ತುಮಕೂರು: ತುಮಕೂರು ಟೌನ್‍ಹಾಲ್ ಸರ್ಕಲ್ ಬಳಿಯ ಮಹಾನಗರ ಪಾಲಿಕೆಯ ಉದ್ಯಾನವನದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಚಿತ್ರಕಲಾ ಪರಿಷತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಚಿತ್ರಕಲಾ ಶಿಕ್ಷಕರಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಶ್ರೀ ಬೂಬಾಲನ್, ಆಯುಕ್ತರು, ಮಹಾನಗರ ಪಾಲಿಕೆ ಇವರು ಸ್ವತಃ ಚಿತ್ರವನ್ನು ಬಿಡಿಸುವುದರ ಮುಖಾಂತರ ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಚಿತ್ರಕಲೆಯು ಸಾರ್ವಜನಿಕರ ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ಸಂದೇಶಗಳನ್ನು ತಲುಪಿಸುವ ಉತ್ತಮ ಸಾಧನವಾಗಿದ್ದು, ಅದಕ್ಕೆ ಬೆಲೆಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಪ್ರಸ್ತುತ ನಡೆಯುತ್ತಿರುವ 2019ರ ಲೋಕಸಭಾ ಚುನಾವಣೆಯಲ್ಲಿ ಚಿತ್ರಕಲಾ ಕಲಾವಿದರು ತಮ್ಮ ಕುಂಚಗಳಲ್ಲಿ ಅರಳಿಸುವ ಚುನಾವಣಾ ಮಹತ್ವವನ್ನು ಸಾರುವ ಚಿತ್ರಕಲೆಯು ಹಲವಾರು ಜನರನ್ನು ತಲುಪಿ, ಆ ಮೂಲಕ ಅವರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವ ಮಹತ್ತರ ಕಾರ್ಯವನ್ನು ಮಾಡಲಿದ್ದು, ಕಲಾವಿದರು ತಮ್ಮ ಯೋಚನಾ ಶಕ್ತಿಯನ್ನು ಉಪಯೋಗಿಸಿಕೊಂಡು ಸಂದೇಶ ಸಾರುವ ಸುಂದರ ಚಿತ್ರಗಳನ್ನು…
Author: News Desk Benkiyabale
ಮಧುಗಿರಿ : ಡಿಸಿಎಂ ಡಾ.ಜಿ. ಪರಮೇಶ್ವರ್‍ರವರು ಸಂಸದ ಮುದ್ದಹನುಮೇಗೌಡರನ್ನು ಪ್ರಚಾರದಿಂದ ದೂರವಿಟ್ಟು ಅವರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಆರೋಪಿಸಿದರು. ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸಂಸದ ಮುದ್ದಹನುಮೇಗೌಡರ ಕ್ಷೇತ್ರವನ್ನು ಜೆಡಿಎಸ್‍ನವರು ಪಡೆದುಕೊಂಡಿರುವುದು ಮೈತ್ರಿ ಧರ್ಮಕ್ಕೆ ವಿರುದ್ದ. ಇದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ಅತೃಪ್ತಿ ತಂದಿದೆ. ಇಂದಿನ ಕಾಂಗ್ರೆಸ್-ಜೆಡಿಎಸ್ ಸಭೆಗೆ ಅವರನ್ನು ಸೇರಿಸದೇ ಮೂಲೆ ಗುಂಪು ಮಾಡುತ್ತಿರುವುದಕ್ಕೆ ಕಾರ್ಯಕರ್ತರಿಗೆ ಅಸಮಾಧಾನವಾಗಿದೆ. ಇಂದಿನ ಸಭೆಗೆ ಕರೆದುಕೊಂಡು ಬಂದರೆ ಮಾತ್ರ ನಾನು ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದೆ. ಆದರ ಅವರನ್ನು ಪ್ರಚಾರಕ್ಕೆ ಕರೆದುಕೊಂಡು ಬರುತ್ತಿಲ್ಲ. ಮೈಸೂರಿನಲ್ಲಿ ಸಚಿವ ಜಿ.ಟಿ. ದೇವೇಗೌಡ ಸಭೆ ಕರೆದು ನಾವು ಕಾಂಗ್ರೆಸ್‍ಗೆ ಮತ ಚಲಾಯಿಸುವುದಿಲ್ಲ ಬಿಜೆಪಿಗೆ ಮತ ಚಲಾಯಿಸುತ್ತೇವೆ ಎಂಬುದಾಗಿ ಹೇಳಿಕೆ ನೀಡಿದ್ದು, ತುಮಕೂರು ಜಿಲ್ಲೆಯಲ್ಲಿ ನಾವು ಜೆಡಿಎಸ್‍ಗೆ ಏಕೆ ಮತ ನೀಡಬೇಕು ಎಂದು ಪ್ರಶ್ನಿಸಿದ ಅವರು ಮೈಸೂರಿನಲ್ಲಿ ಕಾಂಗ್ರೆಸ್ ನಿಂದ ಹಿಂದುಳಿದ ವರ್ಗದವರು ಸ್ಪರ್ಧಿಸಿದ್ದು,…
ತುಮಕೂರು: ದೇಶದಲ್ಲಿ ಸುಳ್ಳುಹೇಳುವ ಪಕ್ಷ ಎಂದರೆ ಅದು ಬಿಜೆಪಿ ಪಕ್ಷ. ಕೇವಲ ಸುಳ್ಳು ಭರವಸೆಗಳನ್ನು ನೀಡಿ ಬಡಜನರನ್ನು, ಕಾರ್ಮಿಕ ವರ್ಗದವರನ್ನು ಮೋಸ ಮಾಡಿದ್ದಾರೆ ಎಂದು ಸಿಪಿಐನ ಜಿಲ್ಲಾ ಉಸ್ತುವಾರಿ ಶೇಷಾದ್ರಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಪಿಐ ಪಕ್ಷದ ಕಚೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಬಡಜನರಿಗೆ ವಿವಿಧ ಆಶ್ವಾಸನೆಗಳನ್ನು ನೀಡಿತ್ತು.ಅದರಲ್ಲಿ ಇಲ್ಲಿಯವರೆಗೆ ಯಾವೊಂದು ಭರವಸೆಯೂ ಈಡೇರಿಲ್ಲ. ಬದಲಿಗೆ ನೋಟು ಅಮಾನಿಕರಣ, ಜಿಎಸ್‍ಟಿ ಜಾರಿಯಂತಹ ಯೋಜನೆಗಳಿಂದ ಬಡವರಿಗೆ ಸಮಸ್ಯೆಯನ್ನುಂಟು ಮಾಡಿದೆ ಎಂದರು. ಇಂದು ಕೇಂದ್ರದಲ್ಲಿ ಬಿಜೆಪಿ ಪಕ್ಷ ಇಲ್ಲ.ಮೋದಿ ಪಕ್ಷ ಮಾತ್ರ ಇದೆ. ಮೋದಿಯವರು ಸರ್ವಾಧಿಕಾರ ಧೋರಣೆಯನ್ನು ತೋರುತ್ತಿದ್ದಾರೆ. ಅದಕ್ಕಾಗಿಯೇ ವಿವಿಧ ಪಕ್ಷಗಳು ಬಿಜೆಪಿಯೊಂದಿಗಿನ ಮೈತ್ರಿ ತ್ಯಜಿಸಿ ಬೇರೆಯಾಗಿದ್ದಾರೆ. ಕೇಂದ್ರ ಸರ್ಕಾರವು ರೈತರ ಹಾಗೂ ಕಾರ್ಮಿಕರ ವಿರೋಧಿಯಾಗಿದೆ.ಚುನಾವಣೆ ಮುಂಚೆ ಸದಾಶಿವ ಆಯೋಗದ ವರದಿ ಜಾರಿ ಮಾಡಲಾಗು ತ್ತದೆ ಎಂದು ಹೇಳಿತ್ತು.ಇಂದು ಸದಾಶಿವ ಆಯೋಗ…
ತುಮಕೂರು : ಜಿಲ್ಲೆಯಲ್ಲಿ ಏಪ್ರಿಲ್ 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಯಾವುದೇ ಆಮಿಷಕ್ಕೊಳಗಾಗದೆ ನಿರ್ಭೀತಿಯಿಂದ ಮತದಾನ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಕರೆ ನೀಡಿದರು. ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕೊರಟಗೆರೆ ತಾಲ್ಲೂಕು ಕಾಶಾಪುರ ಗ್ರಾಮದ ಹಕ್ಕಿ-ಪಿಕ್ಕಿ ಜನಾಂಗದವರ ಕಾಲೋನಿಯಲ್ಲಿಂದು ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ತಪ್ಪದೇ ತಮ್ಮ ಹಕ್ಕನ್ನು ಚಲಾಯಿಸಬೇಕು. ಮತಪಟ್ಟಿಯಲ್ಲಿ ತಮ್ಮ ಹೆಸರಿದ್ದು, ಎಪಿಕ್ ಕಾರ್ಡ್ ಹೊಂದಿಲ್ಲದಿದ್ದರೂ 11 ಪರ್ಯಾಯ ದಾಖಲಾತಿಗಳಲ್ಲಿ ಯಾವುದಾದರು ಒಂದನ್ನು ಮತಗಟ್ಟೆಯಲ್ಲಿ ಹಾಜರುಪಡಿಸಿದರೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ಚುನಾವಣೆ ದಿನದಂದು ವಯೋವೃದ್ಧರು ಹಾಗೂ ವಿಕಲಚೇತನರು ಮತದಾನ ಮಾಡಲು ಅನುವಾಗುವಂತೆ ಬೆಳಿಗ್ಗೆಯಿಂದ ಸಂಜೆಯವರೆಗೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆಯಲ್ಲದೆ, ಪ್ರತಿ ಮತಗಟ್ಟೆಯಲ್ಲಿಯೂ ಸ್ವಯಂ-ಸೇವಕರನ್ನು ನೇಮಕ ಮಾಡಲಾಗಿದೆ. ವಯೋವೃದ್ಧರು,…
ಕೊರಟಗೆರೆ: ಡಿಸಿಎಂ ಡಾ.ಜಿ.ಪರಮೇಶ್ವರ್ ಸ್ವಂತ ಶಕ್ತಿಯಿಂದ ಕೊರಟಗೆರೆಯಲ್ಲಿ ಶಾಸಕನಾಗಿಲ್ಲ.. ಜೆಡಿಎಸ್ ಪಕ್ಷದ ಮಾಜಿ ಸಚಿವ ಸಿ.ಚೆನ್ನಿಗಪ್ಪನ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಒಳ ಒಪ್ಪಂದದಿಂದ ಗೆಲುವು ಸಾದಿಸಿದ್ದಾರೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್‍ಗೌಡ ವಾಗ್ದಾಳಿ ನಡೆಸಿದರು. ಪಟ್ಟಣದ ಎಸ್‍ಎಸ್‍ಆರ್ ವೃತ್ತದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಲೋಕಸಭಾ ಚುನಾವಣೆಯ ಬೃಹತ್ ಪ್ರಚಾರ ರ್ಯಾಲಿಯಲ್ಲಿ ಬಿಜೆಪಿ ಪಕ್ಷದ ಯುವ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಚೆನ್ನಿಗಪ್ಪನ ಮಗ ಗೌರಿಶಂಕರ್ ಗೆಲುವು ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಸ್ ಪಕ್ಷದ ಅಭ್ಯರ್ಥಿ ಸುಧಾಕರಲಾಲ್ ಸೋಲಿಸಲು ಚೇನ್ನಿಗಪ್ಪ ಮತ್ತು ಡಾ.ಜಿ.ಪರಮೇಶ್ವರ್ ನಡುವೆ ಮ್ಯಾಚ್ ಪಿಕ್ಸಿಂಗ್ ನಡೆದಿದೆ. ಕೊರಟಗೆರೆ ಕ್ಷೇತ್ರದ ಅಭ್ಯರ್ಥಿಯನ್ನು ಸೋಲಿಸಲು ಚೇನ್ನಿಗಪ್ಪ 5ಕೋಟಿ ಹಣ ಪಡೆದಿದ್ದಾರೆ ಎಂದು ಕಿಡಿಕಾರಿದರು. ತುಮಕೂರು ಬಿಜೆಪಿ ಅಭ್ಯರ್ಥಿ ಬಸವರಾಜು ಮಾತನಾಡಿ ಮಾಜಿ ಪ್ರಧಾನಿ ದೇವೆಗೌಡರಿಗೆ…
ಚಿಕ್ಕನಾಯಕನಹಳ್ಳಿ: ಹೆಚ್.ಡಿ ದೇವೇಗೌಡರು ಪ್ರಧಾನಮಂತ್ರಿಯಾದಾಗ ಜಯಲಲಿತರ ಪಕ್ಷದ ಓಟಿನ ಆಸೆಗಾಗಿ ಕಾವೇರಿ ನೀರನ್ನು ತಮಿಳುನಾಡಿನ ಬಿಟ್ಟಿದ್ದರು ಎಂದು ಶಾಸಕ ಜೆ.ಸಿ ಮಾಧುಸ್ವಾಮಿ ಆರೋಪಿಸಿದರು. ಮಂಗಳವಾರ ತಾಲ್ಲೂಕಿನ ಜೆ.ಸಿ ಪುರದಲ್ಲಿ ಶೆಟ್ಟಿಕೆರೆ ಹೋಬಳಿ ಮಟ್ಟದ ಬಿಜೆ.ಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ಹಿಂದುಳಿದವರ ಬಗ್ಗೆ ದೇವೇಗೌಡರು ಮೊಸಳೆ ಕಣ್ಣೀರು ಹಾಕುತ್ತಾರೆ. ದೇವೇಗೌಡರು ಗೌಡರು ಮೇಲೆ ಬರದಂತೆ ತುಳಿಯುತ್ತಾರೆ. ನಾಗೇಗೌಡರು ಮಂತ್ರಿಗಳಾದ ಸಂದರ್ಭದಲ್ಲಿ ಹೇಮಾವತಿ ನಾಲೆಯ ನೀರನ್ನು ಜಿಲ್ಲೆಗೆ ಅಲಾಟ್ ಮಾಡಿದ್ದರು. ದೇವೇಗೌಡರು ಜಾತಿ ಜಾತಿಗಳಲ್ಲಿ ವಿಷ ಬೀಜ ಬಿತ್ತಿ ಎಲ್ಲರನ್ನು ಎತ್ತಿ ಕಟ್ಟುತ್ತಿದ್ದಾರೆ ಕುಮಾರಸ್ವಾಮಿಯವರು ಸಂತೋಷಜಯಚಂದ್ರ ಚುನಾವಣೆಗೆ ನಿಲ್ಲದೆ ಹೋಗಿದ್ದರೆ ಸಿ.ಬಿ.ಸುರೇಶ್‍ಬಾಬು ಗೆಲ್ಲುತ್ತಿದ್ದರು. ಇದರಿಂದ ಜೆ.ಸಿಮಾಧುಸ್ವಾಮಿಯವರನ್ನು ವಿಧಾನಸೌಧದ ಮೆಟ್ಟಿಲು ಹತ್ತಲು ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ ಆದರೆ ಕುಮಾರಸ್ವಾಮಿ ಇನ್ನೂ ರಾಜಕಾರಣಕ್ಕೆ ಬರುವ ಮುನ್ನ ನಾನು ವಿಧಾನಸೌಧದ ಮೆಟ್ಟಿಲ್ಲನ್ನು ಹತ್ತಿದ್ದೇನೆ 1962ರಲ್ಲಿ ಹೇಮಾವತಿ ಅಣೇಕಟ್ಟೆ ನಿರ್ಮಿಸಲು ನಿಜಲಿಂಗಪ್ಪನವರು ಶಂಕುಸ್ಥಾಪನೆ ನೆರವೇರಿಸಿದ್ದರು. …
ತುಮಕೂರು: ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಜಿಲ್ಲೆಗೆ ಸೀಮಿತಗೊಳಿಸದೇ, ದೇಶದಲ್ಲಿ ಬಿಜೆಪಿ ವಿರುದ್ಧ ದೊಡ್ಡ ಶಕ್ತಿಯ ನ್ನಾಗಿ ಅವರನ್ನು ಕಾಣಬೇಕಿದ್ದು, ದೇವೇಗೌಡ ಅವರನ್ನು ಗೆಲ್ಲಿಸಬೇಕಾದ ಅನಿವಾರ್ಯತೆ ಇದ್ದು ಈ ನಿಟ್ಟಿನಲ್ಲಿ ಕಾರ್ಯ ಕರ್ತರು ಹೋರಾಟಕ್ಕೆ ಸಿದ್ಧರಾಗಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು. ನಗರದ ಕೊಲ್ಲಾಪುರದಮ್ಮ ಸಮುದಾಯಭವನದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತ ನಾಡಿದ ಅವರು, ಮೈತ್ರಿ ಸರ್ಕಾರ ರಚನೆಯಾದಾಗಲೇ ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಲು ಸಿದ್ಧರಾಗಿ ದ್ದೆವೆ. ದೇಶದಲ್ಲಿ ಶಾಂತಿ ನೆಲೆಸಲು, ಸಂವಿಧಾನವನ್ನು ಉಳಿಸಲು ಮಹಾಘಟಿಬಂಧನ್ ಮೂಲಕ ಒಂದಾಗಿದ್ದೇವೆ. ಸಂವಿಧಾನ ಬದಲಿಸಬೇಕು ಎನ್ನುವವರನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ ಎಂದರು. ತುಮಕೂರು ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲು ಮೈತ್ರಿ ಸರ್ಕಾರ ಭದ್ರವಾಗಿದೆ. ಬದ್ಧವಾಗಿದೆ. ಸರ್ಕಾರ ಬೀಳುತ್ತದೆ ಎನ್ನುವುದು ಅವರ ಭ್ರಮೆ ಅಷ್ಟೇ, ಜಿಲ್ಲೆಗೆ ಅಗತ್ಯವಿರುವ ನೀರಾವರಿ ಯೋಜನೆಯನ್ನು ಮೈತ್ರಿ ಸರ್ಕಾರ ಮಾಡಲಿದೆ. ಈಗಾಗಲೇ 0-72 ರವರೆಗೆ ಕೆನಾಲ್ ಅಗಲೀಕರಣ ಮಾಡಲಾಗಿದ್ದು,…
ಮಧುಗಿರಿ: ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳು ಬರಗಾಲವನ್ನು ಎದುರಿಸಲು ವಿಫಲವಾಗಿದ್ದಾರೆ ಹಾಗೂ ಅಧಿಕಾರಿಗಳು ಈ ಮೊದಲೇ ಮುಂಜಾಗ್ರತ ಕ್ರಮ ಕೈಗೊಂಡಿಲ್ಲದೇ ಇರುವುದರಿಂದ ತಾಲ್ಲೂಕಿನಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು. ಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಸರಕಾರವಿರಲಿ ಜನರ ಯೋಗ ಕ್ಷೇಮವನ್ನು ವಿಚಾರಿಸುವಂತಹ ಶಾಸಕರಿರಬೇಕು. ಆದರೆ ತಾಲ್ಲೂಕಿನ ಚಿತ್ರಣವೇ ಬೇರೆಯಾಗಿದೆ. ಈ ಹಿಂದೆ ನಾನು ಶಾಸಕನಾಗಿದ್ದಾಗ ನೀರಿನ ಬವಣೆ ಅಷ್ಟಾಗಿ ಕಂಡುಬಂದಿರಲಿಲ್ಲ ಕಳೆದ ಬಾರಿಗಿಂತ ಈ ಬಾರಿ ಅವಧಿಗೂ ಮುಂಚೆಯೇ ಹೆಚ್ಚಾಗಿ ಹೇಮಾವತಿ ನೀರು ಹರಿದಿದೆ. ಹೇಮಾವತಿ ನೀರನ್ನು ಸಿದ್ದಾಪುರ ಕೆರೆಗೆ ಹರಿಸಿ ಅಲ್ಲಿಂದ ಬಿಜವರದ ಕೆರೆಗೆ ನೀರು ಹರಿಸಲಾಗಿತ್ತು ಆದರೂ ಈಗ ನೀರಿನ ಬವಣೆ ಹೆಚ್ಚಾಗಿ ಕಂಡು ಬರುತ್ತಿದೆ ಎಂದರು. ಲೋಕಸಭೆ ಚುನಾವಣೆಯ ನಂತರ ರಾಜ್ಯದಲ್ಲಿ ಜಿಪಂ-ತಾಪಂ ಚುನಾವಣೆ ಎದುರಾಗಲಿದ್ದು ನನ್ನ ಕ್ಷೇತ್ರದಲ್ಲಿನ…
ತುಮಕೂರು: ಜಿಲ್ಲೆಗೆ ದೇವೇಗೌಡರು ಹೇಮಾವತಿ ನೀರು ಕೊಡುತ್ತಿಲ್ಲ ಎಂಬ ವಿರೋಧಿಗಳ ಹೇಳಿಕೆಯಲ್ಲಿ ಸತ್ವವಿಲ್ಲ. ಮನಸ್ಸಿಗೆ ಬಂದಂತೆ ಪ್ರಚಾರ ಮಾಡುವವರನ್ನು ಸಮಾಧಾನಪಡಿಸಲು ಆಗುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಹೇಳಿದರು. ತುಮಕೂರಿಗೆ ಬರಬೇಕಾದ ನೀರನ್ನು ದೇವೇಗೌಡರು ಹಿಡಿದಿಟ್ಟುಕೊಳ್ಳುತ್ತಿದ್ದಾರೆ ಎಂಬ ಕೆಲವರ ಹೇಳಿಕೆಗೆ ನಾನು ಹೆಚ್ಚು ಮಹತ್ವ ಕೊಡುವುದಿಲ್ಲ. ನೀರಾವರಿ ವಿಷಯದ ಬಗ್ಗೆ ಮಾತನಾಡುವವರು ತಿಳಿದುಕೊಂಡು ಮಾತನಾಡಬೇಕು. ಪ್ರಚಾರಕ್ಕಾಗಿ ಹೇಳಿಕೆ ನೀಡಿದರೂ ಅದರಲ್ಲಿ ಸತ್ವ ಇರಬೇಕು ಎಂದು ಗುಡುಗಿದರು.ನಗರದಲ್ಲಿ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿಗೆ ನನ್ನ ಮೊದಲ ಆದ್ಯತೆ, ಜಿಲ್ಲೆಯ ಹಳ್ಳಿಗಳಿಗೆ ನೀರು ಒದಗಿಸಲು ಹೆಚ್ಚು ಆಸಕ್ತಿ ವಹಿಸಬೇಕು. ಇದಕ್ಕಾಗಿ ನಾನು ಶ್ರಮಿಸುತ್ತಾ ಬಂದಿದ್ದೇನೆ ಎಂದರು. ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ನಾನು ರಾಜ್ಯದಲ್ಲಿ ನೀರಾವರಿ ಮಂತ್ರಿಯಾಗಿದ್ದೆ. ಆಗ ನೀರಿನ ಬಳಕೆ ಹಾಗೂ ನದಿ ಜೋಡಣೆ ಬಗ್ಗೆ ಒಂದು ಸಮಿತಿಯನ್ನು ರಚಿಸಿದ್ದು, ಅದರ ಅಧ್ಯಕ್ಷನಾಗಿ ನಾನು ಕಾರ್ಯನಿರ್ವಹಿಸಿದ್ದೆ.…
ತುಮಕೂರು: ಹೇಮಾವತಿ ನೀರಿನ ವಿಚಾರದಲ್ಲಿ ತುಮಕೂರಿನ ರೈತರಿಗೆ ವಂಚಿಸಿರುವವರು ಯಾವ ನೈತಿಕತೆಯಲ್ಲಿ ಇಂದು ತುಮಕೂರು ಜನತೆಯ ಮುಂದೆ ಮತ ಯಾಚಿಸುತ್ತಿದ್ದಾರೆ. ಒಂದು ವೇಳೆ ತುಮಕೂರು ಜನತೆ ದೇವೇಗೌಡರನ್ನು ಬೆಂಬಲಿಸಿದರೆ ತುಮಕೂರು ಜಿಲ್ಲೆಯನ್ನು ಮರಳುಗಾಡು ಮಾಡುತ್ತಾರೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಹೇಳಿದರು. ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಪಕ್ಷದ ಮುಖಂಡರುಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು ದೇವೇಗೌಡರ ಕುಟುಂಬ ಹೇಮಾವತಿ ನೀರಿನ ವಿಚಾರದಲ್ಲಿ ತುಮಕೂರಿನ ರೈತರ ಕಣ್ಣಲ್ಲಿ ರಕ್ತ ಸುರಿಸಿದ್ದಾರೆ, ಹೇಮಾವತಿ ನಾಲೆಗೆ ಮಣ್ಣು ಸುರಿದು ನೀರನ್ನು ತಡೆದಿರುವುದನ್ನು ನಮ್ಮ ತುಮಕೂರು ಜನತೆ ಮರೆತಿಲ್ಲ, ಈ ಚುನಾವಣೆ ಸ್ವಾಭಿಮಾನದ ಪ್ರಶ್ನೆಯಾಗಿದ್ದು ತುಮಕೂರಿನ ಮತದಾರರು ಪ್ರಜ್ನಾವಂತರಿದ್ದು ಸರಿಯಾದ ಆಯ್ಕೆ ಕೈಗೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ ಎಂದರು. ಲೋಕಸಭೆಗೆ ನಾನು ನಾಲ್ಕುಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ ಜಿಲ್ಲೆಗೆ ನಾನು ಮಾಡಿರುವ ಕೆಲಸಗಳನ್ನು ಶ್ವೇತಪತ್ರದ ಮೂಲಕ ಜನರಿಗೆ ತಿಳಿಸುತ್ತೇನೆ, ರಾಷ್ಟ ನಿರ್ಮಾಣಕ್ಕೆ…