ತುಮಕೂರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರಿಗೆ ಕೊರೊನಾ ವಕ್ಕರಿಸಿದೆ. ಸೋಂಕಿತ ವ್ಯಕ್ತಿ ಡಿಎಚ್‍ಓ ಕಛೇರಿಯಲ್ಲಿ ತಾಂತ್ರಿಕ ಸಿಬ್ಬಂಧಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈತನು 2 ಖಾಸಗಿ ಲ್ಯಾಬ್‍ಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಸೋಂಕಿತನ 2 ಲ್ಯಾಬ್‍ಗಳು ಮತ್ತು ಈತನ ಮನೆಯ ಏರಿಯಾವನ್ನು ಸೀಲ್‍ಡೌನ್ ಮಾಡಲು ತಯಾರಿ ನಡೆಯುತ್ತಿದೆ. ಈತ ಡಿಎಚ್‍ಓ ಕಛೇರಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಸದರಿ ಕಛೇರಿಯಲ್ಲಿದ್ದ ಅಧಿಕಾರಿಗಳು ನೌಕರರು ಮತ್ತು ಸಿಬ್ಬಂಧಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈತನೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಪತ್ತೆಹಚ್ಚುವಿಕೆಗೆ ಡಿಎಚ್‍ಓ ಕಛೇರಿಯ ಸಿಬ್ಬಂಧಿಯೇ ದಿಗ್ಭ್ರಮೆಗೊಳಗಾಗಿದ್ದು, ಅಂತೂ ಇಂತು ಜಿಲ್ಲೆಯ ಆರೋಗ್ಯ ಇಲಾಖೆಯನ್ನೇ ಬಿಡದ ಕೊರೊನಾ ನಂಟು ಇನ್ಯಾರನ್ನ ಬಿಟ್ಟೀತು ಎಂಬುದು ಹಲವರ ಪ್ರಶ್ನೆಯಾಗಿದೆ.
Author: News Desk Benkiyabale
ತುಮಕೂರು : ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಂದು ಒಂದೇ ದಿನ 15 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಜಿಲ್ಲೆಯ ಬಹುತೇಕ ಎಲ್ಲಾ ತಾಲ್ಲೂಕುಗಳಲ್ಲಿ ಕೊರೊನಾ ರುದ್ರ ನರ್ತನ ಮಾಡುತ್ತಿದ್ದು, ಶಿರಾ, ಮಧುಗಿರಿ,ಪಾವಗಡ, ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ ಸೇರಿದಂತೆ ಎಲ್ಲೆಡೆ ಕೊರೊನಾ ಸೋಂಕು ರೌದ್ರ ನರ್ತನ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಜನತೆಯನ್ನ ಬಿಟ್ಟು ಬಿಡದಂತೆ ಕಾಡುತ್ತಿರುವ ಕೊರೊನಾ ಸೋಂಕು ಯಾವುದೇ ರೀತಿಯಲ್ಲಿ ಯಾರಿಂದ ಯಾರಿಗೆ ಸುಳಿವು ನೀಡದೇ ಎಲ್ಲರಲ್ಲೂ ಆವರಿಸುತ್ತಿದೆ. ತಾಲ್ಲೂಕುವಾರು ಸೋಂಕಿತರ ವಿವರ : ಶಿರಾ-3 ತುಮಕೂರು-4 ತಿಪಟೂರು-1 ಚಿಕ್ಕನಾಯಕನಹಳ್ಳಿ-1 ಪಾವಗಡ-4 ಗುಬ್ಬಿ-1 ಮಧುಗಿರಿ-1 ಸಮುದಾಯ ಮಟ್ಟದಲ್ಲಿ ಹಬ್ಬುತ್ತಿರುವ ಸೋಂಕು ಎಲ್ಲಿ ಇಡೀ ಜಿಲ್ಲೆಯನ್ನೇ ಆಹುತಿ ಪಡೆದುಕೊಳ್ಳುತ್ತದೆಯೋ ಎಂಬ ಭಯದ ವಾತಾವರಣ ಜಿಲ್ಲೆಯ ಜನರಲ್ಲಿ ಕಾಡುತ್ತಿದ್ದು, ಗ್ರಾಮೀಣ ಜನತೆ ನೆಮ್ಮದಿಯ ಜೀವನ ಸಾಗಿಸುವುದು ದುಸ್ಸಾಹಸವಾಗಿದೆ. ಲಾಕ್‍ಡೌನ್ ಸಡಿಲಿಕೆಯ ನಂತರ ಎಲ್ಲರೂ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದು, ಯಾರಿಗೆ ಯಾರಿಂದ…
ಮಧುಗಿರಿ: ಪಟ್ಟಣದ ಕೆಅರ್ ಬಡಾವಣೆಯ ಚಾಲಕರೊಬ್ಬರಿಗೆ ಪಾಸಿಟಿವ್ ಬಂದಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಂಕಿನಿಂದ ಮೃತಪಟ್ಟ ಟೈಲರ್ ಬಳಿ ಬಟ್ಟೆ ಹಾಕಿದ್ದ ಗಿರಾಕಿಗಳು ಅನುಮಾನದ ಮೇರೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದು, ಜೊತೆಯಲ್ಲಿ ಬಂದಿದ್ದ ವಾಹನ ಚಾಲಕನಿಗೂ ಕರೋನಾ ಪರೀಕ್ಷೆ ಮಾಡಿಸಿದ್ದು, ವರದಿಯಲ್ಲಿ ಕರೋನಾ ಪಾಸಿಟೀವ್ ಎಂದು ಬಂದಿದೆ. ಟೈಲರ್ ಬಳಿ ಬಟ್ಟೆ ಹಾಕಿದ್ದ ಗಿರಾಕಿಗಳಿಗೆ ನೆಗೆಟೀವ್ ಬಂದಿದ್ದು, ಆದರೆ ಜೊತೆಯಲ್ಲಿ ಹೋಗಿದ್ದ ವಾಹನ ಚಾಲಕನಿಗೆ ಪಾಸಿಟೀವ್ ಬಂದಿದ್ದಾದರೂ ಹೇಗೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ. ಸೊಂಕಿತನೊಂದಿಗೆ ಸಂಪರ್ಕವೇ ಇಲ್ಲದ ವ್ಯಕ್ತಿಗೆ ಪಾಸಿಟೀವ್ ಬಂದಿರುವುದು ಸೋಂಕು ಸಾಮೂಹಿಕವಾಗಿ ಹರಡಲು ಆರಂಭಿಸಿದೆಯಾ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿರುವುದು ತಾಲೂಕು ಆಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಗೂಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಸಂದ್ರ ಗ್ರಾಮದಲ್ಲಿ ಕೋರೋನೋ ಪಾಸಿಟಿವ್ ಬಂದಿರುವ ಗ್ರಾಮವು ಸೀಲ್ ಡೌನ್ ಮಾಡಿರುವ ಸಂದರ್ಭದಲ್ಲಿ…
ಮಧುಗಿರಿ: ಮಧುಗಿರಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಕೊರೊನಾ ವೈರಸ್ ಸಮುದಾಯಕ್ಕೆ ಹರಡುವುದನ್ನು ತಡೆಗಟ್ಟಲು ಸ್ವಯಂಪ್ರೇರಿತವಾಗಿ ಲಾಕ್‍ಡೌನ್‍ಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಮಧುಗಿರಿಯಲ್ಲಿ ವ್ಯಾಪಾರಸ್ಥರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮೆಡಿಕಲ್ ಶಾಪ್, ಆಸ್ಪತ್ರೆ, ಬೇಕರಿ ಮತ್ತು ಸಣ್ಣಪುಟ್ಟ ಹೋಟೆಲ್ ಗಳು ಮತ್ತು ಬ್ಯಾಂಕುಗಳು ಹೊರತುಪಡಿಸಿ ಎಲ್ಲಾ ವ್ಯಾಪಾರಸ್ಥರು ಈ ಲಾಕ್ಡ್ ಡೌನ್ ನ್ನು ಬೆಂಬಲಿಸಿದ್ದಾರೆ ಮಾಂಸದ ಅಂಗಡಿಗಳು ಸಹ ತೆರೆಯದೆ ಬೆಂಬಲಿಸಿದ್ದು ವಿಶೇಷವಾಗಿದೆ. ಕೆಎಸ್‍ಆರ್‍ಟಿಸಿ ಬಸ್ ಗಳು ಮಾತ್ರ ಸಂಚರಿಸಿದವು. ಮಳೆ ಬಂದಿದ್ದ ಕಾರಣ ರೈತರು ಗ್ರಾಮಿಣಭಾಗದಿಂದ ಅಗಮಿಸಿ ಬಿತ್ತನೆ ಕೆಲಸಕ್ಕೆ ಬೇಕಾಗುವ ರಸಗೊಬ್ಬರಗಳನ್ನು ಖರೀದಿಸಲು ಗೊಬ್ಬರದ ಅಂಗಡಿ ಗಳ ಮುಂದೆ ಜಮಾಯಿಸಿದ್ದರು. ಮಧುಗಿರಿ ಪಟ್ಟಣದಲ್ಲಿ ಕರೋನಾ ಸೋಂಕು ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಮೂರು ದಿನಗಳ ಕಾಲ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ನಿರ್ಣಯ ಕೈಗೊಳ್ಳುತ್ತೇವೆ ಎಂದು ವಿವಿಧ…
ತುರುವೇಕೆರೆ: ತಾಲೂಕಿನ ಕುಣಿಕೇನಹಳ್ಳಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಚೆಕ್‍ಡ್ಯಾಂನ ತಡೆಗೋಡೆ ವ್ಯವಸ್ಥಿತ ಕ್ರಮದಲ್ಲಿ ನಿರ್ಮಿತವಾಗದೆ ದಲಿತರ ಜಮೀನಿಗೆ ತೊಂದರೆಯಾಗುತ್ತಿದ್ದು, ಜಮೀನನಲ್ಲಿನ ತೆಂಗಿನ ಮರಗಳು ಹಳ್ಳಕ್ಕೆ ಬೀಳುವ ಹಂತ ತಲಿಪಿದೆ ಎಂದು ತಾಲೂಕು ಡಿ.ಎಸ್.ಎಸ್.ಅಧ್ಯಕ್ಷ ಜಗಧೀಶ್ ಆರೋಪಿಸಿದರು. ತಾಲೂಕಿನ ಕುಣಿಕೇನಹಳ್ಳಿ ಹಳ್ಳದಲ್ಲಿ ನಿರ್ಮಿತವಾಗಿರುವ ಚೆಕ್‍ಡ್ಯಾಂ ಸ್ಥಳ ಪರಿಶೀಲನೆಗೆ ಶುಕ್ರವಾರ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಆಗಮಿಸಿದ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಸದಸ್ಯರಿಗಳು ನ್ಯಾಯಕ್ಕಾಗಿ ಒತ್ತಾಯಿಸಿ ಅಳತೆ ಮಾಡುವುದನ್ನು ವಿರೋಧಿಸಿ ಪ್ರತಿಭಟನೆಗೆ ನಡೆಸಿದರು. ತಾಲೂಕು ಡಿ.ಎಸ್.ಎಸ್.ಅಧ್ಯಕ್ಷ ಜಗಧೀಶ್ ಮಾತನಾಡಿ ಸ್ಥಳ ಪರಿಷೀಲನೆ ನೆಪದಲ್ಲಿ ಹಳ್ಳವನ್ನು ಅಳತೆ ಮಾಡಲು ಬಂದಿದ್ದಾರೆ, ಕಾಮಗಾರಿ ಮಾಡುವ ಮುನ್ನವೇ ಅಳತೆ ಮಾಡದೆ ತಮಗೆ ಬೇಕಾದ ಜಾಗದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಇದೀಗ ಅಳತೆ ಮಾಡಲು ಮುಂದಾಗಿರುವುದು ಯಾವ ನ್ಯಾಯ?. ನಾವು ನ್ಯಾಯ ಕೇಳುತ್ತಿರುವುದು ಹಳ್ಳದ ಎರಡೂ ಕಡೆ ನಿರ್ಮಿಸಿರುವ…
ಕೊರಟಗೆರೆ: ಬರಪೀಡಿತ ಬಯಲುಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆಗಳಿಂದ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರಕಾರ ನೀರಾವರಿ ಯೋಜನೆಗಳಿಗೆ ಆಧ್ಯತೆ ನೀಡಿ ಚಾಲ್ತಿಯಲ್ಲಿರುವ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಒತ್ತಾಯ ಮಾಡಿದರು. ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಗ್ರಾಪಂ ವ್ಯಾಪ್ತಿಯ ಬ್ರಹ್ಮಸಂದ್ರ ಮತ್ತು ಸುತ್ತಮುತ್ತಲಿನ ಹತ್ತು ಗ್ರಾಮಗಳಿಗೆ ಶಾಶ್ವತ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಯೋಜನೆಯಡಿ ಸುಮಾರು 9ಕೋಟಿ 35ಲಕ್ಷ ವೆಚ್ಚದ ಕಾಮಗಾರಿಗೆ ಇತ್ತೀಚಿಗೆ ಚಾಲನೆ ನೀಡಿ ಮಾತನಾಡಿದರು. ಬಯಲುಸೀಮೆ ಪ್ರದೇಶಕ್ಕೆ ನೀರಾವರಿ ಯೋಜನೆ ರೂಪಿಸುವ ನೀರಾವರಿ ತಜ್ಞ ಪರಮಶಿವಯ್ಯ ಪಾತ್ರ ಮಹತ್ವವಾಗಿದೆ. ಮಲೆನಾಡಿನ 400ಟಿಎಂಸಿ ನೇತ್ರಾವತಿ ನದಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿಯುವುದನ್ನು ತಡೆಗಟ್ಟಿ ನೀರಿಲ್ಲದೇ ಬರಡು ಭೂಮಿಯಾಗಿರುವ ಬಯಲು ಸೀಮೆ ಪ್ರದೇಶಗಳಿಗೆ ನೀರಿನ ಪೂರೈಕೆ ಮಾಡುವ ಯೋಜನೆ ಮಂಗಳೂರು ಜನರ ವಿರೋದದಿಂದ ಕೈಬೀಡಲಾಯಿತು…
ತಿಪಟೂರು: ತಾಲ್ಲೂಕು ದಂಡಾಧಿಕಾರಿ ಕಚೇರಿ ಆವರಣದಲ್ಲಿದ್ದ ಲಕ್ಷಾಂತರ ಬೆಲೆ ಬಾಳುವ ಶ್ರೀಂಗಂಧದ ಮರಗಳನ್ನ ರಾತ್ರೋರಾತ್ರಿ ಕಳ್ಳ ಕದೀಮರು ಕಡಿದು ಸಾಗಿಸಿದ್ದಾರೆ. ತಿಪಟೂರು ತಾಲ್ಲೂಕು ದಂಡಾಧಿಕಾರಿ ಕಚೇರಿ ಆವರಣದಲ್ಲಿದ್ದ ಮೂರು ಮರಗಳನ್ನ ಕಳವು ಮಾಡಿದ್ದಾರೆ. ಮಂಗಳವಾರ ರಾತ್ರಿ ಘಟನೆ ನಡೆದಿದ್ದು ರಾತ್ರಿ ಕಾವಲು ಪಾಳಿಯಲ್ಲಿದ್ದ ಗ್ರಾಮ ಸಹಾಯಕ ಬೆಳಗೆದ್ದು ನೋಡಿದಾಗ ಪ್ರಕರಣ ಬಯಲಿಗೆ ಬಂದಿದೆ. ಕಚೇರಿ ಹಿಂಬಾಗದ ಗೇಟ್ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಆವರಣದಲ್ಲಿದ್ದ ಮೂರು ಮರಗಳನ್ನ ಕಡಿದು ಸಾಗಿಸಿದ್ದಾರೆ. ವಿಪರ್ಯಾಸ ಅಂದರೆ ತಾಲ್ಲೂಕು ಕಚೇರಿ ಕಾಂಪೌಂಡ್ ಗೆ ಹೊಂದಿಕೊಂಡಂತೆ ಗ್ರಾಮಾಂತರ ಪೊಲೀಸ್ ಠಾಣೆ ಇದ್ದರೂ ಕಳ್ಳರು ಧೈರ್ಯವಾಗಿ ಕಳ್ಳತನ ಮಾಡಿದ್ದಾರೆ. ಜೊತೆಗೆ ರಾತ್ರಿ ಕಾವಲು ಸಿಬ್ಬಂದಿ ಒಳಗೆ ಇದ್ದರೂ ಬೀಗ ಮುರಿದು ಒಳಗೆ ನುಗ್ಗಿರುವ ಕಳ್ಳರು ಮರ ಕಡಿದು ಸಾಗಿಸಿದ್ರು ರಾತ್ರಿ ಪಾಳಿ ಕಾವಲುಗಾರನಿಗೆ ಅರಿವಿಗೆ ಬಾರದಿರುವುದು ಆತನ ಕಾರ್ಯವೈಖರಿಯನ್ನು ಎತ್ತಿತೋರಿಸುತ್ತದೆ. ಈ…
ಶಿರಾ : ಜಿಲ್ಲೆಯಲ್ಲಿ ಗುರುವಾರ ಮತ್ತೊಂದು ಕೋವಿಡ್ 19 ಪಾಸಿಟಿವ್ ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 58ಕ್ಕೆ ಏರಿದೆ. ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ 15 ವರ್ಷದ ಬಾಲಕನಿಗೆ (ಟಿಎಂಕೆ 58) ಸೋಂಕು ಕಂಡು ಬಂದಿದೆ. ಈತ ಜೂನ್ 24 ರಂದು ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ನೀಡಿದ್ದನ್ನು, ಅದನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಂದು ಸೋಂಕು ದೃಢಪಟ್ಟಿದೆ. ಈತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ತಾಯಿ ಆಂಧ್ರಪ್ರದೇಶದ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡಿದ್ದು, ಅವರಿಗೂ ಕೋವಿಡ್ 19 ಪಾಸಿಟಿವ್ ಬಂದಿದೆ. ಆಕೆ ಆಂಧ್ರಪ್ರದೇಶದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸೋಂಕಿತ ಬಾಲಕನು ಜೂನ್ 22 ರಂದು ತಂದೆಯೊಂದಿಗೆ ಆಂಧ್ರಪ್ರದೇಶದ ರಾಯದುರ್ಗ ತಾಲೂಕಿನಿಂದ ಬಸ್ ನಲ್ಲಿ ಶಿರಾಗೆ ಬಂದಿದ್ದನು. ಈತನ ತಂದೆಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಪ್ರಥಮ ಸಂಪರ್ಕದಲ್ಲಿದ್ದ 5 ಜನರನ್ನು…
ಮಧುಗಿರಿ : ಪರಸ್ಪರ ಅಂತರ ಮಾಯ, ಮಾಸ್ಕ್ ಧರಿಸದೇ ಏಕಕಾಲಕ್ಕೆ ಗುಂಪಾಗಿ ಪರೀಕ್ಷಾ ಕೇಂದ್ರಗಳಿಂದ ಹೊರಬಂದ ವಿದ್ಯಾರ್ಥಿಗಳು, ಬಸ್ ಸೌಕರ್ಯವಿದ್ದರೂ ಕೆಲವೆಡೆ ವಿದ್ಯಾರ್ಥಿಗಳನ್ನು ಕುರಿಗಳಂತೆ ತುಂಬಿಕೊಂಡು ಸಾಗಿಸಿದ ಆಟೋ ಚಾಲಕರು ಇವು ಮಧುಗಿರಿಯಲ್ಲಿ ಗುರುವಾರ ನಡೆದ ಮೊದಲ ದಿನದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಂಡು ಬಂದ ದೃಶ್ಯಗಳು. ಅಧಿಕಾರಿಗಳೇ ಮಾಯ: ಬೆಳಗ್ಗೆ ಪರೀಕ್ಷೆ ಆರಂಭಕ್ಕೂ ಮುನ್ನ ಕೇಂದ್ರಗಳಲ್ಲಿ ಕೆಲವೆಡೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳ ಕೊಠಡಿಗಳ ಸಂಖ್ಯೆಯನ್ನು ನೋಡಲು ಗುಂಪುಗೂಡಿದ್ದರಾದರೂ ಪೋಲೀಸರು ಆಗಮಿಸಿ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಚದುರಿಸಿದರು. ಪರೀಕ್ಷೆಗೂ ಮುನ್ನ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ದ್ವಾರಗಳಲ್ಲಿ ಪ್ರತೀ ವಿದ್ಯಾರ್ಥಿಗೂ ಥರ್ಮಲ್ ಸ್ಯಾನಿಂಗ್ ಮತ್ತು ಸ್ಯಾನಿಟೈಸಿಂಗ್ ಮಾಡಿ ಕೊಠಡಿಯೊಳಗೆ ಕಳುಹಿಸಿಕೊಡಲಾಗಿತ್ತು. ಆದರೆ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಿಕೊಡಬೇಕಾದರೆ ಇದ್ದ ಕಾಳಜಿ ಪರೀಕ್ಷೆ ಮುಗಿದ ನಂತರ ಇರಲಿಲ್ಲ. ವಿದ್ಯಾರ್ಥಿಗಳ ಜವಾಬ್ದಾರಿ ಹೊತ್ತಿದ್ದ ಮೇಲ್ವಿಚಾರಕರು ಪರೀಕ್ಷೆ ಮುಗಿಯುವ ಮನ್ನವೇ ಮಾಯವಾಗಿದ್ದರು. ಪರೀಕ್ಷೆ ಮುಗಿದ ನಂತರ ಒಂದೊಂದೇ…
ತುಮಕೂರು: ನಗರದ ಸಿದ್ದಗಂಗಾ ಮಠ, ಎಂಪ್ರೆಸ್ ಹಾಗೂ ಸೆಂಟ್‍ಮೇರಿಸ್ ಶಾಲೆ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊರೊನಾ ಮಹಾಮಾರಿಯ ಭಯ, ಆತಂಕದ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು, ಜಿಲ್ಲೆಯ 144 ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದೆ. ಬೆಳಿಗ್ಗೆ 8 ಗಂಟೆಯಿಂದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ್ದು, ಆರೋಗ್ಯ ಇಲಾಖೆ ವತಿಯಿಂದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಪರೀಕ್ಷಾ ಕೊಠಡಿಗಳಿಗೆ ತೆರಳಲು ಅವಕಾಶ ಮಾಡಿಕೊಡಲಾಯಿತು. ತುಮಕೂರು ಶೈಕ್ಷಣಿಕ ಜಿಲ್ಲೆಯಿಂದ 23,782 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 13,523 ಮಕ್ಕಳು ಸೇರಿ ಒಟ್ಟು 37,306 ವಿದ್ಯಾರ್ಥಿಗಳು ಇಂದಿನಿಂದ ಆರಂಭವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ.ಜಿಲ್ಲೆಯ 144 ಪರೀಕ್ಷಾ ಕೇಂದ್ರಗಳಲ್ಲೂ ನೋಡಲ್ ಅಧಿಕಾರಿಗಳು ಪರೀಕ್ಷಾ ಮುಖ್ಯಸ್ಥರುಗಳು ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮ ಕೈಗೊಂಡಿದ್ದಾರೆ.…










