್ನು…
ತುಮಕೂರು: ಚುನಾಯಿತ ಪ್ರತಿನಿಧಿ ಯೊಬ್ಬರಿಗೆ ಕಂದಾಯಾಧಿಕಾರಿ ಅವರ ಸದಸ್ಯ ಸ್ಥಾನದ ಅಧಿಕಾರವನ್ನೇ ಸೂಪರ್ ಸೀಡ್ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿ ದರ್ಪ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಕಂದಾಯಾಧಿಕಾರಿ ಹುದ್ದೆಯಲ್ಲಿರುವ ಜಗದೀಶ್‍ರವರು ಮೂಲತಃ ಕಂದಾಯಾಧಿಕಾರಿಯ ಹುದ್ದೆಯವರಲ್ಲ. ವ್ಯವಸ್ಥಾಪಕರ ಬಡ್ತಿ ಪಡೆದ ನಂತರ ಕಂದಾಯಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತನ್ನ ವ್ಯಾಪ್ತಿ ಮೀರಿ ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡು ಜನಸಾಮಾನ್ಯರನ್ನು ಬೆದರಿಸಿ ಕಿರುಕುಳ ನೀಡುತ್ತಿದ್ದದ್ದು ಸರ್ವೇ ಸಾಮಾನ್ಯವಾಗಿತ್ತು. ಕಾನೂನು ನಿಯಮಾನುಸಾರ ಆಗಬೇಕಿದ್ದ ಕೆಲಸಗಳಿಗೆ ಹಲವು ಕಾನೂನಿನ ತೊಡಕಿನ ನೆಪವೊಡ್ಡಿ ಹಣಕ್ಕಾಗಿ ಸರ್ಕಾರಿ ಕೆಲಸಗಳನ್ನು ವಿಳಂಬ ಮಾಡಿ ಹಣವನ್ನು ಪಡೆಯುತ್ತಿದ್ದರು ಎಂಬ ಆಪಾದನೆ ಹೆಚ್ಚಾಗಿತ್ತು. ಆದರೆ ತಾನು ಎಲ್ಲಾ ತಿಳಿದಿದ್ದೇನೆ ಎಂಬ ಮೇದಾವಿತನದಿಂದ ಸಾಮಾನ್ಯ ರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಈತ ಇದೀಗ ಪಾಲಿಕೆಯ ಸದಸ್ಯರೊಂದಿಗೆ ಅದೇ ರೀತಿ ಧರ್ಪ ತೋರಿ ಸಿಲುಕಿ ಹಾಕಿಕೊಂಡಿದ್ದಾರೆ. ತುಮಕೂರು ಮಹಾನಗರಪಾಲಿಕೆಯಲ್ಲಿ ಕಂದಾಯಾಧಿಕಾರಿ ಕಾರ್ಪೋರೇಟ್ ಒಬ್ಬರಿಗೆ ನಿಮ್ಮ ಅಧಿಕಾರವನ್ನು ಸೂಪರ್‍ಸೀಡ್ ಮಾಡುತ್ತೇನೆ…
ತುಮಕೂರು: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಬಿಜೆಪಿ ಮುಖಂಡನ ದುಬಾರಿ ಬೆಲೆಯ ಡೆವಿಡ್‍ಸನ್ ಬೈಕ್ ಮೇಲೆ ಕುಳಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಬಗ್ಗೆ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿರುವುದನ್ನು ಕೈಬಿಡಬೇಕು ಎಂದು ಪ್ರಗತಿಪರ ಚಿಂತಕ ಸಿ.ಯತಿರಾಜ್ ಒತ್ತಾಯಿಸಿದರು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ವಕೀಲ ಪ್ರಶಾಂತ್ ಭೂಷಣ್ ಮೇಲಿನ ನ್ಯಾಯಾಂಗ ನಿಂದನೆ ವಾಪಸ್ ಪಡೆಯಿರಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಿರಿ ಎಂಬ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಡಿದರು. ದೇಶದಲ್ಲಿ ಕೋವಿಡ್ ನೆಪಮಾಡಿಕೊಂಡು ಜನಪರ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಕೃಷಿ, ರೈತರು, ಕಾರ್ಮಿಕರನ್ನು ದಿವಾಳಿ ಮಾಡುವಂತಹ ಕೆಲಸ ನಡೆಯುತ್ತಿದೆ. ಇಂತಹ ಸಾಂಕ್ರಾಮಿಕ ರೋಗ ನ್ಯಾಯಾಂಗಕ್ಕೂ ಹಬ್ಬುತ್ತಿದೆ. ಪ್ರಶಾಂತ್ ಭೂಷಣ್ ಅವರ ಅಭಿಪ್ರಾಯವನ್ನು ತಪ್ಪು ವ್ಯಾಖ್ಯಾನ ಮಾಡಿ ನ್ಯಾಯಾಂಗ ನಿಂದನೆಗೆ ಗುರಿಪಡಿಸುವುದು ಸರಿಯಲ್ಲ. ಪ್ರಜಾಸತ್ತಾತ್ಮಕ ಟೀಕೆಗಳನ್ನು ಸಹಿಸಿಕೊಳ್ಳಬೇಕು ಎಂದು ಹೇಳಿದರು.…
ತುಮಕೂರು : ಜಿಲ್ಲೆಯಲ್ಲಿ 149 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4557 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 37, ಪಾವಗಡ-31, ಕುಣಿಗಲ್-06, ಮಧುಗಿರಿ-08, ತುರುವೇಕೆರೆ-10, ಶಿರಾ-06, ತಿಪಟೂರು-18, ಗುಬ್ಬಿ-05, ಚಿಕ್ಕನಾಯಕನಹಳ್ಳಿ-24 ಮಂದಿ ಸೇರಿ ತಾಲೂಕಿನಲ್ಲಿ ಒಟ್ಟು 149 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯಿಂದ 149 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 3353 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1061 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 143 ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತುಮಕೂರು: ಅಭಿವೃದ್ಧಿಯ ದೃಷ್ಠಿಯಿಂದ ಸರ್ಕಾರ ತುಮಕೂರಿಗೆ ಸ್ಮಾರ್ಟ್‍ಸಿಟಿಯನ್ನು ಘೋಷಿಸಿದೆ. ಆದರೆ ತುಮಕೂರು ನಗರದ ಹೃದಯ ಭಾಗದ ಅಂತರಸನಹಳ್ಳಿಯಲ್ಲಿ ಕೋಳಿ ಮಾಂಸದ ಕಸದ ರಾಶಿರಾಶಿ ರಸ್ತೆ ಪಕ್ಕ ಬಿದಿದ್ದರೂ ಅಧಿಕಾರಿಗಳು ಮಾತ್ರ ತಮಗೇನೂ ಸಂಬಂಧವಿಲ್ಲವೆಂಬಂತೆ ಸುಮ್ಮನಿರುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಿಂದ ಇತ್ತೀಚೆಗಷ್ಟೇ ನಗರದ ಸಿಟಿ ಮಾರುಕಟ್ಟೆಯಲ್ಲಿ ಜಾಗ ಸಾಕಾಗುವುದಿಲ್ಲ ಎಂದು ತುಮಕೂರು ನಗರದ ಅಂತರಸನಹಳ್ಳಿಯ ಬಳಿಯಿರುವ ವಿಶಾಲವಾದ ಸ್ಥಳಕ್ಕೆ ಮಾರುಕಟ್ಟೆಯನ್ನು ಸ್ಥಳಾಂತರಿಸಿದ್ದರು. ಆದರೆ ಇದೇ ಸ್ಥಳದಲ್ಲಿ ಮಾಂಸದ ತ್ಯಾಜ್ಯವನ್ನು ತಮ್ಮ ಮನಸ್ಸಿಗೆ ಬಂದಂತೆ ರಸ್ತೆಯ ಪಕ್ಕದಲ್ಲಿ ಎಸೆದು ಹೋಗುತ್ತಿದ್ದರೂ ಸಹ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಗಳು ತಮಗೇನೂ ಸಂಬಂಧವಿಲ್ಲದಂತೆ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ. ಅಂತರಸನಹಳ್ಳಿಯ ಬೆಂಗಳೂರು ಮಾರ್ಗದ ಕಡೆಯಿರುವ ಸರ್ವೀಸ್ ರಸ್ತೆಯಲ್ಲಿ ದಿನನಿತ್ಯ ಮಾಂಸದ ತ್ಯಾಜ್ಯವನ್ನು ಎಸೆದು ಹೋಗುತ್ತಿದ್ದಾರೆ. ಇಲ್ಲಿನ ಸ್ಥಳೀಯರು ಎಷ್ಟೋ ಬಾರಿ ಈ ಬಗ್ಗೆ ದೂರುಗಳನ್ನು ನೀಡಿದ್ದರೂ ಸಹ ತಮಗೇನೂ ಸಂಬಂಧವಿಲ್ಲ…
ತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ದಿಮೆದಾರರ ಉದ್ದಿಮೆ ಪರವಾನಗಿ ದರವನ್ನು ಶೇ.5ರಷ್ಟು ಹೆಚ್ಚಳ ಮಾಡಲು ಪಾಲಿಕೆ ಸದಸ್ಯರೆಲ್ಲರೂ ಸಹಮತ ನೀಡಿದರು. ಪಾಲಿಕೆ ಸಭಾಂಗಣದಲ್ಲಿ ನಡೆದ ಕೌನ್ಸಿಲ್ ವಿಶೇಷ ಸಾಮಾನ್ಯ ಸಭೆಯಲ್ಲಿ ಕೋವಿಡ್-19ನಿಂದಾಗಿ ಪಾಲಿಕೆ ವತಿಯಿಂದ ಉದ್ದಿಮೆ ದರಗಳನ್ನು ಶೇ.5ರಷ್ಟು ಹೆಚ್ಚಳ ಮಾಡುವಂತೆ ಆಗ್ರಹಿಸಿದರಲ್ಲದೇ ದಂಡ ಶುಲ್ಕ ಶೇ.30ರಷ್ಟು ಸೀಮಿತಗೊಳಿಸುವಂತೆ ಸದಸ್ಯರೆಲ್ಲರೂ ಒಮ್ಮತ ಸೂಚಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿರುವ ಹಿಂದುಳಿದ ವರ್ಗಕ್ಕೆ ಸೇರಿದ ಮಡಿವಾಳ ಸಮಾಜ ಹಾಗೂ ಸವಿತಾ ಸಮಾಜ ಕಸುಬುಗಳಾದ ಕಟಿಂಗ್ ಶಾಪ್(ಹೇರ್ ಡ್ರೆಸೆಸ್) ಹಾಗೂ ಐರನ್ ಅಂಗಡಿಗಳಿಗೆ(ಲಾಂಡ್ರಿ ಡ್ರೈಕ್ಲಿಂಗ್ ಶಾಫ್) ಪಾಲಿಕೆ ನೀಡುವ ಪರವಾನಗಿ ದರವನ್ನು ಶೇ.50 ರಿಯಾಯಿತಿ ದರದಲ್ಲಿ ಅನ್ವಯವಾಗುವಂತೆ ಉದ್ದಿಮೆ ರಹದಾರಿಯನ್ನು ನೀಡಲು ಸಭೆ ತೀರ್ಮಾನಿಸಿತು. ಅಲ್ಲದೇ ಕಡಿಮೆ ಆದಾಯ ಹೊಂದಿರುವ ಇತರೆ ಸಮುದಾಯದವರಿಗೂ ಕೂಡ ಈ ದರ ಅನ್ವಯವಾಗುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಆಯುಕ್ತರಿಗೆ ಸದಸ್ಯರೆಲ್ಲರೂ ಆಗ್ರಹಿಸಿದರು. …
ತುಮಕೂರು: ತುರುವೇಕೆರೆ ಫ್ಲೆಕ್ಸ್ ಹಾಕಿದ ವಿಚಾರ ಜೆಡಿಎಸ್, ಬಿಜೆಪಿ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ ಹಾಲಿ ಶಾಸಕರು ಮಾಜಿ ಶಾಸಕರು ಮತ್ತು ಪೊಲೀಸರ ಎದುರೇ ನಡೆದಿದೆ. ತುರುವೇಕೆರೆಯ ತಾಲ್ಲೂಕಿನ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಆಗಸ್ಟ್ 30 ಮತ್ತು 31ರಂದು ಹಮ್ಮಿಕೊಂಡಿದ್ದ ಪ್ರತಿಭಟನಾ ಪಾದ ಯಾತ್ರೆಯ ಫ್ಲೆಕ್ಸ್‍ನಲ್ಲಿ ಆಕ್ಷೇಪಣಾರ್ಹ ಪದ ಬಳಸಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ ಹಾಗು ಬಿಜೆಪಿಯ ಹಾಲಿ ಶಾಸಕ ಮಸಾಲೆ ಜಯರಾಮು ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು, ಮಾರಾಮಾರಿ ಗಲಾಟೆ ನಡೆದು ಪರಿಸ್ಥಿತಿ ಕೈಮೀರುವ ಹಂತದಲ್ಲಿದ್ದಾಗ ಪೊಲೀಸರು ಲಾಟಿ ಚಾರ್ಜ್ ಮಾಡಿದ್ದಾರೆ. ಮಾಕಿ ಶಾಸಕೆ ಎಂಟಿ ಕೃಷ್ಣಪ್ಪ ಮತ್ತು ಅವರ ಹಿಂಬಾಲಕರ ಎದುರಿನಲ್ಲಿಯೇ ಹಾಲಿ ಶಾಸಕ ಮಸಾಲೆ ಜಯರಾಮು ತನ್ನ ಬೆಂಬಲಿಗರೊಂದಿಗೆ ಆಗಮಿಸಿ ನಗರದ ರಸ್ತೆಯ ಇಕ್ಕೆಲಗಳಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಪ್ಲೆಕ್ಸ್ ಗಳನ್ನು ತಮ್ಮ ಬೆಂಬಲಿಗರನ್ನು ಬಿಟ್ಟು ಕಿತ್ತುಹಾಕಿಸಿದರು…











