Author: News Desk Benkiyabale

ಹುಳಿಯಾರು: ವಾರದ ಸಂತೆಗೆ ಮೂಲ ಸೌಕರ್ಯ ಕೊಡುವವರೆವಿಗೂ ಸುಂಕ ಸಂಗ್ರಹಿಸಬಾರದೆAದು ತಿಳಿಸಿದ್ದರೂ ಸಹ ದೌರ್ಜನ್ಯದಿಂದ ಸುಂಕ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿ ಧರಣಿ ಸ್ಥಳದಿಂದ ರೈತರು ವಾರದ ಸಂತೆಗೆ ತೆರಳಿ ವಸೂಲಿಗಾರ ಶಿವಣ್ಣನನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು ಘಟನೆ ಗುರುವಾರ ನಡೆಯಿತು. ಕಳೆದ ವಾರ ಅಹೋರಾತ್ರಿ ಧರಣಿ ನಡೆಸುತ್ತಿದ್ದಾಗ ತಹಸೀಲ್ದಾರ್ ಕೆ.ಪುರಂದರ ಹಾಗೂ ಪೌರಾಡಳಿತ ಇಲಾಖೆಯ ಪಿಡಿ ಯೋಗಾನಂದ ಅವರು ಮುಂದಿನ ವಾರ ನೀರಿನ ವ್ಯವಸ್ಥೆ, ನಂತರ ಶೌಚಾಲಯ ವ್ಯವಸ್ಥೆ ಕಲ್ಪಿಸುವ ಮತ್ತು ಸಂತೆ ಸ್ಥಳಾಂತರಿಸುವ ಬಗ್ಗೆ ಭರವಸೆ ನೀಡಿದ್ದರು. ಆಗ ಧರಣಿ ಹಿಂಪಡೆಯುವಾಗಲೂ ಸಹ ಮೂಲ ಸೌಕರ್ಯ ಕಲ್ಪಿಸದಿದ್ದರೆ ಸುಂಕ ಕಟ್ಟುವುದಿಲ್ಲ ವೆಂದು ತಿಳಿಸಿದ್ದೇವೆ. ಅವರೂ ಸಹ ಒಪ್ಪಿದ್ದರು. ಆದರೆ ಈಗ ಏಕಾಏಕಿ ಬಲವಂತದಿAದ ಸುಂಕ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಸುಂಕ ಸಂಗ್ರಹ ಗುತ್ತಿಗೆದಾರ ಶಿವಣ್ಣ ನಾನು ಹರಾಜು ಕೂಗಿಕೊಂಡಿದ್ದು ಪಂಚಾಯ್ತಿಗೆ ಮುಂಗಡ ಹಣ ಕಟ್ಟಿದ್ದೇನೆ. ನನ್ನ ಹಣ ವಾಪಸ್ ಕೊಡಿಸಿ ಇಲ್ಲ ವಸೂಲಿಗೆ ಅವಕಾಶ ಕೊಡಿ ಎಂದು ರೈತರನ್ನು…

Read More

ತುಮಕೂರು: ನಗರದ ವಿವೇಕಾನಂದ ಕ್ರೀಡಾ ಸಂಸ್ಥೆ ಹಾಗೂ ರಾಜ್ಯ ಖೋ ಖೋ ಸಂಸ್ಥೆ ಆಶ್ರಯದಲ್ಲಿ ಇಂದಿನಿ0ದ ಎರೆಡು ದಿನಗಳ ಕಾಲ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದ ಎರಡು ಅಂಕಣದಲ್ಲಿ ರಾಜ್ಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಖೋ ಖೋ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ವಿವೇಕಾನಂದ ಕ್ರೀಡಾ ಸಂಸ್ಥೆ ಅಧ್ಯಕ್ಷ ಹೆಚ್.ಡಿ.ಕುಮಾರ್ ಅವರು ಗುರುವಾರ ಮೈದಾ ನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡಿರುವ ಹೆಸರಾಂತ ಖೋ ಖೋ ಆಟಗಾ ರರು ಒಳಗೊಂಡ ತಂಡಗಳು ಹಗಲು ಹಾಗೂ ಹೊನಲುಬೆಳಕಿನ ಪಂದ್ಯಾವಳಿಯಲ್ಲಿ ಭಾಗವ ಹಿಸಲಿವೆ. ಪುರುಷರ ೧೩ ಹಾಗೂ ಮಹಿಳೆಯರ ೮ ತಂಡಗಳು ಸೆಣೆಸಾಡುವ ರೋಚಕ ಖೋ ಖೋ ಪಂದ್ಯಾವಳಿಯನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬೇಕು ಎಂದು ಮನವಿ ಮಾಡಿದರು. ಇದೇ ೧೦ರಂದು ಸಂಜೆ ೬ ಗಂಟೆಗೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳ ದಿವ್ಯಸಾನಿಧ್ಯದ ಸಮಾರಂಭದಲ್ಲಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಖೋ ಖೋ ಪಂದ್ಯಾವಳಿ ಉದ್ಘಾಟಿಸುವರು. ರಾಜ್ಯ…

Read More

ತುಮಕೂರು: ಇತ್ತೀಚೆಗೆ ವಕೀಲರೊಬ್ಬರು ದೇಶದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿರುವ ಪ್ರಕರಣಕ್ಕೆ ಸಂಬAಧಿಸಿದ0ತೆ ಭಾರತದಾದ್ಯಂತ ಸಾರ್ವಜನಿಕವಾಗಿ ಗಂಭೀರ ಚರ್ಚೆಗಳು ನಡೆಯುತ್ತಿವೆ ಜೊತೆಗೆ ಸಾರ್ವಜನಿಕ ಅವಮಾನ ಮತ್ತು ಭದ್ರತಾ ಉಲ್ಲಂಘನೆ ಆಗಿರುವುದು ಸಹ ಕಂಡು ಬಂದಿದೆ ಎಂದು ತುಮಕೂರು ಜಿಲ್ಲಾ ಛಲವಾದಿ ಮಹಾಸಭಾ ರಿ., ವತಿಯಿಂದ ಆಕ್ರೋಶವನ್ನು ಹೊರ ಹಾಕಲಾಗಿದೆ. ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಕೃತ ಘಟನೆಯೊಂದು ಜರುಗಿದೆ. ಮುಖ್ಯ ನ್ಯಾಯಮೂರ್ತಿಗಳಾದ ಶ್ರೀಮಾನ್ ಬಿ.ಆರ್.ಗವಾಯಿ ಅವರಿಗೆ ರಾಕೇಶ್ ಕಿಶೋರ್ ಎಂಬ ಮತಾಂಧ ವಕೀಲನೊಬ್ಬ ತನ್ನ ಕಾಲಿನಿಂದ ಶೂ ಕಳಚಿ ನ್ಯಾಯಮೂರ್ತಿಗಳತ್ತ ತೂರಲು ಹವಣಿಸಿದ್ದಾನೆ. ಕಳೆದ ಒಂದು ತಿಂಗಳಿನಿ0ದ ಬಿ.ಆರ್.ಗವಾಯಿಯವರ ಸುತ್ತ ನಡೆದ ಕೆಲವು ಸಂಗತಿಗಳನ್ನು ಗಮನಿಸಿದರೆ ಇದೊಂದು ಸಂಘಟಿತ ಹಿಂಸೆಯ ಅನುಷ್ಠಾನ ಎಂಬುದು ಮನದಟ್ಟಾಗುತ್ತದೆ. ಮಹಾರಾಷ್ಟçಕ್ಕೆ ಗವಾಯಿಯವರು ಭೇಟಿ ಕೊಟ್ಟಾಗ ಅಲ್ಲಿ ಅವರಿಗೆ ಸಲ್ಲಬೇಕಾದ ಗೌರವ ಸಂದಿರಲಿಲ್ಲ. ಶಿಷ್ಟಾಚಾರ ಉಲ್ಲಂಘನೆಯಾಗಿದ್ದರಿ0ದ ಸ್ವತಃ ಅವರೆ ಬೇಸರ ತಳೆದಿದ್ದರು. ನ್ಯಾಯಮೂರ್ತಿಗಳ ತಾಯಿ ಕಮಲಾತಾಯಿಯವರಿಗೆ ಸಂಘಟನೆಯೊAದರ ಕಾರ್ಯಕ್ರಮಕ್ಕೆ ಆಹ್ವಾನ ಬಂದದ್ದು,…

Read More

ಹುಳಿಯಾರು: ಸಂತೆ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ವಿರೋಧಿಸಿ ರೈತ ಸಂಘವು ಗುರುವಾರದಿಂದ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ, ಹುಳಿಯಾರಿನ ಬಸವೇಶ್ವರನಗರ ಕಲ್ಯಾಣ ಮಂಟಪ ದಲ್ಲಿ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸAಸ್ಥೆಗಳ ಮುಖಂಡರ ತುರ್ತು ಸಭೆ ನಡೆಯಿತು. ಸಭೆ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಮಾತನಾಡಿ ಹಾಲಿ ನಡೆಯುತ್ತಿರುವ ಸಂತೆ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳಾದ ನೆರಳು, ನೀರಿನ ವ್ಯವಸ್ಥೆ ಮತ್ತು ಶೌಚಾಲಯಗಳ ಕೊರತೆ ಇದೆ. ಮೂಲ ಸೌಕರ್ಯ ಕಲ್ಪಿಸದೆ ಮರ‍್ನಲ್ಕು ದಶಕಗಳಿಂದ ಸಂಗ್ರಹಿಸಿರುವ ಸುಂಕ ಏನಾಗಿದೆ. ಮುಂದಿನ ದಿನಗಳಲ್ಲಿ ಇದರ ಲೆಕ್ಕ ಕೊಡಿ ಚಳುವಳಿ ಸಹ ಮಾಡಬೇಕಾಗುತ್ತದೆ. ಹಾಗಾಗಿ ವಾರದ ಸಂತೆ ಸ್ಥಳ ಸ್ಥಳಾಂತರಿಸಿ, ಇಲ್ಲವಾದಲ್ಲಿ ಮೂಲ ಸೌಕರ್ಯ ಕಲ್ಪಿಸದೆ ಸುಂಕ ವಸೂಲಿ ಮಾಡಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರೈತ ಸಂಘದ ಹುಳಿಯಾರು ಹೋಬಳಿ ಅಧ್ಯಕ್ಷ ಕೆಂಕೆರೆ ಬಸವರಾಜು ಮಾತನಾಡಿ ಹಾಲಿ ಸ್ಥಳದಲ್ಲಿ ಸೌಕರ್ಯಗಳಿಲ್ಲ. ಹಿರಿಯೂರಿಗೆ ಹೋಗುವ ಮಾರ್ಗ ಗೂಗಲ್ ಆಪ್ ಹಾಕಿಕೊಂಡಲ್ಲಿ ಸಂತೆಯ ಸ್ಥಳವನ್ನು ತೋರಿಸುತ್ತದೆ.…

Read More

ತುಮಕೂರು: ನಗರದ ಶ್ರೀ ಸಿದ್ಧರ‍್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ವ್ಯಾಪ್ತಿಯ ಶ್ರೀ ಸಿದ್ಧರ‍್ಥ ವೈದ್ಯಕೀಯ ಕಾಲೇಜಿನ ಔಷಧಶಾಸ್ತ್ರ ಮತ್ತು ಔಷಧ ಪ್ರತಿರೋಧ ಪರಿಣಾಮ ಮೇಲ್ವಿಚಾರಣಾ ಕೇಂದ್ರ ವಿಭಾಗದ ಆಶ್ರಯದಲ್ಲಿ ರೋಗಿಗಳ ಸುರಕ್ಷತೆ ಮತ್ತು ಔಷಧಿಗಳಿಂದಾಗುವ ಪರಿಣಾಮದ ಪ್ರತಿಕ್ರಿಯೆಗಳು ಬಗ್ಗೆ ಜಾಗೃತಿ ಮೂಡಿಸುವ ೫ ನೇ ರಾಷ್ಟ್ರೀಯ ಔಷಧ ಜಾಗೃತಿ ಸಪ್ತಾಹವನ್ನು ಇತ್ತೀಚಿಗೆ ಯಶಸ್ವಿಯಾಗಿ ಆಚರಿಸಲಾಯಿತು. ಅಗಲಕೋಟೆಯಲ್ಲಿಯಲ್ಲಿರು ವೈದ್ಯಕೀಯ ಕಾಲೇಜಿನ ಕ್ಯಾಂಪಸ್ ನಲ್ಲಿ ರ‍್ಪಟ್ಟ ಕರ‍್ಯಕ್ರಮವನ್ನು ಪ್ರಾಂಶುಪಾಲರಾದ ಡಾ. ಎಂ.ಬಿ. ಸಾನಿಕೋಪ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರ ರೋಗಿಗಳ ಸುರಕ್ಷತೆ, ರ‍್ಕಬದ್ಧವಾಗಿ ಔಷಧಿಗಳನ್ನು ಬಳಕೆ ಮಾಡಬೇಕು ಮತ್ತು ಸಮುದಾಯದಲ್ಲಿ ಔಷಧ ಬಳಕೆಯ ತಪಾಸಣೆಯನ್ನು ಬಲಪಡಿಸುವಲ್ಲಿ ತನ್ನ ಬದ್ಧತೆಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ತಂಡ ಮಾಡಬೇಕೆಂದು ಕರೆ ನೀಡಿದರು . ಉಪ ಪ್ರಾಂಶುಪಾಲರಾದ ಡಾ. ಪ್ರಭಾಕರ ಜಿ.ಎನ್, ವೈದ್ಯಕೀಯ ಅಧೀಕ್ಷಕರಾದ ಡಾ. ವೆಂಕಟೇಶ್ ಮತ್ತು ಡಾ. ರಾಜೇಶ್ವರಿ ದೇವಿ, ಸಿಎಒ ಡಾ. ಕಿರಣ್ ಕುಮಾರ್ , ಫರ‍್ಮಕಾಲಜಿ ವಿಭಾಗದ ಮುಖ್ಯಸ್ಥರಾದ ಪ್ರೊ.…

Read More

 ತುಮಕೂರು: ಕಾರ್ಮಿಕ ಸಂಘಟನೆಗಳು ಒಗ್ಗಟ್ಟಾಗಿದ್ದಾಗ ಮಾತ್ರ ಸವಾಲುಗಳನ್ನು ಎದುರಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಕರೆ ನೀಡಿದರು. ನಗರದ ಹೊರವಲಯದಲ್ಲಿರುವ ಶ್ರೀ ಹೆಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ “ತುಮಕೂರು ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕ ಸಂಘಟನೆಗಳು ಸಾಮರಸ್ಯದಿಂದ ಒಗ್ಗಟ್ಟಾಗಿರಬೇಕು. ಯಾವುದೇ ಸಂಘಟನೆಗಳು ರಾಜಕೀಯ ಪ್ರವೇಶ ಮಾಡಬಾರದು. ಇದರಿಂದ ಸಂಘಟನೆಗಳ ನಡುವೆ ಒಡಕುಂಟಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು. ರಾಜ್ಯದಲ್ಲಿ ಹಲವಾರು ಪ್ರಥಮಗಳು : ರಾಜ್ಯದ ಕಾರ್ಮಿಕ ಸಚಿವರಾಗಿ ಸಂತೋಷ್ ಎಸ್. ಲಾಡ್ ಅವರು ಅಧಿಕಾರವಹಿಸಿಕೊಂಡ ಮೇಲೆ ಕಾರ್ಮಿಕ ವಲಯದಲ್ಲಿ ರಾಜ್ಯ ಗಿಗ್ ಕಾರ್ಮಿಕರ ಯೋಜನೆ, ಆಶಾ ದೀಪ ಯೋಜನೆ, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಸೇರಿದಂತೆ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲಿಯೇ ಹಲವಾರು ಪ್ರಥಮಗಳಿಗೆ…

Read More

ತುಮಕೂರ: ತುಮಕೂರು ನಗರವು ರಾಜ್ಯದ ಪ್ರಮುಖ ಕೈಗಾರಿಕಾ ಹಾಗೂ ಶಿಕ್ಷಣ ಕೇಂದ್ರವಾಗಿದ್ದು, ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಪ್ರಮುಖ ಮಾರ್ಗವಾಗಿದೆ. ಈ ಹಿನ್ನೆಲೆಯಲ್ಲಿ ನೆಲಮಂಗಲದಿದ ತುಮಕೂರು ಬೈಪಾಸ್ ರಸ್ತೆವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ-೪೮ ಕಾಮಗಾರಿಯನ್ನು ೨೦೨೬ರ ಮಾರ್ಚ್ ಮಾಹೆಯೊಳಗೆ ಪೂರ್ಣಗೊಳಿಸಬೇಕೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಅನೂಪ್ ಶರ್ಮಾ ಅವರಿಗೆ ಸೂಚನೆ ನೀಡಿದರು. ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಹೆದ್ದಾರಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ನೆಲಮಂಗಲ-ತುಮಕೂರು ಮಾರ್ಗದ ರಾ.ಹೆ.-೪೮ರಲ್ಲಿ ೪೫ ಕಿಲೋ ಮೀಟರ್ ಉದ್ದದ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಕಾಮಗಾರಿಯನ್ನು ಚುರುಕುಗೊಳಿಸಬೇಕು ಎಂದು ನಿರ್ದೇಶನ ನೀಡಿದರು. ನಗರ ವ್ಯಾಪ್ತಿಗೆ ಸಂಬ0ಧಿಸಿದ0ತೆ ಸುಮಾರು ೧೯ ಕಿಲೋ ಮೀಟರ್ ಉದ್ದದರಾಷ್ಟ್ರೀಯ ಹೆದ್ದಾರಿಯು ೧೬ ಹಳ್ಳಿಗಳ ಮೂಲಕ ಹಾದು ಹೋಗಲಿದೆ. ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದ0ತೆ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು…

Read More

ತುಮಕೂರು: ನಗರದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿವತಿಯಿಂದ ರಾಜ್ಯ ಮತ್ತು ಕೇಂದ್ರದ ಅವೈಜ್ಞಾನಿಕ ಬಿಪಿಎಲ್ ಪಡಿತರ ಕಾರ್ಡ್ಗಳ ರದ್ದತಿ ಖಂಡಿಸಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ಸಚಿವರಿಗೆ ಜಿಲ್ಲಾಧಿಕಾರಿಗಳ ಮುಕಾಂತರ ಮನವಿ ಸಲ್ಲಿಸಲಾಯಿತು. ಬಿಪಿಎಲ್ ಕಾರ್ಡ್ಗೆ ನಿಗಧಿಗೊಳಿಸಿರುವ ಆದಾಯ ಪ್ರಮಾಣವನ್ನು ಪುನರ್ ಅವಲೋಕಿಸಿ- ಎ.ನರಸಿಂಹಮೂರ್ತಿ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ರಾಜ್ಯ ಸರ್ಕಾರ ಪಡಿತರ ಚೀಟಿ ದಾರರಿಗೆ ಮಾನದಂಡವನ್ನು ನಿಗಧಿ ಮಾಡಿದೆ ಇದು ಬಡಜನವಿರೋಧಿ ನೀತಿಯಾಗಿದ್ದು, ಹಿಂದಿನ ಸರ್ಕಾರಗಳು ನೀತಿ ಆಯೋಗದ ಆದೇಶದಂತೆ ರಾಜ್ಯ ಸರ್ಕಾರ ನಡೆಯುತ್ತಿರುವುದನ್ನು ನೋಡುತ್ತಿದ್ದೆವೆ. ಹಿಂದಿನ ನೀತಿ ಆಯೋಗದ ನಿರ್ಧಾರವನ್ನು ರಾಜ್ಯದ ಕಾಂಗ್ರೇಸ್ ಸರ್ಕಾರ ಅನುಷ್ಠಾನ ಮಾಡುತ್ತಿದೆ, ೨೦೨೩ ರಲ್ಲಿ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆಯಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಭರವಸೆಯನ್ನು ನೀಡಿತ್ತು, ಅದರ ಪ್ರಕಾರ ಅನ್ನಭಾಗ್ಯ ಯೋಜನೆಯನ್ನು ನೀಡುತ್ತೇವೆ ಎಂದು…

Read More

ಹುಳಿಯಾರು: ಹುಳಿಯಾರಿನ ಪಶು ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ನಡೆಯುತ್ತಿರುವ ವಾರದ ಸಂತೆ ಸ್ಥಳಾಂತರ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ವಿಚಾರವಾಗಿ ಅಧಿಕಾರಿಗಳು ಕೊಟ್ಟ ಮಾತಿನಂತೆ ಬುಧವಾರದೊಳಗೆ ನಡೆದುಕೊಳ್ಳದಿದ್ದರೆ ಗುರುವಾರ ಮತ್ತೆ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಎಚ್ಚರಿಕೆ ನೀಡಿದ್ದಾರೆ. ಹುಳಿಯಾರಿನ ಪಟ್ಟಣ ಪಂಚಾಯ್ತಿ ಬಳಿ ಸೋಮವಾರ ಸಭೆ ನಡೆಸಿದ ಹೊಸಹಳ್ಳಿ ಚಂದ್ರಣ್ಣ ಬಣದ ರೈತರು ಅಧಿಕಾರಿಗಳು ಪದೇಪದೇ ರೈತರ ವಿಚಾರವಾಗಿ ಮಾತು ತಪ್ಪುತ್ತಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯ್ತಿಯವರು ರಸ್ತೆ ಬದಿಯಲ್ಲಿ ವಾರದ ಸಂತೆ ಮಾಡುತ್ತಿರುವ ರೈತರು ಮತ್ತು ವರ್ತಕರಿಂದ ಎರಡ್ಮೂರು ದಶಕಗಳಿಂದಲೂ ಸುಂಕ ವಸೂಲಿ ಮಾಡುತ್ತಿದ್ದಾರೆ. ವಾರ್ಷಿಕ ಕನಿಷ್ಟ ೨ ಲಕ್ಷ ರೂ. ಎಂದರೂ ಇಲ್ಲಿಯವರೆವಿಗೆ ಅರ್ಧ ಕೋಟಿ ಗೂ ಹೆಚ್ಚು ಹಣ ಸಂಗ್ರಹ ಮಾಡಿದ್ದಾರೆ. ಆದರೆ ಸುಂಕ ವಸೂಲಿಗೆ ಪ್ರತಿಯಾಗಿ ಒಂದೇ ಒಂದು ಲೋಟ ನೀರು ಕೊಟ್ಟಿಲ್ಲ ಎಂದರು ಆರೋಪಿಸಿದರು. ಸುಂಕ ಸಂಗ್ರಹದ ಗುತ್ತಿಗೆ ನೀಡುವ ಹರಾಜು ಸಂದರ್ಭದಲ್ಲಿ…

Read More

ತುಮಕೂರು: ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸುತ್ತಿರುವ ಸಾಮಾಜಿ, ಅರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ವಿರೋಧಿಸುತ್ತಿದ್ದು, ಇದನ್ನು ಜಾಗೃತ ಕರ್ನಾಟಕ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಜಾಗೃತ ಕರ್ನಾಟಕದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅನಿಲ್ ಕುಮಾರ್ ಚಿಕ್ಕದಾಳವಾಟ ತಿಳಿಸಿದರು. ತುಮಕೂರು ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೦೩ರ ಮಿಲ್ಲರ್ ಆಯೋಗದಿಂದ ಹಿಡಿದು, ನ್ಯಾ.ಕಾಂತರಾಜು ಆಯೋಗದ ವರದಿಯವರೆಗೆ ಮುಂದುವರೆದು, ಈಗಲೂ ಸಹ ವರದಿ ಸರಿಯಾಗಿ ನಡೆದಿಲ್ಲ ಎಂಬ ನೆಪವೊಡ್ಡಿ ವರದಿಯ ಶಿಫಾರಸ್ಸುಗಳನ್ನು ವಿರೋಧಿಸಲು ಕೆಲ ಪಕ್ಷಗಳ ಮುಖಂಡರುಗಳು ಸಂಚು ರೂಪಿಸುತ್ತಿದ್ದಾರೆ. ಇವರಿಗೆ ಸಂಪತ್ತಿನ ಸಮಾನ ಹಂಚಿಕೆ ಆಗುವುದು ಬೇಕಿಲ್ಲ ಎಂದು ಆರೋಪಿಸಿದರು. ಸರ್ಕಾರ ರಾಜ್ಯದಲ್ಲಿ ವಾಸಿಸುತ್ತಿರುವ ಜನರ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲು ಹೊರಟಿದೆ. ಇದು ಸ್ವಾಗತಾರ್ಹ ಬೆಳವಣಿಗೆ. ಸರ್ಕಾರ ನಡೆಸುತ್ತಿರುವ ಈ ಗಣತಿಯಿಂದ ಇದುವರೆಗೂ ಕುಲಕಸುಬುಗಳನ್ನೇ ನಂಬಿ ಅತಂತ್ರ ಸ್ಥಿತಿಯಲ್ಲಿದ್ದ ಹತ್ತಾರು ಹಿಂದುಳಿದ ಮತ್ತು…

Read More