Author: News Desk Benkiyabale

ತುಮಕೂರು:      ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಒದಗಿಸುವ ಸಲುವಾಗಿ ಸಿದ್ದಗಂಗಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊರೊನಾ ಚಿಕಿತ್ಸಾ ಕೇಂದ್ರವನ್ನು ತೆರೆಯಲು ತೀರ್ಮಾನಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.       ಸಿದ್ದಗಂಗಾ ಆಸ್ಪತ್ರೆಯು ವಿಷಮ ಪರಿಸ್ಥಿತಿಯ ಕೊರೊನಾ ಪೀಡಿತರನ್ನು ಉಪಚರಿಸಲು ಅವಶ್ಯವಿರುವ ಎಲ್ಲ ಅತ್ಯಾಧುನಿಕ ಸೌಲಭ್ಯ, ಹೆಚ್ಚು ರೋಗಿಗಳನ್ನು ಉಪಚರಿಸುವ ವ್ಯವಸ್ಥೆ, ಸಂಪನ್ಮೂಲಗಳನ್ನು ಹೊಂದಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಡಾ. ಜಿ.ಎಸ್. ಮಹೇಶ್ ತಿಳಿಸಿದ್ದಾರೆ.       ಸಿದ್ದಗಂಗಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು ಹಾಗೂ ಇತರ ರೋಗಿಗಳನ್ನು ಏಕಕಾಲಕ್ಕೆ ಶುಶ್ರೂಷೆ ಮಾಡುವಷ್ಯು ಸ್ಥಳಾವಕಾಶ ಮತ್ತು ಸಂಪನ್ಮೂಲ ಲಭ್ಯವಿದೆ ಎಂದು ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಪರಮೇಶ್ ತಿಳಿಸಿದ್ದಾರೆ.ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ತುರ್ತು ಚಿಕಿತ್ಸೆಗೆ ಅಂದರೆ ಹೃದ್ರೋಗ, ಮೂತ್ರಕೋಶ ಸಮಸ್ಯೆ, ನರರೋಗ ಸೇರಿದಂತೆ ಮತ್ತಿತರ ಸಮಸ್ಯೆಗಳನ್ನು ನಿರ್ವಹಿಸಲು ತಜ್ಞ ವೈದ್ಯರ ತಂಡ ಸದಾಕಾಲ ಲಭ್ಯ ಇರುತ್ತಾರೆ.      ಈ ನಿರ್ಧಾರದಿಂದಾಗಿ ಸೋಂಕಿತರು…

Read More

ಗುಬ್ಬಿ:       ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹೇರೂರು ಕೆರೆಯ ನೀರು ಯಾವುದೇ ಶುದ್ಧೀಕರಣವಾಗದೇ ನೇರ ಸಾರ್ವಜನಿಕರಿಗೆ ತಲುಪುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪಟ್ಟಣದ ನಾಗರೀಕರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು.       ಕಳೆದ ಮೂರು ತಿಂಗಳಿಂದ ಕೆಂಪು ಬಣ್ಣದಿಂದ ಕೂಡಿದ ನೀರು ಸಾರ್ವಜನಿಕರಿಗೆ ಸರಬರಾಜು ಆಗುತ್ತಿದೆ. ಇತ್ತೀಚೆಗೆ ಸಂಪೂರ್ಣ ಅಶುದ್ಧ ನೀರು ಕಂಡು ಹೌಹಾರಿದ ಸ್ಥಳೀಯರು ವಾಟ್ಸ್‍ಪ್ ಮೂಲಕ ತಮ್ಮ ಮನೆಯ ಸಂಪಿನ ನೀರಿನ ಪೋಟೋ ಹಾಕಿ ಸಿಡಿಮಿಡಿ ವ್ಯಕ್ತಪಡಿಸಿದ್ದರು.       ಈ ಅಶುದ್ಧ ನೀರು ಬಳಸಿದರೂ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎಂದು ಆರೋಪಿಸಿ ಪಟ್ಟಣದ ಕೆಲ ಪ್ರಜ್ಞಾವಂತ ನಾಗರೀಕರು ಸಾಮಾಜಿಕ ಜಾಲತಾಣದಲ್ಲೇ ಇಡೀ ದಿನ ಚಾಟಿಂಗ್ ಮೂಲಕ ವಿನೂತನ ರೀತಿ ಆಕ್ರೋಶ ಹೊರಹಾಕಿದ್ದರು. ಸೂಕ್ತ ಉತ್ತರ ಸಿಗದ ಕಾರಣ ಮುಂದುವರೆದು ಸೋಮವಾರ ಬೆಳಿಗ್ಗೆ ಪಪಂ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿದ ನಾಗರೀಕರ ದಂಡು…

Read More

ತುಮಕೂರು :      ಜಿಲ್ಲೆಯಲ್ಲಿಂದು 35 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 513ಕ್ಕೆ ಏರಿಕೆಯಾಗಿದೆ ಎಂದು ಡಿ.ಹೆಚ್.ಓ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ. ಇಂದು ಜಿಲ್ಲೆಯ ತುಮಕೂರು ತಾಲ್ಲೂಕಿನಲ್ಲಿ 31, ಗುಬ್ಬಿ-2, ಕುಣಿಗಲ್-1, ಶಿರಾ-1 ಸೇರಿ ಒಟ್ಟು 35 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.       ಇಂದು ಆಸ್ಪತ್ರೆಯಿಂದ 3 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 137 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 361 ಸಕ್ರಿಯ ಪ್ರಕರಣಗಳಿದ್ದು, ಇಂದು ಒಬ್ಬರು ಮೃತಪಟ್ಟಿದ್ದಾರೆ. ಈವರೆಗೆ 15 ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

 ತುಮಕೂರು:       ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ 20 ವರ್ಷದ ಕೋವಿಡ್-19 ಸೋಂಕಿತೆಗೆ ಜಿಲ್ಲಾಸ್ಪತ್ರೆಯಲ್ಲಿಂದು ಹೆರಿಗೆ(ಮೊದಲ ಗರ್ಭಧಾರಣೆ)ಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ವೀರಭದ್ರಯ್ಯ ತಿಳಿಸಿದ್ದಾರೆ.       ತಾಯಿಗೆ Premature Rupture of Membranes ಆಗಿದ್ದರಿಂದ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಯಿತು. ಹೆಣ್ಣು ಮಗು ಜನನವಾಗಿದ್ದು, ಆರೋಗ್ಯವಾಗಿದೆ.       ಸ್ತ್ರೀರೋಗ ತಜ್ಞೆ ಡಾ|| ಮಹಾಲಕ್ಷ್ಮಮ್ಮ, ಅರಿವಳಿಕೆ ತಜ್ಞ ಡಾ|| ಸುರೇಶಬಾಬು ಮತ್ತು ತಂಡದವರು ಈ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಇದು ಮೊದಲ ಕೋವಿಡ್-19 ಸೋಂಕಿತ ಗರ್ಭಿಣಿಗೆ ಮಾಡಿದ ಸಿಸೇರಿಯನ್ ಶಸ್ತ್ರಚಿಕಿತ್ಸೆ ಹೆರಿಗೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

Read More

ತುಮಕೂರು :       ಜಿಲ್ಲೆಯಲ್ಲಿ ಗುರುವಾರ 25 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 453 ಕ್ಕೆ ಏರಿಕೆಯಾಗಿದೆ ಎಂದು ಡಿ.ಹೆಚ್.ಓ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ  ತಿಪಟೂರು-1,ಶಿರಾ-6, ಪಾವಗಡ-3, ಮಧುಗಿರಿ  – 1, ಗುಬ್ಬಿ- 1, ಕುಣಿಗಲ್-1ಹಾಗೂ ತುಮಕೂರು-12 ಸೇರಿ ಒಟ್ಟು 14 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.       ಇತ್ತೀಚೆಗೆ ಮಕ್ಕಳಿಗೆ ಕೊವಿಡ್ 19 ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಠಿಸಿದೆ. ತಂದೆ ತಾಯಿ ಗಳ ನಿರ್ಲಕ್ಷ್ಯದಿಂದ ಮಕ್ಕಳಿಗೆ ಕೊರೊನಾ ಸೊಂಕು ವ್ಯಾಪಿಸುತ್ತಿದೆ.

Read More

ತುಮಕೂರು:       ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ನಂ.32ರ ವ್ಯಾಪ್ತಿಯಲ್ಲಿನ ಸಂಕ್ರಾಂತಿ ಸ್ಟೋರ್ಸ್ ಹತ್ತಿರವಿರುವ ಮಧುವನ ಪಾರ್ಕ್‍ನಲ್ಲಿ ಸ್ಮಾರ್ಟ್‍ಸಿಟಿ ವತಿಯಿಂದ ಅಭಿವೃದ್ಧಿ ಕಾಮಗಾರಿಗೆ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಭೂಮಿ ಪೂಜೆ ನೆರವೇರಿಸಿದರು.       ಈ ಸಂಧರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಈ ಭಾಗದವರು ಸದರಿ ಪಾರ್ಕ್‍ನಲ್ಲಿ ಸರ್ಕಾರದ ಯಾವುದೇ ಹಣ ನಿರೀಕ್ಷಣೆ ಮಾಡದೇ, ಸ್ವತಃ ತಾವುಗಳೇ ಬೆಂಚು ಹಾಕುವುದು, ಮರಗಿಡಗಳನ್ನು ಬೆಳಸುವುದು ಹಾಗೂ ಇತರೆ ಅಭಿವೃದ್ಧಿ ಕೆಲಸಗಳನ್ನು ಸ್ಥಳೀಯ ನಾಗರೀಕ ಬಂಧುಗಳೇ ಮಾಡಿರುವುದು ಸಂತಸದ ವಿಷಯ. ಈ ಪಾರ್ಕ್‍ನ ಅಭಿವೃದ್ಧಿ ಕಾಮಗಾರಿಯೂ ರೂ.44.47 ಲಕ್ಷದ ವೆಚ್ಚದಲ್ಲಿ ಚೈನ್‍ಲಿಂಕ್ ಫೆನ್ಸಿಂಗ್ ಹಾಗೂ ಪಾರ್ಕ್ ಅಭಿವರದ್ಧಿಗೆ ಉಪಯೋಗವಾಗುವಂತೆ ಬೋರ್‍ವೆಲ್ ವ್ಯವಸ್ಥೆಯನ್ನು ಸಹ ಮಾಡಲಾಗುವುದು ಮತ್ತು ಪಾರ್ಕ್ ಒಳಗೆ ಪಾಥ್‍ವೇ, ಬೆಂಚುಗಳು, ಹೊಸದಾಗಿ ಎಲೆಕ್ಟ್ರಿಕಲ್ ಗಾರ್ಡನ್ ಲೈಟಿಂಗ್ ಹಾಗೂ ಪ್ಲಾಂಟೇಷನ್ ಮಾಡಲಾಗುವುದು, ಈ ಒಂದು ಭಾಗದಲ್ಲಿ ಅತ್ಯುತ್ತಮವಾದಂತಹ ಪಾರ್ಕ್‍ನ್ನ ಸನ್ಮಾನ್ಯ ನರೇಂದ್ರ ಮೋದೀಜಿ ರವರ ನೇತೃತ್ವದ ಕನಸಿನ…

Read More

ಕುಣಿಗಲ್ :     4 ವರ್ಷ ಮಗುವಿನ ಮೇಲೆ ಚಿರತೆ ದಾಳಿ ಮಾಡಿ ಮಗುವನ್ನ ಕೊಂದು ಹಾಕಿರುವ ಘಟನೆ ಕುಣಿಗಲ್ ತಾಲೂಕು ಹುಲಿಯೂರು ದುರ್ಗ ಹೋಬಳಿ ರಾಜೇಂದ್ರ ಪುರ ಗ್ರಾಮದಲ್ಲಿ ನಡೆದಿದೆ.       ನಿನ್ನೆ ಮಧ್ಯಾಹ್ನ 12:30 ವೇಳೆಯಲ್ಲಿ ಸುಮಾರು 4 ವರ್ಷ ಮಗು ಮೇಲೆ ಚಿರತೆ ದಾಳಿ ಮಾಡಿ ಮಗುವನ್ನ ಕೊಂದು ಹಾಕಿದೆ.      ಮಧ್ಯಾಹ್ನ ತನ್ನ ತಾಯಿ ದೊಡ್ಡ ಈರಮ್ಮನ ಜೊತೆ ಬಟ್ಟೆ ತೊಳೆಯಲು ಹೋದಾಗ ದಾಳಿ ಮಾಡಿದೆ.

Read More

ತುಮಕೂರು:       ತುಮಕೂರು ನಗರದ ಜನಸಂಖ್ಯೆಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅವಶ್ಯಕವಾದ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ರವರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿರವರ ಸಹಯೋಗದೊಂದಿಗೆ ಬುಗುಡನಹಳ್ಳಿ ಕೆರೆಯಿಂದ ಅಮಾನಿಕೆರೆಗೆ ನೀರನ್ನು ತುಂಬಿಸಿ, ನಂತರ ತುಂಬಿದ ನೀರನ್ನು ಪಿ.ಎನ್.ಪಾಳ್ಯದಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ (WಖಿP) ಹಾಯಿಸಿ ಶುದ್ಧೀಕರಣ ನಂತರ ಕುಡಿಯುವ ನೀರಿಗೆ ನೀರು ಸರಬರಾಜು ಮಾಡಲು ಯೋಜನೆಯನ್ನು ತಯಾರಿಸಲಾಗಿದೆ. ಈ ಯೋಜನೆಯನ್ನು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅನುದಾನದಲ್ಲಿ ಎರಡು ಹಂತದಲ್ಲಿ ರೂ.32 ಕೋಟಿಗಳಿಗೆ ಟೆಂಡರ್ ಕರೆಯಲಾಗಿದ್ದು, ಯೋಜನೆಗಳು ಅನುಷ್ಟಾನ ಹಂತದಲ್ಲಿದೆ.       ಈ ಯೋಜನೆಯ ಮೊದಲ ಹಂತವಾದ ಬುಗುಡನಹಳ್ಳಿ ಕೆರೆಯಿಂದ ತುಮಕೂರು ಅಮಾನಿಕೆರೆಗೆ ನೀರು ತುಂಬುವ ಕಾಮಗಾರಿಯು ಮುಕ್ತಾಯಗೊಂಡಿದ್ದು, ದಿ:11.07.2020 ರಂದು ಪ್ರಾಯೋಗಿಕವಾಗಿ ನೀರನ್ನು ತುಂಬಿಸುವ ಪ್ರಕ್ರಿಯೆಯನ್ನು ಪರೀಕ್ಷಿಸಲಾಯಿತು. ಈ ಸುಸಂದರ್ಭದಲ್ಲಿ ಮಾನ್ಯ ಸಂಸದರಾದ ಶ್ರೀ ಜಿ.ಎಸ್.ಬಸವರಾಜು, ಮಾನ್ಯ ಶಾಸಕರಾದ ಶ್ರೀ ಜ್ಯೋತಿ ಗಣೇಶ್,…

Read More

ತುಮಕೂರು: ‘       ತುಮಕೂರು ಜಿಲ್ಲೆಯ ಪೊಲೀಸ್ ಇಲಾಖೆಗೆ ಕೊರೊನಾ ಮಹಾಮಾರಿ ಬೆಂಬಿಡದೆ ಕಾಡುತ್ತಿದ್ದು, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರೊನಾ ಮಹಾಮಾರಿಯ ಅಬ್ಬರಕ್ಕೆ ತತ್ತರಿಸಿ ಹೋಗಿದ್ದಾರೆ.       ಜನಸಾಮಾನ್ಯರನ್ನ ಭಯಬೀತಗೊಳಿಸಿ ಜನರನ್ನು ದುರ್ಬಲ ಮಾಡುತ್ತಿದ್ದ ಕೊರೊನಾ ಸೋಂಕು ಹಲವರ ಪ್ರಾಣವನ್ನ ಆಹುತಿ ತೆಗೆದುಕೊಳ್ಳಲು ಆತುವರಿಯುತ್ತಿತ್ತು. ದುರ್ಬಲ ಮನಸ್ಸುಗಳು ಮಹಾಮಾರಿಯ ಆರ್ಭಟಕ್ಕೆ ಹೆದರಿ ಪ್ರಾಣ ತೆಜಿಸುವ ನಿರ್ಧಾರಕ್ಕೂ ಮುಂದಾಗುತ್ತಿದ್ದಂತ ದುರ್ಘಟನೆಗಳು ನಡೆಯುತ್ತಿತ್ತು.       ಕೊರೊನಾ ಸೋಂಕು ದೇಹದೊಳಗೆ ನುಸುಳುತ್ತಿದ್ದಂತೆ ಆತಂಕಗೊಂಡ ಜನತೆ ಮಾನಸಿಕ ದುರ್ಬಲಕ್ಕೊಳಗಾಗಿ ಚಿಕಿತ್ಸೆಗೆ ಸ್ಪಂಧಿಸದೆ ತಮ್ಮ ಆರೋಗ್ಯವನ್ನು ತಾವೇ ಬಲಿ ತೆಗೆದುಕೊಳ್ಳುವಂತಹ ಪ್ರಸಂಗಗಳು ಕೇಳಿಬರುತ್ತಿವೆ. ಆದರೆ, ಇಂತಹ ಪರಿಸ್ಥಿತಿ ಕೇವಲ ಸಾರ್ವಜನಿಕರಿಗಿದೆ ಎಂದು ಭಾವಿಸುವುದು ಬೇಡ. ಇಡೀ ವಿಶ್ವವನ್ನೇ ಆಹುತಿ ತೆಗೆದುಕೊಳ್ಳಲು ರಣಖೇಕೆ ಹಾಕುತ್ತಿದ್ದ ಕೊರೊನಾ ಸೋಂಕು, ಕೊರೊನಾ ವಾರಿಯರ್ಸ್‍ಗಳನ್ನು ಬಿಡುತ್ತಿಲ್ಲ.       ರಾಜ್ಯದ ಸುದ್ದಿಯನ್ನ ಬದಿಗಿರಿಸಿ ತುಮಕೂರು ಜಿಲ್ಲೆಯನ್ನ ಒಮ್ಮೆ ಅವಲೋಕಿಸಿ ನೋಡಿದರೆ ತುಮಕೂರು…

Read More

ತುಮಕೂರು:       ತುಮಕೂರು ತಾಲ್ಲೂಕು ಪಂಚಾಯಿತಿ ಮಹಿಳಾ ಸಿಬ್ಬಂದಿ ಮಂಜುಳಾ ಕರೋನಾ ಪಾಸಿಟಿವ್ ಧೃಡ ಪಟ್ಟಿದೆ. ಒಂದು ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು ಮತ್ತು ಕಚೇರಿಗೆ ಹಾಜರಾಗಿರುವುದಿಲ್ಲ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ವಾಸವಿರುವ ಸೋಂಕಿತ ಮಂಜುಳಾರವರು ಪ್ರತಿನಿತ್ಯ ಕೆಸ್ತೂರು ಗ್ರಾಮ ಪಂಚಾಯತ್ ನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ರಮೇಶ್ ಮತ್ತು ಸ್ವಾಂದೇನಹಳ್ಳಿ ಪಿಡಿಓ ಕೃಷ್ಣಮೂರ್ತಿ ರವರ ಜೊತೆಯಲ್ಲಿ ಬೆಂಗಳೂರಿನಿಂದ ಕೃಷ್ಣಮೂರ್ತಿ ಅವರ ಕಾರಿನಲ್ಲಿ ಬಂದು ಹೋಗುತ್ತಿರುತ್ತಾರೆ. ಸ್ವಾಂದೇನಹಳ್ಳಿ ಪಿಡಿಒ ಕೃಷ್ಣಮೂರ್ತಿ ಮಾಹಿತಿ ತಿಳಿದ ಮೇಲೆ ಕಚೇರಿ ಹಾಜರಾಗದೆ ರಜೆ ಪಡೆದಿರುವ ವಿಚಾರ ಕೇಳಿ ಬಂದಿರುತ್ತದೆ.       ಕೃಷ್ಣಮೂರ್ತಿ ರಮೇಶ್ ಮಂಜುಳಾ ರವರು ಪ್ರತಿನಿತ್ಯ ಕೃಷ್ಣಮೂರ್ತಿ ಕಾರಿನಲ್ಲಿ ಬೆಂಗಳೂರು ನಿಂದ ಬರುತ್ತಿದ್ದು ಕೆಸ್ತೂರು ಮತ್ತು ಸ್ವಾಂದೇನಹಳ್ಳಿ ಪಂಚಾಯತ್ ಸಿಬ್ಬಂದಿಗಳು ಕೂಡ ಆತಂಕದಲ್ಲಿದ್ದಾರೆ. ಅದೇ ಮಂಜುಳಾ ರವರಿಗೆ ಕರೋನಾ ಪಾಸಿಟಿವ್ ದೃಢಪಟ್ಟಿರುವ ವಿಚಾರ ತಾಲೂಕು ಪಂಚಾಯತ್ ಇವೋ ಜೈಪಾಲ್ ಮತ್ತು ಏಡಿ ಶಶಿಧರ್ ರವರಿಗೆ ಮಾಹಿತಿ ಇರುತ್ತದೆ.  …

Read More