ಮಧುಗಿರಿ : ದ್ವಿಚಕ್ರ ವಾಹನವೊಂದು ರಸ್ತೆ ಪಕ್ಕದ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದು, ಮಗನಿಗೆ ಗಂಬೀರ ಗಾಯಗಳಾದ ಘಟನೆ ಪಟ್ಟಣದ ಕಸಬಾ ವ್ಯಾಪ್ತಿಯ ಡಿ.ವಿ. ಹಳ್ಳಿ ಬಳಿ ನಡೆದಿದೆ. ಸಿರಾ ಪಟ್ಟಣದ ವಾಸಿ ರತ್ನಮ್ಮ(55) ಸ್ಥಳದಲ್ಲೇ ಮೃತಪಟ್ಟವರು. ಮಗ ಗಿರೀಶ್ ಗೆ ಗಂಬೀರ ಗಾಯಗಳಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮಗ ಇಬ್ಬರು ಸಿರಾ ದಿಂದ ಮಧುಗಿರಿಗೆ ಬರುವಾಗ ಘಟನೆ ನಡೆದಿದ್ದು, ಮಳೆ ಬರುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಆಯತಪ್ಪಿ ರಸ್ತೆ ಬದಿಗೆ ಜಾರಿ ಬಿದ್ದಾಗ ರಸ್ತೆಯ ಬದಿಯ ಕಲ್ಲಿಗೆ ಹೊಡೆದಿದ್ದರಿಂದ ಘಟನೆ ನಡೆದಿದೆ.ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: News Desk Benkiyabale
ಮಧುಗಿರಿ : ಕಲುಷಿತ ನೀರು ಸೇವನೆಯಿಂದಾಗಿ ಅಂಗನವಾಡಿಯ ಶಿಕ್ಷಕಿ ಹಾಗೂ 8 ಜನ ಮಕ್ಕಳು ವಾಂತಿ ಬೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಪಾಲಾಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ತಾಲ್ಲೂಕಿನ ಪುರವರ ಹೋಬಳಿಯ ಸಂಕಾಪುರ ಗ್ರಾಮದಲ್ಲಿರುವ ಅಂಗನವಾಡಿಯ ಪಕ್ಕದಲ್ಲಿರುವ ಹಾಗೂ ಪುರವರ ಗ್ರಾಮ ಪಂಚಾಯತಿ ವತಿಯಿಂದ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು ಅದೆ ನೀರನ್ನು ಅಡುಗೆ ಬಳಸಿ ತಯಾರಿಸಿದ ಆಹಾರ ಸೇವಿಸಿದ ಮಕ್ಕಳು ಅಸ್ವಸ್ಥರಾಗಿದ್ದಾರೆ. ಅಂಗನವಾಡಿ ಮಕ್ಕಳಾದ ನರಸಿಂಹಮೂರ್ತಿ. ರಕ್ಷಿತ್. ದಿವ್ಯ. ಚೇತನ್. ಪವನ್. ಚೈತ್ರ, ನರಸಿಂಹ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಗನವಾಡಿಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಅಡುಗೆ ಸಹಾಯಕರು ನಿವೃತ್ತಿ ಯಾಗಿದ್ದಾರೆ. ಆದರೆ ಇದುವರೆವಿಗೂ ಆ ಹುದ್ದೆಯನ್ನು ಭರ್ತಿ ಸಿಡಿಪಿಓ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಪಂಚಾಯತಿ ವತಿಯಿಂದ ಶುದ್ಧ ನೀರಿನ ಘಟಕದ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. …
ತುಮಕೂರು: ಸರ್ಕಾರದಿಂದ ಮಂಜೂರಾದ ಕಾಮಗಾರಿಗಳನ್ನು ನಿರೀಕ್ಷಿತ ಅವಧಿಗೆ ಪೂರ್ಣಗೊಳಿಸದೆ ಅನುದಾನ ರದ್ದಾಗುವಂತೆ ಕರ್ತವ್ಯ ನಿರ್ಲಕ್ಷತೆ ತೋರಿದರೆ ನಾನು ಸಹಿಸುವುದಿಲ್ಲವೆಂದು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಇಲಾಖೆಗಳು ಪ್ರಸಕ್ತ ಸಾಲಿಗೆ ಮಂಜೂರಾದ ರಸ್ತೆ, ಕಟ್ಟಡ, ಮತ್ತಿತರ ಕಾಮಗಾರಿಗಳನ್ನು ಬರುವ 2020ರ ಫೆಬ್ರುವರಿಯೊಳಗೆ ಪೂರ್ಣಗೊಳಿಸಬೇಕು. ಕಟ್ಟಡ ದುರಸ್ತಿ, ಹೊಸ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿಗಧಿತ ಅವಧಿಯೊಳಗೆ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಬೇಕು. ಇಲ್ಲದಿದ್ದರೆ ಅನುದಾನ ರದ್ದಾಗುತ್ತದೆ. ನಿಗಧಿತ ಸಮಯದಲ್ಲಿ ಬಿಲ್ ಸಲ್ಲಿಸದ ಕಾರಣ ಕೆಲವು ಲೆಕ್ಕಶೀರ್ಷಿಕೆಗಳಡಿ ಸುಮಾರು 3 ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಸರಕಾರಕ್ಕೆ ವಾಪಸ್ಸಾಗಿದೆ. ಇದರಿಂದ ಮುಂದಿನ ಅಭಿವೃದ್ಧಿ ಕಾಮಗಾರಿಗಳಿಗೆ ಹೊಡೆತ ಬೀಳಲಿದ್ದು, ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಸೂಚಿಸಿದರು. ಜಿ.ಪಂ.ಸದಸ್ಯರ ಗಮನಕ್ಕೆ ತರದಿದ್ದರೆ ಅನುಮೋದನೆ…
ತುಮಕೂರು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ವತಿಯಿಂದ ಇಂದಿನಿಂದ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ಕಾನೂನು ಅರಿವು-ನೆರವು ಸಾಕ್ಷರತಾ ರಥ ಯಾತ್ರೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಂತುಮಕೂರು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ವತಿಯಿಂದ ಇಂದಿನಿಂದ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ಕಾನೂನು ಅರಿವು-ನೆರವು ಸಾಕ್ಷರತಾ ರಥ ಯಾತ್ರೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಂದ್ರ ಬಾದಾಮಿಕರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಮಾತನಾಡಿದ ನ್ಯಾ. ರಾಜೇಂದ್ರ ಬಾದಾಮಿಕರ್ ಅವರು, ಪ್ರತಿಯೊಬ್ಬರ ಮನೆ ಬಾಗಿಲಿಗೆ ಕಾನೂನು ಹೋಗಬೇಕು ಎಂಬ…
ಮಿಡಿಗೇಶಿ : ಹೋಬಳಿಯ ಚಿನ್ನೇನಹಳ್ಳಿ ಸಮೀಪವಿರುವ ವೀರಣ್ಣನ ಬೆಟ್ಟದಲ್ಲಿರುವ ಕರಡಿಗಳ ಹಾವಳಿಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಹೊಸಕೆರೆ ಗ್ರಾಮದ ಹಳೆಯೂರಿನ ಮಧ್ಯದಲ್ಲಿ ಜೂನ್ 22 ರಂದು ಮಧ್ಯರಾತ್ರಿ 01.30 ರ ಸಮಯದಲ್ಲಿ ರಾಜಾರೋಷವಾಗಿ ಕರಡಿ ಓಡಾಡಿದೆ. ಕರಡಿ ಓಡಾಡುವುದನ್ನು ಕಂಡ ಜನತೆ ಭಯದಿಂದ ತತ್ತರಿಸಿ ಹೋಗಿದ್ದಾರೆ. ಇದೇ ರೀತಿ ಮಿಡಿಗೇಶಿ ಹೋಬಳಿಯ ಮಲ್ಲನಾಯಕನ ಹಳ್ಳಿಯ ಬೆಟ್ಟದಲ್ಲಿ, ಬೇಡತ್ತೂರಿನ ಬೆಟ್ಟದಲ್ಲಿ ಹೀಗೆ ಒಟ್ಟಾರೆಯಾಗಿ ಮಿಡಿಗೇಶಿ ಹೋಬಳಿಯಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆಯವರು ಕರಡಿಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟು ನಮ್ಮನ್ನು ರಕ್ಷಿಸಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಧುಗಿರಿ : ಬಂಗಾರದ ಆಸೆಗಾಗಿ ಮಹಿಳೆಯೊಬ್ಬರನ್ನು ಕೊಲೆಗೈದು ಗುರುತು ಸಿಗದಂತೆ ಸುಟ್ಟು ಹಾಕಿದ್ದ ಪ್ರಕರಣವನ್ನು ತ್ವರಿತವಾಗಿ ಭೇದಿಸುವಲ್ಲಿ ತಾಲೂಕಿನ ಬಡವನಹಳ್ಳಿ ಪೋಲೀಸರು ಯಶಸ್ವಿಯಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮಧುಗಿರಿ ತಾಲೂಕಿನ ಬಿಜವರ ಗ್ರಾಮದ ಮಂಜುನಾಥ ಮತ್ತು ಕೊರಟಗೆರೆ ತಾಲೂಕಿನ ಮುಗ್ಗೊಂಡನಹಳ್ಳಿ ಗ್ರಾಮದ ಶಿವಕುಮಾರ ಬಂದಿತ ಆರೋಪಿಗಳು. ಜೂ. 6 ರಂದು ತಾಲೂಕಿನ ದೊಡ್ಡೇರಿ ಹೋಬಳಿಯ ಪುಲಮಘಟ್ಟ ಗ್ರಾಮದ ನಾರಾಯಣಪ್ಪನವರ ಜಮೀನಿನಲ್ಲಿ ಅಪರಿಚಿತ ಮಹಿಳೆಯನ್ನು ಕೊಲೆಗೈದು ಗುರುತು ಸಿಗದಂತೆ ಸುಟ್ಟು ಹಾಕಿದ್ದ ಬಗ್ಗೆ ಬಡವನಹಳ್ಳಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಮಧುಗಿರಿ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಪಿ.ಐ ಕೆ. ಪ್ರಭಾಕರ್ ಮತ್ತು ಪಿಎಸೈ ನಾಗರಾಜು ಮತ್ತು ಸಿಬ್ಬಂದಿಯ ತಂಡ ಖಚಿತ ಮಾಹಿತಿಯ ಮೇರೆಗೆ ಆರೋಪಿಗಳನ್ನು ಕೊರಟಗೆರೆ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ ಬಂಗಾರದ ಅಸೆಗೆ ತುಂಬಾಡಿ ಗ್ರಾಮದ ವಾಸಿ ಗಿರಿಜಮ್ಮಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಕೆಂಪ ಚಿನ್ನೇನಹಳ್ಳಿ ಗ್ರಾಮದ ಜಮೀನಿನಲ್ಲಿ ಕುತ್ತಿಗೆಗೆ ಹಗ್ಗ…
ತುಮಕೂರು: ತುಮಕೂರು ನಗರದ ಠಾಣೆಗಳು ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಯ ಕೆಲ ಪೊಲೀಸ್ ಸಬ್ ಇನ್‍ಸ್ಪೆಕ್ಟರ್‍ಗಳನ್ನು ಸೋಮವಾರ ಸರ್ಕಾರ ವರ್ಗಾವಣೆ ಮಾಡಲಾಗಿದೆ. ಆವರಣದಲ್ಲಿರುವ ಹೆಸರು ಅಧಿಕಾರಿಗಳು ವರ್ಗಾವಣೆಯಾಗಿರುವ ಸ್ಥಳವಾಗಿದೆ. ಹೆಬ್ಬೂರು ಪೊಲೀಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಆಗಿದ್ದ ಎಸ್.ಶ್ರೀಕಾಂತ್, ತುಮಕೂರು ಹೊಸಬಡಾವಣೆ ಠಾಣೆಯ ಜಿ.ಕೆ.ರಾಘವೇಂದ್ರ (ಜಿಲ್ಲಾ ಪೊಲೀಸ್ ಕಚೇರಿ, ಅಪರಾಧ ದಾಖಲೆಗಳ ಬ್ಯುರೊ, ಡಿಸಿಆರ್‍ಬಿ), ತುಮಕೂರು ಬೆಸ್ಕಾಂ ಜಾಗೃತ ದಳದ ಎಚ್.ಎನ್.ಮಹಾಲಕ್ಷ್ಮಮ್ಮ (ಹೊಸ ಬಡಾವಣೆ ಠಾಣೆ), ಕೇಂದ್ರ ವಲಯ ಕಚೇರಿಯ ಸಿ.ರವಿಕುಮಾರ್ (ತುಮಕೂರು ಬೆಸ್ಕಾಂ ಜಾಗೃತ ದಳ) ವರ್ಗಾವಣೆಯಾಗಿದ್ದಾರೆ. ತುಮಕೂರು ನಗರ ಠಾಣೆ ಅಪರಾಧ ವಿಭಾಗದ ಸಬ್‍ಇನ್‍ಸ್ಪೆಕ್ಟರ್ ಸಿ.ಆರ್.ಭಾಸ್ಕರ್ (ರಾಮನಗರ ಅಕ್ಕೂರು ಪೊಲೀಸ್ ಠಾಣೆ) ವರ್ಗಾವಣೆಯಾಗಿದ್ದಾರೆ. ಪಾವಗಡ ಪೊಲೀಸ್ ಠಾಣೆಯ ಆರ್.ಮಧುಸೂದನ್ (ಚಿಕ್ಕಬಳ್ಳಾಪುರ ಬಟ್ಲಹಳ್ಳಿ ಪೊಲೀಸ್ ಠಾಣೆ) ಮಧುಗಿರಿ ಠಾಣೆ ಅಪರಾಧ ವಿಭಾಗದ ಐ.ಎ.ನಾಗರಾಜ್ (ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ), ಗೌರಿಬಿದನೂರು ನಗರ ಠಾಣೆಯ ಎಸ್.ಸುಂದರ್ (ಹೆಬ್ಬೂರು ಪೊಲೀಸ್…
ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ 22 ಕಾಮಗಾರಿಗಳು ಪೂರ್ಣಗೊಂಡಿದ್ದು, 47 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ತಿಳಿಸಿದರು. ಸ್ಮಾರ್ಟ್ ಸಿಟಿ ಕಛೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ 50:50 ಅನುಪಾತದ ಅನುದಾನದಲ್ಲಿ ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪೈಕಿ ನಗರದಲ್ಲಿ 21.89 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಇ-ಟಾಯ್ಲೆಟ್, ಇಂಟರ್ ಮೀಡಿಯೇಟ್ ಪ್ಯಾರಾ ಟ್ರ್ಯಾನ್ಸಿಟ್ ಆಟೋ ಸ್ಟಾಂಡ್, ಸಿದ್ಧಗಂಗಾ ಬಸ್ ನಿಲ್ದಾಣದ ಮರು ನಿರ್ಮಾಣ, ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸ್ಮಾರ್ಟ್ ಪಾರ್ಕ್, ಕುಡಿಯುವ ನೀರು ಸರಬರಾಜು ಯೋಜನೆಗಳು, ಅಮಾನಿಕೆರೆಯಲ್ಲಿ ನರ್ಸರಿ ಅಭಿವೃದ್ಧಿ ಹಾಗೂ ಸ್ಮಾರ್ಟ್ ಲಾಂಜ್, ಸೋಲಾರ್ ಬೀದಿದೀಪ, ಅಮಾನಿಕೆರೆ ಒತ್ತುವರಿ ತೆರವು ಹಾಗೂ ಗಿಡ-ಮರ ಬೆಳೆಸುವ ಉಪ್ಪಾರ ಹಳ್ಳಿ ಫ್ಲೈಓವರ್, ಕೆಳಸೇತುವೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಒಟ್ಟು 22 ವಿವಿಧ ಸಣ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಅಲ್ಲದೆ 515.43 ಕೋಟಿ…
ತುಮಕೂರು: ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮ ಪಡಿಸಿಕೊಳ್ಳದಿದ್ದರೆ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ/ ಅನುದಾನಿತ ಶಾಲೆಗಳನ್ನು ರದ್ದುಪಡಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷೆ ಡಾ|| ನವ್ಯಬಾಬು ಡಿಡಿಪಿಐಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್‍ನಲ್ಲಿಂದು ನಡೆದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷೆವಹಿಸಿ ಮಾತನಾಡಿದ ಅವರು ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶವನ್ನು ಪರಿಶೀಲಿಸಿದರಲ್ಲದೆ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಾರದಿರುವುದನ್ನು ಗಂಭೀರವಾಗಿ ಪರಿಗಣಿಸಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಫಲಿತಾಂಶ ಬರುವಂತೆ ಡಿಡಿಪಿಐ ಸೇರಿದಂತೆ ಶಿಕ್ಷಕರು ಪ್ರಯತ್ನಿಸಬೇಕು ಎಂದು ತಿಳಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿಯಿರುವ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಹುದ್ದೆಗಳನ್ನು ಕೂಡಲೇ ಹೊರಗುತ್ತಿಗೆ ಆಧಾರದ ಮೇಲೆ ನಿಯಮಾನುಸಾರ ನೇಮಿಸಿಕೊಳ್ಳಲು ನಿರ್ದೇಶನ ನೀಡಿದರಲ್ಲದೆ, ಸೌರಶಕ್ತಿ ಬಿಸಿ ನೀರಿನ ಯಂತ್ರ, ಸೌರಶಕ್ತಿ…
ತುಮಕೂರು: ಗ್ರಾಮ ಪಂಚಾಯಿತಿಯಲ್ಲಿನ ಸಿಬ್ಬಂದಿಗಳಿಗೆ ಲಂಚ ಕೊಡದಿದ್ದರೆ ಯಾವ ಸರ್ಕಾರಿ ಸೇವಾ?ಸೌಲಭ್ಯಗಳು ಸಿಗುವುದಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳು(ಪಿಡಿಒ) ಆ ಸಭೆ, ಈ ಸಭೆ ಇದೆ ಎಂದು ಪಂಚಾಯಿತಿ ಕಚೇರಿಗೆ ಬರುವುದಿಲ್ಲ. ಇದರಿಂದ ಜನರಿಗೆ ಸರ್ಕಾರಿ ಯೋಜನೆಗಳ ಪ್ರಯೋಜನ ಸಕಾಲಕ್ಕೆ ತಲುಪುತ್ತಿಲ್ಲ ಎಂದು ತುಮಕೂರು ತಾಲ್ಲೂಕು ಪಂಚಾಯಿತಿ ಸದಸ್ಯರು ಆರೋಪಿಸಿದರು. ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಒಕ್ಕೊರಲಿನಿಂದ ಅಧ್ಯಕ್ಷರಿಗೆ ದೂರಿದರು. ಸ್ಥಳೀಯ ಶಾಸಕರ ಬೆಂಬಲಿತ ಪಂಚಾಯಿತಿ ಸದಸ್ಯರ ಪ್ರದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳು ತ್ವರಿತವಾಗಿ ನಡೆಯುತ್ತವೆ. ಉಳಿದ ಸದಸ್ಯರ ಕ್ಷೇತ್ರಗಳಿಗೆ ಅನುದಾನವೂ ಸಕಾಲಕ್ಕೆ ಬರುವುದಿಲ್ಲ. ಕಾಮಗಾರಿಗಳನ್ನು ಸಹ ನಿಧಾನವಾಗಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಕೆಲವು ಸದಸ್ಯರು ಆರೋಪಿಸಿದರು. ಕೋರಾ ಕ್ಷೇತ್ರದ ಸದಸ್ಯೆ ಕವಿತಾ, ರೈತರಿಗೆ ಸೂಕ್ತ ಪರಿಹಾರ ನೀಡದೆ, ಪುನರ್ವಸತಿ ಕಲ್ಪಿಸದೆ ಎತ್ತಿನಹೊಳೆ ಯೋಜನೆಯ ಕಾಮಗಾರಿ ನಡೆಸುತ್ತಿದ್ದಾರೆ. ರೈತರಿಗೆ ತಲಾ 25,000…