ತುಮಕೂರು: ಗ್ರಾಮ ಪಂಚಾಯಿತಿಯಲ್ಲಿನ ಸಿಬ್ಬಂದಿಗಳಿಗೆ ಲಂಚ ಕೊಡದಿದ್ದರೆ ಯಾವ ಸರ್ಕಾರಿ ಸೇವಾ?ಸೌಲಭ್ಯಗಳು ಸಿಗುವುದಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳು(ಪಿಡಿಒ) ಆ ಸಭೆ, ಈ ಸಭೆ ಇದೆ ಎಂದು ಪಂಚಾಯಿತಿ ಕಚೇರಿಗೆ ಬರುವುದಿಲ್ಲ. ಇದರಿಂದ ಜನರಿಗೆ ಸರ್ಕಾರಿ ಯೋಜನೆಗಳ ಪ್ರಯೋಜನ ಸಕಾಲಕ್ಕೆ ತಲುಪುತ್ತಿಲ್ಲ ಎಂದು ತುಮಕೂರು ತಾಲ್ಲೂಕು ಪಂಚಾಯಿತಿ ಸದಸ್ಯರು ಆರೋಪಿಸಿದರು. ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಒಕ್ಕೊರಲಿನಿಂದ ಅಧ್ಯಕ್ಷರಿಗೆ ದೂರಿದರು. ಸ್ಥಳೀಯ ಶಾಸಕರ ಬೆಂಬಲಿತ ಪಂಚಾಯಿತಿ ಸದಸ್ಯರ ಪ್ರದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳು ತ್ವರಿತವಾಗಿ ನಡೆಯುತ್ತವೆ. ಉಳಿದ ಸದಸ್ಯರ ಕ್ಷೇತ್ರಗಳಿಗೆ ಅನುದಾನವೂ ಸಕಾಲಕ್ಕೆ ಬರುವುದಿಲ್ಲ. ಕಾಮಗಾರಿಗಳನ್ನು ಸಹ ನಿಧಾನವಾಗಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಕೆಲವು ಸದಸ್ಯರು ಆರೋಪಿಸಿದರು. ಕೋರಾ ಕ್ಷೇತ್ರದ ಸದಸ್ಯೆ ಕವಿತಾ, ರೈತರಿಗೆ ಸೂಕ್ತ ಪರಿಹಾರ ನೀಡದೆ, ಪುನರ್ವಸತಿ ಕಲ್ಪಿಸದೆ ಎತ್ತಿನಹೊಳೆ ಯೋಜನೆಯ ಕಾಮಗಾರಿ ನಡೆಸುತ್ತಿದ್ದಾರೆ. ರೈತರಿಗೆ ತಲಾ 25,000…
Author: News Desk Benkiyabale
ತುರುವೇಕೆರೆ: ಚೀಟಿ ವ್ಯವಹಾರ ನೆಡೆಸುವ ಮೂಲಕ ಸಾರ್ವಜನಿಕರನ್ನು ವಂಚಿಸಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತುರುವೇಕೆರೆ ಪೋಲೀಸರು ನಾಲ್ವರು ಪುರುಷರನ್ನು ಹಾಗೂ ದಂಡಿನಶಿವರ ಠಾಣಾ ಪೋಲೀಸರು ಓರ್ವ ಮಹಿಳೆಯನ್ನು ಬಂದಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ತುರುವೇಕೆರೆ ಪಟ್ಟಣದಲ್ಲಿ ಗೊಂದಿ ಮಾರುತಿ ಜ್ಯೂಯಲರಿ ಹಾಗೂ ಟೆಕ್ಸ್ಟೈಲ್ಸ್ ಅಂಗಡಿಯನ್ನು ಮಂಜುನಾಥ್ ಎನ್ನುವರರು ತೆರೆದಿದ್ದರು. ಈ ವಿಳಾಸದಲ್ಲಿ ಗೋಲ್ಡ್ ಸ್ಕೀಂ ಹಾಗೂ ಚೀಟಿ ವ್ಯವಹಾರ ನೆಡೆಸುವ ಮೂಲಕ ಸಾರ್ವಜನಿಕರಿಂದ 2 ಕೋಟಿಗೂ ಅಧಿಕ ಮೊತ್ತವನ್ನು ಸಂಗ್ರಹಿಸಿ ಕೆಲ ದಿನಗಳ ಹಿಂದೆ ರಾತ್ರೋ ರಾತ್ರಿ ಪರಾರಿಯಾಗಿದ್ದರು. ವಂಚನೆಗಳಗಾದವರು ನೀಡಿದ ದೂರಿನನ್ವಯ ಮಾಲೀಕ ಮಂಜುನಾಥ್, ಗಂಗಾಧರ್, ಶರತ್- ಭರತ್ ಎನ್ನುವರರನ್ನು ಬಂದಿಸಿದ ತುರುವೇಕೆರೆ ಪೋಲೀಸರು ನ್ಯಾಯಾಂಗ ಬಂದನಕ್ಕೊಪ್ಪಿಸಿದ್ದಾರೆ. ಮಹಿಳೆ ಬಂಧನ: ದಂಡಿನಶಿವರ ಠಾಣಾ ವ್ಯಾಪ್ತಿಯ ಅಮ್ಮಸಂದ್ರ ವಾಸಿ ಗಂಗಮ್ಮ ಎಂಬುವರು ಕೆಲ ವರ್ಷಗಳ ಹಿಂದೆ ಚೀಟಿ ವ್ಯವಹಾರ ನೆಡೆಸಿ ಸಾರ್ವಜನಿಕರ ಚೀಟಿ ಹಣ ನೀಡದೇ ನಾಪತ್ತೆಯಾಗಿದ್ದರು, ಈ ಕುರಿತು…
ತುಮಕೂರು: ಮಹಾನಗರ ಪಾಲಿಕೆ ಸಭಾಂಗಣದಲ್ಲಿಂದು ನಡೆದ ಆಯ-ವ್ಯಯ ಸಭೆಯಲ್ಲಿ 3.47ಕೋಟಿ ರೂ. ಉಳಿತಾಯ ಬಜೆಟನ್ನು ಮಂಡನೆ ಮಾಡಲಾಯಿತು. ಹಣಕಾಸು ಮತ್ತು ತೆರಿಗೆ ನಿರ್ಧರಣೆ ಸ್ಥಾಯಿ ಸಮಿತಿಯ ಅಧ್ಯಕ್ಷ ಲಕ್ಷ್ಮಿನರಸಿಂಹರಾಜು ಅವರು ಇಂದು ಪಾಲಿಕೆಯ 2019-20ನೇ ಸಾಲಿನ ಕಾಗದ ರಹಿತ ಇ-ಬಜೆಟ್ ಅನ್ನು ಮಂಡಿಸುತ್ತಾ, ಪಾಲಿಕೆಯು ತನ್ನ ಆರ್ಥಿಕ ಇತಿಮಿತಿಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಆಯ-ವ್ಯಯ ಅಂದಾಜನ್ನು ತಯಾರಿಸಿದೆ. ಈ ಆಯವ್ಯಯದ ಅನ್ವಯ ಒಟ್ಟು 22230.91ಲಕ್ಷ ರೂ.ಗಳ ಸ್ವೀಕೃತಿ ಹಣದಲ್ಲಿ 2019-20 ಸಾಲಿನಲ್ಲಿ 21883.69 ಲಕ್ಷ ರೂ.ಗಳ ಅಂದಾಜು ವೆಚ್ಚ ಮಾಡಲು ಬಜೆಟ್ ಮಂಡನೆ ಮಾಡಲಾಗಿದ್ದು, 347.22ಲಕ್ಷ ರೂ.ಗಳು ಮಿಗತೆಯಲ್ಲಿದೆ ಎಂದು ತಿಳಿಸಿದ ಅವರು ತುಮಕೂರು ನಗರ ನಿವಾಸಿಗಳಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವಲ್ಲಿ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗಿದೆ ಎಂದು ಹೇಳಿದರು. ಈ ವರ್ಷದ ಆಯವ್ಯಯದಲ್ಲಿ ನಾಗರಿಕರಿಗೆಲ್ಲರಿಗೂ ಕುಡಿಯುವ ನೀರು, ಉತ್ತಮ ಆರೋಗ್ಯ, ಸ್ವಚ್ಛ ತುಮಕೂರು, ಬೀದಿ ದೀಪ, ಒಳಚರಂಡಿ, ರಸ್ತೆ…
ತುಮಕೂರು: ಆರೋಗ್ಯಕರ ಜೀವನಕ್ಕೆ ಯೋಗಾಭ್ಯಾಸ ಮೂಲಮಂತ್ರ ಎಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ಕುಮಾರ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪತಂಜಲಿ ಯೋಗ ಸಂಸ್ಥೆ, ನೆಹರು ಯುವ ಕೇಂದ್ರ, ಎನ್ಸಿಸಿ, ಮತ್ತಿತರ ಸಂಘ ಸಂಸ್ಥೆ, ವೈದ್ಯಕೀಯ ಕಾಲೇಜುಗಳ ಸಹಯೋಗದಲ್ಲಿ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿಂದು ಬೆಳಿಗ್ಗೆ ಹಮ್ಮಿಕೊಂಡಿದ್ದ 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದರು. ಈ ನಿಟ್ಟಿನಲ್ಲಿ ನಿಯತವಾಗಿ ಯೋಗಾಭ್ಯಾಸ ಮಾಡುವುದರಿಂದ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯ, ಮತ್ತಿತರ ರೋಗಗಳನ್ನು ದೂರವಿಡಬಹುದಾಗಿದೆ. ಜನರು ಈಗಲಾದರೂ ಎಚ್ಚೆತ್ತುಕೊಂಡು ಆರೋಗ್ಯ ದೃಷ್ಟಿಯಿಂದ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ರೋಗಮುಕ್ತ ಜೀವನಕ್ಕೆ ಪ್ರತಿನಿತ್ಯ ಯೋಗ, ಪ್ರಾಣಾಯಾಮ, ಧ್ಯಾನವನ್ನು ಅಭ್ಯಾಸ ಮಾಡುವುದೊಂದೇ ಉತ್ತಮ ಮಾರ್ಗ ಎಂದು ಸಲಹೆ ನೀಡಿದರು. ಯೋಗಾಭ್ಯಾಸ ಜೂನ್ 21ಕ್ಕೆ ಮಾತ್ರ ಸೀಮಿತವಾಗಬಾರದು. ಯೋಗದ…
ತುಮಕೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವಿಧ ನರ್ಸಿಂಗ್ ಕಾಲೇಜುಗಳು, ಮತ್ತಿತರ ಇಲಾಖೆ ಹಾಗೂ ಸ್ವಯಂ ಸೇವಾ ಸಂಘಗಳ ಸಹಯೋಗದಲ್ಲಿಂದು ಜಿಲ್ಲಾಸ್ಪತ್ರೆ ಆವರಣದಿಂದ ಮಹಾತ್ಮಗಾಂಧಿ ಕ್ರೀಡಾಂಗಣದವರೆಗೆ “ಯೋಗ ನಡಿಗೆ” ಜಾಥಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಆಯುಷ್ ಅಧಿಕಾರಿ ಡಾ: ಸಂಜೀವಮೂರ್ತಿ, ಅಶ್ವಿನಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ: ಹರೀಶ್, ಯೋಗ ಸಮನ್ವಯಾಧಿಕಾರಿ ಡಾ: ಪ್ರಭಾಕರ್, ಕಮಾಂಡಿಂಗ್ ಆಫೀಸರ್ ಕರ್ನಲ್ ಶೈಲೇಶ್ಶರ್ಮ, ಡಾ: ಗುರುಪ್ರಸಾದ್ ಜಂಟಿಯಾಗಿ ಚಾಲನೆ ನೀಡಿದರು. ಜಾಥಾದಲ್ಲಿ ಎನ್ಸಿಸಿ ವಿದ್ಯಾರ್ಥಿಗಳು, ಅಶ್ವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು, ಕೆಎಸ್ಆರ್ಪಿ ಪೊಲೀಸ್ ಸಿಬ್ಬಂದಿ, 4ನೇ ಕರ್ನಾಟಕ ಬೆಟಾಲಿಯನ್, ಮತ್ತಿತರರು ಭಾಗವಹಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ತುಮಕೂರು: ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಪಡಿತರ ಚೀಟಿದಾರರ ಕುಟುಂಬ ಸದಸ್ಯರ ಇ-ಕೆವೈಸಿ ಮಾಡುವ ಕಾರ್ಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜುಲೈ 15ರವರೆಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾಕೆ.ರಾಕೇಶ್ ಕುಮಾರ್ ನಿರ್ದೇಶನ ನೀಡಿದ್ದಾರೆ. ಪಡಿತರ ಚೀಟಿದಾರರು ತಮ್ಮ ಕುಟುಂಬ ಸದಸ್ಯರ ಇ-ಕೆವೈಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗೆ ಹೋಗುವ ಅವಶ್ಯಕತೆ ಇಲ್ಲ. ಇ-ಕೆವೈಸಿ ನೋಂದಣಿಯನ್ನು ನ್ಯಾಯಬೆಲೆ ಅಂಗಡಿ ಹಂತದಲ್ಲಿ ಸಂಗ್ರಹಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರ ಸೂಚನೆಯಂತೆ ಈ ನಿರ್ದೇಶನವನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಧುಗಿರಿ : ದ್ವಿಚಕ್ರ ವಾಹನ ಮತ್ತು ಖಾಸಗಿ ಪ್ರವಾಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರೂ ಸ್ಥಳದಲ್ಲೆ ಮೃತ ಪಟ್ಟ ಘಟನೆ ಮಧುಗಿರಿ ಕಸಬಾ ವ್ಯಾಪ್ತಿಯ ಕೆರೆಗಳ ಪಾಳ್ಯದ ಬಳಿ ನಡೆದಿದೆ. ಪಟ್ಟಣದ ಕಸಬಾ ವ್ಯಾಪ್ತಿಯ ಕವಾಡಿಗರ ಪಾಳ್ಯದ ಬೀರಣ್ಣ(68), ಮತ್ತು ಮಾರೀಬೀಳು ಗ್ರಾಮದ ಶಿವಣ್ಣ(45) ಸ್ಥಳದಲ್ಲೇ ಮೃತಪಟ್ಟವರು. ಪಟ್ಟಣದ ಎಂ.ಎಸ್. ರಾಮಯ್ಯ ಕಲ್ಯಾಣ ಮಂಟಪದಲ್ಲಿ ಮಧುವೆ ಸಿದ್ದತೆಗೆಂದು ಬರುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಬವಿಸಿದೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ಮಾಜಿ ಶಾಸಕ ಬಿ.ಸುರೇಶ್ ಗೌಡರು ಕುರುಬ ಸಮುದಾಯವನ್ನು ಕ್ಷಮೆ ಕೇಳಲು ಕರೆದಿದ್ದ ಪತ್ರಿಕಾ ಗೋಷ್ಠಿಯನ್ನು ನಡೆಸಲು ಜೆಡಿಎಸ್ ಮುಖಂಡರು ಅಡ್ಡಿಪಡಿಸಿದ ಘಟನೆ ಇಂದು ನಡೆದಿದೆ. ಪಕ್ಷದ ಶಾಸಕ ಗೌರಿಶಂಕರ್ ಬೆಂಬಲಿಗರು ಪತ್ರಿಕಾಗೋಷ್ಠಿ ನಡೆಯದಂತೆ ಉಡುಪಿ ಹೋಟೆಲ್ ಬಾಗಿಲು ಮುಚ್ಚಿಸಿದ್ದರು. ಮೊದಲೆ ನಿಗಧಿಯಾದಂತೆ ಅದೇ ಹೋಟೆಲ್ನಲ್ಲಿ ಗೋಷ್ಠಿ ನಡೆಯಿತಾದರೂ ಗಲಾಟೆ ಮಾಡಿ ಹಲ್ಲೆ ನಡೆಸಲು ಸಂಚು ರೂಪಿಸಲಾಗಿತ್ತು. ಇದನ್ನರಿತ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಪತ್ರಿಕಾ ಗೋಷ್ಠಿ ನಡೆಯುತ್ತಿದ್ದ ಖಾಸಗಿ ಹೋಟೆಲ್ ಮುಂಭಾಗದಲ್ಲಿ ಡಿವೈಎಸ್ಪಿ ತಿಪ್ಪೇಸ್ವಾಮಿ, ತಿಲಕ್ ಪಾರ್ಕ್ ಇನ್ಸ್ಪೆಕ್ಟರ್ ರಾಧಾಕೃಷ್ಣ, ನಗರ ಇನ್ಸ್ಪೆಕ್ಟರ್ ಚಂದ್ರಶೇಖರ್ ಐವರು ಸಬ್ ಇನ್ಸ್ಪೆಕ್ಟರ್ ಗಳು, ಎಎಸೈಗಳು, ಸಿಬ್ಬಂದಿ, ಡಿಆರ್ ವ್ಯಾನ್ ಎಲ್ಲರೂ ಜಮಾವಣೆಗೋಂಡಿದ್ದರು, ಕಾರಣ ಮಾಜಿ ಶಾಸಕರ ಮೇಲೆ ಹಲ್ಲೆಯಾಗುವ ಎಲ್ಲಾ ಲಕ್ಷಣಗಳು ಪೊಲೀಸ್ ಇಲಾಖೆಗೆ ತಿಳಿದಿತ್ತು ಎನ್ನಲಾಗುತ್ತಿದೆ, ಜೆಡಿಎಸ್ ಕಾರ್ಪೋರೇಟರ್ ಸೇರಿದಂತೆ ಕುರುಬ ಸಮುದಾಯದ ಇಪ್ಪತ್ತು ಮಂದಿ ಸುರೇಶ್…
ತುಮಕೂರು: ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ 14 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 8 ಸೇರಿದಂತೆ ಒಟ್ಟು 22 ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 21 ರಿಂದ ಜೂನ್ 28 ರವರೆಗೆ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ ಜಿಲ್ಲೆಯಾದ್ಯಂತ ನಡೆಯಲಿದ್ದು, ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕಳೆದ ಮುಖ್ಯ ಪರೀಕ್ಷೆಯಲ್ಲಿ ಮೊಬೈಲನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ದ ಪ್ರಕರಣ ಜಿಲ್ಲೆಯನ್ನು ರಾಜ್ಯದಲ್ಲಿ ಗುರುತಿಸುವಂತಾಯಿತು. ಯಾವುದೇ ಕಾರಣಕ್ಕೂ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಪರೀಕ್ಷಾ ಕೇಂದ್ರದಲ್ಲಿರುವ ಯಾರ ಬಳಿಯಲ್ಲಿಯೂ ಮೊಬೈಲ್ ಇರಕೂಡದು. ಈ ಬಗ್ಗೆ ಮುಖ್ಯ ಅಧೀಕ್ಷಕರು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಇರುವ ಮಾಹಿತಿ ಅಥವಾ ಬೇರೆ ಅವಗಢಗಳು ಸಂಭವಿಸಿದಲ್ಲಿ ಮುಖ್ಯ ಅಧೀಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಲ್ಲ ಮುಖ್ಯ ಅಧೀಕ್ಷಕರಿಗೆ…
ತುಮಕೂರು: ಗ್ರಾಮ ಪಂಚಾಯ್ತಿ ಸಿಬ್ಬಂದಿಗಳ ವೇತನವನ್ನು ನಿಗದಿತ ಸಮಯಕ್ಕೆ ನೀಡಬೇಕು ಮತ್ತು ಕನಿಷ್ಟ ವೇತನವನ್ನು ಪಾವತಿ ಮಾಡುವುದು, ಇಎಫ್ಎಂಎಸ್ ಅಳವಡಿಸುವುದು ಗ್ರಾಮ ಪಂಚಾಯ್ತಿ ಸಿಬ್ಬಂದಿಗಳ ಅನುಮೋದನೆ ಮತ್ತು ಮುಂಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರು ಸಿಐಟಿಯು ನೇತೃತ್ವದಲ್ಲಿ ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು. ಟೌನ್ಹಾಲ್ ವೃತ್ತದಿಂದ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಪಂಚಾಯ್ತಿ ಸಿಬ್ಬಂದಿಗಳಿಗೆ 2018 ಮಾರ್ಚ್ ತಿಂಗಳಿಂದ ಇಲ್ಲಿಯವರೆಗೆ ಬಾಕಿ ಉಳಿಸಿಕೊಂಡಿರುವ ವೇತನ ಪೂರ್ಣವಾಗಿ ಪಾವತಿಸಬೇಕು. ಕೈಬಿಟ್ಟ ಹೋದ ನೌಕರರ ವಿವರವನ್ನು ಪಂಚತಂತ್ರದಲ್ಲಿ ಅಳವಡಿಸಲು ಉಪಕಾರ್ಯದರ್ಶಿಯವರು ಕ್ರಮ ಕೈಗೊಳ್ಳಬೇಕು ಹಾಗೂ ವೇತನವನ್ನು ಮಾರ್ಚ್ 1, 2018ರಿಂದ ಬಿಡುಗಡೆ ಮಾಡಬೇಕು. ಗ್ರಾಮ ಪಂಚಾಯ್ತಿ ಸಿಬ್ಬಂದಿಗಳಿಗೆ 2018 ಮಾರ್ಚ್ ತಿಂಗಳಿಗೂ ಹಿಂದೆ ಉಳಿಸಿಕೊಂಡಿರುವ ಹಿಂದಿನ ವೇತನವನ್ನು ಪಂಚಾಯ್ತಿ…