Author: News Desk Benkiyabale

      ಕಾಂಗ್ರೆಸ್ ಸೋಲಿಗೆ ಮುಖ್ಯಮಂತ್ರಿ ಆಡಳಿತ ಕಾರಣ ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ,  ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಹರಿಹಾಯ್ದರು.      ಬಿಜೆಪಿಗೆ ಮೊದಲನೆಯದಾಗಿ ಅಭಿನಂದನೆಯನ್ನು ಸಲ್ಲಿಸುತ್ತಾ ಮಾತು ಆರಂಬಿಸಿದ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನಕ್ಕಿಳಿದಿದೆ ಹಾಗಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.  ಸರ್ಕಾರದ ಆಡಳಿತದಲ್ಲಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿರವರು  ಸರಿಯಾಗಿ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ ಹಾಗಾಗಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ.         ಮುಖ್ಯಮಂತ್ರಿಗಳು ಎಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರೆಂದರೆ ತಾಜ್ ವೆಸ್ಟ್‌  ಎಂಡ್ ಹೋಟೆಲ್ನಲ್ಲಿ  ಕಾಲಕಳೆಯುತ್ತಿದ್ದಾರೆ. ದೇವೇಗೌಡರು ಸೋಲು  ಅನುಭವಿಸಲು ಮೂಲ ಕಾರಣ ಒಬ್ಬ ವ್ಯಕ್ತಿ. ಕೆಎನ್ ರಾಜಣ್ಣ ಮತ್ತು ಮುದ್ದಹನುಮೇಗೌಡರ ವಿರುದ್ಧ ಹಣದ ವಿಚಾರವಾಗಿ ಆಪಾದಿಸಿದ ಹಿನ್ನೆಲೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತು ದೇವೇಗೌಡರು ಸೋಲಿಗೆ  ಬಹು ಮುಖ್ಯ ಕಾರಣ ಈ ಜಿಲ್ಲೆಯ ಉಸ್ತುವಾರಿ  ತೆಗೆದುಕೊಂಡಂತಹವರು.…

Read More

 ತುಮಕೂರು:       ಜಿಲ್ಲಾ ವ್ಯಾಪ್ತಿಯಲ್ಲಿರುವ ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕೆಂದು ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಸೂಚನೆ ನೀಡಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲಾ ವ್ಯಾಪ್ತಿಯ ರಸ್ತೆಗಳಿಗೆ ರಸ್ತೆ ಉಬ್ಬುಗಳಿಗೆ ಬಣ್ಣ ಹಚ್ಚುವ, ಸೂಚನೆ ಫಲಕಗಳನ್ನು ಹಾಕುವ, ಟ್ರಾಫಿಕ್ ಚಿಹ್ನೆಗಳ ಫಲಕಗಳನ್ನು ನಿಲ್ಲಿಸುವ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸಬೇಕಲ್ಲದೆ, ಡಿವೈಡರ್‍ಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿ ಅವುಗಳಿಗೆ ಬಣ್ಣ ಹಚ್ಚಬೇಕು ಹಾಗೂ ವಾಹನಗಳು ಮುಖ್ಯ ರಸ್ತೆಯಿಂದ ಸೇವಾ ರಸ್ತೆಗೆ ಬರುವ ಮಾರ್ಗದಲ್ಲಿ ಕಡ್ಡಾಯವಾಗಿ ಚಿಹ್ನೆಗಳನ್ನು ಪ್ರದರ್ಶಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.       ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಕಾರ್ಮಿಕರು, ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು ಹಾಗೂ ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಬೇಕೆಂದು ಸಂಬಂಧಿಸಿದ…

Read More

ತುಮಕೂರು:        ನನ್ನ ಗೆಲುವಿಗೆ ದೇವೇಗೌಡರು ವರವಾದ್ರು. ಮುದ್ದಹನುಮೇಗೌಡರು ಇದ್ದಿದ್ದರೆ ಗೆಲುವು ಕಷ್ಟ ಆಗುತ್ತಿತ್ತು. ದೇವೇಗೌಡರು ಬಂದದ್ದರಿಂದ ಗೆಲುವು ಇನ್ನೂ ಸುಲಭವಾಯ್ತು. ಜಯಕ್ಕೆ ದಾರಿ ಸಲೀಸಾಯಿತು. ಜನ ದೇವೇಗೌಡರನ್ನು ತಿರಸ್ಕರಿಸಿದ್ದಾರೆ ಎಂದು ಬಿಜೆಪಿ ನೂತನ ಸಂಸದ  ಜಿ.ಎಸ್.ಬಸವರಾಜು ಹೇಳಿದ್ದಾರೆ.        ಇಂದು ತುಮಕೂರಿನಲ್ಲಿ ಮಾತನಾಡಿದ ಅವರು, ದೇವೇಗೌಡರು ಬಂದಿದ್ದು ವರವಾಯ್ತು, ನನ್ನ ಗೆಲುವು ಇನ್ನೂ ಸುಲಭವಾಯ್ತು. ಜನ ದೇವೇಗೌಡರನ್ನ ರಿಜೆಕ್ಟ್ ಮಾಡಿದ್ರು ಅಂತ ಹೇಳಿದ್ರು. ಇನ್ನು ಇದೇ ವೇಳೆ ಕೆ.ಎನ್.ರಾಜಣ್ಣ ಬೆಂಬಲ‌ ನೀಡಿದ ವಿಚಾರವಾಗಿ ಮಾತನಾಡಿದ ಬಸವರಾಜು, ಅವರು ನನ್ನ ಸ್ನೇಹಿತರು. ಆದರೆ ರಾಜಣ್ಣ ಅವರ ಪಕ್ಷ ಬಿಟ್ಟು ನನಗೆ ಸಹಾಯ ಮಾಡಿದ್ದಾರೆ ಅನ್ನೋಕಾಗಲ್ಲ. ಎಲ್ಲಾ ಪಕ್ಷದವರು ಮತ ಹಾಕಿದಕ್ಕೆ ನಾನು ಗೆದ್ದಿದ್ದೇನೆ ಎಂದು ಹೇಳಿದ್ದಾರೆ.       ಗೌಡರ ಕುಟುಂಬದಲ್ಲಿ ನಡೆಯುತ್ತಿರುವ ರಾಜೀನಾಮೆ ವಿಷಯವಾಗಿ ಪ್ರಸ್ತಾಪಿಸಿದ ಅವರು, ಗೌಡರ ಕುಟುಂಬ ಯಾವತ್ತಾದರೂ ಸತ್ಯ ಹೇಳಿದ್ದು ಇದ್ಯಾ? ದೇವೇಗೌಡರು ಮೋದಿ ಪ್ರಧಾನಿ ಆದರೆ ದೇಶ ಬಿಡ್ತೀನಿ ಅಂದಿದ್ರು, ಆದರೆ…

Read More

ತುಮಕೂರು:      ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಗೆಲುವು ಸಾಧಿಸಿದ್ದೇನೆಂಬ ಸಂತಸದಲ್ಲಿ ಇದು ಬಸವರಾಜುರವರ ಅಭೂತಪೂರ್ವ ಗೆಲುವು ಎಂದೆಲ್ಲಾ ಮಾತನಾಡಿಕೊಳ್ಳುತ್ತಿರುವ ಬಿಜೆಪಿಗರು ಒಮ್ಮೆ ಆಲೋಚಿಸಬೇಕಿದೆ. ಈ ಗೆಲುವಿನ ಹಿಂದೆ ದೇವೇಗೌಡರ ವಿರೋಧಿ ಅಲೆ ಬಹುಮುಖ್ಯವಾಗಿ ಕಂಡುಬರುತ್ತಿದ್ದು, ಅದರೊಟ್ಟಿಗೆ ಮೋದಿಯ ಅಲೆ, ಭಕ್ತರ ಮುಗ್ಧತೆ ಗೆಲುವಿಗೆ ಸೋಪಾನವಾಗಿದೆ ಎಂದರೂ ತಪ್ಪಾಗಲಾರದು. 4 ಬಾರಿ ಸಂಸದರಾಗಿದ್ದ ಜಿ.ಎಸ್.ಬಸವರಾಜು ಜಿಲ್ಲೆಯ ಶಾಶ್ವತ ಅಭಿವೃದ್ಧಿಗಳೆಡೆ ಗಮನಹರಿಸಿಲ್ಲವೆಂಬ ಆಪಾದನೆಯಿಂದ ಹೊರತಾಗಲಿಲ್ಲವಾದರೂ ದೇವೇಗೌಡರನ್ನ ಸೋಲಿಸಿಯೇ ತೀರಬೇಕೆಂಬ ಮನೋಭಾವವುಳ್ಳ ಗೌಡರ ವಿರೋಧಿ ಬಣಗಳು ಬಿಜೆಪಿಯ ಬಸವರಾಜುಗೆ ಆಸರೆಯಾಗಿ ಬೆಂಬಲಿಸಿದರು. ಗೌಡರ ವಿರೋಧದ ಅಲೆಯಲ್ಲಿ ತೇಲಿ ಬಂದಿರುವ ಬಸವರಾಜು, ಮಾಜಿ ಪ್ರಧಾನಿಯ ವಿರುದ್ಧ ಆಯ್ಕೆಯಾಗಿ ಬಂದ ಅಭ್ಯರ್ಥಿ ಎಂಬ ಬೃಹತ್ ಹಣೆಪಟ್ಟಿಯನ್ನ ಕಟ್ಟಿಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಮಾಜಿ ಪ್ರಧಾನಿಯನ್ನ ಸೋಲಿಸಿದ್ದ ಸಂಸದರೆಂಬ ಅಭಿಮಾನ ಎಲ್ಲರೂ ತೋರಿಸುತ್ತಾರೆ. ಅದು ಕೇಂದ್ರ ಸಚಿವ ಸ್ಥಾನದ ಗದ್ದುಗೆಯವರೆಗೆ ಕೊಂಡೊಯ್ಯಬಹುದು.    …

Read More

 • ಮುದ್ದಹನುಮೇಗೌಡರಿಗೆ ಟಿಕೆಟ್ ವಂಚಿಸಿದ್ದು • ಕೆ.ಎನ್.ರಾಜಣ್ಣನವರ ವಿರೋಧ • ಮುದ್ದಹನುಮೇಗೌಡರನ್ನ ಪ್ರಚಾರದಿಂದ ದೂರವಿಟ್ಟದ್ದು • ಡಾ||ಜಿ.ಪರಮೇಶ್ವರ್ ರವರ ಮಾತುಗಳನ್ನ ನಂಬಿದ್ದು • ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್‍ಗೆ ಸಹಕಾರ ನೀಡದಿರುವುದು • ಯಾದವ ಸಮುದಾಯದ ಪ್ರಬಲ ವಿರೋಧ • ಕುರುಬ ಸಮುದಾಯ ಮತ್ತು ಅಹಿಂದ ಸಮುದಾಯಗಳ ಕಡೆಗಣನೆ • ಸ್ಥಳೀಯ ಜೆಡಿಎಸ್ ಮುಖಂಡರ ಅತಿಯಾದ ಭರವಸೆ • ಸ್ಥಳೀಯವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಸಹಮತವಿಲ್ಲದಿರುವುದು • ಹೇಮಾವತಿ ನೀರಿನ ಪ್ರಬಲ ವಿರೋಧ • ಸ್ಥಳೀಯ ಮುಖಂಡರು ಮತ್ತು ನಾಯಕರ ಕಡೆಗಣನೆ • ಕ್ಷೇತ್ರದ ಮತದಾರರೊಂದಿಗೆ ಅತಿಯಾದ ಸಂಬಂಧವಿಲ್ಲದ ವ್ಯಕ್ತಿಗಳು ಜಿಲ್ಲೆಯಲ್ಲಿ ಹಣಕಾಸಿನ ನೇತೃತ್ವ ವಹಿಸಿದ್ದು • ಸ್ಥಳೀಯ ಮಾಧ್ಯಮಗಳ ಬಗ್ಗೆ ತಾತ್ಸಾರ ಮನೋಭಾವನೆ ಜಿಲ್ಲೆಯ ಜೆಡಿಎಸ್ ಹಾಲಿ ಮತ್ತು ಮಾಜಿ ಶಾಸಕರುಗಳ ಅತಿಯಾದ ಭರವಸೆ

Read More

ತುಮಕೂರು:       ತುಮಕೂರು ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸೋಲು, ಬಿಜೆಪಿಯ ಗೆಲುವು ರಾಜಕೀಯ ವಿಶ್ಲೇಶಕರ ಲೆಕ್ಕಚಾರಗಳು ಬುಡಮೇಲು. ಈ ರಾಜ್ಯ ಕಂಡಂತಹ ಏಕೈಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ದೆಹಲಿ ಗದ್ದುಗೆ ಏರಿ ಅಂದಿನ ಭಾರತದ ಪ್ರಪ್ರಥಮ ಪ್ರಜೆ ಎನಿಸಿಕೊಂಡಂತಹ ವ್ಯಕ್ತಿ. ತನ್ನ ರಾಜಕೀಯ ಇತಿಹಾಸದುದ್ದಕ್ಕೂ ಗೆಲುವುಗಳಲ್ಲೇ ಹಿಡಿತ ಸಾಧಿಸುತ್ತಾ ರಾಜ್ಯ ರಾಜಕಾರಣದಲ್ಲಿ ಗೌಡರ ಪಾರುಪತ್ಯವನ್ನು ಮೆರೆದಂತಹ ಅಪ್ರತಿಮ ರಾಜಕಾರಣಿ ತನ್ನ ಮೌನದಲ್ಲೂ, ತನ್ನ ವಿಶ್ರಾಂತಿಯಲ್ಲೂ ರಾಜಕೀಯ ಲೆಕ್ಕಾಚಾರಗಳಲ್ಲೇ ರಾಜ್ಯದ ರಾಜಕಾರಣವನ್ನು ಅಳೆದು ತೂಗುತ್ತಿದ್ದಂತಹ ದೊಡ್ಡ ಗೌಡರು ಜೆಡಿಎಸ್‍ನ ಪಾರುಪತ್ಯವಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸೋಲನ್ನುಂಡದ್ದು ವಿಪರ್ಯಾಸ. ತನ್ನ ರಾಜಕೀಯ ಇತಿಹಾಸದಲ್ಲಿ ಅತಿರಥ ಮಹಾರಥರನ್ನ ಸೋಲಿನ ಸುಳಿಯಲ್ಲಿ ಸಿಲುಕಿಸಿ ವಿಲ-ವಿಲಗೊಳಿಸಿದ ದೇವೇಗೌಡರ ಲೆಕ್ಕಾಚಾರಗಳು ತುಮಕೂರಿನಲ್ಲಿ ತಪ್ಪಿದ್ದಕ್ಕೆ ಜೆಡಿಎಸ್‍ಗಿರಿಗೆ ಸ್ವತಃ ನೋವಿದೆಯಾದರೂ, ಕಾಂಗ್ರೆಸಿಗರಿಗೆ ನಲಿವಿದೆ. ಬಿಜೆಪಿಗರಿಗೆ ಸಂತೋಷವಿದೆ.       ತುಮಕೂರು ಜಿಲ್ಲೆಯ ಬಿಜೆಪಿಗರಲ್ಲದೇ ರಾಜ್ಯದ ಬಿಜೆಪಿಗರು ಗೌಡರ ಸೋಲಿಗೆ ಅಂಡುಬಡೆದುಕೊಳ್ಳುತ್ತಾ ಕೇಕೆ ಹಾಕಿಕೊಳ್ಳುತ್ತಿರುವುದು ಗೌಡರ ಸೋಲಿಗಲ್ಲ,…

Read More

ತುಮಕೂರು:       ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಯು ಇಂದು ಬೆಳಿಗ್ಗೆ 8 ಗಂಟೆಯಿಂದ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡದಲ್ಲಿ ನಡೆಯಲಿದೆ.       ಇದಕ್ಕೂ ಮುನ್ನ 7.30 ಗಂಟೆಗೆ ಚುನಾವಣೆ ವೀಕ್ಷಕರು ಹಾಗೂ ರಾಜಕೀಯ ಪಕ್ಷಗಳ ಏಜೆಂಟರ ಸಮಕ್ಷಮದಲ್ಲಿ ಮತ ಯಂತ್ರಗಳನ್ನು ಇರಿಸಿರುವ ಭದ್ರತಾ ಕೊಠಡಿಯನ್ನು ತೆರೆಯಲಾಗುವುದು. ತುಮಕೂರು ಲೋಕಸಭಾ ಕ್ಷೇತ್ರಕ್ಕೊಳಪಡುವ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಮಧುಗಿರಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತ ಎಣಿಕೆಯನ್ನು ವಿಜ್ಞಾನ ಕಾಲೇಜಿನಲ್ಲಿ ಹಾಗೂ ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ ಮತ್ತು ಗುಬ್ಬಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತ ಎಣಿಕೆಯು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬಿಗಿ ಭದ್ರತೆಯಲ್ಲಿ ನಡೆಯಲಿದೆ.       ಮತ ಎಣಿಕೆಗಾಗಿ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ 13 ಟೇಬಲ್ ಹಾಗೂ ಉಳಿದಂತೆ 7 ವಿಧಾನಸಭಾ ಕ್ಷೇತ್ರಗಳಿಗೆ ಪ್ರತಿ ಕ್ಷೇತ್ರಕ್ಕೆ ತಲಾ 14 ಟೇಬಲ್‍ಗಳಂತೆ ಒಟ್ಟು 111 ಟೇಬಲ್‍ಗಳನ್ನು ವ್ಯವಸ್ಥೆ…

Read More

ತುಮಕೂರು:       ಅತಿ ಹೆಚ್ಚಿನ ಖರ್ಚಿನಿಂದ ಕೂಡಿರುವ ಸಿಟಿ ಸ್ಕ್ಯಾನ್ ಹಾಗೂ ಎಂಆರ್‍ಐ ಸ್ಕ್ಯಾನ್‍ಗಳು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕ್ರಸ್ನ ಡಯೋಗ್ನೋಸ್ಟಿಕ್ ಸೆಂಟರ್‍ನ ಬ್ಯುಸಿನೆಸ್ ಮ್ಯಾನೇಜರ್ ಧನಂಜಯ್ ತಿಳಿಸಿದರು.       ನಗರದ ಜಿಲ್ಲಾ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್‍ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಸಹಭಾಗಿತ್ವದಲ್ಲಿ ಸಿಟಿ ಸ್ಕ್ಯಾನ್ ಹಾಗೂ ಎಂಆರ್‍ಐ ಸ್ಕ್ಯಾನಿಂಗ್ ಆರಂಭಗೊಂಡು ಸುಮಾರು ಒಂದೂವರೆ ವರ್ಷಗಳು ಕಳೆದಿದ್ದು, ಇಲ್ಲಿಯವರೆಗೆ ಒಟ್ಟು 10 ಸಾವಿರಕ್ಕೂ ಹೆಚ್ಚು ಮಂದಿಗೆ ಈ ಸೌಲಭ್ಯ ದೊರೆತಿದೆ. ಪ್ರತಿನಿತ್ಯ 25 ರಿಂದ 30 ಮಂದಿ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದರು.       ನಗರದ ಜಿಲ್ಲಾ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್‍ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಸಹಭಾಗಿತ್ವದಲ್ಲಿ ಸಿಟಿ ಸ್ಕ್ಯಾನ್ ಹಾಗೂ ಎಂಆರ್‍ಐ ಸ್ಕ್ಯಾನಿಂಗ್ ಆರಂಭಗೊಂಡು ಸುಮಾರು ಒಂದೂವರೆ ವರ್ಷಗಳು ಕಳೆದಿದ್ದು, ಇಲ್ಲಿಯವರೆಗೆ ಒಟ್ಟು 10 ಸಾವಿರಕ್ಕೂ…

Read More

 ತುಮಕೂರು:       ಮಹಾನಗರ ಪಾಲಿಕೆಯಲ್ಲಿ ಐವರು ಪೌರ ಕಾರ್ಮಿಕರನ್ನು ವಜಾ ಮಾಡಲಾಗಿದ್ದು, ಹಾಗು ಒಬ್ಬ ಪೌರ ಕಾರ್ಮಿಕನನ್ನ ಅಮಾನತುಗೊಳಿಸಲಾಗಿದೆ.       ಪಾಲಿಕೆಗೆ ಅನಧಿಕೃತವಾಗಿ ಗೈರು  ಸುದೀರ್ಘ ಗೈರು ಹಾಜರಾದ ಹಿನ್ನೆಲೆಯಲ್ಲಿ ಪಾಲಿಕೆಯ ಹಿರಿಯ ಅಧಿಕಾರಿಗಳು ನೀಡಿದ ವರದಿಯ ಆಧಾರದ ಮೇಲೆ ಪಾಲಿಕೆಯ ಆಯುಕ್ತ ಭೂಬಾಲನ್ ರವರು ಐವರು ನೇರ ಪಾವತಿ  ಪೌರ ಕಾರ್ಮಿಕರುಗಳಾದ ಎಂ.ಜಿ.ವೆಂಕಟಸ್ವಾಮಿ, ಎನ್.ಮಂಜುನಾಥ್, ಹುಲಿರಾಮಯ್ಯ, ಗೋವಿಂದರಾಜು, ಸಿದ್ದರಾಜುರವರನ್ನು ಸೇವೆಯಿಂದ ವಜಾ ಮಾಡಲಾಗಿದ್ದು, ಖಾಯಂ ಪೌರ ಕಾರ್ಮಿಕರಾದ ಟಿ.ಕೆ. ಮಂಜುನಾಥ್ ರವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸದರಿ ಇವರುಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದು, ಮೌಖಿಕ ಆದೇಶಗಳನ್ನ ಹಾಗೂ ಎಚ್ಚರಿಕೆಗಳನ್ನ ನೀಡಿದ್ದರೂ ಸಹಾ ಸೇವೆಗೆ ಹಾಜರಾಗದ ಹಿನ್ನೆಲೆಯಲ್ಲಿ ಈ ರೀತಿಯ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ. ಪರಿಸರ ಇಲಾಖೆಯ ಅಧಿಕಾರಿಗಳು ನೀಡಿದ ವರದಿಯ ಆಧಾರದ ಮೇಲೆ ಪಾಲಿಕೆಯ ಆಯುಕ್ತ ಭೂಬಾಲನ್ ರವರು ಸೇವೆಯಿಂದ ವಜಾ ಮಾಡಿ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.

Read More

ಶಿರಾ:       ವೇಗವಾಗಿ ಚಲಿಸುತ್ತಿದ್ದ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಕಾರಿನಲ್ಲಿದ್ದ 8 ಮಂದಿಯಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ತಾವರೆಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಬುಧವಾರ ನಡೆದಿದೆ.        ಜಯತಿ(6) ಮತ್ತು ಸುಧಮ್ಮ (55) ಮೃತಪಟ್ಟವರು. ಶಿವಣ್ಣ, ಮೇಘನ, ಬಾಲಮ್ಮ, ಮಂಜಮ್ಮ, ಹಿಮ, ಸುಬಧ ಗಾಯಗೊಂಡವರು ಎಂದು ತಿಳಿದು ಬಂದಿದ್ದು, ಇವರೆಲ್ಲರೂ ತುಮಕೂರಿನಲ್ಲಿ ಸಂಬಂಧಿಕರ ಮದುವೆಗೆಂದು ಹೋಗಿ ವಾಪಸ್‌ ತಮ್ಮ ಊರಾದ ಹಿರಿಯೂರು ತಾಲೂಕಿನ ಎ.ವಿ.ಕೊಟ್ಟಿಗೆ ಗ್ರಾಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.       ಗಾಯಗೊಂಡವರನ್ನು ಹಿರಿಯೂರು, ಸಿರಾ ಮತ್ತು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ತಾವರೆಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Read More