Author: News Desk Benkiyabale

ಗುಬ್ಬಿ :       ಹಸಿರು ವಲಯ ಎನಿಸಿಕೊಳ್ಳುವ ಹಂತದಲ್ಲಿದ್ದ ಗುಬ್ಬಿ ತಾಲ್ಲೂಕಿಗೆ ಕಳೆದ 24 ತಾಸುಗಳಲ್ಲೇ ಎರಡು ಕೊವೀಡ್-19 ಪ್ರಕರಣ ದೃಢಪಟ್ಟಿರುವ ಹಿನ್ನಲೆ ಕಂಟೋನ್ಮೆಂಟ್ ಏರಿಯಾಗಳಾಗಿ ಚೇಳೂರು ಕಲ್ಯಾಣ ಮಂಟಪ ಹಾಗೂ ಪಟ್ಟಣದ ಸಮೀಪದ ಕಿಟ್ಟದಕುಪ್ಪೆ ಗ್ರಾಮ ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.       ಗುರುವಾರ ಸಂಜೆ ಸಮಯದಲ್ಲಿ ಚೇಳೂರು ಕಲ್ಯಾಣ ಮಂಟಪದಲ್ಲಿ ಕ್ವಾರೆಂಟೈನ್‍ನಲ್ಲಿದ್ದ ದೆಹಲಿ ಮೂಲದ ವ್ಯಕ್ತಿಯಲ್ಲಿ ಕೋವಿಡ್ ಪಾಸಿಟೀವ್ ದೃಢವಾಗಿದೆ. ದೆಹಲಿಯಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ ಈ ವ್ಯಕ್ತಿಯ ಟ್ರಾವಲ್ ಹಿಸ್ಟರಿ ಎಷ್ಟೇನೂ ಕಷ್ಟ ಎನಿಸಿದಿದ್ದರೂ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಐಸೂಲೇಷನ್‍ಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಶುಕ್ರವಾರ ಮುಂಜಾನೆ ಗುಬ್ಬಿ ಪಟ್ಟಣದ ನಾಗರೀಕರಲ್ಲಿ ಆತಂಕ ಮೂಡಿಸಿದ ಕಿಟ್ಟದಕುಪ್ಪೆ ಗ್ರಾಮದ ಪಾಸಿಟೀವ್ ವ್ಯಕ್ತಿಯ ಟ್ರಾವಲ್ ಹಿಸ್ಟರಿ ತೀವ್ರ ತಲೆ ನೋವಾಗಿದೆ.       ಕಿಟ್ಟದಕುಪ್ಪೆ ಮೂಲದ ಸುಮಾರು 55 ವರ್ಷದ ವ್ಯಕ್ತಿ ಹೃದಯ ಸಂಬಂಧಿ ರೋಗಕ್ಕೆ ಔಷಧ ತರಲು ಬೆಂಗಳೂರಿನ ಜಯದೇವ ಆಸ್ಪತ್ರೆಗೆ…

Read More

ತುಮಕೂರು:       ತುಮಕೂರು ನಗರ ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಹೋಬಳಿ ಒಳಗೊಂಡತೆ, ಯಾದಗಿರಿ ಜಿಲ್ಲೆಯ ದೇವದುರ್ಗ ಕೆಶಿಫ್ ಕಚೇರಿಯನ್ನು ಪರಿವರ್ತಿಸಿ, ಲೋಕೋಪಯೋಗಿ ತುಮಕೂರು ನಗರ ಉಪವಿಭಾಗವನ್ನು ಹೊಸದಾಗಿ ಸೃಜಿಸಲಾಗಿದ್ದು, ಈ ಉಪವಿಭಾಗವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿರವರು ಉದ್ಘಾಟಿಸಿದರು.       ತುಮಕೂರು ನಗರ, ಗ್ರಾಮಾಂತರ ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡತೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದು, ತುಮಕೂರು ಉಪವಿಭಾಗದಲ್ಲಿ ಕಾರ್ಯಭಾರ ಹೆಚ್ಚಿದ್ದರಿಂದ, ಸರ್ಕಾರ ತುಮಕೂರು ನಗರ ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಹೋಬಳಿ ಒಳಗೊಂಡತೆ, ಯಾದಗಿರಿ ಜಿಲ್ಲೆಯ ದೇವದುರ್ಗ ಕೆಶಿಫ್ ಕಚೇರಿಯನ್ನು ಪರಿವರ್ತಿಸಿ ತುಮಕೂರು ನಗರ ಉಪವಿಭಾಗವನ್ನು ಸೃಜಿಸಿ ಆದೇಶ ಹೊರಡಿಸಿದೆ.       ಇದರಿಂದಾಗಿ ತುಮಕೂರು ನಗರ ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಹೋಬಳಿ ಒಳಗೊಂಡ ನಗರ ಉಪವಿಭಾಗವು ಇಲಾಖೆ ವತಿಯಿಂದ ನಿರ್ವಹಿಸುವ ಕಟ್ಟಡ, ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲಿದ್ದು, ಸಾರ್ವಜನಿಕರ ಉಪಯೋಗಕ್ಕಾಗಿ ಸೃಜಿಸಿರುವ ಈ…

Read More

ತುಮಕೂರು:      ಕೇವಲ ಕೊಳವೆ ಬಾವಿ ಕೊರೆಯುವುದಷ್ಟೇ ಆರ್.ಡಬ್ಲ್ಯಎಸ್ ಕೆಲಸವಲ್ಲ. ಆ ನಂತರದ ಎಲ್ಲಾ ಕೆಲಸಗಳನ್ನು ಮೇಲುಸ್ತುವಾರಿ ಮಾಡಿ, ಅಂತಿಮವಾಗಿ ಜನರಿಗೆ ಕುಡಿಯುವ ನೀರು ಒದಗಿಸುವವರು, ಗ್ರಾ.ಪಂ., ತಾ.ಪಂ. ಅಧಿಕಾರಿಗಳ ಜೊತೆಗೆ ಸಮನ್ವಯ ಸಾಧಿಸಿ,ಉದ್ದೇಶ ಈಡೇರಿಸುವಂತೆ ಜಿ.ಪಂ.ಉಪಾಧ್ಯಕ್ಷೆ ಶ್ರೀಮತಿ ಶಾರದ ನರಸಿಂಹ ಮೂರ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.       ಜಿ.ಪಂ.ಸಭಾಂಗಣದಲ್ಲಿ ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ಒಂದು ಒವರ್ ಹೆಡ್‍ಟ್ಯಾಂಕು ನಿರ್ಮಿಸುವ ಮುನ್ನ ಕೇವಲ ಕೊಳವೆ ಬಾವಿ ಕೊರೆದು,ಪೈಪ್ ಲೈನ್ ಅಳವಡಿಸಿದ ನಂತರ ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಬೇಕು.ಇಲ್ಲದಿದ್ದರೆ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಸರಕಾರ ಲಕ್ಷಾಂತರ ರೂ ವೆಚ್ಚ ಮಾಡಿದರೂ ಉದ್ದೇಶ ಈಡೇರಿರುವುದಿಲ್ಲ. ಇದು ಸರಿಯಲ್ಲ. ಈ ನಿಟ್ಟಿನಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ ಗ್ರಾ.ಪಂ, ತಾ.ಪಂ,ಆರ್.ಡಬ್ಲು ಎಸ್ ಹಾಗೂ ಪಿಆರ್‍ಇಡಿ ಅಧಿಕಾರಿಗಳು ಪರಸ್ವರ ಪೂರಕವಾಗಿ ಕೆಲಸ ಮಾಡಬೇಕೆಂದು ಸ್ಪಷ್ಟ ನಿರ್ದೇಶನ ನೀಡಿದರು.  …

Read More

ತುಮಕೂರು  :      ಸಿದ್ದಗಂಗಾ ಮಠದಲ್ಲಿ 10 ರಿಂದ 12 ಸಾವಿರ ಮಕ್ಕಳು ಪ್ರತಿನಿತ್ಯ ಊಟ ಮಾಡುವುದರಿಂದ ತರಕಾರಿ ಸಂಗ್ರಹಣೆ ಮಾಡುವುದು ಕಷ್ಟವಾಗುತ್ತಿದೆ ಹಾಗಾಗಿ ಮಠಕ್ಕೆ ಕೃಷಿ ಇಲಾಖೆಯು ನಬಾರ್ಡ್‍ನಿಂದ 7.5 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್‍ನ್ನು ನಿರ್ಮಾಣ ಮಾಡಲು ಹಣ ಮಂಜೂರು ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.       ಶ್ರೀ ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿದ ಸಚಿವರು ಶ್ರೀಗಳ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಲಾಭ ಬರುವ ಯಾವ ಬೆಳೆಯನ್ನು ಬೇಕಾದರು ಬೆಳೆಯಲಿ ಸರ್ಕಾರ ಅವರಿಗೆ ಬಿತ್ತನೆ ಬೀಜದ ವ್ಯವಸ್ಥೆ ಮಾಡುವ ಕಾರ್ಯಮಾಡುತ್ತದೆ ಎಂದು ಅವರು ಹೇಳಿದರು.       ಈ ಸಂದರ್ಭದಲ್ಲಿ ಮಾತನಾಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಯಲ್ಲಿ ಎಲ್ಲಿ ಬೇಕಾದರು ಮಾರಾಟ ಮಾಡುವ ಸ್ವಾತಂತ್ರ ರೈತರಿಗೆ ಇದೆ. ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಸಂಪೂರ್ಣ ಅನುಕೂಲವಾಗುತ್ತದೆ. ಎಂ.ಎನ್.ಸಿ. ಕಂಪನಿಯವರು…

Read More

ತುಮಕೂರು :       ಜಿಲ್ಲೆಯಲ್ಲಿ ಜೂನ್ 25ರಿಂದ ಜುಲೈ 2ರವರೆಗೆ ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಯಾವುದೇ ವಿದ್ಯಾರ್ಥಿಯು ಗೈರು ಹಾಜರಾಗಬಾರದಂತೆ ಎಚ್ಚರವಹಿಸಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಪೂರ್ವ ಸಿದ್ಧತಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.        ಕೊರೊನಾ ನಿಯಂತ್ರಿಸುವಲ್ಲಿ ಜಿಲ್ಲೆ ಯಶಸ್ವಿಯಾಗಿರುವಂತೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಸಮಪರ್ಕವಾಗಿ, ವ್ಯವಸ್ಥಿತವಾಗಿ ಮಾಡಬೇಕು. ಮಕ್ಕಳು ಭಯಪಡದೇ ಪರೀಕ್ಷೆ ಬರೆಯುವಂತಾಗಬೇಕು. ಅಲ್ಲದೇ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮನೆಯಿಂದಲೇ ಬಿಸಿ ನೀರನ್ನು/ಬಿಸಿ ಆರಿದ ನೀರು ತರುವಂತೆ ತಿಳಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಮನಸ್ಥಿತಿ ಕೆಡದಂತೆ ಎಚ್ಚರವಹಿಸಬೇಕು ಎಂದರು.        ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗದಂತೆ ಒಂದು ದಿನದ ಮೊದಲೇ ಕೊಠಡಿಗಳ…

Read More

ತುಮಕೂರು :       ನಗರದ ಶ್ರೀ ಸಿದ್ದಗಂಗಾ ಮಠದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕರೊನಾ ಸೋಂಕು ತಗುಲಿದ್ದು, ಆತನ ಜತೆ ಓದುತ್ತಿರುವವರು ಮತ್ತು ಶಿಕ್ಷಕ ವೃಂದದಲ್ಲಿ ಆತಂಕ ಸೃಷ್ಟಿಸಿದೆ.       ಆಂಧ್ರಪ್ರದೇಶದ ಕರ್ನೂಲ್ ಮೂಲದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ರಾಯಚೂರು ಮೂಲಕ ಜೂ. 15ರಂದು ಮಠಕ್ಕೆ ಬಂದಿದ್ದು ಆತನಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಿರಲಿಲ್ಲ. ನಂತರ ಕರ್ನೂಲ್ ಜಿಲ್ಲಾಡಳಿತ ಆತನಿಗೆ ಕರೊನಾ ಸೋಂಕು ತಗುಲಿರುವ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಮಠಕ್ಕೆ ದೌಡಾಯಿಸಿದರು. ತಕ್ಷಣವೇ ಆತನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮತ್ತೊಮ್ಮೆ ಪರೀಕ್ಷೆಗೆ ಗಂಟಲು ಸ್ರವ ಮಾದರಿ ಸಂಗ್ರಹಿಸಲಾಯಿತು.        ಆತನೊಂದಿಗೆ ಕೊಠಡಿಯಲ್ಲಿ ಇದ್ದ ಮೂವರು ವಿದ್ಯಾರ್ಥಿಗಳನ್ನು ಈಗ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಕಳೆದ 4 ದಿನಗಳಿಂದ ಈ ಪಾಸಿಟಿವ್ ವಿದ್ಯಾರ್ಥಿಯು ಇತರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜತೆ ಬೆರೆತಿದ್ದಾನೆ.       ಶಿವಕುಮಾರ ಸ್ವಾಮೀಜಿ ಶತಮಾನೋತ್ಸವ ಭವನದಲ್ಲಿ ಎಲ್ಲಾ ವಿದ್ಯಾರ್ಥಿಗಳ ಜತೆ ಒಟ್ಟಿಗೆ ಕುಳಿತು…

Read More

ತುಮಕೂರು:       ನಗರದ ಅತ್ಯಂತ ದೊಡ್ಡ ಪಾರ್ಕ್ ಗೋಕುಲ ಬಡಾವಣೆಯಲ್ಲಿರುವ ಗೂಬೆಹಳ್ಳ ಪಾರ್ಕ್‍ನ್ನು ಸ್ಮಾರ್ಟ್‍ಸಿಟಿ ಯೋಜನೆಯಡಿ ಸಂಪೂರ್ಣ ಅಭಿವೃದ್ಧಿಪಡಿಸಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತ ಟಿ.ಭೂಬಾಲನ್ ತಿಳಿಸಿದರು.       ನಗರದ ಗೋಕುಲ ಬಡಾವಣೆಯ ಕನಕಾಂಬರ ರಸ್ತೆ (9)ನೇ ಉದ್ಯಾನವನದಲ್ಲಿ ಪ್ರಜ್ಞಾ-ಗೋಕುಲ ಬಡಾವಣೆ ಮೊದಲ ಹಂತದ ನಾಗರೀಕ ಸಮಿತಿ ವತಿಯಿಂದ ಪರಿಸರ ದಿನದ ಅಂಗವಾಗಿ ಗುರುವಾರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗೋಕುಲ ಬಡಾವಣೆಯ ಸುಮಾರು 2 ಎಕರೆ ವಿಸ್ತೀರ್ಣವುಳ್ಳ ಗೂಬೆಹಳ್ಳ ಪಾರ್ಕ್‍ನಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಟ್ರೀ-ಪಾರ್ಕ್ ನಿರ್ಮಾಣ, ಮಕ್ಕಳ ಆಟದ ಮೈದಾನ, ಜಿಮ್, ಸಣ್ಣ ಪಾಂಡ್ ನಿರ್ಮಾಣ ಮಾಡುವ ಯೋಜನೆ ಇದೆ. ಇಲ್ಲಿ ಹೆಚ್ಚು ಮರಗಿಡಗಳನ್ನು ಬೆಳೆಸುವ ಉದ್ಧೇಶ ಹೊಂದಲಾಗಿದೆ ಎಂದರು.       ಗೂಬೆಹಳ್ಳ ಪಾರ್ಕ್‍ನಲ್ಲಿ ಕುಡುಕರ ಹಾವಳಿ ಹೆಚ್ಚಿದೆ ಎಂಬುದಾಗಿ ಕೇಳಿ ಬಂದಿದ್ದು, ಪಾರ್ಕ್‍ನ್ನು ಈ ಭಾಗದ ಜನರೇ ರಕ್ಷಿಸಿಕೊಳ್ಳಬೇಕು, ಎಲ್ಲವನ್ನೂ ಮಹಾನಗರಪಾಲಿಕೆ ಮಾಡಲು ಸಾಧ್ಯವಿಲ್ಲ, ಕುಡುಕರ ಹಾವಳಿ…

Read More

ಮಧುಗಿರಿ:       ಪಟ್ಟಣದಲ್ಲಿರುವ ದ್ವಿತೀಯ ಪಿಯುಸಿ ಎರಡು ಪರೀಕ್ಷಾ ಕೇಂದ್ರಗಳಲ್ಲಿ 1605 ವಿದ್ಯಾರ್ಥಿಗಳು ಆಂಗ್ಲ ವಿಷಯ ಪರೀಕ್ಷೆಗೆ ನೋಂದಾಯಿಸಿದ್ದರು 1500 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.       ಮಾರ್ಚ್ -23 ರಂದೇ ನಡೆಯಬೇಕಿದ್ದ ಈ ಪರೀಕ್ಷೆ ಕರೋನಾ ವೈರಸ್ ಹರಡುವಿಕೆ ಯಿಂದಾಗಿ ಜೂನ್ -18 ರಂದು ನಡೆದಿದೆ. ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದ ತಹಸೀಲ್ದಾರ್ ಡಾ.ಜಿ. ವಿಶ್ವನಾಥ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಉಷ್ಣಾಂಶ ಪರೀಕ್ಷೆ ,ಸಾಮಾಜಿಕ ಅಂತರ, ಸ್ಯಾನಿಟೈಸರ್ ಅನ್ನು ಪ್ರವೇಶದ್ವಾರದಲ್ಲಿ ವ್ಯವಸ್ಥೆ ಮಾಡಲಾಯಿತು.       ಗ್ರಾಮಾಂತರ ಪ್ರದೇಶದ ಗಡಿ ಭಾಗದಿಂದಲೂ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲುಪಲು ಮತ್ತು ಮರಳಿ ಗ್ರಾಮಕ್ಕೆ ತಲುಪಲು 22- ಕೆ ಎಸ್ ಆರ್ ಟಿಸಿ ಬಸ್ಸುಗಳನ್ನು ವ್ಯವಸ್ಥೆ ಕಲ್ಪಿಸಲಾಯಿತು. ಬಸ್ಸ್ ನಲ್ಲಿ ಬಹುತೇಕ ವಿದ್ಯಾರ್ಥಿನಿಯರೇ ಆಗಮಿಸಿದ್ದಾರೆಂದು ಮಾಹಿತಿ ಬಂದಿದೆ.         ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳಲ್ಲಿ ಅವರ  ಪೋಷಕರೊಂದಿಗೆ ಬಂದಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ ಎಂದರು. ಪಟ್ಟಣದ…

Read More

ತುಮಕೂರು:       ಸಾರ್ವಜನಿಕ ಸ್ಥಳಗಳಲ್ಲಿ ಯಾರು ಮಾಸ್ಕ್ ಧರಿಸುವುದಿಲ್ಲವೋ ಅವರಿಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್ ಕುಮಾರ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಭಾರತೀಯ ವೈಧ್ಯಕೀಯ ಸಂಘ, ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾಸ್ಕ್‍ದಿನದ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.       ಮಾಸ್ಕ್ ಧರಿಸದೇ ಓಡಾಡುವವರಿಗೆ ಪಂಚಾಯಿತಿ ಬಿಲ್ ಕಲೆಕ್ಟರ್‍ನಿಂದ ಕಾರ್ಪೋರೇಷನ್ ಕಮೀಷನರ್ ಕಛೇರಿಯ ಬಿಲ್ ಕಲೆಕ್ಟರ್‍ವರೆಗೂ ಹಾಗೂ ಪೊಲೀಸರಿಗೆ ದಂಡ ವಿಧಿಸುವ ಅಧಿಕಾರವನ್ನು ಸರ್ಕಾರ ನೀಡಿದ್ದು, ದಂಡ ವಿಧಿಸುವ ಮುನ್ನ ಜಾಥಾ ಮಾಡುವ ಮುಖಾಂತರ ಜನರಿಗೆ ಕೋವಿಡ್-19 ನಿಯಂತ್ರಣದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎಂದರು.       ಕೋವಿಡ್-19 ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದರಿಂದ ಬಹುತೇಕ ಕಡಿಮೆ ಮಾಡಬಹುದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ…

Read More

ತುಮಕೂರು:       ನಗರದ ಹೊರವಲಯದ ಅಜ್ಜಗೊಂಡ ನಹಳ್ಳಿಯಲ್ಲಿರುವ ಪಾಲಿಕೆಯ ಕಸ ಸುರಿಯುವ 40 ಎಕರೆ ಜಾಗದಲ್ಲಿ ತಾತ್ಕಾಲಿಕವಾಗಿ ಹಂದಿ ಸಾಕಾಣಿಕೆಗೆ ಹಾಗೂ 4 ಎಕರೆ ಪ್ರದೇಶದಲ್ಲಿ ಹಂದಿಗಳನ್ನು ಮೇಯಿಸಲು ಜಾಗ ನೀಡಲು ಪಾಲಿಕೆ ತೀರ್ಮಾನಿಸಿದೆ.       ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್ ರವರ ಕಚೇರಿಯಲ್ಲಿ ಮೇಯರ್ ಫರಿದಾ ಬೇಗಂ ರವರ ಅಧ್ಯಕ್ಷತೆಯಲ್ಲಿ ಹಂದಿ ಸಾಕುವವರ ಸಭೆ ಕರೆದು ಚರ್ಚಿಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಯಿತು.       ಇತ್ತೀಚೆಗೆ ನಗರದಲ್ಲಿ ಬಿಡಾಡಿ ಹಂದಿಗಳ ಹಾವಳಿಯಿಂದ ಅಪಘಾತಗಳು ಹೆಚ್ಚುತ್ತಿದ್ದು, ನಾಗರಿಕರು ಅಪಘಾತಗಳಿಗೆ ಒಳಗಾಗಿ ತೀವ್ರ ಸಂಕಷ್ಟವನ್ನು ಎದುರಿಸುವಂತಾಗಿದೆ. ನಾಗರಿಕ ಸಮಿತಿಗಳು, ಮಹಾನಗರ ಪಾಲಿಕೆಯ ಸದಸ್ಯರ ದೂರುಗಳ ಹಿನ್ನೆಲೆಯಲ್ಲಿ ನಗರದಲ್ಲಿ ಹಂದಿ ಸಾಕುವವರ ಸಭೆ ಕರೆದು ಚರ್ಚಿಸಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಆಯುಕ್ತರು ಮತ್ತು ಮಹಾನಗರ ಪಾಲಿಕೆಯ ಸದಸ್ಯರು ಮತ್ತು ಹಂದಿಜೋಗರ ಜತೆ ಸಮಾಲೋಚನೆ ನಡೆಸಿದರು.       ಅಜ್ಜಗೊಂಡನಹಳ್ಳಿಯಲ್ಲಿ 24×7 ನೀರಿನ ವ್ಯವಸ್ಥೆ, ವಿದ್ಯುಚ್ಛಕ್ತಿ,…

Read More