ತುಮಕೂರು: ನಗರದ ರೈಲ್ವೆ ನಿಲ್ದಾಣ ರಸ್ತೆಯ ಕಾಮಗಾರಿ ತ್ವರಿತಗತಿಯಿಂದ ನಡೆಯುತ್ತಿದ್ದು, ಮುಂದಿನ ಒಂದು ತಿಂಗಳಲ್ಲಿ ಮುಗಿಯುತಿದ್ದು, ಇದಕ್ಕಾಗಿ ಸಹಕರಿಸಿದ ನಗರದ ಶಾಸಕರು, ಪಾಲಿಕೆಯ ಆಯುಕ್ತರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ 15ನೇ ವಾರ್ಡಿನ ಕೌನ್ಸಿಲರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ತಿಳಿಸಿದ್ದಾರೆ. ರೈಲ್ವೆ ನಿಲ್ದಾಣದ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಯ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಐದು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ನಿಲ್ದಾಣದಿಂದ ಉಪ್ಪಾರಹಳ್ಳಿ ರೈಲ್ವೆ ಅಂಡರ್‍ಪಾಸ್, ಸೋಮೇಶ್ವರಪುರಂಗೆ ಸಂಪರ್ಕ ಕಲ್ಪಿಸವ ಸುಮಾರು 1.25ಕಿ.ಮಿ ರಸ್ತೆಯನ್ನು ಮೂರುವರೆ ಕೋಟಿ ರೂಪಾಯಿಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇಲ್ಲಿನ ನಾಗರಿಕರು ಮತ್ತು ಜನಪ್ರತಿನಿಧಿಗಳ ಕೋರಿಕೆಯ ಮೇರೆಗೆ ರಸ್ತೆ ಒತ್ತುವರಿಯನ್ನು ಸ್ವತಹಃ ಮನೆಯ ಮಾಲೀಕರುಗಳೇ ತೆರವುಗೊಳಿಸಿಕೊಂಡಿದ್ದು, ರಸ್ತೆ ಅಭಿವೃದ್ದಿಗೆ ಪ್ರಮುಖ ಅಡ್ಡಿ ನಿವಾರಣೆಯಾದಂತಾಗಿದೆ ಎಂದರು. ಈ ರಸ್ತೆಯು 7.5…
Author: News Desk Benkiyabale
ಮಧುಗಿರಿ: ಇಲ್ಲಿನ ಎಪಿಎಂಸಿಗೆ ಕೃಷಿ ಕ್ಷೇತ್ರದಿಂದ ಆಯ್ಕೆಯಾಗಿರುವ ಯಾವುದೇ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮತ್ತು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಚುನಾವಣೆ ಪ್ರಕ್ರಿಯೆ ಜೂನ್ -12 ರಂದಿ ನಡೆಯಲಿದೆ. ಈ ಎಪಿಎಂಸಿಯಲ್ಲಿ ಕೃಷಿ ಕ್ಷೇತ್ರದಿಂದ ಹನ್ನೊಂದು, ವರ್ತಕರ ಕ್ಷೇತ್ರದಿಂದ ಒಬ್ಬರು, ಟಿಎಪಿಸಿಎಂಎಸ್ ನಿಂದ ಒಬ್ಬರು ಹಾಗೂ ಕೆಒಎಫ್ ನಿಂದ ಒಬ್ಬರು ಸದಸ್ಯರು ಆಯ್ಕೆ ಯಾಗಿದ್ದು, ಚುನಾವಣೆಯಲ್ಲಿ ಹದಿನಾಲ್ಕು ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಇಬ್ಬರು ಸದಸ್ಯರು ಮಾತ್ರ ಜೆಡಿ ಎಸ್ ನಿಂದ ಆಯ್ಕೆಯಾಗಿದ್ದು ಉಳಿದವರೆಲ್ಲ ಕಾಂಗ್ರೆಸನ್ನು ಬೆಂಬಲಿಸಿರುವುದರಿಂದ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಸಿದ್ದಾಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ಚಿಕ್ಕ ರಂಗಪ್ಪನವರ ಮೃತಪಟ್ಟ ಹಿನ್ನೆಲೆಯಲ್ಲಿ ಹದಿಮೂರು ಸದಸ್ಯರು ಮತದಾನ ಮಾಡಬಹುದಾಗಿದೆ. ಕಾಂಗ್ರೆಸ್ ಸದಸ್ಯರುಗಳು ಇಂತಿದ್ದಾರೆ: ಎಂ.ಬಿ .ಮರಿಯಣ್ಣ (ಮಧುಗಿರಿ) ಕೆ.ಬಿ. ರಾಜಕುಮಾರ್ (ಬ್ಯಾಲ್) ಪಿ.ಸಿ. ಕೃಷ್ಣಾರೆಡ್ಡಿ (ಕೊಡಿಗೇನಹಳ್ಳಿ) ರಮಾಬಾಯಿ (ಪುರವರ) ಪಿ.ಟಿ. ಗೋವಿಂದಯ್ಯ (ಐ.ಡಿ.ಹಳ್ಳಿ) ಅಶ್ವತಮ್ಮ (ಕಡಗತ್ತೂರು)…
ಪಾವಗಡ: ತಾಲ್ಲೂಕಿನ ಸಮಾಜಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಅಧಾರದ ಮೇಲೆ ವಸತಿನಿಲಯಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಸುಮಾರು 60 ಅಡುಗೆ ಕೆಲಸಗಾರರು ಬದುಕು ಅಕ್ಷರಶಃ ಬೀದಿಗೆ ಬಂದು ತಲುಪಿದೆ, ಕಾರಣ ಕಳೆದ 1 ವರ್ಷದದಿಂದ ಇವರು ಮಾಡಿದ ಕೆಲಸಕ್ಕೆ ಸಮಾಜಕಲ್ಯಾಣ ಇಲಾಖೆ ಸಂಬಳ ನೀಡಿಲ್ಲಾ, ಇದರಿಂದ ಇವರು ಜೀವನ ಸಾಗಿಸುವುದು ದುಸ್ಥರವಾಗಿದೆ. ಈ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಅನೇಕ ಬಾರಿ ಹೋರಾಟಗಳು ಮಾಡಿದ್ದರೂ ಸಹ ನಮ್ಮ ಮನವಿಗೆ ಇಲಾಖೆ ಕ್ಯಾರೆ ಎನ್ನುತ್ತಿಲ್ಲಾ ಎಂದು ಅಡುಗೆ ಸಹಾಯಕರು ಮಾಧ್ಯಮದ ಬಳಿ ಬುಧವಾರ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಅವಲತ್ತುಕೊಂಡಿದ್ದಾರೆ. ಈ ವೇಳೆ ಸಂಘದ ಮುಖಂಡೆ ಪದ್ಮಾವತಿ ಮಾತನಾಡುತ್ತಾ, ಕಳೆದ ಮಾರ್ಚ 21 ರಿಂದ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ನಮ್ಮ ಸಂಸಾರ ನಿರ್ವಹಣೆಯಾಗದೇ ನಮ್ಮ ಬದುಕೆ ಲಾಕ್ ಡೌನ್ ಆಗಿದೆ, ಇತ್ತಕಡೆ ಕೆಲಸವೂ ಇಲ್ಲಾ, ಸಂಬಳವೂ ಇಲ್ಲಾ, 1…
ಚಿಕ್ಕನಾಯಕನಹಳ್ಳಿ: ಕೃಷಿ ಇಲಾಖೆಯಲ್ಲಿ ರೈತ ಅನುವುಗಾರರ ಸೇವೆಯನ್ನು ಮುಂದುವರೆಸಿ, ಮಾಸಿಕ ರೂ.ಹತ್ತು ಸಾವಿರ ಗೌರವಧನ ನೀಡಬೇಕೆಂದು ರೈತ ಅನುವುಗಾರರ ಸಂಘ ಒತ್ತಾಯಿಸಿದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪನವರ ಸರ್ಕಾರದಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಳ್ಳಿಗಳ ಪ್ರತಿಯೊಬ್ಬ ರೈತರಿಗೂ ತಾಂತ್ರಿಕ ಮಾಹಿತಿಗಳನ್ನು ನೀಡಲು, ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ರೈತ ಅನುವುಗಾರರ ಸೇವೆಯನ್ನು ನೇಮಕ ಮಾಡಲಾಗಿತ್ತು. ಇಲಾಖೆ ಹಾಗೂ ರೈತರ ನಡುವೆ ಭೂಚೇತನ ಯೋಜನೆಯಡಿ ಪ್ರತಿ 500 ಹೆಕ್ಟರ್ ಗೆ ಒಬ್ಬರಂತೆ ನೇಮಕಮಾಡಲಾಗಿತ್ತು. ರಾಜ್ಯದಾದ್ಯಂತ ಇಂತಹ 6000 ರೈತ ಅನುವುಗಾರರು ( ತಾಂತ್ರಿಕ ಉತ್ತೇಜಕರು) ಸೇವೆಯಲ್ಲಿದ್ದರು. ಕಳೆದ 12 ವರ್ಷಗಳಿಂದ ಕೃಷಿ ಇಲಾಖೆಯನ್ನೆ ನಂಬಿ ಬದುಕುತ್ತಿದ್ದರು. ಆದರೆ ಈಗ ಇವರ ಸೇವೆಯನ್ನು ಪರಿಗಣಿಸುತ್ತಿಲ್ಲ. ಸರ್ಕಾರವನ್ನೆ ನಂಬಿರುವ ಅನುವುಗಾರರ ಸೇವೆಯನ್ನು ಪ್ರತಿ ಪಂಚಾಯಿತಿಗೊಬ್ಬರಂತೆ ಪರಿಗಣಿಸಿ ಮಾಸಿಕ ರೂ.10 ಸಾವಿರ ಗೌರವ ಧನ ನಿಗಧಿಗೊಳಿಸಬೇಕೆಂದು ಅನುವುಗಾರರ…
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಜಿಲ್ಲಾ ಪೊಲೀಸ್ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸ್ ಇಲಾಖೆಯಲ್ಲಿ ಹಂತ ಹಂತವಾಗಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಗೃಹ ಸಚಿವರ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತುಮಕೂರು ಜಿಲ್ಲೆಯು ಬೆಂಗಳೂರಿಗೆ ಹತ್ತಿರವಿರುವ ಜಿಲ್ಲೆಯಾಗಿರುವುದರಿಂದ ಇಲ್ಲಿ ಕೋವಿಡ್-19 ನಿಯಂತ್ರಣ ದೊಡ್ಡ ಸವಾಲಾಗಿತ್ತು. ಕೊರೊನಾ ನಿಯಂತ್ರಣ ಸಮಯದಲ್ಲಿ ತುಮಕೂರು ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ವೀಕ್ಷಿಸಿದ್ದೇನೆ. ಕೋವಿಡ್-19 ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಂಟೈನ್ಮೆಂಟ್ ವಲಯ, ಚೆಕ್‍ಪೋಸ್ಟ್ ನಿರ್ವಹಣೆ, ಕ್ವಾರೆಂಟೈನ್ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಕಡಿಮೆಯಿದ್ದು, ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಲಾಕ್‍ಡೌನ್ ಸಮಯದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಿತ್ತು. ಲಾಕ್‍ಡೌನ್ ಸಡಿಲಿಕೆಯಾದ ನಂತರ ಅಪರಾಧ ಪ್ರಕರಣಗಳು ಮರುಕಳಿಸುತ್ತವೆ. ಕೋವಿಡ್-19 ನಿಯಂತ್ರಣ…
ತುಮಕೂರು: ಇದೇ ಜೂನ್ 18ರಂದು ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯ ಪರೀಕ್ಷೆಯನ್ನು ಯಾವುದೇ ಲೋಪದೋಷಗಳಿಲ್ಲದೆ ನಡೆಸಬೇಕೆಂದು ಜಿಲ್ಲಾಧಿಕಾರಿ ಡಾ:ಕೆ.ರಾಕೇಶ್ ಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕಳೆದ ಮಾರ್ಚ್ ಮಾಹೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆದಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಇಂಗ್ಲೀಷ್ ವಿಷಯ ಮಾತ್ರ ನಡೆಯದೆ ಬಾಕಿ ಉಳಿದಿತ್ತು. ಸರ್ಕಾರದ ನಿರ್ದೇಶನದಂತೆ ಇಂಗ್ಲೀಷ್ ವಿಷಯ ಪರೀಕ್ಷೆಯನ್ನು ಇದೇ ಜೂನ್ 18ರಂದು ನಡೆಸಲಾಗುವುದು. ಜಿಲ್ಲೆಯಲ್ಲಿ ಮಾರ್ಚ್ ಮಾಹೆಯಲ್ಲಿ ಸುಸೂತ್ರವಾಗಿ ಪರೀಕ್ಷೆ ನಡೆಸಿದಂತೆ ಜೂನ್ 18ರಂದು ಸಹ ಯಾವುದೇ ಲೋಪದೋಷಗಳಿಲ್ಲದೆ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಬೇಕೆಂದು ಅವರು ನಿರ್ದೇಶನ ನೀಡಿದರು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಯಾಗದಂತೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಕೊಠಡಿಗೆ ಉತ್ತಮ ಗಾಳಿ-ಬೆಳಕಿನ ವ್ಯವಸ್ಥೆ, ಪರೀಕ್ಷೆ ಬರೆಯಲು ಸುಸ್ಥಿತಿಯಲ್ಲಿರುವ ಮೇಜುಗಳ ವ್ಯವಸ್ಥೆ ಸೇರಿದಂತೆ ಅಗತ್ಯ…
ಕೊರಟಗೆರೆ: ರಾಷ್ಟ್ರದಲ್ಲಿಯೇ ಅತಿಹೆಚ್ಚು ಪೊಲೀಸ್‍ಠಾಣೆ ಮತ್ತು ವಸತಿಗೃಹ ನಿರ್ಮಾಣ ಮಾಡುತ್ತಿರುವ ರಾಜ್ಯ ಕರ್ನಾಟಕ ಆಗಿದೆ ಎಂದು ಗೃಹಸಚಿವ ಬಸವರಾಜು ಬೊಮ್ಮಾಯಿ ತಿಳಿಸಿದರು ಕೊರಟಗೆರೆ ಪಟ್ಟಣದ ಜನಸ್ನೇಹಿ ಪೊಲೀಸ್‍ಠಾಣೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬುಧವಾರ ಭಾಗವಹಿಸಿ ಮಾತನಾಡಿದರು. ರಾಜ್ಯ ಸರಕಾರದ ಪ್ರಸ್ತುತ ಆಯವ್ಯಯದಲ್ಲಿ ಪೊಲೀಸ್ ಇಲಾಖೆಯ ಗೃಹ ನಿರ್ಮಾಣಕ್ಕೆ 5ಸಾವಿರ ಕೋಟಿ ಮೀಸಲಿಡಲಾಗಿದೆ. 2020ರಿಂದ 2025ರವರೆಗೆ ಶೇ.75ರಷ್ಟು ಗೃಹನಿರ್ಮಾಣ ದೂರದೃಷ್ಟಿ ಹೊಂದಲಾಗಿದೆ. ಪೊಲೀಸರ ಅನುಕೂಲತೆಗೆ ತಕ್ಕಂತೆ ಜನಸ್ನೇಹಿ ಪೊಲೀಸ್‍ಠಾಣೆಯನ್ನು ಆಧುನಿಕವಾಗಿ ನಿರ್ಮಾಣ ಮಾಡಲಾಗುತ್ತೀದೆ. ಇದರ ಉದ್ದೇಶ ಅಪರಾದ ಕಡಿಮೆಯಾಗಿ ಸಾಮಾನ್ಯ ಜನರಿಗೆ ನ್ಯಾಯ ಸಿಗುವಂತಾಗಬೇಕು ಎಂದರು. ಮಾಜಿ ಕೇಂದ್ರಸಚಿವ ಮಲ್ಲಿಕಾರ್ಜುನ ಖರ್ಗೆಗೆ ಬೆದರಿಕೆ ಕರೆಯ ಬಗ್ಗೆ ಪರಿಶೀಲನೆ ನಡೆಸಲು ಐಜಿಗೆ ದೂರು ನೀಡಲಾಗಿದೆ. ದೂರಿನಂತೆ ತನಿಖೆಯನ್ನು ನಡೆಸಲಾಗುತ್ತದೆ. ಇದರ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ…
ಮಧುಗಿರಿ: ತಾಲೂಕಿನ ಕಸಬಾ ಹೋಬಳಿ ಸಿದ್ದಾಪುರ ಗ್ರಾಮದ ಕೆರೆಯ ಅಭಿವೃದ್ಧಿ ಕೆಲಸದಲ್ಲಿ ಅಕ್ರಮವಾಗಿರುವ ಬಗ್ಗೆ ಸಿದ್ದಾಪುರ ಕೆರೆ ಹಿಂಭಾಗದಲ್ಲಿನ ಅಚ್ಚುಕಟ್ಟುದಾರರು ಪತ್ರಿಕಾ ಹೇಳಿಕೆಯಲ್ಲಿ ಅರೋಪಿಸಿದ್ದಾರೆ. ಸಿದ್ದಾಪುರ ಕೆರೆಯನ್ನು ಸುಮಾರು ಹತ್ತು ತಿಂಗಳ ಹಿಂದೆಯ ಬಯಲುಸೀಮೆ ಅಭಿವೃದ್ಧಿ ಮಂಡಳಿ ಅನುದಾನದಿಂದ ಜಂಗಲ್ ಕ್ಲಿಯರ್ ಆಗಿದ್ದು ಪುನಹ ಜಂಗಲ್ ಕ್ಲಿಯರ್ ಮಾಡುವ ಆವಶ್ಯಕತೆ ಏನಿತ್ತು , ಸಿದ್ದಾಪುರ ಕೆರೆ ಏರಿಯು ಈ ಹಿಂದೆ ಮಂಗೆ ಬಿದ್ದು ಸುಮಾರು ಅಡಿಕೆ ತೋಟಗಳು ಹಾಳಾಗಿದ್ದು ಇದರಿಂದ ರೈತರಿಗೆ ಸುಮಾರು ನಷ್ಟವಾಗಿರುತ್ತದೆ.ಈ ಮಂಗೆಯನ್ನು ಸರ್ಕಾರದ ಕಡೆಯಿಂದ ಮುಚ್ಚಿ ರಿಪೇರಿ ಮಾಡಿ ಕೊಟ್ಟಿರುತ್ತಾರೆ. ಈ ರಿಪೇರಿ ಆದಂತಹ ಕೆರೆಯ ಏರಿಯ ಮೇಲೆಯ ಹೊಸ ಮಣ್ಣು ಹಾಕದೆ ಅದೇ ಏರಿಯ ಮಣ್ಣನ್ನು ಜೆಸಿಬಿ , ಮತ್ತು ಹಿಟಾಚಿ ಗಳಿಂದ ಕೆದಕಿ ಹೊಸ ಮಣ್ಣನ್ನು ತೋರಿಸಿರುತ್ತಾರೆ. ಇದರಿಂದ ಎರಿಯ ಕಟ್ಟಡ ಸಡಿಲವಾಗಿರುತ್ತದೆ. ಸಿದ್ದಾಪುರ ಗ್ರಾಮದ ರೈತರು ತಮ್ಮ ತೋಟಗಳಿಗೆ ಹಾಗು ಹೊಲ…
ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮ ಪಂಚಾಯತಿ ನೌಕರರು ಜಿಲ್ಲಾ ಪಂಚಾಯತ್ ಕಚೇರಿಗೆ ಮನವಿ ಸಲ್ಲಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಮೇಶ್ (ಉಪ ಕಾರ್ಯದರ್ಶಿ-2) ಮನವಿ ಸಲ್ಲಿಸಿದರು. ಸರ್ಕಾರ ಕಳೆದ 2 ವರ್ಷಗಳಿಂದ ಗ್ರಾ.ಪಂ. ನೌಕರರ ವೇತನ ಪಾವತಿಗೆ ಬೇಕಾಗಿರುವ ಹಣವನ್ನು ಸರ್ಕಾರವೇ ಭರಿಸುವ ತೀರ್ಮಾನ ಮಾಡಿರುವುದು ಸ್ವಾಗತಾರ್ಹ. ರಾಜ್ಯದ 6025 ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 6500 ಸಿಬ್ಬಂದಿಗಳಿಗೆ ರೂ. 900 ಕೋಟಿ ರೂ. ಬೇಕಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 518 ಕೋಟಿ ರೂ. ಮಾತ್ರ ಮಂಜೂರಾತಿ ನೀಡಿದೆ. ಕಳೆದ 2 ವರ್ಷಗಳಿಂದ ಸಿಬ್ಬಂದಿ ವೇತನ ಬಾಕಿ ಉಳಿದಿದೆ. 3 ತಿಂಗಳಿಗೊಮ್ಮೆ ಬಿಡುಗಡೆಯಾದ ಕಂತಿನ ಹಣದಲ್ಲಿ 2 ತಿಂಗಳು ವೇತನಕ್ಕಾಗಿ ಮಾತ್ರ ಹಣ ಸಾಕಾಗುತ್ತದೆ. 2 ವರ್ಷಗಳಿಂದ 8 ತಿಂಗಳವರೆಗೆ ಬಾಕಿ ಇದೆ. ಬಾಕಿ ಇರುವ ಹಣವನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಮಾರ್ಗದರ್ಶನ…
ಮಧುಗಿರಿ: ಪುರಸಭೆ ವ್ಯಾಪ್ತಿಯಲ್ಲಿರುವ ‘ಹ್ಯೆಮಾಸ್ ದೀಪಗಳು’ತೋರ್ಪಡಿಕೆಗೆ ಅಥವಾ ನೆಪ ಮಾತ್ರಕ್ಕೆ ಅಳವಡಿಸಿದಂತೆ ಕಾಣುತ್ತಿದೆ. ದೀಪಗಳು ಉರಿಯದೇ ಕತ್ತಲೆ ಕೊಂಪೆಯಾಗಿ ವರ್ಷಗಳು ಕಳೆದರೂ ರಿಪೇರಿ ಮಾಡಿಸುವ ಗೋಜಿಗೆ ಹೋಗದೆ ಇರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. 18ನೇ ವಾರ್ಡಿನ ಗುರು ವಡೇರಹಳ್ಳಿಯ ಮಾಜಿ ಶಾಸಕ ಕೆ.ಎನ್.ರಾಜಣ್ಣನವರ ಸ್ವಗೃಹದ ಸಮೀಪವಿರುವ ಹೈಮಾಸ್ ದೀಪ ಉರಿದು ವರ್ಷಗಳೇ ಕಳೆದಿದೆ. ಸಮೀಪದಲ್ಲೇ ವೀರಾಂಜನೇಯ ದೇವಸ್ಥಾನವಿದ್ದು ಸಾವಿರಾರು ಭಕ್ತಾದಿಗಳು ಪೂಜೆಗೆ ಬರುತ್ತಾರೆ. ಕತ್ತಲೆಯಲ್ಲೇ ಓಡಬೇಕಾದ ಸ್ಥಿತಿಯಲ್ಲಿದೆ ಎಲ್ಲದಕ್ಕೂ ಕೊರೊನಾ ಕಾರಣದಿಂದ ರಿಪೇರಿ ಸಾಧ್ಯವಿಲ್ಲವೆನ್ನುವ ಪುರಸಭೆಯವರು ಒಂದು ವರ್ಷದಿಂದ ಉರಿಯದೇ ಇರುವುದಕ್ಕೆ ಕಾರಣವಾದರೂ ಏನು ಎಂದು ವಾರ್ಡಿನ ನಾಗರಿಕರು ಪ್ರಶ್ನಿಸುತ್ತಿದ್ದಾರೆ.ಈ ದೀಪ ಉರಿದರೆ ಎಪಿಎಂಸಿ ಹಿಂಭಾಗದ ರಸ್ತೆ, ಹಿಂದೂಪುರದ ರಸ್ತೆ, ಗುರು ವಡೆರಹಳ್ಳಿ ಸಂಪೂರ್ಣ ಬೆಳಕಿನಿಂದ ವಿಜೃಂಭಿಸುತ್ತದೆ. ಆದರೆ ಕತ್ತಲಲ್ಲೇ ಇರಬೇಕಾದಂತಹ ಪರಿಸ್ಥಿತಿಯಲ್ಲಿ ಇದೆ. ಇನ್ನು ಗೌರಿಬಿದನೂರು ವೃತ್ತದಲ್ಲಿ ಇರುವ ಹ್ಯೆಮಾಸ್ ನಲ್ಲಿ ಎರಡು ದೀಪಗಳು…











