ತುಮಕೂರು: ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ಇಲಾಖೆಗಳು ತಾವು ಅನುಷ್ಠಾನ ಮಾಡುವ ಯೋಜನೆಗಳ ಮಾಹಿತಿಯನ್ನು ಕಡ್ಡಾಯವಾಗಿ ಜಿಐಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ) ಪೋರ್ಟಲ್‍ಗೆ ಅಪ್‍ಲೋಡ್ ಮಾಡಬೇಕೆಂದು ಸಂಸದ ಜಿ.ಎಸ್. ಬಸವರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತಿಯಲ್ಲಿ ಜರುಗಿದ ಕೇಂದ್ರ ಪುರಸ್ಕøತ ಕಾರ್ಯಕ್ರಮಗಳ ಪ್ರಗತಿ (ದಿಶಾ) ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕೈಗೊಂಡಿರುವ ಯೋಜನೆಗಳು, ಪ್ರಸ್ತುತ ಪ್ರಗತಿಯಲ್ಲಿರುವ ಯೋಜನೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳ ಸಂಪೂರ್ಣ ಅಂಕಿ-ಅಂಶಗಳನ್ನು ತುಮಕೂರು ಜಿಐಎಸ್ ಪೋರ್ಟಲ್‍ನಲ್ಲಿ 1 ತಿಂಗಳೊಳಗಾಗಿ ಅಪ್‍ಲೋಡ್ ಮಾಡಬೇಕು. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಲು ಅನುವಾಗುತ್ತದೆ. ಇದಕ್ಕಾಗಿ ಪ್ರತಿ ಇಲಾಖೆಯೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ ಇನ್ನೆರಡು ದಿನಗಳೊಳಗಾಗಿ ಅಧಿಕಾರಿಗಳ ಪಟ್ಟಿಯನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕೆಂದು ನಿರ್ದೇಶನ ನೀಡಿದರು. ಜಿಐಎಸ್ ಪ್ರಕ್ರಿಯೆ ನಿರಂತರವಾದ ಪ್ರಕ್ರಿಯೆಯಾಗಿದ್ದು, ಎಲ್ಲಾ ಇಲಾಖೆಗಳು…
Author: News Desk Benkiyabale
ಕೊರಟಗೆರೆ: ಮನೆಯಿಂದ ಹೊರಗಡೆ ಹೋಗದೇ ಕಳೆದ 3ತಿಂಗಳಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತೀದ್ದ 9ವರ್ಷದ ಇಬ್ಬರು ಮಕ್ಕಳಿಗೆ ಕೊರೊನಾ ಗಂಟಲು ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ವರದಿಯ ಆತಂಕದ ವಾತವರಣ ಕೊರಟಗೆರೆ ಅಧಿಕಾರಿಗಳ ಜೊತೆ ಜನತೆಯ ಭಯಕ್ಕೆ ಕಾರಣವಾದ ಹಿನ್ನಲೆ ಎರಡು ಗ್ರಾಮವನ್ನು ಸಿಲ್‍ಡೌನ್ ಮಾಡಲಾಗಿದೆ. ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಶಕುನಿತಿಮ್ಮನಹಳ್ಳಿ ಗ್ರಾಮದ 9ವರ್ಷ ಹೆಣ್ಣುಮಗು ಮತ್ತು ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಪಂ ವ್ಯಾಪ್ತಿಯ ದೇವರಹಳ್ಳಿಯ 9ವರ್ಷದ ಮಗುವಿನ ಗಂಟಲು ದ್ರವ ಪರೀಕ್ಷೆ 25ರಂದು ನಡೆದಿದ್ದು ಜೂ.28ರಂದು ಕೊರೊನಾ ಪಾಸಿಟಿವ್ ವರದಿ ಬಂದಿದೆ. ದೇವರಹಳ್ಳಿಯ ಮಗುವಿನ ಪ್ರಥಮ ಸಂಪರ್ಕದ 12ಜನ ಮತ್ತು ಶಕುನಿತಿಮ್ಮನಹಳ್ಳಿ ಮಗುವಿನ ಪ್ರಥಮ ಸಂಪರ್ಕದ 16ಜನರ ಗಂಟಲು ಪರೀಕ್ಷೆ ನಡೆಸಿ ರೆಡ್ಡಿಕಟ್ಟೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಥಾನಿಕ ಕ್ವಾರಂಟೈನ್ ಮಾಡಲಾಗಿದೆ. ಇನ್ನೂಳಿದ ದ್ವಿತೀಯ ಸಂಪರ್ಕ ಸುಮಾರು 50ಜನರನ್ನು ಅವರ ಮನೆಯಲ್ಲಿಯೇ ಹೋಂ…
ತುಮಕೂರು: ಕುರಿಗಾಹಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಆತ ಮೇಯಿಸುತ್ತಿದ್ದ ಕುರಿಗಳಿಗೂ ಕೂಡ ಕ್ವಾರಂಟೈನ್ ಮಾಡುವಂತಹ ನಿರ್ಧಾರಕ್ಕೆ ತುಮಕೂರು ಜಿಲ್ಲಾಡಳಿತ ಬಂದಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿ 40 ಕುರಿಗಳನ್ನು ಒಂದೆಡೆ ಕೂಡಿ ಹಾಕಲಾಗಿದೆ. ಕುರಿಗಳಿಗೆ ಮೇಯಲು ಹೊರಗಡೆ ಬಿಡದಂತೆ ನಿರ್ಧರಿಸಲಾಗಿದೆ. ಈಗಾಗಲೇ ಸೋಂಕಿತ ಕುರಿಗಾಹಿಯನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಈತ ಕಾಯುತ್ತಿದ್ದ ಕುರಿಗಳಲ್ಲಿ ಕೊರೊನಾ ವೈರಸ್ ವಿಭಿನ್ನ ಸ್ವರೂಪದಲ್ಲಿ ಇರುವ ಸಾಧ್ಯತೆಗಳಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕುರಿಗಳ ಸ್ವ್ಯಾಬ್ ತೆಗೆದು ಪರೀಕ್ಷೆಗೆಂದು ಭೋಪಾಲ್ನಲ್ಲಿರುವ ಲ್ಯಾಬ್ಗೆ ಕಳುಹಿಸಲು ನಿರ್ಧರಿಸಲಾಗಿದೆ. ಕುರಿ ಮಾಂಸ ಸೇವಿಸುವವರಿಗೆ ಎಚ್ಚರಿಕೆ : ಚಿಕ್ಕನಾಯಕನಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಕುರಿ ಮಾಂಸವನ್ನು ಜನರು ಸೇವಿಸುವ ಮುನ್ನ ಪರೀಕ್ಷಿಸಿಕೊಳ್ಳಬೇಕು. ನಂತರವೇ ಅದನ್ನು ಬಳಸಬೇಕು ಎಂದು ಸೂಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಸಾಮಾನ್ಯವಾಗಿ ಕುರಿಗಳ…
ತುಮಕೂರು: ಮಹಿಳೆಯೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಕೊರೊನಾ ಸೋಂಕು ತುಮಕೂರು ಜಿಲ್ಲಾ ನ್ಯಾಯಾಲಯದ ಅಂಗಳಕ್ಕೂ ಪ್ರವೇಶಿಸಿದ್ದು, ಇಲ್ಲಿನ ಮಹಿಳೆಯೊಬ್ಬರಲ್ಲಿ ಸೋಂಕು ದೃಢವಾಗಿದೆ. ಹಾಗಾಗಿ ಜಿಲ್ಲಾ ನ್ಯಾಯಾಲಯವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ನ್ಯಾಯಾಲಯದ ಎಲ್ಲಾ ಕಾರ್ಯ ಕಲಾಪಗಳನ್ನು ರದ್ದುಗೊಳಿಸಲಾಗಿದೆ. ಈವರೆಗೂ ಸುರಕ್ಷತೆಯಿಂದ ಸೀಮಿತ ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಾಗುತ್ತಿತ್ತು. ಸೀಲ್ ಡೌನ್ ಆದ ಹಿನ್ನೆಲೆ ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ತುಮಕೂರು: ಜಿಲ್ಲೆಯಲ್ಲಿರುವ ಕಂಟೈನ್‍ಮೆಂಟ್ ವಲಯದಲ್ಲಿರುವ ಪ್ರತಿಯೊಬ್ಬರಿಗೂ ಕೋವಿಡ್ ತಪಾಸಣೆ ನಡೆಸಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು. ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಕೋವಿಡ್ ಸಂಬಂಧಿಸಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುಮಕೂರು ಜಿಲ್ಲೆಯಲ್ಲಿ ಕೋವಿಡ್-19ರ ಪ್ರಕರಣಗಳು ಹೆಚ್ಚಾಗುತ್ತಿವೆ. ಆದುದರಿಂದ ಕಂಟೈನ್‍ಮೆಂಟ್ ವಲಯದಲ್ಲಿರುವ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಿ ನಮ್ಮ ಜಿಲ್ಲಾಸ್ಪತ್ರೆಯಲ್ಲಿ ಆರ್.ಟಿ.ಪಿ.ಸಿ.ಆರ್. ಪ್ರಯೋಗಾಲಯವಿರುವುದರಿಂದ ಹೆಚ್ಚಿನ ಪರೀಕ್ಷೆಯನ್ನು ನಡೆಸಲು ಅನುಕೂಲವಾಗುತ್ತದೆ ಎಂದರು. ತುಮಕೂರು ಜಿಲ್ಲೆಯಲ್ಲಿ ಫೀವರ್ ಕ್ಲಿನಿಕ್‍ಗಳನ್ನು ಜಾಸ್ತಿ ಮಾಡಿ, ಫೀವರ್ ಕ್ಲಿನಿಕ್‍ಗೆ ಬಂದ ಪ್ರತಿಯೊಬ್ಬರಿಗೂ ಚೆಕ್ ಮಾಡಿ ಎಂದ ಅವರು, ಜಿಲ್ಲೆಯಲ್ಲಿರುವ ನಕಲಿ ವೈದ್ಯರು ಹಾಗೂ ಚೀಟಿಯಿಲ್ಲದೆ ಜ್ವರ, ನೆಗಡಿ, ಶೀತ, ಉಸಿರಾಟ ತೊಂದರೆಗೆ ಔಷಧಿಗಳನ್ನು ಮಾರಾಟ ಮಾಡುವ ಔಷಧಿ ಅಂಗಡಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು. …
ತುಮಕೂರು: ತುಮಕೂರು ಜಿಲ್ಲಾ ಪೊಲೀಸ್ ಜಿಲ್ಲಾ ವರೀಷ್ಠಾಧಿಕಾರಿಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಹೆಸರಿನಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎನ್ನಲಾಗುತ್ತಿದೆ. ಜಿಲ್ಲಾ ಪೊಲೀಸ್ ಕಛೇರಿಯ ಮೊಗಸಾಲೆಯಿಂದ ಭ್ರಷ್ಟಚಾರದ ಕಮಟು ವಾಸನೆ ಎಸಿಬಿ ಕಛೇರಿಯ ಅಂಗಳದವರೆಗೂ ತಲುಪಿದೆ ಎಂದರೆ ಇಲ್ಲಿನ ನಡೆದಿರುವ ಭ್ರಷ್ಟಾಚಾರ ತೀವ್ರತೆ ಎಷ್ಟಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನೀಡಲಾಗುವ ಪ್ರಯಾಣ ಭತ್ಯೆ ಮತ್ತು ತುಟ್ಟಿಭತ್ಯೆಯ ಹೆಸರಿನಲ್ಲಿ ಭ್ರಷ್ಟಾಚಾರವಾಗಿರುವ ಆರೋಪ ವ್ಯಾಪಕವಾಗಿದ್ದು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಹೆಸರಿನಲ್ಲಿಯೂ ಅಕ್ರಮ ಭ್ರಷ್ಟಾಚಾರ ಮಾಡಿರುವುದು ಕೇಳಿ ಬರುತ್ತಿದೆ. ಈ ಭ್ರಷ್ಟಾಚಾರ ಕುರಿತು ಭ್ರಷ್ಟಾಚಾರ ನಿಗ್ರಹದಳ ಕಛೇರಿಗೆ ಲಿಖಿತ ದೂರು ನೀಡಿದ್ದು ಈ ಸಂಬಂಧ ಎಸಿಬಿ ಅಧಿಕಾರಿಗಳು ತನಿಖೆ ಕೈಗೆತ್ತಿಗೊಂಡಂತಿದೆ. ಎಸಿಬಿ ಅಧಿಕಾರಿಗಳು ತಮ್ಮ ತನಿಖೆಗೆ ಪೂರಕವಾದ ದಾಖಲಾತಿಗಳನ್ನ ಕೇಳಿದರೆ ಅದಕ್ಕೆ ಸ್ಪಂದಿಸದ ಎಸ್‍ಪಿ ಕಛೇರಿಯ…
ಮಧುಗಿರಿ : ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಬರುತ್ತೇನೆ ಎಂದು ಪರೀಕ್ಷೆ ಬರೆಯಲು ಹೋದ ಅಪ್ರಾಪ್ತ ಯುವತಿ ಕಾಣೆಯಾಗಿರುವ ತಡವಾಗಿ ಪ್ರಕರಣ ವರದಿಯಾಗಿದೆ. ಮಧುಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಿ.ಜಿ. ಲಾವಣ್ಯ ಕಾಣೆಯಾದ ವಿದ್ಯಾರ್ಥಿನಿ. ತಾಲೂಕಿನ ಪುರವರ ಹೋಬಳಿಯ ಬಡಕನಹಳ್ಳಿ ಗ್ರಾಮದ ಈಕೆ ಜೂ. 18 ರಂದು ಬೆಳಿಗ್ಗೆ 08-30 ಗಂಟೆಗೆ ಮಧುಗಿರಿ ಪಟ್ಟಣದಲ್ಲಿ ನಡೆಯುವ ಪಿಯುಸಿ ಪರೀಕ್ಷೆಗೆ ಹೋಗಿ ಬರುವುದಾಗಿ ಹೇಳಿ ಮಧುಗಿರಿಗೆ ಆಟೋರಿಕ್ಷಾದಲ್ಲಿ ಹೋದವಳು, ಆ ದಿನ ರಾತ್ರಿ ಸುಮಾರು 8 ಗಂಟೆಯಾದರೂ ಮನೆಗೆ ವಾಪಾಸ್ಸಾಗಿಲ್ಲ. ತದ ನಂತರ ನಮ್ಮ ಸಂಬಂದಿಕರ ಮನೆಗಳಲ್ಲಿ ಹುಡುಕಿದರು ಸಹ ನನ್ನ ಮಗಳು ಸಿಕ್ಕದೆ ಇರುವುದರಿಂದ ಆದ್ದರಿಂದ ತಡವಾಗಿ ಬಂದು ದೂರು ನೀಡಿರುತ್ತೇನೆ , ಆದ್ದರಿಂದ ಕಾಣೆಯಾಗಿರುವ ನನ್ನ ಮಗಳನ್ನು ಪತ್ತೆ ಹಚ್ಚಿ ಅನುಕೂಲ ಮಾಡಿಕೊಡಬೇಕೆಂದು ತಂದೆ ಗುತ್ತೆಪ್ಪ ಕೊಡಿಗೇನಹಳ್ಳಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗುಬ್ಬಿ : ಆಹಾರ ಹುಡುಕಿ ಬಂದಿದ್ದ ಆರು ವರ್ಷದ ಚಿರತೆ ಅರಣ್ಯ ಇಲಾಖೆ ಇಟ್ಟ ಬೋನಿನಲ್ಲಿ ಸೆರೆಯಾದ ಘಟನೆ ಶನಿವಾರ ಮುಂಜಾನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಎನ್.ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ನಂದಿಹಳ್ಳಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ನಾಯಿಗಳನ್ನು ಬೇಟೆಯಾಡುತ್ತಿದ್ದ ಆರು ವರ್ಷದ ಗಂಡು ಚಿರತೆಯ ಉಪಟಳಕ್ಕೆ ಗ್ರಾಮಸ್ಥರು ಭಯಭೀತರಾಗಿದ್ದರು. ಎರಡು ದಿನಗಳ ಹಿಂದೆ ರೈತ ಸದಾಶಿವಯ್ಯ ಎಂಬುವವರ ಸಾಕು ನಾಯಿ ಬೇಟೆಯಾಡಿದ್ದ ಚಿರತೆ ಮತ್ತೆ ಆಹಾರ ಹುಡುಕಿ ಬರುವ ಖಚಿತತೆಯಲ್ಲಿ ಅರಣ್ಯ ಇಲಾಖೆ ಬೋನ್ ಅಳವಡಿಸಿತ್ತು. ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಸಂಪೂರ್ಣ ಸಾಥ್ ನೀಡಿದ ಗ್ರಾಮಸ್ಥರು ಗ್ರಾಮದ ಹೊರವಲಯ ಕೊಡಗೀ ಜಮೀನಿನಲ್ಲಿ ಬೋನ್ ಅವಳಡಿಸಲಾಯಿತು. ಮುಂಜಾನೆ ವೇಳೆಗೆ ಬೋನಿನಲ್ಲಿ ಸೆರೆಯಾದ ಚಿರತೆ ಹಸಿವಿನಿಂದ ಕಂಗಾಲಾಗಿತ್ತು. ಚಿರತೆ ನೋಡಲು ಧಾವಿಸಿದ ನೂರಾರು ಗ್ರಾಮಸ್ಥರು ಕೊಂಚ ನಿರಾಳ ಮನಸ್ಸಿನಲ್ಲಿದ್ದರು. ಸೆರೆ ಸಿಕ್ಕ ಚಿರತೆಯನ್ನು ಬಂಡಿಪುರ ಅರಣ್ಯದತ್ತ…
ಪಾವಗಡ: ಪಾವಗಡ ಕಳೆದ ನಾಲ್ಕು ತಿಂಗಳಿಂದ ಜನರನ್ನು ಸಾಗಿಸುತ್ತಿದ್ದ ಖಾಸಗಿ ಬಸ್‍ಗಳು ತುಕ್ಕು ಹಿಡಿಯುತ್ತಿರುವುದು ಒಂದು ಕಡೆ ಅದರೆ ಬೀದಿಗೆ ಬಿಳುವ ಹಂತದಲ್ಲಿ ಇರುವ ಖಾಸಗಿ ಬಸ್‍ಗಳನ್ನೆ ನಂಬಿ ಜೀವಿಸುತ್ತಿದ್ದ ಅದೆಷ್ಟೋ ಕುಟುಂಬಗಳು. ಕಳೆದ ನಾಲ್ಕು ತಿಂಗಳಿಂದ ಕೂರೊನ ಭೀತಿಯಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ದೇಶವೆ ಕಂಗಾಲಾಗಿದೆ. ಇದರ ಮಧ್ಯದಲ್ಲಿ ಅದೆಷ್ಟೋ ಕುಟುಂಬಗಳು ಬೀದಿಪಾಲಾಗಿದವೂ ಎಂಬುದು ಲೆಕ್ಕಸಿಗದ ರೀತಿಯಲ್ಲಿ ನಾವೂ ಕಾಣಬಹುದಾಗಿದೆ. ಅದರೆ ದಿನನಿತ್ಯ ದುಡಿದು ತಿನ್ನುತ್ತಿದ್ದ ಜನರ ಪಾಡು ಹೇಳ ತೀರದಾಗಿದ್ದು ಒಂದು ಕಡೇ ಅದರೆ. ಖಾಸಗಿ ಬಸ್‍ಗಳನ್ನು ನಂಬಿ ಜೀವನ ಸಾಗಿಸುವ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದ ಕಂಡಕ್ಟರ್, ಏಜೆಂಟ್‍ರ್‍ಗಳು ಹಾಗೂ ಕ್ಲೀನರ್ ಗಳ ಪಾಡು ಹೇಳುತೀರದಾಗಿದೆ. ಇಂದು ದಿನ ಕೂಲಿ ಕೇಲಸವು ಸಹ ಸಿಗದ ಪರಿಸ್ಥಿತಿಯಲ್ಲಿ ಇರುವ ಜನರ ರಕ್ಷಣೆಗೆ ಸರ್ಕಾರ ಇದೆ ಎಂಬುದಾಗಿ ಹೇಳುತ್ತಿರುವ ಜನಪ್ರತಿನಿಧಿಗಳು ಒಂದು ಕಡೆಯಾದರೆ, ಸಂಕಷ್ಟಕ್ಕೆ ಬಹುತೇಕ ಕುಟುಂಬದ ಸದಸ್ಯರು ಒಳಗೊಂಡಿದ್ದಾರೆ. …
ತುಮಕೂರು: ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಧ್ಯೇಯ, ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು. ನ್ಯಾಯ, ನೀತಿ, ನಿಯತ್ತು, ತ್ಯಾಗ-ಬಲಿದಾನಗಳಿಗೆ ಇನ್ನೊಂದು ಹೆಸರೇ ಕೆಂಪೇಗೌಡರು. ನಾಡಿನ ಕಲ್ಯಾಣಕ್ಕಾಗಿ ಶ್ರಮಿಸಿದ ಇಂಥ ಮಹಾನುಭಾವರ ಆದರ್ಶ ಅನುಕರಣೀಯ ಎಂದರು. ನಗರದ ಬಿಜಿಎಸ್ ವೃತ್ತದಲ್ಲಿ ನಡೆದ 510ನೇ ಕೆಂಪೇಗೌಡ ಜಯಂತಿಯನ್ನು ಉದ್ಘಾಟಿಸಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಕೆಂಪೇಗೌಡರಂತ ಮಹಾನುಭಾವರ ಧ್ಯೇಯ, ಆದರ್ಶವನ್ನು ನಮ್ಮ ತನು, ಮನ, ಮತಿಗಳಲ್ಲಿ ತುಂಬಿಕೊಂಡಾಗ ಮಾತ್ರ ಅವರ ಜಯಂತಿ, ಜನ್ಮದಿನಾಚರಣೆಗೆ ಅರ್ಥ ಬರುತ್ತದೆ ಎಂದರು. ಪ್ರತಿಯೊಂದು ಕೆಂಪೇಗೌಡರ ಜಯಂತಿ, ಜನ್ಮದಿನಕ್ಕೆ ಹತ್ತು ಹೊಸ ಕೆಂಪೇಗೌಡರು ಹುಟ್ಟಿಕೊಳ್ಳಬೇಕು. ಆಗ ಮಾತ್ರ ಕೆಂಪೇಗೌಡರಿಗೆ ಸಂತೋಷವಾಗುತ್ತದೆ. ಕೆಂಪೇಗೌಡರ ಜಯಂತಿಯನ್ನಾಗಲಿ ಅಥವಾ ಇನ್ಯಾವ ಮಹಾತ್ಮ, ಮಹಾನುಭಾವರ ಜಯಂತಿಯನ್ನಾಗಲಿ…











