Author: News Desk Benkiyabale

ತುಮಕೂರು:       ಬೆಳಗಾವಿ ತಾಲ್ಲೂಕಿನ ಪೀರನವಾಡಿ ಗ್ರಾಮದಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಪೊಲೀಸರು ದೌರ್ಜನ್ಯದಿಂದ ಸ್ಥಳಾಂತರ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಕುರುಬರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.       ಈ ವೇಳೆ ಮಾತನಾಡಿದ ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ಸುರೇಶ್ ಅವರು, ನಾಡು ಕಂಡ ಅಪ್ರತಿಮ ದೇಶಭಕ್ತ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ಏಕಾಏಕಿ ಪೊಲೀಸರು ಸ್ಥಳಾಂತರ ಮಾಡಿದ್ದಾರೆ, ಇದನ್ನು ವಿರೋಧಿಸಿದ ಸಾರ್ವಜನಿಕರ ಮೇಲೆಯೂ ಹಲ್ಲೆ ಮಾಡಿ, ಪ್ರತಿಮೆಯನ್ನು ಸ್ಥಳಾಂತರ ಮಾಡಿದ್ದಾರೆ, ಇಂದು ದೇಶಭಕ್ತ ಸಂಗೊಳ್ಳಿ ರಾಯಣ್ಣ ಅವರಿಗೆ ಮಾಡಿದ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.       ದೇಶಕ್ಕಾಗಿ ಹೋರಾಡಿದ ಹುತ್ಮಾತ್ಮರನ್ನು ಸ್ಮರಿಸಬೇಕಾಗಿರುವ ಸರ್ಕಾರ ಹಾಗೂ ಅಧಿಕಾರಿಗಳು ಪ್ರತಿಮೆ ಸ್ಥಳಾಂತರ ಮಾಡುವ ಮೂಲಕ ಹುತ್ಮಾತ್ಮರಿಗೆ ಅಗೌರವ ತೋರಿದ್ದಾರೆ, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವನ್ನು ಸರ್ಕಾರ ವಹಿಸಬೇಕಾಗಿದ್ದು, ಪ್ರತಿಮೆ ಸ್ಥಳಾಂತರ ಮಾಡುವಾಗ ಅಗೌರವ ತೋರಿದ…

Read More

ಮಧುಗಿರಿ :       ರಾಜ್ಯದಲ್ಲಿ ನೆರೆ ಹಾವಳಿಯಿಂದ ಜನ ತತ್ತರಿಸುತ್ತಿದ್ದರೆ, ತಾಲ್ಲೂಕಿನ ಗ್ರಾಮವೊಂದರಲ್ಲಿ ಯುಗಾದಿ ಟು ಗಣೇಶ ಚತುರ್ಥಿಯವರೆಗೂ ಗ್ರಾಮಸ್ಥರು ನೀರಿಗಾಗಿ ಜಾತಕ ಪಕ್ಷಿಗಳಂತೆ ಕಾಯುವಂತಾಗಿದೆ.       ತಾಲ್ಲೂಕಿನ ಹಂದ್ರಾಳು ಗ್ರಾಮ ಒಂದು ಕಾಲದಲ್ಲಿ ನೀರಿನಿಂದ ಸಮೃದ್ಧಿಯಾಗಿತ್ತು. ಈ ಗ್ರಾಮವು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಪ್ರತಿನಿಧಿಸುವ ಕೊರಟಗೆರೆ ಕ್ಷೇತ್ರಕ್ಕೆ ಸೇರಿದೆ.       ಲಾಕ್ ಡೌನ್ ಆದ ದಿನದಿಂದ ಗ್ರಾಮದಲ್ಲಿ ಇಲ್ಲಿಯವರೆಗೂ ಶುದ್ಧ ಕುಡಿಯುವ ನೀರಾಗಲಿ, ಕುಡಿಯುವ ನೀರಾಗಲಿ, ಬಳಸುವ ನೀರಿಗಾಗಿ ಅಲೆಯುವಂತಾಗಿದೆ.       ಈ ಗ್ರಾಮದಲ್ಲಿ ಮುನ್ನೂರಕ್ಕೂ ಹೆಚ್ಚು ಕುಟುಂಬಗಳಿದ್ದು, ಎರಡು ಸಾವಿರ ಜನಸಂಖ್ಯೆ ಇದೆ. ಇತ್ತೀಚೆಗೆ ಕೊರೊನಾ ಲಾಕ್‍ಡಾನ್ ನಿಂದಾಗಿ ಬೆಂಗಳೂರಿನಿಂದಲೂ ಸಹಾ ನೂರಾರು ಜನರು ಬಂದು ಗ್ರಾಮ ಸೇರಿದ್ದಾರೆ.        ಕಳೆದ ಆರು ತಿಂಗಳಿಂದ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಅದು ಎರಡು ದಿನಕ್ಕೊಮ್ಮೆ ಬ್ಯಾಲ್ಯ ಗ್ರಾಮ ಪಂಚಾಯಿತಿ ವತಿಯಿಂದ ನೀಡುತ್ತಿದ್ದಾರೆ. ವೃದ್ಧರು,…

Read More

ತುಮಕೂರು :       ಜಿಲ್ಲೆಯಲ್ಲಿ 108 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3578 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 57, ಪಾವಗಡ-5, ಕುಣಿಗಲ್-10, ಮಧುಗಿರಿ-03, ಕೊರಟಗೆರೆ-06, ತುರುವೇಕೆರೆ-09, ಶಿರಾ-03, ತಿಪಟೂರು-09, ಗುಬ್ಬಿ-04, ಚಿಕ್ಕನಾಯಕನಹಳ್ಳಿ-02 ಮಂದಿ ಸೇರಿ ತಾಲೂಕಿನಲ್ಲಿ ಒಟ್ಟು 101 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.        ಜಿಲ್ಲಾಸ್ಪತ್ರೆಯಿಂದ 103 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 2462 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 900 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 108 ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Read More

ಮಧುಗಿರಿ:       ಜೀವನ ನಿರ್ವಹಣೆಗೆ ಉದ್ಯೋಗ ಅರಸಿ ಪಟ್ಟಣಗಳಿಗೆ ವಲಸೆ ಹೋಗಿದ್ದ ಯುವ ಜನತೆ ಕೊರೊನಾ ಎಫೆಕ್ಟ್‍ನಿಂದಾಗಿ ಮತ್ತೆ ತಮ್ಮ ಸ್ವಗ್ರಾಮಗಳಿಗೆ ವಾಪಾಸ್ಸಾಗಿದ್ದು, ಕೃಷಿ ಮತ್ತು ಹೈನುಗಾರಿಕೆಯಲ್ಲಿ ತಮ್ಮ ಜೀವನ ರೂಪಿಸಿಕೊಳ್ಳತೊಡಗಿದ್ದಾರೆ.       ವಾಪಾಸ್ಸಾಗಲು ಹಿಂದೇಟು: ಮಾರ್ಚ್‍ನಲ್ಲಿ ಲಾಕ್‍ಡೌನ್ ಘೋಷಣೆಯಾದ ನಂತರ ಪಟ್ಟಣದಲ್ಲಿ ಉದ್ಯೋಗ ಮಾಡುತ್ತಿದ್ದ ಬಹುತೇಕ ಯುವಕರೆಲ್ಲರೂ ಮತ್ತೆ ತಮ್ಮ ಸ್ವಗ್ರಾಮಗಳಿಗೆ ವಾಪಾಸ್ಸಾಗಿದ್ದು, ಪಟ್ಟಣಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಉದ್ಯೋಗಕ್ಕಾಗಿ ಮತ್ತೆ ಪಟ್ಟಣಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದು, ಗ್ರಾಮಗಳಲ್ಲೇ ಸ್ವಯಂ ಉದ್ಯೋಗ ಆಶ್ರಯಿಸಿದ್ದಾರೆ.        ಹಾಲಿನ ಹೊಳೆ:        ಕೊರೊನಾ ಎಫೆಕ್ಟ್‍ನಿಂದಾಗಿ ಉದ್ಯೋಗ ಕಳೆದುಕೊಂಡ ಯುವಜನತೆ ಕುಟುಂಬ ನಿರ್ವಹಣೆಗಾಗಿ ಕೃಷಿ ಮತ್ತು ಹೈನುಗಾರಿಕೆಯತ್ತ ಹೊರಳಿದ್ದು, ಇದರಿಂದಾಗಿ ತಾಲೂಕಿನಲ್ಲಿ ಕ್ಷೀರಧಾರೆಯೇ ಹರಿಯುತ್ತಿದೆ. ಫೆಬ್ರವರಿ ಮಾಹೆಯಲ್ಲಿ ಲಾಕ್‍ಡೌನ್‍ಗೂ ಮುಂಚೆ ತಾಲೂಕಿನ 153 ಸಂಘಗಳಲ್ಲಿ ಒಟ್ಟು 8409 ಹಾಲು ಉತ್ಪಾದಕ ಸದಸ್ಯರಿದ್ದು, ಪ್ರತೀ ದಿನ 55450 ಲೀಟರ್ ಹಾಲು ಶೇಖರಣೆಯಾಗುತ್ತಿತ್ತು.…

Read More

ಗುಬ್ಬಿ:       ಪಟ್ಟಣದ ಪ್ರಮುಖ ಬಡಾವಣೆಗೆ ಓಡಾಡದಂತೆ ಮುಚ್ಚಿರುವ ರಸ್ತೆ ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡುವುದು ಅಥವಾ ಪರ್ಯಾಯ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ ತಹಸೀಲ್ದಾರ್ ಮತ್ತು ಪಪಂ ಅಧಿಕಾರಿಗಳು ರಸ್ತೆ ವಿವಾದಕ್ಕೆ ತೆರೆ ಎಳೆಯದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಹಾಗೂ ಕೆಲ ಪಪಂ ಸದಸ್ಯರು ದಿಢೀರ್ ಪ್ರತಿಭಟನೆ ನಡೆಸಿದರು.       ಪಟ್ಟಣದ ನಾಗಲಿಂಗೇಶ್ವರ ದೇವಾಲಯದ ಸಮೀಪದಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆ ಹೊಸ ಬಡಾವಣೆಯಲ್ಲಿ ನಿರ್ಮಿಸಲಾದ ರಸ್ತೆಯು ಇದು ನಮ್ಮ ಖಾಸಗಿ ಆಸ್ತಿ ಎಂದು ಒಂದು ಕುಟುಂಬದ ಸಹೋದರರು ಸಾರ್ವಜನಿಕ ರಸ್ತೆ ಮುಚ್ಚಿದ್ದಾರೆ ಎಂದು ಕಳೆದ 15 ದಿನಗಳ ಹಿಂದೆ ವಾದವಿವಾದಗಳು ನಡೆದಿತ್ತು. ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡುವುದಾಗಿ ಸಮಸ್ಯೆ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ ಮತ್ತು ಪಪಂ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಒಂದು ವಾರದಲ್ಲಿ ಇತ್ಯರ್ಥ ಮಾಡುವ ಭರವಸೆ ನೀಡಿದ್ದರು. 15 ದಿನಗಳು ಕಳೆದರೂ ಸಾರ್ವಜನಿಕ ರಸ್ತೆಗೆ ಇದ್ದ…

Read More

ಕೊರಟಗೆರೆ:       ಸರ್ಕಾರ ಆಟೋ ಚಾಲಕರಿಗೆ ಸರ್ಕಾರ ಘೋಷಿಸಿರುವಂತಹ 5 ಸಾವಿರ ಹಣ ಹಲವರಿಗೆ ನಾನಾ ತಾಂತ್ರಿಕ ಕಾರಣಗಳಿಂದ ಅರ್ಹರಿಗೆ ತಲುಪಿಲ್ಲ ಸರ್ಕಾದೊಂದಿಗೆ ಚರ್ಚಿಸಿ ಎಲ್ಲರಿಗೂ ದೊರೆಯುವಂತೆ ಮಾಡಲು ಪ್ರಯತ್ನಿಸುತ್ತೇನೆ ಹಾಗೂ ಮುಖಂಡ ಮುನಿಯಪ್ಪ ಚಾಲಕರಿಗೆ ಸಮವಸ್ತ್ರ ನೀಡುತ್ತಿರುವು ಶ್ಲಘನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ತಿಳಿಸಿದರು.       ತಾಲ್ಲೂಕಿನಲ್ಲಿನ ಹಿರಿಯ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಮುಖಂಡ ಮುನಿಯಪ್ಪ ನೇತೃತ್ವದಲ್ಲಿ ಸನ್ಮಾನ ಮತ್ತು ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾವೆಲ್ಲರೂ ಸ್ವತಂತ್ರ ಭಾರದಲ್ಲಿ ಇದ್ದೇವೆ ಅಂಬೇಡ್ಕರ್ ಕಂಡ ಕನಸ್ಸನ್ನು ನನಸು ಮಾಡುವಂತಹ ಹೊಣೆ ನಮ್ಮೆಲ್ಲರದೂ ಹಿಂದುಳಿದ ವರ್ಗಗಳು ಕೇವಲ ರಾಜಕಾರಣದಲ್ಲಿ ಮುಂದೆ ಬಂದಿದ್ದಾರೆ ಆದರೆ ಇನ್ನೂ ಶೈಕ್ಷಣಿಕಾಗಿ, ಆರ್ಥಿಕವಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಲುಪುವಂತಾಗಬೇಕು ಎಂದರು. ಧರ್ಮದ ಆಧಾರ ವಿಭಜನೆ:       ದೇಶಕ್ಕೆ ಸ್ವತಂತ್ರ ನೀಡುವಂತಹ ಸಂದಭದಲ್ಲಿ ಧರ್ಮದ ಆಧಾರದ ಮೇಲೆ ನೀಡಲಾಯಿತು ಬ್ರಿಟೀಷರ ಕಪಿಮುಷ್ಠಿಯಿಂದ ದೇಶವನ್ನು…

Read More

ಮಧುಗಿರಿ:       ಗ್ರಾಮ ಸಹಾಯಕರ ಕಷ್ಟ-ಸುಖಗಳಿಗೆ ಸ್ಪಂಧಿಸುವುದು ನಮ್ಮ ನಿಮ್ಮೆಲ್ಲಾರ ಆದ್ಯ ಕರ್ತವ್ಯವಾಗಿದೆ ಎಂದು ಕ್ರಿಬ್ಕೋ ನಿರ್ದೇಶಕ ಹಾಗೂ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ ತಿಳಿಸಿದರು.        ಪಟ್ಟಣದ ಎಪಿಎಂಸಿ ಹಿಂಭಾಗದಲ್ಲಿನ ಅವರ ಸ್ವ ಗೃಹದಲ್ಲಿ ಕೆ.ಎನ್.ಆರ್. ಹಾಗೂ ಆರ್.ಆರ್. ಅಭಿಮಾನಿ ಬಳಗದ ವತಿಯಿಂದ ತಾಲ್ಲೂಕಿನ ಹೋಬಳಿಗಳ ಕಂದಾಯ ಇಲಾಖೆಯ ಗ್ರಾಮ ಸಹಾಯಕರಿಗೆ ಆಹಾರದ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು. ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಗ್ರಾಮ ಸಹಾಯಕರ ಕೊಡುಗೆ ಅನನ್ಯವಾಗಿದೆ. ಗ್ರಾಮ ಸಹಾಯಕರನ್ನ ಡಿ ಗ್ರೂಫ್ ನೌಕರರೆಂದು ಪರಿಗಣಿಸ ಬೇಕೆಂದು ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಆಡಳಿತಾವಧಿಯ ವಿಧಾನ ಸಭೆಯಲ್ಲಿ ಚರ್ಚಿಸುವಲ್ಲಿ ಕೆ.ಎನ್.ರಾಜಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು.       ಕಾಲ ಕ್ರಮೇಣ ಬದಲಾದ ರಾಜಕೀಯ ಸನ್ನೀವೇಶದಿಂದಾಗಿ ಅವರ ಜ್ವಲಂತ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಮುಂದಿನ ದಿನಗಳಲ್ಲಿ ಮಾಜಿ ಶಾಸಕರ ಮುಖಾಂತರ ಹಾಗೂ ಸಂಭಂಧಪಟ್ಟ ಮೇಲಾಧಿಕಾರಿಗಳ ಬಳಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ…

Read More

ಹುಳಿಯಾರು:       ಹುಳಿಯಾರಿನ ವಿವಿಧ ಕೃಷಿ ಪರಿಕರ ಮಾರಾಟಗಾರರ ಅಂಗಡಿಗಳಿಗೆ ತುಮಕೂರಿನ ಉಪ ಕೃಷಿ ನಿರ್ದೇಶಕರಾದ ಡಿ.ಉಮೇಶ್ ನೇತೃತ್ವದ ತಂಡ ಅನಿರೀಕ್ಷಿತ ದಾಳಿ ನಡೆಸಿ ಪರವಾನಗಿ, ಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನಿನ ಪರಿಶೀಲನೆ ನಡೆಸಿತು.        ಬಿತ್ತನೆ ಸಮಯದಲ್ಲಿ ರೈತರಿಂದ ಬೇಡಿಕೆ ಹೆಚ್ಚಾದ ಸಮಯದಲ್ಲಿ ಸರಕಾರ ಫಿಕ್ಸ್ ಮಾಡಿದ ಎಂಆರ್‍ಪಿ ದರದಲ್ಲಿ ಬೀಜ ಹಾಗೂ ಗೊಬ್ಬರ ಮಾರಾಟ ಮಾಡಬೇಕು ಹಾಗೊಂದು ವೇಳೆ ಗೊಬ್ಬರದ ಕೃತಕ ಅಭಾವ ಸೃಷ್ಟಿಸಲು ಪ್ರಯತ್ನ ಮಾಡುವುದು, ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಮತ್ತು ಲಿಂಕ್ ಮಾಡುವುದು ಕಂಡು ಬಂದರೆ ಶಿಸ್ತು ಕ್ರಮಕೈಗೊಳ್ಳಲಾಗುವುದೆಂದು ಪರಿಶೀಲನೆ ವೇಳೆ ವ್ಯತ್ಯಾಸ ಹಾಗೂ ನಕಲಿ ಬೀಜ ಮಾರಾಟ ಕಂಡು ಬಂದಲ್ಲಿ ಮುಲಾಜಿಲ್ಲದೆ ನೋಟಿಸ್ ನೀಡಿ ಅಂಗಡಿ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಎಲ್ಲಾ ಮಾರಾಟಗಾರರಿಗೂ ಎಚ್ಚರಿಕೆ ನೀಡಿದರು.       ತಾಲ್ಲೂಕಿನಲ್ಲಿ ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜ ಅಧಿನಿಯಮದಡಿ ಯಾವುದೇ ಕೃಷಿ ಪರಿಕರ…

Read More

ತುಮಕೂರು :       ಜಿಲ್ಲೆಯಲ್ಲಿ 50 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3470 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 14, ಪಾವಗಡ-11, ಕುಣಿಗಲ್-01, ಮಧುಗಿರಿ-03, ಕೊರಟಗೆರೆ-01, ತುರುವೇಕೆರೆ-02, ಶಿರಾ-01, ತಿಪಟೂರು-03, ಗುಬ್ಬಿ-05, ಚಿಕ್ಕನಾಯಕನಹಳ್ಳಿ-09 ಮಂದಿ ಸೇರಿ ತಾಲೂಕಿನಲ್ಲಿ ಒಟ್ಟು 101 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.        ಜಿಲ್ಲಾಸ್ಪತ್ರೆಯಿಂದ 103 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 2462 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 900 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 108 ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Read More

ತುಮಕೂರು:       ಜಿಲ್ಲೆಯ ಪಾವಗಡ ತಾಲ್ಲೂಕು ವೈ ಎನ್ ಹೊಸಕೋಟೆ ಪೊಲೀಸ್ ಠಾಣೆಯ ಎಸ್ಪಿ ಕಾನ್ಸ್ಟೇಬಲ್‍ರನ್ನುಪೊಲಿಸ್ ಠಾಣೆಯ ಮುಂದೆಯೇ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ನಿನ್ನೆ ರಾತ್ರಿ 7:30 ರ ಸಮಯದಲ್ಲಿ ನಡೆದಿದೆ.       ಠಾಣೆಯ ಸಬ್‍ಇನ್ಸ್ಪೆಕ್ಟರ್ ರಾಮಯ್ಯ ರವರಿಗೆ ಕರೋನಾ ಸೋಂಕು ಪಾಸಿಟಿವ್ ಆಗಿದ್ದರಿಂದ ಕ್ವಾರಂಟೈನ್‍ನಲ್ಲಿ ಇದ್ದಾರೆ. ಇಲ್ಲಿನ ಪೊಲೀಸ್ ಸಿಬ್ಬಂದಿಯೂ ಸಹ ಹೋಮ್‍ಕ್ವಾರೇಂಟೈನ್ ಮುಗಿಸಿ ನಿನ್ನೆಯಷ್ಟೇ ಕೆಲಸಕ್ಕೆ ಹಾಜರಾಗಿದ್ದರು .       ಆಂಧ್ರಪ್ರದೇಶ ದಿಂದ ಜನರು ವೈ ಎನ್ ಹೊಸಕೋಟೆಯ ಮದ್ಯದಂಗಡಿಗಳಿಗೆ ಬಂದು ಮದ್ಯ ಸೇವನೆಯನ್ನು ಮಾಡುತ್ತಿದ್ದಾರೆ .ಮದ್ಯದಂಗಡಿಗಳ ಮುಂದೆ ಜನಸಂದಣಿ ಇದೆ, ರಸ್ತೆಯಲ್ಲಿ ಓಡಾಡುವ ಜನರಿಗೆ ಕಿರಿಕಿರಿಯಾಗುತ್ತಿದೆ ಇದರಿಂದ ಸಾರ್ವಜನಿಕ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ಸಾರ್ವಜನಿಕರು ದೂರಿದ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ .       ಮದ್ಯದಂಗಡಿಗಳ ಮುಂದೆ ಇರುವ ಕಿರಿದಾದ ದಾರಿಯಲ್ಲಿ ಜನಸಂದಣಿ ಹೆಚ್ಚಿದ್ದರಿಂದ ದ್ವಿಚಕ್ರ ವಾಹನಗಳಲ್ಲಿ ವೇಗವಾಗಿ ಓಡಾಡುವವರನ್ನು ತಡೆದು…

Read More